Author: AIN Author

ರಾಯಚೂರು:  ಇಂದಿನ ಸ್ವಾಮೀಜಿಗಳನ್ನು ಟೀಕೆ‌ ಮಾಡಿದ ಬಸನಗೌಡ ಯತ್ನಾಳ್ ಇಂದಿನ ಸ್ವಾಮೀಜಿಗಳು ಮಾರೀಸಿಸ್, ಸಿಂಗಾಪೂರ, ಲಂಡನ್ ಹೋಗ್ತಾರೆ. ಆದರೆ ಕೂಡಲಸಂಗಮ‌ ಸ್ವಾಮೀಜಿ ಹಾಗಲ್ಲ  ನಾನು ಈ ಸಮಾಜದಲ್ಲಿ ಮೂವರು ಸ್ವಾಮೀಜಿಗಳನ್ನ‌ಮಾತ್ರ ನಂಬುತ್ತೇನೆ ಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಂಗೆಯ ಶಿವಕುಮಾರಸ್ವಾಮೀಜಿ,ಮೃತ್ಯುಂಜಯ ಸ್ವಾಮಿಯನ್ನ ಎಂದು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಸ್ವಾಮೀಜಿಗಳ ಬಗ್ಗೆ ಅಪಪ್ರಚಾರ ಮಾಡಿದ್ದು, ಮತ್ತೊಬ್ಬ  ಸ್ವಾಮಿಜಿ ಇದಾರೆ ಚೈನಿ ಸ್ವಾಮೀಜಿ ವಚನಾನಂದ‌ ಸ್ವಾಮೀಜಿ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಯತ್ನಾಳ್ ಈ ಮೊದಲು ಯಡಿಯೂರಪ್ಪ ಹಿಂದೆ ಓಡಾಡ್ತಿದ್ದ ಈಗ ಸಿದ್ದರಾಮಯ್ಯ ಹಿಂದೆ ಓಡಾಡ್ತಿದಾನೆ . ಸಮಾಜಗಳಿಗೆ ಆಸೆ ಹಚ್ತಾರೆ ಅಪ್ಪ ಮಗ ಎಂದು ಬಿ.ಎಸ್. ಯಡಿಯೂರಪ್ಪ, ಮಗ ವಿಜಯೇಂದ್ರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಯತ್ನಾಳ್ ವಿಧಾನಸಭೆಯಲ್ಲಿ ಪಂಚಮಸಾಲಿ ಜನಾಂಗಕ್ಕೆ‌ಮಾತ್ರ ಮೀಸಲಾತಿ ಕೊಡಿ ಎಂದಿಲ್ಲ ದಾವಣಗೆರೆಯಲ್ಲಿ  ಸಮಾವೇಶ ನಡೆಯುತ್ತಿದೆ ಯಡಿಯೂರಪ್ಪ, ಖಂಡ್ರೆ, ಶಿವಶಂಕ್ರಪ್ಪ ಸಮಾವೇಶ ಅದು ಪಂಚಮಸಾಲಿ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಿಸಿದ್ದೆವು ಈ ಮೂರು ಜನ ಸೇರಿ ಮೂವತ್ತು ಸಾವಿರ ಜನ ಸೇರಿಸಿದಾರೆ…

Read More

ಚಿಕ್ಕಮಗಳೂರು: ಬಿಜೆಪಿ ಪ್ರತಿಪಕ್ಷ ನಾಯಕ  ಆರ್ ಅಶೋಕ್ ಅವರು ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳೊಂದಿಗೆ ಪ್ರಥಮ ಬಾರಿಗೆ ವಿದ್ಯಕ್ತವಾಗಿ ದತ್ತಮಾಲೆ ಧರಿಸಿ ವ್ರತದಲ್ಲಿ ಭಾಗಿಯಾದರು. ತ್ರಿಮೂರ್ತಿ ಸ್ವರೂಪ ಶ್ರೀ ಗುರುದತ್ತಾತ್ರಯ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿ ಟಿ ರವಿ ಹಾಗೂ ಚಿಕ್ಕಮಗಳೂರಿನ ಭಕ್ತಾದಿಗಳು ಜೊತೆಯಲ್ಲಿದ್ದರು. ಪ್ರತಿಪಕ್ಷದ ನಾಯಕರಾದ ಮಾನ್ಯ ಆರ್. ಅಶೋಕ್ ಅವರು ಚಿಕ್ಕಮಗಳೂರಿನಲ್ಲಿ ಇಂದು ರಾತ್ರಿ ದತ್ತಮಾಲೆ ಧಾರಣೆ ಮಾಡಿ ದತ್ತಮಾಲೆ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

Read More

ಬೆಳಗಾವಿ: ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಇದಕ್ಕಿಂತ ಭಿನ್ನ ನಿರೀಕ್ಷೆ ನಮಗಿರಲಿಲ್ಲ. ಕಾಂಗ್ರೆಸ್ ಒಂಥರ ಮುಸ್ಲಿಂ ಪಾರ್ಟಿ ಆಗಿ ನಿರ್ಮಾಣಗೊಂಡಿದೆ. ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲ ಎಂದು ನಮೋ ಬ್ರಿಗೇಡ್ ನ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾನೂನು ಹೇಳಿದನ್ನು ಒಪ್ಪಿಕೊಳ್ಳುವಂಥ ದಾವಂತವೂ ಇಲ್ಲ. ಹೇಗಾದರೂ ಮಾಡಿ ಮುಸ್ಲಿಂ ಮತಗಳನ್ನು ತಮ್ಮತ್ತ ಸೆಳೆಯುವುದೇ ಅವರ ತಂತ್ರವಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ಮುಸ್ಲಿಂ ಪಾರ್ಟಿ ಆಗಿ ಮಾರ್ಪಟ್ಟಿದೆ ಎಂದು ಹರಿಹಾಯ್ದರು. ನಾವು ಶಿಕ್ಷಣ ನೀತಿ ಸಮಾನತೆ ಇರಬೇಕೆಂದು ವಸ್ತ್ರ ಸಂಹಿತೆ ಜಾರಿಯಿದೆ. ಹಿಜಾಬ್ ಹಾಕಿಕೊಂಡು ತಿರುಗುವುದನ್ನು ಪಿಎಫ್ಐ ಮಾಡಿದರು. ಪಿಎಫ್ಐ ಬೆಂಬಲಿಗರAತೆ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೇಸ್‌ಗಳನ್ನು ತೆರವು ಮಾಡಿದರು. ಈಗ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಹಿಜಾಬ್ ನಿಷೇಧ ತೆರವು ಮಾಡಿದ್ದಾರೆ. ಬಹಳ ದುರಂತಕಾರಿ ಸಂಗತಿ ಇದು ಎಂದರು. ಕೇAದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ…

Read More

ಮಲೈಕಾ ಅರೋರಾ ಅವರೊಂದಿಗೆ ವಿಚ್ಛೇದನದ 6 ವರ್ಷಗಳ ನಂತರ ನಟ ಶುರಾ ಖಾನ್ ಅವರನ್ನು ವಿವಾಹವಾದರು, ಬಾಲಿವುಡ್ ನಟ-ನಿರ್ಮಾಪಕರು ತಮ್ಮ ಜೀವನದ ಪ್ರೀತಿಯೊಂದಿಗೆ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿರುವುದರಿಂದ ಖಾನ್ ಕುಟುಂಬದಲ್ಲಿ ಇದು ಸಂಭ್ರಮದ ಸಮಯವಾಗಿದೆ. ನಟ ಈಗ ಮೇಕಪ್ ಕಲಾವಿದ ಶುರಾ ಖಾನ್ ಅವರನ್ನು ಮದುವೆಯಾಗಿದ್ದಾರೆ. ಎಲ್ಲಾ ಊಹಾಪೋಹಗಳ ನಡುವೆ, ಅವರು ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ಮುಂಬೈ ಮನೆಯಲ್ಲಿ ನಿಕಟ ನಿಕಾಹ್ ಸಮಾರಂಭದಲ್ಲಿ ಶುರಾ ಅವರನ್ನು ಭೇಟಿಯಾದರು ದಂಪತಿಗಳು ಅನ್ಯೋನ್ಯ ಸಮಾರಂಭದಲ್ಲಿ ವಿವಾಹವಾದ ಕಾರಣ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಅವರಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸುವ ಸಮಯ. ಕ್ರಿಸ್‌ಮಸ್ 2023 ರ ಒಂದು ದಿನದ ಮೊದಲು ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಎರಡು ಲವ್‌ಬರ್ಡ್‌ಗಳು ಹೊಡೆದವು. ಇದು ಶುವಾ ಅವರ ಎರಡನೇ ಮದುವೆಯಾಗಿದೆ. ಡಿಸೆಂಬರ್ 24 ರಂದು ಬಂಧುಗಳು, ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಆಪ್ತ ಸ್ನೇಹಿತರ ಸಹವಾಸದಲ್ಲಿ ಮದುವೆಯ ಸಂಭ್ರಮ…

Read More

ಬೆಂಗಳೂರು:- ಇಂದು ಕ್ರಿಸ್‌ಮಸ್‌ ಹಬ್ಬ ಹಿನ್ನೆಲೆ, ಬೆಂಗಳೂರಿನ ಎಂಜಿ ರಸ್ತೆ, ಟ್ರಿನಿಟಿ, ಬ್ರಿಗೆಡ್‌ ರಸ್ತೆ, ಕೋರಮಂಗಲ ಹೀಗೆ ಪ್ರಮುಖ ಏರಿಯಾಗಳಲ್ಲಿ ಸಂಭ್ರಮ ಕಳೆಗಟ್ಟಿದೆ. ಚರ್ಚ್‌ಗಳಲ್ಲಿ ಮದ್ಯರಾತ್ರಿಯಿಂದಲೇ ಯೇಸುವಿನ ಪ್ರಾರ್ಥನೆ ಆರಂಭವಾಗಿದೆ. ಇದರೊಂದಿಗೆ ಮಾಲ್‌ಗಳು ಕೂಡ ಕ್ರಿಸ್‌ಮಸ್‌ ಹಬ್ಬವಾಗಿ ಮದುಮಣಗಿತ್ತಿಯಂತೆ ಸಿಂಗರಿಸಿಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ. ಬೆಂಗಳೂರು ಚರ್ಚ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಶತಶತಮಾನಗಳ ಚರ್ಚ್‌ಗಳು ಇಲ್ಲಿದೆ. ಕ್ರಿಸ್‌ಮಸ್‌ ಹಬ್ಬದಂದು ಬೆಂಗಳೂರಿನ ಪ್ರಸಿದ್ಧ 5 ಚರ್ಚ್‌ಗಳ ಪರಿಚಯ ತಿಳಿಯಿರಿ. ಈ ಚರ್ಚ್‌ಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಅವುಗಳ ರಚನೆ, ವಿನ್ಯಾಸ ಆಕರ್ಷಿಸಿದೆ ಇರದು. ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್ 17ನೆ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರು ಈ ಚರ್ಚ್ ನೋಡದೆ ಮರಳುವುದಿಲ್ಲ. ಗೋಥಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್‌ನ ವಾಸ್ತು ಶಿಲ್ಪ ಮನಮೋಹಕವಾಗಿದೆ. ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿರುವ ಈ ಚರ್ಚ್‌ನಲ್ಲಿ ಭಾನುವಾರ ಸಂಜೆಯಿಂದಲೇ ಜನ ಜಂಗುಳಿ ನೆರೆದಿತ್ತು. ಯೇಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.…

Read More

ರಾಜಧಾನಿ ಬೆಂಗಳೂರು ಸೇರಿ ಹಲವು ಮಹಾನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ.. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,200 ರೂ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,490ರೂ. ಬೆಳ್ಳಿ ಬೆಲೆ 1 ಕೆಜಿ: 76,750 ರೂ. ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 58,200 ರೂಪಾಯಿ ಇತ್ತು. ಆದರೆ ಇಂದು 58,200 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಯೆ ಇಂದು ಕೂಡಾ ಮುಂದುವರೆದಿದೆ. ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 63,490 ರೂಪಾಯಿ ಇತ್ತು. ಆದರೆ ಇಂದು63,490 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಯೆ ಇಂದು ಕೂಡಾ ಮುಂದುವರೆದಿದೆ.

Read More

ಕಲಬುರ್ಗಿ:- ನಾನು ಹೀರೋ ಅಲ್ಲ, ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತು ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಯಾವತ್ತಿದ್ರು ವಿಲನ್, ನಾನು ಹೀರೋ ಅಲ್ಲ, ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತು ಇರುತ್ತೆ, ಇಲ್ಲದಿದ್ರೆ ಇಲ್ಲ ಎಂದು ಬಿಜೆಪಿಯ ಫೈರ್‌ ಬ್ರ್ಯಾಂಡ್‌ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮನ್ನು ವಿಲನ್‌ಗೆ ಹೋಲಿಕೆ ಮಾಡಿಕೊಂಡು ಮಾತನಾಡಿದ್ದಾರೆ. ತಮ್ಮನ್ನು ಆಲ್‌ ಪಾರ್ಟಿ ವಿಪಕ್ಷ ನಾಯಕ ಎಂದು ತಾವೇ ಬಣ್ಣಿಸಿಕೊಂಡರಲ್ಲದೆ ಎಲ್ಲದಕ್ಕೂ ಒಂದು ಅಂತ್ಯ ಅಂತ ಇರುತ್ತೆ. ಅದು 2024 ಲೋಕಸಭೆ ಚುನಾವಣೆ ನಂತರದಲ್ಲಿ ಎಲ್ಲರು ಅನುಭವಿಸುತ್ತಾರೆಂದು ಒಗಟಾಗಿ ಹೇಳಿದರು. ವಿಲನ್ ಇಲ್ಲದಿದ್ರೆ ಹೀರೋ ಯಾರ ಜೋಡಿ ಫೈಟ್ ಮಾಡ್ತಾನೆ‌? ಅಂಬರೀಷ್ ಸಹ ವಿಲನ್ ಇದ್ರು ನಂತ್ರ ಹೀರೋ ಆದ್ರು, ಅದೇ ತರಹ ನಾನು ಆಮೇಲೆ ಹೀರೋ ಆಗಬಯಸೋದು ಎಂದು ಹೇಳುತ್ತ ಬಿಜೆಪಿಯ ಆಂತರಿಕ ಕಚ್ಚಾಟದ ಹಲವು ಸಂಗತಿಗಳನ್ನ ಒಗಟಾಗಿ ವಿಲನ್‌, ಹಿರೋ ಪರಿಕಲ್ಪನೆಯಲ್ಲಿ ಸೋದಾಹರಣವಾಗಿ ವಿವರಿಸಿದರು. ರಾಜ್ಯ…

Read More

ಮಂಗಳೂರು:- ದಲಿತ ಎಂಬ ಕೀಳರಿಮೆಯನ್ನು ತೆಗೆದು ಹಾಕಬೇಕು ಎಂದು ಮಾಜಿ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪರಮೇಶ್ವರ್ ಎಲ್ಲಾ ಸರಿ ಕಣ್ರೀ ಆದರೆ..ದಲಿತ. ಇಂತಹ ಕೀಳರಿಮೆಯನ್ನು ತೆಗೆದು ಹಾಕಬೇಕಾದಲ್ಲಿ ನಾವೆಲ್ಲಾ ಒಗ್ಗಟ್ಟಾಗಬೇಕು. ಒಗ್ಗಟ್ಟಾಗದಿದ್ದಲ್ಲಿ ತುಳಿತಕ್ಕೊಳಗಾದ, ಶೋಷಿತ ಸಮಾಜ ಹಾಗೆಯೇ ಮುಂದುವರಿಯುತ್ತದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ಶಿಕ್ಷಣದಿಂದ ಮಾತ್ರ ಬಲಯುತರಾಗಲು ಸಾಧ್ಯ. ಆದ್ದರಿಂದ ಆದಿ ದ್ರಾವಿಡ ಸಮಾಜದ ಪ್ರತೀ ಮನೆಯಿಂದ ಓರ್ವನನ್ನಾದರೂ ಪದವೀಧರರನ್ನಾಗಿಸುವ ಸಂಕಲ್ಪವನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು ಎಂದರು. ನಾನು ಆದಿದ್ರಾವಿಡ ಸಮುದಾಯದಿಂದ ಬಂದವನು. ಆದರೆ ನಾನು ಹೊರದೇಶಕ್ಕೆ ಹೋಗಿ ಶಿಕ್ಷಣ ಪಡೆಯುವಷ್ಟು ನನ್ನ ತಂದೆ ಶಿಕ್ಷಣದ ಬಗ್ಗೆ ಒಲವು ಇರಿಸಿಕೊಂಡಿದ್ದರು. ಬಳಿಕ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿ 35 ವರ್ಷಗಳ ರಾಜಕೀಯ ಜೀವನ ನಡೆಸಿದ್ದೇನೆ. ಸಚಿವನಾಗಿದ್ದೇನೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರಾಜ್ಯದಲ್ಲಿ ಮೂರು ಬಾರಿ ಗೃಹ…

Read More

ನೆಲಮಂಗಲ: ಮನೆಯ ಮುಂದೆ ಇದ್ದ ಶ್ವಾನದ ಮೇಲೆ ದೈತ್ಯ ಚಿರತೆ ದಾಳಿ ಮಾಡಿದ ಘಟನೆ ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಕ್ರಾಸ್ ಬಳಿ ರಾತ್ರಿ ಜರುಗಿದೆ. ಗ್ರಾಮದ ಭರತ್ ಎಂಬುವವರ ತೋಟದ ಮನೆಯಲ್ಲಿ ಇದ್ದ ಶ್ವಾನದ ಮೇಲೆ ಸಂಚು ಹಾಕಿ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಕಾಟದಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ.

Read More

ದೇವನಹಳ್ಳಿ:-ದೊಡ್ಡಬಳ್ಳಾಪುರ ನಗರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಘಟನೆ ಜರುಗಿದೆ. ದೊಡ್ಡಬಳ್ಳಾಪುರದ ಬಾಶಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅರಹಳ್ಳಿ- ಗುಡ್ಡದಹಳ್ಳಿ ಬಳಿಯ ಅಜಾಕ್ಸ್ ಕಂಪನಿ ಮುಂಭಾಗ ಚಿರತೆ ಕಾಣಿಸಿಕೊಂಡಿದ್ದು, ಗುಡ್ಡದಹಳ್ಳಿ ಅಪೇರಲ್ ಪಾರ್ಕ್ ಅಜಾಕ್ಸ್ ಕಂಪನಿಯ CCTV ಯಲ್ಲಿ ಚಿರತೆ ಪ್ರತ್ಯಕ್ಷ ದೃಶ್ಯ ಸೆರೆಯಾಗಿದೆ. ಈ ಹಿನ್ನೆಲೆ ಮತ್ತೆ ದೊಡ್ಡಬಳ್ಳಾಪುರ ನಾಗರೀಕರಲ್ಲಿ ಆತಂಕ ಹೆಚ್ಚಾಗಿದೆ.

Read More