Author: AIN Author

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಭೇಟಿ ಕುರಿತು ಸ್ಪಷ್ಟನೆಯನ್ನೂ ನೀಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು (ಬುಧವಾರ) ಮಾಜಿ ಸಿಎಂ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ವೇಳೆ ಮಾತನಾಡಿದ ಅವರು, ದೆಹಲಿ ಬಿಜೆಪಿ ನಾಯಕರ ಭೇಟಿ ವಿಚಾರವನ್ನು ಅಲ್ಲಗಳೆದರು. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಂಬಂಧ ಯಾವುದೇ ಸೀಟು ಹಂಚಿಕೆ ಕುರಿತು ಚರ್ಚಗೆ ಹೋಗ್ತಿಲ್ಲ. ಬದಲಾಗಿ ವೈಯಕ್ತಿಕ ಕೆಲಸದ ನಿಮಿತ್ತ ಹೋಗುತ್ತಿದ್ದೇನೆ. ದೆಹಲಿಗೆ ಹೋಗೋದು ಏನ್ ವಿಶೇಷನಾ ಎಂದು ಕೇಳಿದರು.

Read More

ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ (Miss Karnataka) ಕಿರೀಟವನ್ನು ಕವಿತಾ ವೀರೇಂದ್ರ  (Kavita Virendra)ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿ ರೂಪದರ್ಶಿಗಳಿಗೆ ಪ್ರೋತ್ಸಾಹ ಕೊಟ್ಟರು ಈ ವೇಳೆ ಮಾತನಾಡಿದ ಮಧುಬಾಲ, ಈ ಕಾರ್ಯಕ್ರಮದಲ್ಲಿ ಭಾಗವಾಗಿರುವುದು ಖುಷಿ ಕೊಟ್ಟಿದೆ. ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ ಎಂದರು. ಸರ್ಕಾರದ ರಾಜಕೀಯ ದಿಗ್ಗಜರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕವಿತಾ ವೀರೇಂದ್ರ ವಿನ್ನರ್ ಆಗಿ ಹೊರಹೊಮ್ಮಿದ್ರೆ, ಪ್ರಿಯಾಂಕ ರಿಯಾ ಫಸ್ಟ್ ವಿನ್ನರ್ ಆಗಿ ಹಾಗೂ ಶಹಿಸ್ತಾ ನಾಜ್ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್…

Read More

ತುಮಕೂರು : ತುಮಕೂರಿನಲ್ಲಿ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಮಧುಗಿರಿ ಮೂಲದ ವ್ಯಕ್ತಿಗೆ ಪಾಸಿಟಿವ್ ಪತ್ತೆಯಾಗಿದೆ.ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೃದಯರೋಗ ಸಂಬಂಧ ಜಯದೇವ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿ ಈ ವೇಳೆ ಕೋವಿಡ್ ಪರೀಕ್ಷೆ ನಡೆಸಿದಾಗ ಪ್ರಕರಣ ಪತ್ತೆ ಜಯದೇವ ಆಸ್ಪತ್ರೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ. ಸೋಂಕಿತ ಕುಟುಂಬಸ್ಥರಿಗೆ ಕೋವಿಡ್ ಪರೀಕ್ಷೆ ನಡೆಸಿರುವ ಜಿಲ್ಲಾ ಆರೋಗ್ಯ ಇಲಾಖೆ ಸೋಂಕಿತ ಸಂಪರ್ಕಕ್ಕೆ ಬಂದವರ ಮೇಲೆ ನಿಗಾವಹಿಸಿರುವ ಆರೋಗ್ಯ ಇಲಾಖೆ ಡಿಎಚ್ಒ ಮಂಜುನಾಥ್ ಮಾಹಿತಿ.‌

Read More

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ನಟಿ ರಚಿತಾ ಇದೀಗ ಸ್ವಿಜರ್‌ಲ್ಯಾಂಡ್‌ಗೆ ಹಾರಿದ್ದಾರೆ. ಸ್ವಿಸ್ ಟ್ರಡಿಷನಲ್ ಡ್ರೆಸ್‌ನಲ್ಲಿ ರಚಿತಾ ರಾಮ್ ಮಿಂಚಿದ್ದಾರೆ.‌ ಸಂಜು ವೆಡ್ಸ್ ಗೀತಾ’ ಪಾರ್ಟ್ 2 (Sanju Weds Geetha 2) ಸಿನಿಮಾದ ಚಿತ್ರೀಕರಣಕ್ಕಾಗಿ ಸ್ವಿಜರ್‌ಲ್ಯಾಂಡ್‌ಗೆ ರಚಿತಾ & ಟೀಮ್ ಹೋಗಿದ್ದಾರೆ. ಸುಂದರ ತಾಣದಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ ನಾಗಶೇಖರ್ ನಿರ್ದೇಶನದ ಸಿನಿಮಾದಲ್ಲಿ ‘ಸಂಜು ವೆಡ್ಸ್ ಗೀತಾ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಮ್ಯಾ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಸಕ್ಸಸ್ ಕಂಡಿತ್ತು. ಈಗ ಪಾರ್ಟ್ 2ನಲ್ಲಿ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ.

Read More

ಧಾರವಾಡ: ಬಿಲ್ ಪಾಸ್ ಮಾಡಲು ಹಣಕ್ಕೆ ಬೇಡಿಕೆ ಇಟ್ಡಿರುವ ಇಬ್ಬರು ಅಧಿಕಾರಿಗಳನ್ನ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿ ಬಲೆಗೆ ಕೇಡುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ಏತ ನೀರಾವರಿ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಹಾಗೂ ಕಿರಿಯ ಎಂಜಿನಿಯರ್ ಪ್ರಕಾಶ್ ಹೊಸಮನಿ ಲೋಕಾ ಬಲೆಗೆ ಬಿದ್ದಿರುವ ಅಧಿಕಾರಿಗಳಾಗಿದ್ದಾರೆ. ಉತ್ತರ ಕನ್ನಡದ ಬಾಲಕೃಷ್ಣ ನಾಯ್ಕ ಎನ್ನುವ ಕಂಟ್ರಾಕ್ಟರ್ ಕಡೆಯಿಂದ ಬಿಲ್ ಪಾಸ್ ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು . ಗುತ್ತಿಗೆದಾರ ಹಾವೇರಿಯ ಮೂರು ಕಡೆಗಳಲ್ಲಿ ರಸ್ತೆ ಕಾಮಗಾರಿ ಮಾಡಿದ್ದ ಬಾಲಕೃಷ್ಣ ಅವರ ಕಾಮಗಾರಿ ಬಿಲ್ ಪಾಸ್ ಮಾಡಲು ಧಾರವಾಡದ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು ಪೋನ್ ಪೇ ಮೂಲಕ 83 ಸಾವಿರ ಪಡೆದು ನಂತರ, ತಲಾ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸದ್ಯ ಇಂದು ಒಂದು ಲಕ್ಷ ಹಣ ಪಡೆಯುವ ವೇಳೆ ರೆಡ್ ಹ‌್ಯಾಂಡಾಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಹಾವೇರಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಲೋಕಾ ದಾಳಿ ಮಾಡಿ ಅಧಿಕಾರಿಗಳಿಬ್ಬರನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ…

Read More

ಬೆಂಗಳೂರು: ಉಚಿತ ಯೋಜನೆಗಳಿಗೆ ಹಣ ಕೊಡಲು ಆಗುತ್ತಿಲ್ಲ. ಈ ಸರ್ಕಾರ 100ಕ್ಕೆ ನೂರರಷ್ಟು ದಿವಾಳಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದರು. ವಿಧಾನಸೌಧದಲ್ಲಿ (Vidhanasoudha) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ನಾವು ಪರಿಹಾರ ಕೊಟ್ಟಿದ್ದೆವು, ಅಷ್ಟೇ ಪರಿಹಾರ ಇವರು ಕೊಡಬೇಕಿತ್ತು. ಯಾವ ಗ್ಯಾರಂಟಿ ಸರಿಯಾಗಿ ಈಡೇರಿಸಿಲ್ಲ. ಈ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಗರಂ ಆದರು.‌ ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಬರ ಪರಿಹಾರ ಎರಡು ಸಾವಿರ ಕೊಡ್ತೀವಿ ಅಂತಾರೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಗಾದೆ ಮಾತಿನಂತೆ ಆಗಿದೆ. ರೈತರಿಗೆ ಬರ ಪರಿಹಾರ ಕೊಡುವಲ್ಲೂ ವಿಫಲವಾಗಿದೆ. ಪಿಎಂ ಮೋದಿ (Narendra Modi) ಭೇಟಿಗೆ ಅವಕಾಶ ಕೊಟ್ಟಿದ್ದಾರೆ, ಅಮಿತ್ ಶಾ (Amitshah) ಭೇಟಿ ಸಹ ಆಗಿದೆ. ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿ. ನಮ್ಮಲ್ಲಿ ಹಸಿರು ಬರ ಇದೆ, ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಒಂದೇ ಸಲ ಬಿಡುಗಡೆ…

Read More

ಬೆಂಗಳೂರು: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ವಿಶೇಷ ಅಂದ್ರೆ ಅದು ಈಗಾಗಲೇ ಬಂದು ಹೋಗಿದೆ. ಕಾರವಾರದ ಸದಾಶಿವಗಡದ ಯುವಕರೊಬ್ಬರಲ್ಲಿ 15 ದಿನಗಳ ಹಿಂದೆ ಈ ಸೋಂಕು ಪತ್ತೆಯಾಗಿತ್ತು. ಲಸಿಕೆ ಪಡೆದ ಎರಡ್ಮೂರು ದಿನಗಳಲ್ಲಿ ಆತ ಚೇತರಿಸಿಕೊಂಡಿದ್ದಾನೆ. ಈಗ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದಿದೆ. ರಾಜ್ಯದಲ್ಲಿ ಹೊಸದಾಗಿ 722 ಮಂದಿಗೆ ಕೋವಿಡ್ ಟೆಸ್ಟ್ (COVID Test) ನಡೆಸಲಾಗಿದ್ದು, 44 ಜನರದಲ್ಲಿ ಸೋಂಕು ಕಂಡುಬಂದಿದೆ. ಇದ್ರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 79ಕ್ಕೆ ಏರಿದೆ. 17 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ ಆರು ಮಂದಿ ಐಸಿಯುನಲ್ಲಿದ್ದಾರೆ. 62 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೇರಳಕ್ಕೆ ಹೊಂದಿಕೊಂಡಿರುವ ಮೈಸೂರು, ದಕ್ಷಿಣಕನ್ನಡ, ಕೊಡಗಿನ ಗಡಿಭಾಗಗಳ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಗಳು ಶುರುವಾಗಿವೆ.‌ ಈ ಮಧ್ಯೆ, ರಾಜ್ಯ ಸರ್ಕಾರ, ಕೇರಳದಲ್ಲಿ ಪ್ರಕರಣ ಹೆಚ್ಚಳ, ಹೊಸವರ್ಷ, ಕ್ರಿಸ್‍ಮಸ್ ಹಾಗೂ ಚಳಿಗಾಲ ಗಮನದಲ್ಲಿಟ್ಟು ಕೋವಿಡ್ ಗೈಡ್‍ಲೈನ್ಸ್ ಪ್ರಕಟಿಸಿದೆ. ನಾಲೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳ ಜೊತೆ ಸಭೆ ನಡೆಸಲಿದೆ..…

Read More

ಧಾರವಾಡ : ಸರಿಯಾದ ಸಮಯಕ್ಕೆ ಬಸ್ ಬಿಡ್ತಿಲ್ಲ.. ಸರಿಯಾಗಿ ಶಾಲೆಗೆ ಹೋಗಲು ಆಗ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಧಾರವಾಡ ರಾಮನಗರ ಬಡಾವಣೆಯಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಬಸ್ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು. ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಎಷ್ಟೇ ಬೇಡಿಕೊಂಡರು ಸರಿಯಾದ ಸಮಯಕ್ಕೆ ಬಸ್ ಬರ್ತಿಲ್ಲ ನಿತ್ಯ ಶಾಲೆಗೆ ಹೋಗಲು ಆಗ್ತಿಲ್ಲ ಹಿಂಗಾದ್ರೆ ಹೆಂಗೆ ನಾವು ಕಲಿಯುವುದು ಎಂದು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷಾ ಸಂದರ್ಭದಲ್ಲಿ ಈ ರೀತಿ ಬಸ್ ಬಿಡ್ದೇ ಚೆಲ್ಲಾಟ ಆಡುತ್ತಾ ಇರೋ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಕೇಳೋರು ಯಾರು ಅಧಿಕಾರಿಗಳೇ ವಿದ್ಯಾರ್ಥಿಗಳ ಗೋಳು… ಕೇಳಿ ಎಂದು ಆಗ್ರಹಿಸಿದರು. ಈ ಗಂಭೀರವಾಗಿ ಪರಿಗಣಿಸಿ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸ್ಥಳಿಯರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದರು.

Read More

ಬೆಂಗಳೂರು:  ಪಾಪಿ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಒಂದು ವರ್ಷ ಮೂರು ತಿಂಗಳ ಮಗುವನ್ನೇ ನದಿಗೆ ಎಸೆದು ಕೊಲೆ ಮಾಡಿದ್ದಾಳೆ. ಈ ಘಟನೆ ನಡೆದಿರುವುದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಾಣಗಳ್ಳಿ ಗ್ರಾಮದ ಬಳಿ. ಭಾಗ್ಯಮ್ಮ (21) ಎಂಬಾಕೆ ಚನ್ನಪಟ್ಟಣ ಹಾದು ಹೋಗುವ ಕಣ್ವ ನದಿಗೆ ತನ್ನ ಮಗುವನ್ನು ಎಸೆದಿದ್ದಾಳೆ. ಭಾಗ್ಯಮ್ಮ ಎಂಬಾಕೆ ಎರಡು ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ, ಸಂಸಾರ ನೆಟ್ಟಗೆ ಮಾಡದ ಆಕೆ ಗಂಡನನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದಳು. ಆದರೆ, ಅಷ್ಟು ಹೊತ್ತಿಗೆ ಒಂದು ಮಗು ಹುಟ್ಟಿತ್ತು. ದೇವರಾಜ್‌ ಈಗ ಒಂದು ವರ್ಷ ಮೂರು ತಿಂಗಳ ಮಗು. ಇತ್ತ ತವರಿಗೆ ಬಂದ ಭಾಗ್ಯಮ್ಮನಿಗೆ ಅಲ್ಲೇ ಒಂದು ಅಕ್ರಮ ಸಂಬಂಧ ಕುದುರುತ್ತದೆ. ಆಕೆ ಸುಖದಲ್ಲಿ ತೇಲಾಡುತ್ತಾ ಇರುತ್ತಾಳೆ. ಈ ನಡುವೆ ಭಾಗ್ಯಮ್ಮನ ತಾಯಿ ಆಕೆಯ ಈ ನಡತೆಯನ್ನು ಆಕ್ಷೇಪಿಸುತ್ತಾಳೆ. ಮನೆಯಲ್ಲಿ ದಿನವೂ ಜಗಳ ನಡೆಯುತ್ತಿರುತ್ತದೆ. ನೀನು ಮಗುವನ್ನು ಬಿಟ್ಟು ಸುತ್ತಾಡಲು ಹೋಗುತ್ತೀಯಾ, ನಾನು…

Read More

ನವದೆಹಲಿ: ಅಮಾನತಾಗಿರುವ ಲೋಕಸಭೆಯ (Loksabha) 95 ಹಾಗೂ ರಾಜ್ಯಸಭೆಯ (Rajyasabha) 46 ಒಟ್ಟು 141 ಮಂದಿ ಸಂಸದರು ಸಂಸತ್ತಿನ ಚೇಂಬರ್, ಲಾಬಿ ಹಾಗೂ ಗ್ಯಾಲರಿಗೆ ಪ್ರವೇಶಿಸುವಂತಿಲ್ಲ ಎಂದು ಲೋಕಸಭಾ ಕಚೇರಿಯಿಂದ (Loksabha Office) ಸುತ್ತೋಲೆ ಹೊರಡಿಸಲಾಗಿದೆ. ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ (Security breach in Lok Sabha) ಕುರಿತ ಚರ್ಚೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿನ ವಿವಿಧ ಪಕ್ಷಗಳ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಈ ಬೆನ್ನಲ್ಲೇ ಲೋಕಸಭೆಯ ಸಚಿವಾಲಯ ಈ ಸುತ್ತೋಲೆ ಹೊರಡಿಸಿದೆ ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ (Security breach in Lok Sabha) ಕುರಿತ ಚರ್ಚೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿನ ವಿವಿಧ ಪಕ್ಷಗಳ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಈ ಬೆನ್ನಲ್ಲೇ ಲೋಕಸಭೆಯ ಸಚಿವಾಲಯ ಈ ಸುತ್ತೋಲೆ ಹೊರಡಿಸಿದೆ.

Read More