Author: AIN Author

ಗದಗ:- ಹಿಂದು ರಾಷ್ಟ್ರ ಮಾಡುವುದು ಬಿಜೆಪಿ ಅಜೆಂಡಾ ಅಲ್ಲ, ಜನರ ತೀರ್ಮಾನ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದು ರಾಷ್ಟ್ರ ಮಾಡುವುದು ಬಿಜೆಪಿ ಅಜೆಂಡಾ ಅಲ್ಲ, ಅದು ಹಿಂದುಗಳದ್ದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ದೇಶದ ಹಿಂದುಗಳು ಹಿಂದು ರಾಷ್ಟ್ರ ಆಗಬೇಕು ಎಂದು ನಿರ್ಧಾರ ಮಾಡಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಎನ್ನುವುದು ಇವತ್ತಿನ ತೀರ್ಮಾನ ಅಲ್ಲ, ಸ್ವಾತಂತ್ರ್ಯ ಪೂರ್ವದಿಂದ ಇದರ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಜ. 22ರಂದು ಅಯೋಧ್ಯೆಯಲ್ಲಿ ಇಡೀ ಪ್ರಪಂಚವೇ ನೋಡುವ ವಿಶೇಷ ಕಾರ್ಯಕ್ರಮವಾಗುತ್ತದೆ ಎಂದರು. ಕಾಶಿ ಕುರಿತು ಕೋರ್ಟ ಆರ್ಡರ್ ಆಗಿದೆ, ಮಧುರಾ ಬಗ್ಗೆ ಸರ್ವೇ ಕೊಟ್ಟಿದ್ದಾರೆ. ದೇಶದಲ್ಲಿ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡೋದಿಲ್ಲ. ದೇವಸ್ಥಾನ ಕೆಡವಿ ಕಟ್ಟಿದ ಒಂದೇ ಒಂದು ಮಸೀದಿ ಉಳಿಸೋದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು

Read More

ಹುಬ್ಬಳ್ಳಿ: ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು, ಬಂಡವಾಳಶಾಹಿಗಳ ಪರ ಹಾಗೂ ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದು ಮಾಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಯುತ್ತಿರುವ ಅಖಿಲ ಭಾರತ ಪ್ರತಿಭಟನಾ ಸಪ್ತಾಹದ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ರೂಪಿಸುತ್ತಿರುವುದರಿಂದ ದುಡಿಯುವ ಜನರ ಶೋಷಣೆಯಾಗುತ್ತಿದೆ. ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಳ ಮಾಡಲಾಗಿದೆ. ಹಳೇ ಪಿಂಚಣಿ ಯೋಜನೆಯನ್ನೇ ಪುನರ್ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಲಕ್ಷಾಂತರ ಮಹಿಳೆಯರೇ ಇರುವ ವಿವಿಧ ಯೋಜನೆಗಳಲ್ಲಿ ತೊಡಗಿರುವ ಆಶಾ, ಅಂಗನವಾಡಿ, ಬಿಸಿಯೂಟ ಮುಂತಾದ ಸ್ಕೀಂ ಕಾರ್ಯಕರ್ತೆಯರನ್ನು ಸರ್ಕಾರಗಳು ನಿರ್ಲಕ್ಷ ಮಾಡುತ್ತಿವೆ ಎಂದು ಆರೋಪಿಸಿದರು. ಕೇಂದ್ರ…

Read More

ಹುಬ್ಬಳ್ಳಿ: ಎರಡು ಕೋವಿಡ್- 19 ಅಲೆಗಳಲ್ಲಿ ಕಿರಿಯ ವಯಸ್ಸಿನ ಶಿಕ್ಷಕರು ಅಧಿಕಾರಿಗಳು ಜೀವ ತೆತ್ತಿದ್ದಾರೆ ಗಂಭೀರವಾಗಿ ಪರಿಗಣಿಸಲು ಅಶೋಕ ಸಜ್ಜನ ಒತ್ತಾಯ ಮಾಡಿದರು. ಈಗಾಗಲೇ ಕೋವಿಡ್ ಸೋಂಕಿತ ರೋಗಿಗಳ ಸಂಖ್ಯೆ ವಿಶ್ವ ದೇಶ ರಾಜ್ಯಗಳಾದ್ಯಂತ ವೇಗವಾಗಿ ಹೊಸ ರೂಪಾಂತರಿ ಜೆ-1 ತಳಿ ಪ್ರಸರಣ ತಡೆಯುವಲ್ಲಿ ಮುಖ್ಯ ಮಂತ್ರಿಗಳು ಆರೋಗ್ಯ ಸಚಿವರು ಸಾರಿಗೆ ಸಚಿವರು ತೀವ್ರ ನಿಗಾ ಪರ ಮಾರ್ಗಸೂಚಿ ಹೊರಡಿಸುತ್ತಿದ್ದಾರೆ. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಐದು ಲಕ್ಷದಷ್ಟು ಅಧ್ಯಾಪಕರು ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿದ್ದು ಮಾನವ ಸಂಪನ್ಮೂಲ ಸಂಪತ್ತು ಉಳಿಸಿ ಬೆಳೆಸುವಲ್ಲಿ ಶಾಲಾ ಶಿಕ್ಷಣ ಸಚಿವರು ಹಾಗೂ ಉನ್ನತ ಹಂತದ ಅಧಿಕಾರಿಗಳು ತುರ್ತಾತಿತುರ್ತಾಗಿ ಇತ್ತ ಕಡೆ ಗಮನಹರಿಸಿ ಕಟ್ಟು ನಿಟ್ಟಿನ ಮಾರ್ಗಸೂಚಿ ಹೊರಡಿಸಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಾಜ್ಯ ಘಟಕ ಹುಬ್ಬಳ್ಳಿಯ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಹಾಗೂ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಿ.ಉಪ್ಪಿನ ಸರ್ಕಾರಕ್ಕೆ ಸಚಿವರಿಗೆ ಆಗ್ರಹಿಸಿದ್ದಾರೆ.

Read More

ಕುಷ್ಠಗಿ:- ಸದನದಿಂದ ಸಂಸದರನ್ನು ಹೊರಗೆ ಹಾಕಿರುವುದುವುದು ಖಂಡನೀಯ ಎಂದು MB ಪಾಟೀಲ್ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಿಂದ ಸಂಸದರನ್ನು ಹೊರಗೆ ಹಾಕುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗುತ್ತದೆ ಎಂದರು. ಸಂಸದರದ್ದು ತಪ್ಪು ಇದ್ದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಅವರನ್ನು ಸದನದಿಂದ ಹೊರಗೆ ಹಾಕಿರುವುದು ಇದೇ ಮೊದಲು. ಸಂಸದರನ್ನು ಅಮಾನತು ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದರು. ತಾಲೂಕಿನ ಕ್ಯಾದಗುಂಪಿಯ ಕೈಗಾರಿಕೆ ಪ್ರದೇಶದಲ್ಲಿ ಅರ್ಹ ಉದ್ದಿಮೆದಾರರು ಕೈಗಾರಿಕೆ ಸ್ಥಾಪನೆಗೆ ಮುಂದಾದಲ್ಲಿ ಅಂಥವರಿಗೆ ಕೈಗಾರಿಕೆ ಸ್ಥಾಪಿಸಲು ಅನುಮತಿ ಕೊಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಖಾನೆಗಳು ನಡೆಯಬೇಕು. ಅದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂದರು. ಸದ್ಯ ಹಳೆ ಸರ್ಕಾರ ಮಂಡಿಸಿದ ಬಜೆಟ್‌ನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದೇವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Read More

ಹೊಸದಿಲ್ಲಿ :- ರಾಹುಲ್‌ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಯೋಗಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ. ಅಮಿತ್‌ ಶಾ ಮತ್ತು ಉದ್ಯಮಿ ಗೌತಮ್‌ ಅದಾನಿ ಅವರನ್ನು “ಪಿಕ್‌ಪಾಕೆಟರ್’ ಎಂದು ಕರೆದಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕಾನೂನುರೀತಿ ಕ್ರಮ ಕೈಗೊಳ್ಳಿ ಎಂದು ಚುನಾವಣ ಆಯೋಗಕ್ಕೆ ದಿಲ್ಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ. ಹೇಳಿಕೆ ಉತ್ತಮ ಅಭಿರುಚಿ ಹೊಂದಿಲ್ಲ. ಆದರೂ ಈ ಪ್ರಕರಣವನ್ನು ಆಯೋಗ ಇತ್ಯರ್ಥಪಡಿಸದೇ ಬಾಕಿ ಉಳಿಸಿಕೊಂಡಿದೆ. 8 ವಾರ ಗಳ ಒಳ ಗಾಗಿ ಈ ಕುರಿತು ಕ್ರಮ ಕೈಗೊಳ್ಳಿ’ ಎಂದು ಆಯೋಗಕ್ಕೆ ಹೈಕೋರ್ಟ್‌ ಸೂಚಿಸಿದೆ. ಇದಕ್ಕೂ ಮುನ್ನ ಆಯೋಗ, ಈ ಸಂಬಂಧ ನ.23ರಂದು ರಾಹುಲ್‌ಗೆ ನೋಟಿಸ್‌ ನೀಡಿದ್ದರೂ, ನಿಗದಿತ ಅವಧಿ(ನ.26) ಮುಗಿದರೂ ಅವ ರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಹಿತಿ ನೀಡಿತು.

Read More

ಅಂಕಾರ: ಒಂದೇ ದೇಹ ಎರಡು ಮುಖದೊಂದಿಗೆ ಜನಿಸಿದ ಕರುವಿನ ಬಗ್ಗೆ ಕೇಳಿದ್ದೀರ. ಹಾಗೆ ಒಂದೇ ಮೇಕೆಗೆ ಎರಡಕ್ಕಿಂತ ಹೆಚ್ಚು ಕೊಂಬುಗಳು ಇರೋ ಸ್ಟೋರಿಯನ್ನೂ ಕೇಳಿದ್ದೀರ. ಆದ್ರೆ ಕುರಿಯ ಕಿವಿಯಲ್ಲಿ ಬಾಯಿ ಬೆಳವಣಿಗೆ ಆಗಿರೋದನ್ನ ಎಲ್ಲಾದ್ರೂ ಕೇಳಿದ್ದೀರಾ? ಹೌದು. ಇಂತಹದ್ದೊಂದು ಅಪರೂಪದ ಕುರಿ ಟರ್ಕಿಯಲ್ಲಿದೆ. ಮಾಲೀಕ ಅಲಿ ದುಮಾನ್ ಒಮ್ಮೆ ಕುರಿಗಳ ಉಣ್ಣೆ ಕತ್ತರಿಸುತ್ತಿದ್ರು. ಎರಡು ಮೂರು ಕುರಿಗಳ ಉಣ್ಣೆಯನ್ನ ಕಟ್ ಮಾಡಿ ಮತ್ತೊಂದು ಕುರಿಯ ಉಣ್ಣೆ ಕಟ್ ಮಾಡುವಾಗ ಆಕಸ್ಮಿಕವಾಗಿ ಅದರ ಕಿವಿಯನ್ನ ಕಟ್ ಮಾಡಿದ್ದರು.  ನಂತರ ಗಾಬರಿಯಿಂದ ಅದರ ಕಿವಿಯನ್ನ ಪರಿಶೀಲಿಸಿದ್ದಾರೆ. ಈ ವೇಳೆ ಕುರಿಯ ಕಿವಿಯೊಳಗೆ ಬಾಯಿ ಬೆಳವಣಿಗೆಯಾಗಿರೋದನ್ನ ಕಂಡು ಅಚ್ಚರಿಗೊಂಡಿದ್ದಾರೆ. ಇದನ್ನ ನೋಡಿ ನಾನು ನಡುಗಲು ಶುರುವಾದೆ. ನಾನು ಈ ರೀತಿ ನೋಡಿರುವುದು ಇದೇ ಮೊದಲು. ಪಶುವೈದ್ಯರು ಕೂಡ ಈ ರೀತಿ ಎಂದೂ ನೋಡಿಲ್ಲ ಎಂದಿದ್ದಾರೆ ಅಂತ ಅಲಿ ಹೇಳಿದ್ದಾರೆ. https://ainlivenews.com/sore-throat-cough-problem-in-winter-make-these-things-and-drink-tea/ ಪಶುವೈದ್ಯರಾದ ಯೂಸಫ್ ಯಿಲ್ಡಿಸ್ ಕುರಿಯನ್ನ ಪರೀಕ್ಷಿಸಿದ್ದು, ಅದರ ಕಿವಿಯೊಳಗೆ ಬೆಳವಣಿಗೆ ಯಾಗ್ತಿರೋ ಬಾಯಿಯಲ್ಲಿ ಹಲ್ಲು ಕೂಡ…

Read More

ಬೆಂಗಳೂರು:- ಕೋವಿಡ್ ರೂಪಾಂತರ ತಳಿ ಬಗ್ಗೆ ಆತಂಕ ಬೇಡ ಎಂದು ಸಚಿವ ಡಾ.ಶರಣ ಪ್ರಕಾಶ್​ ಪಾಟೀಲ್ ಹೇಳಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ರಾಜ್ಯದಲ್ಲಿ 22 ಮೆಡಿಕಲ್ ಹಾಗು ಎರಡು ಇಎಸ್‍ಐ ಮೆಡಿಕಲ್ ಕಾಲೇಜುಗಳಿವೆ. 8-9 ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾಪವಿದೆ. ಆರ್ಥಿಕ ಸಂಪನ್ಮೂಲಕ್ಕನುಗುಣವಾಗಿ ಜಿಲ್ಲೆಗೊಂದರಂತೆ ಹಂತಹಂತವಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ನೇಮಕಾತಿ ನಡೆದಿಲ್ಲ. ಪಿಎಸ್‍ಐ ಸೇರಿದಂತೆ ಕೆಲವು ನೇಮಕಾತಿಗಳು ಅವ್ಯವಹಾರಗಳ ಆರೋಪದಿಂದಾಗಿ ವಿಳಂಬವಾಗಿವೆ. ಸರ್ಕಾರ ಈ ಬಾರಿ ನೇಮಕಾತಿಗೆ ವಿಶೇಷ ಆದ್ಯತೆ ನೀಡಲಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಒತ್ತು ನೀಡಲಾಗುವುದು. ನೇಮಕಾತಿಯಲ್ಲಿ ಪಾರದರ್ಶಕತೆ ತರಲಾಗುವುದು ಎಂದರು. ಯುವ ಸಮುದಾಯಕ್ಕೆ ಹೆಚ್ಚಿನ ಉದ್ಯೋಗ ಒದಗಿಸಲು ಅವರ ಕೌಶಲ್ಯ ವೃದ್ಧಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಶಿಕ್ಷಣ…

Read More

ಬೆಂಗಳೂರು:- ಪೊಲೀಸ್ ಕಾನ್​ಸ್ಟೆಬಲ್​ಗೆ ಬೆಂಕಿ ಹಚ್ಚಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ರಾಹುಲ್‌ ಕುಮಾರ್ ಶಹಾಪುರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಡಿಸೆಂಬರ್ 6ರಂದು ಕಾನ್ಸ್‌ಟೆಬಲ್‌ಗೆ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಬಂದಿತ್ತು. ಅಡುಗೆ ಮಾಡಬೇಕಾದರೆ ಅನಿಲ ಸೋರಿಕೆಯಾಗಿ ಬೆಂಕಿ ವ್ಯಾಪಿಸಿದ್ದರಿಂದ ಸುಟ್ಟುಗಾಯವಾಗಿದೆ ಎಂದು ಆರಂಭದಲ್ಲಿ ಸಂಜಯ್ ಹೇಳಿಕೆ ನೀಡಿದ್ದರು. ಕಳೆದ ಎರಡು ದಿವಸದ ಹಿಂದೆ ತಮ್ಮ ಹೇಳಿಕೆ ಬದಲಿಸಿ ಪರಿಚಯಸ್ಥ ಮಹಿಳೆಯೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಿದ್ದರು. ಸದ್ಯ ಆಕೆಯನ್ನು ವಶ ಪಡೆದು ವಿಚಾರಣೆ ನಡೆಸಲಾಗಿದೆ‌ ಎಂದು ತಿಳಿಸಿದ್ದಾರೆ.

Read More

ಹೊಂಬಾಳೆ ಫಿಲ್ಮ್ಸ್‌ನ (Hombale Films) ಮಹತ್ವಾಕಾಂಕ್ಷೆಯ ಚಿತ್ರವಾದ `ಸಲಾರ್ ಪಾರ್ಟ್ 1: ಸೀಸ್‍ಫೈರ್’ (Salaar: Part 1 – Ceasefire), ಡಿ.22ರಂದು ಜಗತ್ತಿನಾದ್ಯಂತ ಬಿಡುಗಡೆ. ಈ ಮಧ್ಯೆ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್ – ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡದಿರುವುದಕ್ಕೆ ಹೊಂಬಾಳೆ ಫಿಲ್ಮ್ಸ್ ತೀರ್ಮಾನಿಸಿದೆ. ಇಂಥದ್ದೊಂದು ನಿರ್ಧಾರಕ್ಕೆ ಕಾರಣವಾಗಿರುವುದು ಶಾರುಖ್ ಖಾನ್ ಅಭಿನಯದ `ಡಂಕಿ’ (Dunki) ಚಿತ್ರ ಡಿ.21ರಂದು ಬಿಡುಗಡೆಯಾಗುತ್ತಿರುವುದು. ಸಲಾರ್ ಪಾರ್ಟ್ 1: ಸೀಸ್‍ಫೈರ್ ಜೊತೆಗೆ ಕ್ಲಾಶ್ ಆಗಲಿದೆ. ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಡಂಕಿ ಚಿತ್ರ ವಿತರಕರು ಮಾತ್ರ ತಮಗೆ ನಾಲ್ಕೂ ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು. ಯಾವಾಗ ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡಿತೋ, ಆಗ `ಡಂಕಿ’ ಚಿತ್ರದ ವಿತರಕರು ಮಲ್ಟಿಪ್ಲೆಕ್ಸ್‌ನತ್ತ ವಾಲಿದರು. ಅಲ್ಲಿ ಹೆಚ್ಚು ಪ್ರದರ್ಶನಗಳನ್ನು ಗಿಟ್ಟಿಸಿದರು. ಪಿವಿಆರ್…

Read More

ಚಹಾ ಮತ್ತು ಕಾಫಿಯ ಪಿ.ಹೆಚ್ ಮೌಲ್ಯವು ಆಮ್ಲೀಯತೆಯ ಅಪಾಯವನ್ನು ಹೆಚ್ಚಿಸುತ್ತದೆ.   ಹಾಗಿರುವಾಗ  ನೀವು ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸಿದರೆ ಅದು ಅಸಿಡಿಟಿ ಮತ್ತು ಎದೆಯುರಿ ಸಮಸ್ಯೆಯನ್ನು ಉಂಟುಮಾಡಬಹುದು.  ಅಷ್ಟೇ ಅಲ್ಲ ಚಯಾಪಚಯ ಕ್ರಿಯೆಯು ಇದರಿಂದಾಗಿ ತೊಂದರೆಗೀಡಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ನಿಮಗೂ ಇದ್ದರೆ ಬೆಳಗ್ಗೆ ಎದ್ದ ತಕ್ಷಣ ಚಹಾ  ಏಕೆ ಕಾಫಿಯನ್ನು ಕುಡಿಯಬಾರದು ಮತ್ತು ಚಹಾವನ್ನು ಕುಡಿಯಲು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿಯಿರಿ. ನಿರ್ಜಲೀಕರಣ; ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.  ರಾತ್ರಿ ಸುಮಾರು 8 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡುತ್ತೇವೆ. ಇದರಿಂದ ಹೊಟ್ಟೆಯು ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಹಾಗಿರುವಾಗ ಬೆಳಗ್ಗೆ ಎದ್ದ ತಕ್ಷಣ ಚಹಾ ಸೇವಿಸಿದರೆ ಅದು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಈ ನಿರ್ಜಲೀಕರಣವು ಸ್ನಾಯು ಸೆಳೆತ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ: ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಮತ್ತು ಇದರಿಂದಾಗಿ  ಗಂಟೆಗಟ್ಟಲೆ ಆಹಾರವನ್ನು…

Read More