Author: AIN Author

ಬೆಂಗಳೂರು:- ಹೆಚ್ ಡಿ ಕುಮಾರಸ್ವಾಮಿ ಅವರು ಭ್ರಮೆಯಲ್ಲಿದ್ದಾರೆ ಮತ್ತು ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡವರು ಬೇರೆಯವರ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ ಮತ್ತು ಮಂಡ್ಯ ಕ್ಷೇತ್ರಗಳಿಂದ ಒತ್ತಡ ಬರುತ್ತಿದೆ ಎಂದು ಕುಮಾರಸ್ವಾಮಿ ಹೇಳಿರುವುದನ್ನು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಸ್ವಾಗತಿಸುತ್ತೀರಾ ಎಂದು ಸುರೇಶ್ ಅವರನ್ನು ಪತ್ರಕರ್ತರು ಕೇಳಿದಾಗ, ತಾನು ರಾಜಕೀಯಕ್ಕೆ ಬಂದಿದ್ದೇ ಅವರಿಂದ, ಹಾಗಾಗಿ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸ್ವಾಗತಿಸುವುದಾಗಿ ವ್ಯಂಗ್ಯವಾಗಿ ಹೇಳಿದರು.

Read More

ಅಜ್ಜಿ ಕಾಲದ ಈ ವಿಧಾನ ಅನುಸರಿಸಿದರೆ ಒಂದು ವಾರದಲ್ಲಿ ತಲೆಹೊಟ್ಟು ಮಾಯವಾಗುತ್ತಂತೆ. ಕೆಲವರಿಗೆ ವರ್ಷದ 12 ತಿಂಗಳ ಕಾಲ ತಲೆಹೊಟ್ಟು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದರೆ ನಿಮಗೆ ಗೊತ್ತಾ, ತಲೆಹೊಟ್ಟಿನಿಂದ ಹಲವು ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದರಿಂದ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಡೆಯಲು ಪ್ರಾರಂಭಿಸುತ್ತದೆ, ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಮೊಡವೆಗಳು ನೆತ್ತಿಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ನೀವು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಇದನ್ನು ಮೂಲದಿಂದ ಗುಣಪಡಿಸಲು ಈ ಮಾಂತ್ರಿಕ ವಿಧಾನವನ್ನು ಪ್ರಯತ್ನಿಸಬಹುದು. ಶತಮಾನಗಳಷ್ಟು ಹಳೆಯದಾದ ಈ ವಿಧಾನ ನಿಮಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಕರ್ಪೂರ 2 ರೂ.ಗೆ ಸಿಗುವ ಕರ್ಪೂರ ನಿಮಗೆ ತುಂಬಾ ಪ್ರಯೋಜನಕಾರಿ. ಕರ್ಪೂರದಲ್ಲಿ ಆಯಂಟಿ ಫಂಗಲ್ ಮತ್ತು ಆಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಕೂದಲಲ್ಲಿ ಎಲಾಸ್ಟಿನ್ ಮತ್ತು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ತೆಂಗಿನೆಣ್ಣೆ ಬಳಸಿ ತಲೆಹೊಟ್ಟು ಹೋಗಲಾಡಿಸಬಹುದು. ತೆಂಗಿನ ಎಣ್ಣೆ ಮತ್ತು ಕರ್ಪೂರದ ಮಿಶ್ರಣವು ಪರಿಣಾಮಕಾರಿ ಕರ್ಪೂರದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ಹೋಗಲಾಡಿಸುವಲ್ಲಿ ಪರಿಣಾಮಕಾರಿ.…

Read More

ನೆಲಮಂಗಲ :- ನೆಲಮಂಗಲದ ವಾಜರಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿರುವ ಘಟನೆ ಜರುಗಿದೆ. ಸಂಜಯ್ 40, ಲೇಖನಾ 5 ವರ್ಷದ ಮಗುವಿಗೂ ಗಂಭೀರ ಗಾಯಗೊಂಡಿದ್ದಾರೆ. ವಿಜಯಮ್ಮ ಎಂಬುವವರ ಮನೆಯಲ್ಲಿ ನಡೆದಿರುವ ಘಟನೆ. ಎಂದಿನಂತೆ ಅಡುಗೆ ಮನೆಗೆ ತೆರಳಿ ಗ್ಯಾಸ್ ಆನ್ ಮಾಡಿ ಬೆಂಕಿ ಹೊತ್ತಿಸಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡು ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಸಂಜಯ್ ಎಂಬವವರಿಗೆ ತೀವ್ರ ಸ್ವರೂಪದ ಸುಟ್ಟುಗಾಯಗಳಾಗಿವೆ. ಇನ್ನು ಲೇಖನ ಎಂಬ ಮಗು ಸಹ ಗಂಭೀರವಾಗಿ ಗಾಯಗೊಂಡಿದೆ. ಗಾಯಾಳಿಬ್ಬರನ್ನು ಸರ್ಕಾರ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಸ್ಥಿತಿ ಗಂಭೀರವಾಗಿರುವುದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ವಿಜಯಮ್ಮ ಮನೆಯಲ್ಲಿ ಸಿಲಿಂಡರ್ ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

Read More

ರೋಹಿತ್‌ ಶರ್ಮಾ ಅವರ ಪತ್ನಿ ರಿತಿಕಾ ಹುಟ್ಟು ಹಬ್ಬಕ್ಕೆ ಐಪಿಎಲ್‌ ಫ್ರಾಂಚೈಸಿ ‘ಮುಂಬೈ ಇಂಡಿಯನ್ಸ್‌’ ಶುಭ ಕೋರಿದೆ. ಈ ನಡುವೆ ಫ್ರಾಂಚೈಸಿ ವಿರುದ್ಧ ರೋಹಿತ್‌ ಅಭಿಮಾನಿಗಳು ಕಿಡಿಕಾರಿದ್ದಾರೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ತಂಡವು ಐದು ಸಲ ಪ್ರಶಸ್ತಿ ಜಯಿಸಿದಾಗಲೂ ಅವರನ್ನು ಕೆಳಗಿಳಿಸಲಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ಹಂಚಿಕೊಂಡಿರುವ ಪೋಸ್ಟ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ರೋಹಿತ್‌ ಶರ್ಮಾ ಅವರನ್ನು ಮತ್ತೆ ನಾಯಕರನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನೂ ಟ್ರೇಡ್‌ನಲ್ಲಿ ಮುಂಬೈ ತಂಡವು ಸೇರ್ಪಡೆ ಮಾಡಿಕೊಂಡಿತ್ತು. ‘ನಾಯಕತ್ವದ ಬದಲಾವಣೆಯು ನಮ್ಮ ಫ್ರಾಂಚೈಸಿಯ ಭವಿಷ್ಯದ ಕ್ರಮವಾಗಿದೆ. ರೋಹಿತ್ ಅವರ ಅತ್ಯದ್ಭುತವಾದ ನಾಯಕತ್ವ ಮತ್ತು ನೀಡಿರುವ ಸೇವೆಗೆ ಆಭಾರಿಯಾಗಿದ್ದೇವೆ. ಮುಂಬೈ ತಂಡಕ್ಕೆ ಮೊದಲಿನಿಂದಲೂ ಖ್ಯಾತನಾಮ ಆಟಗಾರರ ನಾಯಕತ್ವ ಲಭಿಸಿರುವುದು…

Read More

ಹೆಚ್ಚಿನ ಜನರಿಗೆ, ಅನ್ನವನ್ನು ತಿನ್ನುವಾಗ ಮಜ್ಜಿಗೆ ಅಥವಾ ಮೊಸರು ಇಲ್ಲದೆ ತಿನ್ನುವುದು ಅಪೂರ್ಣವಾಗಿದೆ. ಆದಾಗ್ಯೂ, ಈ ಮಜ್ಜಿಗೆ ಮತ್ತು ಮೊಸರಿನಿಂದ ಅನೇಕ ಪ್ರಯೋಜನಗಳಿವೆ. ಆದಾಗ್ಯೂ, ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದು ತುಂಬಾ ಕಷ್ಟ. ಮಜ್ಜಿಗೆ ಮೊಸರಿನಿಂದ ಬರುತ್ತದೆ ಎಂದು ಸಾಮಾನ್ಯವಾಗಿ ತಿಳಿದಿದೆ. ಆದಾಗ್ಯೂ, ಇವೆರಡರಿಂದಲೂ ಅನೇಕ ಪ್ರಯೋಜನಗಳಿವೆ. ಮೊಸರಿನ ಮಜ್ಜಿಗೆ ದೇಹವನ್ನು ತಂಪಾಗಿಸುತ್ತದೆ. ಮಜ್ಜಿಗೆ ದೇಹಕ್ಕೆ ಎಲ್ಲಾ ರೀತಿಯಲ್ಲೂ ಸೂಕ್ತವಾಗಿದೆ. ಆದ್ದರಿಂದ ಮೊಸರಿಗಿಂತ ಮಜ್ಜಿಗೆ ತುಂಬಾ ಒಳ್ಳೆಯದು. ಮೊಸರು ಕೊಬ್ಬಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಆದರೂ ಎಲ್ಲರೂ ಮೊಸರು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬದಲು ಅದರಿಂದ ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು. ಮಜ್ಜಿಗೆಯಲ್ಲಿ ಸ್ವಲ್ಪ ಜೀರಿಗೆ ಪುಡಿ, ಗುಲಾಬಿ ಉಪ್ಪು ಕೊತ್ತಂಬರಿ ಸೇರಿಸಿ ರುಚಿ ಉತ್ತಮವಾಗಿರುತ್ತದೆ. ಆದರೂ ಅದು ನಮ್ಮ ಆರೋಗ್ಯವನ್ನು ರಕ್ಷಿಸಲು ನ್ಯಾಯ ಒದಗಿಸಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಜೀರ್ಣಕಾರಿ ಸಮಸ್ಯೆಗಳು, ಉರಿಯೂತದ ಸಮಸ್ಯೆಗಳು, ರಕ್ತಹೀನತೆ, ಹಸಿವಿನ ಕೊರತೆ ಇತ್ಯಾದಿಗಳನ್ನು ಅಂತಹ ಸಮಸ್ಯೆಗಳಿಂದ ನಿವಾರಿಸಬಹುದು.…

Read More

ಕರಿಮೆಣಸು ಸೂಕ್ಷ್ಮಜೀವಿ ವಿರೋಧಿ, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಹೊಟ್ಟೆಯುಬ್ಬರ ವಿರೋಧಿ, ಮೂತ್ರವರ್ಧಕ ಮತ್ತು ಜೀರ್ಣಕಾರಿಯನ್ನು ಹೊಂದಿದೆ. ಆದ್ದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಇವುಗಳಲ್ಲಿ ಹೆಚ್ಚಿನವುಗಳನ್ನು ಚಳಿಗಾಲದಲ್ಲಿ ಸೇವಿಸಲಾಗುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಖಂಡಿತವಾಗಿಯೂ ಅವುಗಳನ್ನು ಆಹಾರದಲ್ಲಿ ಸೇವಿಸಬೇಕು. ಕಾಳು ಮೆಣಸು ಪ್ರಯೋಜನಗಳು: ತೂಕ ನಷ್ಟ: ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಸುಲಭ. ಇದಲ್ಲದೆ, ಅವರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದಾಗ್ಯೂ, ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ತಮ್ಮ ಆಹಾರದಲ್ಲಿ ಕರಿಮೆಣಸನ್ನು ಸೇವಿಸುವ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಶೀತ ಮತ್ತು ಕೆಮ್ಮು ಸಮಸ್ಯೆ: ಚಳಿಗಾಲದಲ್ಲಿ, ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಆಗಾಗ್ಗೆ ಕಂಡುಬರುತ್ತವೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕರಿಮೆಣಸಿನಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸಬೇಕು. ಅಲ್ಲದೆ, ಅವುಗಳನ್ನು ಕಷಾಯವಾಗಿ ತಯಾರಿಸುವುದು ಮತ್ತು ಕುಡಿಯುವುದು ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಅನೇಕ…

Read More

ಚೆನ್ನೈ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಚಿವ ಕೆ ಪೊನ್ಮುಡಿಗೆ (K Pondmudy) ಮದ್ರಾಸ್ ಹೈಕೋರ್ಟ್ (Madras Highcourt) ಗುರುವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ. 1.75 ಕೋಟಿ ರೂ. ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಎಂಕೆ ನಾಯಕ ಮತ್ತು ಅವರ ಪತ್ನಿಯನ್ನು ದೋಷಿಗಳು ಎಂದು ಮದ್ರಾಸ್ ಹೈಕೋರ್ಟ್ ಎರಡು ದಿನಗಳ ಹಿಂದೆ ತೀರ್ಪು ನೀಡಿ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ಈ ಆದೇಶದಿಂದ ತಮಿಳುನಾಡು ಸಿಎಂ ಸ್ಟಾಲಿನ್ (Stalin) ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಶಿಕ್ಷೆಯ ಜೊತೆಗೆ ದಂಪತಿಗೆ ತಲಾ 50 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಸದ್ಯ ಪೊನ್ಮುಡಿಯ ಉನ್ನತ ಶಿಕ್ಷಣ ಖಾತೆಯನ್ನು ಅವರ ಸಹೋದ್ಯೋಗಿಗಳಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ. ಕಾನೂನಿನಡಿಯಲ್ಲಿ, ಶಾಸಕಾಂಗ ವ್ಯವಸ್ಥೆಯ ಸದಸ್ಯರು ತಪ್ಪಿತಸ್ಥರಾದರೆ ಸಂಸತ್ತು ಅಥವಾ ವಿಧಾನಸಭೆಯಿಂದ ಅವರು ಅನರ್ಹರಾಗುತ್ತಾರೆ. https://ainlivenews.com/sore-throat-cough-problem-in-winter-make-these-things-and-drink-tea/ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ ಮರುದಿನವೇ ಪೊನ್ಮುಡಿಯವರಿಗೆ ಈ ಶಿಕ್ಷೆ ವಿಧಿಸಲಾಗಿದೆ. 1996ರಿಂದ 2001ರ ವರೆಗಿನ ಡಿಎಂಕೆ…

Read More

ಧಾರವಾಡ: ಮಾಜಿ ಶಾಸಕ ಅಮೃತ ದೇಸಾಯಿ ಅವರು  ಕಾರ್ತಿಕ ಮಾಸದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ಕ್ಷೇತ್ರ ಉಳವಿಗೆ ಪದಯಾತ್ರೆ ಕೈಗೊಂಡರು. ಧಾರವಾಡ ತಾಲೂಕಿನ ಗರಗ ಮಡಿವಾಳೇಶ್ವರ ಮಠದಿಂದ ಶ್ರೀ ಕ್ಷೇತ್ರ ಉಳವಿಗೆ ಪಾದಯಾತ್ರೆ ನಡೆಲಿದೆ. ಏಳನೇ ಬಾರಿಗೆ ಗರಗ ಮಠದಿಂದ ಅಮೃತ ದೇಸಾಯಿ ಅವರು ಶ್ರೀ ಕ್ಷೇತ್ರ ಉಳವಿಯತ್ತ ಇಂದು ಪದಯಾತ್ರೆ ಆರಂಭಿಸಿದರು. ‌ಇನ್ನೂ ಪಾದಯಾತ್ರೆ ಆರಂಭಕ್ಕೂ ಮುನ್ನ ಗರಗ ಮಡಿವಾಳೇಶ್ವರರ ಕರ್ತೃ ಗದ್ದುಗೆಗೆ ವಿವಿಧ ಮಠಾಧೀಶರು ಹಾಗೂ ಗರಗ ಮಠದ ಉತ್ತರಾಧಿಕಾರಿ ಪ್ರಶಾಂತ ದೇವರ ನೇತೃತ್ವದಲ್ಲಿ ಅಮೃತ ದೇಸಾಯಿ ಹಾಗೂ ಅವರ ಪತ್ನಿ ಪ್ರಿಯಾ ದೇಸಾಯಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ವಿವಿಧ ಮಠಾಧೀಶರ ಪಾದಪೂಜೆಯನ್ನು ಅಮೃತ ದೇಸಾಯಿ ಹಾಗೂ ದಂಪತಿ ನೆರವೇರಿಸಿದರು. ಆನಂತರ ಶ್ರೀಮಠದಿಂದ ಪಾದಯಾತ್ರೆಗೆ ಪ್ರಶಾಂತ ದೇವರಾದಿಯಾಗಿ ವಿವಿಧ ಮಠಾಧೀಶರು ಚಾಲನೆ ನೀಡಿದರು. ಮಠದಿಂದ ಆರಂಭಗೊಂಡ ಪಾದಯಾತ್ರೆ ಗರಗ ಗ್ರಾಮದ ವಿವಿಧ ಗಲ್ಲಿಗಳ ಮೂಲಕ ಸಾಗಿ ಮುಂದೆ ಧಾರವಾಡ ರಸ್ತೆ ರಾ…

Read More

ಗದಗ: ಗದುಗಿನಲ್ಲಿ ಅತಿಥಿ ಉಪನ್ಯಾಸಕರು ಸೇವಾ ಖಾಯಮಾತಿಗಾಗಿ ಆಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ‌. ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತಮಟೆ ಬಾರಿಸುತ್ತಾ ಕಾಲ್ನಡಿಗೆಯಲ್ಲಿ ತೆರಳಿದ್ರು. ಬೇಕೆ ಬೇಕು ನ್ಯಾಯ ಬೇಕು ಅತಿಥಿ ಉಪನ್ಯಾಸಕರ ಖಾಯಮಾತಿ ಆಗಲೇಬೇಕು ಅಂತಾ ಘೋಷಣೆ ಕೂಗಿದ್ರು. ಇನ್ನು ೧೬,೦೦೦ ಅತಿಥಿ ಶಿಕ್ಷಕರನ್ನು ಖಾಯಂ ಮಾಡಲು ದೆಹಲಿ ಸರ್ಕಾರ ವಿಶೇಷ ನಿಯಮಾವಳಿ ರೂಪಿಸಿ ಖಾಯಂಮಾತಿ ಮಾಡಿಕೊಂಡಿದೆ, ಹಾಗೆಯೇ ಹರಿಯಾಣ ಸರ್ಕಾರವು ಕೂಡ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿದ ನಿದರ್ಶನಗಳು ಇವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ನಿಯಮಾವಳಿ ರೂಪಿಸಿ, ಸಚಿವ ಸಂಪುಟ ಸಭೆಯಲ್ಲಿ ದೃಡ ನಿರ್ಧಾರ ಕೈಗೊಳ್ಳುವುದರ ಮೂಲಕ ಅತಿಥಿ ಉಪನ್ಯಾಸಕರನ್ನು ಖಾಯಂ ಗೋಳಿಸಬೆಕುಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ರು.

Read More

ಹುಬ್ಬಳ್ಳಿ: ಸಂವಿಧಾನಿಕ ಹುದ್ದೆಯಲಿರುವ ವ್ಯಕ್ತಿಗಳಿಗೆ ಅಪಮಾನ ಮಾಡಿರುವುದನ್ನ ಖಂಡಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ಮಾಡಿದರು . ಅಮಾನತು ಆಗಿರೋ ಸಂಸದರು ಪ್ರತಿಭಟನೆ ವೇಳೆ ಅಣಕು ಸಂಸತ್ ನಿರ್ವಹಿಸಿ ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಉಪರಾಷ್ಟ್ರಪತಿಯೂ ಆಗಿರೋ ರಾಜ್ಯಸಭೆ ಚೇರ್ಮನ್ ಜಗದೀಪ್ ಧನ್ಕರ್ ರನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದು ಸರಿಯಲ್ಲ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿ, ಸಂಭ್ರಮಿಸಿದ ವಿವಾದದ ನಡುವೆ, ಸಂಸತ್ತಿನ ಹೊರಗೆ ಸಂಸದರು ಕುಳಿತಿರುವುದನ್ನು ತಮ್ಮ ಫೋನಿನಲ್ಲಿ ಚಿತ್ರೀಕರಿಸಿದ್ದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ ಇದಾವ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕಿಡಿಕಾರಿರುವ ಭಾರತೀಯ ಜನತಾ ಪಕ್ಷದ ನಾಯಕರು ಸದನದಿಂದ ಸಂಸದರನ್ನು ‘ಹೊರಹಾಕಿರುವ’ ಬಗ್ಗೆ ಏಕೆ ಚರ್ಚೆಗಳು ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದು, ನಾಯಕರಿಗೆ ಅಸಂಭಧ ರೀತಿಯಲ್ಲಿ ವರ್ತನೆ ಮಾಡಿದಂತೆ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಮಂಗಳವಾರ ಸಂಸತ್ತಿನ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯ ವೇಳೆ…

Read More