Author: AIN Author

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ಹಿಗ್ಗಾಮುಗ್ಗ ಮಾತನಾಡುವ ವಿಜಯಪುರ ಶಾಸಕ ನೇತೃತ್ವದಲ್ಲಿಂದು ಹುಬ್ಬಳ್ಳಿಯಿಂದ ಮೂವರು ನಾಯಕರು ನವದೆಹಲಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಒಂದೇ ವಿಮಾನದಲ್ಲಿ ಪ್ರಯಾಣ ಬೆಳಸಿದರು‌. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ವಿಜೇಯಂದ್ರ ಹಾಗೂ ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ ಅವರು ನೇಮಕ ಮಾಡುತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ ಬಹಿರಂಗವಾಗಿ ಟೀಕೆ ಮಾಡಲಾರಂಬಿಸಿದರು‌ . ಆದ್ದರಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಇನ್ನು ಮುಂದೆ ಬಹಿರಂಗವಾಗಿ ಮಾತನಾಡಬಾರದು ಎಂಬ ತಾಕೀತು ಮಾಡುವುದು ಯಾವುದೇ ಕಾರಣಕ್ಕೂ ಪಕ್ಷದ ಆಂತರಿಕ ವಿಚಾರ ಬಹಿರಂಗವಾಗಿ ಮಾತನಾಡಿರುವ ವಿಚಾರವನ್ನ ಚರ್ಚೆ ಮಾಡಬಾರದು ಎಂಬ ತಾಕೀತು ಮಾಡುವ ಸಾಧ್ಯತೆ ಇದೆ. ಪಕ್ಷದ ವರಿಷ್ಠರಿಂದ ಯತ್ನಾಳ ಗೆ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದು ಇನ್ನು ಇದೇ ಸಂದರ್ಭದಲ್ಲಿ…

Read More

ಟಾಕ್ಸಿಕ್ ಸಿನಿಮಾದ ಅಪ್ ಡೇಟ್ ಕೊಟ್ಟ ಲಂಡನ್ ಗೆ ಹಾರಿದ್ದಾರೆ ನಟ ಯಶ್ ಮತ್ತು ರಾಧಿಕಾ ಪಂಡಿತ್ (Radhika Pandit). ಕ್ರಿಸ್ ಮಸ್ ಗಾಗಿ ಸಿಂಗಾರ ಗೊಂಡಿರುವ ಲಂಡನ್ (London) ಬೀದಿಯಲ್ಲಿ ನಿಂತುಕೊಂಡು ಯಶ್ ದಂಪತಿ ಪೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನು ರಾಧಿಕಾ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಲಂಡನ್ ಪ್ರಯಾಣ ಬೆಳೆಸಿದ್ದರೆ, ಇತ್ತ ಟಾಕ್ಸಿಕ್ ಸಿನಿಮಾದ ಬಗ್ಗೆ ಅನೇಕ ಕಡೆ ಚರ್ಚೆಯಾಗುತ್ತಿದೆ. ಅನೇಕರು ಟೈಟಲ್ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಿರಿಯ ನಟಿ ಶಿವರಾಜ್ ಕುಮಾರ್ (Shivaraj Kumar) ಕೂಡ ಟೈಟಲ್ ಟೀಸರ್ ಬಗ್ಗೆ ಮಾತನಾಡಿದ್ಧಾರೆ. ಯಶ್ ಅವರ ಬೆಳವಣಿಗೆ ನೋಡ್ತಾ ಇದ್ದರೆ ನನ್ನ ತಮ್ಮನೇ ಬೆಳೆಯುತ್ತಿದ್ದಾನೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಅಪ್ಪು ಅವರನ್ನೂ ಶಿವರಾಜ್ ಕುಮಾರ್ ನೆನಪಿಸಿಕೊಂಡಿದ್ದಾರೆ. ಒಂದು ನಿಮಿಷ ಹದಿನೆಂಟು ಸೆಕೆಂಡ್‌ನ ‘ಟಾಕ್ಸಿಕ್’ (Toxic Film) ವಿಡಿಯೋ ಸೈಕ್ ಮಾಡ್ತಿದೆ. ಪ್ರತಿ ಬಾರಿ ಈ ಟೈಟಲ್ ಟೀಸರ್‌ನ ನೋಡಿದಾಗ…

Read More

ಹುಬ್ಬಳ್ಳಿ: ಹುಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪೂರ್ವಭಾವಿ ಸಭೆಯನ್ನು ಡಿ. 19ರಂದು ಬೆಳಗ್ಗೆ 9ಕ್ಕೆ ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಕರೆಯಲಾಗಿದೆ. ದಾವಣಗೆರೆಯಲ್ಲಿ ನಡೆಯಲಿರುವ ಮಹಾ ಅಧಿವೇಶನದ ತಯಾರಿ ಕುರಿತು ಸಭೆಯಲ್ಲಿ ಚಚಿರ್ಸಲಾಗುವುದು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಹಾಸಭಾ ತಾಲೂಕು ಅಧ್ಯಕ್ಷ ಶಶಿಶೇಖರ ಡಂಗನವರ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ದೇವರಾಜ ಧಾಡಿಬಾವಿ ಮುಂತಾದವರು ಭಾಗವಹಿಸುವರು.

Read More

ಭಾರತೀಯ ಕಿರುತೆರೆಯಲ್ಲಿ ಸದ್ಯ ಬಿಗ್ ಬಾಸ್ (Bigg Boss) ನದ್ದೇ ಸದ್ದು. ಕನ್ನಡ, ತೆಲುಗು, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಶೋ ಟೆಕಾಸ್ಟ್ ಆಗುತ್ತಿದೆ. ಒಂದೊಂದು ಭಾಷೆಯಲ್ಲೂ ಒಂದೊಂದು ರೀತಿಯ ಕಂಟೆಸ್ಟೆಂಟ್ ಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಹಿಂದಿ ಬಿಗ್ ಬಾಸ್ ನಲ್ಲಿ ಅನಾಹುತ ಕಂಟೆಸ್ಟೆಂಟ್ ಗಳೇ ಇರುವುದು ವಿಶೇಷ. ಹಿಂದಿ ಬಿಗ್ ಬಾಸ್ ಶೋನಲ್ಲಿ ವಿಕ್ಕಿ ಜೈನ್, ಖಾನ್ಜಾದಿ, ನೀಲ್ ಭಟ್, ಅಭಿಷೇಕ್ ಕುಮಾರ್, ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಜಿಗ್ನಾ ವೋರಾ ಹೀಗೆ ಮುಂತಾದ ಕಂಟೆಸ್ಟೆಂಟ್ ಇದ್ದಾರೆ. ಅದರಲ್ಲೂ ಗಂಡ ಹೆಂಡತಿ ಜೋಡಿಯೂ ಮನೆಯೊಳಗೆ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಮಿಡಿಯನ್ ಮುನಾವರ್ ಫರುಕಿ (Munawar Faruqui)ಕೂಡ ಇದ್ದಾರೆ. ಅವರ ಗರ್ಲ್ ಫ‍್ರೆಂಡ್ ಎಂದು ಹೇಳಿಕೊಂಡ ಹುಡುಗಿಯೊಬ್ಬಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ದೊಡ್ಮನೆ ಪ್ರವೇಶ ಮಾಡುತ್ತಿದ್ದಾರೆ. ಹೆಸರಾಂತ ಸ್ಯಾಂಡ್ ಅಪ್ ಕಾಮಿಡಿಯನ್…

Read More

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆ ಹಾಗೂ ಇತರ ಕಾರಣಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಶಾಲಾ ಕೊಠಡಿಗಳ ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿತ್ತು. ಆದರೆ ವಿವಿಧ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್ ಫಂಡ್)ಯಿಂದ ಅಭಿವೃದ್ಧಿ ಕಾಣುವಂತಾಗಿದೆ. ಜಿಲ್ಲೆಯಲ್ಲಿ ಮಳೆ, ಹಳೇ ಕಟ್ಟಡ ಹೀಗೆ ಅನೇಕ ಕಾರಣಗಳಿಂದ 374 ಶಾಲೆಗಳ 1009 ಕೊಠಡಿಗಳು ಹಾಳಾಗಿದ್ದವು. ಅವುಗಳ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡುವಂತೆ ಕೆಲ ವರ್ಷಗಳ ಹಿಂದೆಯೇ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಆಯ್ದ 6 ತಾಲೂಕುಗಳಲ್ಲಿನ ಶಾಲಾ ಕೊಠಡಿಗಳನ್ನು ಸಿಎಸ್‌ಆರ್ ನಿಧಿ ಮೂಲಕ ಕೊಠಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸದ್ಯಕ್ಕೆ ಕೋಲ್ ಇಂಡಿಯಾ ಕಂಪನಿ 21.54 ಕೋಟಿ ರೂ. ವ್ಯಯಿಸಿ ಜಿಲ್ಲೆಯ 141 ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ 129 ಕಾಮಗಾರಿಗಳು ಆರಂಭವಾಗಿದ್ದು, 11 ಕಾಮಗಾರಿಗಳು ಮುಕ್ತಾಯವಾಗಿವೆ. ಉಳಿದ ಕಾಮಗಾರಿಗಳಲ್ಲಿ ಕೆಲವು ತಳಪಾಯ ಹಂತದಲ್ಲಿದ್ದರೆ, ಕೆಲವು ಲಿಂಟಲ್, ಸ್ಲಾೃಬ್ ಹಂತದಲ್ಲಿವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಕಂಪನಿಗಳು ಸಿಎಸ್‌ಆರ್ ನಿಧಿಯನ್ನು ಸರ್ಕಾರಿ…

Read More

ಆರೋಗ್ಯವು ಸಮತೋಲನವಾಗಿರ ಬೇಕಾದರೆ ನೀರಿನ ಸೇವನೆ ಅತ್ಯಗತ್ಯ. ನೀರಿನ ಸೇವನೆಯಿಂದ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ಅದರಲ್ಲೂ ಮುಂಜಾನೆ ಎದ್ದು ಬಿಸಿಯಾದ ನೀರನ್ನು ಕುಡಿಯುವುದಿಂದ ಅನೇಕ ಲಾಭ ಸಿಗುತ್ತದೆ. ತಣ್ಣಗಿನ ನೀರು ಮತ್ತು ಬಿಸಿ ನೀರು ಎಂದು ಕುಡಿಯುತ್ತೇವೆ. ಹೆಚ್ಚಾಗಿ ಬೇಸಿಗೆಯಲ್ಲಿ ತಣ್ಣಗಿನ ನೀರು ಕುಡಿಯಲು ಇಷ್ಟಪಡುತ್ತೇವೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿ ನೀರು ಇಷ್ಟವಾಗುತ್ತದೆ. ಮುಂಜಾನೆ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುತ್ತವೆ. * ಬಿಸಿ ನೀರು ಕುಡಿಯುವುದರಿಂದ ಸಿಗುವಂತಹ ಅತೀ ಮುಖ್ಯ ಲಾಭ ಎಂದರೆ ಅದು ಜೀರ್ಣ ಕ್ರಿಯೆ ಸುಧಾರಣೆಯಾಗುತ್ತದೆ. ಬಿಸಿ ನೀರು ಕುಡಿದರೆ ಅದರಿಂದ ಮಲಬದ್ಧತೆ ನಿವಾರಣೆ ಮಾಡಬಹುದಾಗಿದೆ. * ಬಿಸಿ ನೀರು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ನೆರವಾಗುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಬಿಸಿ ನೀರು ಹೊಟ್ಟೆ ತುಂಬಿದಂತೆ ಮಾಡುತ್ತದೆ ಮತ್ತು ಬಿಸಿ ನೀರು ಹೆಚ್ಚು ಕಾಲ ಹೊಟ್ಟೆಯಲ್ಲಿ ಉಳಿಯುತ್ತದೆ. * ಬಿಸಿ ನೀರನ್ನು…

Read More

ರಾಂಚಿ: ತಂದೆಯೊಬ್ಬರು ತನ್ನ ಮುದ್ದಿನ ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಬ್ಯಾಂಡ್ ವಾಲಗದವರನ್ನು ಕರೆದುಕೊಂಡು ಹೋಗಿ ಮಗಳನ್ನು ಮೆರವಣಿಗೆ ಮೂಲಕ ತವರಿಗೆ ಕರೆತಂದಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾರ್ಖಂಡ್ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಹೇಗೆ ಓರ್ವ ಹುಡುಗಿಯನ್ನು ಮದುವೆ ಮಾಡಿ ಕೊಡುವ ವೇಳೆ ಪಟಾಕಿಗಳನ್ನು ಸಿಡಿಸಿ, ಸಂಗೀತ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಕಳುಹಿಸಿಕೊಡುತ್ತಾರೋ ಅದೇ ರೀತಿ ಇಲ್ಲಿ ಗಂಡನ ಮನೆಯಿಂದ ಮಗಳನ್ನು ಕರೆದುಕೊಂಡು ಬರುವ ವೇಳೆಯೂ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಬಹಳ ಅದ್ದೂರಿಯಾಗಿ ಮಗಳನ್ನು ಆಕೆಯ ಗಂಡನ ಮನೆಯಿಂದ ತಂದೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾರೆ. ಪ್ರೇಮ್ ಗುಪ್ತಾ ಎಂಬುವವರೇ ಹೀಗೆ ಮಗಳನ್ನು ಮರಳಿ ತವರು ಮನೆಗೆ ಬಹಳ ಪ್ರೀತಿ ಹಾಗೂ ಸಂಭ್ರಮದಿಂದ ಕರೆಸಿಕೊಂಡ ತಂದೆ. ತನ್ನ ಮಗಳು ಸಾಕ್ಷಿ ಗುಪ್ತಾಗೆ ಅತ್ತೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಪೋಷಕರು ಹೆಣ್ಣು ಮಕ್ಕಳನ್ನು ಮದುವೆ…

Read More

ವಿಚ್ಛೇದನದ ವದಂತಿಗಳ ನಡುವೆಯೇ ಇದೀಗ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಮನೆಯನ್ನು ತೊರೆದಿದ್ದಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ. ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್‌ ಬಚ್ಚನ್‌ ಬಾಲಿವುಡ್‌ನ ಬೆಸ್ಟ್‌ ಜೋಡಿ ಎನಿಸಿಕೊಂಡಿದ್ದರು. ಸುಮಾರು ಹದಿನಾರು ವರ್ಷಗಳ ಕಾಲ ತುಂಬು ಸಂಸಾರ ಮಾಡಿದ್ದ ಈ ದಂಪತಿಯ ಬಗ್ಗೆ ಇತ್ತೀಚಿಗೆ ಕೆಲವು ಗಾಸಿಪ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಈ ಗಾಳಿ ಸುದ್ದಿಗೆ ಪುಷ್ಟಿಕೊಡುವ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಐಶ್ವರ್ಯಾ ರೈ ಅವರು ತನ್ನ ತಾಯಿಯ ಮನೆಯಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಅಂತರ ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ ಹಿಂದೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿದೆ. ಆದರೆ ಇಬ್ಬರೂ ತಮ್ಮ ಮಗಳು ಆರಾಧ್ಯ ಗೋಸ್ಕರ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೆಲ್ಲದರ ನಡುವೆ ಅಮಿತಾಬ್ ಮತ್ತು ಐಶ್ವರ್ಯ ಒಬ್ಬರನ್ನೊಬ್ಬರು…

Read More

ಕೃಷಿಕರ ಬೇಸಾಯಕ್ಕೆ ಧನಸಹಾಯವಾಗಿ ಸರ್ಕಾರ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 15ನೇ ಕಂತಿನ ಹಣ ನವೆಂಬರ್ 15ರಂದು ಬಿಡುಗಡೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್ನ ಖೂಂಟಿಯಲ್ಲಿ (Khunti, Jharkhand) ಹೊಸ ಕಂತಿನ ಹಣ ಬಿಡುಗಡೆಯಾಗಿರುವುದನ್ನು ಪ್ರಕಟಿಸಿದರು. ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ. ಪಿಎಂ ಕಿಸಾನ್ ಸ್ಕೀಮ್ನಲ್ಲಿ 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಅದಕ್ಕೆ ಕಾರಣಗಳಿವು… • ಯೋಜನೆಗೆ ಇನ್ನೂ ನೊಂದಾವಣಿ ಆಗಿಲ್ಲದೇ ಇರಬಹುದು. • ಇಕೆವೈಸಿ ಆಗಿಲ್ಲದೇ ಇರಬಹುದು, ಅಥವಾ ಸರಿಯಾಗಿ ಮಾಡಿಲ್ಲದೇ ಇರಬಹುದು. • ಯೋಜನೆಯ ಅರ್ಹತಾ ಮಾನದಂಡ ಒದಗಿಸಲು ವಿಫಲವಾಗಿರಬಹುದು…

Read More

ಬೆಂಗಳೂರು:- ಕೊರೊನಾ ರೂಪಾಂತರಿ ತಳಿ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದು ಕೊಡಗು ಜಿಲ್ಲಾಡಳಿತಕ್ಕೆ ಸಚಿವ ಭೋಸರಾಜು ಸೂಚನೆ ನೀಡಿದ್ದಾರೆ. ಕೇರಳದಲ್ಲಿ ಕೊರೊನಾ ರೂಪಾಂತರಿ ಜೆಎನ್‌1 ಪತ್ತೆಯಾಗಿದ್ದು ಗಡಿ ಜಿಲ್ಲೆ ಕೊಡಗಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಜಿಲ್ಲೆಯ ಆರೋಗ್ಯ ಇಲಾಖೆ ಸನ್ನದ್ದವಾಗಿದ್ದುಕೊಂಡು ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸಲು ಸಜ್ಜಾಗಿರಬೇಕು. ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕೊರೊನಾ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ಅಗತ್ಯ ಚಿಕಿತ್ಸೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

Read More