Author: AIN Author

ನಟ ದರ್ಶನ್ ಅಭಿನಯದ ಕಾಟೇರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಡಿ ಬಾಸ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಕಾಟೇರ ಟ್ರೈಲರ್ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಟೇರ ಟ್ರೈಲರ್ ಸದ್ದು ಜೋರಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್ ಸರ್ ಹೊಸ ಮಾಸ್ ಲುಕ್ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ನಿರ್ದೇಶಕ ತರುಣ್ ಸುಧೀರ್, ರಾಕ್ಲೈನ್ ವೆಂಕಟೇಶ್ ಸರ್ ಗೆ ಅಭಿನಂದನೆಗಳು. ಕಾಟೇರ ಚಿತ್ರಕ್ಕೆ ಅತ್ಯುತ್ತಮ ಅಭೂತಪೂರ್ವ ಯಶಸ್ಸು ಸಿಗಲೆಂದು ಆಶಿಸುತ್ತೇನೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಾಸ್ ಗೆ ಇರೋದು ಒಂದೇ ಅಡ್ರೆಸ್ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನಸೋರೆ ಟ್ರೈಲರ್​ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾಸ್ ಗೆ ಇರೋದು ಒಂದೇ ಅಡ್ರೆಸ್, ಅದು ಡಿ ಬಾಸ್ ದರ್ಶನ್ ಸರ್. ಫುಲ್ ಮಾಸ್ ಟ್ರೈಲರ್ ಎಂದು ಹಾಡಿ ಹೊಗಳಿದ್ದಾರೆ. ಸಿಂಪಲ್ ಸುನಿ ಅವರು, ಒಂದ್ ಬಂದೂಕು ಅಲ್ಲ .. ನೂರು ಫಿರಂಗಿ ಬಂದ್ರೂ ತಡೆಯೋಕಾಗೋಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಸಿನಿ ಪ್ರಿಯರಿಗೆ ಮುತ್ತಿನಹಾರ ಈ ‘ಕಾಟೇರ’ ನಟ ಸತೀಶ್…

Read More

ಹುಬ್ಬಳ್ಳಿ: ಇಲ್ಲಿನ ದಾಜಿಬಾನಪೇಟೆಯ ಶ್ರೀ ಗುರುಸಿದ್ಧೇಶ್ವರ ಕೋ-ಆಪ್ ಬ್ಯಾಂಕ್‌ನಲ್ಲಿ ಸೋಮವಾರ ಆಡಳಿತ ಮಂಡಳಿ ಸಭೆ ಜರುಗಿತು. ಇದೇ ವೇಳೆ ಮುಂದಿನ 5 ವರ್ಷಗಳವರೆಗೆ ಶಂಕರಣ್ಣ ಮುನವಳ್ಳಿ ಅಧ್ಯಕ್ಷರಾಗಿ, ಅರವಿಂದ ಲಿಂಬಿಕಾಯಿ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬ್ಯಾಂಕ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ರಿಟರ್ನಿಂಗ್ ಅಧಿಕಾರಿ ಬಿ.ಬಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಹುಬ್ಬಳ್ಳಿ; ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ನಂಬಿಸಿ ನವನಗರದ ಬಸವ ಲೇಔಟ್‌ನ ಪ್ರೀತಿ ಮಠಪತಿ ಎಂಬುವರಿಗೆ ₹ 2.05 ಲಕ್ಷ ವಂಚಿಸಲಾಗಿದೆ. ಚೌಬಲಿ ಶೇಟ್‌ ಎಂಬಾತ ತನ್ನ ಇವಿಗೋ ಫಾಸ್ಟ್ ಚಾರ್ಜಿಂಗ್ ಕಂಪನಿಯಲ್ಲಿ ಚೈನ್‌ ಸಿಸ್ಟಮ್ ಮಾದರಿಯಲ್ಲಿ ವಿವಿಧ ಯೋಜನೆ ಅಡಿ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ಪ್ರೀತಿ ಅವರಿಗೆ ಕಂಪನಿಯ ವೆಬ್‌ಸೈಟ್‌ ಲಿಂಕ್‌ ಕಳಿಸಿ, ಅವರ ಹೆಸರಿನಲ್ಲಿ ಖಾತೆ ತೆರದಿದ್ದಾನೆ. ನಂತರ ಲಾಭಾಂಶದ ಹಣ ನೀಡಿ ನಂಬಿಸಿದ್ದಾನೆ. ಇದನ್ನು ನಂಬಿರುವ ಪ್ರೀತಿ ಅವರು ಹಂತಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ನಂತರ ವೆಬ್‌ಸೈಟ್‌ ಲಾಕ್ ಮಾಡಿ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸತ್ ದಾಳಿ ಪ್ರಕರಣದಲ್ಲಿ ಟ್ರ್ಯಾಪ್ ಮಾಡಲಾಗಿದೆ ಎಂಬ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹೇಳಿಕೆ ಪ್ರಕರಣದ ದಿಕ್ಕು ತಪ್ಪಿಸುವ ಯತ್ನವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಪಾರ್ಲಿಮೆಂಟ್ ‌ನಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಕುರಿತು ಲೆಹರ್ ಸಿಂಗ್ ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಹೇಳಿಕೆಗಳನ್ನು ನೀಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಸಿಎಂ ಸಿದ್ದರಾಮಯ್ಯನವರು ಪುತ್ರ ಯತೀಂದ್ರರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸುವ ಸಲುವಾಗಿ, ಸಂಸದ ಪ್ರತಾಪ್ ಸಿಂಹರನ್ನು ಸಿಲುಕಿಸಲು ಯತ್ನಿಸಿದ್ದಾರೆಂದು ಲೆಹರ್ ಸಿಂಗ್ ಹೇಳಿರುವುದು ಬೇಜವಾಬ್ದಾರಿತನದಿಂದ ಕೂಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ ನೀಡಿರುವ ಹೇಳಿಕೆಯೂ ಸರಿಯಲ್ಲ. ಸಂಸತ್ ನಲ್ಲಿ ನಡೆದಿರುವ ಘಟನೆಯನ್ನು ಟೂಲ್ ಕಿಟ್ ನ ಭಾಗ ಎಂದು ಹೇಳಿರುವುದು ಸರಿಯಲ್ಲ ಎಂದು ಲಕ್ಷ್ಮಣ್ ಹೇಳಿದರು.

Read More

ಲಕ್ನೋ: ಉತ್ತರ ಪ್ರದೇಶದಿಂದ (Uttar Pradesh) ಜೈಪುರಕ್ಕೆ (Jaipur) ಬರುತ್ತಿದ್ದ ಬಸ್ಸಿನಲ್ಲಿ 20 ವರ್ಷದ ದಲಿತ ಯುವತಿ (Dalit Girl) ಮೇಲೆ ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 9ರ ಮಧ್ಯರಾತ್ರಿ ಖಾಸಗಿ ಬಸ್ ಉತ್ತರ ಪ್ರದೇಶದಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾನ್ಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಸಂತ್ರಸ್ತೆ ಕ್ಯಾಬಿನ್‌ನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್‌ನೊಳಗೆ ಆರಿಫ್ ಮತ್ತು ಲಲಿತ್ ಎಂದು ಗುರುತಿಸಲಾದ ಚಾಲಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.  https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಆರೋಪಿಗಳ ಪೈಕಿ ಆರಿಫ್‌ನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಕನೋಟಾ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಭಗವಾನ್ ಸಹಾಯ್ ಮೀನಾ ತಿಳಿಸಿದ್ದಾರೆ. ಘಟನೆಯ ಬಳಿಕ ಇನ್ನೋರ್ವ ಆರೋಪಿ ಲಲಿತ್ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.  ಸಂತ್ರಸ್ತೆ ಕ್ಯಾಬಿನ್‌ನಲ್ಲಿದ್ದಾಗ ಬಸ್‌ನೊಳಗೆ ಕೆಲವು ಪ್ರಯಾಣಿಕರಿದ್ದರು. ಆದರೆ ಕ್ಯಾಬಿನ್ ಅನ್ನು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ಈ…

Read More

ದಕ್ಷಿಣದ ಖ್ಯಾತನಟಿ ಸಮಂತಾ (Samantha) ಮದುವೆ ಕುರಿತಾಗಿ ಸಾಕಷ್ಟು ಸುದ್ದಿಗಳು ಚಿತ್ರೋದ್ಯಮದಲ್ಲಿ ಗಿರಕಿ ಹೊಡೆದಿವೆ. ಸಮಂತಾ ಎರಡನೇ ಮದುವೆ ಆಗುತ್ತಿದ್ದಾರೆ ಅಂತೆಲ್ಲ ಸದ್ದು ಮಾಡಿವೆ. ಡಿವೋರ್ಸ್ (Divorce)   ನಂತರ ಸಮಂತಾ ಮದುವೆ (Marriage) ಯೋಚನೆಯನ್ನು ಮಾಡಿದ್ದಾರೆ ಎಂದೂ ಸುದ್ದಿ ಆಗಿದೆ. ಈ ಕುರಿತು ಸಮಂತಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. 2ನೇ ಮದುವೆ ಕುರಿತಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಡಿವೋರ್ಸ್ ನಂತರ ಯಾವುದೇ ಕಾರಣಕ್ಕೂ ಅವರು ಮದುವೆ ಬಗ್ಗೆ ಯೋಚನೆ ಮಾಡಿಲ್ಲವಂತೆ. ಎರಡನೇ ಮದುವೆ ಆಗೋದು ತಮ್ಮ ಪ್ರಕಾರ ವೇಸ್ಟ್ ಅಂತೆ. ಆ ಮದುವೆಯೂ ಮುರಿದು ಬೀಳೋಲ್ಲ ಅನ್ನೋದು ಏನು ಗ್ಯಾರಂಟಿ ಎನ್ನುವ ಸಮಂತಾ. ತಮಗೆ ಎರಡನೇ ಮದುವೆಯಲ್ಲೇ ಆಸಕ್ತಿ ಇಲ್ಲವೆಂದು ಹೇಳಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಮಾಧ್ಯಮದವರು ಪದೇ ಪದೇ 2ನೇ ಮದುವೆ ಕುರಿತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಇಬ್ಬರಿಗೂ ಒಂದೇ ಮಾತಿನ ಮೂಲಕ ಉತ್ತರ ನೀಡಿದ್ದಾರೆ. ತಮಗೆ ಮದುವೆ ಕುರಿತಾಗಿ ಯಾವುದೇ ಆಸಕ್ತಿ ಉಳಿದಿಲ್ಲವೆಂದು ಅವರು ಹೇಳಿದ್ದಾರೆ. ಈ ಮೂಲಕ…

Read More

ಡಿಬಾಸ್ ಹೀರೋಯಿನ್ ಆರಾಧನಾ ರಾಮ್ (Aradhanaa Ram) ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಆರಾಧನಾ ನಯಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ ಅವರು ಕೆಂಪು ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಆರಾಧನಾ ಮಾದಕ ನೋಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಡಿಬಾಸ್ (Darshan) ನಾಯಕಿ ಪಸಂದಾಗವ್ಳೆ ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ನಿರ್ಮಾಪಕ ರಾಮು- ಮಾಲಾಶ್ರೀ ದಂಪತಿ ಪುತ್ರಿ ಆರಾಧನಾ ರಾಮ್ ಅವರು ದರ್ಶನ್‌ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಸದ್ಯ ಕಾಟೇರ (Katera Film) ಚಿತ್ರದ ‘ಪಸಂದಾಗವ್ನೆ’ ಎಂಬ ಸಾಂಗ್‌ನಲ್ಲಿ ಆರಾಧನಾ ಸಖತ್ ಆಗಿ ಡಿಬಾಸ್ ಜೊತೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಟ್ರೈಲರ್ ಕೂಡ ಫ್ಯಾನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ. ಟಗರು ಪಲ್ಯ’ ಚಿತ್ರದ ಮೂಲಕ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ನಟಿಸಿ ಗೆದ್ದರು. ಈಗ ಆರಾಧನಾ ರಾಮ್…

Read More

ಹುಬ್ಬಳ್ಳಿ: ಕಿಮ್ಸ್ ವೈದ್ಯ ರಾಮಲಿಂಗಪ್ಪ ಅಂಟರತಾನಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದಿರುವ ಅಪರಿಚಿತ ವ್ಯಕ್ತಿಗಳು, ಸೊಲಾಪುರದ ಡಾ.ಎಸ್.ಪಿ.ಸರದೇಸಾಯಿ ಎಂಬುವರಿಂದ ₹60 ಸಾವಿರ ಪಡೆದು ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಖಾತೆಯ ಡಿಪಿಗೆ ರಾಮಲಿಂಗಪ್ಪ ಅವರ ಭಾವಚಿತ್ರ ಹಾಕಿರುವ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟು ಪೋಸ್ಟ್‌ ಮಾಡಿದ್ದಾರೆ. ಇದನ್ನು ನಂಬಿರುವ ಎಸ್.ಪಿ.ಸರದೇಸಾಯಿ ಅವರು ಫೋನ್‌ಪೇ ಮೂಲಕ ಹಣ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಲೋಕೇಶ ರಾವ್ ಮತ್ತು ಶಾಂತಿ ಅವರು ಆತ್ಮಹತ್ಯೆಗೂ ಮುನ್ನ, ‘ನಮ್ಮ ಸಾವಿಗೆ ನಾವೇ ಕಾರಣ. ಆಟೊ ಚಾಲಕನ ತಪ್ಪಿಲ್ಲ’ ಎಂದು ಸೆಲ್ಫಿ ವಿಡಿಯೊ ಮಾಡಿದ್ದು, ಘಟನೆಗೆ ಅವರ ಅಕ್ರಮ ಸಂಬಂಧ ಕುಟುಂಬದವರಿಗೆ ತಿಳಿದಿದ್ದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಪೀಣ್ಯ ಎರಡನೇ ಹಂತದ ನಿವಾಸಿಗಳಾದ ಇವರು, ಭಾನುವಾರ ನಗರದ ಆಟೊ ಚಾಲಕ ಮಾರುತಿ ಜಾಧವ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಲೋಕೇಶ ತನ್ನ ಪತ್ನಿ ಪಾರ್ವತಿ ಅವರ ತಂಗಿ ಶಾಂತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಪತ್ನಿಗೆ ತಿಳಿಯುತ್ತಿದ್ದಂತೆ ಹುಬ್ಬಳ್ಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

Read More

ಭಾರತೀಯ ಷೇರುಪೇಟೆಯಲ್ಲಿ ಕಳೆದ ಕೆಲವು ವಾರಗಳಿಂದ ಸರಣಿ ಐಪಿಒಗಳು ಬರುತ್ತಿವೆ. ಈ ಷೇರುಗಳಿಗೆ ಲಿಸ್ಟಿಂಗ್‌ ಬಳಿಕ ಭಾರೀ ಬೇಡಿಕೆಯೂ ಕಂಡು ಬರುತ್ತಿದ್ದು, ಹೂಡಿಕೆದಾರರೂ ಬಂಪರ್‌ ಲಾಭ ಗಳಿಸುತ್ತಿದ್ದಾರೆ. ಇದೀಗ ಟಾಟಾ ಟೆಕ್ನಾಲಜೀಸ್‌, ಐಆರ್‌ಇಡಿಎನಂತಹ ಯಶಸ್ವಿ ಐಪಿಒಗಳ ಬಳಿಕ ಮುತ್ತೂಟ್ ಮೈಕ್ರೋಫಿನ್ ಷೇರುಪೇಟೆಯಲ್ಲಿ ಅಗ್ರ ಸ್ಥಾನ ಇದೆ. ಐಪಿಒದಿಂದ ಮುತ್ತೂಟ್ ಮೈಕ್ರೋಫಿನ್ 960 ಕೋಟಿ ರೂ. ಸಂಗ್ರಹಿಸಲು ಹೊರಟಿದೆ. ಸಂಸ್ಥೆಯು 10 ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 277 ರಿಂದ 291 ರೂ. ಬೆಲೆ ನಿಗದಿಪಡಿಸಿದೆ. ಮುತ್ತೂಟ್ ಮೈಕ್ರೋಫಿನ್ ಐಪಿಒ ಚಂದಾದಾರಿಕೆಯು  ಆರಂಭವಾಗಿದ್ದು, ಡಿಸೆಂಬರ್ 20ರಂದು ಬುಧವಾರದಂದು ಮುಕ್ತಾಯವಾಗಲಿದೆ. ಮುತ್ತೂಟ್ ಐಪಿಒದಲ್ಲಿ ಆಂಕರ್ ಹೂಡಿಕೆದಾರರಿಗೆ ಚಂದಾದಾರಿಕೆಯು  ಆರಂಭವಾಗಲಿದೆ. ಮುತ್ತೂಟ್ ಮೈಕ್ರೋಫಿನ್‌ ಐಪಿಒ ಪ್ರಾರಂಭಿಸಲು ಅಕ್ಟೋಬರ್‌ ತಿಂಗಳಿನಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯು ಅನುಮತಿ ನೀಡಿತ್ತು. ಮುತ್ತೂಟ್ ಮೈಕ್ರೋಫಿನ್ ಮುತ್ತೂಟ್ ಫೈನಾನ್ಸ್‌ನ ಮುಖ್ಯ ಅಂಗಸಂಸ್ಥೆಯಾಗಿದೆ. ಇದೀಗ ಮತ್ತೆ ಸಂಸ್ಥೆ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಮುತ್ತೂಟ್ ಮೈಕ್ರೋಫಿನ್ ಲಿಮಿಟೆಡ್‌ ತನ್ನ ಐಪಿಒದಲ್ಲಿ 760…

Read More