Author: AIN Author

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ  18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,7577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ. ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು. ಎನ್‌.ಡಿ.ಆರ್‌.ಎಫ್. ನಿಂದ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಲಾಗಿದೆ. https://ainlivenews.com/dont-eat-eggplant-because-of-this-health-problem/ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16…

Read More

ಬೆಂಗಳೂರು:   ಮಚ್ಚಿನಿಂದ ಹೊಡೆದು 60 ಲಕ್ಷ ದೋಚಿದ್ದ ಐವರು ಆರೋಪಿಗಳನ್ನ ಬಸವೇಶ್ವರ ನಗರ ಪೊಲೀಸರಿಂದ ಬಂಧಿಸಿದ್ದಾರೆ.  ಸೈಯದ್ ಇರ್ಫಾನ್ , ರಿಜ್ವಾನ್ , ದಿವಾಕರ, ಸತೀಶ್ ,ಅಶ್ರಫ್ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ  53 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಬಸವೇಶ್ವರ ನಗರದ ಆದರ್ಶ್ ಲೇಔಟ್ ನಲ್ಲಿ ಡಿಸೆಂಬರ್ 11 ನಡೆದಿದ್ದ ಘಟನೆಯಾಗಿದ್ದು  ಪಾನ್ ಬ್ರೋಕರ್ ಕೆಲಸ ಮಾಡುವ ಸಂಕೇತ್ ಎಂಬಾತನಿಂದ  60 ಲಕ್ಷ ಹಣವನ್ನ ದರೋಡೆ ಮಾಡಲಾಗಿತ್ತು ಸಂಕೇತ್ ಗೆ ಸಂಪರ್ಕ ಮಾಡಿ ಆದರ್ಶ ನಗರಕ್ಕೆ ಕರೆಸಿಕೊಂಡಿದ್ದ ಆರೋಪಿಗಳು ಕಡಿಮೆ ಬೆಲೆಗೆ ದುಬೈ ನಿಂದ ಚಿನ್ನ ತರಿಸಿದ್ದೆವೇ ಎಂದು ಹೇಳಿದ್ರು ಹಣ ತೆಗೆದುಕೊಂಡು ಬನ್ನಿ ದುಬೈ ರೇಟ್ ಗೆ ಚಿನ್ನವನ್ನು ಕೊಡ್ತಿನಿ ಎಂದು ಹೇಳಿದ್ರುಏರಿಯಾಗೆ ಬಂದ ಬಳಿಕ ಹಣಕೊಡುವಂತೆ ಬೆದರಿಕೆ ಚಿನ್ನ ಇಲ್ಲದೇ ಸುಳ್ಳು ಹೇಳಿ ಹಣ ದೋಚುವ ಪ್ಲಾನ್ ಮಾಡಿದ್ದ ಗ್ಯಾಂಗ್ ಹಣ ಕೊಡಲು ಒಪ್ಪದೇ ಇದ್ದಾಗ ಮಚ್ಚಿನಿಂದ ಹಲ್ಲೆ ಮಾಡಿದ್ದ ಗ್ಯಾಂಗ್ ಬಳಿಕ ಹಣದ ಸಹಿತ ಎಸ್ಕೇಪ್ ಆಗಿದ್ರ…

Read More

ಮೈಸೂರು: ದೆಹಲಿಯ ಸಂಸತ್ (Parliament) ಭವನದ ಕಲಾಪದ ವೇಳೆ ಸ್ಮೋಕ್ ಬಾಂಬ್ (Smoke Bomb) ಹಾಕಿದ್ದ ಆರೋಪಿ ಮನೋರಂಜನ್‍ನ ಮೈಸೂರಿನ ನಿವಾಸಕ್ಕೆ ಇಂದು ದೆಹಲಿಯ ಪೊಲೀಸರು ಎಂಟ್ರಿ ಕೊಟ್ಟಿದ್ರು. ಓರ್ವ ಮಹಿಳಾ ಪೊಲೀಸ್ ಸೇರಿದಂತೆ ಇಬ್ಬರು ಅಧಿಕಾರಿಗಳ ತಂಡ ಮನೋರಂಜನ್ ನಿವಾಸದಲ್ಲಿ ತಪಾಸಣೆ ಮಾಡಿದ್ರು. ಮನೆಯಿಂದ ಹೊರಗೆ ಹೋಗಿದ್ದ ಮನೋರಂಜನ್ (Manoranjan) ತಂದೆ ದೇವರಾಜೇಗೌಡ ಮಧ್ಯಾಹ್ನದ ವೇಳೆಗೆ ಮನೆಗೆ ಬಂದ್ರು. ಈ ಮೊದಲೇ ಮನೋರಂಜನ್ ರೂಂ ಸೀಜ್ ಮಾಡಿದ್ದ ಪೊಲೀಸರು, ಕೊಠಡಿ ತೆರೆದು ಇಂಚಿಂಚು ಪರಿಶೀಲನೆ ಮಾಡಿದ್ರು. ಮನೋರಂಜನ್ ಪೋಷಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸ್ರು, ತಂದೆ ತಾಯಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ರು. https://ainlivenews.com/dont-eat-eggplant-because-of-this-health-problem/ ಸಾಗರ್ ಶರ್ಮ ನಿಮಗೆ ಪರಿಚಯ ಇದ್ದಾನಾ. ಎಷ್ಟು ದಿನಗಳ ಹಿಂದೆ ಸಾಗರ್ ಶರ್ಮ ಬಂದಿದ್ದ. ಸಾಗರ್ ಒಬ್ಬನೇ ಬಂದಿದ್ನಾ, ನಿಮ್ಮ ಮಗ ಎಂಜಿನಿಯರಿಂಗ್ ಯಾಕಾಗಿ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಮಾಡದ ಮೇಲೆ ಅವನಿಗೆ ಹಣ ಎಲ್ಲಿಂದ ಬರುತ್ತಿತ್ತು. ಮನೆಯಲ್ಲಿ ಯಾವ ರೀತಿ ಇರ್ತಾ ಇದ್ದ, ಅವನ…

Read More

ಬಾಗಲಕೋಟೆ: 15 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬೀಳಗಿಯ ಸರ್ವೇಯರ್ ಬಿದ್ದಿದ್ದಾನೆ. ಸರ್ವೇಯರ್ ಮಹಾಂತೇಶ್ ಕವಳಿಕಟ್ಟಿ, ಅಣ್ಣೇಶಿ ಲಮಾಣಿ ಎಂಬವರಿಂದ 15 ಸಾವಿರ ರೂ. ಹಣ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುನಗ ಗ್ರಾಮದಲ್ಲಿದ್ದ 8 ಎಕರೆ ಜಮೀನಿನ ಪಿಟಿ ಶೀಟ್ ಮಾಡಿ ಕೊಡಲು ಆತ ಲಂಚ ಕೇಳಿದ್ದ. https://ainlivenews.com/if-the-scar-on-your-face-is-ruining-you-then-look-here-its-the-best/ ಈ ಹಿಂದೆ 28 ಸಾವಿರ ರೂ. ಪಡೆದು ಕೆಲಸ ಮಾಡಿಕೊಟ್ಟಿರಲಿಲ್ಲ. ಅಲ್ಲದೇ 38 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ. 15 ಸಾವಿರ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ಮಹಾಂತೇಶ್ ಕವಳಿಕಟ್ಟಿಯನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್‍ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಪುಷ್ಪಲತಾ ನೇತೃತ್ವದಲ್ಲಿ ದಾಳಿ ನಡೆದಿದೆ.

Read More

ನವದೆಹಲಿ: ಮೂರು ವರ್ಷದ ಬಳಿಕ ವೆನೆಜುವಲಾದಿಂದ (Venezuela) ಭಾರತ (India) ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿದೆ. ವೆನೆಜುವೆಲಾ ಸೇರಿದಂತೆ ನಿರ್ಬಂಧ ಇಲ್ಲದ ಯಾವುದೇ ದೇಶದಿಂದ ತೈಲ (Crude Oil) ಆಮದು ಮಾಡಿಕೊಳ್ಳಲು ಭಾರತ ಸಿದ್ಧ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ. ಭಾರತದ ಮೂರು ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ (RIL), ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಮತ್ತು ಎಚ್‌ಪಿಸಿಎಲ್-ಮಿತ್ತಲ್ ಎನರ್ಜಿ (HMEL) ವೆನೆಜುವೆಲಾದ ತೈಲ ಖರೀದಿಸಿದ್ದು, ಇದು ಮುಂದಿನ ಎರಡು ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ.  ಭಾರತದಲ್ಲಿ ನಿರ್ದಿಷ್ಟವಾಗಿ ಖಾಸಗಿ ವಲಯದ ರಿಫೈನರ್ಸ್ ಆರ್‌ಐಎಲ್‌ ಮತ್ತು ನಯಾರಾ ಎನರ್ಜಿ (NEL) ವೆನೆಜುವೆಲಾದ ತೈಲವನ್ನು ಖರೀದಿಸುತ್ತಿದ್ದವು. ಆದರೆ ಅಮೆರಿಕ ಹೇರಿದ ನಿರ್ಬಂಧದ ಬಳಿಕ ಆಮದು ನಿಂತಿತ್ತು. ಭಾರತವು ಕೊನೆಯದಾಗಿ ವೆನೆಜುವೆಲಾದ ಕಚ್ಚಾ ತೈಲವನ್ನು ನವೆಂಬರ್ 2020 ರಲ್ಲಿ ಆಮದು ಮಾಡಿಕೊಂಡಿತ್ತು. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಭಾರತದ ಅಧಿಕೃತ ವ್ಯಾಪಾರದ ಮಾಹಿತಿಯ ಪ್ರಕಾರ 2019 ರಲ್ಲಿ ವೆನೆಜುವೆಲಾ ಐದನೇ…

Read More

ಬೆಂಗಳೂರು:  ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ   ಅನುದಾನದ ಕೊರತೆ ಎದ್ದು ಕಾಣುತ್ತಿದ್ದು  ಶಕ್ತಿಗಾಗಿ ಮೀಸಲಿಟ್ಟ ಹಣ ಖಾಲಿ‌‌ ಖಾಲಿ ಯಾಗಿದ್ದು  ಮಾರ್ಚ್ ತಿಂಗಳವರೆಗೆ ಅಂದಾಜಿಸಿದ್ದ 2800ಕೋಟಿ ರೂ. ಡಿಸೆಂಬರ್ ‌ಅಂತ್ಯಕ್ಕೂ ಮೋದಲೆ ಮೀಸಲಿಟ್ಟ ಹಣ ಸಂಪೂರ್ಣ ಖಾಲಿಯಾಗಿ ಹೋಗಿದೆ. ಈಗಾಗಲೇ 2,800ಕೋಟಿಯಲ್ಲಿ 2,778ಕೋಟಿ ಹಣ ಖಾಲಿಯಾಗಿದ್ದು  ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುಧಾನ ಕೊರತೆಯ ಅತಂಕ ಈಗ ಎಲ್ಲರನ್ನ ಕಾಡುತ್ತಿದೆ. ಯೋಜನೆ ಮುಂದುವರಿಯಲು ಸರ್ಕಾರ ಇನ್ನಷ್ಟು ಅನುಧಾನ ನೀಡೋದು ಅನಿವಾರ್ಯ ಉಂಟಾಗಿದ್ದು  ಶಕ್ತಿಯೋಜನೆಗೆ ಶಕ್ತಿ ತುಂಬಲು ಅನುದಾನ ಬಿಡುಗಡೆ ಮಾಡೋದು ಅನಿವಾರ್ಯ ವಾಗಿ ಬಿಟ್ಟಿದೆ. ಸಾರಿಗೆ ಸಚಿವರಿಗೆ ತಲೆ ನೋವಾದ ಅನುದಾನ ಕೊರತೆ ಯೋಜನೆ 10ವರ್ಷಗಳವರೆಗೆ ಮುಂದುವರೆಯಲಿದೆ ಎಂದಿದ್ದ ರಾಮಲಿಂಗಾರೆಡ್ಡಿಯವರು ಈಗ ಅನುದಾನದ ಕೊರೆ ಕಾಣುತ್ತಿದ್ದು  ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ರೆ ಸಾರಿಗೆ ನಿಗಮಕ್ಕೆ ಎದುರಾಗಲಿದೆ ಆರ್ಥಿಕ ಸಂಕಷ್ಟ ರಾಜ್ಯದಲ್ಲಿ ಶಕ್ತಿ ಯೋಜನೆ‌ ಜೂನ್ 11ರಂದು ಜಾರಿಯಾಗಿತ್ತು ಜೂನ್ 11ರಿಂದ ಡಿಸೆಂಬರ್ 17ವರೆಗೆ ಶಕ್ತಿಯೋಜನೆಯಡಿ ಬರೊಬ್ಬರಿ 31,73,48,773 ಮಹಿಳೆಯರು…

Read More

ಈ ವಾರದ ನಾಮಿನೇಷನ್ ಗುಮ್ಮ ಬಂದೇಬಿಟ್ಟಿದೆ. ಅದಕ್ಕೆ ಇರುವ ಚಟುವಟಿಕೆ ಕೂಡ ಭಿನ್ನವಾಗಿದೆ. ಆ ಚಟುವಟಿಕೆಯ ಸ್ವರೂಪ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ನಿಯೋಜಿತ ಕುರ್ಚಿಯಲ್ಲಿ ಪ್ರತಿಯೊಂದು ಸದಸ್ಯರು ಕೂಡಬೇಕು. ಎದುರು ನಿಂತಿರುವ ಸದಸ್ಯರಲ್ಲಿ ಯಾರಿಗೆ ಕುರ್ಚಿಯಲ್ಲಿ ಕೂತಿರುವ ಸದಸ್ಯರು ನಾಮಿನೇಟ್ ಆಗಬೇಕು ಅನಿಸುತ್ತದೆಯೋ ಅವರು ಬೋರ್ಡ್ ಎತ್ತಿ ಸೂಚಿಸಬೇಕು. ಆಮೇಲೆ ಮಸಿನೀರನ್ನು ಅವರ ಮೇಲೆ ಸುರಿಯಬೇಕು. ಕೊನೆಗೆ ಅತಿ ಹೆಚ್ಚು ಸದಸ್ಯರಿಂದ ಸೂಚಿತರಾದವರು ನಾಮಿನೇಟ್ ಆಗುತ್ತಾರೆ. ಈ ಚಟುವಟಿಕೆಯಲ್ಲಿ ಮೈಕಲ್ ಅವರು ಕಾರ್ತೀಕ್‌ ಅವರನ್ನು ನಾಮಿನೇಟ್ ಮಾಡಿದ್ದಾರೆ. ಆದರೆ ಅವರು ಕೊಟ್ಟ ಕಾರಣ ಕಾರ್ತೀಕಗ ಅವರಿಗೆ ಸೂಕ್ತ ಅನಿಸಿಲ್ಲ. ಹಾಗಾಗಿ ಅದೇ ಕಾರಣ ಇಟ್ಟುಕೊಂಡು ಕಾರ್ತೀಕ್ ಕೂಡ ಮೈಕಲ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಹಾಗೆಯೇ ಸಂಗೀತಾ, ಪ್ರತಾಪ್ ಸೇರಿದಂತೆ ಹಲವರ ಹೆಸರುಗಳು ಸೂಚಿತಗೊಂಡಿವೆ. ಯಾರ ಹೆಸರು ಹೆಚ್ಚು ಸಲ ಸೂಚಿತಗೊಂಡಿದೆ? ಯಾರು ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ.

Read More

ವೀಕೆಂಡ್‌ ಎಪಿಸೋಡ್‌ನಲ್ಲಿ ಸುದೀಪ್‌ ಮನೆಯ ದಿನಸಿಗಳನ್ನು ಗಳಿಸುವ ಚಟುವಟಿಕೆಯ ಬಗ್ಗೆ ಬಗ್ಗೆ ಹಲವು ಕಿವಿಮಾತುಗಳನ್ನು ಹೇಳಿದ್ದರು. ಹಿಂದಿನ ಹಲವು ವಾರಗಳಲ್ಲಿ ತಪ್ಪು ಲೆಕ್ಕಾಚಾರದಿಂದ, ಸಿಲ್ಲಿ ತಪ್ಪುಗಳಿಂದ ದಿನಸಿಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಟಿಪ್ಸ್ ಕೂಡ ಕೊಟ್ಟಿದ್ದರು. ಆಗ ಯಾರಿಗೂ ಸುದೀಪ್ ಯಾಕೆ ಇದನ್ನು ಹೇಳುತ್ತಿದ್ದಾರೆ ಎಂದು ಅರ್ಥವಾಗಿರಲಿಲ್ಲ. ಅವರ ಮಾತಿನ ಅರ್ಥ ಈಗ ಅಂದರೆ, ವಾರದ ಮೊದಲ ದಿನ ಅರ್ಥವಾಗಿದೆ. ಅದೂ ಕಾಲಮಿಂಚಿ ಹೋದಮೇಲೆ! ಹಾಗಾದರೆ ಆಗಿದ್ದೇನು? ಇದರ ಸುಳಿವು JioCinemaಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ. ಬಿಗ್‌ಬಾಸ್‌ ದಿನಸಿ ಪಡೆದುಕೊಳ್ಳುವ ಕುರಿತು ಒಂದು ಟಾಸ್ಕ್ ನೀಡಿದ್ದಾರೆ. ನಾಲ್ಕು ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಝರ್ ಎದುರು ನಿಂತುಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಗೆ ಬೇಕಾದ ದಿನಸಿಗಳನ್ನು ಮತ್ತು ಅವುಗಳ ಪ್ರಮಾಣವನ್ನು ಹೇಳುತ್ತ ಹೋಗುತ್ತಾರೆ. ಆಗ ಬೇಕಾದ ದಿನಸಿಗಳ ಹೆಸರು-ಪ್ರಮಾಣ ಬಂದಾಗ ಬಝರ್ ಒತ್ತಬೇಕು. ಈ ಟಾಸ್ಕ್‌ ಮೂಲ ಲಾಜಿಕ್‌ ಗೊತ್ತಾಗದೆ ಸದಸ್ಯರು ಎಡವಟ್ಟು ಮಾಡಿಕೊಂಡಿರುವಂತಿದೆ.…

Read More

ಬೀಜಿಂಗ್‌: ಚೀನಾದ ಗನ್ಸು-ಕಿಂಗ್ಹೈ (China’s Gansu) ಗಡಿ ಪ್ರದೇಶದಲ್ಲಿ ಭೀಕರ ಭೂಕಂಪ (Earthquake) ಸಂಭವಿಸಿದ್ದು, 111 ಮಂದಿ ಸಾವನ್ನಪ್ಪಿದ್ದಾರೆ. 230ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು (EMSC) ಭೂಕಂಪದ ತೀವ್ರತೆಯನ್ನು 6.1 ಎಂದು ಗುರುತಿಸಿದೆ. ಆದ್ರೆ ಚೀನಾದ ಸರ್ಕಾರಿ ಮಾಧ್ಯಮ ಭೂಕಂಪದ ತೀವ್ರತೆ 6.2 ಎಂದು ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಪಶ್ಚಿಮ-ನೈಋತ್ಯಕ್ಕೆ 102 ಕಿಮೀ ದೂರದಲ್ಲಿರುವ ಗನ್ಸು (Gansu) ಪ್ರಾಂತ್ಯದ ರಾಜಧಾನಿ ಲಾನ್‌ಝೌ ಬಳಿ 35 ಕಿಮೀ ಆಳದಲ್ಲಿ ಪತ್ತೆಯಾಗಿದೆ. https://ainlivenews.com/many-disguises-to-make-girls-too-it-is-exciting-that-this-khatarnak-lover-has-been-caught/ ಕ್ವಿಂಗ್‌ಹೈ ಪ್ರಾಂತ್ಯದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ವಿಪತ್ತು ನಿರ್ವಹಣೆ, ಕಡಿತ ಮತ್ತು ಪರಿಹಾರಕ್ಕಾಗಿ ಚೀನಾದ ರಾಷ್ಟ್ರೀಯ ಆಯೋಗ ಮತ್ತು ತುರ್ತು ನಿರ್ವಹಣೆಯ ಸಚಿವಾಲಯವು 4ನೇ ಹಂತದ ಪರಿಹಾರ, ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.

Read More

ಬೆಂಗಳೂರು: ಹಿಟ್ ಆ್ಯಂಡ್ ರನ್‌ಗೆ (Hit&Run) ವೃದ್ಧೆ (Old Woman) ಬಲಿಯಾದ ಘಟನೆ ಬ್ಯಾಟರಾಯನಪುರ (Byatarayanapura) ಬಳಿಯ ಮೈಸೂರು ರೋಡ್‌ನಲ್ಲಿ (Mysuru Road) ನಡೆದಿದೆ. ಜಯಲಕ್ಷ್ಮಿ ಮೃತ ವೃದ್ಧೆ. ಇಂದು ಬೆಳಗ್ಗೆ 6 ಗಂಟೆಯ ವೇಳೆಗೆ ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.  ಮೃತ ವೃದ್ಧೆ ಹೊಸಗುಡ್ಡದಹಳ್ಳಿ ನಿವಾಸಿಯಾಗಿದ್ದು, ಅಗರಬತ್ತಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ

Read More