Author: AIN Author

ಕೋಲಾರ :- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಎಸ್.ಜೀಡಮಾಕಲಪಲ್ಲಿ ಗ್ರಾಮದಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಯುವಕ ಹಾಗೂ ಮಹಿಳೆ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದಾರೆ. ಅನಸೂಯ (35) ಹಾಗೂ ವಿಜಯ್ ಕುಮಾರ್(28) ಆತ್ಮಹತ್ಯೆ ಮಾಡಿಕೊಂಡವರು. ಅನಸೂಯಗೆ ಮದುವೆಯಾಗಿ ಎರಡು ಮಕ್ಕಳು ಇದ್ದರೂ ಸಹ ಸಹ ಅವಿವಾಹಿತ ಯುವಕ ವಿಜಯ್ ಕುಮಾರ್​ನೊಂದಿಗೆ ಅಕ್ರಮ ಸಂಬಂಧವಿತ್ತು. ಅಲ್ಲದೇ ಇವರಿಬ್ಬರು ಕಳೆದ ಎರಡು ತಿಂಗಳ ಹಿಂದೆ ಊರು ಬಿಟ್ಟು ನಾಪತ್ತೆಯಾಗಿದ್ದರು. ಆದ್ರೆ, ಇದೀಗ ಗ್ರಾಮಕ್ಕೆ ಬಂದು ಏಕಾಏಕಿ ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಸೂಯ, ಮಂಜುನಾಥ್ ಎನ್ನುವರೊಂದಿಗೆ ಮದುವೆಯಾಗಿದ್ದು, ಈಗಾಗಲೇ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇನ್ನು ವಿಜಯ್ ಕುಮಾರ್​ ಮದುವೆಯಾಗಿರಲಿಲ್ಲ. ಅನಸೂಯ ಮತ್ತು ವಿಜಯ್ ಕುಮಾರ್​ ನಡುವೆ ಅಕ್ರಮ ಸಂಬಂಧವಿತ್ತು. ಅಲ್ಲದೇ ಈ ಜೋಡಿ ಮನೆ ಬಿಟ್ಟು ಓಡಿ ಹೋಗಿತ್ತು. ಈಗ ಇಬ್ಬರು ಕಳೆದ ರಾತ್ರಿ ಗ್ರಾಮದ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More

ಮಜಾಭಾರತ, ಗಿಚ್ಚಿ ಗಿಲಿಗಿಲಿ (Gichchi Giligili) ನಟಿ ಪ್ರಿಯಾಂಕಾ ಕಾಮತ್ (Priyanka Kamath) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಅಮಿತ್ ನಾಯಕ್ ಜೊತೆ ಪ್ರಿಯಾಂಕಾ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿಗೆ ಕಿರುತೆರೆ ನಟ-ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ ಕಳೆದ ಎರಡು ದಿನಗಳಿಂದ ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ ಮದುವೆ ಕುರಿತ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿವೆ. ಇದೀಗ ದಾಂಪತ್ಯ ಜೀವನಕ್ಕೆ ನಟಿ ಕಾಲಿಟ್ಟಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಅಮಿತ್- ಪ್ರಿಯಾಂಕಾ ಕಳೆದ ಜನವರಿಯಲ್ಲಿ ಪುತ್ತೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ನಂತರದಲ್ಲಿ ಏಳು-ಬೀಳಿನಲ್ಲಿ ಇವರಿಬ್ಬರು ಒಟ್ಟಿಗೆ ಸಾಥ್ ನೀಡಿದ್ದರು. ಇದೀಗ ಹೊಸ ಬಾಳಿಗೆ ನವಜೋಡಿ ಕಾಲಿಟ್ಟಿದ್ದಾರೆ. ಅಮಿತ್ ನಾಯಕ್ (Amith Nayak) ಮೂಲತಃ ಕುಂದಾಪುರದವರು. ಕಳೆದ ಒಂದು ವರ್ಷದಿಂದ ಈ ಜೋಡಿ ಸಾಕಷ್ಟು ಕಡೆ ಪ್ರವಾಸ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿತ್ತು.

Read More

ಆನೆಯನ್ನ ಪಳಗಿಸೋಕೆ ಒಬ್ಬ ಮಾವುತ ಬೇಕು ಅಂತ ಆ್ಯಡ್ ನೋಡಿದೆ. ಹಾಗಾಗಿ ಬಂದೆ. ಇದು ಅಸ್ತಿಕ್ ಅವಿನಾಶ್ ಶೆಟ್ಟಿ (Avinash Shetty) ವೈಲ್ಡ್ ಕಾರ್ಡ್ (Wild Card) ಮೂಲಕ ಈ ಸಲದ ಬಿಗ್‌ ಬಾಸ್ ಮನೆಯೊಳಗೆ (Bigg Boss Kannada 10) ಹೋದಾಗ ಆಡಿದ ಮಾತು. ಅವರ ಸ್ಟೈಲ್‌, ಕಾನ್ಫಿಡೆನ್ಸ್, ಮಾತು ಎಲ್ಲವೂ ಅವರು ಮನೆಯೊಳಗೆ ಮಿಂಚಲಿದ್ದಾರೆ ಎಂಬುದನ್ನು ದೃಢೀಕರಿಸುವ ಹಾಗೆಯೇ ಇತ್ತು. ಆದರೆ ಅವಿನಾಶ್ ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಲು ಸಾಧ್ಯಾಗಿಲ್ಲ. ಹಾಗಾಗಿಯೇ ಈ ವಾರ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಿಂದ ಹೊರಗೆ ಬರುವುದರ ಮೂಲಕ, ಅರ್ಧದಲ್ಲಿ ಎಂಟ್ರಿ ಕೊಟ್ಟು ಮನೆಯೊಳಗೆ ಜಾಗ ಗಿಟ್ಟಿಸುವುದು ಸುಲಭದ ಮಾತಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಮೈಕಲ್- ಅವಿನಾಶ್ ಭಾನುವಾರದ ಸಂಚಿಕೆಯ ಕೊನೆಯಲ್ಲಿ ಕಾರಿನಲ್ಲಿ ಕೂತು ಮನೆಯಿಂದ ಹೊರಗೆ ಹೋದಾಗ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ…

Read More

ದೇವನಹಳ್ಳಿ:- ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯು ಅಂಗಡಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಬೆಂಗಳೂರಿಲ್ಲಿಂದು ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ಸಾದಹಳ್ಳಿ ಗೇಟ್​​ ಬಳಿಯ ಟೋಲ್​ ಪ್ಲಾಜಾದಿಂದ ಆರಂಭವಾಗುವ ರ‍್ಯಾಲಿ ಕಬ್ಬನ್ ಪಾರ್ಕ್ ವರೆಗೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದಾರೆ. ಅಲ್ಲದೇ ಟ್ರಾಫಿಕ್​ ಜಾಮ್ ಆಗದಂತೆ ಪೊಲೀಸರು ಏರ್​ಪೋರ್ಟ್​ ರಸ್ತೆಯ ಡಿವೈಡರ್ ಬಳಿ ಸೈಡ್ ವಾಲ್​ಗಳನ್ನು ಅವಳವಡಿಸಿದ್ದಾರೆ. ಪ್ರತಿಭಟನೆ ವೇಳೆ ಜನ ನೋಡುತ್ತಾ ಟ್ರಾಫಿಕ್ ಜಾಮ್ ಮಾಡುತ್ತಾರೆ ಎಂದು ಪೊಲೀಸರು ಸುಮಾರು 500 ಮೀಟರ್ ಗೂ ಅಧಿಕ ದೂರ ಸೈಡ್ ವಾಲ್ ಅಳವಡಿಕೆ ಮಾಡಿದ್ದಾರೆ. ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್ ಬಳಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 1 ಎಸಿಪಿ, 6 ಇನ್ಸ್​ಪೆಕ್ಟರ್, 12 ಸಬ್ ಇನ್ಸ್​ಪೆಕ್ಟರ್ ಸೇರಿದಂತೆ 500 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ರ‍್ಯಾಲಿಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದರೆ ಕಾರ್ಯಕರ್ತರನ್ನ ವಶಕ್ಕೆ ಪಡೆಯುವ…

Read More

ಬೆಂಗಳೂರು: ಹೊಸತಳಿ ಜೆಎನ್.1 ಪತ್ತೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್  ಜೆಎನ್.1 ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡ ರಾಜ್ಯ ಸರ್ಕಾರ ನಿರ್ಬಂಧವಿಲ್ಲದಿದ್ರೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಹಲವು ಅಗತ್ಯ ಕ್ರಮ ಸಂಪುಟ ಉಪಸಮಿತಿ ಸಭೆಯಲ್ಲಿ ಕೈಗೊಂಡ ಕ್ರಮದ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ ಟೆಸ್ಟಿಂಗ್ ಹೆಚ್ಚಳಕ್ಕೆ ಮುಂದು..ಸೋಂಕಿನ ಕಡಿವಾಣಕ್ಕೆ ಮುನ್ನೆಚ್ಚರಿಕಾ ಕ್ರಮ‌ ಜೆಎನ್.1 ಕಡಿವಾಣಕ್ಕೆ ಸರ್ಕಾರ ಕ್ರಮ ರಾಜ್ಯದಲ್ಲಿ ಈಗಾಗಲೇ ನೀಡಿರುವ 5 ಸಾವಿರ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಬೇಕು ಸೋಂಕಿತರ ಸಂಪರ್ಕಿತರು ಕೊರೊನಾ ಲಕ್ಷಣ ಹೊಂದಿದ್ದಲ್ಲಿ ಟೆಸ್ಟ್ ಮಾಡಿಸಿಕೊಳ್ಳಬೇಕು ಸೋಂಕಿರನ್ನ ಪಿಹೆಚ್ ಸಿ ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸಬೇಕು ಐಸಿಯುನಲ್ಲಿರುವ ಸೋಂಕಿತರನ್ನ Tele ICU ನ ಮೂಲಕ ಮೇಲ್ವಿಚಾರಣೆ ನಡೆಸುವುದು ಅಗತ್ಯವಿರುವ ಸೋಂಕಿತರ ಸ್ಯಾಂಪಲ್ಸ್ ಜೀನೋಮ್ ಸೀಕ್ವೆನ್ಸ್ ಗಾಗಿ ಕಳುಹಿಸುವುದು ಮುನ್ನೆಚ್ಚರಿಕ ಕ್ರಮವಾಗಿ PSA plantಗಳು & LMO plantಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು PESO license ಆದಷ್ಟು ಶೀಘ್ರ ಪಡೆಯುವುದು, ಆಕ್ಸಿಜನ್ ಉತ್ಪಾದನಾ ಪ್ರಮಾಣ ಪುಷ್ಟಿಕರಿಸಬೇಕು…

Read More

ಚಿಕ್ಕಮಗಳೂರು : ಅನುಕಂಪದ ಆಧಾರದ ಕೆಲಸಕ್ಕೆ ಶಿಫಾರಸ್ಸು ಮಾಡಲು ಮಹಿಳೆ ಬಳಿ ಲಂಚ ಸಮೇತ ಲೋಕಾಯುಕ್ತ ಬಲೆಗೆ BEP ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಇಂದು ನಡೆದಿದೆ. ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ ಅಧಿಕಾರಿಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹಳ್ಳಿಯೊಂದರ ಮಹಿಳೆಯ ಪತಿ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 2023ರ ಮೇ 5 ರಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹಾಗಾಗಿ, ಶಿಕ್ಷಕರ ಪತ್ನಿ ಅನುಕಂಪದ ಆಧಾರದ ನೌಕರಿಗೆ ಶಿಫಾರಸ್ಸು ಮಾಡುವಂತೆ ಬಿಇಓಗೆ ಮನವಿ ಮಾಡಿದ್ದರು. ಅವರು ದಾಖಲೆ ಕೇಳುವ ನೆಪದಲ್ಲಿ ದಿನದೂಡುತ್ತಿದ್ದರು. ಮಹಿಳೆ ಬಿಇಓ ಕಚೇರಿಯ ಎಸ್.ಡಿ.ಎ. ಬಳಿ ಕೇಳಿದಾಗ 15000 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮಹಿಳೆ ಬಿಇಓ ಬಳಿ ಮನವಿ ಮಾಡಿದಾಗ ಬಿಇಓ ಹೇಮಂತ್ ರಾಜ್ 15000 ದಿಂದ 10 ಸಾವಿರಕ್ಕೆ ಬಂದಿದ್ದರು. 10 ಸಾವಿರ ಹಣ ಪಡೆದುಕೊಳ್ಳುವಾಗ ಬಿಇಓ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ…

Read More

ಸೂಪರ್‌ಸ್ಪೋರ್ಟ್‌ ಸ್ಟೇಡಿಯಂನಲ್ಲಿ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲನೇ ದಿನ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 38 ರನ್‌ಗಳಿಸಿ ವೇಗಿ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ಮಹತ್ತರ ದಾಖಲೆಗಳನ್ನು ಮುರಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ 35 ಇನಿಂಗ್ಸ್‌ಗಳಿಂದ ವಿರಾಟ್ ಕೊಹ್ಲಿ 4 ಶತಕಗಳ ನೆರವಿನಿಂದ 2,101 ರನ್ ಗಳಿಸಿ ರೋಹಿತ್ ಶರ್ಮಾ (2097 ರನ್, 26 ಇನಿಂಗ್ಸ್, 7 ಶತಕ) ಅವರನ್ನು ಹಿಂದಿಕ್ಕಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು * 2,101 ರನ್ -ವಿರಾಟ್ ಕೊಹ್ಲಿ * 2,097 ರನ್- ರೋಹಿತ್ ಶರ್ಮಾ * 1,769 ರನ್- ಚೇತೇಶ್ವರ್ ಪುಜಾರ * 1,589 ರನ್- ಅಜಿಂಕ್ಯ ರಹಾನೆ ಹರಿಣಿಗಳ ನಾಡಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ…

Read More

ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಗಳನ್ನು ತಬ್ಬಿಬ್ಬುಗೊಳಿಸಿದ ದಕ್ಷಿಣ ಆಫ್ರಿಕಾದ ಬಲಗೈ ವೇಗಿ ಕಗಿಸೊ ರಬಾಡ 5 ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಹರಿಣಿಗಳ ಪರ 500 ಅಂತಾರಾಷ್ಟ್ರೀಯ ವಿಕೆಟ್ ಪಡೆದ 7ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 24 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ಟೀಮ್ ಇಂಡಿಯಾಗೆ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 4ನೇ ವಿಕೆಟ್ ಗೆ 68 ರನ್ ಗಳ ಜೊತೆಯಾಟ ನೀಡಿದ್ದರು. ಆದರೆ ಭೋಜನ ವಿರಾಮದ ನಂತರ ಶ್ರೇಯಸ್ ಅಯ್ಯರ್ (31 ರನ್) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕಗಿಸೊ ರಬಾಡ ಟೀಮ್ ಇಂಡಿಯಾಗೆ ಮತ್ತೊಮ್ಮೆ ಆಘಾತ ನೀಡಿದರು. ಆಧುನಿಕ ಕ್ರಿಕೆಟ್ ನ ದಿಗ್ಗಜ ವಿರಾಟ್ ಕೊಹ್ಲಿ (38 ರನ್) ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಔಟ್‌ ಸೈಡ್‌ ದಿ ಆಫ್‌ ಸ್ಟಂಪ್‌ ಎಸೆತವನ್ನು ಆಡಲು ಹೋಗಿ ವಿಕೆಟ್…

Read More

ಬೆಂಗಳೂರು: ಕನ್ನಡ ನಾಮಫಲಕ ಅಳವಡಿಸದ ಉದ್ದಿಮೆಗಳ ವಿರುದ್ಧ ಕರವೇ ಸಮರ ಸಾರಿದ್ದಾರೆ.ಬೆಂಗಳೂರಿನ ವಿವಿಧ ಕಡೆ ಕರವೇ ಜಾಥ ಆರಂಭ ಮಾಡಿದ್ದು  ಅಲ್ಲಲ್ಲಿ ಇಂಗ್ಲಿಷ್ ನಾಮಫಲಕ ಕಿತ್ತು ಹಾಕ್ತಿರೋ ಕರವೇ ಕಾರ್ಯಕರ್ತರು ಬಿಬಿಎಂಪಿ ವಿವಿಧೆಡೆ ಕರವೇ ಕಾರ್ಯಕರ್ತರಿಂದ ಇಂಗ್ಲಿಷ್ ಪೋಸ್ಟರ್ ವಿರುದ್ಧ ಸಮರ ಸಾರುತ್ತಿದ್ದು ಕನ್ನಡ ನಾಮಫಲಕ ಆಳವಡಿದ ಅಂಗಡಿ ಮಾಲೀಕರು ವಿರುದ್ಧ ಸಮರ ಸಾರತಿರೋ ಕರವೇ

Read More

ಯಡ್ರಾಮಿ:- ಹತ್ತಿ ಬೆಳೆ ಇಳುವರಿ ಕಡಿಮೆಯಾಗಿರುವ ಜೊತೆಗೆ ಅದರ ಬೆಲೆಯೂ ಕುಸಿತ ಕಂಡಿರುವ ಘಟನೆ ಯಡ್ರಾಮಿಯಲ್ಲಿ ಜರುಗಿದೆ. ತಿಂಗಳ ಹಿಂದೆ ಹತ್ತಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹11 ಸಾವಿರದಿಂದ ₹13 ಸಾವಿರ ಬೆಲೆ ಇತ್ತು. ಹತ್ತಿ ಬಿಡಿಸಿ ಮನೆಗೆ ತರುವ ಹೊತ್ತಿಗೆ ₹7 ಸಾವಿರದ ಆಸುಪಾಸು ಮಾರಾಟವಾಗುತ್ತಿತ್ತು. ಈಗ ಅದರ ಬೆಲೆ ₹5 ಸಾವಿರದಿಂದ ₹6 ಸಾವಿರ ಆಗಿದೆ. ಕೂಲಿ ಕಾರ್ಮಿಕರಿಗೆ ಹೆಚ್ಚಿನ ಹಣ ನೀಡಿ ಹತ್ತಿ ಬಿಡಿಸಿ ಮನೆಗೆ ತಂದಿದ್ದ ರೈತರಿಗೆ ಇದು ನುಂಗಲಾರದ ತುತ್ತಾಗಿದೆ. ಪ್ರತಿ ವರ್ಷ ಹತ್ತಿ ಬೆಳೆ ಬೆಳೆಯುವುದರಲ್ಲಿ ಯಡ್ರಾಮಿ, ಜೇವರ್ಗಿ ತಾಲ್ಲೂಕುಗಳು ಮುಂಚೂಣಿಯಲ್ಲಿರುತ್ತವೆ. ಯಡ್ರಾಮಿ ತಾಲ್ಲೂಕಿನಲ್ಲಿ ಕಳೆದ ಬಾರಿ 28,808 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದರು. ಮಳೆ ಕೂಡ ಚೆನ್ನಾಗಿ ಆಗಿದ್ದರಿಂದ ಇಳುವರಿ ಚೆನ್ನಾಗಿ ಬಂದಿತ್ತು. ಇದರ ಜೊತೆಗೆ ಬೆಲೆ ಕೂಡ ಉತ್ತಮ ಸಿಕ್ಕ ಕಾರಣಕ್ಕೆ ರೈತರು ಉತ್ತಮ ಲಾಭ ಪಡೆದಿದ್ದರು. ಈ ಸಲವೂ ಕಳೆದ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ತಾಲ್ಲೂಕಿನ…

Read More