Author: AIN Author

ಸ್ಮಾರ್ಟ್ ಫೋನ್ ದೈನಂದಿನ ದಿನಚರಿಯ ಅನೇಕ ಕಾರ್ಯಗಳನ್ನು ಸುಲಭಗೊಳಿಸಿದೆ. ಆದರೆ ಸ್ಮಾರ್ಟ್ ಫೋನ್ ಗಳಿಂದ ಸೈಬರ್ ಅಪರಾಧದಂತಹ ಪ್ರಕರಣಗಳ ಅಪಾಯವೂ ಇದೆ. ಸ್ಮಾರ್ಟ್ ಫೋನ್ ಹ್ಯಾಕ್ ಗಳ ಅನೇಕ ಪ್ರಕರಣಗಳು ನಡೆದಿವೆ, ಆದ್ದರಿಂದ ನಾವು ಜಾಗರೂಕರಾಗಿರುವುದು ಅವಶ್ಯಕವಾಗಿದೆ. ಸ್ಮಾರ್ಟ್ ಫೋನ್ ಹ್ಯಾಕಿಂಗ್ ತಪ್ಪಿಸಲು ನಾವು ಅತ್ಯಂತ ಜಾಗರೂಕರಾಗಿರಬೇಕು. ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಅರ್ಥಮಾಡಿಕೊಳ್ಳುವುದು ಸಾಮಾನ್ಯವಾಗಿ ತುಂಬಾ ಕಷ್ಟ. ಅಂದಹಾಗೆ, ಇದಕ್ಕಾಗಿ ನೀವು ಸೈಬರ್ ತಜ್ಞರ ಸಲಹೆಯನ್ನು ಸಹ ತೆಗೆದುಕೊಳ್ಳಬಹುದು, ಆದರೆ ಇಂದು ನಾವು ನಿಮಗೆ ಬಹಳ ಸುಲಭವಾದ ಮಾರ್ಗವನ್ನು ಹೇಳಲಿದ್ದೇವೆ, ಇದರಿಂದ ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೆಲವೇ ನಿಮಿಷಗಳಲ್ಲಿ ಕಂಡುಹಿಡಿಯಲು ನಿಮಗೆ ಸಾಧ್ಯವಾಗುತ್ತದೆ. ಫೋನ್ ಹ್ಯಾಕ್ ಆಗಿದ್ದರೆ ಅದನ್ನು ಹೇಗೆ ನಿಲ್ಲಿಸುವುದು ಎಂಬುದರ ಕುರಿತ ಮಾಹಿತಿಯೂ ಇದೆ. ಸ್ಮಾರ್ಟ್ ಫೋನ್ ಹ್ಯಾಕಿಂಗ್ ಪತ್ತೆಹಚ್ಚುವುದು ಹೇಗೆ? ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ನೀವು ನಿಮ್ಮ ಸ್ಮಾರ್ಟ್ ಫೋನ್ ನಿಂದ…

Read More

ಬೆಂಗಳೂರು:- ಸಂಕ್ರಾಂತಿ ವೇಳೆಗೆ ಪೀಣ್ಯ ಫ್ಲೈಓವರ್‌ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌ ನಡುವೆ ಹೊಸದಾಗಿ 240 ಕೇಬಲ್‌ ಅಳವಡಿಕೆ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದ್ದು, ಸಂಕ್ರಾಂತಿ ವೇಳೆಗೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಫ್ಲೈ ಓವರ್‌ ಮುಕ್ತವಾಗುವ ಸಾಧ್ಯತೆಯಿದೆ. ಮೇಲ್ಸೇತುವೆಯಲ್ಲಿ 120 ಪಿಲ್ಲರ್‌ ಇದ್ದು ಎರಡು ಪಿಲ್ಲರ್‌ಗಳ ನಡುವೆ ತಲಾ 10ರಂತೆ ಒಟ್ಟು 1200 ಕೇಬಲ್‌ ಇವೆ. ಮುಂಜಾಗ್ರತೆಯಾಗಿ ಎರಡು ಪಿಲ್ಲರ್‌ ನಡುವೆ ಹೊಸದಾಗಿ ಇನ್ನೂ ಎರಡು ಕೇಬಲ್‌ ಅಳವಡಿಸಲು ಅವಕಾಶವಿದೆ. ಆದ್ದರಿಂದ ಮೊದಲಿಗೆ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಿ ಬಳಿಕ ಎಲ್ಲ ಬಗೆಯ ವಾಹನಗಳಿಗೆ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು. ಈ ಕಾರ್ಯ ಜ.14ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಮೂರು ತಂಡಗಳು ಹೊಸ ಕೇಬಲ್‌ ಅಳವಡಿಕೆ ಕಾರ್ಯದಲ್ಲಿ ತೊಡಗಿವೆ. ಸಂಕ್ರಾಂತಿ ಬಳಿಕ ಮೇಲ್ಸೇತುವೆ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. 240 ಹೊಸ ಕೇಬಲ್‌ ಅಳವಡಿಕೆ ಮುಗಿದ ಬಳಿಕ 1200 ಕೇಬಲ್‌ ಅನ್ನೂ ಹಂತಹಂತವಾಗಿ ಬದಲಾಯಿಸಿ ಹೊಸ ಕೇಬಲ್‌ ಅಳವಡಿಸಲಾಗುವುದು. ಈ…

Read More

ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ 14 ವರ್ಷ ಉರುಳಿದೆ. ಆದರೆ, ಈವರೆಗೆ ಅವರ ಅಂತಿಮ ಸಂಸ್ಕಾರ ನಡೆದ ಪುಣ್ಯಭೂಮಿ ಜಾಗದ ವಿವಾದ ಮಾತ್ರ ಬಗೆಹರೆದಿಲ್ಲ. ಅದಕ್ಕೊಂದು ತಾತ್ವಿಕ ಅಂತ್ಯ ಕೊಡಬೇಕು ಅಂತಲೇ ಅಭಿಮಾನಿಗಳು ‘ವಿಷ್ಣು ಪುಣ್ಯಭೂಮಿ ಹೋರಾಟ’ಕ್ಕೆ ಮುಂದಾಗಿದ್ದಾರೆ. ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ ಇದೇ ಡಿಸೆಂಬರ್ 30ಕ್ಕೆ 14 ವರ್ಷಗಳು ತುಂಬುತ್ತೆ. ದುರಂತ ಅಂದ್ರೆ ಇಷ್ಟು ವರ್ಷಗಳ ಬಳಿಕವೂ ಅವರ ಪುಣ್ಯಭೂಮಿ ಉಳಿಸೋದಕ್ಕಾಗಿ ಅಭಿಮಾನಿಗಳು ಹೋರಾಟ ಮಾಡುವ ಸನ್ನಿವೇಶ ನಿರ್ಮಾಣ ಆಗಿದೆ. ಇಂದು ಫ್ರೀಡಂ ಪಾರ್ಕ್​ನಲ್ಲಿ ವಿಷ್ಣು ಅಭಿಮಾನಿಗಳು ಪುಣ್ಯಭೂಮಿ ಹೋರಾಟ ನಡೆಸುವುದಕ್ಕೆ ಸಜ್ಜಾಗಿದ್ದಾರೆ. 2010 ಡಿಸೆಂಬರ್ 30ರಂದು ಡಾ.ವಿಷ್ಣು ಅಗಲಿಕೆಯ ಸುದ್ದಿ ಬಂದಾಗ ಇಡೀ ನಾಡೇ ಆಘಾತಕ್ಕೆ ಒಳಗಾಗಿತ್ತು. ಅಂದು ತರಾತುರಿಯಲ್ಲಿ ಅಂದಿನ ಸರ್ಕಾರ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತಿಮ ಸಂಸ್ಕಾರವನ್ನ ಮಾಡಿಬಿಟ್ಟಿತು. ಆದ್ರೆ, ನಂತರ ದಿನಗಳಲ್ಲಿ ಈ ಜಾಗದ ಸುತ್ತಲಿನ ವಿವಾದಗಳು ಹೊರಬಂದಿದ್ದು.

Read More

ಬೆಂಗಳೂರು:- ಪತ್ನಿಯನ್ನು ವಿವಸ್ತ್ರಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಚುನ್ನು ಹನ್ಸದ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚುನ್ನು ಹನ್ಸದ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಹತ್ಯೆ ಮಾಡಿದ್ದ. ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಎಸ್. ಶ್ರೀಧರ್ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ರಾಜ ಹಾಗೂ ಮಹಾದೇವ ಗಡದ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಚುನ್ನು ಹನ್ಸದ್ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ, ಸಾಕ್ಷಿದಾರರ ವಿಚಾರಣೆ ನಡೆಸಿತ್ತು. ಚುನ್ನು ಅಪರಾಧಿ ಎಂಬುದು ಸಾಬೀತಾಗಿದ್ದರಿಂದ, ಜೀವಾವಧಿ ಶಿಕ್ಷೆ ಹಾಗೂ ರೂ25 ಸಾವಿರ ದಂಡ ವಿಧಿಸಿದೆ. ಇನ್ನೂ ಚುನ್ನು ಹನ್ಸದ್, ತಮ್ಮ ಊರಿನಲ್ಲೇ 25 ವರ್ಷದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಮಹಿಳೆಗೂ ಅದು ಎರಡನೇ ಮದುವೆಯಾಗಿತ್ತು. ಕೆಲಸ ಹುಡುಕಿಕೊಂಡು ಇಬ್ಬರೂ ಬೆಂಗಳೂರಿಗೆ ಬಂದು…

Read More

ಬೆಂಗಳೂರು: ನಿತ್ಯ ಬೆಳಿಗ್ಗೆ 5 ಗಂಟೆಗೆ ‘ನಮ್ಮ ಮೆಟ್ರೊ’ ಸಂಚಾರ ಆರಂಭವಾಗುತ್ತಿದ್ದು, ಭಾನುವಾರ ಮಾತ್ರ 7 ಗಂಟೆಗೆ ಶುರುವಾಗುತ್ತದೆ. ಇದರಿಂದ ಭಾನುವಾರ ರಜೆ ಇಲ್ಲದ ಖಾಸಗಿ ಕಂಪನಿಗಳಲ್ಲಿ ಬೆಳಿಗಿನ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತೊಂದರೆಯಾಗಿದೆ. 2ನೇ ಶನಿವಾರ, 4ನೇ ಶನಿವಾರ ಮುಂತಾದ ಸಾಮಾನ್ಯ ರಜೆಗಳ ದಿನಗಳಲ್ಲಿ ಬೆಳಿಗ್ಗೆ 6ಕ್ಕೆ ಮೆಟ್ರೊ ಸೇವೆ ಆರಂಭವಾಗುತ್ತದೆ. ಈ ಅವಧಿಯನ್ನೇ ಭಾನುವಾರಕ್ಕೂ ಅನ್ವಯಿಸಬೇಕು ಎಂಬುದು ಉದ್ಯೋಗಿಗಳ ಬೇಡಿಕೆ ಯಾಗಿದೆ. ನಾವು ಬೇರೆ ಬೇರೆ ಪಾಳಿಯಲ್ಲಿ ಕೆಲಸ ಮಾಡುತ್ತೇವೆ. ತಿಂಗಳಿಗೆ ಒಂದು ವಾರ ಬೆಳಿಗ್ಗೆ 7ಕ್ಕೆ ಕಚೇರಿಯಲ್ಲಿ ಇರಬೇಕು. ಆ ವಾರ 6 ದಿನ ಸಮಸ್ಯೆ ಇರುವುದಿಲ್ಲ. ಭಾನುವಾರ ಬೆಳಿಗ್ಗೆ ಕಚೇರಿಗೆ ತೆರಳುವುದೇ ಸಮಸ್ಯೆ. ಆ ದಿನ ಆಟೊ ಅಥವಾ ಕ್ಯಾಬ್‌ಗಳಲ್ಲಿ ತೆರಳಬೇಕಾಗುತ್ತದೆ. ಇದು ದುಬಾರಿ ಖರ್ಚು’ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲು ತೋಡಿಕೊಂಡರು.

Read More

ಬೆಂಗಳೂರು: ಭಾರತ ಸೇರಿ ಜಗತ್ತಿನೆಲ್ಲೆಡೆ ಮತ್ತೊಮ್ಮೆ ಕೊರೊನಾ (Covid-19) ವಕ್ಕರಿಸುವಂತಿದೆ. ಮತ್ತೆ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಉಪತಳಿ ಜೆಎನ್.1 ಭಾರತದಲ್ಲೂ ಇದೀಗ ಕಂಡುಬಂದಿದೆ. ನೆರೆಯ ಕೇರಳದಲ್ಲಿ (Kerala) ಮೊದಲ ಕೇಸ್ ಪತ್ತೆಯಾಗಿದೆ. ಜೆಎನ್.1 (JN.1) ಒಮಿಕ್ರಾನ್ ಸಬ್ ವೇರಿಯಂಟ್ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಇದನ್ನು ಪಿರೋಲಾ ಎಂದು ಕೂಡ ಕರೆಯಲಾಗುತ್ತದೆ. ಇದು ಅಪಾಯಕಾರಿಯೇ, ಇಲ್ಲವೇ ಎನ್ನುವುದು ಇನ್ನೂ ನಿರ್ಧಾರಿತವಾಗಿಲ್ಲ. ಆದರೆ ಶರವೇಗದಲ್ಲಿ ಹಬ್ಬುತ್ತಿದೆ. ಕೇರಳದ ಕಣ್ಣೂರಿನಲ್ಲಿ 80 ವರ್ಷದ ವೃದ್ಧರೊಬ್ಬರು ಕೋವಿಡ್‌ಗೆ ಬಲಿ ಆಗಿದ್ದಾರೆ. ಇದು ಕಳೆದ 2 ದಿನಗಳಲ್ಲಿ 2ನೇ ಸಾವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಕಣ್ಣೂರಿನ ಪಾನೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೆಯೂ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅಲರ್ಟ್ ಆಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ…

Read More

ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಸ್ಥಾನದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಮುಂಬೈ ಫ್ರಾಂಚೈಸಿ ಅಚ್ಚರಿಗೆ ದೂಡಿದೆ. ಅಲ್ಲದೆ, ಮುಂಬೈ ತಂಡದ ವಿರುದ್ಧ ಸಿಡಿದೆದ್ದಿರುವ ರೋಹಿತ್​ ಅಭಿಮಾನಿಗಳು ಜರ್ಸಿ ಸುಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಫ್ರಾಂಚೈಸಿಯ ಇನ್​ಸ್ಟಾಗ್ರಾಂ ಖಾತೆಯನ್ನು ಅನ್​ಫಾಲೋ ಮಾಡಿದ್ದಾರೆ. ನಿನ್ನೆಯಷ್ಟೇ ಸೂರ್ಯಕುಮಾರ್​ ಯಾದವ್​ ಒಡೆದ ಹೃದಯದ ಎಮೋಜಿ ಶೇರ್ ಮಾಡುವ ಮೂಲಕ ತಮ್ಮ ಬೇಸರ ಹೊರಹಾಕಿದ್ದರು. ಇದೀಗ ರೋಹಿತ್​ ಪತ್ನಿ ರಿತಿಕಾ ಸಾಜ್ದೇಹ್​ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಇನ್​ಸ್ಟಾಗ್ರಾಂ ಪೋಸ್ಟ್​ಗೆ ರಿತಿಕಾ ಪ್ರತಿಕ್ರಿಯಿಸಿದ್ದಾರೆ.​ 2013 ರಿಂದ 2023ರ ವರೆಗೆ ಒಂದು ದಶಕಗಳವರೆಗೆ ಉತ್ಸಾಹಭರಿತ ಸವಾಲು! ನಿಮ್ಮ ಮೇಲಿನ ಗೌರವ ಹೆಚ್ಚಿದೆ ಎಂದು ಚೆನ್ನೈ ತಂಡ, ರೋಹಿತ್​ ಅವರ ನಾಯಕತ್ವದ ಜರ್ನಿಯ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡು ಗೌರವ ಸೂಚಿಸಿದೆ. ಈ ಪೋಸ್ಟ್​ಗೆ ರಿತಿಕಾ ಅವರು ಕಾಮೆಂಟ್​ ಬಾಕ್ಸ್​ನಲ್ಲಿ ಹಳದಿ ಬಣ್ಣದ ಹೃದಯದ ಎಮೋಜಿ ಹಾಕುವ…

Read More

ಬೆಂಗಳೂರು:- ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಅಪಮಾನವಾಗುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಯೊಂದನ್ನು ನೀಡಿದ್ದ ನಟ ಚೇತನ್ ಕುಮಾರ್ ವಿರುದ್ಧ ಎನ್​ಸಿಆರ್​ ದಾಖಲಾಗಿದೆ. ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ವಕೀಲ ಆರ್ ಎಲ್ ಎನ್ ಮೂರ್ತಿ ಅವರು ಶೇಷಾದ್ರಿಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಪಡೆದು ಎನ್ ಸಿಆರ್ ದಾಖಲಿಸಿಕೊಂಡಿದ್ದಾರೆ ಪೊಲೀಸರು. ಇನ್ನೂ ಸಾಮಾಜಿಕ ಆಗುಹೋಗುಗಳ ಬಗ್ಗೆ ವಿಭಿನ್ನ ರೀತಿಯಲ್ಲಿ ಪೋಸ್ಟ್​ ಹಾಕುವ ಚೇತನ್​ ಅವರ ಹೇಳಿಕೆಗಳು ಪ್ರತಿ ಬಾರಿಯೂ ವಿವಾದಕ್ಕೆ ಕಾರಣವಾಗುತ್ತವೆ. ಅಂತೆಯೇ ಈ ಬಾರಿ ಅವರು ಟಿಪ್ಪು ಸುಲ್ತಾನ್ ಹಾಗೂ ಕೆಂಪೇಗೌಡರ ನಡುವೆ ಹೋಲಿಕೆ ಮಾಡಿ ಟ್ವೀಟ್ ಹಾಕಿದ್ದರು.

Read More

ಚಿಕ್ಕಮಗಳೂರು:- ಭದ್ರತಾ ಲೋಪದ ಹಿಂದೆ ಕಾಂಗ್ರೆಸ್‌ ಪಕ್ಷದ ಟೂಲ್‌ ಕಿಟ್‌ ರಾಜಕಾರಣ ಇದ್ದಂತೆ ಮಾಜಿ ಶಾಸಕ ಸಿಟಿ ರವಿ ಅನುಮಾನ ವ್ಯಕ್ತಪಡಿಸಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಅದರ ಹಿನ್ನೆಲೆ ಅರ್ಥವಾಗುವ ಮುಂಚೆಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಾರೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಪ್ರಶ್ನೆ ಮಾಡುತ್ತಾರೆ. ತನಿಖೆ ಮಾಡಿ ಎಂದು ಒತ್ತಾಯಿಸುವುದು ಸರಿ ಆದರೆ. ಅದನ್ನೂ ಮೀರಿ ಸಂಸದ ಪ್ರತಾಪ್ ಸಿಂಹ ಅವರನ್ನು ಗುರಿ ಮಾಡಿದರು ಎಂದರು. ಇತ್ತೀಚೆಗೆ ಕಾಂಗ್ರೆಸ್ ಸಂಸದನೊಬ್ಬನ ಮನೆಯಲ್ಲಿ ಐಟಿ ದಾಳಿ ವೇಳೆ ದಾಖಲೆ ಪ್ರಮಾಣದ ಹಣ ಪತ್ತೆಯಾಗಿದೆ. 500 ಕೋಟಿ ರು.ಗೂ ಹೆಚ್ಚಿನ ಅಕ್ರಮ ಆಸ್ತಿ, 350 ಕೋಟಿ ರು.ಗಳಿಗಿಂತ ಹೆಚ್ಚಿನ ನಗದು ಪತ್ತೆಯಾಗಿತ್ತು. ಇದೇ ವೇಳೆ 5 ರಾಜ್ಯಗಳ ಚುನಾವಣೆ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಇವರೆಡರ ವಿಷಯಾಂತರ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಸಂಸತ್‌ನ…

Read More

ವೀಕೆಂಡ್ ನಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಸಾಂಪ್ರದಾಯಿಕವಾಗಿ, ಹಣದುಬ್ಬರ ಹೆಚ್ಚಾದಂತೆ, ಚಿನ್ನದ ಬೇಡಿಕೆಯು ಹೆಚ್ಚಾಗುತ್ತದೆ, ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳನ್ನು ಹುಡುಕುತ್ತಾರೆ. ಆದಾಗ್ಯೂ, ಹೆಚ್ಚಿನ ಹಣದುಬ್ಬರದ ಅವಧಿಯಲ್ಲಿ ಚಿನ್ನದ ಬೆಲೆಗಳು ಏರಿಳಿತಗಳನ್ನು ಪ್ರದರ್ಶಿಸಬಹುದು. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,300 ರೂ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,510ರೂ. ಬೆಳ್ಳಿ ಬೆಲೆ 1 ಕೆಜಿ: 75,500 ರೂ. ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 57,750ರೂಪಾಯಿ ಇತ್ತು. ಆದರೆ ಇಂದು 57,300 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ ಇಂದು 450 ರೂಪಾಯಿ ಇಳಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 63,000ರೂಪಾಯಿ ಇತ್ತು. ಆದರೆ ಇಂದು 62,510 ರೂಪಾಯಿ ಆಗಿದೆ. ನಿನ್ನೆ…

Read More