Author: AIN Author

ಬಳ್ಳಾರಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ಭಾರತದ ಉಪರಾಷ್ಟ್ರಪತಿ ವಿಡಿ ಜಗದೀಶ್ ದನಕರ್ ಅವಮಾನಿಸುವುದನ್ನು ಖಂಡಿಸಿನಗರದ ರಾಯಲ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಧಾನಪರಿಷತ್ ಸದಸ್ಯರಾದ ವೈಎಂ ಸತೀಶ್ ಅವರು ಮಾತನಾಡಿ ಸಂಸತ್ ಭವನದಲ್ಲಿ ಅಧಿವೇಶನ ನಡೆಯುವ ಸಮಯದಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ಉಪರಾಷ್ಟ್ರಪತಿ ವಿಡಿ ಜಗದೀಶ್ ದನಕರ್ ಅವರನ್ನು ಅವಮಾನಿಸಿದ್ದಾರೆ.  ಇದನ್ನು ಖಂಡಿಸಿ ಬಳ್ಳಾರಿಯ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲಾಧ್ಯಕ್ಷರಾದ ಮುರಹರಿ ಗೌಡ ಅವರು ಮಾತನಾಡಿ ಹಿಂದುಳಿದ ವರ್ಗದ ಉಪರಾಷ್ಟ್ರಪತಿ ವಿಡಿ ಜಗದೀಶ್ ದನಕರ್ ಅವರನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ಅವಮಾನಿಸಿದ್ದು ಕೂಡಲೇ ರಾಹುಲ್ ಗಾಂಧಿ ಅವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಇಬ್ರಾಹಿಂ ಬಾಬು, ರಾಮಾಂಜನಿ, ಪುಷ್ಪಲತಾ, ಅಂಜಿ ಕಮ್ಮರಚೇಡು, ಉಪ್ಪಾರ್ ಸಿದ್ದೇಶ್,ಮೋಹನ್ ಸೇರಿದಂತೆ ಮತ್ತಿತರ ಇದ್ದರು.

Read More

ಮಂಡ್ಯ: ಇಬ್ಬರು ವ್ಯಕ್ತಿಗಳು ಬಾರ್ ಮುಂದೆ ನಿಂತಿದ್ದ ವ್ಯಕ್ತಿಗೆ ಮನಸ್ಸೊ ಇಚ್ಚೆ ಚಾಕುವಿನಿಂದ ಇರಿದು ಹತ್ಯೆ ಮಾಡಿರೋ ಘಟನೆ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ನಡೆದಿದೆ.  ಭೀಕರ ಕೊಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೇ ತಿಂಗಳ 14ರ ರಾತ್ರಿ ಮಂಡ್ಯ ನಗರದಲ್ಲಿ ಮರ್ಡರ್ ನಡೆದಿತ್ತು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ಗುರು ವಿಲಾಸ್ ಎಂಬಾತನನ್ನ‌ ಹತ್ಯೆ ಮಾಡಲಾಗಿದೆ. ಬಾರ್​​ನಲ್ಲಿ ಕುಡಿದು ಗಲಾಟೆಯಾದ ಬಳಿಕ ಗುರುವಿಲಾಸ್ ಹತ್ಯೆ ಮಾಡಲಾಗಿದೆ. ಕುಡಿದ ಮೇಲೆ ಬಾರ್ ಮುಂದೆ ಗುರು ವಿಲಾಸ್ ನಿಂತಿರೋದನ್ನ ಗಮನಿಸಿ ಕಾರ್​​​ನಲ್ಲಿ ಬಂದು ಹತ್ಯೆ ಮಾಡಿದ್ದಾರೆ. ಕಡಿಲುವಾಗಿಲು ಗ್ರಾಮದ ಶಿವಕುಮಾರ್, ಮಂಡ್ಯದ ಗುತ್ತಲು ಕಾಲೋನಿಯ ರಾಘವೇಂದ್ರ ಎಂಬುವರಿಂದ ಹತ್ಯೆ ಮಾಡಲಾಗಿದೆ. ಗುರುವಿಲಾಸ್​​ನನ್ನ ಚಾಕುವಿನಿಂದ ಇರಿದು ಮತ್ತೆ ಅದೇ ಕಾರ್​​​ನಲ್ಲಿ ಇಬ್ಬರು ತೆರಳಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

Read More

ರಾಮನಗರ: ಪಾಪಿ ತಾಯಿಯೊಬ್ಬಳು (Mother) ಹೆತ್ತ ಮಗುವನ್ನೇ (Baby) ನದಿಗೆ (River) ಎಸೆದ ಘಟನೆ ರಾಮನಗರ (Ramanagara) ಜಿಲ್ಲೆ ಚನ್ನಪಟ್ಟಣ (Channaptna) ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ. ಭಾಗ್ಯಾ ಹೆತ್ತ ಮಗುವನ್ನು ನದಿಗೆ ಎಸೆದ ತಾಯಿ. ಕಳೆದ 2 ವರ್ಷದಿಂದ ಭಾಗ್ಯಾ ತಾಯಿ ಮನೆಯಲ್ಲೇ ವಾಸವಿದ್ದಳು. ಭಾಗ್ಯಾ ಹಾಗೂ ಶ್ರೀನಿವಾಸ್ ದಂಪತಿಯ 1 ವರ್ಷ 6 ತಿಂಗಳ ಹಸುಗೂಸನ್ನು, https://ainlivenews.com/sore-throat-cough-problem-in-winter-make-these-things-and-drink-tea/ ಭಾಗ್ಯಾ ರಾತ್ರಿ ಕೊಂಡಾಪುರ ಬಳಿಯ ಕಣ್ವ ನದಿಗೆ ಎಸೆದಿದ್ದಾಳೆ. ಇಂದು ಬೆಳಗ್ಗೆ ಕುಟುಂಬಸ್ಥರು ಮಗು ಎಲ್ಲಿ ಎಂದು ಕೇಳಿದಾಗ ನದಿಗೆ ಎಸೆದಿರುವುದಾಗಿ ಭಾಗ್ಯಾ ಹೇಳಿದ್ದಾಳೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ನದಿಯಿಂದ ಮೃತ ಮಗುವಿನ ಶವ ಹೊರತೆಗೆದಿದ್ದಾರೆ. ಮಗುವನ್ನು ನದಿಗೆ ಎಸೆದಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

Read More

ಮೈಸೂರು:- ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲು ಸಮರ್ಥರು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ. ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ವಿಪಕ್ಷಗಳ ಕೆಲಸವೇ ಅರ್ಥವಾಗುತ್ತಿಲ್ಲ. ಪ್ರಶ್ನಿಸಿದವರನ್ನೇ ಅಮಾನತ್ತುಗೊಳಿಸುತ್ತಿದ್ದಾರೆ. ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳ ಬಂದಿದ್ದಾರೆ ಅಂದರೆ ಅದರ ಹಿಂದೆ ಯಾರಿದ್ದಾರೆ? ಅದನ್ನ ಕೇಳಲು ಹೋದರೆ ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ ಅಲ್ಲವೇ ಎಂದರು. https://ainlivenews.com/sore-throat-cough-problem-in-winter-make-these-things-and-drink-tea/ ಪ್ರಧಾನಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನು ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನು ಹಿಂದಕ್ಕೆ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು ಎಂದು ಭಾರತ ಸರ್ಕಾರವನ್ನು ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ…

Read More

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಭೇಟಿ ಸಂಸತ್‌ ಭವನದ ಪ್ರಧಾನಿಗಳ ಕಾರ್ಯಾಲಯದಲ್ಲಿ ನಡೆಯಿತು. ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಪ್ರಧಾನಿಗಳ ಕಾರ್ಯಾಲಯಕ್ಕೆ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು ಆಗಮಿಸಿದರು. ಇಬ್ಬರು ನಾಯಕರ ಜತೆ ಪ್ರಧಾನಿಗಳು ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿರುವಂತೆ; ರಾಜ್ಯ ರಾಜಕೀಯ ಪರಿಸ್ಥಿತಿಯ ಜತೆಗೆ ಕೊಬರಿ ಖರೀದಿ, ಕಾಡುಗೊಲ್ಲ ಜಾತಿಗೆ ಮೀಸಲಾತಿ ಸೌಲಭ್ಯ‌ ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿಗಳು ಮೋದಿ ಅವರ ಜತೆ ಚರ್ಚೆ ನಡೆಸಿದರು. ಇದೇ ವೇಳೆ ಕೊಬರಿಗೆ ಬೆಂಬಲ ಬೆಲೆ ನೀಡುವುದು ಹಾಗೂ ನಾಫೆಡ್‌ ಮೂಲಕ ಖರೀದಿ ಮಾಡಬೇಕು ಎಂಬ ಬಗ್ಗೆ ಪ್ರಧಾನಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಮಾಜಿ ಸಂಸದರಾದ ಕುಪೇಂದ್ರ…

Read More

ಹೊಸ ಫೋಟೋಶೂಟ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ‘ಅನಿಮಲ್’ (Animal) ಬ್ಯೂಟಿಯ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇಂಟರ್‌ನೆಟ್ ಸೆನ್ಸೇಷನ್ ಕ್ವೀನ್ ತೃಪ್ತಿ ಅವರು ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತೃಪ್ತಿ ಬ್ಯೂಟಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಸಖತ್ ಹಾಟ್ ಆಗಿದ್ದೀರಾ ಎಂದೆಲ್ಲಾ ನಟಿಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.‌ ‘ಅನಿಮಲ್’ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಅದ್ಯಾವಾಗ ದರ್ಶನ ಕೊಟ್ಟ ದಿನದಿಂದ ತೃಪ್ತಿ ದಿಮ್ರಿ ಲಕ್ ಬದಲಾಯ್ತು. ರಶ್ಮಿಕಾ (Rashmika Mandanna) ನ್ಯಾಷನಲ್ ಕ್ರಶ್ ಅಲ್ಲ, ನೀವು ನಿಜವಾದ ನ್ಯಾಷನಲ್ ಕ್ರಶ್ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ರಣ್‌ಬೀರ್ (Ranbir Kapoor) ಜೊತೆ ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ತೃಪ್ತಿಗೆ ಇದೀಗ ಬಾಲಿವುಡ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಗೆ ಅವಕಾಶಗಳು ಒಲಿದು ಬರುತ್ತಿವೆ.

Read More

ಬೆಂಗಳೂರು: ಕೋವಿಡ್ ಕುರಿತ ಉನ್ನತ ಮಟ್ಟದ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಹೀಗಿವೆ.. ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರೆ ಯಾವುದಕ್ಕೂ ಕೊರತೆ ಆಗಬಾರದು ಈಗಿನ ಉಪತಳಿ JN.1 (ಒಮಿಕ್ರಾನ್ ಯಪತಳಿ) ಇದು ಅಪಾಯಕಾರಿಯಲ್ಲ ಈ ಉಪತಳಿ ರಾಜ್ಯದಲ್ಲಿ 92 ಪತ್ತೆಯಾಗಿದೆ. ಬೆಂಗಳೂರಲ್ಲಿ 80 ಪತ್ತೆಯಾಗಿದ್ದು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಮನೆಯಲ್ಲೇ ಇದ್ದಾರೆ. 20 ರಲ್ಲಿ 7 ಮಂದಿ ICU ನಲ್ಲಿದ್ದಾರೆ. ಆದರೆ ಇವರಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ICU ನಲ್ಲಿದ್ದಾರೆ ದಿನ‌ 5000 ಟೆಸ್ಟ್ ಗಳು ನಡೆಯುತ್ತವೆ. ಬೆಂಗಳೂರಲ್ಲಿ ಸಾವಿರ ಪರೀಕ್ಷೆ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗುವುದು, ಇವರು ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಬೇಕು ತತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡಬೇಕು ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆಅಡಬೇಕು ಆಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು ಜಮಸಂದಣಿಯಲ್ಲಿ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟವರು…

Read More

ಬೆಂಗಳೂರು ಗ್ರಾಮಾಂತರ:   ಪ್ರೇಮಿಗಳಿಬ್ಬರು ರಸ್ತೆಯಲ್ಲಿ ಕಿತ್ತಾಟ ಮಾಡುವಾಗ ಮಧ್ಯಪ್ರವೇಶದ ಗುಂಪೊಂದು ಪ್ರೇಮಿಗೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಯುವ ಪ್ರೇಮಿಗಳಿಬ್ಬರೂ ಪ್ರೀತಿ ಮಾಡುತ್ತಿದ್ದರು ಇಬ್ಬರು ಕೂಡ ಮಂಗಳೂರಾಗಿದ್ದರು ಯುವತಿ ಆನೇಕಲ್ ಪಟ್ಟಣದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಳು ಇತ್ತೀಚಿಗೆ ಯುವತಿ ಯುವಕನ ಫೋನ್ ರಿಸೀವ್ ಮಾಡುತ್ತಿರಲಿಲ್ಲ ಹೀಗಾಗಿ ಇಂದು ಆನೇಕಲ್ ಪಟ್ಟಣಕ್ಕೆ ಆಗಮಿಸಿದ ಯುವಕ ಯುವತಿ ಭೇಟಿಯಾಗಿದ್ದರು ಬಳಿಕ ಜೊತೆಗೆ ಒಬ್ಬರಿಗೊಬ್ಬರು ಮಾತನಾಡಿಕೊಂಡು ಆನೇಕಲ್ ಪಟ್ಟಣದ ಬಸ್ ನಿಲ್ದಾಣದ ಬಳಿ ಬಂದಿದ್ದರು ಈ ಮಧ್ಯೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ಆಗುತ್ತಿದ್ದಾಗ ಮಧ್ಯಪ್ರವೇಶಿಸಿದ ಇನ್ನೊಂದು ಗುಂಪು ಯುವಕನಿಗೆ ನಡು ರಸ್ತೆಯಲ್ಲಿ ಪ್ರಾದೇಶಿಕ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ ಆನೇಕಲ್ ಪೊಲೀಸ್ ಠಾಣೆ ಸಮೀಪದಲ್ಲಿ ನಡೆದಿದ್ದು ಸದ್ಯ ಯುವಕ ಮತ್ತು ಯುವತಿಯನ್ನು ಆನೇಕಲ್ ಠಾಣೆಗೆ ಕರೆದು ಇದು ವಿಚಾರಣೆ ಮಾಡುತ್ತಿದ್ದಾರೆ.. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Read More

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹ 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ ₹1,500 ಭತ್ಯೆ ನೀಡುವ ‘ಯುವನಿಧಿ’ ಯೋಜನೆಗೆ ಡಿ. 26ರಿಂದ ನೋಂದಣಿ ಆರಂಭವಾಗಲಿದೆ. ಹಾಗಿದ್ರೆ ಈ ಯೋಜನೆಗೆ ಯಾರೆಲ್ಲಾ ಅರ್ಹರು,ದಾಖಲೆಗಳುಬೇಕು,ಅರ್ಜಿ ಸಲ್ಲಿಕೆ ಹೇಗೆ..?ಎಂಬುವುದಕ್ಕೆ ಉತ್ತರ ಇಲ್ಲಿದೆ. ಅರ್ಹತೆ ಏನು? 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ/ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದ ರಹವಾಸಿಯಾಗಿರಬೇಕು ಯಾರು ಫಲಾನುಭವಿಗಳು? ವೃತ್ತಿಪರ ಕೋರ್ಸ್‌ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ. ಯಾರು ಅನರ್ಹರು? ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.…

Read More

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೈಕ್ ವ್ಹೀಲಿಂಗ್ ಹೆಚ್ಚಾಗಿದ್ದು,ಶೋಕಿಗಾಗಿ ಇನ್ನೂ ಮೀಸೆ ಚಿಗುರದ ಹುಡುಗರು ಪ್ರಮುಖ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿರುವುದು ಹೆಚ್ಚಾಗಿದೆ.ಹಾಡುಹಗಲೇ ಪ್ರಮುಖ ರಸ್ತೆಗಳಲ್ಲಿ ಸಿನಿಮಾ ಶೈಲಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು ಅಧಿಕಾರಿಗಳಿಂದ ಡೋಂಟ್ ಕೇರ್ ಎನ್ನುತ್ತಿದ್ದಾರೆ. https://ainlivenews.com/sore-throat-cough-problem-in-winter-make-these-things-and-drink-tea/ ಯಾವುದೇ ಹೆಲ್ಮೆಟ್ ಹಾಕದೆ, ಕನಿಷ್ಟ ವಾಹನ ಸಂಖ್ಯೆ ಸಹ ಇಲ್ಲದೆ ಸ್ಟಂಟ್ ಮಾಡಲಾಗುತ್ತಿದೆ.ಕೆಎಲ್ ಇ ಕಾಲೇಜ್ ರಸ್ತೆ, ವಿದ್ಯಾನಗರ, ರೈಲ್ವೆ ಮೈದಾನ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿದೆ.ಹೀಗಿದ್ದರೂ ಸಂಚಾರಿ ವಿಭಾಗದ ಪೊಲೀಸರು ಕಣ್ಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Read More