Author: AIN Author

ಚಂಡೀಗಢ: ಹರಿಯಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಜರಂಗ್‌ ಪೂನಿಯಾ ಸೇರಿ ಹಲವು ಕುಸ್ತಿಪಟುಗಳನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಅವರು ಬಜರಂಗ್‌ ಪೂನಿಯಾ ಜತೆ ಕುಸ್ತಿ ಆಡಿದ್ದಾರೆ. ಈ ಫೋಟೊಗಳನ್ನು ರಾಹುಲ್‌ ಗಾಂಧಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್‌ ವಿವಾದ, ಡಬ್ಲ್ಯೂಎಫ್‌ಐ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯಾ ಸೇರಿ ಹಲವರು ಪ್ರಶಸ್ತಿ ಹಿಂತಿರುಗಿಸಿದ ಬೆನ್ನಲ್ಲೇ ಹರಿಯಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಜರಂಗ್‌ ಪೂನಿಯಾ ಸೇರಿ ಹಲವು ಕುಸ್ತಿಪಟುಗಳನ್ನು ಭೇಟಿಯಾಗಿದ್ದಾರೆ.

Read More

ಹೃದಯಾಘಾತದಿಂದ ನಿಧನರಾಗಿರುವ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ (Jolly Bastin), ಮೂಲತಃ ಮೆಕ್ಯಾನಿಕ್ (mechanic). ಬಗೆ ಬಗೆಯ ಬೈಕ್ ಗಳನ್ನು ರಿಪೇರಿ ಮಾಡುತ್ತಿದ್ದವರು, ಸ್ಟಂಟ್  ಡೈರೆಕ್ಟರ್ ಆಗಿದ್ದು ರೋಚಕ ಕಥೆ. ರಿಪೇರಿಗೆ ಬಂದಿದ್ದ ಬೈಕ್ ಗಳಲ್ಲಿ ನಾನಾ ರೀತಿಯ ಸಾಹಸ ಪ್ರದರ್ಶನಗಳನ್ನು ಮಾಡುತ್ತಿದ್ದರು ಜಾಲಿ ಬಾಸ್ಟಿನ್. ಒಂದು ಬಾರಿ ರಸ್ತೆಯಲ್ಲಿ ಬೈಕ್ ನಲ್ಲಿ ಸಾಹಸ ಮಾಡುತ್ತಾ ಹೋಗುತ್ತಿದ್ದಾಗ ರವಿಚಂದ್ರನ್ ಕಣ್ಣಿಗೆ ಬಿದ್ದರು. ಅಲ್ಲಿಂದ ಜಾಲಿ ಬಾಸ್ಟಿನ್ ಬದುಕೇ ಬದಲಾಯಿತು. ಮೊದ ಮೊದಲು ರವಿಚಂದ್ರನ್ ಅವರಿಗೆ ಡ್ಯೂಪ್ ಆಗಿ ಜಾಲಿ ಬಾಸ್ಟಿನ್ ಕೆಲಸ ಮಾಡಿದರು. ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಯಾವುದೇ ಸಾಹಸ ದೃಶ್ಯಗಳು ಇರಲಿ, ಅಲ್ಲಿ ರವಿಚಂದ್ರನ್ ಬದಲಾಗಿ ಸಾಹಸ ಮಾಡುತ್ತಿದ್ದವರು ಇದೇ ಜಾಲಿ ಮಾಸ್ಟರ್. ಡ್ಯೂಪ್ ಆಗಿದ್ದವರನ್ನು ಸ್ಟಂಟ್ ಡೈರೆಕ್ಟರ್ ಮಾಡಿದ್ದು ಇದೇ ರವಿಚಂದ್ರನ್. ಹಾಗಾಗಿ ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಜಾಲಿ ಕೆಲಸ ಮಾಡಿದ್ದರು. ರವಿಚಂದ್ರನ್ ಮಾತ್ರವಲ್ಲ, ಅನೇಕ ಕಲಾವಿದರಿಗೆ ಜಾಲಿ ಬಾಸ್ಟಿನ್ ಡ್ಯೂಪ್ ಆಗಿದ್ದಾರೆ. ಕನ್ನಡದಲ್ಲಿ ಇವರು…

Read More

ಹುಬ್ಬಳ್ಳಿ: ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು. ಈಗ ಸಂವಿಧಾನದ ಸರ್ಕಾರ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿಗೆ ಟಾಂಗ್ ಕೊಟ್ಟರು. ನಗರದಲ್ಲಿ ಮಾತನಾಡಿದ ಅವರು, ದೇಶ ನಡಿತಿರೋದು ಭಗವದ್ಗೀತೆ ಮೇಲೆ ಅಲ್ಲ, ಕುರಾನ್ ಮೇಲೆ ಅಲ್ಲ, ಬೈಬಲ್ ಮೇಲೆಯೂ ಅಲ್ಲ. ದೇಶ ನಡಿತಿರೋದು ಸಂವಿಧಾನದ ಮೇಲೆ. ಯಾರ ಏನಾದರೂ ಎನ್ನಲಿ, ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರ. ಸರ್ಕಾರಗಳು ನಡೆಯೋದು ಸಂವಿಧಾನದ ಮೇಲೆ ಎಂದು ತಿಳಿಸಿದರು.  https://ainlivenews.com/prime-minister-modis-youtube-channel-has-crossed-2-crore-subscribers/ ಬಸವ ತತ್ವ, ಅಂಬೇಡ್ಕರ್ ತತ್ವದ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೀತಿತ್ತು. ಪೀಠದ ಮೇಲೆ ಕುಳಿತು ಕಾಗೇರಿ ನಾನು ಆರ್‌ಎಸ್‌ಎಸ್‌ನವರು ಎಂದಿದ್ದರು. ಬಿಜೆಪಿಯವರು ಹಣದ ಮೇಲೆ ಹೆಣ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೂ ಹಣ ಮಾಡಿದ್ದಾರೆ ಎಂದು ಆರೋಪಿಸಿದರು.

Read More

ವಂಚನೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್, ಜೈಲಿನಿಂದಲೇ (Jail) ತಮಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಜಾಕ್ವೆಲಿನ್ ಆರೋಪ ಮಾಡಿದ್ದಾರೆ. ಜೈಲಿನಿಂದ ಜಾಕ್ವೆಲಿನ್ ಗೆ ಪ್ರೇಮ ಪತ್ರ ಕಳುಹಿಸುತ್ತಿದ್ದರು. ಇದೀಗ ಬೆದರಿಕೆಯ ಪತ್ರ ಬರೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತನ್ನ ವಿರುದ್ಧ ಕ್ರಮಕ್ಕೆ ಮುಂದಾದರೆ, ನಿನ್ನ ಬಣ್ಣ ಬಯಲು ಮಾಡುವುದಾಗಿ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸುಕೇಶ್ ಇಷ್ಟೊಂದು ಗರಂ ಆಗೋಕೆ ಕಾರಣ, ಜಾಕ್ವೆಲಿನ್ ಕಾನೂನು ಕ್ರಮಕ್ಕೆ ಮುಂದಾಗಿರೋದು. ಮೊನ್ನೆಯಷ್ಟೇ ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೋರ್ಟ್ ಮೆಟ್ಟಿಲು ಏರಿದ್ದರು. ಸುಕೇಶ್ ಚಂದ್ರಶೇಖರ್ (Sukesh Chandrasekhar) ಮಾಡಿದ್ದಾರೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಸುಕೇಶ್ ವಿರುದ್ಧ ಮತ್ತೆ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ. ಜಾಕ್ವೆಲಿನ್ ಗೆ ಸಂಬಂಧಿಸಿದಂತೆ ಸುಕೇಶ್ ತಿಂಗಳಿಗೊಂದಾದರೂ ಮಾಧ್ಯಮ ಹೇಳಿಕೆಯನ್ನು ನೀಡುತ್ತಿದ್ದಾನೆ. ಇನ್ನೂ ಜಾಕ್ವೆಲಿನ್ ಅನ್ನು…

Read More

ಬೆಂಗಳೂರು: ಪ್ರಾಸಿಕ್ಯೂಷನ್ ಅನುಮತಿ ನೀಡುವ ವಿಚಾರದಲ್ಲಿನ ಲೋಪದಿಂದಾಗಿ ಮಾಡಾಳ್ ವಿರೂಪಾಕ್ಷಪ್ಪ ಮತ್ತು ದೇವೇಂದ್ರಪ್ಪ ಸೇರಿದಂತೆ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟಾಚಾರ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಜಾ ಆಗುತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು. ಪ್ರಾಸಿಕ್ಯೂಷನ್ ಅನುಮತಿ ನೀಡುವಲ್ಲಿ ಆಗುತ್ತಿರುವ ಲೋಪದಿಂದಾಗಿ ಭ್ರಷ್ಟಾಚಾರಿಗಳ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗುತ್ತಿದ್ದು, ಲೋಕಾಯುಕ್ತ ಹಾಗೂ ರಾಜ್ಯ ಸರ್ಕಾರ ಭ್ರಷ್ಟರಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಮೋಹನ್ ದಾಸರಿ ಅವರು, ನೂರಾರು ಕೋಟಿ ಲೂಟಿ ಮಾಡಿರುವ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಪ್ರಾಸಿಕ್ಯೂಷನ್ ಅನುಮತಿ ಪಡೆದಿಲ್ಲ ಎಂದು ರದ್ದು ಮಾಡಲಾಗುತ್ತದೆ. ದೇವೇಂದ್ರಪ್ಪ ಮೇಲೆ ದಾಳಿಯಾದಾಗ ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ದೇವೇಂದ್ರಪ್ಪ ಅವರು 20 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆದರೂ, ರಾಜಾರೋಷವಾಗಿ…

Read More

ಮೈಸೂರು: ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. https://ainlivenews.com/prime-minister-modis-youtube-channel-has-crossed-2-crore-subscribers/ ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಅವರು ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿದ್ದರು. ಸದ್ಯ ಈ ದೂರಿನನ್ವಯ ಪೊಲೀಸರು ಸಂಸದರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸಿಂಹ ಹೇಳಿದ್ದೇನು..?: ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ್ದ ಸಂಸದರು, ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದರು. ಸಿದ್ದರಾಮಯ್ಯ ಅವರೇ ನಿಮಗೆ ನಿಜವಾಗಲೂ ತಾಖತ್, ಧಮ್ ಇದ್ದರೆ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ. ಆದರೆ ಈ ರೀತಿಯಾಗಿ ದ್ವೇಷದ ರಾಜಕಾರಣ ಮಾಡಬೇಡಿ ಎಂದು ಗರಂ ಆಗಿದ್ದರು. ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 28 ಜನ ಸಂಸದರು ಇದ್ದಾರೆ. ಆದರೆ ಪ್ರತಾಪ್ ಸಿಂಹನ ಮಾತ್ರ ಟಾರ್ಗೆಟ್ ಮಾಡುತ್ತಾರೆ ಏಕೆ?. ನಾನು ಸೋಮಾರಿ ಸಿದ್ದನ ರೀತಿ ಸುಮ್ಮನೆ ಕುಳಿತುಕೊಂಡು ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ…

Read More

ಬೆಂಗಳೂರು: ಕನ್ನಡ ನಾಮಫಲಕ ಅಳವಡಿಕೆ ವಿಚಾರ ಹಿನ್ನೆಲೆ ಸಚಿವ ಶಿವರಾಜ್ ತಂಗಡಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ನಾರಾಯಣಗೌಡರ ಹೋರಾಟವನ್ನ ಬೆಂಬಲಿಸುತ್ತೇನೆ ಆದರೆ ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಕಾನೂನು ಮಾಡುತ್ತಿದ್ದೇವೆ ಸರೋಜಿನಿ ಮಹಿಷಿ ವರದಿ ಎರಡೂ ಸದನಗಳಲ್ಲಿ ಪಾಸ್ ಆಗಿದೆ ಈ ವರಿದಯ ರೂಲ್ಸ್ ಫ್ರೇಮ್ ಮಾಡುತ್ತಿದ್ದೇವೆ ಎಂದರು. ಜನವರಿ ಮೊದಲ ವಾರದಲ್ಲಿ ಈ ಬಗ್ಗೆ ಅಂತಿಮ ಸಭೆ ಮಾಡುತ್ತೇವೆ ಬೋರ್ಡ್‌ನ 60% ಕನ್ನಡ ಪದಗಳು ಇರಬೇಕು ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆ, ಕನ್ನಡ ಭೋದನೆ ಅನುಷ್ಠಾನಕ್ಕಾಗಿ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಕನ್ನಡ ಸಂಸ್ಕೃತಿ , ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಒಳಗೊಂಡ ಟಾಸ್ಕ್‌ಫೋರ್ಸ್ ಸಮಿತಿ ರಚನೆಗೆ ಚಿಂತನೆ

Read More

ನವದೆಹಲಿ: ರಾಮ ನನ್ನ ಹೃದಯದಲ್ಲಿದ್ದಾನೆ, ನಾನು ಅದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ, ಹಾಲಿ ಎಸ್‌ಪಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ (Kapil Sibal) ಹೇಳಿದ್ದಾರೆ. ಅಯೋಧ್ಯೆಯಲ್ಲಿ (Ayodhya) ನಡೆಯಲಿರುವ ರಾಮ್ ಲಲ್ಲಾ (Ram Lalla) ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀವು ಬಯಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀ ರಾಮ  ನನ್ನ ಹೃದಯದಲ್ಲಿದ್ದಾನೆ ಮತ್ತು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ನಾನು ನಿಮಗೆ ಹೇಳುವುದು ನನ್ನ ಹೃದಯದಿಂದ ಬಂದದ್ದು. ಏಕೆಂದರೆ ನಾನು ಈ ಎಲ್ಲಾ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ನನ್ನ ಹೃದಯದಲ್ಲಿದ್ದರೆ ಮತ್ತು ನನ್ನ ಪ್ರಯಾಣದುದ್ದಕ್ಕೂ ರಾಮ ನನಗೆ ಮಾರ್ಗದರ್ಶನ ನೀಡಿದರೆ, ನಾನು ಸರಿಯಾದ್ದನ್ನೇ ಮಾಡಿದ್ದೇನೆ ಎಂದರ್ಥ ಎಂದು ತಿಳಿಸಿದರು.  ಇಡೀ ರಾಮಮಂದಿರ ನಿರ್ಮಾಣ ವಿಷಯ ಒಂದು ಪ್ರದರ್ಶನ. ಏಕೆಂದರೆ ಆಡಳಿತ ಪಕ್ಷದ ನಡವಳಿಕೆ, https://ainlivenews.com/prime-minister-modis-youtube-channel-has-crossed-2-crore-subscribers/ ಸ್ವಭಾವವು ಎಲ್ಲಿಯೂ ರಾಮನನ್ನು ಹೋಲುವುದಿಲ್ಲ. ಈ ಇಡೀ ವಿಷಯ ಪ್ರದರ್ಶನವಾಗಿದೆ. ಬಿಜೆಪಿಯವರು (BJP) ರಾಮನ ಬಗ್ಗೆ ಮಾತನಾಡುತ್ತಾರೆ.…

Read More

ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನ ದಾವಣಗೆರೆ ಜಿಲ್ಲೆ ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ನಲ್ಲೂರಿನ ಸೈಯದ್ ಖಾದೀರ್, ಇಸ್ಮಾಯಿಲ್ ಜಬಿ, ಪ್ರಜ್ವಲ್ ಬಂಧಿತ ಆರೋಪಿಗಳಾಗಿದ್ದು, ಸಂತೆಬೆನ್ನೂರ-ಚನ್ನಗಿರಿ ರಸ್ತೆಯ ಪುಷ್ಕರಣಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 543 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದ್ದು, ಈ ಘಟನೆ ಸಂಬಂಧ ದಾವಣಗೆರೆ ಜಿಲ್ಲೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುಲಾಗಿದೆ.

Read More

ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಇಂದು  ಜೆಡಿಎಸ್​ನ  ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಪರಿಷತ್​ ಸದಸ್ಯ ಟಿ.ಎ. ಶರವಣ ಭಾಗಿಯಾಗಿದ್ದರು. ನಗರದ ಜೆಪಿ ಭವನದಲ್ಲಿ ಬೆಂಗಳೂರು ಮಹಾನಗರದ ಜೆಡಿಎಸ್​ನ ಪದಾಧಿಕಾರಿಗಳ ಸಭೆ ನಡೆದಿದ್ದು ಪಕ್ಷ ಸಂಘಟನೆ ಸಂಬಂಧ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬಂದವು ಹಾಗೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಲಾಯಿತು ಈ ವೇಳೆ ಶರವಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸಭೆಗೆ ಬೆಂಗಳೂರಿನ ಜೆಡಿಎಸ್​​ನ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು.

Read More