Author: AIN Author

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಒಂದು ವಾರದ ಬಳಿಕ ಹೆಚ್ಚು ಏರಿಕೆ ಕಂಡಿದ್ದು, ಒಂದೇ ದಿನಕ್ಕೆ 10 ಗ್ರಾಂ ಚಿನ್ನ 380 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ 700 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಮತ್ತೆ ದಾಖಲೆಯ ದರವನ್ನು ತಲುಪಿದೆ. ಮಾರುಕಟ್ಟೆಯಲ್ಲಿ ಚಿನ್ನದ ದರ ಹೀಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,775 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್‌ ಬೆಲೆ 6,300 ರೂಪಾಯಿ ಇದೆ. ಕಳೆದ ಒಂದು ದಿನಕ್ಕೆ ಹೋಲಿಸಿದರೆ 22 ಕ್ಯಾರೆಟ್ ಚಿನ್ನ 35 ರೂಪಾಯಿ (ಪ್ರತಿ ಗ್ರಾಂಗೆ) , 24 ಕ್ಯಾರೆಟ್‌ ಚಿನ್ನ 38 ರೂಪಾಯಿ (ಪ್ರತಿ ಗ್ರಾಂಗೆ) ಏರಿಕೆಯಾಗಿದೆ. ಇನ್ನು ಬೆಳ್ಳಿದರ ನೋಡುವುದಾದರೆ, ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಒಂದು ಕೆ.ಜಿ 76,200 ರೂಪಾಯಿ ಇದೆ. ಇನ್ನು ಕಳೆದ ಒಂದು ವಾರದಿಂದ ಚಿನ್ನ 250 ರೂಪಾಯಿ ಏರಿಳಿಕೆಯಾಗುತ್ತಿದ್ದು, ಇಂದು  ಮಾತ್ರ ದಿಢೀರ್‌ 700…

Read More

ರೋಮ್‌: ಚೀನಾಗೆ ಇಟಲಿ ಬಿಗ್‌ ಶಾಕ್‌ ನೀಡಿದೆ. ಚೀನಾದ (China) ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್ (BRI) ಯೋಜನೆಯಿಂದ ಹೊರಬರುವುದಾಗಿ ಇಟಲಿ (Italy) ಅಧಿಕೃತವಾಗಿ ತಿಳಿಸಿದೆ. ಈಗ ಇಟಲಿ ಅಧಿಕೃತವಾಗಿ ಈ ಯೋಜನೆಯಿಂದ ಹೊರಬರುವುದಾಗಿ ಚೀನಾಗೆ ತಿಳಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. 2019ರಲ್ಲಿ ನಡೆದ ಒಪ್ಪಂದವು ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳುತ್ತದೆ. ರೋಮ್ ಕನಿಷ್ಠ ಮೂರು ತಿಂಗಳ ಮೊದಲೇ ಲಿಖಿತವಾಗಿ ತಿಳಿಸದೇ ಇದ್ದರೆ ಅದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಈಗ ಈ ಒಪ್ಪಂದವನ್ನು ನವೀಕರಿಸುವುದಿಲ್ಲಎಂದು ಇಟಲಿ ಚೀನಾಗೆ ಇತ್ತೀಚಿಗೆ ಪತ್ರದ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ. ಚೀನಾದ ಈ ಯೋಜನೆಗೆ  2019ರಲ್ಲಿ ಇಟಲಿ ಸಹಿ ಹಾಕಿತ್ತು.  ಬಿಆರ್‌ಐ ಸೇರಿದ ಏಕೈಕ ಪಾಶ್ಚಿಮಾತ್ಯ ದೇಶ ಇಟಲಿಯಾಗಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಇಟಲಿ ಈ ಯೋಜನೆಯಿಂದ ಹಿಂದಕ್ಕೆ ಸರಿಯಲಿದೆ ಎಂಬ ವಿಚಾರ ಕೆಲ ತಿಂಗಳಿಂದ ಸುದ್ದಿಯಾಗುತ್ತಿತ್ತು. ನಾವು ಇನ್ನು ಮುಂದೆ ಬಿಆರ್‌ಐ ಭಾಗವಾಗಿರದಿದ್ದರೂ ಸಹ ಚೀನಾದೊಂದಿಗೆ ಅತ್ಯುತ್ತಮ…

Read More

ಕ್ಯಾಲಿಫೋರ್ನಿಯಾ: ಅಮೆರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದು, ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದು ಹಾನಿ ಮಾಡಲಾಗಿದೆ. ಹಿಂದೂ ಅಮೇರಿಕನ್ ಫೌಂಡೇಶನ್, ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯನ್ನು ಖಲಿಸ್ತಾನ್ ಪರ ಘೋಷಣೆಗಳಿಂದ ವಿರೂಪಗೊಳಿಸಲಾಗಿದೆ. ಘಟನೆ ಕುರಿತು ಪ್ರಕಿತ್ರಿಯೆ ನೀಡಿರುವ ಅಮೆರಿಕಾ, ಇದು ದ್ವೇಷದ ಅಪರಾಧ ಎಂದು ಪರಿಗಣಿಸಲಾಗಿದ್ದು, ಸಂಪೂರ್ಣ ತನಿಖೆ ನಡೆಸುವ ಭರವಸೆ ನೀಡಿದೆ. ಈ ಹಿಂದೆ ಜನವರಿ 31 ರಂದು, ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ ಧ್ವಂಸಗೊಳಿಸಲಾಗಿತ್ತು. ಈ ಕೃತ್ಯಕ್ಕೆ ಭಾರತೀಯ ಸಮುದಾಯದಿಂದ ತೀವ್ ಆಕ್ರೋಶಗಳು ವ್ಯಕ್ತವಾಗಿತ್ತು.

Read More

ರಜನಿಕಾಂತ್ ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ಲಾಲ್ ಸಲಾಂ (Lal Salaam) ಸಿನಿಮಾ ಜನವರಿ 14ರ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ದಿನಾಂಕವನ್ನು ಮುಂದೂಡಲು ಚಿತ್ರತಂಡ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಅಂದು ಅನೇಕ ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಇಂಥದ್ದೊಂದು ತೀರ್ಮಾನ ತಗೆದುಕೊಳ್ಳಲಾಗುತ್ತಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಆದರೆ, ಅಧಿಕೃತವಾಗಿ ಈವರೆಗೂ ಈ ಕುರಿತು ಚಿತ್ರತಂಡ ಹೇಳಿಕೊಂಡಿಲ್ಲ. ಲಾಲ್ ಸಲಾಂ ರಜನಿಕಾಂತ್ ಮಗಳು ಐಶ್ವರ್ಯ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡ್ತಿದ್ದಾರೆ ರಜನಿಕಾಂತ್. ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಕೂಡ ಆಗಿದ್ದು, ಅಚ್ಚರಿ ಎನ್ನುವಂತೆ ಅವರು ಕಾಣಿಸಿಕೊಂಡಿದ್ದಾರೆ. ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜಿನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ…

Read More

ಬೆಂಗಳೂರು: ಹೊಸ ವರ್ಷ ಹತ್ತಿರ ಬರ್ತಿದ್ದಂತೆ ರಾಜಧಾನಿಯಲ್ಲಿ ಡ್ರಗ್ಸ್ ವಾಸನೆ ಹೆಚ್ಚಾಗ್ತಿದೆ. ಇತ್ತಿಚೆಗಷ್ಟೇ ವಿದೇಶಿ ಮೂಲದ ಪೆಡ್ಲರ್ ಅರೆಸ್ಟ್ ಮಾಡಿದ್ದ ಖಾಕಿ ಪಡೆ ಕೋಟ್ಯಾಂತರ ರೂ. ಡ್ರಗ್ಸ್ ವಶಕ್ಕೆ ಪಡೆದಿತ್ತು. ಅದೇ ರೀತಿ ಮತ್ತೆ ಮೂವರು ಪೆಡ್ಲರ್ಗಳನ್ನ ಹೆಡೆಮುರಿ ಕಟ್ಟಿರೋ ಸಿಸಿಬಿ ಟೀಂ, ಅರ್ಧಕೋಟಿಯಷ್ಟು ಡ್ರಗ್ಸ್ ಸೀಜ್ ಮಾಡಿದೆ. ರಾಜಧಾನಿ ಬೆಂಗಳೂರಲ್ಲಿ ಮಾದಕ ವಸ್ತುಗಳು ಮಾರಾಟ ಎಗ್ಗಿಲ್ಲದೇ ನಡೀತಿದೆ. ಖಾಕಿ ಪಡೆ ಎಷ್ಟೇ ಎಚ್ಚರಿಕೆ ವಹಿಸಿದ್ರು, ಖತರ್ನಾಕ್ ಅಸಾಮಿಗಳು ಡ್ರಗ್ಸ್ ಪೂರೈಕೆಗೆ ನಾನಾ ದಾರಿಗಳನ್ನ ಹುಡುಕ್ತಾರೆ. ಮೊನ್ನೆಯಷ್ಟೆ ಸಿಸಿಬಿ ಪೊಲೀಸರ ಬೇಟೆಯಲ್ಲಿ ಸುಮಾರು 21 ಕೋಟಿಗೂ ಅಧಿಕ ಮೊತ್ತದ ಮಾದಕ ವಸ್ತುಗಳು ಪತ್ತೆಯಾಗಿದ್ವು. ಹಾಗೆ ಓರ್ವ ವಿದೇಶಿ ಡ್ರಗ್ ಪೆಡ್ಲರ್ ಬಂಧನವಾಗಿತ್ತು. ಈ ಘಟನೆ ಬೆನ್ನಿಗೆ ಇದೇ ರೀತಿ ವರ್ಷಾಚರಣೆಯ ಪಾರ್ಟಿಗಳಿಗಾಗಿ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ಅಡ್ಡೆ ಮೇಲೆ ಸಿಸಿಬಿ ಟೀಂ ದಾಳಿ ನಡೆಸಿದ್ದು, ಮೂವರು ಡ್ರಗ್ ಪೆಡ್ಲರ್ಗಳನ್ನ ಸಮೇತ ಅರ್ಧ ಕೋಟಿಗೂ ಹೆಚ್ಚು ಮೊತ್ತದ ಮಾದಕ ವಸ್ತುಗಳನ್ನ ಸೀಜ್ ಮಾಡಿದೆ. ಯೆಸ್.…

Read More

ನ್ಯೂಯಾರ್ಕ್: ಅಮೆರಿಕಾದ ಕ್ಯಾಲಿಫೋರ್ನಿಯಾದ (California) ನೆವಾರ್ಕ್ ಸಿಟಿಯಲ್ಲಿ (Newark City) ಹಿಂದೂ ದೇವಾಲಯದ ಗೋಡೆಯಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆಯಲಾಗಿದೆ. ಈ ಕುರಿತು ಇದೀಗ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಹಿಂದೂ ಅಮೇರಿಕನ್ ಫೌಂಡೇಶನ್ ತನ್ನ ಎಕ್ಸ್ ಖಾತೆಯಲ್ಲಿ, ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ (Swaminarayan Mandir Vasana Sanstha) ಗೋಡೆಗಳ ಮೇಲೆ ಘೋಷಣೆಗಳನ್ನು (Pro-Khalistani Slogans) ಬರೆದಿರುವ ಫೋಟೋಗಳನ್ನು ಹಂಚಿಕೊಂಡಿದೆ. ಫೋಟೋದಲ್ಲಿ, ದೇಗುಲದ ಗೋಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಭಾರತದ (India) ವಿರುದ್ಧ ದ್ವೇಷಪೂರಿತ ಬರಹಗಳನ್ನು ಬರೆಯಲಾಗಿದೆ. ಘಟನೆಯ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಪ್ರತಿಷ್ಠಾನ ಒತ್ತಾಯಿಸಿದೆ. ಅಲ್ಲದೆ ಈ ಕುರಿತು ನೆವಾರ್ಕ್ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ನಾಗರಿಕ ಹಕ್ಕುಗಳ ವಿಭಾಗಕ್ಕೆ ದೂರು ನೀಡಿದೆ. ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ ಗೋಡೆಯ ಮೇಲೆ ಬರೆದಿರುವ ದ್ಷೇಷದ ಬರಹಗಳನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಖಂಡಿಸಿದೆ. ಇದನ್ನು ಬರೆದಿರುವ ಕಿಡಿಗೇಡಿಗಳ ವಿರುದ್ಧ ತ್ವರಿತ ತನಿಖೆ ಮತ್ತು ಕಠಿಣ ಕ್ರಮಕ್ಕಾಗಿ…

Read More

ಮಂಡ್ಯ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದಲೇ ಸ್ಪರ್ಧೆ ಖಚಿತ. ಈ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುತ್ತೇನೆ. ಮುಂದೆ ಎಲ್ಲ ವಿಷಯವನ್ನೂ ತಿಳಿಸುತ್ತೇನೆ ಎಂದು ತಿಳಿಸಿದರು. ಮಂಡ್ಯ ಸೇರಿದಂತೆ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸಂಸತ್ ಅಧಿವೇಶನದ ಶೂನ್ಯವೇಳೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ. ಕಾವೇರಿ ವಿಚಾರ ಎಂದು ಬಂದಾಗ ನಾವು ಒಬ್ಬರನ್ನು ದೂಷಿಸುವುದು ಸರಿಯಲ್ಲ. ನ್ಯಾಯಾಲಯಗಳಲ್ಲಿ ಎಂದೂ ಕರ್ನಾಟಕಕ್ಕೆ ನ್ಯಾಯ ದೊರೆತಿಲ್ಲ. ಎರಡೂ ರಾಜ್ಯ ಸರ್ಕಾರಗಳು ಕುಳಿತು ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ, ಕ್ಷೇತ್ರ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮೈತ್ರಿ ವಿಚಾರ ನನಗೆ ಗೊತ್ತಿಲ್ಲ. ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದೂ ಇಲ್ಲ ಎಂದು ಜಾಣ್ಮೆಯ ಉತ್ತರ ನೀಡಿದರು

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆ ಮಂಜು ಕವಿದ ವಾತವರಣವಿದ್ದು ಮೈ ನಡುಗುವಂತೆ ಚಳಿ ಆವರಿಸಿದೆ. ರಾಜ್ಯದಲ್ಲಿಂದು ಬಹುತೇಕ ಕಡೆಗಳಲ್ಲಿ ಒಣಹವೆ ಇರಲಿದೆ. 48 ಗಂಟೆಯಲ್ಲಿ ತಾಪಮಾನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಖ್ಯವಾಗಿ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ಚಳಿಯು ಹೆಚ್ಚಾಗಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ತಾಪಮಾನ ಇಳಿಕೆ ಆಗಲಿದೆ. ಇದರಿಂದಾಗಿ ಥಂಡಿ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ವಿಜಯನಗರದಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ಜತೆಗೆ ಕರಾವಳಿ‌ಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಒಣಹವೆ ಮೇಲುಗೈ ಸಾಧಿಸಲಿದೆ. ಮೋಡ ಕವಿದ ವಾತಾವರಣ…

Read More

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-‌19 (Covid-19) ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಇಂದು (ಭಾನುವಾರ) ಒಂದೇ ದಿನ 104 ಪಾಸಿಟಿವ್‌ ಕೇಸ್‌ ವರದಿಯಾಗಿವೆ. ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. ಶನಿವಾರ 8 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 271 ಕ್ಕೆ ಏರಿಕೆ ಕಂಡಿದೆ. ಕೊರೊನಾ ಪಾಸಿಟಿವಿಟಿ ದರ 5.93% ಇದೆ. ಸಿಲಿಕಾನ್‌ ಸಿಟಿ ಬೆಂಗಳೂರು ಕೊರೊನಾ ಹಾಟ್‌ಸ್ಪಾಟ್‌ ಆಗುತ್ತಿದೆ. ನಗರದಲ್ಲಿ ಕೋವಿಡ್‌ ಪ್ರಕರಣ ದಿನೇ ದಿನೇ ಏರಿಕೆ ಕಂಡಿದ್ದು, ಭೀತಿ ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ 85 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ 2, ದಕ್ಷಿಣ ಕನ್ನಡದಲ್ಲಿ 1, ಮಂಡ್ಯ 1, ಮೈಸೂರು 7, ಶಿವಮೊಗ್ಗ 6, ತುಮಕೂರಿನಲ್ಲಿ 2 ಪ್ರಕರಣಗಳು ದೃಢಪಟ್ಟಿವೆ. ಪ್ರವಾಸಕ್ಕೆಂದು ಸಿಂಗಾಪುರಕ್ಕೆ ತೆರಳಿದ್ದ ಮಂಡ್ಯ ಮೂಲದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಸಿಂಗಾಪುರ ಪ್ರವಾಸ ಮುಗಿಸಿ ಕಳೆದ ಮೂರು ದಿನಗಳ ಹಿಂದೆ ಮಂಡ್ಯಗೆ ವ್ಯಕ್ತಿ ವಾಪಸಾಗಿದ್ದ. ಆತನಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು.…

Read More

ಸೌತ್ ಇಂಡಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದ ನಟಿ ಕಾಶಿಮಾ ರಫಿ (Kashima Rafi) ಇದೀಗ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಾಜೇಶ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಕೂಡ ಶುರುವಾಗಿದೆ. ಕಾಶಿಮಾ ರಫಿ ಅವರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಬಹುದಿನಗಳ ಆಸೆಯಂತೆ. ಈ ಸಿನಿಮಾದ ಮೂಲಕ ಅದು ಈಡೇರಿದೆ. ಇಷ್ಟು ಬೇಗ ಇಂಥದ್ದೊಂದು ಅವಕಾಶ ನನಗೆ ಬರುತ್ತದೆ ಎಂದು ನಂಬಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಟೈಟಲ್ ಇಡದೇ ಸಿನಿಮಾದ ಚಿತ್ರೀಕರಣವನ್ನು ಶುರು ಮಾಡಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ಕಾಶಿಮಾ ಎರಡು ಶೇಡ್ ಇರುವಂತಹ ಪಾತ್ರವನ್ನು ಮಾಡುತ್ತಿದ್ದಾರಂತೆ. ಒಂದು ಮಹಾರಾಣಿ ಲುಕ್ ಆಗಿದ್ದರೆ, ಮತ್ತೊಂದು ಪುರಾತತ್ವಶಾಸ್ತ್ರಜ್ಞೆಯ ಪಾತ್ರವಂತೆ. ಈ ಸಿನಿಮಾದಲ್ಲಿ ಸಾಹಸ ಪ್ರಧಾನ ದೃಶ್ಯಗಳಿದ್ದು, ಅದಕ್ಕಾಗಿ ಅವರು ಫೈಟ್ ಕೂಡ ಕಲಿಯುತ್ತಿದ್ದಾರಂತೆ. ಜೊತೆಗೆ ಮತ್ತೊಂದು ಸಿನಿಮಾಗೂ ಅವರು ಸಹಿ ಮಾಡಿದ್ದು,…

Read More