Author: AIN Author

ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ಮದುವೆ ಇದೇ ಡಿಸೆಂಬರ್ 24ರಂದು ನಡೆಯಲಿದೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಯಲಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿದೆ. ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.

Read More

ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿ ಪಲ್ಲವಿ ಉಡುಪಿ (Udupi) ಶ್ರೀ ಕೃಷ್ಣ ಮಠಕ್ಕೆ (Shrikrishna Math) ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಉಡುಪಿಗೆ ಬಂದಿರುವ ಅವರು, ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು. ಸಾಯಿ ಪಲ್ಲವಿ (Sai pallavi) ಪ್ರತಿಭಾನ್ವಿತ ನಟಿ. ಆದರೆ ಕಳೆದೊಂದು ವರ್ಷದಿಂದ ಸಾಯಿ ಪಲ್ಲವಿ ಅಡ್ರೆಸ್‌ಗೆ ಇಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಸಿನಿಮಾ ಘೋಷಣೆಯೂ ಆಗಿಲ್ಲ. ಏನಾಯ್ತು ಸಾಯಿ ಪಲ್ಲವಿ ಬದುಕಲ್ಲಿ? ವಿರಾಟ ಪರ್ವಂ ಇದೊಂದು ಚಿತ್ರಕ್ಕಾಗಿ ಸಾಯಿಪಲ್ಲವಿ ನೀಡಿದ ಸಂದರ್ಶನ ಜೀವನದ ದಿಕ್ಕನ್ನೇ ಬದಲಾಯಿಬಿಡುತ್ತೆ ಅಂತ ಖುದ್ದು ಸಾಯಿಪಲ್ಲವಿ ಅಂದುಕೊಂಡಿರಲಿಲ್ಲ. ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ…

Read More

2023ರ ಕ್ಯಾಲೆಂಡರ್ ವರ್ಷ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಕೆಲ ಯುವ ಆಟಗಾರರು ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲರ್‌ ಮೂಲಕ ಯುವ ಆಟಗಾರರು ಭವಿಷ್ಯದ ಸ್ಟಾರ್‌ಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್‌, ರಿಂಕು ಸಿಂಗ್‌, ಮುಖೇಶ್‌ ಕುಮಾರ್‌ ಸೇರಿದಂತೆಡ ಅಗ್ರ ಐವರು ಯುವ ಆಟಗಾರರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. 1.ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್‌ನ 27ರ ಪ್ರಾಯದ ಯುವ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ, ಫಿನಿಷಿಂಗ್ ಹಾಗೂ ಕ್ಲೀನ್ ಹಿಟ್ಟಿಂಗ್ ಮೂಲಕ ಗಮನ ಸೆಳೆದಿದ್ದಾರೆ 2. ರಿಂಕು ಸಿಂಗ್ ಕಳೆದ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್‌ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್‌ಗೆ ಪಂದ್ಯ ಗೆಲ್ಲಿಸುವ ಮೂಲಕ ಗ್ರೇಟ್ ಫಿನಿಷರ್ ಆಗಿದ್ದಾರೆ. 26ರ ಹರೆಯದ ರಿಂಕು ಸಿಂಗ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಹೊಡೆತಗಳ ಮೂಲಕ ಮ್ಯಾಚ್‌ ಫಿನಿಷರ್‌ ಎಂಬ ಕೀರ್ತಿಯನ್ನು ಸಂಪಾದಿಸಿದ್ದಾರೆ 3.…

Read More

ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೇಕ್ ಅನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಯಾವುದೇ ಶುಭಸಮಾರಂಭಗಳಿದ್ದರೂ ಅಲ್ಲಿ ಕೇಕ್ ಇದ್ದೇ ಇರುತ್ತದೆ. ಆದರೆ ಕೆಲವರು ಮೊಟ್ಟೆ ಹಾಕಿದ ಕೇಕ್ ತಿನ್ನಲು ಬಯಸುವುದಿಲ್ಲ. ಇಂಥವರಿಗಾಗಿಯೇ ಇವತ್ತಿನ ನಮ್ಮ ರೆಸಿಪಿಯಲ್ಲಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ಯಾವ ರೀತಿ ಮಾಡಬಹುದು ಇಲ್ಲಿದೆ ನೋಡಿ! ಬೇಕಾಗುವ ಸಾಮಗ್ರಿಗಳು:  ಕೋಕೋ ಪೌಡರ್ – ಕಾಲು ಕಪ್ ಬಿಸಿ ನೀರು – ಕಾಲು ಕಪ್ ಎಣ್ಣೆ – ಕಾಲು ಕಪ್ ಮೊಸರು – ಅರ್ಧ ಕಪ್ ಬೇಕಿಂಗ್ ಪೌಡರ್ – ಅರ್ಧ ಕಪ್ ಬೇಕಿಂಗ್ ಸೋಡಾ – ಕಾಲು ಕಪ್ ಮೈದಾ, ಗೋಧಿ ಹಿಟ್ಟು – ಮುಕ್ಕಾಲು ಕಪ್ ಸಕ್ಕರೆ – ಮುಕ್ಕಾಲು ಕಪ್ ಕಾಫಿ ಪೌಡರ್ – ಒಂದು ಚಮಚ ಚಾಕ್ಲೆಟ್ ಸಿರಪ್ – ಅಗತ್ಯಕ್ಕೆ ತಕ್ಕಷ್ಟು ಮಾಡುವ ವಿಧಾನ: * ಮೊದಲಿಗೆ ಒಂದು ಬೌಲ್‌ನಲ್ಲಿ ಬಿಸಿ ನೀರು…

Read More

Apple ಈ ವರ್ಷ iPhone 15 ಮತ್ತು iPhone 15 Plus ಮಾದರಿಗಳಲ್ಲಿ ಹಳೆಯ A16 ಚಿಪ್ ಅನ್ನು ಪ್ಯಾಕ್ ಮಾಡಿದೆ, ಆದರೆ ಉನ್ನತ ಶ್ರೇಣಿಯ ‘iPhone 15 Pro’ ಮತ್ತು iPhone 15 Pro Max ಎಲ್ಲಾ ಹೊಸ A17 Pro ಚಿಪ್‌ನೊಂದಿಗೆ ಪ್ರಾರಂಭವಾಯಿತು. ಈಗ, ಆರಂಭಿಕ ಸೋರಿಕೆಗಳು ಕ್ಯುಪರ್ಟಿನೊ ಆಧಾರಿತ ಟೆಕ್ ದೈತ್ಯ ಎಲ್ಲಾ iPhone 16 ಮಾದರಿಗಳಲ್ಲಿ A18 ಪ್ರೊಸೆಸರ್ ಅನ್ನು ಬಳಸುತ್ತದೆ ಎಂದು ಸೂಚಿಸುತ್ತದೆ. iOS 18 ಆಪರೇಟಿಂಗ್ ಸಿಸ್ಟಮ್‌ನ ಆರಂಭಿಕ ಅಭಿವೃದ್ಧಿ ಆವೃತ್ತಿಗಳು A18 ಚಿಪ್‌ನೊಂದಿಗೆ ನಾಲ್ಕು ಹೊಸ ಐಫೋನ್ ಮಾದರಿಗಳ ಉಲ್ಲೇಖಗಳನ್ನು ಒಳಗೊಂಡಿವೆ ಎಂದು ವರದಿಯಾಗಿದೆ. Macrumors ನ ವರದಿಯ ಪ್ರಕಾರ, iOS 18 ಆಪರೇಟಿಂಗ್ ಸಿಸ್ಟಂನ ಆರಂಭಿಕ ಅಭಿವೃದ್ಧಿ ಆವೃತ್ತಿಗಳು ನಾಲ್ಕು ಹೊಸ ಐಫೋನ್ ಮಾದರಿಗಳ ಉಲ್ಲೇಖಗಳನ್ನು ಒಳಗೊಂಡಿವೆ. iPhone 16, iPhone 16 Plus, iPhone 16 Pro ಮತ್ತು iPhone 16 Pro Max ಎಂದು ನಂಬಲಾದ ಈ…

Read More

ನಿಂಬೆಹಣ್ಣುಗಳು ಸಿಟ್ರಸ್ ಅಂಶವನ್ನು ಹೊಂದಿರುವ ಹಣ್ಣಾಗಿದ್ದು, ಅವುಗಳ ಪೌಷ್ಟಿಕಾಂಶದ ಅಂಶದಿಂದಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ನಿಂಬೆಹಣ್ಣಿನ ಸೇವನೆಯ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ: ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ನಿಂಬೆ ರಸ, ವಿಶೇಷವಾಗಿ ಬೆಚ್ಚಗಿನ ನೀರಿನಲ್ಲಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕ್ಷಾರೀಯ ಗುಣಗಳು: ಪ್ರಕೃತಿಯಲ್ಲಿ ಆಮ್ಲೀಯವಾಗಿದ್ದರೂ, ನಿಂಬೆಹಣ್ಣುಗಳು ಒಮ್ಮೆ ಚಯಾಪಚಯಗೊಂಡ ನಂತರ ದೇಹದ ಮೇಲೆ ಕ್ಷಾರೀಯ ಪರಿಣಾಮವನ್ನು ಬೀರುತ್ತದೆ. ದೇಹದ pH ಮಟ್ಟವನ್ನು ಸಮತೋಲನಗೊಳಿಸುವುದು ಆರೋಗ್ಯ ಪ್ರಯೋಜನಗಳನ್ನು ಹೊಂದಿರಬಹುದು. ಚರ್ಮದ ಆರೋಗ್ಯ: ಇದರ ಸೇವನೆ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ. ಮುಖಕ್ಕೆ ನಿಂಬೆ ರಸವನ್ನು ಹಚ್ಚುವದರಿಂದ ಮೊಡವೆ ಮತ್ತು ಕಪ್ಪು ಕಲೆಗಳಂತಹ ಸಮಸ್ಯೆಗಳಿಗೆ ಸಹಾಯ ಮಾಡಬಹುದು. ಹೃದಯದ ಆರೋಗ್ಯ: ನಿಂಬೆಹಣ್ಣಿನಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ತಡೆಗಟ್ಟುವಿಕೆ: ಕೆಲವು ಅಧ್ಯಯನಗಳು ನಿಂಬೆಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರಬಹುದು ಎಂದು ಸೂಚಿಸಿವೆ. ಕಿಡ್ನಿ ಸ್ಟೋನ್ ತಡೆಗಟ್ಟುವಿಕೆ: ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಮೂತ್ರದ ಪ್ರಮಾಣ…

Read More

ದುಬೈ: ಐಪಿಎಲ್​-2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡಿದ್ದಾರೆ. 2 ಕೋಟಿ ಮೂಲ ಬೆಲೆಯೊಂದಿಗೆ ಮಿಚೆಲ್ ಸ್ಟಾರ್ಕ್​ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಮಾರಕ ವೇಗಿ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್​, ಮುಂಬೈ ಇಂಡಿಯನ್ಸ್​, ಕೆಕೆಆರ್ ಹಾಗೂ ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ಪಾಲಾಗಿದ್ದಾರೆ. ಈ ಮೂಲಕ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಸದ್ಯ ಐಪಿಎಲ್​ ಹರಾಜಿನಲ್ಲಿ ಬಿಕರಿಯಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ನಂತರದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್​ 20.50 ಕೋಟಿ, ಸ್ಯಾಮ್ ಕರ್ರನ್ 18.50 ಕೋಟಿ, ಕ್ಯಾಮರೂನ್ ಗ್ರೀನ್ 17.50 ಕೋಟಿಗೆ ಬಿಕರಿಯಾಗಿದ್ದರು. ಆಸಿಸ್ ಆಟಗಾರರ ಮೇಲೆ 50 ಕೋಟಿ ವಿಶ್ವ ಚಾಂಪಿಯನ್ ಆಸಿಸ್​ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಹಣದ ಮಳೆ ಸುರಿಸಿದೆ. ಕೇವಲ ಮೂವರು ಆಟಗಾರರಿಗೆ 50 ಕೋಟಿ…

Read More

Instagram ಬಳಕೆದಾರರಿಗೆ ವೀಡಿಯೊ ಟಿಪ್ಪಣಿಗಳನ್ನು ಹಂಚಿಕೊಳ್ಳಲು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ವಾಟ್ಸಾಪ್‌ನಲ್ಲಿ ಸ್ಟೇಟಸ್‌ಗಳನ್ನು ಹೋಲುವ ವೈಶಿಷ್ಟ್ಯವಾಗಿ ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಮ್‌ನಿಂದ ಟಿಪ್ಪಣಿಗಳನ್ನು ಅನಾವರಣಗೊಳಿಸಲಾಯಿತು. ಈ ಹಿಂದೆ, ಬಳಕೆದಾರರು ತಮ್ಮ ಸ್ಟೇಟಸ್ ಅಪ್‌ಡೇಟ್‌ಗೆ ಪಠ್ಯ ಅಥವಾ ಎಮೋಜಿಗಳನ್ನು ಮಾತ್ರ ಅಪ್‌ಲೋಡ್ ಮಾಡಬಹುದಾಗಿತ್ತು. ಈಗ ಅವರು ಎರಡು-ಸೆಕೆಂಡ್ ಲೂಪಿಂಗ್ ವೀಡಿಯೊ ಟಿಪ್ಪಣಿಯನ್ನು ಹಂಚಿಕೊಳ್ಳಬಹುದು, ಇದನ್ನು ಬಳಕೆದಾರರು ಪರಸ್ಪರ ಅನುಯಾಯಿಗಳೊಂದಿಗೆ ಅಥವಾ ಅವರ ನಿಕಟ ಸ್ನೇಹಿತರ ಪಟ್ಟಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತೊಂದು ಸೋರಿಕೆಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂದು ಸೂಚಿಸುತ್ತದೆ ಅದು ಬಳಕೆದಾರರು ಪೋಸ್ಟ್‌ಗಳು ಮತ್ತು ರೀಲ್‌ಗಳಲ್ಲಿ ತಮ್ಮ ಇಷ್ಟಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ. Instagram ಬೆಂಬಲ ಪುಟದಲ್ಲಿ, ಬಳಕೆದಾರರು ಈಗ ಸಣ್ಣ, ಲೂಪಿಂಗ್ ವೀಡಿಯೊ ಟಿಪ್ಪಣಿಗಳನ್ನು ಹಂಚಿಕೊಳ್ಳಬಹುದು ಎಂದು ಪ್ಲಾಟ್‌ಫಾರ್ಮ್ ಗಮನಿಸಿದೆ. ಇದನ್ನು ಮೊದಲು ಟೆಕ್ಕ್ರಂಚ್ ಗುರುತಿಸಿದೆ. ವೈಶಿಷ್ಟ್ಯವು ಪ್ರಸ್ತುತ ಮುಂಭಾಗದ ಕ್ಯಾಮೆರಾದಿಂದ ಸೆರೆಹಿಡಿಯಲಾದ ವೀಡಿಯೊವನ್ನು ಬೆಂಬಲಿಸುತ್ತದೆ. Instagram ಸ್ಟೋರಿಗಳಿಗಿಂತ ಭಿನ್ನವಾಗಿದ್ದರೂ, ಸ್ಟೋರಿಗಳಂತೆಯೇ ವೀಡಿಯೊ…

Read More

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್, ಪ್ರತಿ ಬಾರಿಯೂ ಜೈಲಿನಿಂದ ಜಾಕ್ವೆಲಿನ್ ಗೆ ಪ್ರೇಮ ಪತ್ರ ಕಳುಹಿಸುತ್ತಿದ್ದರು. ಇದೇ ಮೊದಲ ಬಾರಿಗೆ ಬೆದರಿಕೆಯ ಪತ್ರ ಬರೆದಿದ್ದಾರೆ. ನನ್ನ ವಿರುದ್ಧ ಕ್ರಮಕ್ಕೆ ಮುಂದಾದರೆ, ನಿನ್ನ ಬಣ್ಣ ಬಯಲು ಮಾಡುವುದಾಗಿ ತಿಳಿಸಿದ್ದಾರೆ. ತಾವು ಕೊಟ್ಟಿರುವ ಗಿಫ್ಟ್ ಅನ್ನು ಸಾಕ್ಷಿ ಸಮೇತ ತಿಳಿಸುವುದಾಗಿ ಹೇಳಿದ್ಧಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಸುಕೇಶ್ ಇಷ್ಟೊಂದು ಗರಂ ಆಗೋಕೆ ಕಾರಣ, ಜಾಕ್ವೆಲಿನ್ ಕಾನೂನು ಕ್ರಮಕ್ಕೆ ಮುಂದಾಗಿರೋದು. ಮೊನ್ನೆಯಷ್ಟೇ ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೋರ್ಟ್ ಮೆಟ್ಟಿಲು ಏರಿದ್ದರು. ಸುಕೇಶ್ ಚಂದ್ರಶೇಖರ್ (Sukesh Chandrasekhar) ಮಾಡಿದ್ದಾರೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಸುಕೇಶ್ ವಿರುದ್ಧ ಮತ್ತೆ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ. ಜಾಕ್ವೆಲಿನ್ ಗೆ ಸಂಬಂಧಿಸಿದಂತೆ ಸುಕೇಶ್ ತಿಂಗಳಿಗೊಂದಾದರೂ ಮಾಧ್ಯಮ ಹೇಳಿಕೆಯನ್ನು ನೀಡುತ್ತಿದ್ದಾನೆ. ಇನ್ನೂ ಜಾಕ್ವೆಲಿನ್…

Read More

ಡಿಸೆಂಬರ್‌ 26 ರಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ  ಆರಂಭವಾಗಲಿದೆ. ಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ಮೊದಲನೇ ಟೆಸ್ಟ್‌ ಪಂದ್ಯ ನಡೆಯಲಿದೆ. ಡಿಸೆಂಬರ್‌ 19 ರಂದೇ ಕೊಹ್ಲಿ ತಂಡವನ್ನು ತೊರೆದಿದ್ದರು. ಡಿ. 22 ರಂದು ಭಾರತ ತಂಡವನ್ನು ಕೊಹ್ಲಿ ಕೂಡಿಕೊಳ್ಳಲಿದ್ದಾರೆಂದು ಕ್ರಿಕ್‌ಬಝ್‌ ವರದಿ ಮಾಡಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಗವಾಗಿ ಭಾರತ ತಂಡಕ್ಕೆ ಈ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಮೊದಲನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆಂಬ ಬಗ್ಗೆ ವಿಶ್ವಾಸವಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರು ಫೀಲ್ಡಿಂಗ್‌ ವೇಗಿ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಾರ್ಲ್‌ನಲ್ಲಿ ಗುರುವಾರ ನಡೆದಿದ್ದ ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯಕ್ಕೆ ಗಾಯಕ್ವಾಡ್‌ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ರಜತ್‌ ಪಾಟಿದಾರ್ ಅವರು ಅಂತಾರಾಷ್ಟ್ರೀಯ…

Read More