Author: AIN Author

ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಕಣ್ಣಪ್ಪ ಸಿನಿಮಾದ ಶೂಟಿಂಗ್ ನ್ಯೂಜಿಲ್ಯಾಂಡ್ (New Zealand) ನಲ್ಲೇ ಬರೋಬ್ಬರಿ 90 ದಿನಗಳ ಕಾಲ ನಡೆದಿದೆ. ಈ ಮಾಹಿತಿಯನ್ನು ಚಿತ್ರದ ನಿರ್ಮಾಪಕ ಹಾಗೂ ನಟ ಮಂಚು ಮೋಹನ್ ಬಾಬು ಅವರೇ ತಿಳಿಸಿದ್ದಾರೆ. ಅಷ್ಟೊಂದು ದಿನಗಳ ಕಾಲ ನಡೆದ ಶೂಟಿಂಗ್ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ. ನಾನಾ ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಮೋಹನ್‍ ಬಾಬು, ಮೋಹನ್‍ ಲಾಲ್‍, ಶಿವರಾಜಕುಮಾರ್, ಪ್ರಭಾಸ್‍ ಮುಂತಾದ ಈ ದೇಶದ ಪ್ರತಿಭಾವಂತ ಕಲಾವಿದರ ನಡುವೆ ‘ಕಣ್ಣಪ್ಪ’ (Kannappa) ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವವರು ಟಾಲಿವುಡ್‍ ನಟ ವಿಷ್ಣು ಮಂಚು (Vishnu Manchu). ಅವರ ಹುಟ್ಟು ಹಬ್ಬದಂದು ಚಿತ್ರತಂಡವು ಅವರ ಮೊದಲ ಪೋಸ್ಟರ್  (First Look) ಬಿಡುಗಡೆ ಮಾಡಿತ್ತು.  ಕ್ಯೂರಿಯಾಸಿಟಿಗೂ ಕಾರಣವಾಗಿತ್ತು. ಮುಕೇಶ್‍ ಕುಮಾರ್ ಸಿಂಗ್‍ (Mukesh Kumar Singh) ನಿರ್ದೇಶನದ ‘ಕಣ್ಣಪ್ಪ’ ಚಿತ್ರದ ಶೇ.80ರಷ್ಟು ಚಿತ್ರೀಕರಣ ನಡೆದಿದ್ದು, ಹಾಲಿವುಡ್‍ ಛಾಯಾಗ್ರಾಹಕ ಶೆಲ್ಡನ್‍ ಚಾವ್‍, ಈ ಸುಂದರ ಪರಿಸರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

Read More

ಬೆಂಗಳೂರು:- ರಾಜ್ಯದಲ್ಲಿ ಡಿಸೆಂಬರ್ 31 ರಿಂದ ಎರಡು ದಿನಗಳ ಕಾಲ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

Read More

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಪುತ್ರಿ ನಿವೇದಿತಾ (Niveditha) ಶಿವರಾಜ್‌ಕುಮಾರ್ ಅವರು ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ಶ್ರೀ ಮುತ್ತು ಸಿನಿ ಸರ್ವೀಸ್‌ನಡಿ ಹೊಸಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕೊಡುಗೆ ಫೈರ್ ಫ್ಲೈ. ಈ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತಿಥಿ ಪಾತ್ರ ಅದಾಗಿದ್ದರೂ, ಅದೊಂದು ಮಹತ್ವದ ಕ್ಯಾರೆಕ್ಟರ್ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪೋಸ್ಟರ್ ಮೂಲಕ ಗಮನಸೆಳೆದಿದ್ದ ಈ ಚಿತ್ರದ ಮೊದಲ ಹಾಗೂ ದ್ವಿತೀಯ ಹಂತ ಚಿತ್ರೀಕರಣ ಮುಕ್ತಾಯಗೊಂಡಿದೆ. ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಅಂದುಕೊಂಡಂತೆಯೇ ಶೂಟಿಂಗ್ ಕೆಲಸಗಳು ಮುಗಿಯುತ್ತಿವೆ ಎನ್ನುತ್ತಿದೆ ಚಿತ್ರತಂಡ. ಫೈರ್ ಫ್ಲೈ (Fire Fly)ಸಿನಿಮಾವನ್ನ ಯುವ ನಟ ವಂಶಿ ಡೈರೆಕ್ಟ್ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಡ್ತಿದ್ದಾರೆ. ರಘು ನಿಡುವಳ್ಳಿ…

Read More

ಬೆಂಗಳೂರು:- ರಾಜ್ಯದಲ್ಲಿ ಒಟ್ಟು 34 ಜನರಲ್ಲಿ ಜೆಎನ್.1 ರೂಪಾಂತರಿ ವೈರಸ್ ದೃಢವಾಗಿದೆ ಕೇರಳದಲ್ಲಿ ಕಾಣಿಸಿಕೊಂಡಿದ್ದ ಒಂದು ಕೇಸ್‌ಗೇ ಆತಂಕ ಸೃಷ್ಟಿಯಾಗಿತ್ತು. ಇದೀಗ ರಾಜ್ಯದಲ್ಲೇ 34 ಜೆಎನ್.1 ಕೇಸ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲೇ ಒಟ್ಟು 20 ಜನರಲ್ಲಿ JN.1 ವೈರಸ್ ಕಂಡುಬಂದಿದೆ. ಇತರ ಕಡೆಯ ಪ್ರಕರಣಗಳಲ್ಲಿ 4 ಮೈಸೂರು, 3 ಮಂಡ್ಯ, 1 ರಾಮನಗರ, 1 ಬೆಂಗಳೂರು ಗ್ರಾಮಾಂತರ, 1 ಕೊಡಗು, 1 ಚಾಮರಾಜನಗರದವು. ಒಟ್ಟು 192 ಜನರ ಗಂಟಲು ದ್ರವ ಜಿನೋಮಿಕ್ ಸಿಕ್ವೆನ್ಸ್‌ಗೆ ರವಾನೆ ಮಾಡಲಾಗಿತ್ತು. ಈ ಪೈಕಿ 60 ಸ್ಯಾಂಪಲ್‌ಗಳ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 34 ಜನರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇನ್ನೂ 130 ಜನರ ಸ್ಯಾಂಪಲ್‌ ಪರೀಕ್ಷೆಯಾಗಬೇಕಿದೆ. ಇಂದು ಮಹತ್ವದ ಸಭೆ ಇಂದು ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಹಾಗೂ ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯಿಂದ ಸಭೆ ನಡೆಯಲಿದೆ. ಸಚಿವರಾದ ಎಚ್. ಸಿ.ಮಹದೇವಪ್ಪ, ಶರಣು ಪ್ರಕಾಶ್ ಪಾಟೀಲ್ ಹಾಗೂ…

Read More

ಡಿಸೆಂಬರ್ 21 ರಂದು ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ತಮ್ಮ ಬಾಲ್ಯದ ಗೆಳತಿ ನಭಾ ಗಡಂವರ್ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಥಾಣೆಯ ಕಲ್ಯಾಣ ಪ್ರಾಂತ್ಯದಲ್ಲಿ ತನ್ನ ಬಾಲ್ಯದ ಗೆಳತಿಯೊಂದಿಗೆ ಸಪ್ತಪದಿ ತುಳಿದಿರುವ ಸಿಎಸ್‌ಕೆ ವೇಗಿ ತುಷಾರ್ ದೇಶಪಾಂಡೆ ತಮ್ಮ ವಿವಾಹದ ಸುಂದರ ಕ್ಷಣದ ಪೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಎರಡು ಹೃದಯಗಳ ಸಂಗಮದೊಂದಿಗೆ ನವ ಜೀವನ ಆರಂಭಗೊಂಡಿದೆ. ಜೈ ಭಜರಂಗಬಲಿ,” ಎಂದು ತಾನು ಹಂಚಿಕೊಂಡಿರುವ ಫೋಟೋಗೆ ಈ ರೀತಿಯ ಶೀರ್ಷಿಕೆ ನೀಡಿರುವ ಅವರು, “ಈ ಸುಂದರ ಕ್ಷಣಗಳನ್ನು ಸೆರೆ ಹಿಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಇದು ನಮ್ಮ ಜೀವನದ ಬಲು ಸುಂದರವಾದ ಕ್ಷಣಗಳು,” ಎಂದು ಕೆಳಗಡೆ ಮತ್ತೊಂದು ಸಾಲು ಬರೆದಿದ್ದಾರೆ. 2023ರ ಐಪಿಎಲ್ ಫೈನಲ್ ಪಂದ್ಯ ಸೇರಿದಂತೆ ಕೆಲವು ಪಂದ್ಯಗಳ ವೇಳೆ ಕ್ರೀಡಾಂಗಣಕ್ಕೆ ತೆರಳಿ ಯುವ ವೇಗಿ ತುಷಾರ್ ದೇಶಪಾಂಡೆ ಅವರನ್ನು ಬಾಲ್ಯದ ಗೆಳತಿ ನಭಾ ಗಡಂವಾರ್ ಬೆಂಬಲಿಸಿದ್ದರು. ಜೂನ್ 12 ರಂದು…

Read More

ಕೆಸಿಸಿ ಕಪ್ ದೇಶದಲ್ಲೇ ವಿನೂತನ ಪ್ರಯತ್ನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಕೆಸಿಸಿ ಕಪ್ ಫೈನಲ್ ಪಂದ್ಯ ವೀಕ್ಷಿಸಿದ ಉಪಮುಖ್ಯಮಂತ್ರಿಗಳು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅಭಿಮಾನಿಗಳ ಜತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರುತ್ತದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.‌ ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ ಎಂದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಳದ ಬಗ್ಗೆ ಕೇಳಿದಾಗ, ಯಾರೂ ಗಾಬರಿಪಡುವ ಅಗತ್ಯವಿಲ್ಲ. ಮುಂಜಾಗ್ರತೆಯಿಂದ ಇರೋಣ. ಈ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿ ಹಾಗೂ ತಾಂತ್ರಿಕ ಸಮಿತಿಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

Read More

ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯ ಮುಂಬರುವ ಆವೃತ್ತಿ ಸಲುವಾಗಿ ಟೂರ್ನಿಯ ಪ್ರಸಾರ ಹಕ್ಕು ಮತ್ತು ಅಂತಾರಾಷ್ಟ್ರೀಯ ಪ್ರಸಾರ ಹಕ್ಕಿನ ಮಾರಾಟವಾಗಿ ಮಧ್ಯ ಪ್ರವೇಶ ಮಾಡಿರುವ ಪಾಕ್‌ ಸರ್ಕಾರ, ಪಿಸಿಬಿ ವಿರುದ್ಧ 2 ವರ್ಷಗಳ ನಿಷೇಧ ಹೇರಿದೆ. ಲೀಗ್‌ ಸಲುವಾಗಿ ಪಿಸಿಬಿ ಬಿಡ್ಡಿಂಗ್‌ ನಡೆಸುವ ಪ್ರಕ್ರಿಯೆಗೆ ಮುಂದಾಗಿದ್ದ ಸಂದರ್ಭದಲ್ಲಿ ಪಾಕ್‌ ಸರ್ಕಾರ ನಿಷೇಧದ ಆದೇಶ ನೀಡಿದೆ ಎಂಬುದು ವರದಿಗಳ ಮೂಲಕ ತಿಳಿದು ಬಂದಿದೆ. ಪಾಕಿಸ್ತಾನ ಸರ್ಕಾರದ ಅಂತರ ಪ್ರಾಂತೀಯ ಸಮನ್ವಯ ಸಮಿತಿ (ಸ್ಪೋರ್ಟ್ಸ್‌) ನೋಟೀಸ್‌ ಜಾರಿ ಗೊಳಿಸಿದೆ. ದೊಡ್ಡ ಮಟ್ಟದ ವ್ಯವಹಾರ ನಡೆಸುವ ಮುನ್ನ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸರ್ಕಾರದ ಅನುಮತಿ ಪಡೆಯಬೇಕು ಎಂದು ನೋಟೀಸ್‌ ಮೂಲಕ ತಿಳಿಸಲಾಗಿದೆ. ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯ 11ನೇ ಆವೃತ್ತಿಗೆ ಪಿಸಿಬಿ ಇನ್ನೇನು ವೇಳಾಪಟ್ಟಿ ಪ್ರಕಟ ಮಾಡಬೇಕಿತ್ತು. ಈ ಸಂದರ್ಭದಲ್ಲಿ ನಿಷೇಧದ ತಲೆಬಿಸಿ ಎದುರಾಗಿದೆ. ಪಾಕಿಸ್ತಾನ್ ಸೂಪರ್‌ ಲೀಗ್‌ ಟೂರ್ನಿಯ ಮಾಧ್ಯಮ ಪ್ರಸಾರ ಹಕ್ಕು ಮಾರಾಟ ಮೂಲಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹೆಚ್ಚು ಆದಾಯ ಗಳಿಸುತ್ತದೆ.…

Read More

2023ರ ಸಿನಿಮೀಯ ಬದುಕಲ್ಲಿ ದೀಪಿಕಾ, ಎಸ್‌ಆರ್‌ಕೆ, ವಿಜಯ್ ವರ್ಮಾ ಮತ್ತು ರಶ್ಮಿಕಾ- ತಮ್ಮ ಕೆಲಸದಿಂದ ಅಳಿಸಲಾಗದ ಗುರುತು ಬಿಟ್ಟ ನಟರು 2023 ರ ಸಿನಿಮೀಯ ಭೂದೃಶ್ಯವು ಒಂದು ನಾಕ್ಷತ್ರಿಕ ವರ್ಷವೆಂದು ಸಾಬೀತಾಗಿದೆ, ಇದು ಅಸಾಧಾರಣ ಪ್ರದರ್ಶನಗಳು ಮತ್ತು ಗಮನಾರ್ಹ ಚಲನಚಿತ್ರಗಳಿಂದ ಗುರುತಿಸಲ್ಪಟ್ಟಿದೆ, ಅದು ವಿಶ್ವಾದ್ಯಂತ ಪ್ರೇಕ್ಷಕರ ಮೇಲೆ ಅಳಿಸಲಾಗದ ಗುರುತು ಹಾಕಿದೆ. ವರ್ಷವು ತೆರೆದುಕೊಂಡಂತೆ, ನಟರು ಮತ್ತು ನಟಿಯರು ತಮ್ಮ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಿದರು, ಪ್ರಕಾರಗಳಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದರು. ಆಕರ್ಷಕವಾದ ನಿರೂಪಣೆಗಳಿಂದ ಹಿಡಿದು ಅದ್ಭುತ ಕಥೆ ಹೇಳುವವರೆಗೆ, ಚಲನಚಿತ್ರೋದ್ಯಮವು ಪ್ರವರ್ಧಮಾನಕ್ಕೆ ಬಂದಿದೆ, ಪ್ರೇಕ್ಷಕರಿಗೆ ಸಿನಿಮೀಯ ಅನುಭವಗಳ ಶ್ರೀಮಂತ ಚಿತ್ರಣವನ್ನು ಒದಗಿಸುತ್ತದೆ. ಆದರೆ ಈ ವರ್ಷ, ಅನೇಕ ನಟರು ನಿಜವಾಗಿಯೂ ತಮ್ಮ ಮಟ್ಟವನ್ನು ಅತ್ಯುತ್ತಮವಾಗಿ ನೀಡಿದ್ದಾರೆ ಮತ್ತು ಮಿಂಚಿದ್ದಾರೆ ದೀಪಿಕಾ ಪಡುಕೋಣೆ 2023 ನಿಸ್ಸಂದೇಹವಾಗಿ ನೋಡಲು ಒಂದು ವರ್ಷವಾಗಿದೆ, ದೀಪಿಕಾ. ಆಸ್ಕರ್‌ನಲ್ಲಿ ಏಕವ್ಯಕ್ತಿ ನಿರೂಪಕರಾದ ಮೊದಲ ಭಾರತೀಯರಾಗಿ ಅಕಾಡೆಮಿ ಮ್ಯೂಸಿಯಂ ಗಾಲಾಕ್ಕೆ ಹಾಜರಾಗುವವರೆಗೆ, ಟೈಮ್ ನಿಯತಕಾಲಿಕವನ್ನು ಅಲಂಕರಿಸುವವರೆಗೆ ಮತ್ತು 2200…

Read More

ಬೆಂಗಳೂರು:- ಐದನೇ ಗ್ಯಾರಂಟಿ ಯುವ ನಿಧಿ ಜಾರಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಬೆಳಗ್ಗೆ 11ಗಂಟೆಗೆ‌ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಪದವೀಧರರಿಗೆ ಮಾಸಿಕ 3000 ರೂಪಾಯಿ ಮತ್ತು ಡಿಪ್ಲೋಮಾ ಹೋಲ್ಡರ್ಸ್ ಗೆ ಮಾಸಿಕ 1500 ರೂ ನಿರುದ್ಯೋಗ ಭತ್ಯೆಯನ್ನು ಫಲಾನುಭವಿಗಳಿಗೆ ಎರಡು ವರ್ಷದವರೆಗೆ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಯುವನಿಧಿ ಯೋಜನೆಯ ಫಲಾನುಭವಿಗಳು 2022-23 ರಲ್ಲಿ ವ್ಯಾಸಾಂಗ ಮಾಡಿ 2023 ರಲ್ಲಿ ತೇರ್ಗಡೆಯಾಗಿರಬೇಕು. ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳ ಕಾಲ ವ್ಯಾಸಾಂಗ ಮಾಡಿರಬೇಕು. ಸ್ವಯಂ ಉದ್ಯೋಗಿಗಳಾಗಿದ್ರೆ ನಿರುದ್ಯೋಗ ಭತ್ಯೆ ಇಲ್ಲ. ಸರ್ಕಾರಿ, ಅನುದಾನಿತ, ಖಾಸಗಿ ನೌಕರರಾಗಿದ್ರೆ ಯೋಜನೆಗೆ ಅರ್ಹರಲ್ಲ. ಅರ್ಜಿ ಸಲ್ಲಿಕೆ ಹೇಗೆ? ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರ ಮತ್ತು ಸೇವಾ ಸಿಂಧು ಜಾಲತಾಣದಲ್ಲಿಯೂ ಅರ್ಜಿ ಸಲ್ಲಿಕೆ ಮಾಡಬಹುದು. ಯಾವೆಲ್ಲಾ ದಾಖಲೆಗಳು ಬೇಕು? ಅಭ್ಯರ್ಥಿಗಳು ಕರ್ನಾಟಕ ರಹವಾಸಿ ಎಂದು ನಿರೂಪಿಸಬೇಕು. ಪೋರ್ಟಲ್ ನಲ್ಲಿ…

Read More

ಬೆಂಗಳೂರು:- ನೆರೆ ರಾಜ್ಯ ಕೇರಳದಲ್ಲಿ ಆರ್ಭಟ ತೋರುತ್ತಿರುವ ರೂಪಾಂತರಿ ಕೊರೊನಾ ಕರ್ನಾಟಕಕ್ಕೂ ಕಾಲಿಟ್ಟಿದೆ. ನೂತನ ಉಪತಳಿ ವೇಗವಾಗಿ ಹರಡುವ ಲಕ್ಷಣ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣವಾಗುವ ಆತಂಕವನ್ನೂ ಸೃಷ್ಟಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮ್ ಸಿಕ್ವೇನ್ಸಿಂಗ್‌ನಲ್ಲಿ (ವೈರಾಣು ವಂಶವಾಹಿ ರಚನೆ ವಿಶ್ಲೇಷಣೆ) ನಿರೀಕ್ಷೆಯಂತೆ ಓಮಿಕ್ರಾನ್ ವೈರಾಣು ಉಪತಳಿ ಜೆಎನ್‌.1 ಪತ್ತೆಯಾಗಿದೆ ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ಜೆಎನ್‌.1 ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನು ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಕೂಡ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ಧರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಜೆಎನ್…

Read More