Author: AIN Author

IPL ಮಿನಿ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ವೆಸ್ಟ್ ಇಂಡೀಸ್‌ ವೇಗಿ ಅಲ್ಝಾರಿ ಜೋಸೆಫ್‌ ಅವರನ್ನು 11.50 ರೂ. ಗಳಿಗೆ ಖರೀದಿಸಿದೆ. ಆದರೆ, ಮಿಚೆಲ್‌ ಸ್ಟಾರ್ಕ್‌ ಹಾಗೂ ರಚಿನ್‌ ರವೀಂದ್ರ ಅವರನ್ನು ಖರೀದಿಸಲು ಆಸಕ್ತಿ ತೋರದೆ ಅಲ್ಝಾರಿ ಜೋಸೆಫ್‌ ಅವರನ್ನು ಖರೀದಿಸಿದ ಬೆಂಗಳೂರು ಫ್ರಾಂಚೈಸಿ ವಿರುದ್ದ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ನಂತರ ಎರಡನೇ ಅವಧಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ಹಗ್ಗ-ಜಗ್ಗಾಟ ನಡೆದಿತ್ತು. ಆದರೆ, ಅಂತಿಮವಾಗಿ ಆರ್‌ಸಿಬಿ ಅಂಟಿಗುವಾ ಮೂಲದ ವೇಗಿಯನ್ನು ಖರೀಸುವಲ್ಲಿ ಯಶಸ್ವಿಯಾಯಿತು. ಸ್ಟಾರ್‌ ಆಟಗಾರರನ್ನು ಬಿಟ್ಟು ವೆಸ್ಟ್ ಇಂಡೀಸ್‌ ವೇಗಿಯನ್ನು ಖರೀದಿಸಿದ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್‌ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ಇದು ಅತ್ಯಂತ ಕೆಟ್ಟ ಖರೀದಿ ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ಇನ್ನು ಕೆಲವರು ಆರ್‌ಸಿಬಿ ಮಿಚೆಲ್‌ ಸ್ಟಾರ್ಕ್‌ ಅವರನ್ನು ಖರೀದಿಸಬಹುದೆಂದು ನಿರೀಕ್ಷೆ ಮಾಡಿದ್ದೆವು. ಆದರೆ, ಅಲ್ಝಾರಿ ಜೋಸೆಫ್‌ ಅವರನ್ನು ಖರೀದಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಪ್ರತಿ ವರ್ಷದಂತೆ, ಬಾಕ್ಸ್ ಆಫೀಸ್ ತನ್ನ ಒಟ್ಟು ಸಂಗ್ರಹವನ್ನು ಬಹಿರಂಗಪಡಿಸುತ್ತದೆ, ಇದು ಸಂಖ್ಯೆಯಲ್ಲಿ ದೊಡ್ಡದಾಗಿದೆ ಮತ್ತು ದೊಡ್ಡ ಪಾಲು ಬಾಲಿವುಡ್‌ನದ್ದಾಗಿದೆ, ಈ ವರ್ಷ ವಿಶ್ವದಾದ್ಯಂತ 11831.56 ಕೋಟಿಗಳಿಗಿಂತ ಹೆಚ್ಚು ಸಂಗ್ರಹವಾಗಿದೆ, ಒಟ್ಟು ಹಿಂದಿ ನಿವ್ವಳ ಸಂಗ್ರಹವು 4168.78 ಕೋಟಿಗಳು, ಒಟ್ಟು ಹಿಂದಿ ಒಟ್ಟು ಸಂಗ್ರಹಣೆ 5616.4 ಆಗಿದೆ. ಕೋಟಿಗಳು ಮತ್ತು ಒಟ್ಟು ಸಾಗರೋತ್ತರ 1925.7 ಕೋಟಿಗಳು. ಇನ್ನು, ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಯಾಗಬೇಕಿರುವುದರಿಂದ ಒಂದಷ್ಟು ಕಲೆಕ್ಷನ್ ಉಳಿದಿದೆ. ಇತ್ತೀಚಿನ ಬಾಕ್ಸ್ ಆಫೀಸ್ ಅಪ್‌ಡೇಟ್ ಪ್ರಕಾರ, ಅನಿಮಲ್ 19 ದಿನಗಳಲ್ಲಿ 524.64 ಕೋಟಿ ಗಳಿಸಿದೆ. ಮತ್ತೊಂದೆಡೆ, ಸ್ಯಾಮ್ ಬಹದ್ದೂರ್ 18 ದಿನಗಳಲ್ಲಿ 75.50 ಕೋಟಿ ಗಳಿಸಿದೆ. ಸೂಪರ್-ಡ್ಯೂಪರ್ ಹಿಟ್: 100 ಕೋಟಿ+ ಕಲೆಕ್ಷನ್ ಜೊತೆಗೆ 200% ಆದಾಯ ಗಳಿಸುವ ಚಿತ್ರ ಹಿಟ್: ಬಂಡವಾಳವನ್ನು ದ್ವಿಗುಣಗೊಳಿಸುವ ಚಿತ್ರ ಸೂಪರ್-ಹಿಟ್: ಹೆಚ್ಚುವರಿ 50% ರಷ್ಟು ಹೂಡಿಕೆಯನ್ನು ದ್ವಿಗುಣಗೊಳಿಸುವ ಚಲನಚಿತ್ರ ಸರಾಸರಿ: ಹೂಡಿಕೆಯನ್ನು ಮಾತ್ರ ಮರುಪಡೆಯುವ ಚಲನಚಿತ್ರ ಜೊತೆಗೆ: ಹೂಡಿಕೆಯನ್ನು ಹಿಂಪಡೆಯುವ ಮತ್ತು ಸ್ವಲ್ಪ ಲಾಭವನ್ನು ನೀಡುವ…

Read More

ಬೆಂಗಳೂರು: ಮಿನಿ ಹರಾಜಿನಲ್ಲಿ ತಂಡಕ್ಕೆ ಅವಶ್ಯಕತೆ ಇದ್ದ ಆಟಗಾರರನ್ನು ಖರೀದಿಸಿ ಎಲ್ಲ ವಿಭಾಗಗಳನ್ನು ಬಲಿಷ್ಠಗೊಳಿಸಿದ್ದೇವೆ ಎಂದು ಪಂಟರ್ ಸಂತಸ ವ್ಯಕ್ತಪಡಿಸಿದ್ದಾರೆ.ಇಂಗ್ಲೆಂಡ್ ತಂಡದ ಯುವ ಆಲ್‌ರೌಂಡರ್ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಡಿಸೆಂಬರ್ 19 (ಮಂಗಳವಾರ) ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಜಾಣ್ಮೆ ನಡೆ ಪ್ರದರ್ಶಿಸಿ 9 ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿಸಿದೆ. ಮಿನಿ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿ 10 ಆಟಗಾರರನ್ನು ಬಿಡುಗಡೆಗೊಳಿಸಿತ್ತು. 2023ರ ಐಪಿಎಲ್ ಆವೃತ್ತಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಡಿಸಿ 9ನೇ ಸ್ಥಾನವನ್ನು ಅಲಂಕರಿಸಿತ್ತು. ಮಿನಿ ಹರಾಜಿನಲ್ಲಿ ತಂಡಕ್ಕೆ ಬೇಕಾಗಿದ್ದ ಆಟಗಾರರನ್ನು ಖರೀದಿಸಿ ಎಲ್ಲ ವಿಭಾಗಗಳನ್ನು ಬಲಿಷ್ಠಗೊಳಿಸಿದ್ದೇವೆ. ಅಲ್ಲದೆ ಫ್ರಾಂಚೈಸಿಗೆ 10 ಕೋಟಿವರೆಗೂ ಹಣವನ್ನು ಉಳಿ‌ಸಿದ್ದೇವೆ. ನಮ್ಮ ಈ ನಡೆಯಿಂದ ಫ್ರಾಂಚೈಸಿ ತುಂಬಾ ಸಂತಸಪಟ್ಟಿದೆ. ನಾವು ಬಯಸಿದಂತೆ ಶೇ.90 ರಷ್ಟು ನಮಗೆ ಬೇಕಾಗಿದ್ದ ಅವಶ್ಯಕತೆಯನ್ನು ಪೂರೈಸಿಕೊಂಡಿದ್ದೇವೆ. ಮಿನಿ ಹರಾಜಿನಲ್ಲಿ ನಾವು ಉತ್ತಮ ಕೆಲಸ ಮಾಡಿದ್ದೇವೆ,” ಎಂದು …

Read More

ದೇವನಹಳ್ಳಿ:- ರಾಜ್ಯದಲ್ಲಿ ಕರೋನಾ ಜೆ.ಎನ್.1 ಆತಂಕ ಹೆಚ್ಚಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಕೇಸ್ ಪತ್ತೆಯಾಗಿದೆ. ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಕರೋನಾ ಕೇಸ್ ಪತ್ತೆ ಆಗಿದ್ದು, ಸ್ಪರ್ಶ ಮಕ್ಕಳಧಾಮದಲ್ಲಿದ್ದ ಓರ್ವ ಮಗುವಿಗೆ ಕರೋನಾ ಪಾಸಿಟಿವ್ ಬಂದಿದೆ. ಜ್ವರ ಕೆಮ್ಮು ಎಂದು ಟೆಸ್ಟ್ ಮಾಡಿಸಿದ್ದ ಮಗುವಿಗೆ ಕರೋನಾ ದೃಢವಾಗಿದೆ. ಮೊದಲ ಕೇಸ್ ಹಿನ್ನಲೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಹೈಸೊಲೇಷನ್ ಮಾಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಕರೋನಾ ಕೇಸ್ಗಳು ಜೀರೋ ಇದ್ದವು. ಇದೀಗ ಟೆಸ್ಟಿಂಗ್ ಮಾಡುತ್ತಿರುವ ಹಿನ್ನಲೆ ಒಂದೊಂದೆ ಕೇಸ್ಗಳ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾ.ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ಹೇಳಿಕೆ ನೀಡಿದ್ದಾರೆ.

Read More

ಮಂಡ್ಯ:ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ತನ್ನ ಮಗನಿಗೆ ಟಿಕೆಟ್‌ ನೀಡಿ, ನನ್ನನ್ನು ಸಾಲಗಾರನ್ನಾಗಿ ಮಾಡಿದರು ಎಂದು ಮಾಜಿ ಸಂಸದ ಎಲ್‌ಆರ್‌ ಶಿವರಾಮೇಗೌಡ ಬೇಸರವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ವಾಗ್ದಾಳಿ ನಡೆಸಿದರು. ” ಎಂಪಿ ಚುನಾವಣೆಯಲ್ಲಿ ನನಗೆ ಕೇವಲ 6 ತಿಂಗಳು ಎಂಪಿ ಮಾಡಿದರು. ಆ ಬಳಿಕ ಮಗನಿಗೆ ಟಿಕೆಟ್ ನೀಡಿ ನನನ್ನು ದೊಡ್ಡ ಸಾಲಗಾರನಾಗಿ ಮಾಡಿದರು ” ಎಂದು ಆರೋಪಿಸಿದ್ದಾರೆ. https://ainlivenews.com/sore-throat-cough-problem-in-winter-make-these-things-and-drink-tea/ ನಾನೇನು ತಪ್ಪು ಮಾಡಿರಲಿಲ್ಲ ಆದರೂ ಪಕ್ಷದಿಂದ ಕಿತ್ತು ಹಾಕಿದರು. ಈಗಾಗಲಾದರು ದೊಡ್ಡ ಮನಸ್ಸು ಮಾಡಿ ಶಿವರಾಮೇಗೌಡರಿಗೆ ಅನ್ಯಾಯ ಮಾಡಿಲ್ಲ ಅಂದರೆ ನನ್ನನ್ನೇ ಅಭ್ಯರ್ಥಿ ಮಾದಲಿ. ಅವರೇ ಈಗ ತೀರ್ಮಾನ ತಗೊಂಡು, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿ ಎಂದು ಹೇಳಿದರು. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸುವುದಾದರೆ ಬೆಂಬಲ ನೀಡುವುದರಲ್ಲಿ ನಾನೇ ಮೊದಲಿಗ ಎಂದರು.

Read More

ಬೆಂಗಳೂರು :- ಇಂದಿನಿಂದ ಎಮ್ಮೆ ಹಾಲು ರಾಜ್ಯದ ಮಾರುಕಟ್ಟೆಯನ್ನು ಪ್ರವೇಶ ಮಾಡುತ್ತಿದೆ. ಎಮ್ಮೆ ಹಾಲಿಗೆ ಗ್ರಾಹಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿರುವ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಹಾಗಂತ ಕೆಎಂಎಫ್‌ ವತಿಯಿಂದ ಎಮ್ಮೆ ಹಾಲನ್ನು ಪೂರೈಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ ಸಹ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡಲಾಗಿತ್ತು. ಆದರೆ, ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಆ ಸಮಯದಲ್ಲಿ ಸುಮಾರು ಅಂದು 5000 ಲೀಟರ್ ಹಾಲನ್ನು ಕೆಎಂಎಫ್‌ ಮಾರಾಟ ಮಾಡುತ್ತಿತ್ತು. ಆದರೆ, ಈಗ ಮತ್ತೆ ಹೊಸ ರೂಪದಲ್ಲಿ ಬರುತ್ತಿದೆ.

Read More

2024ರ ಐಪಿಎಲ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ಅವರನ್ನು ಇಂಪ್ಯಾಕ್ಟ್ ಪ್ಲೆಯರ್ ರೂಪದಲ್ಲಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. 17ನೇ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಪಂಜಾಬ್‌ ಫ್ರಾಂಚೈಸಿ ಹರ್ಷಲ್ ಪಟೇಲ್ (11.75 ಕೋಟಿ) ಹಾಗೂ ಕ್ರಿಸ್ ವೋಕ್ಸ್ (4.2 ಕೋಟಿ) ಅವರನ್ನು ಖರೀದಿಸಿ ವೇಗದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. 2024ರ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಹರ್ಷಲ್ ಪಟೇಲ್ ಹಾಗೂ ಕ್ರಿಸ್ ವೋಕ್ಸ್ ಅವರನ್ನು ಖರೀದಿಸಿದ ನಂತರ ಸಂಜಯ್ ಬಾಂಗರ್‌ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಕ್ರಿಸ್ ವೋಕ್ಸ್ ಅವರು ಕಗಿಸೊ ರಬಾಡ ಹಾಗೂ ಸ್ಯಾಮ್ ಕರನ್ ಅವರೊಂದಿಗೆ ವೇಗದ ಬಲವನ್ನು ಹೆಚ್ಚಿಸಿದ್ದಾರೆ. ಟೀಮ್ ಇಂಡಿಯಾದ ವೇಗದ ಬೌಲರ್ ಕೂಡ ಅಪಾರ ಮೌಲ್ಯ ತಂದುಕೊಡಲಿದ್ದಾರೆ. ಹರ್ಷಲ್ ಪಟೇಲ್ ಅವರು ಮಧ್ಯಮ ಹಾಗೂ ಡೆತ್ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಾರೆ. ಅವರನ್ನು ತಂಡದಲ್ಲಿ ಇಂಪ್ಯಾಕ್ಟ್ ಪ್ಲೆಯರ್ ರೂಪದಲ್ಲಿ ಬಳಸಿಕೊಳ್ಳಲು ನಮಗೆ ಉತ್ತಮ ಆಯ್ಕೆಯಾಗಿದ್ದಾರೆ. ಕ್ರಿಸ್‌ ವೋಕ್ಸ್ ಹಾಗೂ ಹರ್ಷಲ್ ಪಟೇಲ್ ಖರೀದಿಗೆ…

Read More

ದಾವಣಗೆರೆ :- ಕಾಂಗ್ರೆಸ್ಸಿಗರು ತಮ್ಮ ಮನೆಗೆ ಟಿಪ್ಪು ಹೆಸರಿಡಲಿ ಎಂದು ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ ಸಚಿವರು ತಮ್ಮ ಮನೆಗಳಿಗೆ ಟಿಪ್ಪು ಮಂಜಿಲ್‌, ಔರಂಗಜೇಬ್ ಮಂಜಿಲ್ ಅಥವಾ ನಿವಾಸ ಅಂತಾ ಹೆಸರಿಟ್ಟುಕೊಳ್ಳಲಿ. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಾವು ತೀವ್ರವಾಗಿ ಖಂಡಿಸುತ್ತೇವೆ. ಓಟು ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಕುಕ್ಕರ್ ಬ್ಲಾಸ್ಟ್ ಆದಾಗ ಅಲ್ಪಸಂಖ್ಯಾತರು ತಮ್ಮ ಸಹೋದರರೆಂದು ಇದೇ ಡಿಸಿಎಂ ಡಿ.ಕೆ.ಶಿವಕುಮಾರ ಹೇಳುತ್ತಾರೆ. ಮೈಸೂರು ಮಹಾರಾಜ, ಸುತ್ತೂರು ಶ್ರೀಗಳಂತಹವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಿ. ಆದರೆ, ಓಟು ಬ್ಯಾಂಕ್‌ಗಾಗಿ ಟಿಪ್ಪುನಂತಹ ಮತಾಂಧರ ಹೆಸರಿಡುವುದಲ್ಲ. ಯಾವುದೇ ಕಾರಣಕ್ಕೂ ಟಿಪ್ಪು ಹೆಸರಿಡಲು ನಾವು ಬಿಡುವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು ಸಿದ್ದರಾಮಯ್ಯಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬರ ಪರಿಹಾರವಾಗಿ ಎಕರೆಗೆ 25 ಸಾವಿರ ರು. ನೀಡಲಿ. ನಿಮ್ಮ ಘೋಷಣೆಗಳು, ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿದ್ದು, ಕಾರ್ಯ ರೂಪಕ್ಕಂತೂ ಬಂದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ…

Read More

ಏಳು ದಿನದಲ್ಲಿ ಒಂದೇ ಕುಟುಂಬದ 6bಜನರನ್ನು ಕಿರಾತಕರುಲ ಕೊಲೆ ಮಾಡಿದ್ದು, ಕಾರಣ ಕೇಳಿದ್ರೆ ಶಾಕ್ ಹಾಗ್ತೀರಾ!? ಪ್ರಸಾದ್ ಮತ್ತು ಪ್ರಶಾಂತ್ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮುಟುಕೂರ್ ಗ್ರಾಮದವರು. ಇವರಿಬ್ಬರೂ ಬಾಲ್ಯದಿಂದಲೂ ಆತ್ಮೀಯ ಗೆಳೆಯರು. ವ್ಯಾಪಾರದಲ್ಲಿ ನಷ್ಟ, ಮನೆಯಲ್ಲಿ ಬಡತನ ಸೇರಿದಂತೆ ನಾನಾ ಕಾರಣಗಳಿಂದ ಪ್ರಸಾದ್ ಹಲವರಿಂದ ಹಣ ಪಡೆದು ಸಾಲಗಾರನಾಗಿದ್ದ. ಪ್ರಸಾದ್ ಈಗಾಗಲೇ ಸಾಕಷ್ಟು ಸಾಲ ಪಡೆದಿದ್ದರಿಂದ ಬ್ಯಾಂಕ್‌ನಿಂದ ಆತ ಸಾಲ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಸಾದ್‌ಗೆ ಸಹಾಯ ಮಾಡುವುದಾಗಿ ಹೇಳಿದ ಸ್ನೇಹಿತ ಪ್ರಶಾಂತ್ ಬ್ಯಾಂಕ್‌ನಲ್ಲಿ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೆ ಪ್ರಸಾದ್‌ನ ಹೆಸರಲ್ಲಿರುವ ಮನೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿದರೆ ತಕ್ಷಣವೇ ಬ್ಯಾಂಕ್‌ನಿಂದ ಸಾಲ ಪಡೆಯಬಹುದು ಎಂದು ಹೇಳಿದ್ದಾನೆ. ಪ್ರಶಾಂತ್‌ನ ಮಾತು ನಂಬಿದ ಪ್ರಸಾದ್ ತನ್ನ ಮನೆಯನ್ನು ಆತನಿಗೆ ದಾಖಲೆ ರೂಪದಲ್ಲಿ ಬರೆದು ಕೊಟ್ಟಿದ್ದಾನೆ. ಮನೆ ಬರೆದು ಬಹಳ ದಿನಗಳಾದರೂ ಪ್ರಶಾಂತ್ ಬ್ಯಾಂಕಿನಿಂದ ಸಾಲ ಪಡೆದಿರಲಿಲ್ಲ. ಇದರಿಂದಾಗಿ ಪ್ರಸಾದ್ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಹೇಳಿದ್ದಾನೆ. ಆದರೆ ಅದಾಗಲೇ…

Read More

ಆಪಲ್ ವಾಚ್ ಸರಣಿ 9 ಮತ್ತು ವಾಚ್ ಅಲ್ಟ್ರಾ 2 ಮಾರಾಟವನ್ನು ಶೀಘ್ರದಲ್ಲೇ ಯುಎಸ್‌ನಲ್ಲಿ ನಿಲ್ಲಿಸಲಾಗುವುದು. ಆಪಲ್ ವಾಚ್‌ನ ರಕ್ತ ಆಮ್ಲಜನಕ ಸಂವೇದಕ ತಂತ್ರಜ್ಞಾನವು ತಮ್ಮ ಹಲವಾರು ಪೇಟೆಂಟ್‌ಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳುವ ವೈದ್ಯಕೀಯ ತಂತ್ರಜ್ಞಾನ ಕಂಪನಿಯಾದ ಆಪಲ್ ಮತ್ತು ಮಾಸಿಮೊ ನಡುವಿನ ಪೇಟೆಂಟ್ ವಿವಾದದ ಸುತ್ತಲಿನ ಇಂಟರ್ನ್ಯಾಷನಲ್ ಟ್ರೇಡ್ ಕಮಿಷನ್ (ಐಟಿಸಿ) ತೀರ್ಪಿನ ನಂತರ ಇದು ಬರುತ್ತದೆ. ಪ್ರಕರಣವು ಈಗ ಡಿಸೆಂಬರ್ 25 ರಂದು ಕೊನೆಗೊಳ್ಳುವ 60-ದಿನಗಳ ಅಧ್ಯಕ್ಷೀಯ ಪರಿಶೀಲನಾ ಅವಧಿಯ ಅಡಿಯಲ್ಲಿದೆ. ಕ್ಯುಪರ್ಟಿನೋ-ಆಧಾರಿತ ಟೆಕ್ ದೈತ್ಯ ಪೀಡಿತ ಕೈಗಡಿಯಾರಗಳು ರಕ್ತದ ಆಮ್ಲಜನಕದ ಮಟ್ಟವನ್ನು ಹೇಗೆ ಅಳೆಯುತ್ತವೆ ಎಂಬುದನ್ನು ಬದಲಾಯಿಸಲು ಸಾಫ್ಟ್‌ವೇರ್ ಫಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಳೂ ಇವೆ. ಸಂಭವನೀಯ ಮಾರಾಟ ನಿಷೇಧ. 9to5Mac ಗೆ ನೀಡಿದ ಹೇಳಿಕೆಯಲ್ಲಿ, ವಾಚ್ ಅಲ್ಟ್ರಾ 2 ಮತ್ತು Apple Watch Series 9 ಕಂಪನಿಯ US ವೆಬ್‌ಸೈಟ್‌ನಿಂದ ಡಿಸೆಂಬರ್ 21, ಗುರುವಾರ 3pm ET ನಂತರ ಆರ್ಡರ್ ಮಾಡಲು ಲಭ್ಯವಿರುವುದಿಲ್ಲ ಎಂದು Apple ದೃಢಪಡಿಸಿತು,…

Read More