Author: AIN Author

ಚೆನ್ನೈ: ತಮಿಳುನಾಡಿನ (Tamil Nadu) ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ (Rain) ಸುಮಾರು 500ಕ್ಕೂ ಹೆಚ್ಚು ಪ್ರಯಾಣಿಕರು ತೂತುಕುಡಿ ಜಿಲ್ಲೆಯ ಶ್ರೀವೈಕುಂಟಂನ ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಮಳೆಯಿಂದ ತೂತುಕುಡಿಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ರೈಲು (Train) ನಿಲ್ದಾಣದ ಎಲ್ಲಾ ಕಡೆಗಳಲ್ಲೂ ಜಲಾವೃತವಾಗಿದ್ದು, ಭಾರೀ ಮಳೆಯ ಪರಿಣಾಮ ರೈಲು ನಿಲ್ದಾಣದ ಬಳಿಯ ಹಳಿಗಳ ಬಳಿ ಮಣ್ಣಿನ ಸವೆತ ಉಂಟಾಗಿದೆ. ಇದರಿಂದ ಸಿಮೆಂಟ್ ಚಪ್ಪಡಿಗಳು ಹಾನಿಗೊಳಗಾಗಿವೆ. ಇದರಿಂದಾಗಿ ತಿರುಚೆಂದೂರಿನಿಂದ ಚೆನ್ನೈಗೆ ಹೋಗುತ್ತಿದ್ದ ರೈಲನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ನಿಲ್ದಾಣದ ಮಾರ್ಗ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯ ಸಹ ವಿಳಂಬವಾಗುತ್ತಿದೆ. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನಿಲ್ದಾಣವನ್ನು ತಲುಪಲು ಪ್ರಯತ್ನಿಸುತ್ತಿದೆ. ಆಹಾರವನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವೆಡೆ ಮಳೆ ಬಿಡುವು ನೀಡಿದ್ದರೂ, ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮುಂದುವರಿದಿದೆ. ಇದರಿಂದ ಕೆಲವೆಡೆ ನೀರು ನಿಂತಿದೆ. ಮಳೆಯಿಂದ ಕನ್ಯಾಕುಮಾರಿ, ತೂತುಕುಡಿ, ತೆಂಕಶಿ ಮತ್ತು ತಿರುನಲ್ವೇಲಿ ಜಿಲ್ಲೆಗಳು…

Read More

ನವದೆಹಲಿ: ಲೋಕಸಮರದಲ್ಲಿ (Lok Sabha Election) ಬಿಜೆಪಿ (BJP) ವಿರುದ್ಧ ರಣಕಹಳೆ ಮೊಳಗಿಸುತ್ತಿರುವ INDIA ಒಕ್ಕೂಟದ ನಾಲ್ಕನೇ ಸಭೆ ದೆಹಲಿಯ ಅಶೋಕ ಹೋಟೆಲಿನಲ್ಲಿ (Ashok Hotel) ನಡೆಯಲಿದೆ. ಈ ಸಭೆಯಲ್ಲಿ ಪ್ರತಿ ರಾಜ್ಯದಲ್ಲಿ ಸೀಟ್‌ ಹೊಂದಾಣಿಕೆ ಮತ್ತು ಪ್ರಧಾನಿ ಅಭ್ಯರ್ಥಿ (Prime Minister Candidate) ಕುರಿತಾಗಿ ಚರ್ಚೆ ನಡೆಯಲಿದೆ. ನಮ್ಮ ಒಳಗೆ ಸ್ಪರ್ಧೆ ನಡೆದರೆ ಬಿಜೆಪಿಗೆ (BJP) ಲಾಭ ಎಂಬುದನ್ನು ಅರಿತ ವಿಪಕ್ಷಗಳು ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿ ವಿರುದ್ಧ ಮತಗಳ ಕ್ರೋಢಿಕರಣಕ್ಕೆ ತಂತ್ರ ರೂಪಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಒಕ್ಕೂಟ ನಾಯಕರು ಒಟ್ಟಾಗಿ ಪ್ರಚಾರ ನಡೆಸುವ ಸಾಧ್ಯತೆಯಿದೆ. ಇದರ ಜೊತೆಗೆ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ಸಮಾಲೋಚನೆ ನಡೆಯಲಿದೆ. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದ್ದರೆ ಟಿಎಂಸಿಯಿಂದ ಮಮತಾ, ಜೆಡಿಯುನಿಂದ ನಿತೀಶ್ ಕುಮಾರ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ತೀವ್ರ ಪೈಪೊಟಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಈಗ ಗೊಂದಲದಲ್ಲಿದ್ದಾರೆ. ಈಗಾಗಲೇ…

Read More

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ  ಸಿಹಿಸುದ್ದಿ ನೀಡಿದ್ದು  ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೆ ಒಂದೇ ವಿಷಯದ ಎರಡೆರಡು ಪಠ್ಯ ಪುಸ್ತಕ ಹಾಗೆ  ಶಾಲಾ ಮಕ್ಕಳ ʻಬ್ಯಾಗ್ ಹೊರೆʼ ಇಳಿಕೆಗೆ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ. 2 ಭಾಗಗಳಾಗಿ ಪಠ್ಯ ಮುದ್ರಿಸಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದ್ದು  ಬ್ಯಾಗ್‌ ಹೊರೆ ತಗ್ಗಿಸುವ ನಿಟ್ಟಿಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ ಎನ್ನುತ್ತಿರುವ ಶಿಕ್ಷಣ ಇಲಾಖೆ. 2024-25ನೇ ಸಾಲಿನಿಂದಲೇ ಅಳವಡಿಸಲಾಗುತ್ತಿದ್ದು  1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬ್ಯಾಗ್‌ ಹೊರೆಯನ್ನ, ಕಡಿಮೆ ಮಾಡಲು ಶಾಲಾ ಶಿಕ್ಷಣ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.

Read More

2023ರ ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದೆ.ಇತ್ತ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನ ವೆಲ್ ಕಮ್ ಮಾಡೋಕೆ ಕಾತುರರಾಗಿರೋ ಹೊತ್ತಲ್ಲೇ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಕೂಡ ನ್ಯೂ ಇಯರ್ ಸೆಲೆಬ್ರೇಷನ್ ನಲ್ಲಿ ಲೋಪವಾಗದಂತೆ ತಡೆಯೋಕೆ ಪ್ಲಾನ್ ನಡೆಸಿದೆ. ಈಗಾಗಲೇ ಜಂಟಿ ಸಭೆ ನಡೆಸಿರೋ ಪಾಲಿಕೆ ಹಾಗೂ ಪೊಲೀಸರು, ಹೊಸ ವರ್ಷಾಚರಣೆಯ ರೂಪುರೇಷೆಗಳನ್ನ ರೆಡಿಮಾಡ್ತಿದ್ದಾರೆ.ಹೊಸ ವರ್ಷಕ್ಕೆ ಏನೆಲ್ಲಾ ರೂಲ್ಸ್ ಇರುತ್ತೆ ಅನ್ನೋದರ ರಿಪೋರ್ಟ್ ಇಲ್ಲಿದೆ.. ಹೊಸ ವರ್ಷಕ್ಕೆ ಇನ್ನೇನು 12 ದಿನಗಳು ಬಾಕಿ ಉಳಿದಿವೆ. 2023ಕ್ಕೆ ಟಾಟಾ ಹೇಳಿ 2024ನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುವ ಕಾತುರದಲ್ಲಿ ಜನರಿದ್ದಾರೆ. ಹೊಸ ವರ್ಷದಂದು ನಗರದಾದ್ಯಂತ ಸಂಭ್ರಮ ಮನೆ ಮಾಡಲಿದೆ. ಈ ಕುರಿತಾಗಿ ಮತ್ತು ಮುನ್ನೆಚ್ಚರಿಕೆಯ ಸಲುವಾಗಿ ಬೆಂಗಳೂರು ಮಹಾನಗರ ಪಾಲಿಕೆ ಪೊಲೀಸರ ಸಾರಥ್ಯದಲ್ಲಿ ಗೈಡ್ ಲೈನ್ಸ್ ರೆಡಿ ಮಾಡಿದೆ. ಹೌದು.ಡಿಸೆಂಬರ್ ತಿಂಗಳು ಮುಗಿಯುತ್ತ ಬರ್ತಿದ್ದಂತೆ ಇತ್ತ ಹೊಸ ವರ್ಷದ ತಯಾರಿ ಕೂಡ ಸದ್ದಿಲ್ಲದೇ ಕಾವೇರುತ್ತಿದೆ. ಹೊಸ ವರ್ಷಾಚರಣೆಗೆ ಇನ್ನೂ 15 ದಿನ…

Read More

ಬೆಂಗಳೂರು: ಮನೆಯೊಂದರಲ್ಲಿ ಸಂಗ್ರಹಿಸಿದ್ದ ಸ್ಫೋಟಕ ತಯಾರಿಕೆಯಲ್ಲಿ ಬಳಸುವ ಸೋಡಿಯಂ ನೈಟ್ರೇಟ್‍ನ್ನು (Sodium Nitrate) ಎನ್‍ಐಎ (NIA) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸೋಡಿಯಂ ನೈಟ್ರೇಟ್‍ನ್ನು ಅಡಗಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕೃತಿ ನಗರದ ಸಂಪತ್ ಎಂಬವರ ಮನೆಯಲ್ಲಿ ಬಾಡಿಗೆಗಿದ್ದ ಶಮಿವುಲ್ಲಾ ಹಾಗೂ ಅಲ್ತಾಫ್, ಮಿಸ್ಬಾ ಹಾಗೂ ಮುನಿರುದ್ದೀನ್ ಸೋಡಿಯಂ ನೈಟ್ರೇಟ್ ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ. ಶಮಿವುಲ್ಲಾ ಎಲ್‍ಎಲ್‍ಬಿ ಪದವೀಧರನಾಗಿದ್ದು, ಅಲ್ತಾಫ್ ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮುನಿರುದ್ದೀನ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದು, ಮಿಸ್ಬಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇವರನ್ನು ಎನ್‍ಐಎ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮುಂಜಾನೆಯಿಂದಲೇ ಬಳ್ಳಾರಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದ 9 ಎನ್‍ಐಎ ತಂಡಗಳು ನಿಷೇಧಿತ ಪಿಎಫ್‍ಐನ 7 ಮಂದಿಯ ಮನೆಗಳ ಮೇಲೆ ದಾಳಿ ನಡೆಸಿದೆ. ಬಳ್ಳಾರಿಯ ಮಾಜಿ ಪಿಎಫ್‍ಐ ಪ್ರಧಾನ ಕಾರ್ಯದರ್ಶಿ ಸುಲೇಮಾನ್, ನಿಖಿಲ್ @ ಸೂಫಿಯಾನ್, ಇಜಾಜ್ ಅಹ್ಮದ್, ತಬ್ರೇಜ್ ಮತ್ತು…

Read More

ಮಂಡ್ಯ:  ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್​​ನ ಜೆಎನ್​​1 ರೂಪಾಂತರಿ ತಳಿಯಿಂದಾಗಿ ಸೋಂಕು ಹರಡುತ್ತಿದ್ದು, ರಾಜ್ಯದಲ್ಲಿಯೂ ಆತಂಕ ಸೃಷ್ಟಿಯಾಗಿದೆ. ಇಂಥ ಸಂದರ್ಭದಲ್ಲೇ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಕ್ತಿಯೊಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಪ್ರಯಾಣದ ಇತಿಹಾಸ ಇಲ್ಲದಿದ್ದರೂ ವ್ಯಕ್ತಿಗೆ ಸೋಂಕು ತಗುಲಿದೆ. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಶಸ್ತ್ರಚಿಕಿತ್ಸೆಗಂದು ಆಸ್ಪತ್ರೆಗೆ ತೆರಳಿದ್ದಾಗ ಪರೀಕ್ಷೆ ನಡೆಸಿದ ವೇಳೆ ಕೊವಿಡ್ ಧೃಡಪಟ್ಟಿದೆ. ಸೋಂಕಿತ ವ್ಯಕ್ತಿಯಲ್ಲಿ ಯಾವ ರೋಗ ಲಕ್ಷಣಗಳು ಇರಲಿಲ್ಲ. ಇದೀಗ ವ್ಯಕ್ತಿಯ ಸಂಪರ್ಕದಲ್ಲಿದ್ದ ನಾಲ್ವರಿಗೂ ಆರ್​ಟಿಪಿಸಿಆರ್ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆದಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.

Read More

ಇಂದು ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಲ್ಲೂ ಇತಿಹಾಸದಲ್ಲಿ ಪ್ರಥಮ ಬಾರಿಗೆ ಭಾರತದ ಹೊರಗೆ ಹರಾಜು ನಡೆಯಲಿದೆ. ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದ್ದು, ಒಟ್ಟು 333 ಕ್ರಿಕೆಟಿಗರು ಹರಾಜು ಪಟ್ಟಿಯಲ್ಲಿದ್ದಾರೆ. ಈ ಪೈಕಿ 214 ಭಾರತೀಯ ಹಾಗೂ 119 ವಿದೇಶಿ ಆಟಗಾರರಿದ್ದಾರೆ. 116 ಆಟಗಾರರಿಗೆ ಅಂತರಾಷ್ಟ್ರೀಯ ಪಂದ್ಯ ಆಡಿದ ಅನುಭವವಿದ್ದರೆ, 217 ಆಟಗಾರರು ಯಾವುದೇ ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ. 10 ತಂಡಗಳಿಗೆ ಒಟ್ಟಾರೆ ಬೇಕಿರುವುದು ಕೇವಲ 77 ಆಟಗಾರರು. ಇದರಲ್ಲಿ 30 ಸ್ಥಾನ ವಿದೇಶಿ ಆಟಗಾರರಿಗೆ ಮೀಸಲಾಗಿದೆ. ಐಪಿಎಲ್ ಹರಾಜು 19 ಡಿಸೆಂಬರ್‌ 2024 ಹರಾಜು ಎಲ್ಲಿ? ಕೋಕಾ-ಕೋಲಾ ಅರೆನಾ, ದುಬೈ ಎಷ್ಟು ಗಂಟೆಗೆ ಆರಂಭ? 11:30 AMಕ್ಕೆ ಪ್ರಾರಂಭ (ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆ) ಪ್ರಸಾರ (ಲೈವ್‌ ವೀಕ್ಷಣೆ) JioCinema (ಲೈವ್ ಸ್ಟ್ರೀಮಿಂಗ್), ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಾಂಚೈಸಿ ಬಳಿ ಉಳಿದಿರುವ ಹಣ ಗುಜರಾತ್ ಟೈಟಾನ್ಸ್ : 38.15 ಕೋಟಿ ಸನ್ ರೈಸರ್ಸ್ ಹೈದರಾಬಾದ್ :…

Read More

ಬೆಂಗಳೂರು:- ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬಟ್ಟೆ ಬೆಂಕಿಗೆ ಆಹುತಿಯಾದ ಘಟನೆ ನಗರದ ಮಾರತಹಳ್ಳಿ ಬ್ರಿಡ್ಜ್ ಸಮೀಪದಲ್ಲಿ ಜರುಗಿದೆ. ಘಟನೆಯಲ್ಲಿ ನಾಲ್ವರು ರೋಚಕವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಅಗ್ನಿ ಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಬೆಂಕಿನ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಲೂಯಿಸ್ ಫಿಲಿಪ್ ಬಟ್ಟೆ ಶೋರೂಂ. ಮೂರಂತಸ್ತಿನಲ್ಲಿದ್ದ ಬಟ್ಟೆ ಶೋ‌ ರೂಂ. ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗೂ ಬೆಂಕಿ ತಗುಲಿ ಕ್ಷಣ ಮಾತ್ರದಲ್ಲಿ ಮೂರು ಕಟ್ಟಡಕ್ಕೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಗೆ. ಬೆಂಕಿಯ ಕೆನ್ನಾಲಗೆಗೆ ವಾಹನ ಸವಾರರೇ ಬೆಚ್ಚಿಬಿದ್ದಿದ್ದಾರೆ. ಬಟ್ಟೆ ಶೋ ರೂಂನಿಂದ ಮುಖ್ಯ ರಸ್ತೆವರೆಗೂ ಚಾಚಿಕೊಂಡಿದ್ದ ಬೆಂಕಿ ಕಟ್ಟಡದ ಮುಂದಿದ್ದ ತೆಂಗಿನಮರ, ಟ್ರಾನ್ಸ್‌ಫಾರ್ಮರ್‌ಗೂ ತಗುಲಿ ಇನ್ನಷ್ಟೂ ಅನಾಹುತವಾಗಿದೆ. ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಹೇಗೆಂಬುದೇ ನಿಗೂಢವಾಗಿದೆ. ಅಂಗಡಿ ಪಕ್ಕದಲ್ಲೇ ಇರುವ ಟ್ರಾನ್ಸ್‌ಫಾರ್ಮರ್. ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿಹೊತ್ತಿಕೊಂಡಿರು ಶಂಕೆ. ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿ ಬೋರ್ಡ್ ನಿಂದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತು ಕೊಂಡಿದೆ.

Read More

ಬೆಂಗಳೂರು:- ಮನಿ ಡಬ್ಲಿಂಗ್ ಹೆಸ್ರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಾಮ್ಯ ಇಂಟರ್ ನ್ಯಾಷನಲ್ ಅನ್ನೋ ನಕಲಿ ಕಂಪನಿ‌ ಹೆಸರಲ್ಲಿ ಮಹಾಮೋಸವಾಗಿರುವುದು ಬೆಳಕಿಗೆ ಬಂದಿದೆ. ಕನಕಪುರ ಮೂಲದ ಪ್ರದೀಪ್, ಆತನ ಪತ್ನಿ ಸೌಮ್ಯ, ಏಜೆಂಟ್ ವಂಸತ್ ಎಂಬುವವರಿಂದ ವಂಚನೆ ಆರೋಪ ಕೇಳಿ ಬಂದಿದೆ. ಸಾರ್ವಜನಿಕರಿಗೆ ಲಕ್ಷಲಕ್ಷ ಹಣಕ್ಕೆ ಆರೋಪಿಗಳು ಉಂಡೇನಾಮ ಹಾಕಿದ್ದಾರೆ. ಕೋಣನಕುಂಟೆ ಬಳಿ ಪ್ರದೀಪ್ ಕಚೇರಿ ತೆರೆದಿದ್ದ. ಅಧಿಕ‌ ಬಡ್ಡಿ, ಅಧಿಕ ಲಾಭಾಂಶ ನೀಡೋದಾಗಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದು, ಮೊದಮೊದಲು ಲಾಭಾಂಶ ನೀಡಿ ನಂಬಿಕೆಗಳಿಸಿದ್ದ. ನಂತರ ಹೂಡಿಕೆದಾರರಿಗೆ ಹಣ ನೀಡಲು ಸತಾಯಿಸಿದ್ದರು. ಖಚಿತ ಮಾಹಿತಿ ಮೇರೆಗೆ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡಸಿದ ವೇಳೆ ಮಹಾಮೋಸ ಬೆಳಕಿಗೆ ಬಂದಿದೆ. ಸರ್ಕಾರದಿಂದ ಮಾನ್ಯತೆ ಪಡೆಯದೆ ಅನಧಿಕೃತವಾಗಿ ಕಂಪನಿ ಓಪನ್ ಆಗಿರುವುದು ತಿಳಿದು ಬಂದಿದೆ. ವಂಚನೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Read More

ಬೆಂಗಳೂರು :- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೆಳ್ಳುಳ್ಳಿಯ ರೇಟ್ ಗಗನಕ್ಕೇರುತ್ತಿದೆ. ಬೆಳ್ಳುಳ್ಳಿಯ ಬೆಲೆ 350-450ರ ಗಡಿ ಮುಟ್ಟಿದೆ. ಅಕಾಲಿಕ ಮಳೆ,ಹವಮಾನ ವೈಪರೀತ್ಯ ಹಿನ್ನಲೆ ಸರಿಯಾದ ಬೆಳೆ ಬಾರದ ಪರಿಣಾಮ ಬೆಳ್ಳುಳಿಯ ಬೆಲೆ ಏರಿಕೆ ಆಗಿದೆ. ಹಾಪ್ ಕಾಮ್ಸ್ ನಲ್ಲಿ ಒಂದು ಕೆಜಿ ಬೆಳ್ಳುಳ್ಳಿಗೆ 320 ರೂಪಾಯಿ ಇದ್ದು, ಬೆಳ್ಳುಳ್ಳಿ ಬಿಡಿಸಿದ್ದು ಒಂದು ಕೆ.ಜಿಗೆ 360 ರೂಪಾಯಿ. ಇಷ್ಟು ದಿನಗಳ ಕಾಲ ನಾಸಿಕ್,ಪುನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯನ್ನ ರಫ್ತು ಕಡಿಮೆಯಾಗಿದೆ ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಇನ್ನೂ ಎರಡು ತಿಂಗಳುಗಳ ಕಾಲ ಬೆಳ್ಳುಳ್ಳಿ ಹೊಸ ಬೆಳೆ ಬರಲ್ಲ. ಹೀಗಾಗಿ ಇನ್ನೂ ರೇಟ್ ಹೆಚ್ಚಾಗೋ ಸಾಧ್ಯತೆ ಇದೆ.

Read More