Author: AIN Author

ಬೆಂಗಳೂರು:- ಉತ್ತರ ಕರ್ನಾಟಕದ ವಿಜಯಪುರ, ಬೀದರ್‌, ಧಾರವಾಡ, ಬಾಗಲಕೋಟೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ 14 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿಯಲ್ಲಿದ್ದು, ಚಳಿಯ ಪ್ರಮಾಣ ಯಥಾರೀತಿ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಮುಂದಿನ ಐದು ದಿನ ಮಳೆಯ ವಾತಾವರಣ ಇರುವುದಿಲ್ಲ. ಹಗಲಲ್ಲಿ ಓಣ ಹವೆಯ ವಾತಾವರಣ ಇರಲಿದ್ದು. ಬೆಳಗಿನ ಚಳಿಯಲ್ಲಿ ಏರಿಳಿತ ಇರಬಹುದು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣವೇ ಮುಂದುವರಿದಿದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲೇ ಸತತವಾಗಿ ಕಡಿಮೆ ತಾಪಮಾನ ದಾಖಲಾಗುತ್ತಿದೆ. ಮಂಗಳವಾರದಂದು ವಿಜಯಪುರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶದ ಪ್ರಮಾಣ 10.9 ಡಿಗ್ರಿ ಸೆಲ್ಸಿಯಸ್‌. ಒಂದು ದಿನದಲ್ಲಿ ಸುಮಾರು 2.4 ಡಿಗ್ರಿ ಕುಸಿತ ಕಂಡಿದೆ. ಆದರೆ ವಿಜಯಪುರ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್‌ ಇದ್ದು, ಹಗಲು ವೇಳೆ ಒಣ ಹವೆ ವಾತಾವರಣವೇ ಅಧಿಕವಾಗಿದೆ. ಬೀದರ್‌ನಲ್ಲೂ 12.5 ಡಿಗ್ರಿ, ಧಾರವಾಡದಲ್ಲಿ 13.8 ಡಿಗ್ರಿ. ಗದಗದಲ್ಲಿ 14.2…

Read More

ರಾಜಧಾನಿ ಬೆಂಗಳೂರು ಸೇರಿ ಹಲವು ಮಹಾನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆಗಳು ಇಂದು ಹೆಚ್ಚಳಗೊಂಡಿದೆ. ಭಾರತದಲ್ಲಿ ಬೆಳ್ಳಿ ಬೆಲೆಯೂ ಗ್ರಾಮ್​ಗೆ 30 ಪೈಸೆಯಷ್ಟು ದುಬಾರಿ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,675 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 27ಕ್ಕೆ): 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,400 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,710 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 795 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ:…

Read More

ಬೆಂಗಳೂರು:- ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರದ ಯಾವುದೇ ಉದ್ಯೋಗಿ ನಿರ್ದಿಷ್ಟ ಹುದ್ದೆ ಅಥವಾ ನಿರ್ದಿಷ್ಟ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಹಕ್ಕು ಸಾಧನೆ ಮಾಡಲು ಬರುವುದಿಲ್ಲ. ನೌಕರರನ್ನು ಸೇವಾ ಪರಿಸ್ಥಿತಿ ಆಧಾರದ ಮೇಲೆ ವರ್ಗಾವಣೆ ಮಾಡಲಾಗುತ್ತದೆ. ಮೇಲಾಗಿ, ಒಂದೇ ಹುದ್ದೆ ಅಥವಾ ಸ್ಥಳದಲ್ಲಿ ಸರ್ಕಾರಿ ನೌಕರ ನಿಗದಿತ ಅವಧಿಗಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದಲ್ಲಿ ಅಲ್ಲಿ ಆತ ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. ಸರ್ಕಾರಿ ನೌಕರ ತಾನಿರುವ ಪ್ರದೇಶದಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳಬಾರದು ಎಂಬ ಉದ್ದೇಶದಿಂದ ವರ್ಗಾವಣೆ ಮಾಡಲಾಗುತ್ತದೆ. ವರ್ಗಾವಣೆ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಅವಧಿಗಿಂತ ಹೆಚ್ಚುಕಾಲ ಒಂದು ಹುದ್ದೆ/ಪ್ರದೇಶದಲ್ಲಿ ಉದ್ಯೋಗಿ ಕರ್ತವ್ಯ ನಿರ್ವಹಿಸಿದರೆ, ಆತನನ್ನು ಮತ್ತೊಂದೆಡೆಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ಕೋರ್ಟ್‌ ತಿಳಿಸಿದೆ. ಮುಖ್ಯಮಂತ್ರಿಗಳು ಶಾಸಕಾಂಗದ ಅತ್ಯುನ್ನತ ಅಧಿಕಾರಿ ಆಗಿರುವುದರಿಂದ ಆಡಳಿತದ…

Read More

ಮೈಸೂರು:- ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಂಸತ್ ಘಟನೆ ನಂತರ ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದ್ದಾರೆ. ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನವರೆಗೂ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದಾರೆ. ನನ್ನ ಭಯೋತ್ಪಾದಕ ಅಂತ ಬಿಂಬಿಸುವ ಪ್ರಯತ್ನ ಕಾಂಗ್ರೆಸಿಗರು ಮಾಡಿದರು. ಮುಸ್ಲಿಮರೆಲ್ಲಾ ಭಯೋತ್ಪಾದಕರು ಅನ್ನೋ ರೀತಿ ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು. ಸಂಸತ್ ವಿಚಾರದಲ್ಲಿ ನಾನು ಸ್ಪಷ್ಟನೆ ಕೊಟ್ಟ ಬೆನ್ನಲ್ಲೆ ಪ್ರತಾಪ್ ಸಿಂಹ ಸಹೋದರ ಮರಗಳ್ಳ ಅಂತಾ ಕಾಂಗ್ರೆಸ್ ನವರು ಪೋಸ್ಟ್ ಮಾಡಿದ್ದರು ಎಂದು ಟೀಕಿಸಿದರು. ಮರ ಕಡಿತ ಪ್ರಕರಣದ ಬಗ್ಗೆ ಡಿ.‌16 ರಂದು ಎಫ್ ಐಆರ್ ಆಗಿದೆ. ಅದನ್ನು ಮೊನ್ನೆ ನನ್ನ ತಮ್ಮನ ಹೆಸರಿನಲ್ಲಿ ತಿರುಚಿದ್ದು ಯಾಕೆ? ಪ್ರತಾಪ್ ಸಿಂಹನನ್ನು ಈ ಕ್ಷೇತ್ರದಲ್ಲಿ ಸೋಲಿಸಲು ಆಗಲ್ಲ ಅಂತಾ ಸಿದ್ದರಾಮಯ್ಯ ಅವರಿಗೆ ಗೊತ್ತು. ನನ್ನ ತಮ್ಮನ ಹೆಸರು ಎಫ್ ಐಅರ್…

Read More

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಪಡೆ (ಆರ್​ಪಿಎಫ್), ರೈಲ್ವೆ ಪೋಲಿಸ್ ಹಾಗೂ ಇತರೆ ಭದ್ರತಾ ಅಧಿಕಾರಿಗಳು ಹೆಚ್ಚಿನ ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು. ಹುಬ್ಬಳ್ಳಿ ರೈಲು ನಿಲ್ದಾಣದ ಪುನರಾಭಿವೃದ್ಧಿ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರು ಸಭೆ ನಡೆಸಿದರು. ಪ್ರಯಾಣಿಕರ ಹಾಗೂ ಅವರ ಸರಕುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಕಟ್ಟುನಿಟ್ಟಿನ ಆದೇಶ ನೀಡಿದರಲ್ಲದೆ, ಕಳ್ಳತನದ ಪ್ರಕರಣಗಳ ತನಿಖೆಯನ್ನು ಸೂಕ್ತ ಸಮಯದಲ್ಲಿ ಕೈಗೊಂಡು ಸ್ವತ್ತು, ಹಣ ಕಳೆದುಕೊಂಡವರಿಗೆ ಆದಷ್ಟು ಬೇಗ ನ್ಯಾಯ ದೊರಕಿಸಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹೊಸದಾಗಿ ನೇಮಕಾತಿ ಹೊಂದಿದ ಡಿ ಗ್ರುಪ್ ಅಭ್ಯರ್ಥಿಗಳಿಗೆ ಬೇಗನೇ ನೇಮಕಾತಿ ಆದೇಶ ಪತ್ರ ನೀಡಬೇಕು. ವಾರದಲ್ಲಿ 2…

Read More

ವಿಜಯಪುರ:- ನನ್ನನ್ನು ರೆಬೆಲ್ ಆಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣ ಅಸ್ತಿತ್ವದಲ್ಲಿರುತ್ತದೆ. ನನ್ನನ್ನು ರೆಬೆಲ್ ಆಗಿ ಬಿಂಬಿಸುತ್ತಿರುವುದು ಸರಿಯಲ್ಲ, ನಾನು ಹಿಂದೆಯೂ ರೆಬೆಲ್ ಆಗಿರಲಿಲ್ಲ, ಮುಂದೆಯೂ ರೆಬೆಲ್‌ ಆಗುವುದಿಲ್ಲ ಎಂದರು. ಮೂವರು ಡಿಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಡಿಸಿಎಂ ಸ್ಥಾನದ ಬಗ್ಗೆ ಈಗ ಚರ್ಚೆ ಕೂಡ ನಡೆಯುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಅವಧಿ ಪೂರೈಸುತ್ತದೆ. ಕುಮಾರಸ್ವಾಮಿಯವರು ಕಾಂಗ್ರೆಸ್‌ ಸರ್ಕಾರ ಬೀಳಲಿದೆ ಎಂದು 5 ವರ್ಷ ಹೇಳುತ್ತಲೇ ಇರಲಿ ಎಂದು ವ್ಯಂಗ್ಯವಾಡಿದರು. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೋವಿಡ್ ಕಾಲದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಶಾಸಕ ಯತ್ನಾಳರ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಅವ್ಯವಹಾರ ಕುರಿತು ತನಿಖೆ ಮಾಡಲು ಒಂದು ತನಿಖಾ ತಂಡ ರಚನೆಯಾಗಿದೆ. ಈ ತನಿಖಾ ತಂಡ ವರದಿ ನೀಡಲಿದೆ. ವರದಿ ಬಂದ ಬಳಿಕವೇ ಈ ಬಗ್ಗೆ ಪ್ರತಿಕ್ರಿಯೆ ನೀಡುವೆ ಎಂದರು

Read More

ಧಾರವಾಡ: ತಾಲೂಕಿನ ಮರೆವಾಡ ಗ್ರಾಮದಲ್ಲಿ‌ ಇಂದು ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು. ‌ಗ್ರಾಮದ ಪ್ರಮುಖ ಬೀದಿಗಳಲ್ಲಿ ‌ಸಂಚರಿಸಿದ ಜಾಗೃತಿ ಜಾಥ ಎಲ್ಲರು ಮತದಾಣ ಮಾಡಬೇಕು, ಮತದಾನ‌ನಮ್ಮ ಸಂವಿಧಾನಿಕ ಹಕ್ಕು ಎಂದು ಕಾಋತಿ ಮೂಡಿಸಿದರು.‌ ಗ್ರಾಮದ ಬಸವೇಶ್ವರ ದೇವಸ್ಥಾನ‌ ಬಳಿ ಚಕ್ಕಡಿಗೆ ಜಿಲ್ಲಾ ಪಂಚಾಯತಿಬಯೋಜನಾ ಅಧಿಕಾರಿ ರೇಖಾ ಡೊಳ್ಳಿನವರು ಹಸಿರು ನಿಶಾನೆ ತೋರಿಸುವುದರ ಜೊತೆಗೆ ಚಪ್ಪಾಳೆ ಹೊಡೆಯುವ ಮೂಲಕ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಚುನಾವಣಾ ಸಾಕ್ಷರತಾ ಕ್ಲಬ್, ಅಂಜುಮನ್ ಮಹಾವಿದ್ಯಾಲಯ, ಎನ್ನೆಸ್ಸೆಸ್ ಸಹಯೋಗದಲ್ಲಿ ಕಾರ್ಯಕ್ರಮ ನಡೆದಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ಮತದಾನ ಗ್ರಾಮಸ್ಥರಿಗೆ ಸೇರಿದಂತೆ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸದರು. ‌ ಇನ್ನೂ ಜಾಗೃತಿ ಜಾಥಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿ.ಪಂ.ಯೋಜನಾ ಅಧಿಕಾರಿ ರೇಖಾ ಡೊಳ್ಳಿನ ಇತ್ತಿನ ಚುನಾವಣೆಯಲ್ಲಿ ಮತದಾನ ಪ್ರಮಾಣ ಕ್ಷಿಣಿಸುವುದು ಆಘಾತಕಾರಿ ಸಂಗತಿ. ಪ್ರಜ್ಞಾವಂತರು ತಪ್ಪದೇ, ಮತದಾನ ಮಾಡಬೇಕು. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸರ್ವರೂ ಹಕ್ಕು ಚಲಾಯಿಸಬೇಕು.…

Read More

ಮುಕೇಶ್ ಅಂಬಾನಿ ಬರೋಬ್ಬರಿ 829514 ಕೋಟಿ ನಿವ್ವಳ ಆಸ್ತಿಯೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ. 1700000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ದೇಶದ ಅತ್ಯಮೂಲ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ಬಹು-ಶತಕೋಟಿ ಡಾಲರ್ ಅಂಗಸಂಸ್ಥೆಗಳನ್ನು ಹೊಂದಿದೆ, ಹಳೆಯ ಸಂದರ್ಶನದಲ್ಲಿ, ನೀತಾ ಅಂಬಾನಿ ತಮ್ಮ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಅವರಿಗೆ ಹಣದ ಮೌಲ್ಯವನ್ನು ಕಲಿಸಲು ಪ್ರತಿ ವಾರ 5 ಪಾಕೆಟ್ ಮನಿ ನೀಡುತ್ತಿರುವುದನ್ನು ಬಹಿರಂಗಪಡಿಸಿದ್ದರು. ಮಾತ್ರವಲ್ಲ, ಅನಂತ್ ಅಂಬಾನಿ ದುಬಾರಿ ವಾಚ್‌ಗಳು ಮತ್ತು ಕಾಸ್ಟ್ಲೀ ಕಾರುಗಳ ಕಲೆಕ್ಷನ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಶಾಲಾ ದಿನಗಳಲ್ಲಿ ಅವರನ್ನು ಸಹಪಾಠಿಗಳು ಭಿಕಾರಿ ಎಂದು ಕರೆಯುತ್ತಿದ್ದರೂ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳು ಅನಂತ್‌ ಅಂಬಾನಿ ಕೇವಲ ಐದು ರೂ. ಪಾಕೆಟ್ ಮನಿ ಪಡೆಯುತ್ತಿರುವುದಕ್ಕೆ ಭಿಕಾರಿ ಎಂದು ಕರೆದು ಲೇವಡಿ ಮಾಡಿದ್ದರು. ಅನಂತ್ ಅಂಬಾನಿ, ತಮ್ಮ ಶಾಲಾ…

Read More

ಸೂರ್ಯೋದಯ: 06.40 AM, ಸೂರ್ಯಾಸ್ತ : 06.02 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಹುಣ್ಣಿಮೆ  06:02 AM ತನಕ ನಂತರ ಪಾಡ್ಯ ನಕ್ಷತ್ರ: ಇವತ್ತು ಆರ್ದ್ರಾ 11:29 PM ತನಕ ನಂತರ ಪುನರ್ವಸು ಯೋಗ: ಇವತ್ತು ಶುಕ್ಲ 03:22 AM ತನಕ ನಂತರ ಬ್ರಹ್ಮ ಕರಣ: ಇವತ್ತು ಬವ 06:02 AM ತನಕ ನಂತರ ಬಾಲವ 06:20 PM ತನಕ ನಂತರ ಕೌಲವ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07::30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 01.00 PM to 02.41 PM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ…

Read More

ಬೆಂಗಳೂರು:- ನಗರದಲ್ಲಿ ಯುವಕರ ಬೈಕ್ ವ್ಹೀಲಿಂಗ್ ಹಾವಳಿ ನಿಂತಿಲ್ಲ. ಎಲ್ಲೆಂದರಲ್ಲಿ ಪುಂಡ ಯುವಕರ ಬೈಕ್ ವ್ಹೀಲಿಂಗ್ ನಿಂದ ಇತರೆ ವಾಹನಗಳಿಗೆ ತೊಂದರೆ- ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ. ನಿನ್ನೆ ನೈಸ್ ರಸ್ತೆಯಲ್ಲಿ ಪುಂಡ ಯುವಕರಿಂದ ಮೋಜು ಮಸ್ತಿ ನಡೆದಿದ್ದು, ಬೈಕ್ ವ್ಹೀಲಿಂಗ್ ನಡುವೆ ಡೇಂಜರ್ ಡ್ರ್ಯಾಗ್ ರೇಸ್ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಪುಂಡರು, ಬೆಟ್ಟಿಂಗ್ ಕಟ್ಟಿ ಡ್ರ್ಯಾಗ್ ರೇಸ್ ಮಾಡುವ ಮೂಲಕ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದ್ದಾರೆ. ವೀಕೆಂಡ್ ಮತ್ತು ವೀಕ್ ಡೇಸ್ ಗಳಲ್ಲಿ ಈ ರೀತಿ ಬೆಂಗಳೂರು ಯುವಕರು ಹುಚ್ಚಾಟ ಮೆರೆದಿದ್ದಾರೆ. ನಿನ್ನೆ ನೈಸ್ ರಸ್ತೆಯಲ್ಲಿ ಎರಡು ಯಮಹ ಬೈಕ್ ಗಳ ಮೂಲಕ ಡ್ರ್ಯಾಗ್ ರೇಸ್ ಮಾಡುತ್ತಿದ್ದು, ಡ್ರ್ಯಾಗ್ ರೇಸ್ ಆಡಿದ್ದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಪುಂಡರು, Yamaha Rx Fan base ಎಂಬ ಖಾತೆಯಲ್ಲಿ ಡ್ರ್ಯಾಗ್ ರೇಸ್ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕಂಡು ಪೊಲೀಸ್ ಇಲಾಖೆಗೆ ಸಾರ್ವಜನಿಕರು…

Read More