Author: AIN Author

ಹೊಸಕೋಟೆ-:-ನಿಗಮ ಮಂಡಳಿ ಆಯ್ಕೆ ವಿಚಾರವಾಗಿ ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಸಿಎಂ ಡಿಸಿಎಂ ಯಾವುದೇ ಜವಬ್ದಾರಿ ನೀಡಿದ್ರು ನೆರವೇರಿಸಲು ತಯಾರಿದ್ದೇನೆ. ಮೂರು ವರ್ಷದಿಂದ ಜನರ ಮಧ್ಯೆ ಶಾಸಕನಾಗಿದ್ದೇನೆ. ಇನ್ನಷ್ಟು ಜನರ ಸಮಸ್ಯೆ ಪರಿಹಾರ ಮಾಡಬೇಕು ಹಲವಾರು ಕಾರ್ಯಕ್ರಮ ರೂಪಿಸಬೇಕು. ನಾನು ಅತೃಪ್ತನಲ್ಲ ಅಸಮಧಾನಿತನಲ್ಲು ಕೊಡುವ ಜವಬ್ದಾರಿ ನಿರ್ವಹಿಸುತ್ತೆನೆ. ಗೃಹ ಮಂಡಳಿ ಸೇರಿದಂತೆ ಯಾವುದೇ ಜವಬ್ದಾರಿ ನಿರ್ವಹಿಸಲು ನಾನು ತಯಾರಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.

Read More

ಬೆಂಗಳೂರು:- ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಂಪೂರ್ಣವಾಗಿ ನಿಂತು ಹೋಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಜಿ ಕವಿದ ವಾತಾವರಣ ಇದ್ದರೂ ಆಗಾಗ ಜಿನುಗು ರೀತಿಯಲ್ಲಿ ಮಳೆಯಾಗುತ್ತಿರುತ್ತದೆ. ಇನ್ನು ಬಿಸಿಲಿನ ತಾಪಮಾನ ಮಾತ್ರ ದಿನದಿಂದ ದಿನಕ್ಕೆ ನಗರಲ್ಲಿ ಕಡಿಮೆಯಾಗುತ್ತಿದೆ. ಇನ್ನು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಮುಂದುವರೆದಿದೆ. ಎರಡು ದಿನಗಳಿಂದ ಕನಿಷ್ಠ ಉಷ್ಣಾಂಶ ಕುಸಿತದದಿಂದಾಗಿ ಈ ಭಾಗದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಚಳಿ ಹೆಚ್ಚಳವಾಗಿದೆ. ಕನಿಷ್ಠ ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಯಿರುವುದು ಚಳಿಯ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ರಾಜ್ಯದ ದಕ್ಷಿಣ ಭಾಗದ ಕೆಲವೆಡೆ ಗುರುವಾರ (ಡಿಸೆಂಬರ್‌ 21) ಮಳೆ ಬೀಳುವ ಮುನ್ಸೂಚನೆಯನ್ನು ನೀಡಿದೆ. ಇನ್ನುಳಿದ ಕಡೆ ಮುಂದಿನ 5 ದಿನಗಳ ಕಾಲ ಬೆಂಗಳೂರು, ಕರಾವಳಿ ಭಾಗದ ಜಿಲ್ಲೆಗಳು, ಉತ್ತರ ಕರ್ನಾಟಕದ ಯಾವ ಭಾಗದಲ್ಲೂ ಮಳೆಯ ಸೂಚನೆ ಇಲ್ಲ ಎಂದು ತಿಳಿಸಿದೆ. ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಗಳವಾರ (ಡಿಸೆಂಬರ್‌ 19) ವಿಜಯಪುರದಲ್ಲಿ 14.2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ…

Read More

ತುಮಕೂರು:-ಪ್ರಯಾಣಿಗರ ಸೋಗಿನಲ್ಲಿ ಇಬ್ಬರು ಕಳ್ಳಿಯರು ಕಳ್ಳತನಕ್ಕೆ ಯತ್ನಿಸಿದ ಘಟನೆ ಕೊರಟಗೆರೆ ಸಮೀಪದ ತುಂಬಾಡಿ ಗ್ರಾಮದ ಬಳಿ ಜರುಗಿದೆ. ಕಳ್ಳಿಯರನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಈ ಕಳ್ಳಿಯರು, ಚೆಂದದ ಡ್ರೆಸ್ ಮಾಡಿಕೊಂಡು, ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ಹತ್ತಿದ್ದರು. ಪ್ರಯಾಣಿಕರೊಬ್ಬರ ಜೇಬಿಗೆ ಕೈ ಹಾಕಿ ಹಣ ಕದಿಯುವಾಗ ಸಿಕ್ಕಿ ಬಿದ್ದಿದ್ದಾರೆ. ಇಬ್ಬರನ್ನು ಹಿಡಿದು ಕೊರಟಗೆರೆ ಪೊಲೀಸರಿಗೆ ಒಪ್ಪಿಸಲಾಗಿದೆ. ಪಾವಗಡದಿಂದ ತುಮಕೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಕಳ್ಳತನ ನಡೆದಿದೆ. ಕೊರಟಗೆರೆ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

Read More

ಸೌತ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ (Vijay Devarakonda) ಮತ್ತೆ ಸುದ್ದಿಯಲ್ಲಿದ್ದಾರೆ. ಬಾಯ್‌ಫ್ರೆಂಡ್ ವಿಜಯ್‌ಗೆ ಸೀಕ್ರೆಟ್ ಮೆಸೇಜ್ ತಲುಪಿಸುವ ಮೂಲಕ ‘ಪುಷ್ಪ’ ನಟಿ ಸದ್ದು ಮಾಡ್ತಿದ್ದಾರೆ. ಕೊಡಗಿನ ಬೆಡಗಿ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರೀತಿ ತುಂಬಿದ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಅದರಲ್ಲಿ ನಾನು ನಿಮಗೆ ಹೇಳಲು ಒಂದು ವಿಷಯ ಬಯಸುತ್ತೇನೆ. ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದು ಹೃದಯದ ಇಮೋಜಿ ಹಾಕಿದ್ದರು. ರಶ್ಮಿಕಾ(Rashmika Mandanna) ಯಾರ ಹೆಸರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿಲ್ಲ. ಆದರೆ ವಿಜಯ್ ದೇವರಕೊಂಡ ಕುರಿತು ರಶ್ಮಿಕಾ ಈ ಪೋಸ್ಟ್ ಮಾಡಿದ್ದಾರೆ ಎಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ-ವಿಜಯ್ ಹಲವು ಬಾರಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ತಗ್ಲಾಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ವಾಸಿಸುತ್ತಿದ್ದಾರೆ ಎಂದು ಕೂಡ ಸುದ್ದಿಯಿದೆ. ಆದರೆ ಡೇಟಿಂಗ್ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲಾ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಉತ್ತರಿಸಿದ್ದಾರೆ ಇನ್ನೂ ಇತ್ತೀಚೆಗೆ ತೆರೆಕಂಡ ‘ಖುಷಿ’ (Kushi Film) ಸಿನಿಮಾದ ಪ್ರಚಾರದ ವೇಳೆ…

Read More

ಕಲಬುರ್ಗಿ:- ಕೇಂದ್ರದಲ್ಲಿರುವುದು ಒಬ್ಬ ಅಸಮರ್ಥ ಹೋಮ್ ಮಿನಿಸ್ಟರ್ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಸಂಸತ್ ಮೇಲಿನ ದಾಳಿ ಪ್ರಕರಣದ ಕುರಿತು ಇಂದಿಗೂ ಸದನದಲ್ಲಿ ಒಂದು ಹೇಳಿಕೆ ನೀಡಲಾಗದ ಅಮಿತ್ ಶಾ ಈ ದೇಶ ಕಂಡ ಅಸಮರ್ಥ ಎಂದರು. , ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸಂಸತ್ ಮೇಲಿನ ದಾಳಿ ಯತ್ನ ಒಂದು ಗಂಭೀರ ವಿಷಯ ಎಂದು ವ್ಯಾಖ್ಯಾನಿಸಿದ್ದಾರೆ. ಇಷ್ಟಾದರೂ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಈ ಕುರಿತು ಅಧಿಕೃತವಾದ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಸಂಸತ್ ಸದಸ್ಯರ ಅಮಾನತು ಕುರಿತಂತೆ ಪ್ರತಿಕ್ರಿಯಿಸಿದ ಅವರು, ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಎಂದೂ ಚುನಾಯಿತ ಸದಸ್ಯರ ಅಮಾನತು ಆಗಿರಲಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಪಾರ್ಲಿಮೆಂಟ್‍ನಲ್ಲಿ ಹೇಳಿಕೆ ನೀಡಬೇಕೆ ಹೊರತು, ಪ್ರತಿಪಕ್ಷಗಳ ಸದಸ್ಯರನ್ನು ಹೀಗೆ ಅಮಾನತುಗೊಳಿಸಲು ಮುಂದಾಗಬಾರದು. ಇದವರ ಅಸಮರ್ಥ ಕಾರ್ಯಶೈಲಿಯನ್ನು ಎತ್ತಿ ತೋರಿಸುತ್ತಿದೆ ಎಂದರು.

Read More

ಪ್ರಭಾಸ್-ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ಸಿನಿಮಾ ‘ಸಲಾರ್’ (Salaar) ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಸಲಾರ್ ಸಿನಿಮಾ ಪ್ರಚಾರ ಕೂಡ ಭರದಿಂದ ಸಾಗುತ್ತಿದೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್, ಯಶ್ (Yash) ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಯಶ್‌ ಜೊತೆ ‘ಕೆಜಿಎಫ್ 3’ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಪ್ರಶಾಂತ್ ನೀಲ್ ಅನುಮಾನ ವ್ಯಕ್ತಪಡಿಸಿದ್ದರು. ಆಗಲೇ ಯಶ್ ಜೊತೆ ಪ್ರಶಾಂತ್ ಬಾಂಧವ್ಯ ಸರಿಯಿಲ್ಲ ಎಂದು ಅಂತೆ ಕಂತೆ ಸುದ್ದಿಗಳು ಸೃಷ್ಟಿಯಾಗಿತ್ತು. ಇದೀಗ ಯಶ್ ಜೊತೆಗಿನ ಒಡನಾಟದ ಬಗ್ಗೆ ಪ್ರಶಾಂತ್ ನೀಲ್ ಮಾತನಾಡುವ ಮೂಲಕ ಗಾಸಿಪ್‌ಗೆ ತೆರೆ ಎಳೆದಿದ್ದಾರೆ. ಯಶ್ ಕುರಿತು ‘ಸಲಾರ್’ (Salaar) ಡೈರೆಕ್ಟರ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇಲ್ಲದಿದ್ದರೆ ತೆರೆಮೇಲೆ ಒಳ್ಳೆಯ ಸಿನಿಮಾ ನೋಡಲು ಸಾಧ್ಯವಿಲ್ಲ. ಇಬ್ಬರ ಕೆಮಿಸ್ಟ್ರಿ ತೆರೆಮೇಲೆ ಮಿಸ್ ಆಗುತ್ತದೆ. ನನ್ನ ಹಾಗೂ ಯಶ್ ಸ್ನೇಹ ಜೀವನ ಪೂರ್ತಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಯಶ್ (Yash) ಜೊತೆ ಎರಡು ಸಿನಿಮಾ ಮಾಡಿದ್ದೀರಿ. ನಟ…

Read More

2023ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಹಲವು ಮಹತ್ವದ ಸರಣಿಗಳು ನಡೆದಿದ್ದು. ಜೂನ್‌ನಲ್ಲಿ ನಡೆದಿದ್ದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಕಾಂಗರೂ ಪಡೆಯ ಬೌಲರ್‌ಗಳು ತಮ್ಮ ಬೌಲಿಂಗ್ ಸಾಮರ್ಥ್ಯದಿಂದಲೇ ತಮ್ಮ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತಂದುಕೊಟ್ಟಿದ್ದರು. ಬಾರ್ಡರ್- ಗವಾಸ್ಕರ್ ಹಾಗೂ ಆಷಸ್ ಟೆಸ್ಟ್ ಸರಣಿಯಲ್ಲೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಈ ತಂಡದ ಹಿರಿಯ ಸ್ಪಿನ್ನರ್‌ ನೇಥನ್ ಲಯಾನ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. 1. ನೇಥನ್ ಲಯಾನ್ (ಆಸ್ಟ್ರೇಲಿಯಾ) ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 500 ವಿಕೆಟ್ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯಾನ್ ಹೆಚ್ಚು ತಿರುವು, ಬೌನ್ಸ್ ಹಾಗೂ ಸಮತಟ್ಟಾದ ಪಿಚ್‌ಗಳಲ್ಲೂ ಬ್ಯಾಟರ್‌ಗಳನ್ನು ಕಂಗಾಲಾಗಿಸುವ ಕಲೆ ಹೊಂದಿದ್ದಾರೆ. 2. ರವಿಚಂದ್ರನ್ ಅಶ್ವಿನ್ (ಭಾರತ) ಎದುರಾಳಿ ಬ್ಯಾಟರ್‌ಗಳ ಮನಸ್ಥಿತಿ ಹಾಗೂ ಪಿಚ್‌ಗಳ ಗುಣವನ್ನು ಅರಿತು ಬೌಲಿಂಗ್ ಮಾಡುವ ಟೆಸ್ಟ್ ಸ್ವರೂಪದ ನಂಬರ್ 1 ಬೌಲರ್ ರವಿಚಂದ್ರನ್ ಅಶ್ವಿನ್ 3. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)…

Read More

ಬೆಂಗಳೂರು:- ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಎಚ್ಚರವಾಗಿರುವುದು ಒಳಿತು. ಏಕೆಂದರೆ ರಾಜಧಾನಿ ಬೆಂಗಳೂರಿನಲ್ಲಿ ₹25 ಕೋಟಿ ವಂಚನೆ ಬಯಲಾಗಿದೆ. ಕಂಪನಿಯೊಂದರ ಮೂಲಕ ಹೂಡಿಕೆ ಹಗರಣ ನಡೆಸಿ 700ಕ್ಕೂ ಹೆಚ್ಚು ಜನರಿಗೆ ₹25 ಕೋಟಿ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಸಿಸಿಬಿ ಇಬ್ಬರನ್ನು ಬಂಧಿಸಿದೆ. ಪ್ರಮ್ಯಾ ಇಂಟರ್‌ನ್ಯಾಶನಲ್‌ನ ಮಾಲೀಕ ಪ್ರದೀಪ್ ಕುಮಾರ್ (32) ಮತ್ತು ಕಂಪನಿಯ ಏಜೆಂಟ್ ವಸಂತ್ ಕುಮಾರ್ (52) ಅವರನ್ನು ಸಂಘಟಿತ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು 700 ಜನರಿಂದ 25 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ ಎಂದು ಪೊಲೀಸ್ ತನಿಖೆಗಳು ತೋರಿಸುತ್ತಿರುವಾಗ, ಈ ಅಂಕಿ ಅಂಶವು ತುಂಬಾ ಹೆಚ್ಚಿರಬಹುದು ಮತ್ತು ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಅನುಮಾನ ಪಡಲಾಗಿದೆ. ವಂಚನೆ ಮತ್ತು ಅನಿಯಂತ್ರಿತ ಠೇವಣಿ ಯೋಜನೆಗಳ (ಬಿಯುಡಿಎಸ್) ನಿಷೇಧ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ವಂಚಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಸಂತ್ರಸ್ತರ ನಿಜವಾದ…

Read More

ತಮ್ಮ ಹಳೆಯ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ಗಳನ್ನು ಮಾರಾಟ ಮಾಡಲು ಬಯಸುತ್ತಾರೆ. ಹೊಸ ಫೋನ್ ಖರೀದಿ ಎಂದಲ್ಲಾ ಬೇರೆ ಬೇರೆ ಕಾರಣಗಳಿಗಾಗಿ ಹಲವರಿಗೆ ತಮ್ಮ ಫೋನ್‌ ಅನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಆದರೆ, ಹೀಗೆ ಫೋನ್ ಮಾರಾಟ ಮಾಡುವ ಮುನ್ನ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದರಲ್ಲಿ ನಿಮ್ಮ ಖಾಸಗಿ ಫೋಟೋಗಳು, ಮಾಹಿತಿಗಳು, ಸಂದೇಶಗಳು ಸೇರಿ ಸಾಕಷ್ಟು ಅಂಶಗಳಿರುತ್ತವೆ. ಹೀಗಾಗಿ ಫೋನ್ ಮಾರಾಟ ಮಾಡುವಾಗ ಇವುಗಳ ಸೋರಿಕೆ ಸೇರಿದಂತೆ ಆರ್ಥಿಕ ಮತ್ತು ಇತರ ಕಷ್ಟಗಳು ಎದುರಾಗಲೂಬಹುದು ಹಾಗಾಗಿ ಇಲ್ಲೊಂದು ಕೆಲವು ಟಿಪ್ಸ್‌ ಅನುಸರಿಸಿ ನಂತರ ಮಾರಾಟ ಮಾಡಿ! ನೀವು ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಬ್ಯಾಂಕಿಂಗ್ ಆ್ಯಪ್‌ಗಳನ್ನು ಡಿಲೀಟ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಅಪ್ಲಿಕೇಶನ್‌ಗಳು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆಗಿರುವುದರಿಂದ ಒಟಿಪಿ ಬರುವುದಿಲ್ಲ. ಆದರೆ ಅಪ್ಲಿಕೇಶನ್‌ನಲ್ಲಿ ಉಳಿದಿರುವ ಯಾವುದೇ ಡೇಟಾ ಅಪಾಯಕಾರಿಯಾಗಬಹುದು. ಅದೇ ರೀತಿ ಫೋನ್‌ನಿಂದ ಎಲ್ಲಾ ಯುಪಿಐ ಅಪ್ಲಿಕೇಶನ್‌ಗಳನ್ನೂ ಡಿಲೀಟ್ ಮಾಡಿ. ನಿಮ್ಮ ಕಾಂಟ್ರ್ಯಾಕ್ಟ್‌ಗಳನ್ನು ಬ್ಯಾಕಪ್ ಮಾಡುವಂತೆಯೇ, ನಿಮ್ಮ ಸಂದೇಶಗಳನ್ನು…

Read More

ಪೀಣ್ಯ ದಾಸರಹಳ್ಳಿ:’ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ನಮ್ಮ ಕಾಲೇಜಿನಲ್ಲಿ ಅಂತರ ಶಾಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಹಮ್ಮಿಕೊಂಡಿದ್ದೇವೆ ಎಂದು ನಿತ್ಯ ಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಎಸ್. ಗಂಗರಾಜು ತಿಳಿಸಿದರು. ಮಲ್ಲಸಂದ್ರದ ನಿತ್ಯ ಜ್ಯೋತಿ ಶಿಕ್ಷಣ ಸಂಸ್ಥೆಯ ಕುವೆಂಪು ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಅಂತರ ಪ್ರೌಢಶಾಲೆಗಳ ಕಬ್ಬಡಿ ಪಂದ್ಯಾವಳಿ ‘ಕುವೆಂಪು ಕಬ್ಬಡಿ ಕಪ್- 2023 ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಮಾತನಾಡಿದರು. ವಿವಿಧ ಶಾಲೆಯ 14 ತಂಡಗಳು ಭಾಗವಹಿಸಿ ಬೆಳಿಗ್ಗೆಯಿಂದ ಪಂದ್ಯಾವಳಿ ನಡೆದಿದೆ. ಈ ಕಬ್ಬಡಿ ಪಂದ್ಯಾವಳಿಯಲ್ಲಿ ಮಾಕಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಹೆಸರಘಟ್ಟ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಮತ್ತು ಚಿಕ್ಕಬಾಣಾವರ ಶಾಲಾ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದಿದ್ದಾರೆ’ ಎಂದು ತಿಳಿಸಿದರು. ಕುವೆಂಪು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರ .ಟಿ ಮಾತನಾಡಿ’ ವಿದ್ಯಾರ್ಥಿಗಳಲ್ಲಿನ ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸಲು ಮತ್ತು ಅವರಿಗೆ ಗ್ರಾಮೀಣ ಕ್ರೀಡೆಯ ಬಗ್ಗೆ ಉತ್ತೇಜನಗೊಳಿಸಲು ನಮ್ಮ ಕಾಲೇಜಿನಲ್ಲಿ ಅಂತರ…

Read More