Author: AIN Author

ದಾವಣಗೆರೆ: ತಮ್ಮ ಭಾಷಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ರನ್ನು ಬಂಧಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ. ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಟಿ.ಅಸ್ಗರ್, “ಶ್ರೀರಂಗಪಟ್ಟಣದಲ್ಲಿ ಮಾತನಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್, ‘ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ’ ಎಂದು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮಾತನಾಡಿದ್ದಾರೆ. ವಿವಾಹಿತ ಮಹಿಳೆಯರ ಲೈಂಗಿಕ ಜೀವನವನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ. ಆತನನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ತಂಜಿಮ್ ಕಮಿಟಿ ಕಾರ್ಯದರ್ಶಿ ಶಾನವಾಜ್ ಖಾನ್ ಮಾತನಾಡಿ, “ಪ್ರಪಂಚದಲ್ಲಿ ಹೆಣ್ಣಿಗೆ ಪೂಜೆ ಮಾಡುವ ಏಕೈಕ ದೇಶ ಭಾರತ. ಇಂತಹ ದೇಶದಲ್ಲಿ ಹುಟ್ಟಿದ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಆರ್‌ಎಸ್‌ಎಸ್‌ ಇಂತಹ ಹೊಲಸು ಮಾತುಗಳನ್ನು…

Read More

ಕಲಬುರಗಿ: ಸಾರ್ವಜನಿಕ ಜೀವನದಲ್ಲಿರೋರು ಎಚ್ಚರಿಕೆಯಿಂದ ಮಾತಾಡೋದನ್ನ ರೂಢಿ ಮಾಡ್ಕೋಬೇಕು ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಪರಮೇಶ್ವರ ಸಂಸದ ಪ್ರತಾಪಸಿಂಹ ನೀಡಿರುವ ಸೋಮಾರಿ ಸಿದ್ಧ ಹೇಳಿಕೆಗೆ ಈ ರೀತಿ ರಿಯಾಕ್ಟ್ ಮಾಡಿದ್ರು.. ಇದೇವೇಳೆ ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಪ್ರಭಾವಿಗಳಿಗೆ ನೋಟೀಸ್ ನೀಡಿರೋ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಉನ್ನತ ಮಟ್ಟದ ತನಿಖಾ ಸಂಸ್ಥೆ ಹತ್ರ ಏನ್ ಮಾಹಿತಿ ಇದ್ಯೋ ನನಗೆ ಗೊತ್ತಿಲ್ಲ ಅಂದ್ರು. ಮಾತ್ರವಲ್ಲ ಕೋವಿಡ್ ಹಗರಣದ ಬಗ್ಗೆ ಬಿಎಸ್ವೈ ವಿರುದ್ಧ ಯತ್ನಾಳ್ ಆರೋಪ ಮಾಡಿದ್ದು ನಮ್ಮ ಕೆಲಸವನ್ನ ಮತ್ತಷ್ಟು ಹಗುರ ಮಾಡಿದ್ದಾರೆ ಅಂದ್ರು..

Read More

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ನೌಕರರ ಸಹಕಾರಿ ಪತ್ತಿನ ಸಂಘ ನಿಯಮಿತದ ಚುನಾವಣೆಯಲ್ಲಿ ಸೋತಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡ ನೌಕರನೋರ್ವ, ಧಾರವಾಡದ ರೇಣುಕಾನಗರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಂದ್ರಕಾಂತ ಸಾವಳಗಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ನಡೆದಿದ್ದ ಚುನಾವಣೆಯಲ್ಲಿ ಚಂದ್ರಕಾಂತ ಸೋತಿದ್ದರು. ಅದೇ ವಿಷಯಕ್ಕೆ ಸಾಕಷ್ಟು ಮನನೊಂದಿದ್ದ ಚಂದ್ರಕಾಂತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಇನ್ನೂ ಕುಟುಂಬಸ್ಥರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಚಂದ್ರಕಾತ ಮೃತದೇಹವನ್ನು ಕೇಲಗೆ ಇಳಿಸಿರೋ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶ್ರೀನಗರ: ಗಾಜಾ (Gaza) ಮೇಲೆ ಇಸ್ರೇಲ್ (Israel) ಪಡೆಗಳು ದಾಳಿಗಳನ್ನು ಮುಂದುವರೆಸಿದ್ದು, ಅಲ್ಲಿನ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಇದೇ ಹೊತ್ತಲ್ಲಿ ಕಾಶ್ಮೀರವನ್ನು (Kashmir) ಗಾಜಾಗೆ ಸಮೀಕರಿಸಿ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ (Farooq Abdullah) ಹೇಳಿಕೆ ನೀಡಿದ್ದಾರೆ. ನೆರೆಯ ಪಾಕಿಸ್ತಾನದ (Pakistan) ಜೊತೆ ಭಾರತ (India) ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳದೇ ಇದ್ದಲ್ಲಿ ಮುಂದೊಂದು ದಿನ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು. ಅಲ್ಲದೇ ಬಾಂಬ್‌ಗಳು ಸದ್ದು ಮಾಡಬಹುದು ಎಂಬ ಎಚ್ಚರಿಕೆಯನ್ನು ಫಾರೂಖ್ ಅಬ್ದುಲ್ಲಾ ನೀಡಿದ್ದಾರೆ. ನೆರೆ ಹೊರೆ ದೇಶಗಳ ಜೊತೆ ಸುಮಧುರ ಬಾಂಧವ್ಯ ಹೊಂದಿದರೆ ಎರಡೂ ದೇಶಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದ್ದಾರೆ.  https://ainlivenews.com/prime-minister-modis-youtube-channel-has-crossed-2-crore-subscribers/ ಇದೇ ಮಾತನ್ನು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಈಗ ಪ್ರಧಾನಿ ಮೋದಿ ಕೂಡ ಯುದ್ಧ ಆಯ್ಕೆಯಲ್ಲ ಎಂದಿದ್ದಾರೆ. ಪಾಕ್ ವಿಚಾರಕ್ಕೂ ಇದನ್ನು ಅನ್ವಯಿಸಬಹುದು. ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ. ಅವರು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ. ಆದರೆ ನಾವು ಏಕೆ ಮಾತನಾಡಲು…

Read More

ಚಳಿಗಾಲದ ಪ್ರಾರಂಭದೊಂದಿಗೆ, ಋುತುಮಾನದ ನಿರ್ದಿಷ್ಟ ಆಹಾರ ಪದಾರ್ಥಗಳು ಜನಪ್ರಿಯ ವಾಗುತ್ತವೆ.  ಚಳಿಗಾಲದಲ್ಲಿ ಶುಂಠಿ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಶೀತ, ಜ್ವರ ಇತರ ಚಳಿಗಾಲದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಈ ಸೀಸನ್ ನಲ್ಲಿ ಶುಂಠಿ ತಿನ್ನುವುದು ಒಳ್ಳೆಯದು. ಶುಂಠಿಯು ಅದರ ಥರ್ಮೋಜೆನಿಕ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಶೀತ ವಾತಾವರಣದಲ್ಲಿ ನಿಮ್ಮನ್ನು ಬೆಚ್ಚಗಾಗಿಸುತ್ತದೆ. ದೇಹವು ರೋಗಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶೀತ ಮತ್ತು ಕೆಮ್ಮಿನಿಂದ ಪರಿಹಾರ ಆಯುರ್ವೇದದಲ್ಲಿ (Ayurveda) ಶುಂಠಿಯನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಚಳಿಗಾಲದಲ್ಲಿ ಶುಂಠಿಯನ್ನು ಸೇವಿಸುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಶುಂಠಿಯನ್ನು ಕುದಿಸುವುದು (ಶುಂಠಿ ಚಹಾ) ಪ್ರಯೋಜನಕಾರಿಯಾಗಿದೆ. ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ. ಚಳಿಗಾಲದ ಸಂಬಂಧಿತ ಉಸಿರಾಟದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಕಠಿಣ ಚಳಿಗಾಲದಲ್ಲಿ…

Read More

ನವದೆಹಲಿ: ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸಲು ಸಿಪಿಐ-ಎಂ (CPI-M) ತೀರ್ಮಾನಿಸಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿ, ಧರ್ಮವು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯ ನಿರ್ದಿಷ್ಟ ಸ್ವರೂಪವನ್ನು ಆಯ್ಕೆ ಮಾಡುವ ಹಕ್ಕನ್ನು ನಾವು ಗೌರವಿಸುತ್ತೇವೆ ಮತ್ತು ರಕ್ಷಿಸುತ್ತೇವೆ. ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರತಿಪಾದಿಸಿ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಬಹುದು. ಆದರೆ ಉದ್ಘಾಟನಾ ಸಮಾರಂಭ ರಾಜ್ಯ ಪ್ರಾಯೋಜಿತ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದ್ದಾರೆ. https://ainlivenews.com/prime-minister-modis-youtube-channel-has-crossed-2-crore-subscribers/ ಭಾರತೀಯ ಸಂವಿಧಾನ (Constitution) ಮತ್ತು ಸುಪ್ರೀಂ ಕೋರ್ಟ್‌ಗೆ (Supreme Court) ಸಂಬಂಧಿಸಿದಂತೆ, ರಾಜ್ಯ ಈ ರೀತಿಯ ಕಾರ್ಯಕ್ರಮ ಮಾಡಬಾರದು. ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಇತರರು ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಬಿಜೆಪಿ (BJP) ಧಾರ್ಮಿಕ ರಾಜಕೀಯದಲ್ಲಿ ತೊಡಗಿದೆ. ಇದು ಸರಿಯಲ್ಲ. ಅದಕ್ಕೆ ನಾವು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನಮ್ಮ ಪಕ್ಷ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಮಾಜಿ ರಾಜ್ಯಸಭಾ ಸದಸ್ಯೆ, ಬೃಂದಾ ಕಾರಟ್‌ (Brinda Karat) ಸ್ಪಷ್ಟಪಡಿಸಿದ್ದಾರೆ.

Read More

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌ (Petrol rate), ಡೀಸೆಲ್‌ ಬೆಲೆಯಲ್ಲಿ (diesel rate)ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ   96.72.…

Read More

ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಡಿ.21ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಂಕಿ ಸಿನಿಮಾಗೆ ಪ್ರೇಕ್ಷಕ ತೋರಿಸುತ್ತಿರುವ ಪ್ರೀತಿಗೆ ಕಿಂಗ್ ಖಾನ್ ಫಿದಾ ಆಗಿದ್ದಾರೆ. ಈ ಹಿನ್ನೆಲೆ ಭಾನುವಾರದಂದು ತಮ್ಮ ನಿವಾಸ ಮನ್ನತ್ (Mannat) ಎದುರು ಜಮಾಯಿಸಿದ್ದ ನೂರಾರು ಅಭಿಮಾನಿಗಳಿಗೆ ಶಾರುಖ್ ದರ್ಶನ ಕೊಟ್ಟಿದ್ದಾರೆ. ತಮ್ಮ ಸಿಗ್ನೇಚರ್ ಶೈಲಿಯ ಪೋಸ್ ನೀಡಿ ಫ್ಯಾನ್ಸ್ ಗೆ ಧನ್ಯವಾದ ತಿಳಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಜೊತೆ ಸೇರಿ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಂದು ಸಿಂಪಲ್ ಕಥೆಯನ್ನು ಬಹಳ ತಮಾಷೆಯಾಗಿ ಅಷ್ಟೇ ಭಾವನಾತ್ಮಕವಾಗಿ ರಾಜ್‌ಕುಮಾರ್ ಹಿರಾನಿ ಹೇಳಿ ಗೆದ್ದಿದ್ದಾರೆ. ಕಿಂಗ್ ಖಾನ್- ಹಿರಾನಿ ಒಟ್ಟಿಗೆ ಕೈಜೋಡಿಸುತ್ತಿದ್ದಾರೆ ಎಂದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ‘ಡಂಕಿ’…

Read More

ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ (Kannada Board) ಸರ್ಕಾರದ ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (Karnataka Rakshana Vedike) ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರಾಣವನ್ನೂ ಲೆಕ್ಕಿಸದೇ ಬೃಹತ್ ಜಾಹೀರಾತು ಫಲಕ ಏರಿ ಇಂಗ್ಲಿಷ್‍ನಲ್ಲಿದ್ದ ಬೋರ್ಡ್ ಅನ್ನು ಹರಿದು ಹಾಕಿದ್ದಾರೆ. ಹಾಗೆ ಯುಬಿ ಸಿಟಿ ಬೋರ್ಡ್ ಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರ ನಂತರ ಆಂಗ್ಲ ಬೋರ್ಡ್‌ಗಳನ್ನ ಪುಡಿ ಪುಡಿ ಮಾಡುತ್ತಿದ್ದು  ಹೀಗೆ ಪುಂಡಾಟ ಮಾಡುತ್ತಿದ್ದ ಕೆಲ ಕರವೇ ಕಾರ್ಯಕರ್ತರು ಹಾಗೆ ಸಾರ್ವಜನಿಕರಿಗೆ ತೊಂದರೆ ಮಾಡ್ತಿದ್ದವರನ್ನ ವಶಕ್ಕೆ ಪಡೆದ ಪೋಲಿಸರು ಕಲ್ಲು ತೂರಾಟ ಮಾಡುತ್ತಿದ್ದ ಹದಿನೈದರಿಂದ ಇಪ್ಪತ್ತು ಕಾರ್ಯಕರ್ತರನ್ನ ವಶಕ್ಕೆ ಪಡೆದ ಕಬ್ಬನ್ ಪಾರ್ಕ್ ಪೋಲಿಸರು

Read More

ನವದೆಹಲಿ: ದೆಹಲಿಯ (New Delhi) ಚಾಣಕ್ಯಪುರಿಯಲ್ಲಿರುವ (Chanakyapuri) ಇಸ್ರೇಲ್ ರಾಯಭಾರಿ ಕಚೇರಿಗೆ (Israel Embassy) ಬಾಂಬ್ ಬೆದರಿಕೆ ಕರೆ (Bomb Threat Call) ಬಂದಿದ್ದು, ದೆಹಲಿ ಪೊಲೀಸರು (Delhi Police) ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರಿಗೆ ಅಪರಿಚಿತ ಕರೆ ಬಂದಿದೆ. ಕರೆಯಲ್ಲಿ ಸ್ಫೋಟದ ಬಗ್ಗೆ ಅಧಿಕಾರಿಗಳಿಗೆ ವರದಿಯಾಗಿದೆ. ಇಸ್ರೇಲಿ ರಾಯಭಾರ ಕಚೇರಿಯ ಹಿಂದೆ ಖಾಲಿ ಜಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಕರೆ ಮಾಡಿದ ಅನಾಮಿಕ ವ್ಯಕ್ತಿ ತಿಳಿಸಿದ್ದಾನೆ. https://ainlivenews.com/prime-minister-modis-youtube-channel-has-crossed-2-crore-subscribers/ ಬೆದರಿಕೆ ಕರೆ ಬಂದ ತಕ್ಷಣ ಬಾಂಬ್ ಸ್ಕ್ವಾಡ್‌ನೊಂದಿಗೆ ಪೊಲೀಸರ ವಿಶೇಷ ಸೆಲ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಕರೆ. ಕರೆ ಮಾಡಿದವರ ಗುರುತು, ಮತ್ತು ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ. ಈ ಕುರಿತು ವಿವರವಾದ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. 

Read More