ಬೆಂಗಳೂರು: ಭಾರತದ ಪ್ರಮುಖ ನಿದ್ರಾ ಉತ್ಪನ್ನಗಳ ತಯಾರಕರಾದ ಪೆಪ್ಸ್ ಇಂಡಸ್ಟ್ರೀಸ್ ಗ್ರಾಹಕರಿಗೆ ವಿಶ್ವದರ್ಜೆಯ ನಿದ್ರಾ ಉತ್ಪನ್ನಗಳನ್ನು ಒದಗಿಸುವ ಉದ್ದೇಶದ ಭಾಗವಾಗಿ ವಿನ್ಯಾಸಗೊಳಿಸಲಾಗಿರುವ ತನ್ನ ಹೊಸ ಐಷಾರಾಮಿ ಹಾಸಿಗೆ ಸರಣಿಯನ್ನು ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಇಂದು ಬಿಡುಗಡೆ ಮಾಡಿದೆ. https://ainlivenews.com/the-driver-lost-control-of-the-car-and-crashed-into-a-field-a-tragedy-that-was-avoided/ ಪೆಪ್ಸ್ ಕಂಫರ್ಟ್, ಪೆಪ್ಸ್ ಸುಪ್ರೀಮ್ ಮತ್ತು ಪೆಪ್ಸ್ ರೆಸ್ಟೋನಿಕ್ ಮೆಮೊರಿ ಫೋಮ್ ಎಂಬ ಮೂರು ಹೊಸ ಉತ್ಪನ್ನ ಸರಣಿಯನ್ನು ಅನಾವರಣಗೊಳಿಸಿದೆ. ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಪೆಪ್ಸ್ ಇಂಡಸ್ಟ್ರೀಸ್ ನ ಸಹ-ಸಂಸ್ಥಾಪಕ ಮತ್ತು ಸಿಇಓ ಶಂಕರ್ ರಾಮ್ ‘ಬೆಂಗಳೂರಿನಲ್ಲಿ ಬಿಡುಗಡೆಯಾಗಿರುವ ನಮ್ಮ ಹೊಸ ಮ್ಯಾಟ್ರಿಸ್ ಗಳು ಹೊಸತನ, ಅತ್ಯುತ್ತಮ ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯಲ್ಲಿ ಉತ್ಪನ್ನ ಒದಗಿಸುವ ಪೆಪ್ಸ್ ನ ಬದ್ಧತೆಯ ಸಾಕಾರವಾಗಿವೆ. ಈ ಉತ್ಪನ್ನಗಳು ಗ್ರಾಹಕರ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸಲಿವೆ ಎಂದರು.
Author: AIN Author
ಬೆಳಗಾವಿ:- ಚಾಲಕನಿಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಗುದ್ದಿ ಹೊಲದಲ್ಲಿ ಕಾರು ನುಗ್ಗಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದ ಗಣೇಶ ನಗರ ಹತ್ತಿರ ನಡೆದಿದೆ. https://ainlivenews.com/power-cut-in-bengaluru-tomorrow-check-if-your-area-is-affected/ ಚಿಕ್ಕೋಡಿ-ಬೆಳಗಾವಿ ಮುಖ್ಯ ರಸ್ತೆ ಮೇಲೆ ಸಿದ್ದು ಎಂಬವರು ಅಥಣಿಯಿಂದ ಸಂಕೇಶ್ವರ ನಗರಕ್ಕೆ ಹೊಗುವಾಗ ಘಟನೆ ನಡೆದಿದೆ. ಮದುವೆಗಾಗಿ ಕಾರ್ ಮೂಲಕ ಹೋಗುತ್ತಿದ್ದ ವೇಳೆ ಚಿಕ್ಕೋಡಿ ಹೊರವಲಯದಲ್ಲಿರುವ ಗಣೇಶ್ ನಗರ ಗೇಟ ಹತ್ತಿರ ಫರ್ನಿಚರ ಅಂಗಡಿಯ ಮುಂದೆ ತೆರಳುವ ಸಿದ್ದು ಆವರಿಗೆ ತಲೆ ಸುತ್ತು ಬಂದಿದ್ದು ಇದರಿಂದ ವಾಹನ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಬೇರೆ ಕಾರಿಗೆ ಡಿಕ್ಕಿ ಹೊಡೆದು, ಮೆಣಸಿನಕಾಯಿ ತೊಟಕ್ಕೆ ಕಾರು ಹೋಗಿದೆ. ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು ಕಾರಿನಲ್ಲಿ ಒಟ್ಟು 3 ಜನ ಪ್ರಯಾಣಿಸುತ್ತಿದ್ದರು ಪಕ್ಕದಲ್ಲಿ ಟ್ರಾನ್ಸಪರ್ಮರ್ ಇತ್ತು ಆದರೆ ಅದೃಷ್ಟವಶ ಸಮೀಪದಿಂದ ಕಾರು ಹೊಲದಲ್ಲಿ ಹೋಗಿ ನಿಂತಿದೆ. ಇಲ್ಲವಾದರೆ ದೊಡ್ಡ ಅನಾಹುತ ಆಗುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದರು. ಸ್ಥಳಕ್ಕೆ ಚಿಕ್ಕೋಡಿ…
ಬೆಂಗಳೂರು:- ತುರ್ತು ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/cm-sahana-has-lost-his-strength-basavaraja-bommai/ ಬ್ಯಾಡರಹಳ್ಳಿ, ಬಿಇಎಲ್ ಲೇಔಟ್ 2ನೇ ಹಂತ, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಬಿಡಿಎ 8 ಮತ್ತು 9ನೇ ಬ್ಲಾಕ್, ರೈಲ್ವೆ ಲೇ ಔಟ್, ಉಪಕಾರ್ ಲೇಔಟ್, ಬಾಲಾಜಿ ಲೇ ಔಟ್, ಭವಾನಿ ಲೇಔಟ್, ಗೊಲ್ಲರಹಟ್ಟಿ, ರತ್ನನಗರ, ಮಾರ್ಡನ್ ಲೇಔಟ್, ಡಿ ಗ್ರೂಪ್ ಲೇಔಟ್, ಹೇರೋಹಳ್ಳಿ, ತುಂಗಾನಗರ, ಕೇಪೇಗೌಡ ನಗರ, ಪೋಲಿಸ್ ಕ್ವಾಟ್ರಸ್, ಬೈರವೇಶ್ವರನಗರ ಇಂಡಸ್ಟ್ರೀಯಲ್ ಎಸ್ಟೇಟ್. ಹೊಸಹಳ್ಳಿ, ಚಿಕ್ಕ ಗೊಲ್ಲರಹಟ್ಟಿ, ಕಲ್ಲಹಳ್ಳಿ, ಹೊಸಹಳ್ಳಿ, ಬಿಎಂಟಿಸಿ ಡಿಪೋ, ಅನಿಕೇತನನಗರ, ಪಂಚಮುಖಿ ಲೇಔಟ್, ನಡೇಕೇರಪ್ಪ ಇಂಡಸ್ಟ್ರೀಯಲ್ ಎಸ್ಟೇಟ್, ಮಹದೇಶ್ವರನಗರ, ಮಾರುತಿ ನಗರ, ನಾಗರಹೊಳೆ ನಗರ, ಮುನೇಶ್ವರ ನಗರ, ಸಂಜೀವ್ ನಗರ, ಅನ್ನಪೂರ್ಣೇಶ್ವರಿ ನಗರ, ಸುಂಕದಕಟ್ಟೆ ಇಂಡಸ್ಟ್ರೀಯಲ್ ಏರಿಯಾ, ಚಂದನ ಬಡಾವಣೆ, ಕೆಬ್ಬಹಳ್ಳ, ರಾಜೀವ್ ಗಾಂಧಿನಗರ, ಚನ್ನಪ್ಪ ಲೇಔಟ್, ಶ್ವೀನಿವಾಸನಗರ, ಪೈಪ್ ಲೈನ್ ರೋಡ್. ಮುತ್ತುರಾಯ ಬಡಾವಣೆ, ಪಿ & ಟಿ ಲೇ ಔಟ್, ರೋಡ್ ರಾಮಣ್ಣ…
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಬಜೆಟ್ ಖರ್ಚು ವೆಚ್ಚದ ಬಗ್ಗೆ ಕೇಳಿದರೆ, ಕೇಂದ್ರದ ಕಡೆಗೆ ಬೆರಳು ಮಾಡುತ್ತಾರೆ. ಅದನ್ನು ನೋಡಿದರೆ, ಅವರು ಸಹನಾ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. https://ainlivenews.com/conductor-assault-case-did-the-police-file-a-false-pocso-case/ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದು ಸಲಹೆ ನೀಡಿದರೆ, ಅದಕ್ಕೂ ಅವರಿಗೆ ಆಪತ್ತಿದೆ ಎಂದರೆ ಅವರ ಸಹನಾ ಶಕ್ತಿ ಕಳೆದುಕೊಂಡಿದ್ದಾರೆ. ನಾವು ರಾಜ್ಯದ ಬಜೆಟ್ ಬಗ್ಗೆ ಮಾತನಾಡಿದರೆ, ಕೇಂದ್ರದ ಬಜೆಟ್ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಬಜೆಟ್ ಬಗ್ಗೆ ಸಂಪೂರ್ಣ ವಿವರ ಕೊಡಬೇಕು. ಕಳೆದ ವರ್ಷ ಯಾವುದಕ್ಕೆ ಎಷ್ಟು ಹಣ ಇಟ್ಟಿದ್ದರು, ಎಷ್ಟು ಖರ್ಚಾಗಿದೆ ಎನ್ನುವುದನ್ನು ಮಾಹಿತಿ ನೀಡಬೇಕು. ನಾನಿದ್ದಾಗ ಪೂರಕ ಬಜೆಟ್ ಮಂಡನೆ ಮಾಡಿದ್ದೆ, ಇವರು ಬಂದ ಮೇಲೆ ಎರಡು ವರ್ಷದಿಂದಲೂ ಕೊರತೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಾವಿದ್ದಾಗ 77 ಸಾವಿರ ಕೋಟಿ ಸಾಲ ಪಡೆದು ಅದರಲ್ಲಿ…
ಬೆಳಗಾವಿ: ಕನ್ನಡಿಗರ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಲ್ಲೆಗೈದ ನಾಲ್ವರು ಆರೋಪಿಗಳನ್ನ ಪೊಲೀಸರು ಅರೇಸ್ಟ್ ಮಾಡಿದ್ದಾರೆ. ಆದ್ರೆ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿ ಪೊಲೀಸರು ಯಡವಟ್ಟು ಮಾಡಿಕೊಂಡಿದ್ದಾರೆ. ಪೊಲೀಸರ ವರ್ತನೆ ವಿರುದ್ಧ ಕನ್ನಡ ಹೋರಾಟಗಾರರು ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ರೆ. ಅತ್ತ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕರ್ನಾಟಕದ ಬಸ್ ಗೆ ಭಗ್ವಾಧ್ವಜ ಕಟ್ಟಿ ಪುಂಡಾಟ ಮೆರೆದಿದ್ದಾರೆ. ಸದ್ಯ ಗಡಿಯಲ್ಲಿ ಭಾಷಾ ವಿಚಾರದ ಕಿಚ್ಚು ಬೂದಿಮುಚ್ಚಿದ ಕೆಂಡದಂತಾಗಿದೆ. https://ainlivenews.com/staff-who-came-to-collect-electricity-bill-attacked-with-stones-this-is-the-behavior-of-the-customer/ ಹೌದು… ಬೆಳಗಾವಿಯಲ್ಲಿ ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಎಂಇಎಸ್ ಪುಂಡರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ತೀವ್ರ ಹಲ್ಲೆಗೆ ಒಳಗಾದ ಕಂಡಕ್ಟರ್ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತ್ತ ಪೊಲೀಸರು ಹಲ್ಲೆ ಮಾಡಿದ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನ ಅರೇಸ್ಟ್ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದ ಮಾರುತಿ ಚಂದಗಡಕರ 33, ರಾಹುಲ್ ನಾಯ್ಡು 28, ಬಾಳು ಗೊಂಜೇಕರ 28 ಅರೇಸ್ಟ್ ಮಾಡಿ…
ಬೆಳಗಾವಿ:- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯಡಿ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. https://ainlivenews.com/death-of-bidar-pilgrims-in-uttar-pradesh-mp-sagar-met-the-family-members-of-the-deceased/ ಆದರೂ ಯೋಜನೆ ಜಾರಿಗೂ ಮೊದಲಿನವರೆಗೆ ಉಳಿಸಿಕೊಂಡಿರುವ ಬಾಕಿ ಪಾವತಿ ಮಾಡಲು ಗ್ರಾಹಕರು ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಗ್ರಾಹಕರು ಸಂಪೂರ್ಣ ಬಾಕಿ ವಿದ್ಯುತ್ ಮೊತ್ತವನ್ನು ಪಾವತಿ ಮಾಡಿಲ್ಲ. ಇನ್ನೂ ಬಾಕಿ ವಸೂಲಾತಿಗೆ ಹೋದ್ರೆ ಸಿಬ್ಬಂದಿಗಳ ಮೇಲೇಯೇ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಧುಪದಾಳ ಗ್ರಾಮದಲ್ಲಿ ವಿದ್ಯುತ್ ಬಾಕಿ ಬಿಲ್ ಪಾವತಿ ಮಾಡುವಂತೆ ಕೇಳಲು ಹೋದ ಹೆಸ್ಕಾಂ ಸಿಬ್ಬಂದಿಗಳಿಗೆ ಗ್ರಾಹಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಹೆಸ್ಕಾಂ ಸಿಬ್ಬಂದಿಗಳಿಗೆ ಹಲ್ಲೆ ಕೂಡ ಮಾಡಿದ್ದು ನಾವು ವಿದ್ಯುತ್ ಪಾವತಿ ಮಾಡಲ್ಲ ಎಂದು ತಗಾದೆ ತೆಗೆದಿರುವ ಘಟನೆ ಜರುಗಿದೆ. ಒಟ್ಟಾರೆ ಉಚಿತ ವಿದ್ಯುತ್ ಬಿಲ್ ಸರ್ಕಾರದಿಂದ ಪಾವತಿಯಾಗುತ್ತಿದ್ದು, ಹೆಚ್ಚುವರಿ ಬಳಕೆಯ ವಿದ್ಯುತ್ ಬಿಲ್ ಮಾತ್ರ ಗ್ರಾಹಕರು ಪಾವತಿಸುತ್ತಿದ್ದಾರೆ. ಯೋಜನೆ ಜಾರಿಯಾದ ನಂತರ ಬಾಕಿ ಉಳಿಸಿಕೊಂಡರೆ ವಿದ್ಯುತ್ ಕಡಿತ…
ಗದಗ: ಅನಾಮಧೇಯ ಪ್ರಾಣಿಯೊಂದು ಕೋಳಿ ಗೂಡಿಗೆ ನುಗ್ಗಿ ಕೋಳಿಗಳ ರುಂಡವನ್ನ ತಿಂದ ಪರಿಣಾಮ ಮೂವತ್ತಕ್ಕೂ ಹೆಚ್ಚು ನಾಟಿ ಕೋಳಿಗಳು ಸಾವನ್ನಪ್ಪಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ. https://ainlivenews.com/fraudulently-promising-government-job-accused-arrested/ ಶಾರವ್ವ ನಿಂಗಪ್ಪ ಹರಿಜನ ಎಂಬುವರಿಗೆ ಸೇರಿದ ಕೋಳಿಗಳು ಇವಾಗಿವೆ. ಸುಮಾರು ವರ್ಷಗಳಿಂದ ಶಾರವ್ವ ತಮ್ಮ ಉಪಜೀವನಕ್ಕಾಗಿ ನಾಟಿ ಕೋಳಿ, ಟಗರು ಮತ್ತು ಕುರಿ ಮರಿಗಳ ಸಾಕಾಣಿಕೆಯನ್ನು ಉದ್ಯೋಗ ಮಾಡಿಕೊಂಡು ಜೀವನ ನಡೆಸ್ತಿದ್ರು. ಇದೀಗ ಏಕಾಏಕಿ ನಾಟಿ ಕೋಳಿಗಳು ಸತ್ತು ಬಿದ್ದಿರುವುದು ಅವರನ್ನು ಆತಂಕಕ್ಕೆ ಈಡು ಮಾಡಿದ್ದು ಜೀವನ ನಡೆಸಲು ಆರ್ಥಿಕವಾಗಿ ತೊಂದರೆ ಉಂಟಾಗಿದೆ.ಕೂಡಲೇ ಅರಣ್ಯ ಇಲಾಖೆ ಕೋಳಿಗಳ ಸಾವಿಗೆ ಕಾರಣವಾಗಿರೋ ಪ್ರಾಣಿಯನ್ನು ಗುರುತಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶಾರವ್ವನಿಗೆ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಂಡ್ಯ:- ಮಂಡ್ಯ ಪೂರ್ವ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ಹೆಸರು ಹಾಗೂ ಸಹಿ ನಕಲು ಮಾಡಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. https://ainlivenews.com/fraud-targeting-elderly-people-at-atms-three-people-from-up-arrested/ ಹೆಚ್.ಸಿ.ವೆಂಕಟೇಶ್ ಬಂಧಿತ ಆರೋಪಿ. ಆರೋಪಿ ಹೆಚ್.ಸಿ.ವೆಂಕಟೇಶ್ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ನಂಬಿಸಿ ಎರಡು ಕೋಟಿ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿದ್ದನು. ಹಣ ನೀಡಿದ ಬಳಿಕ, ನಕಲಿ ನೇಮಕಾತಿ ಪತ್ರವನ್ನು ಸಂತ್ರಸ್ತರಿಗೆ ನೀಡುತ್ತಿದ್ದನು. ಅಬಕಾರಿ ಇಲಾಖೆಯಲ್ಲಿ ಚಾಲಕ ಹುದ್ದೆ ಕೊಡಿಸುತ್ತೇನೆಂದು ಓರ್ವರಿಂದ ನಕಲಿ ದಾಖಲೆ ಸೃಷ್ಟಿಸಿ ಮೂವರಿಂದ 45 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಆರೋಪಿ ವೆಂಕಟೇಶ್ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರತ್ಯೇಕ 3 ಪ್ರಕರಣ ದಾಖಲಾಗಿವೆ
ಬೆಂಗಳೂರು:- ಎಟಿಎಂಗಳಲ್ಲಿ ವೃದ್ಧರನ್ನ ಟಾರ್ಗೆಟ್ ಮಾಡಿ ವಂಚಿಸುವ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. https://ainlivenews.com/fire-in-chamundi-hills-dozens-of-acres-gutted/ ಆರೋಪಿಗಳು, ನಿರ್ಜನ ಪ್ರದೇಶಗಳಲ್ಲಿರೋ ಎಟಿಎಂಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಹಣ ಪಡೆಯಲು ಬಂದ ವೃದ್ದರನ್ನ ಪರಿಚಯ ಮಾಡ್ಕೊತ್ತಿದ್ರು. ಬಳಿಕ ಅಸಲಿ ಎಟಿಎಂ ಪಡೆದು ಅವರಿಗೆ ಗೊತ್ತಾಗದ ಹಾಗೆ ನಕಲಿ ಕಾರ್ಡ್ ಹಾಕ್ತಿದ್ರು. ಪಾಸ್ ವರ್ಡ್ ಪಡೆದು ಹಣ ಡ್ರಾ ಮಾಡೋ ತರ ನಾಟಕ ಆಡುತ್ತಿದ್ದರು. ಆದರೆ ಹಣ ಬರೋದಿಲ್ಲ ಸಮಸ್ಯೆ ಅಂತ ಹೇಳ್ತಿದ್ರು. ಬಳಿಕ ಅಸಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡ್ತಿದ್ರು. ಅಷ್ಟಲ್ಲದೇ ಹಣ ಬರೋ ಜಾಗದಲ್ಲಿ ಯಾವ್ದಾದ್ರು ವಸ್ತುವನ್ನ ಅಡ್ಡವಾಗಿ ಇಡ್ತಿದ್ರು. ಹಣ ಬರಲ್ಲ ಅಂತ ವೃದ್ದರು ಹೋದ ಬಳಿಕ, ಆರೋಪಿಗಳೂ,ಆ ಹಣ ಪಡೆಯುತ್ತಿದ್ದರು. ಆರೋಪಿಗಳು ಮಾಡಿರೋ ವಂಚನೆಗಳಲ್ಲಿ ಅತೀ ಹೆಚ್ಚು ಕೆನರಾ ಬ್ಯಾಂಕ್ ಎಟಿಎಂಗಳೇ. ಬಂಧಿತರನ್ನು ಉತ್ತರ ಭಾರತ ಮೂಲದ ನಯಾಝ್, ಸುದಾಂಶು, ರಜೀಬ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಸುದಾಂಶು ಮತ್ತು ರಜೀಭ್ ರಾಯಲ್ ಲೈಫ್ ಲೀಡ್ ಮಾಡ್ತಿದ್ರು.…
ಮೈಸೂರ : ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. https://ainlivenews.com/master-plan-to-avoid-traffic-congestion-in-bandipur-fastag-idea-for-green-toll-collection/ ಇನ್ನು ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಯಾರೋ ಕಿಡಿಗೇಡಿಗಳು ಬೆಟ್ಟಕ್ಕೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬೇಸಿಗೆ ಆರಂಭವಾಗಿರುವುದರಿಂದ ಒಣಗಿದ್ದ ಕಾಡನಿಂದ ಬೀಡಿ ಸಿಗರೇಟಿನ ಕಿಡಿ ಬಿಸಾಡಿರುವುದರಿಂದಲು ಘಟನೆ ಆಗಿರುವ ಶಂಕೆ ಇದೆ. ಸದ್ಯ ಹೊತ್ತಿಕೊಂಡಿರುವ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂದಾಗಿದ್ದು ಬೆಂಕಿ ಹತೋಟಿಗೆ ಬಂದಿದೆ. ಚಾಮುಂಡಿ ಬೆಟ್ಟದ ಬಂಡೀಪಾಳ್ಯ ಉತ್ತನಹಳ್ಳಿ ಭಾಗದ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಇದೀಗ ಹರಸಾಹಸಪಟ್ಟು ಬೆಂಕಿ ಸಂಪೂರ್ಣ ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.