Author: AIN Author

ಕೊಳ್ಳೇಗಾಲ:- ಅನುಮಾನಾಸ್ಪದವಾಗಿ ಮಹಿಳೆ ಮೃತಪಟ್ಟಿದ್ದು, ಅವರ ಆರು ವರ್ಷದ ಮಗಳು ನಾಪತ್ತೆಯಾಗಿರುವ ಘಟನೆ ಆದರ್ಶ ನಗರ ಬಡಾವಣೆಯಲ್ಲಿ ಜರುಗಿದೆ. ಪಟ್ಟಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ರೇಖಾ, ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸವಿದ್ದರು. ಮಗಳನ್ನು ಲಿಂಗಣಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಳುಹಿಸುತ್ತಿದ್ದರು. ಎರಡು ದಿನಗಳಿಂದ ಬಾಲಕಿ ಶಾಲೆಗೆ ಬಂದಿಲ್ಲ ಎಂದು ಶಾಲೆಯ ಶಿಕ್ಷಕರು ಶನಿವಾರ ಮನೆಗೆ ಬಂದು ನೋಡಿದಾಗ ರೇಖಾಳ ಶವ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗಳು ಅಲ್ಲಿರಲಿಲ್ಲ. ತಕ್ಷಣ ಶಿಕ್ಷಕರು ಪೊಲೀಸರಿಗೆ ವಿಷಯ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹೂ, ಡಿವೈಎಸ್ಪಿ ಸೋಮೇಗೌಡ, ಶ್ವಾನದಳ ಹಾಗೂ ಬೆರಳು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇನ್ನೂ ಮಗಳ ಸಾವಿಗೆ ಸಂಬಂಧಿಸಿದಂತೆ ರೇಖಾ ತಂದೆ ನಾಗರಾಜು ಪೊಲೀಸರಿಗೆ ದೂರು ನೀಡಿದ್ದು, ಕೊಲೆ ಆರೋಪ ಮಾಡಿದ್ದಾರೆ.

Read More

ಬೆಳಗಾವಿ:- ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ. ಮಾದಿಗ ಮುನ್ನಡೆ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಬೇಕು. ಮಾಧುಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿ ನೀಡಿದ ವರದಿ ಆಧರಿಸಿ ಒಳ ಮೀಸಲಾತಿ ಜಾರಿ ಮಾಡಬೇಕು’ ಎಂದೂ ಆಗ್ರಹಿಸಿದರು. ಪರಿಶಿಷ್ಟರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿ ಮಾಡಬೇಕು. ಆ ಮೂಲಕ ಅನ್ಯಾಯಕ್ಕೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು’ ಎಂದು ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಹೇಳಿದರು.

Read More

ರಾಯಬಾಗ:- ಕಳೆದ ಎರಡು ತಿಂಗಳಿಂದ ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಎಂದು ಹಾರಿಕೆ ಉತ್ತರ ನೀಡುತ್ತ, ಗ್ರಾಮಸ್ಥರ ಹಾಗೂ ದಲಿತರ ಮಾತನ್ನು ಕಡೆಗಣಿಸುತ್ತಿರುವ ತಹಶೀಲ್ದಾರ್ ಸುರೇಶ ಮುಂಜೆ, ರಾಯಬಾಗ ತಾಲೂಕು ಪೂರ್ವ ಭಾಗದ ಕಡೆ ಗ್ರಾಮವೇ ಪಾಲಬಾವಿ. ಕಳೆದ ನಾಲ್ಕು ದಶಕಗಳಿಂದ ಗ್ರಾಮದ ವಾರ್ಡ್ ನಂಬರ್ 3ರಲ್ಲಿ ಭೂಮಿಯ ಸರ್ವೆ ಮಾಡುವ ಕೆಲಸವು ನೆನೆಗುದ್ದಿಗೆ ಬಿದ್ದಿರುವ ಕಾರಣ ತಹಶೀಲ್ದಾರ್ ಸಮ್ಮುಖದಲ್ಲಿ ಸರ್ವೇ ಕಾರ್ಯ ಮಾಡಿಸಿ ಸಾರ್ವಜನಿಕರು ಹಾಗೂ ದಲಿತ ಸಮುದಾಯವು ಹಾಗೂ ವಾರ್ಡ್ ನಿವಾಸಿಗಳು ತಹಶೀಲ್ದಾರರಲ್ಲಿ ಮನವಿ ಮಾಡುತ್ತಾ ಬಂದಿರುತ್ತಾರೆ. ರಾಯಬಾಗ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಅವರು ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಗ್ರಾಮದ ವಾರ್ಡ್ ನಂಬರ್ 3ರ ಸಾರ್ವಜನಿಕರ ಹಾಗೂ ದಲಿತ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಲಬಾವಿ ಗ್ರಾಮದ ಸರ್ವೆ ನಂಬರ್ 227/2ರಲ್ಲಿ 01 ಎಕರೆ 09 ಗುಂಟೆ ಜಮೀನು ಬಿಡಿಒ ರಾಯಬಾಗ ಅವರ ಹೆಸರಿನಲ್ಲಿದ್ದು ಹಾಗೂ 228/ 1+2ಎ 01…

Read More

ಬೆಂಗಳೂರು: ಕೋಲಾರದ (Kolar) ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನ ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ಅಮಾನವೀಯ ಘಟನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌.ಸಿ ಮಹಾದೇವಪ್ಪ (HC Mahadevappa) ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನಗೂ ಬೆಳಗ್ಗೆ ವಿಷಯ ತಿಳಿಯಿತು. ಪ್ರಿನ್ಸಿಪಾಲ್‌ ಸೆಕ್ರೆಟರಿ ಮಣಿವಣ್ಣನ್ ಅವರೊಂದಿಗೆ ಮಾತನಾಡಿ, ಶಾಲೆಯ ಪ್ರಾಂಶುಪಾಲರು, ವಾರ್ಡನ್‌ ಹಾಗೂ ಡಿ.ಗ್ರೂಪ್‌ ನೌಕರ ಎಲ್ಲರನ್ನೂ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯಿಂದ‌ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಡಿ.ಗ್ರೂಪ್ ನೌಕರ (D Group Workers) ಮಾಡಿರುವ ಕೆಲಸ ಎಂದಿದ್ದಾರೆ. ಆದ್ರೆ ಪ್ರಾಂಶುಪಾಲರು ಹಾಗೂ ವಾರ್ಡನ್ ಸಹ ಇದಕ್ಕೆ ಜವಬ್ದಾರಿ. ಮಕ್ಕಳೇ ಆಗಲಿ, ಯಾರೇ ಆಗಲಿ ಇನ್ನೊಬ್ಬರ ಮಲ ಸ್ವಚ್ಛ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಇಲಾಖೆಯಿಂದ ಹೆಚ್ಚಿನ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ

Read More

ಬೆಂಗಳೂರು: ರಾಜಕಾಲುವೆ ಒತ್ತುವರಿ ವಿಚಾರವಾಗಿ ಆರಂಭದಲ್ಲಿ ಪಾಲಿಕೆ ಶೂರತ್ವ ತೋರಿತ್ತು.ದೊಡ್ಡವರ ಹೆಸರು  ಕೇಳಿಬಂದ  ತಕ್ಷಣ ಇಡೀ ಕಾರ್ಯಾಚರಣೆ ನಿಲ್ಲಸಿಬಿಟ್ಟಿತ್ತು.ದೊಡ್ಡವರಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಒಂದು ನ್ಯಾಯವೇ ಅಂತ ಜನ ಪ್ರಶ್ನೆ ಮಾಡಿದರು.ಆದ್ರೆ ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಇದೀಗ ಮತ್ತೆ ಬಿಬಿಎಂಪಿ ಮತ್ತೆ ರಾಜಕಾಲುವೆ ಒತ್ತುವರಿ ತೆರವಿಗೆ ಕೈ ಹಾಕಿದ್ದು, ಒತ್ತುವರಿದಾರರಿಗೆ ನಡುಕ ಹುಟ್ಟಿಸಿದೆ. ಮಳೆ ಬಂದಾಗ ಬೆಂಗಳೂರಿನಲ್ಲಿ ಆಗೋ ಅನಾಹುತ ಅಷ್ಟಿಷ್ಟಲ್ಲ.ಪ್ರತಿ ಮಳೆಗಾಲದಲ್ಲೂ ಮಳೆರಾಯ ಅವಾಂತರಗಳನ್ನೇ ಸೃಷ್ಟಿ ಮಾಡ್ತಾನೆ..ಈ ಅನಾಹುತಗಳಿಗೆ ಪ್ರಮುಖ ಕಾರಣ ರಾಜಕಾಲುವೆ ಒತ್ತುವರಿ.ಆದ್ರೆ ಸಾಕಷ್ಟು ಅನಾಹುತ ನಡೆದ ಬಳಿಕ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ನಾಟಕವಾಡ್ತಿದೆ. ಬಡವರ ಮನೆ ಡೆಮಾಲೀಷನ್ ಮಾಡಿ ಶ್ರೀಮಂತರ ಮನೆ ಹೊಡೆಯದೆ ಸೈಲೆಂಟ್ ಆಗ್ತದೆ. ಆದ್ರೆ  ಈ ಬಾರಿ ನಗರದಲ್ಲಿ ಕಾನೂನುಬಾಹಿರವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಮಳಿಗೆಗಳು ಕೈಗಾರಿಕೆಗಳು ಸೇರಿದಂತೆ ಬೆಲೆ ಬಾಳುವ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸಿಕೊಂಡ ಮಾಲೀಕರಿಗೆ  ಮರ್ಮಾಘಾತ ನೀಡಲು ಪ್ಲಾನ್ ರೂಪಿಸಿದೆ. ಹೌದು.ಭೂಗಳ್ಳರು ರಾಜಕಾಲುವೆ ಒತ್ತುವರಿ ಮಾಡಿಕೊಂಡ…

Read More

ತುಮಕೂರು:- ಕರ್ಕಶ ಶಬ್ದದೊಂದಿಗೆ ದ್ವಿಚಕ್ರ ವಾಹನ ಚಲಾಯಿಸಿದ ಸವಾರರಿಗೆ 8 ಸಾವಿರ ದಂಡ ವಿಧಿಸಲಾಗಿದೆ. ಗಿರಿನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಬೈಕ್‌ ಓಡಿಸುತ್ತಿದ್ದರು. ಈ ವಿಷಯ ಕ್ಯಾತ್ಸಂದ್ರ ಪೊಲೀಸರ ಗಮನಕ್ಕೆ ಬಂದಿದ್ದು, ಬೈಕ್‌ ವಶಕ್ಕೆ ಪಡೆದು ಸೈಲೆನ್ಸರ್‌ ಕಿತ್ತು ಹಾಕಿ ದಂಡ ವಿಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ವ್ಹೀಲಿಂಗ್‌ ಮಾಡುವುದು ಮತ್ತು ಕರ್ಕಶ ಶಬ್ದದೊಂದಿಗೆ ವಾಹನ ಚಲಾಯಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಇದೀಗ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

Read More

ಪಣಜಿ: ಗೋವಾ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಸ್ಥಾಯಿಕರಾಗಿದ್ದಾರೆ. ಇಡೀ ಗೋವಾದ ಜನಸಂಖ್ಯೆ 15 ಲಕ್ಷ ಕರ್ನಾಟಕದಿಂದ ಗೋವಾದಲ್ಲಿ ಉದ್ಯೋಗಕ್ಕಾಗಿ ಬಂದು ಹೋಗುವವರ ಸಂಖ್ಯೆ ಕೂಡ ಇದಕ್ಕಿಂತ ಹೆಚ್ಚಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡಿಗರಿರುವ ಗೋವಾದಲ್ಲಿ ಶೀಘ್ರದಲ್ಲಿಯೇ ಕನ್ನಡ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಗೋವಾ ಕನ್ನಡಿಗರಿಗೆ ಭರವಸೆ ನೀಡಿದರು. ಗೋವಾದ ವಾಸ್ಕೊ ಜುವಾರಿನಗರದಲ್ಲಿರುವ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಗೋವಾದ ವಿವಿಧ ಸರ್ಕಾರಿ ಇಲಾಖೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಬಾರಿ ಗೋವಾದಲ್ಲಿ ಕನ್ನಡ ಭವನಕ್ಕೆ ಕನಿಷ್ಠ ಒಂದು ಎಕರೆ ಅಥವಾ ಅರ್ಧ ಎಕರೆಯನ್ನಾದರೂ ಭೂಮಿಯನ್ನೂ ಖರೀದಿಸುತ್ತೇವೆ. ಇಷ್ಟು ಹೊತ್ತಿಗಾಗಲೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕತ್ತು, ಬೇರೆ ರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು…

Read More

ತುಮಕೂರು:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಗಬ್ಬು ನಾರುತ್ತಿದೆ. ಕುವೆಂಪು ನಗರದಲ್ಲಿರುವ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಘಟನೆ ಜರುಗಿದೆ. ಮುರಿದ ಕಿಟಕಿ, ಬಾಗಿಲುಗಳು, ಪಾಚಿ ಕಟ್ಟಿದ ಗೋಡೆಗಳಿಂದ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಹಾಸ್ಟೆಲ್‌ನಲ್ಲಿ 250 ವಿದ್ಯಾರ್ಥಿಗಳಿಗೆ ಕೇವಲ 10 ಶೌಚಾಲಯಗಳಿವೆ. ಇರುವ ಶೌಚಾಲಯಗಳು ಒಂದು ವಾರದಿಂದ ಬ್ಲಾಕ್‌ ಆಗಿದ್ದು, ಪ್ರತಿ ದಿನ ಪರದಾಡುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಅಧಿಕಾರಿಗಳು ಇತ್ತ ತಲೆ ಎತ್ತಿ ನೋಡುತ್ತಿಲ್ಲ. ನಿಲಯ ಪಾಲಕರು ವಾರಕ್ಕೊಮ್ಮೆ ‘ಅತಿಥಿ’ಯಂತೆ ಬಂದು ಹೋಗುತ್ತಿದ್ದಾರೆ. ಹಾಸ್ಟೆಲ್‌ ಹಿಂಭಾಗದಲ್ಲಿರುವ ತೆರೆದ ಚರಂಡಿಯನ್ನು ಕಳೆದ ಒಂದು ವರ್ಷದಿಂದ ಮುಚ್ಚಿಲ್ಲ. ರಾತ್ರಿ ಸಮಯದಲ್ಲಿ ಯಾರಾದರೂ ಗಮನಿಸದೆ ಮುಂದೆ ಹೆಜ್ಜೆ ಹಾಕಿದರೆ ಅಪಾಯ ಖಚಿತ. ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸೂಕ್ತವಾದ ಕೊಠಡಿ ವ್ಯವಸ್ಥೆ ಇಲ್ಲವಾಗಿದೆ. ಕೊಠಡಿಗಳ ಬಾಗಿಲು ಮುರಿದಿದ್ದು, ಹಾಸ್ಟೆಲ್‌ಗೆ ಭದ್ರತೆ ಕಲ್ಪಿಸಿಲ್ಲ. ಪ್ರತಿ ದಿನ ಮೆನು ಪ್ರಕಾರ ಊಟ, ತಿಂಡಿ ನೀಡುತ್ತಿಲ್ಲ. ಮೆನು ಚಾರ್ಟ್‌ ಕೇವಲ…

Read More

ಬೆಂಗಳೂರು: ವಿಷ್ಣುವರ್ಧನ್ (Vishnuvardhan) ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಪುಣ್ಯಭೂಮಿ ಆಗಬೇಕು ಎಂದು ವಿಷ್ಣು ಅಭಿಮಾನಿಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳೆಲ್ಲರೂ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ (Protest) ಹಮ್ಮಿಕೊಂಡಿದ್ದಾರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿಗಾಗಿ ಹೋರಾಟ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ವಿಷ್ಣು ಅಭಿಮಾನಿಗಳಿಂದ ಪ್ರತಿಭಟನೆ ನಡೆಯುತ್ತಿದ್ದು  ವಿಷ್ಣುವರ್ಧನ್ ಇಹಲೋಕ ತ್ಯಜಿಸಿ 14 ವರ್ಷಗಳು ಕಳೆದಿವೆ ಆದ್ರೂ ನಿರ್ಣಾಯಕ ಅಂತ್ಯ ಕಾಣದ ಸ್ಮಾರಕ ವಿಚಾರ ಬೆಂಗಳೂರಿಗೆ ಕರ್ನಾಟಕದ ಬೇರೆ ಜಿಲ್ಲೆಗಳಿಂದಲೂ ಬಂದ ಅಭಿಮಾನಿಗಳು ಬೆಂಗಳೂರಿನಲ್ಲೇ ವಿಷ್ಣು ಸ್ಮಾರಕ  ನಿರ್ಮಾಣ ಆಗುವಂತೆ ಒತ್ತಾಯ ವಿಷ್ಣು ಪುಣ್ಯಭೂಮಿಗಾಗಿ ‘ಅಭಿಮಾನ’ದ ಹೋರಾಟ..! ‘ಯಜಮಾನ’ರ ಪುಣ್ಯಭೂಮಿ ನಮ್ ಹಕ್ಕು ಅಂತಿರೋ ವಿಷ್ಣು ಫ್ಯಾನ್ಸ್  ವಿಷ್ಣುವರ್ದನ್ ಅಭಿಮಾನಿಗಳ ಹೋರಾಟಕ್ಕೆ ಕರವೆ ಬೆಂಬಲ ಕೂಡ ನೀಡಿದೆ. ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಲ್ಲಿ ಆಗುವಂತೆ ಒತ್ತಾಯ ನನ್ನ ಒತ್ತಾಯವಿದೆ ಈ ಬಗ್ಗೆ ಡಿಕೆ ಶಿವಕುಮಾರ್ ಬಳಿಯೂ ಮಾತನಾಡಿದ್ದೇನೆ ಡಿಕೆ ಶಿವಕುಮಾರ್ ಕೂಡ ಭರವಸೆ ನೀಡಿದ್ದಾರೆ ಬೇಡಿಕೆ ಇರುವ 10 ಗುಂಟೆ ಜಾಗ ಕೊಡಿಸುತ್ತೇನೆ ಎಂದಿದ್ದಾರೆ…

Read More

ಮಡಿಕೇರಿ:- ಕೊಳೆತ ಸ್ಥಿತಿಯಲ್ಲಿ ಗಂಡಾನೆ ಮೃತದೇಹ ಪತ್ತೆಯಾಗಿರುವ ಘಟನೆ ಮಡಿಕೇರಿಯ ದುಬಾರೆಯ ಕಾಡಿನೊಳಗೆ ಜರುಗಿದೆ. ಸುಮಾರು 15 ದಿನಗಳಿಗೂ ಹಿಂದೆ ಮೃತಪಟ್ಟಿರುವ ಈ ಕಾಡಾನೆಯ ದೇಹ ಸಂಪೂರ್ಣ ಕೊಳೆತು ಹೋಗಿದೆ. ಆನೆಯ ಎರಡೂ ದಂತಗಳು ಸಿಕ್ಕಿವೆ. ಕಾಲಿಗೆ ಗಾಯವಾಗಿ ಕುಂಟುತ್ತಾ ಹೋಗುತ್ತಿದ್ದ ಆನೆಯೊಂದನ್ನು ಇತ್ತೀಚೆಗೆ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ್ದರು. ಬಹುಶಃ ಅದೇ ಆನೆ ಇರಬಹುದು ಎಂದು ಅಂದಾಜು ಮಾಡಲಾಗಿದೆ’ ಎಂದು ತಿಳಿಸಿದರು. ಆನೆಕಾಡಿಗೆ ಕುರುಡು ಆನೆ ಮೃತದೇಹ ಶುಕ್ರವಾರ ರಾತ್ರಿ ಮೃತಪಟ್ಟಿದ್ದ ಕಣ್ಣು ಕಾಣದೇ ಅಲೆಯುತ್ತಿದ್ದ ಹೆಣ್ಣಾನೆಯ ಮೃತದೇಹವನ್ನು ಕುಶಾಲನಗರ ಸಮೀಪದ ಆನೆಕಾಡಿಗೆ ತರಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಗರ್ಭಿಣಿ ಅಲ್ಲ ಎಂದು ಖಚಿತಗೊಂಡಿತು

Read More