Author: AIN Author

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) 3 ದಿನಗಳ ಕಾಲ ದತ್ತಜಯಂತಿ (Dattajayanthi) ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದತ್ತಮಾಲಾಧಾರಿ ಸಿ.ಟಿ ರವಿಯವರು (CT Ravi) ಭಿಕ್ಷಾಟನೆ ಆರಂಭಿಸಿದ್ದಾರೆ ಸಿ.ಟಿ ರವಿಯವರು ಮನೆ-ಮನೆಗೆ ತೆರಳಿ ಪಡಿ ಸಂಗ್ರಹಿಸುತ್ತಿದ್ದಾರೆ. ಚಿಕ್ಕಮಗಳೂರು ನಗರದ ನಾರಾಯಣಪುರದಲ್ಲಿ 9 ಮನೆಯಲ್ಲಿ ಭಿಕ್ಷೆ ಬೇಡಿ ಪಡಿ ಸಂಗ್ರಹಿಸಿದ್ದಾರೆ. ಈ ವೇಳೆ ಸಿ.ಟಿ ರವಿಯವರಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳ ಸಾಥ್ ನೀಡಿದ್ದಾರೆ. ಸಿಟಿ ರವಿಯವರ ಪಡಿ ಸಂಗ್ರಹಲ್ಲಿದ್ದ ವಸ್ತುಗಳನ್ನ ಇರುಮುಡಿ ರೂಪದಲ್ಲಿ ಮಂಗಳವಾರ ದತ್ತಪೀಠಕ್ಕೆ ಹೊತ್ತೊಯ್ಯುತ್ತಾರೆ. ಪಡಿಯಲ್ಲಿ ಏನೇನಿರುತ್ತೆ..?: ಅಕ್ಕಿ, ಬೇಳೆ,ಕಾಯಿ, ಬೆಲ್ಲ ಎಲೆ, ಅಡಿಕೆ ಇವಿಷ್ಟು ದತ್ತಜಯಂತಿಗೆ ನೀಡುವ ಪಡಿಯಲ್ಲಿರುತ್ತವೆ.

Read More

ಹೊಂಬಾಳೆ ಫಿಲಂಸ್‍ (Hombale Films) ನಿರ್ಮಾಣದ ಪ್ಯಾನ್‍ ಇಂಡಿಯಾ ಚಿತ್ರ ‘ಸಲಾರ್’ (Salaar), ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸಿದರೆ, ಎರಡನೇ ದಿನಕ್ಕೆ 295.7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನಕ್ಕೆ 350 ಕೋಟಿಗೂ ಅಧಿಕ ಗಳಿಕೆ ಆಗಿದೆ ಎನ್ನುವ ಮಾಹಿತಿ ಇದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ…

Read More

ಕರ್ನಾಟಕದ ಜನಪ್ರಿಯ RAPPER ಚಂದನ್ ಶೆಟ್ಟಿ ಅಪಾರ ಅಭಿಮಾನಿ ಸಮೂಹವನ್ನು ಹೊಂದಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚಂದನ್ ಶೆಟ್ಟಿ ಒಂದಲ್ಲಾ ಒಂದು ಸುಪ್ರಸಿದ್ದ ಹಾಡನ್ನು ಬಿಡುಗಡೆ ಮಾಡುತ್ತಲೇ ಬಂದಿದ್ದಾರೆ. ಡಿಸೆಂಬರ್ ತಿಂಗಳಲ್ಲೇ ಬಿಡುಗಡೆಯಾಗುವ ಚಂದನ್ ಶೆಟ್ಟಿ (Chandan Shetty) ಅವರ ಹಾಡಿಗಾಗಿ ಕಾಯುವ ಅಭಿಮಾನಿಗಳ ದೊಡ್ಡ ದಂಡೇ ಇದೆ. ಈ ಬಾರಿ ಕೂಡ ಚಂದನ್ ಶೆಟ್ಟಿ, WHAT TO DO MAMA? ಎಂಬ ಅಪ್ಪಟ ದೇಸಿ ಶೈಲಿಯ ಟಪಂಗುಚಿ ಹಾಡನ್ನು ಈ ವರ್ಷದ ಕೊನೆಗೆ ಬಿಡುಗಡೆ ಮಾಡಿದ್ದಾರೆ ತಮ್ಮದೇ ಆದ ಯೂಟ್ಯೂಬ್ ಚಾನಲ್ ನಲ್ಲಿ. ಈ ಹಾಡು ಹದಿಹರೆಯದ ಹುಡುಗರಿಗೆ ಹೇಳಿ ಮಾಡಿಸಿದ ಹಾಡು. ಹುಡುಗರ ಪ್ರಾಬ್ಲಮ್ ಗಳನ್ನು ಬಿಂಬಿಸುವ ಹಾಡಿದು. ‘ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಟು ಡು ಮಾಮ?’ ಎಂದೇ ಹಾಡು ಆರಂಭವಾಗುತ್ತದೆ. ಇಷ್ಟು ದಿನ ಬಿಡುಗಡೆಯಾಗಿರುವ ಚಂದನ್ ಶೆಟ್ಟಿ ಅವರ RAP ಸಾಂಗ್ಸ್ ಹೆಚ್ಚಾಗಿ ಪಬ್ ಗಳ ಮೇಲೆ  ಕೇಂದ್ರಿಕೃತವಾಗಿತ್ತು. ಆದರೆ ಈ ಹಾಡು ಪಕ್ಕಾ…

Read More

ಐರಾವತ’ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಅವರು ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಹೊಸ ಫೋಟೋದಲ್ಲಿನ ಊರ್ವಶಿ ಓವರ್ ಮೇಕಪ್ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡ್ತಿದ್ದಾರೆ. ಸದ್ಯ ನಟಿಯ ನಯಾ ಲುಕ್ ಸಖತ್ ವೈರಲ್ ಆಗುತ್ತಿದೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಊರ್ವಶಿ ರೌಟೇಲಾ ಸದ್ದು ಮಾಡುತ್ತಲೇ ಇರುತ್ತಾರೆ. ಈಗ ಸುಂದರವಾದ ಮಿನುಗುವ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಗ್ಲ್ಯಾಮರಸ್ ಆಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಫೋಟೋ ಶೇರ್ ಮಾಡ್ತಿದ್ದಂತೆ ಐರಾವತ ನಟಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಓವರ್ ಮೇಕಪ್ ಮಾಡಿಕೊಳ್ಳಬೇಡಿ. ಮಲಗುವಾಗಲೂ ಮೇಕಪ್ ತೆಗೆಯಲ್ಲ ಅನಿಸುತ್ತೆ ಎಂದೆಲ್ಲಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಊರ್ವಶಿ ಹೊಸ ಲುಕ್ ಟ್ರೋಲಿಗರ (Troll) ಬಾಯಿಗೆ ಆಹಾರವಾಗಿದೆ. ಊರ್ವಶಿ ಸುಂದರವಾಗಿ ರೆಡಿಯಾಗಿದ್ದಾರೆ. ಅವರ ಓವರ್ ಮೇಕಪ್‌ಗೆ ಟ್ರೋಲ್ ಆಗ್ತಿದ್ದಾರೆ. ಅವರಿಗೆ ಟ್ರೋಲ್ ಆಗೋದು ಇದೇ ಮೊದಲ ಬಾರಿ ಏನೇನಲ್ಲ

Read More

ಹಿರಿಯ ನಟಿ ಲೀಲಾವತಿ (Leelavathi) ಅವರ ಜನ್ಮದಿನಾಚರಣೆ ಪ್ರಯುಕ್ತ ಇಂದು ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ತೋಟದ ಅಮ್ಮನ ಸಮಾಧಿ ಬಳಿ ವಿನೋದ್ ರಾಜ್ (Vinod Raj) ಜನ್ಮದಿನ ಆಚರಣೆ ಮಾಡಿದ್ದಾರೆ. ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ನಟ ವಿನೋದ್ ಕೇಕ್ ಕತ್ತರಿಸಿದ್ದಾರೆ. ಕನ್ನಡ ಚಿತ್ರರಂಗ ತಾರೆ ಲೀಲಾವತಿ ಸಾವಿನ ನೋವಿನ ಗಾಯ ಹಾಗೆ ಇದೆ. ಇದರ ನಡುವೆ ಅಮ್ಮನ 87 ವರ್ಷದ  ಜನ್ಮದಿನವನ್ನ ವಿನೋದ್ ರಾಜ್ ಆಚರಿಸಿದ್ದಾರೆ ತಾಯಿಯ ನೆನಪು ಮಾಡಿಕೊಂಡು ಕಣ್ಣೀರಿಟ್ಟು ಹಾಡು ಹಾಡಿ, ವಿನೋದ್ ರಾಜ್ ಭಾವುಕರಾಗಿದ್ದಾರೆ. ಅಮ್ಮನಿಲ್ಲದ ನೆನಪಿನೊಂದಿಗೆ ಸಮಾಧಿ ಬಳಿ ಜನ್ಮದಿನ ಆಚರಣೆ ಮಾಡಿದ್ದು, ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.

Read More

ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ (Pooja Gandhi) ದಂಪತಿ ಉಡುಪಿಗೆ ಆಗಮಿಸಿದ್ದಾರೆ. ಪತಿ ವಿಜಯ್ ಘೋರ್ಪಡೆ (Vijay Ghorpade) ಜೊತೆ ನಟಿ ಪೂಜಾ ಗಾಂಧಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮದುವೆ ಆದ ನಂತರ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಪೂಜಾ ಗಾಂಧಿ ದಂಪತಿ, ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿದ್ದು, ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕಾರ ಮಾಡಿದ್ದಾರೆ. ಶ್ರೀಕೃಷ್ಣಮಠ ಮತ್ತು ಕಾಣಿಯೂರು ಮಠ ನವ ದಂಪತಿಯನ್ನು ಗೌರವಿಸಿದೆ ನವೆಂಬರ್ 29ರಂದು ಉದ್ಯಮಿ ವಿಜಯ್ ಘೋರ್ಪಡೆ ಜೊತೆ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂತ್ರ- ಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ಪೂಜಾ ಮದುವೆಯಾಗಿದ್ದಾರೆ.

Read More

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಸದಾ ಬೇರೇ ಅವರ ತಪ್ಪನ್ನು ಹುಡುಕುತ್ತಾ ಗುಡುಗೋ ವಿನಯ್‌ಗೆ ಡ್ರೋನ್ ಪ್ರತಾಪ್ ಪ್ರಶ್ನಿಸಿದ್ದಾರೆ. ಲಕ್ಷುರಿ ಬಜೆಟ್ ಮಿಸ್ಟೇಕ್ ಮಾಡಿ ಇಡೀ ಮನೆಗೆ ನಷ್ಟವಾಗುವಂತೆ ಮಾಡಿದ್ದಕ್ಕೆ ವಿನಯ್ (Vinay Gowda) ಅವರ ಬಳಿ ಪ್ರಶ್ನೆ ಮಾಡುವ ಗುಂಡಿಗೆ ಡ್ರೋನ್ ಪ್ರತಾಪ್ (Drone Prathap) ತೋರಿಸಿದ್ದಾರೆ. ವಾರವಿಡೀ ಕಷ್ಟಪಟ್ಟು ಆಡಿದ್ದರೂ, ಲಕ್ಷುರಿ ಬಜೆಟ್ ಖರೀದಿ ವೇಳೆ ಸ್ಪರ್ಧಿಗಳು ಮಾಡಿಕೊಳ್ಳುತ್ತಿರುವ ಸಣ್ಣ-ಪುಟ್ಟ ಎಡವಟ್ಟುಗಳಿಂದಾಗಿ ಲಕ್ಷುರಿ ಬಜೆಟ್ ಮಿಸ್ ಆಗುತ್ತಿದೆ. ಈ ಬಾರಿ ಇನ್ನೇನು ಲಕ್ಷುರಿ ಬಜೆಟ್ ಕೈಗೆ ಸಿಕ್ತು. ಚಿಕನ್ ಬಂದೇಬಿಡ್ತು ಎಂಬ ಖುಷಿಯಲ್ಲಿ ಇರುವಾಗಲೇ ಮತ್ತೆ ಶಾಕ್ ಎದುರಾಗಿದೆ. ವಿನಯ್ ಮಾಡಿದ ತಪ್ಪಿನಿಂದ ನಿಯಮ ಉಲ್ಲಂಘನೆ ಆಗಿದ್ರಿಂದಾಗಿ ಲಕ್ಷುರಿ ಬಜೆಟ್‌ನ `ಬಿಗ್ ಬಾಸ್’ ವಾಪಸ್ ಪಡೆದಿದ್ದಾರೆ ಈ ವಾರ ಲಕ್ಷುರಿ ಬಜೆಟ್ ಗಳಿಸಲು ಸ್ಪರ್ಧಿಗಳಿಗೆ 10 ಸಾವಿರ ಪಾಯಿಂಟ್‌ಗಳನ್ನು ಬಿಗ್ ಬಾಸ್ ನೀಡಿದ್ದರು. ಅದನ್ನ ಬಳಸಿಕೊಂಡು ಖರೀದಿ ಮಾಡುವ ವೇಳೆ, ಬಝರ್ ಆಗೋಕೂ ಮುನ್ನವೇ…

Read More

ಬೆಂಗಳೂರು: ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ಸ್ಮರಣಾರ್ಥಕವಾಗಿ ಇಂದು ಕೇಶವ ಕಬ್ಬಡಿ ಕ್ರೀಡಾಂಗಣದಲ್ಲಿ ಮೋದಿ ಕಬಡ್ಡಿ ಕಪ್ ಏರ್ಪಡಿಸಲಾಗಿತ್ತು. ಡಾ.ನಿರಂತರ ಗಣೇಶ್ ರವರ ನೇತೃತ್ವದಲ್ಲಿ ದೇವಸoದ್ರ ಸರ್ಕಲ್ ನ ಡಾಲರ್ಸ್ ಕಾಲೋನಿಯ ಕೇಶವ ಕಬ್ಬಡಿ ಕ್ರೀಡಾoಗಣದಲ್ಲಿ ಕಬ್ಬಡಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಇನ್ನೂ ಭಾರತದ ಹೆಮ್ಮೆಯ ಕ್ರೀಡೆ ಕಬ್ಬಡಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿoದ ಸುಮಾರು 16 ಟೀಮ್ ಗಳು ಭಾಗಿಯಾಗಿದ್ದವು. ಈ ವೇಳೆ ಮಾತನಾಡಿದ ಬಿಜೆಪಿ ಯುವ ಮುಖಂಡ ಡಾ. ನಿರಂತರ ಗಣೇಶ್ ಅವರು ಇಂದು ದೇಶ ಕಂಡ ಮುತ್ಸದಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಕಬ್ಬಡಿ ಪಂದ್ಯಾವನ್ನ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಬ್ಬಡಿಯನ್ನ ಆಯೋಜನೆ ಮಾಡಲಾಗಿದ್ದು, ಪಂದ್ಯಾ ಗೆದ್ದ ವಿಜೇತ ತಂಡಕ್ಕೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತೆ ಎಂದರು. ಇನ್ನೂ ಕಬ್ಬಡಿ ಪಂದ್ಯಾವನ್ನ ಮಾಜಿ ಸಿಎಂ ಬಿ.ವಿ ಸದಾನಂದ ಗೌಡ ಅವರು ದೀಪಾ ಬೆಳಗಿಸುವುದರ ಮೂಲಕ ಕಬ್ಬಡಿಗೆ ಚಾಲನೆ ನೀಡಿ ಇಂದು…

Read More

ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ. ನಿತ್ಯಾ (19) ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಗೊರೂರು ಅರಳಿಕಟ್ಟೆ ನಿವಾಸಿ ಗಿರೀಶ್ ಎಂಬುವವರ ಪುತ್ರಿ ನಿತ್ಯಾ, ಹನುಮ ಜಯಂತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿದ್ದರು. ತಮ್ಮ ಸಂಬಂಧಿಕರೊಂದಿಗೆ ಅರಳಿಕಟ್ಟೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದಾಗ ನಿತ್ಯಾ ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿದ್ದು,ನಿತ್ಯಾ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು ಗ್ರಾಮಾಂತರ: ಹನುಮ ಜಯಂತಿಯಲ್ಲಿ ಪ್ರಯುಕ್ತ ದೇವಾಲಯಕ್ಕೆ ಹೋಗಿದ್ದ ಭಕ್ತಾಧಿಗಳು ಪ್ರಸಾದ ಸೇವನೆ ಮಾಡಿ ಅಸ್ವಸ್ಥರಾಗಿರುವ ಘಟನೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ನಗರದಲ್ಲಿ ನಡೆದಿದೆ. ನಗರದ ದೇವಾಲಯಗಳಾದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಪುಲಿಯೊಗರೆ, ಪಾಯಸ,ಲಡ್ಡು ಸೇವನೆ ಮಾಡಿದ್ದ ಪ್ರಸಾದ ತಿಂದು ವಾಂತಿ ಭೇದಿಯಾಗಿ ನೂರಾರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಪುಡ್ ಪಾಯಿಸಾನ್​ನಿಂದ ವೃದ್ಧೆ ಮೃತಪಟ್ಟಿದ್ದಾಳೆ.ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಅಸ್ವಸ್ತಗೊಂಡ ಭಕ್ತರಿಗೆ ಚಿಕಿತ್ಸೆ ನೀಡಲಾಗಿದೆ.

Read More