Author: AIN Author

ಮೈಸೂರು:- ಇತ್ತೀಚೆಗೆ ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು. ಸಂವಿಧಾನ ವಿರೋಧಿಗಳನ್ನೂ ಪ್ರಶ್ನಿಸದೇ ಹೋದರೆ, ಅವರನ್ನೂ ನೀವು ಗೌರವದಿಂದ ನಡೆಸಿಕೊಂಡರೆ ನಿಮ್ಮನ್ನು ಸಮಾಜದ ನಾಲ್ಕನೇ ಅಂಗ ಅಂತ ಕರೆಯೋಕೆ ಆಗ್ತದಾ? ವಸ್ತುನಿಷ್ಠ ಸುದ್ದಿ-ಸತ್ಯದ ವರದಿ ಮಾತ್ರ ಸಮಾಜಮುಖಿಯಾಗಿರುತ್ತದೆ ಎಂದು ಹೇಳಿದರು. ಅಸಮಾನತೆ ಯಾಕಿನ್ನೂ ಸಮಾಜದಲ್ಲಿದೆ, ಸಂವಿಧಾನದ ವಿರುದ್ಧ ಮಾತಾಡುವವರೂ ಇದ್ದಾರೆ. ಇಂಥವರಿಂದ ಸಮಾಜಕ್ಕೆ ಆಗುವ ಹಾನಿಯನ್ನು ಪತ್ರಕರ್ತರು ವಿಶ್ಲೇಷಿಸಿ ಬರೆಯಬೇಕು. ಇವತ್ತು ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿಪರತೆ ಇಲ್ಲವಾಗಿ ವ್ಯಾಪಾರ ಹೆಚ್ಚಾಗಿರುವುದು ಅನಾರೋಗ್ಯಕಾರಿ ಬೆಳವಣಿಗೆ. ಸಣ್ಣ ಪತ್ರಿಕೆಗಳ ತವರೂರು ಮೈಸೂರು ಪತ್ರಿಕಾ ವೃತ್ತಿ ಪರತೆಗೆ ಹೆಸರಾಗಿತ್ತು ಎಂದರು. ಓದುಗರು ಮಾಧ್ಯಮಗಳ ಬಗ್ಗೆ ಕುತೂಹಲ, ಆಸಕ್ತಿ ಕಳೆದುಕೊಂಡರೆ ಅದಕ್ಕೆ ವೃತ್ತಿಪರತೆ ಇಲ್ಲವಾಗಿದ್ದೇ ಕಾರಣ. ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೂ ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೇನು ನಷ್ಟ? ಸಮಾಜಕ್ಕೇನು ನಷ್ಟ ಎಂದು ಪ್ರಶ್ನಿಸಿದರು. ಗಂಡ ಹೆಂಡತಿ ಜಗಳ ಸುದ್ದಿ…

Read More

ಬೆಂಗಳೂರು:- ಕೇಂದ್ರ ವ್ಯಾಪ್ತಿಯಲ್ಲಿ ಬರುವ 7 ವಿಧಾನ ಸಭಾ ಕ್ಷೇತ್ರ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಪ್ರಮಾಣವನ್ನು ಇನ್ನೂ ಹೆಚ್ಚು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬೆಂಗಳೂರು ಕೇಂದ್ರದ ಮತದಾರರ ಪಟ್ಟಿ ವೀಕ್ಷಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಉಮಾ ಮಹದೇವನ್, ಭಾ.ಆ.ಸೇ ರವರು ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಬರುವ ಲಿಂಗ ಪ್ರಮಾಣ, ಚುನಾವಣಾ ಜನಸಂಖ್ಯೆ(EP) ಪ್ರಮಾಣ ಹಾಗೂ ಯುವ ಮತದಾರರ ನೋಂದಣಿ ಪ್ರಮಾಣ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಬರುವ 7 ವಿಧಾನ ಸಭಾ ಕ್ಷೇತ್ರ(ಆರ್‌ಆರ್ ನಗರ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ)ಗಳಲ್ಲಿ ಮತದಾರರ ಪಟ್ಟಿಯಲ್ಲಿ ಲಿಂಗ ಪ್ರಮಾಣವು ಹೆಚ್ಚಾಗಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದುವರೆದು, ಬೆಂಗಳೂರು ಕೇಂದ್ರ ಚುನಾವಣಾ ವಿಭಾಗದಲ್ಲಿ ಚುನಾವಣಾ ಅಧಿಕಾರಿಗಳು ಸೂಪರ್ ಚೆಕ್ಕಿಂಗ್ ಮಾಡಿರುವ ಬಗ್ಗೆ ವಿಚಾರಿಸಿ…

Read More

ಬೆಳಗಾವಿ:- ಕೇಂದ್ರ ಸರ್ಕಾರದಿಂದ ಕಾರ್ಖಾನೆಗಳು ಇಕ್ಕಟ್ಟಿಗೆ ಸಿಲುಕಿವೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿದ ನೀತಿಗಳು ಸಕ್ಕರೆ ಕಾರ್ಖಾನೆಗಳನ್ನು ಚಿಂತೆಗೀಡು ಮಾಡಿವೆ. ಹಲವು ಕಾರ್ಖಾನೆಗಳು ₹200 ಕೋಟಿಯಿಂದ ₹500 ಕೋಟಿಯವರೆಗೆ ಹೂಡಿಕೆ ಮಾಡಿವೆ. ಆದರೆ, ಈಗ ಕೇಂದ್ರ ಸರ್ಕಾರ ಬದಲಿಸಿದ ನೀತಿಯಿಂದ ಕಾರ್ಖಾನೆಗಳು ಇಕ್ಕಟ್ಟಿಗೆ ಸಿಲುಕಿವೆ’ ಎಂದು ಸಕ್ಕರೆ ಸಚಿವರು ಹೇಳಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರವು ಎಥೆನಾಲ್ ಉತ್ಪಾದನೆಯನ್ನು ಪ್ರೋತ್ಸಾಹಿಸಿತ್ತು. ಈಗ ನೇರವಾಗಿ ಎಥೆನಾಲ್ ಉತ್ಪಾದಿಸದಂತೆ ನಿರ್ದೇಶಿಸಿದೆ. ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿ ಹೊಸ ಮಾರ್ಗಸೂಚಿಗಳು ಇನ್ನೂ ಬಂದಿಲ್ಲ’ ಎಂದರು. ‘ಸಕ್ಕರೆ ರಫ್ತು ನಿಷೇಧಿಸಲಾಗಿದೆ. ಒಂದು ವೇಳೆ ರಫ್ತಿಗೆ ಅವಕಾಶ ಕೊಟ್ಟರೆ, ಕಾರ್ಖಾನೆಗಳಿಗೆ ಅನುಕೂಲ ಆಗುತ್ತದೆ. ಅಕ್ಕಿ ಮತ್ತು ಈರುಳ್ಳಿ ರಫ್ತು ನಿಷೇಧಿಸಲಾಗಿದೆ. ಆದರೆ, ತಾಳೆಎಣ್ಣೆ ಆಮದು ಮಾಡಿಕೊಳ್ಳುತ್ತಿರುವ ಕಾರಣ ಕೊಬ್ಬರಿ ಧಾರಣೆ ಕುಸಿದಿದೆ’ ಎಂದು ಹೇಳಿದರು. ‘ಕಾರ್ಖಾನೆಗಳಲ್ಲಿ ರೈತರಿಗೆ ತೂಕದಲ್ಲಿ ಆಗುತ್ತಿರುವ ಮೋಸ ತಪ್ಪಿಸಲು, ಮುಂದಿನ ವರ್ಷದೊಳಗೆ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಯಶವಂತಪುರ ವಿಧಾನಸಭೆ ಕ್ಷೇತ್ರದ ಅಂದ್ರಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದಲೇ ಶೌಚಾಲಯ ಶುಚಿಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಲವು ದಿನಗಳ ಹಿಂದಷ್ಟೇ ಕೋಲಾರ ಜಿಲ್ಲೆ ಮಾಲೂರಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಮಕ್ಕಳ ಕೈಯಲ್ಲಿ ಶೌಚ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ನಡೆದು ಕೋಲಾಹಲವಾಗಿದೆ. ಆ ನೆನಪು ಮಾಸುವ ಮೊದಲೇ ವಿಧಾನಸೌಧದ ಕೂಗಳತೆ ದೂರದಲ್ಲಿರುವ ರಾಜಧಾನಿಯಲ್ಲೇ ಮತ್ತದೇ ಘಟನೆ ಮರುಕಳಿಸಿದೆ. ಇದು ದುರದೃಷ್ಟಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾನೂನಿನ ಅರಿವೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಲಾಖೆ ಮುಖ್ಯಸ್ಥರು ಸರಿ ಇದ್ದರೆ ಇಡೀ ಇಲಾಖೆಯ ವ್ಯವಸ್ಥೆ ಸರಿ ಇರುತ್ತದೆ. ಈಗಾಗಲೇ ಒಂದು ಘಟನೆ ನಡೆದಿರುವ ಬೆನ್ನಲ್ಲೇ ಮತ್ತೆ ಮಕ್ಕಳ ಕೈಯಲ್ಲೇ…

Read More

ಬೆಂಗಳೂರು:- ಜಯ ಕರ್ನಾಟಕ ಜನಪರ ವೇದಿಕೆ ಮುಖ್ಯಸ್ಥ ಗುಣರಂಜನ್‌ ಶೆಟ್ಟಿ ಅವರು ಡಬ್ಲ್ಯು ಎಫ್ಐನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಒಂದು ವರ್ಷದ ಹಿಂದಷ್ಟೇ ರಾಜ್ಯಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಗುಣರಂಜನ್‌, ಖ್ಯಾತ ಸಿನೆಮಾ ನಟಿ ಅನುಷ್ಕಾ ಶೆಟ್ಟಿಯ ಸಹೋದರ ಎನ್ನುವುದು ಗಮನಾರ್ಹ. ಇವರು ಸಂಜಯ್‌ ಸಿಂಗ್‌ ತಂಡದಿಂದ ಈ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಗುಣರಂಜನ್‌ ಅವರ ಹೆತ್ತವರು ಮೂಲತಃ ಪುತ್ತೂರಿನವರು, ಇವರು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕಳೆದ ಹಲವು ವರ್ಷಗಳಿಂದ ಜಯ ಕರ್ನಾಟಕ ಜನಪರ ವೇದಿಕೆಯ ಮೂಲಕ ಹಲವು ಜನಪರ ಚಟುವಟಿಕೆ ನಡೆಸಿದ್ದಾರೆ. ಅದಕ್ಕೂ ಮುನ್ನ ಮುತ್ತಪ್ಪ ರೈ ಅವರ ಜಯ ಕರ್ನಾಟಕದಲ್ಲೂ ಕೆಲಸ ಮಾಡಿದ್ದರು. ಇವರು ಜಂಟಿ ಕಾರ್ಯದರ್ಶಿ ಯಾಗಿರುವುದರಿಂದ ರಾಜ್ಯದಲ್ಲಿ ಕುಸ್ತಿ ಬೆಳವಣಿಗೆಯಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ಕುಸ್ತಿಪಟುಗಳಿಗೆ ಅನುಕೂಲವಾಗಲಿದೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದನ್ನು ವಿನೀತನಾಗಿ ಸ್ವೀಕರಿಸುತ್ತೇನೆ. ಈ ಚುನಾವಣೆಯಿಂದ ಕುಸ್ತಿಪಟುಗಳಿಗೆ ಬಹಳ ಅನುಕೂಲವಾಗಲಿದೆ. 11 ತಿಂಗಳಿಂದ ಕುಸ್ತಿ ಚಟುವಟಿಕೆಗಳು ನಿಂತುಹೋಗಿದ್ದವು, ಅವೆಲ್ಲ ಪುನಾರಂಭವಾಗಲಿವೆ. ಬೃಜ್‌ ಭೂಷಣ್‌ ಡಬ್ಲ್ಯುಎಫ್ಐಗಾಗಿ ತಮ್ಮದೇ ಆದ…

Read More

ಮೈಸೂರು:- ನಾನು ಮುಖ್ಯಮಂತ್ರಿ ಆಗಲು ಒಳ್ಳೆಯ ಮಾರ್ಕ್ಸ್ ಬರದಿರುವುದೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಡಾಕ್ಟರ್ ಆಗಬೇಕು ಆಸೆ ಇತ್ತು. ಅದರೆ ಮಾರ್ಕ್ಸ ಬರಲಿಲ್ಲ.ಆಗ ಮಾರ್ಕ್ಸ್ ಬಾರದೆ ಡಾಕ್ಟರ್ ಸೀಟ್ ಸಿಗದೆ ಇರೋದೆ ಒಳ್ಳೆಯಾದಯಿತು. ನಾನು ಡಾಕ್ಟರ್ ಆಗದೆ ಇರೋದೆ ಒಳ್ಳೆಯಾದಯಿತು, ಸಿಎಂ ಆದೆ ಈಗ ಎಂದರು. ತಮ್ಮ ಹಳೇ ದಿನಗಳನ್ನ ಮೆಲಕುಹಾಕಿದ್ರು. ನಾನು ಓದುತ್ತಿದ್ದ ಕಾಲೇಜಿನ ಬಳಿಯೆ ಮೈಸೂರು ಮೆಡಿಕಲ್ ಕಾಲೇಜ್ ಇತ್ತು. ಕಾಲೇಜ್ ಬಳಿ ಒಂದು ಕ್ಯಾಟೀನ್ ಇತ್ತು. ಅಲ್ಲಿ ದೋಸೆ ತಿನ್ನಲು ಹೋಗುತ್ತಿದ್ದೆ .ಆಗ 19 ಪೈಸೆ ಗೆ ಒಂದು ಮಸಾಲೆ ದೋಸೆ. ಸೆಟ್ ದೋಸೆ 12 ಪೈಸೆ. 12 ಪೈಸೆ ಗೆ 4 ನಾಲ್ಕು ದೋಸೆ. ನಾನು ಕಾಫಿ ಕುಡಿಯೋದು ಬಿಟ್ಟು ಎರಡು ಸೆಟ್ ದೋಸೆ ತಿನ್ನುತ್ತಿದ್ದೆ ಅಂತ ಹೇಳಿದರು. ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಟ್ರೀಟ್ಮೆಂಟ್ ಸಿಗಬೇಕು. ಪ್ರತಿ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ನಿರ್ಮಾಣ ಆಗಬೇಕು. ಕೈಗೆಟುಕುವ…

Read More

ಬಳ್ಳಾರಿ:- ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ ಮಾಡುತ್ತಿದ್ದವನನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಪುನೀತ್ ಕುಮಾರ್ ಬಂಧಿತ ಆರೋಪಿ. ಆರೋಪಿ ಸಂಡೂರು ತಾಲೂಕಿನ ವಡ್ಡು ಗ್ರಾಮದ ಮುಖ್ಯರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ಪಾನ್‌ಶಾಪ್ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಆತನಿಂದ 91 ಪ್ಯಾಕೇಟ್‌ಗಳಲ್ಲಿದ್ದ 36,400 ರೂ. ಮೌಲ್ಯದ 19.05 ಕೆಜಿಯ ಗಾಂಜಾ ಮಿಶ್ರಿತ ಚಾಕಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಚಾಯಲ್ ತಾಲೂಕಿನ ಬಸೇಡಿ ಗ್ರಾಮದವನಾಗಿದ್ದು, ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಪಾನ್‌ಶಾಪ್ ನಡೆಸಿಕೊಂಡು ಹೋಗುತ್ತಿದ್ದ. ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕಿ (ಪ್ರಭಾರ) ಜ್ಯೋತಿಬಾಯಿ ಹಾಗೂ ಅಬಕಾರಿ ನಿರೀಕ್ಷಕರಾದ ಜಗದೀಶ್ ಕಬ್ಬೂರಿ, ಮಲ್ಲಿಕಾರ್ಜುನ್ ಗಸ್ತಿ ಮತ್ತು ದಿಲೀಪ್ ಸಿಂಗ್ ಠಾಕೂರ್, ಸಿಬ್ಬಂದಿ ಉರುಕುಂದಪ್ಪ, ರಾಘವೇಂದ್ರ ಮತ್ತು ಹರೀಶ್ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಲೀಗಿದೆ.

Read More

ಚಿತ್ರದುರ್ಗ:- ಭ್ರಷ್ಟ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜಕಾರಣದಿಂದ ದೂರ ಉಳಿಯುವ ಬಗ್ಗೆ ಆಲೋಚಿಸಿದ್ದೇನೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ ಎಂದರು. ಭ್ರಷಾಚಾರದ ಕುರ್ಚಿಯ ಪಕ್ಕದಲ್ಲಿಯೂ ಕುಳಿತುಕೊಳ್ಳಲು ಇಷ್ಟ ಪಡುವುದಿಲ್ಲ. ರಾಜಕಾರಣದಲ್ಲಿರುವ ಭ್ರಷ್ಟಾಚಾರ ಕಣ್ಣಿಗೆ ಬಿದ್ದಾಗಲೇ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಲ್ಲ. ಭವಿಷ್ಯದ ರಾಜಕಾರಣದಿಂದಲೇ ಹೊರಗುಳಿಯುವೆ’ ಎಂದು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ‘ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್‌ ಆಕಾಂಕ್ಷಿಯಲ್ಲ. ಪಕ್ಷದ ನಿಷ್ಠಾವಂತ ಸೇನಾನಿಯಾಗಿದ್ದು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಅಪೇಕ್ಷೆ. ನಾನೇ ಅಭ್ಯರ್ಥಿಯಾಗಬೇಕು, ನನ್ನ ಮಕ್ಕಳು ರಾಜಕಾರಣಕ್ಕೆ ಬರಬೇಕು ಎಂಬ ಬಯಕೆ ನನಗಿಲ್ಲ. ಪಕ್ಷದ ಸೂಚನೆಯ ಮೇರೆಗೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಪಕ್ಷ ಗುರುತಿಸಿ ಮಂತ್ರಿ ಮಾಡಿದೆ, ಅಷ್ಟು ಸಾಕು’ ಎಂದು ಹೇಳಿದರು. ‘ದೂರದಿಂದ ಚಿತ್ರದುರ್ಗಕ್ಕೆ ಬಂದಿದ್ದ ನನ್ನನ್ನು ಮತದಾರರು ಲೋಕಸಭೆಗೆ ಆಯ್ಕೆ…

Read More

ಟೂತ್‌ಪೇಸ್ಟ್ ಬಹುಶಃ ವಿಶ್ವಾದ್ಯಂತ ಹೆಚ್ಚು ಬಳಸುವ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ನಮ್ಮ ಬಾಯಿಯ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ನಮ್ಮಲ್ಲಿದೆ ಆದರೆ ಟೂತ್‌ಪೇಸ್ಟ್‌ನಲ್ಲಿ ಆರೋಗ್ಯಕರ ಅಂಶಕ್ಕಿಂತ ಅನಾರೋಗ್ಯಕರ ಅಂಶವೇ ಹೆಚ್ಚಾಗಿರುತ್ತದೆ. ಇದರಿಂದ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಸಹ ನಮ್ಮ ದೇಹ ಸೇರುತ್ತಿದೆ. ನಿತ್ಯ ಮಾರಾಟವಾಗುವ ಟೂತ್‌ಪೇಸ್ಟ್‌ನಲ್ಲಿ ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳು ಅಂಗೀಕರಿಸಲ್ಪಟ್ಟ ಅಥವಾ ಪರಿಶೀಲಿಸಿದ ವರದಿಗಳಿಲ್ಲ. ಆದಾಗ್ಯೂ, ಕೆಲವು ರಾಸಾಯನಿಕವು ಈ ಅಪಾಯ ಹೆಚ್ಚಿಸಬಹುದು ಮತ್ತು ದೀರ್ಘಾವಧಿಯಲ್ಲಿ ಕಾರ್ಸಿನೋಜೆನಿಕ್ ಆಗಿರಬಹುದು ಎಂದು ಸಂಶೋಧನೆ ತಿಳಿಸಿದೆ. ಟ್ರೈಕ್ಲೋಸನ್ ಟ್ರೈಕ್ಲೋಸನ್ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆ ಎರಡರ ವಿರುದ್ಧವೂ ಕಾರ್ಯನಿರ್ವಹಿಸುವ ಸ್ಪೆಕ್ಟ್ರಮ್ ಆಂಟಿಮೈಕ್ರೊಬಿಯಲ್ ಏಜೆಂಟ್ ಆಗಿದೆ. ಇದು FDA-ಅನುಮೋದಿತ ರಾಸಾಯನಿಕ ಸಂಯುಕ್ತವಾಗಿದ್ದು ಇದನ್ನು ಟೂತ್‌ಪೇಸ್ಟ್, ಸಾಬೂನುಗಳು ಮತ್ತು ಸೌಂದರ್ಯವರ್ಧಕಗಳಿಗೆ ವಾಡಿಕೆಯಂತೆ ಸೇರಿಸಲಾಗುತ್ತದೆ DEA, ಟೂತ್‌ಪೇಸ್ಟ್‌ನಲ್ಲಿ ನೊರೆ ಬರಲು ಈ ರಾಸಾಯನಿಕ ಬಳಸಲಾಗುತ್ತದೆ. 1998ರ ಅಧ್ಯಯನದಲ್ಲಿ, ಆಂಟಿಫ್ರೀಜ್ ಮತ್ತು ಬ್ರೇಕ್ ದ್ರವದಲ್ಲಿ ಕಂಡುಬರುವ ಡೈಥನೋಲಮೈನ್ (DEA), ಸ್ಥಳೀಯವಾಗಿ ಅನ್ವಯಿಸಿದಾಗ ಪ್ರಾಣಿಗಳಲ್ಲಿನ ಕ್ಯಾನ್ಸರ್‌ಗೆ ಸಂಬಂಧಿಸಿದೆ. ಅದೇ…

Read More

ಇಂದಿನ ವೇಗದ ಜಗತ್ತಿನಲ್ಲಿ ಅನೇಕ ವ್ಯಕ್ತಿಗಳು ಹೆಚ್ಚಿನ ಒತ್ತಡದ ಜೀವನವನ್ನು ನಡೆಸುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ಒತ್ತಡವು ನಿಮ್ಮ ಹೃದಯದ ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತದೆ. ನಿಮ್ಮ ಜೀವನಶೈಲಿಯಿಂದ ಹೃದಯದ ಮೇಲೆ ಒತ್ತಡ ಉಂಟಾಗುತ್ತಿರುವ ಲಕ್ಷಣಗಳನ್ನು ನೀವು ಗಮನಿಸುವುದು ಅತ್ಯಗತ್ಯ. ದೀರ್ಘವಾದ ಉಸಿರಾಟ, ಧ್ಯಾನ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆಯಂತಹ ಒತ್ತಡವನ್ನು ನಿಯಂತ್ರಿಸುವ ತಂತ್ರಗಳನ್ನು ಅನುಸರಿಸುವುದು ಅಗತ್ಯ. ಕೆಟ್ಟ ಜೀವನಶೈಲಿಯಿಂದಾಗಿ ನಿಮ್ಮ ಹೃದಯದ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುವ ಮುಖ್ಯ ಲಕ್ಷಣಗಳ ಕುರಿತು ಮಾಹಿತಿ ಇಲ್ಲಿದೆ. ನಿರಂತರ ಆಯಾಸ: ರಾತ್ರಿಯ ವೇಳೆ ಉತ್ತಮವಾಗಿ ನಿದ್ರೆ ಮಾಡಿದ ನಂತರವೂ ನಿರಂತರವಾಗಿ ದಣಿದ ಭಾವನೆ ಇದ್ದರೆ ಅದು ನಿಮ್ಮ ಹೃದಯದ ಮೇಲೆ ಒತ್ತಡ ಉಂಟಾಗುತ್ತಿರುವುದರ ಸೂಕ್ಷ್ಮ ಸೂಚನೆಯಾಗಿರಬಹುದು. ದೀರ್ಘಕಾಲದ ಒತ್ತಡವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್​ನ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ನಿಮ್ಮ ನಿದ್ರೆಯ ಮಾದರಿಯನ್ನು ಅಡ್ಡಿಪಡಿಸಬಹುದು. ನಿದ್ರಿಸಲು ತೊಂದರೆ: ಒತ್ತಡವು ಆರಂಭದಲ್ಲಿ ನಿದ್ರಿಸಲು ತೊಂದರೆಗಳನ್ನು ಉಂಟುಮಾಡಬಹುದು. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ.…

Read More