Author: AIN Author

ಬೆಂಗಳೂರು:- ನಗರದಲ್ಲಿ ಇಂದು ಮತ್ತು ನಾಳೆ ಚಳಿಯ ವಾತಾವರಣ ಅಧಿಕವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಸೋಮವಾರದಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವವೇ ದಟ್ಟ ಮಂಜು ಹೆಚ್ಚಾಗಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಅಂದರೆ ಮಂಗಳವಾರದಂದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಮಂಜು ಕಾಣಿಸಲಿದೆ. ಭಾಗಶಃ ಮೋಡ ಕವಿದ ವಾತಾವರಣವೂ ಇರಲಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್‌ನಷ್ಟಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ

Read More

ನಾವು ಸರಿಯಾದ ಸಮಯದಲ್ಲಿ ಮಲಗಿ ಸರಿಯಾದ ಸಮಯದಲ್ಲಿ ಎದ್ದೇಳುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಇದು ಉತ್ತಮ ನಿದ್ದೆಗೂ ಅವಶ್ಯ. ತಡವಾಗಿ ಮಲಗುವುದು ಎಂದರೆ ಕಡಿಮೆ ನಿದ್ರೆ ಮಾಡುವುದು ಎಂದರ್ಥ. ಏಕೆಂದರೆ ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಎದ್ದೇಳುವ ಸಮಯಕ್ಕೆ ಎದ್ದೇಳಲೇಬೇಕು. ದೇಹಕ್ಕೆ ಅವಶ್ಯ ಇರುವಷ್ಟು ನಿದ್ದೆ ಮಾಡದೇ ಇದ್ದರೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ, ಹೃದ್ರೋಗ ಸೇರಿದಂತೆ ಆತಂಕದಂತಹ ಮಾನಸಿಕ ಸಮಸ್ಯೆಗಳೂ ಎದುರಾಗುತ್ತವೆ. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ರಾತ್ರಿ ತಡವಾಗಿ ಮಲಗುವುದರಿಂದ ಮುಂಜಾನೆ ಸೂರ್ಯನ ಬೆಳಕು ನೋಡಲು ಆಗುವುದಿಲ್ಲ. ಮುಂಜಾನೆಯ ಎಳೆ ಬಿಸಿಲು ನಮ್ಮ ಸಿರ್ಕಾಡಿಯನ್‌ ಲಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದು ದೇಹದ ಆಂತರಿಕ ಗಡಿಯಾರವನ್ನು ಸಿಂಕ್ರೊನೈಸ್‌ ಮಾಡಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ನಿದ್ದೆಯ ಗುಣಮಟ್ಟದ ಸುಧಾರಣೆಗೂ ಸಹಕಾರಿ. ಹಾಗಾದ್ರೆ ತಡವಾಗಿ ನಿದ್ದೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವೆಲ್ಲಾ ರೀತಿ ಪರಿಣಾಮ…

Read More

ಹುಬ್ಬಳ್ಳಿ:- ಹಿಜಾಬ್‌ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಸಿದ್ದರಾಮಯ್ಯ ಅವರ ಮುಠ್ಠಾಳತನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಜಾಬ್‌ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಇದು ಸಿದ್ದರಾಮಯ್ಯ ಅವರ ಮುಠ್ಠಾಳತನ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ರೀತಿ ಮಾಡುತ್ತಿದ್ದಾರೆ’ ಎಂದರು. ನಮ್ಮ ಸರ್ಕಾರ ಇದ್ದಾಗ ಹಿಜಾಬ್‌ ನಿಷೇಧ ಮಾಡಿರಲಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಈ ರೀತಿ ಹೇಳಿದರೆ ಅದು ಸಮಾಜಕ್ಕೆ ಬಗೆಯುತ್ತಿರುವ ದ್ರೋಹ. ಗೊತ್ತಿಲ್ಲ ಎಂದಾದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ’ ಎಂದರು. ‘ಹಿಜಾಬ್ ನಿಷೇಧ ಎಂದರೆ ಅದನ್ನು ಧರಿಸಿ ಎಲ್ಲಿಯೂ ಓಡಾಡುವಂತಿಲ್ಲ. ಹಿಜಾಬ್‌ ಯಾವಾಗ ನಿಷೇಧವಾಗಿದೆ? ಸಿದ್ದರಾಮಯ್ಯ ಮೂರ್ಖರ ರೀತಿ ಮಾತನಾಡಿದ್ದಾರೆ. ಸಮುದಾಯಗಳ ನಡುವೆ ಜಗಳ ಹಚ್ಚಿ, ತುಷ್ಟೀಕರಣ ಮಾಡಿ ಮುಸ್ಲಿಮರ ಮತಗಳನ್ನು ಪಡೆಯುವ ಹುನ್ನಾರ ಇದರ ಹಿಂದೆ ಇದೆ. ಈ ಷಡ್ಯಂತ್ರಕ್ಕೆ ಮುಸ್ಲಿಮರು ಬಲಿಯಾಗಬಾರದು’ ಎಂದು…

Read More

ಚಿಕ್ಕಮಗಳೂರು:- ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಲಾಭಕ್ಕೆ ಸಮಾಜದಲ್ಲಿನ ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ಸಂಚು ಹೂಡಿದ್ದು ಅದು ಅವರ ಹೇಳಿಕೆಯಲ್ಲಿ ವ್ಯಕ್ತವಾಗಿದೆ ಎಂದರು. ಶಾಲೆಯಲ್ಲಿ ಸಮವಸ್ತ್ರ ಇರಬೇಕೋ, ಬೇಡವೋ ಎನ್ನುವುದು ಚರ್ಚೆಯ ವಿಷಯವಾಗಬಾರದು. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಯಾವ ಉದ್ದೇಶಕ್ಕೆ ತಂದಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಇದು ಅರ್ಥ ಮಾಡಿಕೊಳ್ಳದೆ ಶಾಲಾ-ಕಾಲೇಜು ಮಕ್ಕಳಲ್ಲಿಯೂ ಜಾತಿ ಮತ್ತು ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಶಾಲಾ ಮಕ್ಕಳಲ್ಲಿ ವಿಷ ಬೀಜ ಬಿತ್ತುವುದು, ಕೋಮುವಾದ ಬಿತ್ತುವುದು ಅದೊಂದು ರಾಷ್ಟ್ರಘಾತಕ ಕೆಲಸ. ಮಹಮದ್‌ ಆಲಿ ಜಿನ್ನಾ ಮತ್ತು ಕಾಂಗ್ರೆಸ್‌ ಮನಸ್ಥಿತಿ ಬೇರೆ ಬೇರೆಯಲ್ಲ. ಜಿನ್ನಾ ಕೂಡ ಪ್ರತ್ಯೇಕತೆ ಭಾವನೆಯನ್ನು ಬಿತ್ತಿ ಬೆಳೆಸಿ, ಆ ಮೂಲಕ ಭಾರತದ ವಿಭಜನೆಗೆ ಕಾರಣನಾದ. ಇವತ್ತು ಕಾಂಗ್ರೆಸ್‌ ತನ್ನ ರಾಜಕೀಯ ಲಾಭಕ್ಕೆ ಶಾಲಾ ಮಕ್ಕಳಲ್ಲೂ…

Read More

ಕೊಯಮತ್ತೂರು:- ಪರೋಟ ತಿಂದ ಮರುದಿನವೇ ಯುವಕ ದುರ್ಮರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ವರದಿಯಲ್ಲಿ ಭಯಾನಕ ಸಂಗತಿ ಬಹಿರಂಗವಾಗಿದೆ. ಹೇಮಚಂದ್ರನ್​ ಮೃತ ಯುವಕ. ಬುಧವಾರ ರಾತ್ರಿ ಹೇಮಚಂದ್ರನ್​ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಪರೋಟ ತಂದು ಸೇವಿಸಿದ್ದರು. ಗುರುವಾರ ಬೆಳಗ್ಗೆ ಹೇಮಚಂದ್ರನ್​ ಎಚ್ಚರಗೊಂಡಾಗ ಉಸಿರಾಡಲು ತೊಂದರೆಯಾಗುತ್ತಿದೆ ಅಂತಾ ಹೇಳಿದ್ದಾನೆ. ಇದಾದ ಕೆಲವೇ ಸಮಯದಲ್ಲಿ ಆತ ಕುಸಿದುಬಿದ್ದಿದ್ದಾರೆ. ತಕ್ಷಣ ಆತನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಪ್ರಕರಣ ದಾಖಲಿಸಿಕೊಂಡ ಸುಲೂರು ಪೊಲೀಸರು ಹೇಮಚಂದ್ರನ್​ ದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್​)ಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಆರು ತಿಂಗಳ ಹಿಂದೆಯೂ ರಾತ್ರಿ ಪರೋಟ ತಿಂದಾಗ ಹೇಮಚಂದ್ರನ್​ ಉಸಿರಾಟದ ತೊಂದರೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಹೇಮಚಂದ್ರನ್​ ಅವರ ಪಾಲಕರು ಮೃತದೇಹದ ಹೆಬ್ಬೆರಳಿನಲ್ಲಿ ಗಾಯದ ಗುರುತನ್ನು ಕಂಡು ಅನುಮಾನ ವ್ಯಕ್ತಪಡಿಸಿದರು. ಆದರೆ, ಆ ಗಾಯ ಸ್ನೇಹಿತರು ಬೈಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಭಾರತೀಯ…

Read More

ಚನ್ನಪಟ್ಟಣ :- ಶಾಲಾ ಮಕ್ಕಳಲ್ಲಿ ಸಿದ್ದರಾಮಯ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮರೆತು ಹೋಗಿದ್ದ ಹಿಜಾಬ್ ಪ್ರಕರಣವನ್ನು ಮತ್ತೆ ಕೆದಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲಾ ಮಕ್ಕಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಹಿಜಾಬ್ ವಿಚಾರವನ್ನು ಕಾಂಗ್ರೆಸ್‌ನವರು ಮತ್ತೆ ಮುನ್ನಲೆಗೆ ಎಳೆದು ತರುತ್ತಿದ್ದಾರೆ. ಇದು ರಾಜ್ಯದ ಜನರಿಗೂ ಗೊತ್ತಿದೆ’ ಎಂದು ಭಾನುವಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು. ‘ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಿರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಸೂಕ್ತ ಸಂದರ್ಭದಲ್ಲಿ ಹೇಳುತ್ತೇನೆ ಎಂದು ಹೇಳಿದ್ದಾರೆ.

Read More

ಬೆಂಗಳೂರು:- ವೃದ್ಧೆಯೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕ್‌ಲೈನ್ ವೆಂಕಟೇಶ್ ಪುತ್ರನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ ವೆಂಕಟೇಶ್ ಮೇಲೆ ಈ ಆರೋಪ ಬಂದಿದ್ದು, ಈ ಪ್ರಕರಣದ ಬಂಧಿತ ಆರೋಪಿಗಳಿಂದ ವೆಂಕಟೇಶ್ ಪುತ್ರನ ಮಾಲೀಕತ್ವದ ಕಂಪನಿಯ ಬ್ಯಾಂಕ್ ಖಾತೆಗೆ ೧.೨ ಕೋಟಿ ರೂ.ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಅವರ ಪುತ್ರ ಅಭಿಲಾಷ್‌ಗೆ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತನಿಖಾಧಿಕಾರಿ ಮುಂದೆ ಅಭಿಲಾಷ್ ವೆಂಕಟೇಶ್ ಹಾಜರಾಗಿದ್ದರು. ಕೆಲ ಹೊತ್ತು ಅಭಿಲಾಷ್ ಅವರನ್ನು ತೀವ್ರ ವಿಚಾರಣೆ ನಡೆಸಿದ ಅಧಿಕಾರಿಗಳು ಅವರ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ನಾನು ತಪ್ಪು ಮಾಡಿಲ್ಲ. ಮೋಸದ ಬಗ್ಗೆ ತಿಳಿಯದೆ ಹಣ ಪಡೆದಿದ್ದೆ ಎಂದು ಅಭಿಲಾಷ್ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಅಭಿಲಾಷ್ ಅವರನ್ನು ಸಿಸಿಬಿ ಅಧಿಕಾರಿಗಳು ಕಳುಹಿಸಿದ್ದಾರೆ. ಇನ್ನೂ ೨೫ ಲಕ್ಷ ಕಮಿಷನ್ ಕೊಟ್ಟಿದ್ದ ಅಭಿಲಾಷ್: ಜೆ.ಪಿ.ನಗರ…

Read More

ಬೆಂಗಳೂರು: ಕೊರೊನಾ ಮಹಾಮಾರಿ ಜೆಎನ್.1 ರೂಪತಾಳಿ ಯಾರಿಗೂ ಗೋಚರಿಸದಂತೆ ಲಗ್ಗೆ ಇಟ್ಟಿದೆ. ಈಗಾಗಲೇ ಸಾವಿನ ಷರಾ ಬರೆದಿರುವ ಕೊರೊನಾ, ಅಬ್ಬರಿಸಲು ಹೊರಟಿದೆ. ಈಗಾಗಲೇ ಕೆಲ ನಿಯಮಗಳನ್ನ ಜಾರಿಗೆ ತಂದು  ಕೊರೊನಾ ಕ್ರಿಮಿಯನ್ನ ಹದ್ದುಬಸ್ತಿನಲ್ಲಿಟ್ಟಿದೆ.ಇದೀಗ ಸಾಲು ಸಾಲು ಹಬ್ಬಗಳು ಬರುತ್ತಿರೋದು ಮತ್ತೆ ಕೊರೊನಾ ಸುನಾಮಿಯಂತೆ ಹರಡುವ ಆತಂಕ ಕಾಡ್ತಿದ್ದು, ಇದು ಬಿಬಿಎಂಪಿಗೆ ಟೆನ್ಷನ್ ಹೆಚ್ಚಿಸಿದೆ. ಹೋಂ ಐಸೋಲೇಷನ್ ಕಡ್ಡಾಯ.. ಕ್ವಾರಂಟೈನ್ ಆದವರ ಮೇಲೆ ಹೆಚ್ಚು ನಿಗಾ.. ಕೋವಿಡ್ ಟೆಸ್ಟ್ ಹೆಚ್ಚಳ.. ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು. ಹೀಗೆ ಏನೇ ಮುನ್ನೆಚ್ಚರಿಕೆಗಳನ್ನ ಆರೋಗ್ಯ ಇಲಾಖೆ ತೆಗೆದುಕೊಳ್ಳುತ್ತಿದ್ರು, ಚೀನಾ ಕೂಸು ಕೊರೊನಾ ಮಹಾಮಾರಿ ಜೆಎನ್.1 ರೂಪತಾಳಿ ಮೆಲ್ಲ ಮೆಲ್ಲನ್ನೆ ರಾಜ್ಯದ ಜಿಲ್ಲೆಗಳಿಗೆ ಎಂಟ್ರಿ ಕೊಡ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬೆಂಗಳೂರು ಹಾಟ್ ಸ್ಪಾಟ್ ಆಗಲಿದೆಯೇ ಎಂಬ ಸಂದೇಹ ಮೂಡಿದೆ. ಹೌದು .. ಕೊರೊನಾ ಹೊಸ ಅವತಾರದಲ್ಲಿ ಎಲ್ಲೆಡೆ ಹಬ್ಬುತ್ತಿದೆ.  ಅತ್ತ ವೈರಸ್ ಹಾವಳಿ ಇದ್ರೆ ಇತ್ತ ಸಾಲು ಸಾಲು ರಜೆಗಳು…

Read More

ಮೇರಿ ಕ್ರಿಸ್ಮಸ್ ಸೂರ್ಯೋದಯ: 06.39 AM, ಸೂರ್ಯಾಸ್ತ : 06.01 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ತ್ರಯೋದಶಿ 05:54 AM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ರೋಹಿಣಿ 09:39 PM ತನಕ ನಂತರ ಮೃಗಶಿರ ಯೋಗ: ಇವತ್ತು ಸಾಧ್ಯ 05:42 AM ತನಕ ನಂತರ ಶುಭ ಕರಣ: ಇವತ್ತು ತೈತಲೆ 05:54 AM ತನಕ ನಂತರ ಗರಜ 05:48 PM ತನಕ ನಂತರ ವಣಿಜ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 06.24 PM to 08.02 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:37 ವರೆಗೂ ಮೇಷ: ಮಕ್ಕಳ ಭವಿಷ್ಯದ ವಿಚಾರದಲ್ಲಿ ಚಿಂತನೆ. ಅನಾವಶ್ಯಕವಾಗಿ ಮಕ್ಕಳ ಜೊತೆ ಕಿರಿಕಿರಿ ಹಾಗೂ ಮನಃಸ್ತಾಪ.ಸಂಗಾತಿ ಜೊತೆ…

Read More

ಕಾರವಾರ: ಲೋಕಸಭಾ ಚುನಾವಣೆಗೆ (Lok Sabha Election) ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡಿದಾಗ ತಿರಸ್ಕರಿಸುವುದು ಮೂರ್ಖತನವಾಗುತ್ತದೆ ಎಂದು ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಹೇಳಿದ್ದಾರೆ. ಆರೋಗ್ಯದ (Health) ಸಮಸ್ಯೆಯಿಂದಾಗಿ ಚುನಾವಣಾ ರಾಜಕಾರಣ, ಪಕ್ಷದ ರಾಜಕಾರಣದಿಂದ ದೂರವಿದ್ದೆ.  ಅಭಿಮಾನಿಗಳಿಂದ ಚುನಾವಣೆಗೆ ನಿಲ್ಲಬೇಕೆಂಬ ಒತ್ತಡ ಬರುತ್ತಿದೆ ಎಂದು ಅವರು ಹೇಳಿದರು. ಪಕ್ಷ ಹಾಗೂ ರಾಜಕಾರಣದಿಂದ ಮೂರು ವರ್ಷದಿಂದ ದೂರ ಉಳಿದಿದ್ದ ಅನಂತ್‌ಕುಮಾರ್ ಹೆಗಡೆ ಇಂದು ಶಿರಸಿಯ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್‌ನವರು ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Read More