Author: AIN Author

ಕೋಲಾರ :- ಮಕ್ಕಳಿಂದ ಮಲಗುಂಡಿ ಸ್ವಚ್ಚತೆ ಕೇಸ್ ಗೆ ಸಂಬಂಧಿಸಿದಂತೆ ಇದು ಬಹಳ ಕ್ರೂರ ಕೃತ್ಯವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ್ದು ಕ್ರೂರ ಕೃತ್ಯ. ಅಪ್ಪಿತಪ್ಪಿಯೂ ಇಂಥ ಕೃತ್ಯ ಸಹಿಸುವುದಿಲ್ಲ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಎರಡು ದಿನಗಳಲ್ಲಿ ಇನ್ನುಳಿದ ಇಬ್ಬರನ್ನು ಬಂಧಿಸಬೇಕು’ ಎಂದು ತಾಕೀತು ಮಾಡಿದರು. ಈ ಘಟನೆ ಇಡೀ ರಾಜ್ಯಕ್ಕೆ‌ ಒಂದು ಪಾಠ. ಯಾವುದೇ ಕಾರಣಕ್ಕೂ ಮರುಕಳಿಸಬಾರದು. ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ‘ಸ್ಮಶಾನ ಮತ್ತು ಖಬರಸ್ತಾನಕ್ಕೆ ಅಗತ್ಯ ಜಾಗ ಒದಗಿಸಬೇಕು.‌ ಸರ್ಕಾರಿ ಸ್ಥಳ ಇಲ್ಲದಿದ್ದರೆ ಖರೀದಿಸಿ ಕೊಡಬೇಕು. ದಲಿತರು ಸೇರಿದಂತೆ ಯಾವುದೇ ಸಮುದಾಯ, ಧರ್ಮದವರಿಗೆ ಶವ ಸಂಸ್ಕಾರಕ್ಕೆ ತೊಂದರೆ ಆಗಕೂಡದು’ ಎಂದರು.

Read More

ಹುಬ್ಬಳ್ಳಿ:- ಮನುಷ್ಯತ್ವವಿಲ್ಲದ ಬಿಜೆಪಿ ಹೆಣದ ಮೇಲೆ ಹಣ ಮಾಡಿದೆಯೇ? ಎಂದು ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೋವಿಡ್ ಸಂದರ್ಭದಲ್ಲಿ ₹40 ಸಾವಿರ ಕೋಟಿ ಅವ್ಯವಹಾರವಾಗಿದೆ ಎಂದಾದರೆ, ಮನುಷ್ಯತ್ವವಿಲ್ಲದ ಬಿಜೆಪಿ ಹೆಣದ ಮೇಲೆ ಹಣ ಮಾಡಿದೆಯೇ ಎಂದರು. ಯತ್ನಾಳ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಪದೇಪದೇ ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತಿದ್ದಾರೆ. ತನ್ನ ಮೇಲೆ‌ ಕ್ರಮ ಕೈಗೊಂಡರೆ ದಾಖಲೆ ಬಿಡುಗಡೆ ಮಾಡುವ ಎಚ್ಚರಿಕೆ ಸಹ ನೀಡಿದ್ದಾರೆ. ನಾಡಿನ ಜನತೆಯ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ದಾಖಲೆಗಳನ್ನು ಬಹಿರಂಗಪಡಿಸಬೇಕು. ಅಥವಾ, ತನಿಖೆ ನಡೆಸುತ್ತಿರುವ ಆಯೋಗಕ್ಕೆ ದಾಖಲೆ ನೀಡಬೇಕು’ ಎಂದು ವಿನಂತಿಸಿದರು. ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ನಾವು ಸಾರ್ವಜನಿಕ‌ ಲೆಕ್ಕ ಪರಿಶೋಧನ ಸಮಿತಿಯಲ್ಲಿ ಪ್ರಶ್ನೆ ಮಾಡುತ್ತೇವೆ ಎಂದಾಗ, ಅಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಡೆದಿದ್ದರು‌. ಸದನ ಸಮಿತಿ ವರದಿಯಲ್ಲಿ ಏನೇ ತನಿಖೆ ನಡೆದರೂ, ಅದನ್ನು ಮುಂದುವರಿಸಬಾರದು, ಕಾ‌ನೂನು ಬಾಹಿರವಾಗುತ್ತದೆ ಎಂದು ಪತ್ರ ಸಮಿತಿಗೆ ಬರೆದಿದ್ದರು. ಯಾವತ್ತಾದರೂ ಸಾರ್ವಜನಿಕ ಲೆಕ್ಕ…

Read More

ಬೆಂಗಳೂರು:- ಹೊಸವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಸಿಲಿಕಾನ್ ಸಿಟಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪಬ್‌, ಪಾರ್ಟಿ ಲಾನ್‌, ಫಾರ್ಮ್‌ಹೌಸ್‌ನಲ್ಲಿ ತಯಾರಿ ಜೋರಾಗಿದೆ. ಸುಮಾರು ₹600 ಕೋಟಿಗಳ ಆದಾಯ ಇದೊಂದೇ ರಾತ್ರಿ ಗಳಿಸುವ ನಿರೀಕ್ಷೆಯನ್ನು ಹೋಟೆಲ್ ಉದ್ಯಮ ಹೊಂದಿದೆ. ಹೊಸ ವರ್ಷಾಚರಣೆಗೆ ನಗರಕ್ಕೆ ಎನ್‌ಆರ್‌ಐ, ಅಂತಾರಾಜ್ಯದ ಜನ ಲಗ್ಗೆ ಇಡುತ್ತಿದ್ದಾರೆ. ಎಂ.ಜಿ.ರೋಡ್‌, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಟೆಕ್‌ ಕಾರಿಡಾರ್‌ಗಳು ಪಾರ್ಟಿ ಮೂಡ್‌ಗೆ ತೆರೆದುಕೊಂಡಿವೆ. ಪಬ್‌, ರೆಸ್ಟೋರೆಂಟ್‌ಗಳು ಡಿ.31ರ ಪಾರ್ಟಿ, ವಿಶೇಷ ಚಟುವಟಿಕೆಗೆ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಪೂಲ್‌ಸೈಡ್ ಪಾರ್ಟಿ, ರೈನ್ ಡ್ಯಾನ್ಸ್, ಫೈರ್‌ ಡ್ಯಾನ್ಸ್‌, ಸೆಲೆಬ್ರಿಟಿ ಡಿಜೆ, ಹಾಲಿವುಡ್‌, ಬಾಲಿವುಡ್‌, ಪಂಜಾಬಿ, ಲೋಕಲ್‌ ಮ್ಯೂಸಿಕ್, ಬೆಲ್ಲಿ ಡ್ಯಾನ್ಸ್‌ ಮನರಂಜನೆಗಳಿವೆ. ಇದಕ್ಕಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರನ್ನು ಕರೆಸಲಾಗುತ್ತಿದೆ. ಲೈವ್‌ ಫುಡ್‌ ಕೌಂಟರ್, ಅನಿಯಮಿತ ತಿನಿಸು, ಡ್ರಿಂಕ್ಸ್‌ಗಳನ್ನು ಪಾರ್ಟಿ ಆಯೋಜಕರು ಕಲ್ಪಿಸುತ್ತಿದ್ದಾರೆ. ವಿಐಪಿ, ವಿವಿಐಪಿ ಕೌಂಟರ್‌, ಸೆಲೆಬ್ರಿಟಿ ಕೌಂಟರ್‌, ಫ್ಯಾಮಿಲಿ ಕೌಂಟರ್‌ ಎಂದು ಪ್ರತ್ಯೇಕ ವ್ಯವಸ್ಥೆಗಳಿವೆ.…

Read More

ಬೀಜಿಂಗ್:‌ ಕಣ್ಣಿನ ವೈದ್ಯರೊಬ್ಬರು (Eye Doctor) ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ ಮೂರು ಬಾರಿ ಹೊಡೆದ ಘಟನೆ ಚೀನಾದಲ್ಲಿ (China) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ 2019ರಲ್ಲಿ ನಡೆದಿದ್ದು, ಇದರ ವೀಡಿಯೋ ಸಾಕಷ್ಟು ವೈರಲ್‌ (Viral Video) ಆಗಿದೆ. ಈ ಸಂಬಂಧ ಆಸ್ಪತ್ರೆಯೂ ಕೂಡ ಸ್ಪಷ್ಟನೆಯ ಹೇಳಿಕೆ ಬಿಡುಗಡೆ ಮಾಡಿತ್ತು. ಸದ್ಯ ವೈದ್ಯನನ್ನೇ ಆಸ್ಪತ್ರೆಯಿಂದ ಅಮಾನತು ಮಾಡಲಾಗಿದೆ. ನಡೆದಿದ್ದೇನು..?: 82 ವರ್ಷದ ವೃದ್ಧೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ (Eye Surgery) ಆಸ್ಪತ್ರೆಗೆ ಹೋದರು. ಈ ವೇಳೆ ವೈದ್ಯರು ವೃದ್ಧೆಗೆ ಅನಸ್ತೇಶಿಯಾ ನೀಡಿದ್ದಾರೆ. ಈ ವೇಳೆ ವೈದ್ಯರು ಭಾಷೆ ವೃದ್ಧೆಗೆ ಅರ್ಥವಾಗುತ್ತಿರಲಿಲ್ಲ. ವೃದ್ಧೆ ಸ್ಥಳೀಯ ಭಾಷೆ ಮಾತನಾಡುತ್ತಿದ್ದರಿಂದ ಆಕೆಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ತನ್ನ ಮಾತಿಗೆ ವೃದ್ಧೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸಿಟ್ಟುಗೊಂಡು ತಲೆಗೆ ಮೂರು ಬಾರಿ ಹೊಡೆದಿದ್ದಾರೆ. https://twitter.com/gani_jonathan/status/1738179708255175026?ref_src=twsrc%5Etfw%7Ctwcamp%5Etweetembed%7Ctwterm%5E1738179708255175026%7Ctwgr%5Ec747ad07cfac4deb99b0fc91c72331c09ebad4a6%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fgani_jonathan%2Fstatus%2F1738179708255175026%3Fref_src%3Dtwsrc5Etfw ಈ ಘಟನೆ ತುಂಬಾ ಹಳೆಯದ್ದಾಗಿದ್ದು, ಅಂದರೆ 2019ರಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆಯ ಸಂಪೂರ್ಣ ವೀಡಿಯೋ ಆಸ್ಪತ್ರೆಯ ಸಿಸಿಟಿವಿಯಲ್ಲಿ…

Read More

ಬೆಂಗಳೂರು:- ಅಹಿಂದ ಸಮಾವೇಶಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಚಿತ್ರದುರ್ಗದಲ್ಲಿ ನಡೆಯುವ ಅಹಿಂದ ಸಮಾವೇಶವು ಲಿಂಗಾಯತರು ಸೇರಿದಂತೆ ಯಾವುದೇ ಸಮುದಾಯಗಳ ವಿರುದ್ಧವೂ ಅಲ್ಲ’ ಎಂದರು. ಲಿಂಗಾಯತರು ಸಮಾವೇಶ ನಡೆಸಿರುವುದಕ್ಕೆ ಪ್ರತಿಯಾಗಿ ಅಹಿಂದ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳುವಂತಿಲ್ಲ. ಅವರಂತೆ ನಾವು ಕೂಡ ನಮ್ಮ ಸಮಾಜದ ಸಮಾವೇಶ ನಡೆಸುತ್ತಿದ್ದೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದರು. ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ತಿರಸ್ಕರಿಸುವಂತೆ ಲಿಂಗಾಯತ ಸಮಾವೇಶದಲ್ಲಿ ನಿರ್ಣಯ ಕೈಗೊಂಡಿರುವ ಕುರಿತು ಕೇಳಿದಾಗ, ‘ವರದಿಯನ್ನು ಇನ್ನೂ ಸರ್ಕಾರ ಸ್ವೀಕರಿಸಿಲ್ಲ. ಈಗಲೇ ತಿರಸ್ಕರಿಸುವಂತೆ ಬೇಡಿಕೆ ಇಡುವುದು ಸರಿಯಲ್ಲ’ ಎಂದು ಹೇಳಿದರು. ‘ಒಕ್ಕಲಿಗರು, ಲಿಂಗಾಯತರು ವರದಿ ಸ್ವೀಕರಿಸದಂತೆ ಬೇಡಿಕೆ ಇಡುತ್ತಿದ್ದಾರೆ. ಈ ವರದಿ ಯಾವುದೇ ಜಾತಿಗೆ ಸೀಮಿತವಾದುದಲ್ಲ. ಇಡೀ ರಾಜ್ಯದ ಜನರ ಮಾಹಿತಿ ಇದೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ. ಆದರೆ, ವರದಿ ಸ್ವೀಕರಿಸುವುದಾಗಿ ಮುಖ್ಯಮಂತ್ರಿಯವರು ಈಗಾಗಲೇ ಹೇಳಿದ್ದಾರೆ’…

Read More

ಬೆಂಗಳೂರು:- ಪಕ್ಷದ ವರಿಷ್ಠರ ವಿರುದ್ಧ ಮಾಜಿ ಸಿಎಂ ಸದಾನಂದಗೌಡ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಕ್ಷದ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಯಾರ್‍ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿ ಹೋಗಬೇಕು. ಕೇಂದ್ರದಿಂದ ತಂಡವೊಂದು ಆಗಮಿಸಿ ಈಗ ಬೇಸರಗೊಂಡಿರುವ ಮುಖಂಡರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಪಕ್ಷದಲ್ಲಿ ಸಮಾಲೋಚನೆಗೆ ಆದ್ಯತೆ ನೀಡಬೇಕಾಗಿದೆ. ಆದರೆ, ಕರ್ನಾಟಕಲ್ಲಿ ಬಿಜೆಪಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಸರ್ವಾಧಿಕಾರಿ ಮನೋಭಾವ ಬಿಜೆಪಿಯಲ್ಲಿ ಬಂದಿದೆ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಹೀಗಾಗಿ ಸರ್ವಾಧಿಕಾರಿ ಧೋರಣೆ ದೂರ ಆಗಬೇಕು ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ. ಪಕ್ಷದಲ್ಲಿ ಕೆಲವೊಂದು ತೀರ್ಮಾನಗಳು ಏಕಪಕ್ಷೀಯವಾಗಿ ನಡೆಯುತ್ತಿವೆ. ಇದು ಸರಿಯಲ್ಲ ಕ್ರಮವಲ್ಲ. ಸಮಾಲೋಚನೆ ನಡೆಸಬೇಕಾಗಿದೆ. ಪಕ್ಷದ ಕೆಲವರಿಗೆ ಚರ್ಚೆ ಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಭಾವನೆ ಬಂದಿದೆ. ಇದನ್ನು ಹೋಗಲಾಡಿಸಬೇಕಾಗಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸಿದರೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಎಂತಹ ಸನ್ನಿವೇಶಗಳನ್ನು ಎದುರಿಸಿದರು ಎಂಬುದನ್ನು ಗಮನಿಸಿದ್ದೇವೆ.…

Read More

ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆ ಬಿಸಾಡುತ್ತಲಿದ್ದರೆ, ಇನ್ನು ಮುಂದೆ ನೀವು ಹಾಗೆ ಮಾಡಬಾರದು. ಯಾಕೆಂದರೆ ಇದರ ಸಿಪ್ಪೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳೂ ಇವೆ ಮತ್ತು ಇದು ಚರ್ಮಕ್ಕೆ ತುಂಬಾ ಲಾಭಕಾರಿ. ಇದರಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ನೈಸರ್ಗಿಕವಾಗಿ ಪೋಷಣೆ ನೀಡುವುದು. ಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಹೀಗೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೋಲೇಟ್ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾಗಿದೆ. ನೈಸರ್ಗಿಕ ಬ್ಲೀಚ್‌ ಆಗಿ ಕಾರ್ಯನಿರ್ವಹಣೆ ಕಿತ್ತಳೆ ಹಣ್ಣಿನ ಸಿಪ್ಪೆಯು ನೈಸರ್ಗಿಕ ಬ್ಲೀಚ್ ಆಗಿ ಕಾರ್ಯ ನಿರ್ವಹಿಸಲಿದೆ, ಬಹುತೇಕ ವಿಟಮಿನ್‌ ಸಿ ಯುಕ್ತ ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್‌ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದು ಚರ್ಮದ ಮೇಲಿರುವ ಕಪ್ಪು ಕಲೆಗಳನ್ನು ಲೈಟನಿಂಗ್ ಮಾಡುತ್ತದೆ. ಕಿತ್ತಳೆ ಸಿಪ್ಪೆಯ ಪುಡಿಯು ಬಹಳಷ್ಟು ಉತ್ತಮ ಮೂಲವನ್ನು ಹೊಂದಿದ್ದು, ಚರ್ಮದ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಉತ್ತೇಜಿಸುತ್ತದೆ. ನಿದ್ರೆಗೆ ಸಹಾಯ ಮಾಡುತ್ತದೆ : ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಈ…

Read More

ಸೂರ್ಯೋದಯ: 06.40 AM, ಸೂರ್ಯಾಸ್ತ : 06.02 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಹೇಮಂತ ಋತು, ತಿಥಿ: ಇವತ್ತು ಪಾಡ್ಯ 06:46 AM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ಪೂರ್ಣ ಪುನರ್ವಸು ಯೋಗ: ಇವತ್ತು ಬ್ರಹ್ಮ 02:41 AM ತನಕ ನಂತರ ಇಂದ್ರ ಕರಣ: ಇವತ್ತು ಕೌಲವ 06:46 AM ತನಕ ನಂತರ ತೈತಲೆ 07:19 PM ತನಕ ನಂತರ ಗರಜ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 10.31 PM to 12.13 AM (ಮರುದಿನ) ಅಭಿಜಿತ್ ಮುಹುರ್ತ: ಬೆಳಗ್ಗೆ.11:55 ನಿಂದ ಮ.12:39 ವರೆಗೂ ಮೇಷ ರಾಶಿ: ಕಂಕಣ ಬಲದ ಸಿಹಿ ಸುದ್ದಿ ಹಂಚಿಕೊಳ್ಳುವಿರಿ, ಅಮಾನತು ಗೊಂಡಿರುವ ಉದ್ಯೋಗಿಗಳು ಮರು ನೇಮಕ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ…

Read More

ಬೆಂಗಳೂರು: ಕನ್ನಡ ಪರ ಹೋರಾಟಗಾರರ ಮೇಲಿನ ಕೇಸನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (BK Hariprasad) ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕನ್ನಡದಲ್ಲಿ ಫಲಕ (Nameboard) ಇರಬೇಕು ಎಂಬುದು ಸತ್ಯವೇ. ಕಾನೂನು ಕೈಗೆತ್ತಿಕೊಳ್ಳದೇ ಫಲಕಗಳನ್ನು ಬದಲಾಯಿಸಿ. https://ainlivenews.com/sudeep-will-release-the-teaser-of-the-movie-left-hand-cause-of-accident/ ನಿಧಾನವಾಗಿ ಎಲ್ಲವೂ ಸರಿ ಹೋಗುತ್ತದೆ. ಕನ್ನಡ ಹೋರಾಟಗಾರರ ಮೇಲೆ, ನಮ್ಮ ಮೇಲೂ ಬಹಳಷ್ಟು ಕೇಸ್‌ಗಳೂ ಬಾಕಿ ಇವೆ. ನೆಲ, ಜಲ ಭಾಷೆಯ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ನಾನೂ ಕೂಡ ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದರು.

Read More

ಬೆಂಗಳೂರು: ಹೊಸ ವರ್ಷವನ್ನು ಹರ್ಷದಿಂದ ಬರ ಮಾಡಿಕೊಳ್ಳಬೇಕು ಎಂದುಕೊಂಡವರಿಗೆ ಕೊರೋನ ಅಡ್ಡಲಾಗಿನಿಂತಿದೆ. ಈಗಾಗಲೇ ಜೆಎನ್.1 ಉಪತಳಿ ಹಾವಳಿ ಇಡುತ್ತಿದ್ದು ಆರೋಗ್ಯ ಇಲಾಖೆ ಕೂಡ ಕೊರೋನಾವನ್ನು ಕಟ್ಟಿಹಾಕಲು ಕಸರತ್ತು ನಡೆಸುತ್ತಿದೆ. ಕರ್ನಾಟಕದಲ್ಲಿ ಏಕಾಏಕಿಯಾಗಿ ಉಪತಳಿಯ ಹಾವಳಿ ಸ್ಫೋಟವಾಗಿದೆ. ಆದರೆ ಅದೃಷ್ಟ ವಶಾತ್ ಆಸ್ಪತ್ರೆಯ ದಾಖಲಾತಿಯಲ್ಲಿ ಏರಿಕೆಯಾಗದೆ, ಬಹುತೇಕ ಸೋಂಕಿತರು ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿರೋರಿಗೆ ಬಿಬಿಎಂಪಿ ಆರೋಗ್ಯ ಇಲಾಖೆ ಔಷಧದ ಕಿಟ್ ಗಳನ್ನು ಅಗತ್ಯ ಬಿದ್ದಲ್ಲಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಪ್ಯಾರಸೆಟಮಲ್,ಆಂಟಿಬಯೋಟಿಕ್, ಜಿಂಕ್ ಮಾತ್ರೆ,ಮಾಸ್ಕ್ ಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. https://ainlivenews.com/sudeep-will-release-the-teaser-of-the-movie-left-hand-cause-of-accident/ ಸೋಂಕಿತರ ಜೊತೆ ಟೆಲಿ ಕನ್ಸಲ್ಟಿಂಗ್ ಮೂಲಕ ನಿರಂತರ ಸಂಪರ್ಕವನ್ನು ಮಾಡಲಾಗುತ್ತಿದೆ. ತುರ್ತು ಔಷಧ ಅಗತ್ಯ ಬಿದ್ದರೆ ವೈದ್ಯರನ್ನು ಮನೆಗೆ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ ಈಗ ಹೊಸ ವರ್ಷದ ಆಚರಣೆಗೆ ಸದ್ಯ ಯಾವುದೇ ನಿಯಮಾವಳಿ ನೀಡಿಲ್ಲವಾದರೂ ಕೊನೆಕ್ಷಣದಲ್ಲಿ ಯಾವುದೇ ಬದಲಾವಣೆ ಆದರೂ ಆಶ್ಚರ್ಯ ಇಲ್ಲ.

Read More