Author: AIN Author

ಐಪಿಎಲ್‌ನಲ್ಲಿರುವ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಆಯ್ಕೆಯಾಗಿರುವ ಕೆ.ಸಿ ಕಾರಿಯಪ್ಪ ನನ್ನ ಮದುವೆ ಆಗುವುದಾಗಿ ಹೇಳಿ, ನನ್ನಿಂದ ಆಗಾಗ ಹಣವನ್ನು ಪಡೆದು ಮೋಸ ಮಾಡಿದ್ದಾನೆ ಎಂದು ಯುವತಿ ಎಂಬಾಕೆ ದೂರಿದ್ದಾರೆ. ಹುಡುಗಿ ಆರೋಪಕ್ಕೆ ಪ್ರತಿದೂರು ದಾಖಲಿಸಿರುವ ಕೆಸಿ ಕಾರಿಯಪ್ಪ, ದಿವ್ಯಾ ಡ್ರಗ್ಸ್‌ ಅಡಿಕ್ಟ್ ಆಗಿದ್ದಾಳೆ. ಜತೆಗೆ ಅವಳ ಕ್ಯಾರೆಕ್ಟರ್‌ ಸರಿ ಇರಲಿಲ್ಲ. ಹೀಗಾಗಿ ನಾನು ಬ್ರೇಕ್‌ ಅಪ್‌ ಮಾಡಿಕೊಂಡಿದ್ದೆ ಎಂದು ಕ್ರಿಕೆಟರ್‌ ಕಾರ್ಯಪ್ಪ ದೂರಿದ್ದಾರೆ. ದಿವ್ಯಾ ಒಂದುವರೆ ವರ್ಷದ ಹಿಂದೆ ಸೋಶಿಯಲ್‌ ಮೀಡಿಯಾ ಮೂಲಕ ದಿಶಾ ಪರಿಚಯವಾಗಿದ್ದರು. ಒಂದೇ ಊರಿನವರು ಎಂಬ ಕಾರಣಕ್ಕೆ ಹತ್ತಿರವಾಗಿದ್ದೆವು. ನಂತರ ನಮ್ಮಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಕಾಲ ಕಳೆದಂತೆ ದಿವ್ಯಾಳಿಗೆ ಮೊದಲೊಂದು ಮದುವೆ ಆಗಿ ಡಿವೋರ್ಸ್‌ ಆಗಿರುವ ವಿಚಾರ ತಿಳಿದುಬಂತು. ಆಕೆ ಈ ವಿಚಾರವನ್ನು ಮುಚ್ಚಿಟ್ಟು ನನಗೆ ಮೋಸ ಮಾಡಿದ್ದಾಳೆ ಕಾರ್ಯಪ್ಪ ಆರೋಪಿಸಿದ್ದಾರೆ. ದಿವ್ಯಾಳ ಕ್ಯಾರೆಕ್ಟರ್ ಸರಿ ಇಲ್ಲದ ಕಾರಣಕ್ಕೆ ಹಾಗೂ ಡ್ರಗ್ಸ್‌, ಮದ್ಯ ವ್ಯಸನಿಯಾಗಿರುವುದರಿಂದ ಹಲವಾರು ಸಾರಿ ಬುದ್ಧಿವಾದವನ್ನು ಹೇಳಿದ್ದೆ. ಕೇಳದೆ ಇದ್ದಾಗ ಬ್ರೇಕ್‌…

Read More

ಮೈಸೂರು:- ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಚಿವರು ರೈತರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅವಿವೇಕದ ಪರಮಾವಧಿ ಇದು. ಬರಗಾಲ ಮೊದಲಾದ ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟವಾದ್ದರಿಂದ ನಾವು ಸಾಲ ಮನ್ನಾ ಮಾಡಿ ಎಂದು ಕೇಳುತ್ತಿದ್ದೇವೆ. ಅವರು ತಕ್ಷಣ ಕ್ಷಮೆ ಯಾಚಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ. ಅವರನ್ನು ಸಚಿವರ ಕಚೇರಿಯಿಂದ ನಾವೇ ಹೊರ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

Read More

ಮಕ್ಕಳಲ್ಲಿ ಕಾಡುವ ಬಿಕ್ಕಳಿಕೆಯ ಹಿಂದಿನ ಕಾರಣ ಮತ್ತು ಕೆಲವು ಮನೆಮದ್ದುಗಳನ್ನು ಇಲ್ಲಿ ತಿಳಿದುಕೊಳ್ಳಿ. ಬಿಕ್ಕಳಿಕೆ ಸಂಭವಿಸಿದಾಗ, ಯಾರಾದರೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯರು ಹೇಳುವುದುಂಟು. ಆದರೆ ಈ ಸಮಸ್ಯೆ ಮುಂದುವರಿದರೆ ಅದು ತೊಂದರೆಗೆ ಕಾರಣವಾಗಬಹುದು. ಅನೇಕ ಬಾರಿ, ಬಿಕ್ಕಳಿಸುವಿಕೆಯು ಮಕ್ಕಳನ್ನು ಬಹಳಷ್ಟು ತೊಂದರೆಗೊಳಿಸುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಪೋಷಕರಿಗೆ ಅರ್ಥವಾಗುವುದಿಲ್ಲ. ಸ್ವಲ್ಪ ಸಮಯದ ನಂತರ ಬಿಕ್ಕಳಿಕೆಗಳು ತಾನಾಗಿಯೇ ನಿಲ್ಲುತ್ತವೆ. ಜನನದ ನಂತರದ ಮೊದಲ ಕೆಲವು ದಿನಗಳಲ್ಲಿ ಮಕ್ಕಳು ಬಹಳಷ್ಟು ಬಿಕ್ಕಳಿಸುವಿಕೆಯನ್ನು ಅನುಭವಿಸುತ್ತಾರೆ, ಆದರೆ ಮಗು ಬೆಳೆದಂತೆ, ಬಿಕ್ಕಳಿಸುವಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸದ್ಯಕ್ಕೆ ಮಕ್ಕಳಲ್ಲಿ ಕಾಡುವ ಬಿಕ್ಕಳಿಕೆಯ ಹಿಂದಿನ ಕಾರಣ ಮತ್ತು ಕೆಲವು ಮನೆಮದ್ದುಗಳನ್ನು ಇಲ್ಲಿ ತಿಳಿದುಕೊಳ್ಳಿ. ಹಸುಗೂಸು ಎದೆಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಆಗಾಗ್ಗೆ ಬಿಕ್ಕಳಿಕೆ ಕಾಡುತ್ತದೆ. ಆದ್ದರಿಂದ ಹಾಲು ಕುಡಿಸಿದ ನಂತರ ಮಗುವನ್ನು ಭುಜದ ಮೇಲೆ ಮಲಗಿಸಿ ಬೆನ್ನಿನ ನಿಧಾನವಾಗಿ ತಟ್ಟಿ ಅಥವಾ ಮಸಾಜ್ ಮಾಡಿ. ಅನೇಕ ಬಾರಿ, ಮಗು ಹೆಚ್ಚಾಗಿ ಹಾಲು ಕುಡಿದರೂ ಸಹ, ಬಿಕ್ಕಳಿಕೆ ಉಂಟಾಗುತ್ತದೆ.…

Read More

ರಾಮನಗರ:- ಎಣ್ಣೆ ವಿಚಾರಕ್ಕೆ ತಲೆ ಮೇಲೆ ಕಲ್ಲು ಹೊತ್ತು ಹಾಕಿ ನಿವೃತ್ತ ಎಎಸ್‌ಐ ಪುತ್ರನ ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮದಲ್ಲಿ ಜರುಗಿದೆ. ನಿವೃತ್ತ ಎಎಸ್‌ಐ ಮಗನಾಗಿರುವ ಬೆಂಗಳೂರು ಮೂಲದ ದೀಪಕ್‌ (23) ಎಂಬಾತನನ್ನು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಮಾಡಿದ ಆರೋಪಿ ಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್‌ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿ. ಆತ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಪ್ರಸಾದ್‌ನನ್ನು ಭೇಟಿಯಾಗಿದ್ದ. ಅವರಿಬ್ಬರು ಅಲ್ಲಿನ ಶೆಡ್‌ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ನಡುವೆ ಅವರ ಮಧ್ಯೆ ಜಗಳವಾಗಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿ ರಾತ್ರಿ ಶೆಡ್‌ನಲ್ಲೇ ಮಲಗಿದ್ದ ದೀಪಕ್‌ನ ತಲೆ ಮೇಲೆ ಪ್ರಸಾದ್‌ ಕಲ್ಲು ಹೊತ್ತು ಹಾಕಿದ್ದಾನೆ. ಹೀಗಾಗಿ ದೀಪಕ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕನಕಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಸಾದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ

Read More

ಬೆಂಗಳೂರು:- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಹೆಚ್ಚಾಗುತ್ತಿದ್ದು, ಸಧ್ಯಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ನಿರ್ವಹಣೆಗೆ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ ಮಾಡಿರುವ ಶಿಫಾರಸುಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿಯು ಡಿಸೆಂಬರ್ 26ರಂದು ಸಭೆ ಸೇರಲಿದೆ ಎಂದರು. ಜನರು ಜಾಗರೂಕರಾಗಿರಿ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು ಬಿಟ್ಟರೆ ಸದ್ಯಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಈಗಿನಂತೆ ಯಾವುದೇ ನಿರ್ಬಂಧಗಳಿಲ್ಲ, ಅಂತಹ ಪರಿಸ್ಥಿತಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಜೆಎನ್.1 ಉಪವಿಭಾಗವು ಎಲ್ಲೆಡೆ ಪ್ರಚಲಿತದಲ್ಲಿದ್ದರೂ ದೇಶ ಅಥವಾ ಜಗತ್ತಿನಲ್ಲಿ ಎಲ್ಲಿಯೂ ಯಾವುದೇ ನಿರ್ಬಂಧವಿಲ್ಲ. ಅಂತಹ ಯಾವುದೇ ನಿರ್ಬಂಧಗಳಿಲ್ಲ ಎಂದು ಅವರು ಹೇಳಿದರು.

Read More

ಬೆಂಗಳೂರು:- ಕೇಂದ್ರ ಸರ್ಕಾರವೇ ಕನ್ನಡಿಗರ ತಲೆಮೇಲೆ ಕಲ್ಲು ಹಾಕ್ತಿದೆ ಎಂದು ಹೇಳುವ ಮೂಲಕ ಅಶೋಕ್‌ಗೆ ಸಿಎಂ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರ್ಕಾರ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದೆ ಎಂದು ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಹೇಳಿದ್ದಾರೆ. ಆದರೆ, ಯಾರೋ ಬಿಜೆಪಿ ವಿರೋಧಿಗಳು ಈ ರೀತಿಯ ಹೇಳಿಕೆಯನ್ನು ಅವರ ಬಾಯಿಯಿಂದ ಹೇಳಿಸಿದಂತೆ ಕಾಣುತ್ತಿದೆ. ಅಶೋಕ್ ಅವರೇ, ಯಾಕೆ ನಮ್ಮ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ಳೀರಿ? ನರೇಂದ್ರ ಮೋದಿ ಅವರ ನೇತೃತ್ವದ ಕಳೆದ ಒಂಬತ್ತು ವರ್ಷಗಳ ಆಡಳಿತದ ಜಾತಕ ಬಿಡಿಸಿಟ್ಟರೆ ಯಾರು ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದ್ದಾರೆ ಎಂದು ನಿಮಗೂ ಅರಿವಾಗಬಹುದು ಎಂದು ಸಿಎಂ ಸಿದ್ದಾರಾಮಯ್ಯ ತಿರುಗೇಟು ನೀಡಿದ್ದಾರೆ. ನಾಡಿಗೆ ಬರಗಾಲ ಬಿದ್ದು ಆರು ತಿಂಗಳುಗಳಾಗಿವೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ನಾನೇ ಖುದ್ದಾಗಿ ಹೋಗಿ ಪ್ರಧಾನಿ ಮತ್ತು ಗೃಹಸಚಿವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ.…

Read More

ಮೈಸೂರು:- ಯಾರ ಮುಲಾಜಿಗೂ ಒಳಗಾಗದೇ ಜಾತಿ ಗಣತಿ ರಿಲೀಸ್ ಮಾಡಲಿ ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ ಮುಲಾಜಿಗೂ ಒಳಗಾಗದೇ ಜಾತಿ ಗಣತಿ ವರದಿಯನ್ನು ತ್ವರಿತವಾಗಿ ಸ್ವೀಕರಿಸಿ, ಬಿಡುಗಡೆ ಮಾಡಬೇಕು ಎಂದರು. ಜಾತಿ ಗಣತಿ ವರದಿ ಬಿಡುಗಡೆಗೆ ವೀರಶೈವ ಲಿಂಗಾಯತ ಸಮುದಾಯ ಏಕೆ ವಿರೋಧ ಮಾಡುತ್ತಿದೆಯೋ ಗೊತ್ತಾಗುತ್ತಿಲ್ಲ. ಮೊದಲು ವರದಿಯನ್ನು ಸರ್ಕಾರ ಸ್ವೀಕರಿಸಿ, ಬಿಡುಗಡೆ ಮಾಡಲಿ. ಅದರಲ್ಲಿ ಏನಿದೆ ಎಂಬುದು ಚರ್ಚೆಯಾಗಲಿ. ವರದಿಯನ್ನೇ ನೋಡದೇ-ತಿಳಿಯದೇ ಸುಮ್ಮನೆ ಆರಂಭದಲ್ಲಿಯೇ ವಿರೋಧಿಸುವುದು ಸರಿಯಲ್ಲ’ ಎಂದರು. ಇದೇ ರೀತಿ ಹಿಂದೆ ಹಾವನೂರು ಆಯೋಗದ ವರದಿಯನ್ನೂ ಸಾಕಷ್ಟು ವಿರೋಧಿಸಿದ್ದರು. ಆದರೆ, ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಎಲ್ಲರ ವಿರೋಧದ ನಡುವೆಯೂ ಹಾವನೂರು ವರದಿ ಬಿಡುಗಡೆ ಮಾಡಿದರು. ಈಗಿನ ಮುಖ್ಯಮಂತ್ರಿಯೂ ಅದೇ ರೀತಿ ಕ್ರಮ ಕೈಗೊಳ್ಳಬೇಕು. ಯಾರ ಮುಲಾಜಿಗೂ ಒಳಗಾಗಬಾರದು. ವರದಿಯ ಬಗ್ಗೆ ಅನಗತ್ಯವಾಗಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

Read More

ಮುದ್ದೇಬಿಹಾಳ:- ಮುದ್ದೇಬಿಹಾಳ ತಾಲೂಕು ರೂಢಗಿ ಬಸರಕೋಡ ಗ್ರಾಮದ ಮಧ್ಯೆ ಆಲಕೊಪ್ಪರ ಸಮೀಪ ಸೋಮವಾರ ಸಂಜೆ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿರುವ ಘಟನೆ ಜರುಗಿದೆ. ಸೋಮಪ್ಪ ಮಾದರ (50) ಮೃತ ದುರ್ದೈವಿ. ಬೈಕ್‌ನಲ್ಲಿದ್ದ ಆಲಕೊಪ್ಪರದ ಚನ್ನಮ್ಮ ಪಾಟೀಲ (68), ಜಾವೇದ್ ಶೇಖ್ (30) ಗಂಭೀರ ಗಾಯಗೊಂಡಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ. ಇನ್ನೋರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಮುದ್ದೇಬಿಹಾಳ ಪಿಎಸೈ ಸಂಜಯ್ ತಿಪ್ಪರಡ್ಡಿ ಅವರು ಪೊಲೀಸರೊಂದಿಗೆ ಧಾವಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.

Read More

ಬೆಂಗಳೂರು:- ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಪಾಟೀಲ್ ವಿರುದ್ಧ ಕುಮಾರಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದಾರೆ. ಸಾಲ ಮನ್ನಾ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ HDK, ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ. ಸಚಿವರು ಇಂಥ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು. ನಾನು ಕೃಷಿಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ, ಭಿಕ್ಷೆಯನ್ನಲ್ಲ. ಸಚಿವ ಶಿವಾನಂದ ಪಾಟೀಲ್ ಬೇಷರತ್ ಕ್ಷಮೆ ಕೇಳಬೇಕು, ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Read More

ಬೇಲೂರು:- ತಾಲೂಕಿನ ಅರೇಹಳ್ಳಿಯ ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 27ರ ಚೀಕನಹಳ್ಳಿ ರಸ್ತೆಯ 8 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಸಿ.ಬಿ.ಟಿ ಗ್ರೂಪ್ಸ್ ವತಿಯಿಂದ ಪ್ರಪ್ರಥಮ ಬಾರಿಗೆ ಸುಸಜ್ಜಿತ ಮಲ್ಲಿಕಾರ್ಜುನ ನಗರ-ನಿಮ್ಮ ಕನಸು ನಿಮ್ಮ ಮನೆ ಉದ್ಘಾಟನೆಗೊಂಡಿದೆ. ಹಾಸನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಮಾನ್ಯತೆ, ವಾಸ್ತು ಪ್ರಕಾರ ನಿರ್ಮಿತ ನಿವೇಶನ, ಕಾಫಿ ತೋಟ,ಗದ್ದೆಗಳಿಂದ ಸುತ್ತುವರೆದ ರಮಣೀಯ ನೈಸರ್ಗಿಕ ಪರಿಸರ, ಆಧುನಿಕ ಸೌಲಭ್ಯಗಳು, ಎಲ್ಇಡಿ ಬೀದಿ ದೀಪ,ಮಕ್ಕಳ ಆಟದ ಉದ್ಯಾನ,ಪಂಚಾಯತ್-ಎ ಖಾತಾ, ಹೆಚ್ ಡಿ ಪಿ ಇ ಕುಡಿಯುವ ನೀರು ಸರಬರಾಜು, ವಿಶಾಲ ಕಾಂಕ್ರಿಟ್ ರಸ್ತೆ, ಆಧುನಿಕ ವಿನ್ಯಾಸದ ಒಳ ಚರಂಡಿ ಹಾಗೂ ಸಂಸ್ಕರಣಾ ಘಟಕ ಸೇರಿದಂತೆ ಹಲವಾರು ವಿಶೇಷತೆಗಳನ್ನು ಈ ನೂತನ ಬಡಾವಣೆಯು ಹೊಂದಿದೆ. ಹಾಸನದ ಅಂಬಳೆ ರಾಜೇಶ್ವರಿ ಮತ್ತು ತಂಡದವರು ಭರತನಾಟ್ಯ ಹಾಗೂ ಜನಪದ ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಮುರುಳೀಧರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಮಾರಂಭದಲ್ಲಿ ಹಲವು ಮುಖಂಡರು ಭಾಗಿಯಾಗಿದರು.

Read More