Author: AIN Author

ಬೆಂಗಳೂರು: ನಗರದ ಹಲವೆಡೆ ಇಂದು ಪವರ್ ಕಟ್ ಇರಲಿದೆ. ‌ಬೆಂಗಳೂರಿನ ಉತ್ತರ ಭಾಗದ ಹಲವೆಡೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ಇಂದಿನಿಂದ ಗುರುವಾರದವರೆಗೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ವಹಣಾ ಕಾರ್ಯದಿಂದಾಗಿ ಮೂರು ದಿನ ಪವರ್ ಕಟ್ ಇರಲಿದೆ. ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಜಯನಗರ, ಹೊಂಡಾಡ ಸರ್ಕಲ್, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಟೊಯೋಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಮೌನೇಶ್ವರ ಬಡಾವಣೆ, ಆದರ್ಶ ನಗರ, ಆದರ್ಶ ಲೇಔಟ್, ಮಂಜುನಾಥ ನಗರ, 3ನೇ ಹಂತ 1ನೇ ಬ್ಲಾಕ್, ಜಾಲಿ ನಗರ, ಶಿವಾಜಿ ನಗರ, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಲುಮೋಸ್ ಅಪಾರ್ಟ್‌ಮೆಂಟ್, ಐಗೂರು, ಲಿಂಗದಹಳ್ಳಿ, ಎಂ.ಬಿ.ಕೇರಿ, ಚಲುವಾದಿ ಕೇರಿ ಮತ್ತು ಒಡ್ಡನಹಳ್ಳಿಯಲ್ಲಿ ಗುರುವಾರ ಪವರ್​ಕಟ್ ಇರಲಿದೆ.

Read More

ಬೆಂಗಳೂರು:- ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ರೌಡಿಶೀಟರ್ಸ್​, ಮೀಟರ್​ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ದಾಳಿ ಮಾಡಿದೆ. ಅನ್ನಪೂರ್ಣೇಶ್ವರಿ ನಗರ ರೌಡಿಶೀಟರ್ ಅನಿಲ್ ಕುಮಾರ್, ಯಶವಂತಪುರ ರೌಡಿಶೀಟರ್ ಗಿರೀಶ್ ಅಲಿಯಾಸ್​​​ ರಾಬರಿ ಗಿರಿ, ವಿವೇಕನಗರ ರೌಡಿಶೀಟರ್​ಗಳಾದ ನಾರಾಯಣ, ಹೇಮಂತ್, ರಾಮು, ಸೋಲದೇವನಹಳ್ಳಿ ರೌಡಿಶೀಟರ್ ತಿಮ್ಮ ಸೇರಿ ಅನೇಕರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ತಲಾಶ್ ಮಾಡಿದ್ದಾರೆ. ಅನಿಲ ಮನೆಯಲ್ಲಿ ತಕಾರಾರು ಆಸ್ತಿಪತ್ರ, ಹಲವು ಚೆಕ್​ಗಳು ಪತ್ತೆಯಾಗಿವೆ. ಅಧಿಕಾರಿಗಳು ಏಕಾಏಕಿ ರೌಡಿಶೀಟರ್ಸ್​, ಮೀಟರ್​ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಬೋರ್ ವೆಲ್ ಅನಿಲ ಮನೆಯಲ್ಲಿ ತಕಾರಾರು ಆಸ್ತಿಪತ್ರ, ಹಲವು ಚೆಕ್​ಗಳು ಪತ್ತೆಯಾಗಿವೆ. ಅನಿಲ್ ಮೇಲೆ ಅಮಾಯಕರಿಗೆ ಬೆದರಿಸಿ ನಿವೇಶನ ಕಬಳಿಸಿರುವ ದೂರು ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ವ್ಯವಹಾರದ ಶಂಕೆ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅನಿಲ್​​ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಅನಿಲ್​ ಮನೆಯಲ್ಲಿ ಸಿಕ್ಕ ದಾಖಲೆ…

Read More

ಗದಗ: ಮನುಷ್ಯನಲ್ಲಿರುವ ಅಜ್ಞಾನ ಎಂಬ ಕಗ್ಗತ್ತಲೆ ಹೊಡೆದೋಡಿಸಲು ಸುಜ್ಞಾನವೆಂಬ ದೀಪ ಹಚ್ಚಬೇಕು. ಅದಕ್ಕೆ ಗುರು ಉಪದೇಶ ಅತ್ಯಂತ ಅವಶ್ಯವಾಗಿ ಬೇಕೆಂದು ಹಿರಿಯ ಸಾಹಿತಿ ಐ. ಕೆ. ಕಮ್ಮಾರ ಹೇಳಿದರು. ಅವರು ದಕ್ಷಿಣ ಕಾಶಿ ಖ್ಯಾತಿಯ ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಬೆಟ್ಟದ ಮೇಲೆ ವಿರಾಜಮಾನವಾಗಿರುವ ಪಂಚಲಿಂಗೇಶ್ವರ ದೇವರ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಸಿದ್ಧಿ ಪುರುಷರಾಗಿದ್ದ ಮಣಕವಾಡದ ಲಿಂ. ಮೃತ್ಯುಂಜಯ ಶರಣರು ಈ ಪಂಚಲಿಂಗೇಶ್ವರ ದೇವರ ಬಗ್ಗೆ ಕೊಂಡಾಡಿ ಜಾಗೃತ ಸ್ಥಳವನ್ನಾಗಿ ಮಾಡಿದ್ದಾರೆ. ಅಲ್ಲದೆ ಹಿರೇಹಂದಿಗೋಳ ಗ್ರಾಮದೊಂದಿಗೆ ಬಾಂಧವ್ಯ ಹೊಂದಿದ್ದರು. ಹೀಗಾಗಿ ಲಿಂ. ಮಣಕವಾಡ ಶ್ರೀಗಳವರ ಪಾದ ಸ್ಪರ್ಶದಿಂದ ಹಿರೇಹಂದಿಗೋಳ ಪಾವನವಾಗಿದೆ ಎಂದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ವಿದ್ಯಾ ಬುದ್ಧಿ ಕೊಟ್ಟರೆ ಅವರ ಬದುಕು ಬಂಗಾರವಾಗುವುದು ಎಂದು ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರಲ್ಲಿ ಅದರಲ್ಲೂ, ವಿಶೇಷವಾಗಿ ತಾಯಂದಿರಲ್ಲಿ ಪ್ರಾರ್ಥಿಸಿಕೊಂಡರು. ನಿವೃತ್ತ ಉಪ ತಹಶೀಲ್ದಾರರಾಗಿದ್ದ ಗ್ರಾಮದ ವೇ.ಮೂ. ಶಿವಪುತ್ರಯ್ಯ ಯಲಬುರ್ಗಿಮಠ ಅವರು ದೀಪೋತ್ಸವ ಕಾರ್ಯಕ್ರಮಕ್ಕೆ ದೀಪ ಹಚ್ಚುವ ಮೂಲಕ…

Read More

ಮೈಸೂರು: ಪ್ರಧಾನಿಯಾಗಲು ಮಲ್ಲಿಕಾರ್ಜುನ ಖರ್ಗೆ ಸಮರ್ಥರು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ. ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ವಿಪಕ್ಷಗಳ ಕೆಲಸವೇ ಅರ್ಥವಾಗುತ್ತಿಲ್ಲ. ಪ್ರಶ್ನಿಸಿದವರನ್ನೇ ಅಮಾನತ್ತುಗೊಳಿಸುತ್ತಿದ್ದಾರೆ. ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳ ಬಂದಿದ್ದಾರೆ ಅಂದರೆ ಅದರ ಹಿಂದೆ ಯಾರಿದ್ದಾರೆ? ಅದನ್ನ ಕೇಳಲು ಹೋದರೆ ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ ಅಲ್ಲವೇ ಎಂದರು. ಪ್ರಧಾನಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನು ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನು ಹಿಂದಕ್ಕೆ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು ಎಂದು ಭಾರತ ಸರ್ಕಾರವನ್ನು ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ ಅಮಾನತು ಆದೇಶ…

Read More

ಬಾಲಿವುಡ್ ಬ್ಯೂಟಿ ಕ್ವೀನ್ ತೃಪ್ತಿ ಡಿಮ್ರಿ (Triptii Dimri) ಈ ಹೆಸರು ಎಷ್ಟು ಜನಕ್ಕೆ ತಿಳಿದಿತ್ತು? ಆದರೆ ‘ಅನಿಮಲ್’ (Animal) ರಿಲೀಸ್ ಆದ್ಮೇಲೆ ತೃಪ್ತಿಯದ್ದೇ ಹವಾ ಜೋರಾಗಿದೆ. ರಶ್ಮಿಕಾ (Rashmika Mandanna) ಹೀರೋಯಿನ್ ಆಗಿದ್ದರೂ ಪುಟ್ಟ ಪಾತ್ರದಲ್ಲಿ ಬೋಲ್ಡ್ ಆಗಿ ನಟಿಸಿರೋ ತೃಪ್ತಿಯೇ ಹೈಲೈಟ್ ಆಗಿದ್ದಾರೆ. ಹೀಗಾಗಿ ನಯಾ ನ್ಯಾಶನಲ್ ಕ್ರಶ್ ಪಟ್ಟ ತೃಪ್ತಿಗೆ ಹೋಗಿದೆ. ರಶ್ಮಿಕಾಗೆ ಠಕ್ಕರ್‌ ಕೊಟ್ಟು ನ್ಯಾಷನಲ್‌ ಕ್ರಶ್‌ ಪಟ್ಟ ನಟಿ ತೃಪ್ತಿ ಬಾಚಿಕೊಂಡಿದ್ದಾರೆ. ರಣಬೀರ್ ಕಪೂರ್‌ಗೆ (Ranbir Kapoor) ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಆದರೆ ತೃಪ್ತಿ ದಿಮ್ರಿ ಅನ್ನೋ ನಯಾ ಹುಡುಗಿಯದ್ದು ಒಂದು ಪಾತ್ರ ಇದೆ ಅನ್ನೋದೇ ರಿಲೀಸ್‌ಗೂ ಮುನ್ನ ರಿವೀಲ್ ಕೂಡ ಆಗಿರಲಿಲ್ಲ. ಆದರೆ ಯಾವಾಗ ‘ಅನಿಮಲ್’ ಸಿನಿಮಾ ಅದ್ಯಾವಾಗ ಎಂಟ್ರಿ ಕೊಡ್ತೋ, ಬಳಿಕ ತೃಪ್ತಿ ದಿಮ್ರಿಯನ್ನ ಫಾಲೋ ಮಾಡೋವ್ರ ಸಂಖ್ಯೆ ಹೆಚ್ಚಾಯ್ತು. ಅಸಲಿಗೆ ತೃಪ್ತಿಯೇ ಅಸಲಿ ನ್ಯಾಶನಲ್ ಕ್ರಶ್ ಎಂಬ ಆಂದೋಲನ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಹಾಡಿಲ್ಲ ಹೆಚ್ಚು ದೃಶ್ಯಗಳಿಲ್ಲ…

Read More

ಬೆಂಗಳೂರು:- ಬಿಬಿಎಂಪಿ ಮಿತಿಗಳಲ್ಲಿ ಮತ್ತು ಬೆಂಗಳೂರು ನಗರಗಳಲ್ಲಿ ದಿನಕ್ಕೆ 1,500 ಪರೀಕ್ಷೆಗಳನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ ಎಂದು ವರದಿಯಾಗಿದೆ. ಖಾಸಗಿ ಆಸ್ಪತ್ರೆಗಳು ನಾಗರಿಕ ಸಂಸ್ಥೆಯೊಂದಿಗೆ ಹಂಚಿಕೊಂಡ ಇತ್ತೀಚಿನ ಮಾಹಿತಿಯು ಡಿಸೆಂಬರ್ 1 ಮತ್ತು 19 ರ ನಡುವೆ 59 ಜನರು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಹೇಳಿದೆ. ಕಳೆದ ನಾಲ್ಕು ದಿನಗಳಲ್ಲಿ, ಹೆಚ್ಚಿನ ಜನರು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಖಾಸಗಿ ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳಲ್ಲಿ ಪರೀಕ್ಷೆಗಳು ಹೆಚ್ಚಾದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚಿರಬಹುದು. ಬಿಬಿಎಂಪಿ ಪ್ರಸ್ತುತ ದಿನಕ್ಕೆ 350 ರಿಂದ 400 ಜನರನ್ನು ಪರೀಕ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ಹೆಚ್ಚಿನ ಜನರನ್ನು ಪರೀಕ್ಷಿಸುತ್ತಿದ್ದಂತೆ, ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರೋಗಿಗೆ ಗಂಭೀರ ಪರಿಸ್ಥಿತಿಗಳು ಇಲ್ಲದಿರುವವರೆಗೆ ಭಯಪಡುವ ಅಗತ್ಯವಿಲ್ಲ. ಆಸ್ಪತ್ರೆಗಳಿಂದ ನಾವು ಸ್ವೀಕರಿಸಿದ ವರದಿಗಳ ಪ್ರಕಾರ, ರೋಗಿಗಳಲ್ಲಿ ಸೋಂಕಿನ ತೀವ್ರತೆಯು ಸೌಮ್ಯವಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ (ಸಾರ್ವಜನಿಕ ಆರೋಗ್ಯ) ಬಾಲ ಸುಂದರ್ ಹೇಳಿರುವುದಾಗಿ…

Read More

ಗಂಗಾವತಿ:- ಸಂಸತ್ತ್ ನಲ್ಲಿ ನಡೆದ ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮಾತನಾಡದಿರುವುದು ದುರಂತ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕಳೆದ ವಾರ ಲೋಕಸಭೆಯಲ್ಲಿ ನಡೆದ ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ, ಗೃಹ ಸಚಿವ ಅಮಿತಾ ಷಾ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು. ಹಿಂದಿನ ಬಿಜೆಪಿ ಸರ್ಕಾರ ನಿಗಮಗಳಿಗೆ ₹ 1 ಅನುದಾನ ನೀಡಿಲ್ಲ, ಕೇವಲ ನಿಗಮ ಮಂಡಳಿ ಸ್ಥಾಪಿಸಿದರೆ ಸಾಲದು ಅದಕ್ಕೆ ಹಣ ಮೀಸಲಿರಿಸಿದರೆ ನಿಗಮ ಮಂಡಳಿಗಳಿಗೆ ಬೆಲೆ ಬರುತ್ತದೆ ಎಂದರು. ನವಲಿ ಜಲಾಶಯ ಮತ್ತು ಸಿರವಾರ ಬಳಿ ತೋಟಗಾರಿಕೆ ಕೋಲ್ಡ್‌ ಸ್ಟೋರೇಜ್‌ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೇವಲ ಘೋಷಣೆ ಮಾಡಿದರೆ ಸಾಲದು ಅದಕ್ಕೆ ಅನುದಾನ ನೀಡುವುದರ ಮೂಲಕ ಜಾರಿಗೆ ತರಬೇಕು. ಈ ಕಾರ್ಯ ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂದರು. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಅಭಿವೃದ್ಧಿಗೆ ₹120 ಕೋಟಿ ಘೋಷಣೆ ಮಾಡಿದ್ದರು. ಈಗ ಆ ಹಣ ಎಲ್ಲಿದೆ? ಎಂದು…

Read More

ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬೋ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದೇ ಡಿ.22ಕ್ಕೆ ಸಲಾರ್‌ ಚಿತ್ರ ರಿಲೀಸ್‌ ಆಗ್ತಿದೆ.  ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ (Hombale Films) ತನ್ನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ನೀಡಿದೆ. ಕೀರ್ತಿ ಸುರೇಶ್ ನಟನೆಯ ‘ರಘು ತಾತ’ ಚಿತ್ರವನ್ನು ಘೋಷಿಸಿದ್ದ ಹೊಂಬಾಳೆ ಸಂಸ್ಥೆ ಇದೀಗ ಚಿತ್ರದ ಬಗ್ಗೆ ಹೊಸ ಮಾಹಿತಿ ತಿಳಿಸಿದೆ. ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಹೊಂಬಾಳೆ ಸಂಸ್ಥೆ ‘ರಘು ತಾತ’ ಚಿತ್ರ ಶೀಘ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಮಹಾನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರೆ, ಸುಮನ್ ಕುಮಾರ್ ರಚಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಸಾಗಿಸುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಪೋಸ್ಟರ್‌ನಲ್ಲಿ ಕೀರ್ತಿ ಸುರೇಶ್ ಅವರ ಚಿತ್ರ ಕಂಡು ಬಂದಿದೆ. ಹಿಂದಿ ಮತ್ತು ತಮಿಳಿನಲ್ಲಿ ಹಿನ್ನಲೆ ಧ್ವನಿ ಮೂಡಿಬಂದಿದೆ. ವಿಡಿಯೋ ಕೊನೆಯಲ್ಲಿ ಕಮಿಂಗ್…

Read More

ದೆಹಲಿ:- ಜನರಿಗೆ ಕಾನೂನಿನ ಭಯವಿಲ್ಲ ಎಂದು ಹೇಳುವ ಮೂಲಕ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದಾರೆ. ಮಿತಿಮೀರಿದ ವೇಗದಿಂದಾಗಿ ಬಹಳಷ್ಟು ಅಪಘಾತಗಳು ಸಂಭವಿಸುತ್ತವೆ. ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಮತ್ತು ಅನಾವಶ್ಯಕ ಪ್ರಾಣಹಾನಿಯನ್ನು ತಡೆಯಲು ಸಂಚಾರ ನಿಯಮಗಳ ಉಲ್ಲಂಘನೆಯ ಬಗ್ಗೆ ಜನರ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯತೆಗಾಗಿ ಲೇನ್ ಶಿಸ್ತು ಬಹಳ ಮುಖ್ಯ ಎಂದು ಗಡ್ಕರಿ ಹೇಳಿದರು. ಸಾರ್ವಜನಿಕ ಮನಸ್ಸಿನಲ್ಲಿ, ಕಾನೂನಿನ ಬಗ್ಗೆ ಯಾವುದೇ ಭಯ ಅಥವಾ ಗೌರವವಿಲ್ಲ. ನಮಗೆ ಮಧ್ಯಸ್ಥಗಾರರು ಮತ್ತು ಶಿಕ್ಷಣ ಸಂಸ್ಥೆಗಳಿಂದ ಸಹಕಾರ ಬೇಕು. 2030 ರ ಮೊದಲು ಅಪಘಾತ ಸಾವಿನ ಪ್ರಮಾಣವನ್ನು 50% ರಷ್ಟು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಗಡ್ಕರಿ ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು. ಸಚಿವಾಲಯವು ಅಕ್ಟೋಬರ್‌ನಲ್ಲಿ Road Accidents in India-2022 ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿತ್ತು, ಅಲ್ಲಿ ಕಳೆದ ವರ್ಷ ಭಾರತದಲ್ಲಿ ರಸ್ತೆ ಅಪಘಾತಗಳು “ಸಾರ್ವಕಾಲಿಕ ಗರಿಷ್ಠ” ಕ್ಕೆ ತಲುಪಿದೆ ಎಂದು ಗಮನಿಸಿದೆ. ವರದಿ…

Read More

ಮೈಸೂರು:- ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲಿಪುರ ಬಳಿ ಬೈಕ್​ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿದ್ದ ಮಹೇಶ್(23), ಮಹೇಶ್(24) ಮೃತ ರ್ದುದೈವಿಗಳು.ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಡಾ.ಯತೀಂದ್ರ ಅವರು ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಕುರಿತು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More