Author: AIN Author

ನವದೆಹಲಿ, ಡಿ. 20: ಉಪಮುಖ್ಯಮಂತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ, ಮೆಟ್ರೋ ಸಂಪರ್ಕ ವಿಸ್ತರಣೆ, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಅನುಮತಿ ಹಾಗೂ ಹಣಕಾಸಿನ ನೆರವು ಕೋರಿದರು. ಸಂಸತ್ ಭವನದಲ್ಲಿ ಬುಧವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಶಿವಕುಮಾರ್ ಅವರು ರಾಜ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರದ ಸಹಕಾರ ಕೋರಿದರು. ಕೇಂದ್ರ ಸಚಿವರಿಗೆ ಉಪಮುಖ್ಯಮಂತ್ರಿಗಳು ನೀಡಿದ ಮನವಿ ಪತ್ರದ ಸಾರಾಂಶ ಹೀಗಿದೆ: ಬೆಂಗಳೂರಿನ ಮೂರು ಯೋಜನೆಗಳಿಗೆ ನೆರವು: ಟನಲ್ ರಸ್ತೆ ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಲು 60 ಕಿ.ಮೀ ಉದ್ದದ ನಗರ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಗರದೊಳಗೆ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮ ಕಾರಿಡಾರ್ ಮೂಲಕ ನಗರದೊಳಗಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಈ ಯೋಜನೆಯಲ್ಲಿ ಪ್ರತಿ ಕಿ.ಮೀ ಸುರಂಗ ರಸ್ತೆಗೆ…

Read More

ಬೆಂಗಳೂರು:- ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ , ಗಾರ್ಡನ್‌ ಸಿಟಿ ಎಂದೆಲ್ಲಾ ಕರೆಯಿಸಿಕೊಳ್ಳುವ ಬೆಂಗಳೂರಿನ ಇತಿಹಾಸ, ಈ ಊರಿನ ವಿಶೇಷತೆ ಬಗ್ಗೆ ಎಷ್ಟೋ ಜನರಿಗೆ ಗೊತ್ತೆ ಇಲ್ಲಾ. ಹೀಗಾಗಿ ಬೆಂಗಳೂರಿಗೆ ಈ ಹೆಸರು ಯಾಕೆ ಬಂತು, ಈ ಹೆಸರಿನ ಹಿಂದಿನ ಇತಿಹಾಸವೇನು..? ಬೆಂಗಳೂರಿನ ವಿಶೇಷತೆ ಏನು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಬೆಂದ ಕಾಳು ಊರು, ಬೆಂದಕಾಡೂರು, ಬೆಂಗಾಡೂರು, ಬೆಂಗಾಳೂರು, ಬೆಂಗಳೂರು ಹೀಗೆ ವಿವಿಧ ಹಂತದಲ್ಲಿ ಈ ಊರಿನ ಹೆಸರು ಬದಲಾಗಿದೆ ಎಂದು ಇತಿಹಾಸ ತಜ್ಣರು ಹೇಳುತ್ತಾರೆ. 12ನೇ ಶತಮಾನದಲ್ಲಿ ರಾಜ ವೀರ ಬಲ್ಲಾಳ ಎಂಬ ರಾಜ ಈ ಪ್ರದೇಶಕ್ಕೆ ಬೇಟೆಯಾಡಲು ಬರುತ್ತಾನೆ. ಈ ದಟ್ಟ ಅರಣ್ಯದಲ್ಲಿ ಕಳೆದು ಹೋದ ಆತ ಹಸಿವು ಬಾಯಾರಿಕೆಯಿಂದ ಬಳಲುತ್ತಿದ್ದಾಗ ಆತನ ಕಣ್ಣಿಗೆ ಒಬ್ಬ ವೃದ್ಧೆಯ ಗುಡಿಸಲು ಕಾಣಿಸುತ್ತದೆ. ಅಲ್ಲಿ ವೃದ್ಧೆ ಆತನಿಗೆ ತನ್ನ ಬಳಿಯಿದ್ದ ಬೇಯಿಸಿದ ಕಾಳುಗಳನ್ನು ಆತನಿಗೆ ನೀಡುತ್ತಾನೆ. ಆದ್ದರಿಂದ ಈ ಸ್ಥಳಕ್ಕೆ ಬೆಂದ ಕಾಳು ಊರು ಎಂದು ಹೆಸರನ್ನು ನೀಡಲಾಯಿತು…

Read More

ದೆಹಲಿ: ಬರ ಪರಿಹಾರ ಅಮಿತ್ ಶಾ ಭೇಟಿಯಾಗಿ  ಚರ್ಚೆ ನಡೆಸಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಬರ ಪರಿಹಾರ ಮನವಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಮಾತುಕತೆ ನಡೆಸಿ, ಸೂಕ್ತ ಕ್ರಮಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಸಂಸತ್ ಭವನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಪ್ರಧಾನಿಯನ್ನು ಸಿದ್ದರಾಮಯ್ಯ ಭೇಟಿ ಮಾಡಿ, ರಾಜ್ಯದ ಬರ ಪರಿಸ್ಥಿತಿ ಮತ್ತು ಪರಿಹಾರ ಕೋರಿ ಸಲ್ಲಿಸಲಾಗಿರುವ ಮನವಿ ಬಗ್ಗೆ ಗಮನಸೆಳೆದಾಗ ಪಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ. ಬುಧವಾರ ಬೆಳಗ್ಗೆ ಅಮಿತ್ ಷಾ ಭೇಟಿಗೂ ಸಮಯ ಸಿಕ್ಕಿದ್ದು, ಬರ ಪರಿಹಾರದ ಬಗ್ಗೆ ಶೀಘ್ರ ಕ್ರಮ ಕೈಗೊಂಡು, ಹಣ ಬಿಡುಗಡೆಗೆ ಸಿಎಂ ಒತ್ತಾಯಿಸಲಿದ್ದಾರೆ. ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡ ಸಿದ್ದರಾಮಯ್ಯ, ಅಮಿತ್ ಷಾ ನೇತೃತ್ವದ ಹೈ ಪವರ್ ಸಮಿತಿ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರ ಬರ ಪರಿಹಾರ ಒದಗಿಸಲು ಪ್ರಧಾನಿ ಅವರಿಗೆ ಒತ್ತಾಯಿಸಿದ್ದೇವೆ. ರಾಜ್ಯಕ್ಕೆ ಬರ ಪರಿಹಾರ ಸಿಗಬೇಕು…

Read More

ಬೆಂಗಳೂರು : ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಿರಾಳರಾಗಿದ್ದಾರೆ. ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಮೇಲೆ ದಾಖಲಾಗಿದ್ದ 40 ಲಕ್ಷ ರೂ. ಲಂಚ ಸ್ವೀಕಾರದ ಲೋಕಾಯುಕ್ತ ಪ್ರಕರಣವನ್ನು ಹೈಕೋರ್ಟ್‌ ಏಕ ಸದಸ್ಯ ಪೀಠವು ರದ್ದುಗೊಳಿಸಿ ಇಂದು ಆದೇಶ ನೀಡಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿ ಪಡೆಯದೇ ಪ್ರಕ್ರಿಯೆ ಮುಂದುವರಿಸಿದ್ದಾರೆ ಎಂದು ಆರೋಪಿ ಪರ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಎಂಟು ಕೋಟಿ ರೂ. ನಗದು ಪತ್ತೆಯಾಗಿತ್ತು. ಬಳಿಕ, ಕೆಎಸ್​ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳ್ ಅವರನ್ನೂ ಲಂ ಪಡೆದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಹಣಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಹೇಳಿಕೊಂಡಿದ್ದರು. ಈಗ ನ್ಯಾಯಾಲಯ 40 ಲಕ್ಷ ರೂ. ನಗದು ಹಣದ ಸಮೇತವಾಗಿ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಸಿಕ್ಕಿಬಿದ್ದ ಪ್ರಕರಣದಲ್ಲಿ ಮಾಜಿ ಶಾಸಕರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

Read More

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆ ಸೂಕ್ತ ರೀತಿಯಲ್ಲಿ ಬಳಕೆಯಾಗಿತ್ತಿಲ್ಲ ಎಂದು ಇದೇ ಡಿ.27ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರವೇ ರಾಜ್ಯ ಪ್ರಧಾನ ಸಂಚಾಲಕ ಬಿ.ಕೆ. ನಾರಾಯಣಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಇದೇ ತಿಂಗಳು 27 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ ಕನ್ನಡ ಸೂಕ್ತ ರೀತಿಯಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಕರವೇ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆ ಮೂಲಕ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಶೇ 70 ಕನ್ನಡ ಬಳಕೆ ಮಾಡಲು ಎಚ್ಚರಿಕೆ ನೀಡಲು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. 27 ರಂದು ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಗೇಟ್ ನಿಂದ ಸಾವಿರಾರು ಕರವೇ ಕಾರ್ಯಕರ್ತರು ಸೇರಿ ಕಾಲ್ನಡಿಗೆ ಮೂಲಕ ಬೆಂಗಳೂರು ಕಬ್ಬನ್ ಪಾರ್ಕ್ ವರೆಗೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಇತ್ತೀಚೆಗೆ ರಾಜ್ಯದಲ್ಲಿ ಕನ್ನಡ ಭಾಷೆ ಮೇಲೆ ನಿರ್ಲಕ್ಷ್ಯ ತೋರಲಾಗುತ್ತಿದೆ ಇದನ್ನ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Read More

ಬೆಂಗಳೂರಿಗರೇ ಪಾಲಿಕೆಯ ಮತ್ತಷ್ಟು ಕೋವಿಡ್ ನಿರ್ಬಂಧಗಳನ್ನ ಎದುರಿಸಲು ಸಿದ್ಧರಾಗಿ. ಯಾಕಂದ್ರೆ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳವಾಗುವ ಭೀತಿ ಹಿನ್ನೆಲೆ ಕೋವಿಡ್ ಕಟ್ಟಿಹಾಕಲು ಬಿಬಿಎಂಪಿ ಮತ್ತೊಂದು ಪ್ಲಾನ್ ರೂಪಿಸಿದೆ. ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸಿದ್ಧತೆ ಕೂಡ ನಡೆಸಿದೆ. ಬೆಂಗಳೂರಿಗಾಗಿಯೇ ಸಿದ್ಧವಾಗ್ತಿರೊ ಪ್ರತ್ಯೇಕ ಗೈಡ್ಲೈನ್ಸ್ನಲ್ಲಿ ಏನೆಲ್ಲಾ ನಿರ್ಬಂಧಗಳ ಹೇರಿಕೆಯಾಗಲಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ… ಕೊರೊನಾ ದೇಶ ಬಿಟ್ಟು ತೊಲಗುವ ಯಾವ ಲಕ್ಷಣ ಕಾಣ್ತಿಲ್ಲ.ಅಲೆಗಳ ಮೇಲೆ ಅಲೆಗಾಗಿ ಬಂದು ಜನರನ್ನು ಹಿಂಡಿ ಹಿಪ್ಪೆ ಮಾಡ್ತಿದೆ.ಈಗಾಗಲೇ ಮೊದಲೆರಡು ಅಲೆಯಿಂದ ಬೆಂದುಹೋಗಿರೋ ಜನಕ್ಕೆ ಇದೀಗ ಹೊಸ ರೂಪಾಂತದಲ್ಲಿ ಬಂದಿರೋ ಕೊರೊನಾ ಕ್ರಿಮಿ ಮತ್ಗೆ ಆತಂಕ ಹುಟ್ಟಿಸಿದೆ.ಈಗಾಗಲೇ ಕೇರಳದಲ್ಲಿ ಸಾವಿನ ಕೇಕ್ ಹಾಕ್ತಿರೋ ಕೊರೊನಾ ಮಾಹಾಮರಿ ರಾಜ್ಯಕ್ಕೂ ಕಾಲಿಟ್ಟು ಬೆಂಗಳೂರು ನಗರದಲ್ಲಿ ಒಬ್ಬರನ್ನು ಬಲಿ ಕೂಡ ಪಡಿದದೆ‌.ಈ ಕ್ರೂರಿಯ ಅಟ್ಟಹಾಸಕ್ಕೆ ಎದುರಿ ಹೋಗಿರೋ ಬಿಬಿಎಂಪಿ ಆರಂಭದಲ್ಲಿ ಕೊರೊನಾ ಕಟ್ಟಿಹಾಕೋಕ್ಕೆ ಮುಂದಾಗಿದೆ. ಹೌದು..ಬೆಂಗಳೂರು ನಗರದಲ್ಲಿ ಮಹಾಮಾರಿ ಕೊರೊನೊ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಮುನ್ಸೂಚನೆ ಸಿಕ್ಕಿದೆ. ಇದು ಬಿಬಿಎಂಪಿಗೆ ಆತಂಕ ಹುಟ್ಟಿಸಿದೆ.…

Read More

ವಿಜಯಪುರ: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ   ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗುವದು ಎಂದು  ವಿಜಯಪುರ  ಡಿಸಿ ಟಿ.ಭೂಬಾಲನ ಹೇಳಿಕೆ ನೀಡಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಸುದ್ದಿಗೋಷ್ಠಿ ನಡೆಸಿ,   ಕೋವಿಡ್ -19 ನ ರೂಪಾಂತರಿ ಜೆ ಎನ್ 1 ವೈರಸ್ ಆತಂಕ ಶುರುವಾಗಿದೆ. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಆತಂಕ ಇಲ್ಲ ಪಕ್ಕದ ರಾಜ್ಯ ಕೇರಳ ಹಾಗೂ ತಮಿಳುನಾಡಿನಲ್ಲಿ ಸ್ವಲ್ಪ ಆತಂಕ ಇರುವ ಕಾರಣ. ಈಗಾಗಲೇ ನಮಗೆ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಬಂದಿದೆ. ಜೆ ಎನ್ 1 ಇದು ಓಮಿಕ್ರಾನ್ ನ ಸಬ್ ವೇರಿಯಂಟ್ ಆಗಿದೆ ಕೋವಿಡ್ ನ‌ ಲಕ್ಷಣಗಳೇ ಇದರಲ್ಲೂ ಇದೆ.ಕರ್ನಾಟಕದಲ್ಲಿ 70 ಕೋವಿಡ್ ಕೇಸ್ ಇದೆ  ಕೇರಳದಲ್ಲಿ ಸುಮಾರು 2 ಸಾವಿರ ಕೇಸುಗಳಿವೆ ನಾವು ಗಾಬರಿ ಪಡುವ ಅವಶ್ಯಕತೆ ಇಲ್ಲ. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ವಿವಿಧ ರೋಗದಿಂದ ಬಳಲುತ್ತಿರುವವರು ಮಾಸ್ಕ ಧರಿಸಲೇ ಬೇಕು. ಗಾಬರಿ ಪಡುವ ಅವಶ್ಯಕತೆ ಇಲ್ಲ, ಆದರೂ ಮುಂಜಾಗೃತೆ ವಹಿಸಬೇಕಿದೆ…

Read More

ಬೆಂಗಳೂರು: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ವಿಶೇಷ ಅಂದ್ರೆ ಅದು ಈಗಾಗಲೇ ಬಂದು ಹೋಗಿದೆ. ಕಾರವಾರದ ಸದಾಶಿವಗಡದ ಯುವಕರೊಬ್ಬರಲ್ಲಿ 15 ದಿನಗಳ ಹಿಂದೆ ಈ ಸೋಂಕು ಪತ್ತೆಯಾಗಿತ್ತು. ಲಸಿಕೆ ಪಡೆದ ಎರಡ್ಮೂರು ದಿನಗಳಲ್ಲಿ ಆತ ಚೇತರಿಸಿಕೊಂಡಿದ್ದಾನೆ. ಈಗ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋವಿಡ್ ಮೀಟಿಂಗ್ ಏರ್ಪಾಡಿಸಿದ್ದು ನಾಳೆ ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ  ಸಿದ್ದರಾಮಯ್ಯನವರು ಸಭೆ ನಡೆಸಿ ಮುಂದಿನ ಹಂತದ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.

Read More

ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ವಾರ್ ನಿಲ್ಲಿಸುತ್ತೇವೆ ಅಂತ ವಿಶ್ವಗುರು ಹೇಳಿಕೊಳ್ತಾರೆ. ಅದೇ ವಿಶ್ವಗುರು ವಿಶ್ವದ ಮುಂದೆ ಭಾರತದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕುಟುಕಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೋಡ್ ನಿಂದ ಹಿಡಿದು ರಫೆಲ್ ತನಕ ಪ್ರತಾಪ್ ಸಿಂಹ ಮಾತನಾಡೋದು ಅಷ್ಟೇ ಅಲ್ಲ. ಪ್ರತಾಪ್ ಸಿಂಹ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅವರ ತನಿಖೆ ಆಗಲೇ ಬೇಕು ಎಂದು ಆಗ್ರಹಿಸಿದರು. ವಿಪಕ್ಷ ನಾಯಕ ಆರ್. ಅಶೋಕ್ ಅವರು ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ಮಟ್ಟಕ್ಕೆ ಬೆಳೆದಿಲ್ಲ. ಬಿಜೆಪಿಯವರಿಗೆ ನಮ್ಮ ಲೋಪಗಳನ್ನು ಹೇಳಿಕೊಳ್ಳಲು ಆಗಲೇ ಇಲ್ಲ. ಬಿಜೆಪಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತೇ ಆಡಲಿಲ್ಲ. ಅದಕ್ಕೆ ಅವಕಾಶ ನೀಡಿದವರು ಸಭಾಧ್ಯಕ್ಷ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಎಂದು ಹೇಳಿದರು.

Read More

ಬೆಂಗಳೂರು: ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಬೇಡಿ. ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಟೀಕೆ ಬೇಡ ಅಂತಾ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ (Renukacharya) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಾಕೀತು ಮಾಡಿದ್ದಾರೆ. ಇಂದು ವಿಜಯೇಂದ್ರ ಅವರನ್ನು ರೇಣುಕಾಚಾರ್ಯ ಬಿಜೆಪಿ ಕಚೇರಿಯಲ್ಲಿ (BJP Office) ಭೇಟಿ ಮಾಡಿದ್ದರು. ಈ ವೇಳೆ ಮಾಧ್ಯಮಗಳಲ್ಲಿ ಮಾತಾಡಿ ಗೊಂದಲ ಮೂಡಿಸದಂತೆ ಬಿಜೆಪಿ ರಾಜ್ಯಾಧ್ಯಕ್ಷ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾತಾಡದೇ ರೇಣುಕಾಚಾರ್ಯ ಅವರು ಬಿಜೆಪಿ ಕಚೇರಿಯಿಂದ ಹೊರಟಿದ್ದಾರೆ. ಈ ವೇಳೆ ಏನೂ ಮಾತಾಡದಂತೆ ಸೂಚಿಸಿದ್ದಾರೆ ಎಂದು ಹೇಳಿ ಹೋಗಿದ್ದಾರೆ. ಈ ಹಿಂದೆ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹಾಗೂ ಮಾಜಿ ಸಚಿವ ವಿ.ಸೋಮಣ್ಣ (V Somanna) ಸೇರಿದಂತೆ ಕೆಲ ನಾಯಕರ ವಿರುದ್ಧ ರೇಣುಕಾಚಾರ್ಯ ಬಹಿರಂಗ ಹೇಳಿಕೆ ನೀಡುತ್ತಿದ್ದರು. ರೇಣುಕಾಚಾರ್ಯ ಹೇಳಿಕೆಗಳಿಂದ ಕೆಲ ಅಸಮಾಧಾನಿತರು ಕೆರಳಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಕರೆದು ಇಂದು ಬಿವೈ ವಿಜಯೇಂದ್ರ ತಿಳಿ ಹೇಳಿದ್ದಾರೆ ಎನ್ನಲಾಗಿದೆ.

Read More