Author: AIN Author

ಬೆಂಗಳೂರು: ರಾಜ್ಯದಲ್ಲಿ  ಕೊರೊನಾ ಪ್ರಕರಣಗಳು ಏರಿಕೆ ಆದರೆ ಬೆಂಗಳೂರು ಹಾಟ್ ಸ್ಪಾಟ್ ಆಗುವ ಭಯದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಮೂರು ಅಲೆಗಳಲ್ಲೂ ಕರ್ನಾಟಕದ ಒಟ್ಟು ಕೊವಿಡ್ (COVID 19) ಕೇಸ್‍ಗಳ ಪಟ್ಟಿಯಲ್ಲಿ ಬೆಂಗಳೂರಿನದ್ದು ಬಹುಪಾಲು. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಮಾಡಲು ಮತ್ತು ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸಭೆ ಮೇಲೆ ಸಭೆ ಮಾಡುತ್ತಿದೆ ಹಾಗೆ ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ಕರೆದಿರುವ ಸಿಎಂ ಸಿದ್ದರಾಮಯ್ಯನವರು  ಮಹತ್ವದ ಕೋವಿಡ್ ಸಭೆ ನಡೆಸಲಿದ್ದಾರೆ. ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ TAC ಸಮಿತಿಯ ಜೊತೆ ಸಿಎಂ ಸಿದ್ಸದರಾಮಯ್ಯ ಸಭೆ ನಡೆಸಲಿದ್ದು ಮುಂದಿನ ಎಚ್ಚರಿಕೆಗಳ ಬಗ್ಗೆ ನಿಲುವು ತೆಗೆದುಕೊಳ್ಳಲು  ಮಹತ್ವದ ಸಭೆಯಾಗಲಿದೆ. ಕೊವಿಡ್ ಮೀಟಿಂಗ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಭಾಗಿಯಾಗಲಿದ್ದು  ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಮಹತ್ವದ ಸಭೆ. ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಬಹುದು…

Read More

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೇವರ್ಗಿ ಪಟ್ಟಣದ ಶಾಂತಾನಗರ ದಲ್ಲಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ ರೂಮ್​ನಲ್ಲಿ ಯುವಕನೊಬ್ಬ ಕ್ಯಾಮರಾ ಇಟ್ಟ ಘಟನೆ ನಡೆದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹಾಸ್ಟೆಲ್​ಗೆ ಹೊಂದಿಕೊಂಡಂತಿರುವ ಮನೆಯಲ್ಲಿ ವಾಸವಾಗಿದ್ದ ಸಲೀಂ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ. ಇನ್ನು ಬಾತ್​ರೂಮ್​ಗೆ ಹೋದ ವಿದ್ಯಾರ್ಥಿನಿಯರು, ಕ್ಯಾಮೆರಾ ಇಟ್ಟಿರುವುದನ್ನು ಕಂಡ ಕೂಡಲೇ ಹೊರಬಂದು ಕಾಮುಕನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯರು, ಗಲಾಟೆಯನ್ನು ಬಿಡಿಸಿ ಆರೋಪಿ ಎಸ್ಕೇಪ್ ಆಗಲು ಸಹಕರಿಸಿದ್ದರು. https://ainlivenews.com/mp-died-of-heart-attack-while-speaking-in-parliament/ ಆರೋಪಿ ತಪ್ಪಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ತಹಶೀಲ್ದಾರ್ ಮತ್ತು ಜೇವರ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮನೆಯವರನ್ನು ವಿಚಾರಣೆ ನಡೆಸಿದ್ದು, ಆ ಬಳಿಕ ಮನೆಯವರು ಆರೋಪಿಯನ್ನು ಕರೆಸಿದ್ದಾರೆ. ಕ್ಯಾಮರಾ ಇಟ್ಟ ಕಾಮುಕನನ್ನ ಜೇವರ್ಗಿ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು:  ಭಾರತದಲ್ಲಿ 5ನೇ ಕೋವಿಡ್ ಅಲೆ? XBB.1.16 ರೂಪಾಂತರವು ವೇಗವಾಗಿ ಹರಡುತ್ತಿದೆ; ಈ ಸಾಂಕ್ರಾಮಿಕ COVID ರೂಪಾಂತರದ ಲಕ್ಷಣಗಳನ್ನು ತಿಳಿಯಿರಿ XBB1.1.16 ರೂಪಾಂತರವು ಭಾರತದಲ್ಲಿ ಹೊಸ ಬೆದರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ, ದೇಶವು ಈ ರೂಪಾಂತರದ ಕನಿಷ್ಠ 249 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಕೆಳಗಿನ ಹೊಸ ರೂಪಾಂತರ ಮತ್ತು ಅದರ ರೋಗಲಕ್ಷಣಗಳ ಕುರಿತು ಇನ್ನಷ್ಟು ತಿಳಿಯಿರಿ. ರೂಪಾಂತರದ ಲಕ್ಷಣಗಳು COVID ನ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಒಂದೇ ಆಗಿವೆ, ಆದಾಗ್ಯೂ, ಪ್ರತಿ ಬಾರಿ ಹೊಸ ರೂಪಾಂತರವು ಚಿತ್ರವನ್ನು ಪ್ರವೇಶಿಸಿದಾಗ ಕೆಲವು ಹೆಚ್ಚುವರಿ ಆರೋಗ್ಯ ಸಮಸ್ಯೆಗಳು ವರದಿಯಾಗುತ್ತವೆ. ನಾವು XBB.1.16 ಕುರಿತು ಮಾತನಾಡುತ್ತಿದ್ದೇವೆ — ಈ ಸಮಯದಲ್ಲಿ ಅತ್ಯಂತ ಸಾಂಕ್ರಾಮಿಕ ರೂಪಾಂತರವಾಗಿದೆ, ಸೋಂಕಿತ ವ್ಯಕ್ತಿಯು ಅನುಭವಿಸಬಹುದಾದ ರೋಗಲಕ್ಷಣಗಳ ಪಟ್ಟಿ ಇಲ್ಲಿದೆ: ಜ್ವರವು ಚಳಿಯೊಂದಿಗೆ ಇರುತ್ತದೆ ನಿರಂತರ ಕೆಮ್ಮು ಮೂಗು ದಟ್ಟಣೆ/ಮೂಗು ಮುಚ್ಚಿದೆ ಸ್ರವಿಸುವ ಮೂಗು ತಲೆನೋವು ಸ್ನಾಯು ನೋವು ಮತ್ತು ಸ್ನಾಯು ಸೆಳೆತ ಗಂಟಲು ಕೆರತ ಪ್ರಸ್ತುತ, XBB.1.16 ರೂಪಾಂತರವು ಗಂಭೀರವಾದ ಆರೋಗ್ಯ…

Read More

ಯುವ ನಾಯಕ ವಿಕ್ರಾಂತ್, ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಸಾರ್ ಧಿಲ್ಲೋನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಸ್ಪಾರ್ಕ್ L.I.F.E’ ನವೆಂಬರ್ 17ರಂದು ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಸ್ಪಾರ್ಕ್ L.I.F.E’ ಮೂಲಕ ವಿಕ್ರಾಂತ್ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದರು. ಜೊತೆಗೆ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಸಹ ಬರೆದಿದ್ದರು. ಇದೀಗ ‘ಸ್ಪಾರ್ಕ್ L.I.F.E’ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗಿದೆ. ತೆಲುಗು ಜೊತೆ ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ಚಿತ್ರ ಅಮೇಜಾನ್ ಒಟಿಟಿಯಲ್ಲಿ ಲಭ್ಯವಿದೆ. ಡೆಫ್ ಫ್ರಾಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ‘ಹೃದಯಂ’ ಮತ್ತು ಕುಶಿ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಮಲಯಾಳಂನ ಹಿರಿಯ ನಟ ಗುರು ಸೋಮಸುಂದರಂ ಖಳನಾಯಕನಾಗಿ ನಟಿಸಿದ್ದಾರೆ. ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸ್ಪಾರ್ಕ್ L.I.F.E’ ಚಿತ್ರದಲ್ಲಿ ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲ ಕಿಶೋರ್, ಸತ್ಯ, ಬ್ರಹ್ಮಾಜಿ, ಶ್ರೀಕಾಂತ್ ಅಯ್ಯಂಗಾರ್,…

Read More

ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟ್ರೇಲರ್ ಝಲಕ್ ಮೂಲಕ ಪ್ರೇಕ್ಷಕರೆದುರು ಸೂಪರ್ ಹೀರೋ ‘ಹನುಮಾನ್’ ದರ್ಶನ ಕೊಟ್ಟಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ನಟಿಸುತ್ತಿದ್ದು, ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿರೋದು ಟ್ರೇಲರ್ ನೋಡಿದಾಗಲೇ ತಿಳಿದು ಬರುತ್ತೆ. ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಟ್ರೇಲರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ನಾಯಕ ನಟ ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಗಮನ ಸೆಳೆಯುತ್ತಿದೆ. ಯಥೋ ಧರ್ಮ ತತೋ ಹನುಮಾ… ಯಥೋ ಹನುಮ ತತೋ ಜಯ… (ಎಲ್ಲಿ ಸದಾಚಾರವಿದೆಯೋ ಅಲ್ಲಿ ಹನುಮಂತನು,…

Read More

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮತ್ತೆ ತಲೆದೂರಿದ್ದು ಇದರ ಅಟ್ಟಹಾಸಕ್ಕೆ  76 ವರ್ಷದ ವೃದ್ಧ ಬಲಿಯಾಗಿದ್ದು ಇದು ರಾಜ್ಯದ ಎರಡನೇ ಕೇಸ್‌ ಆಗಿರುತ್ತದೆ. ಬೆಂಗಳೂರಿನ ಜೆಪಿ ನಗರದದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವ್ಯಕ್ತಿ ಸಾರಿ ಲಕ್ಷಣಗಳಿಂದ ಬಳಲುತ್ತಿದ್ದ ವೃದ್ಧ .76 ವರ್ಷದ ವೃದ್ದನಿಗೆ ಉಸಿರಾಟದ ಸಮಸ್ಯೆಇತ್ತು ಉಸಿರಾಟದ ಸಮಸ್ಯೆ ಸೇರಿದಂತೆ ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ 12-09-23 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಡಿ 17ರಂದು ಕೊವಿಡ್ ನಿಂದ ಮೃತಪಟ್ಟಿದ್ದಾರೆ ಬೆಂಗಳೂರಿನಲ್ಲಿ ಕೊವಿಡ್ ನಿಂದ ಮೃತಪಟ್ಟ ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಕೊವಿಡ್ ಟೆಸ್ಟ್ ಗೆ ಒಳಪಡಿಸಿರುವ ಆರೋಗ್ಯ ಇಲಾಖೆ

Read More

ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಆಗಿದ್ದು, ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಅಂತಿಮಗೊಳಿಸಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ, ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡರು ಸಹ ದೆಹಲಿಯಲ್ಲಿಯೇ ತಂಗಿದ್ದಾರೆ. ಹೀಗಾಗಿ, ಬಿಜೆಪಿ ವರಿಷ್ಠರ ಜೊತೆ ಚರ್ಚಿಸಲು ಸೂಕ್ತವಾಗಿದೆ. ಸೀಟು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೆ ಜೆಡಿಎಸ್ 4ರಿಂದ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದೆ. ಈ ವಿಚಾರವಾಗಿ ಬಿಜೆಪಿ ವರಿಷ್ಠರೊಂದಿಗೆ ಪ್ರಸ್ತಾಪಿಸಿ ಚರ್ಚಿಸಲಾಗುವುದು. ಈಗಾಗಲೇ ಹಾಸನ ಜೆಡಿಎಸ್‌ ಹಿಡಿತದಲ್ಲಿದ್ದು, ಈ ಕ್ಷೇತ್ರದ ಜೊತೆಗೆ ತುಮಕೂರು, ಕೋಲಾರ ಮತ್ತು ಉತ್ತರ ಕರ್ನಾಟಕದ ಒಂದು ಕ್ಷೇತ್ರ ಸೇರಿದಂತೆ ನಾಲ್ಕೈದು ಸ್ಥಾನಗಳನ್ನು ನೀಡುವಂತೆ ಕೇಳುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ…

Read More

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಇಂದು  ಬೆಳಿಗ್ಗೆ 11 ಗಂಟೆಗೆ ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ. ಕಳೆದ ವಾರ ಪ್ರಧಾನಿ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಗುರುವಾರ ಭೇಟಿ ಮಾಡಿ ಚರ್ಚಿಸುತ್ತೇನೆ. ಇದೊಂದು ಸೌಜನ್ಯದ ಭೇಟಿ’ ಎಂದು ಕುಮಾರಸ್ವಾಮಿ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಸೀಟು ಹಂಚಿಕೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸಲು ಯೋಜಿಸಲಾಗಿದೆ ಎಂದರು.

Read More

ಮೂಲಂಗಿ ಎಲೆಗಳಲ್ಲಿನ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ಲಿವರ್, ಸ್ತನ, ಗರ್ಭಕಂಠ, ಪ್ರಾಸ್ಟೇಟ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ನ ವಿರುದ್ಧ ಹೋರಾಡುತ್ತದೆ. ಇದರ ಎಲೆಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಹೊಟ್ಟೆಯ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದರ ಎಲೆಗಳಲ್ಲಿರುವ ಪೋಷಕಾಂಶಗಳು ಫ್ರಿ ರಾಡಿಕಲ್ಸ್ ಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಅಂಗಾಂಶಗಳ ಮೇಲೆ ಅವುಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ಮೂಲಂಗಿ ಎಲೆಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ.

Read More

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಬೈಕ್​ಗೆ ಕ್ರೊಸರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ. ಸಿದ್ದಪ್ಪ ಜಂಗಣ್ಣವರ (52) ಸಾವನ್ನಪ್ಪಿದ ರ್ದುದೈವಿ. ಬೈಕ್​ಗೆ ಡಿಕ್ಕಿ ಹೊಡೆದ ಕ್ರೂಸರ್​, ಪೆಟ್ರೋಲ್ ಬಂಕ್ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಕ್ರೊಸರ್​ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಮಿನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More