Author: AIN Author

ಗದಗ: ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ಸಿಗಬೇಕು. ಆದರೆ ನಾಲ್ಕು ಗೋಡೆಗಳ ಮಧ್ಯೆ ನಡೆದ ಜಾತಿ ಜನಗಣತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಾತಿ ಜನಗಣತಿ ಸ್ವೀಕಾರಕ್ಕೆ ಪಕ್ಷಾತೀತವಾಗಿ ಲಿಂಗಾಯತ ಶಾಸಕರ ವಿರೋಧವಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ್ ಹೇಳಿದರು. ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಲಿಂಗಾಯತ ಸಮುದಾಯವನ್ನು ಗುರಿಯಾಗಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ಸಿನ ಶಾಮನೂರ ಶಿವಶಂಕರಪ್ಪ ಅವರೇ ಜಾತಿ ಜನಗಣತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅರವಿಂದ ಬೆಲ್ಲದ ಸಹಿತ ಅನೇಕ ಲಿಂಗಾಯತ ಶಾಸಕರು ನಾಲ್ಕು ಗೋಡೆಗಳ ಮಧ್ಯೆ ತಯಾರಾದ ವರದಿ ಜಾರಿಯಾಗುವುದು ಬೇಡ ಎಂದಿದ್ದಾರೆ. ಈ ಬಗ್ಗೆ ಸಚಿವ ವಿನಯ ಕುಲಕರ್ಣಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು. https://ainlivenews.com/sudeep-will-release-the-teaser-of-the-movie-left-hand-cause-of-accident/  ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪರಾಭವಗೊಂಡ ಕ್ಷೇತ್ರಗಳಲ್ಲಿ ಈಗ ಇಬ್ಬರು ಶಾಸಕರು ಕಾರ್ಯಭಾರ ನಡೆಸುತ್ತಿದ್ದಾರೆ. ಅದರಲ್ಲೂ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಸೂಪರ್ ಎಂಎಲ್‌ಎ ರೀತಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಹ ಮೊದಲಿನಂತಿಲ್ಲ. ಯಾವುದೊ ಒತ್ತಡದಲ್ಲಿ ಇರುವಂತೆ ಕಾಣುತ್ತಿದ್ದಾರೆ ಎಂದು ಅನುಮಾನ…

Read More

ಬೆಳಗಾವಿ:- ರಾಜಕೀಯ ವ್ಯವಸ್ಥೆ ತುಂಬಾ ಕೆಟ್ಟೋಗಿದೆ, ರಾಜಕಾರಣಿಗಳು ಪವಿತ್ರವಾಗಿಲ್ಲ, ಜಗತ್ತಿನಲ್ಲಿ ಲೂಟಿ ಮಾಡೋರು, ದರೋಡೆ ಮಾಡೋರು ಇದ್ದರೆ ಅದು ರಾಜಕಾರಣಿಗಳು ಎಂದು ಕಾಗವಾಡ ಕ್ಷೇತ್ರದ ಹಿರಿಯ ಶಾಸಕ ರಾಜು ಕಾಗೆ ಹೇಳಿದ್ದಾರೆ. ಮಂಗಳವಾರ ರಾತ್ರಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗುಳಖೋಡ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಶೂ ವಿತರಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳು ನಮ್ಮ ಕಮಿಷನ್‌ಗೆ ಸದ್ಯ ಈ ವಿಚಾರವನ್ನು ಮಾತನಾಡುವುದು ಬೇಡ, ಮತ್ತೆ ಇದು ರೂಪಾಂತರವಾಗುತ್ತದೆ ಎಂದರು. ಈ ಮೂಲಕ ಶಾಸಕರು ಪ್ರಸ್ತುತ ರಾಜಕಾರಣದಲ್ಲಿ ಆಗುತ್ತಿರುವ ಹಲವು ಬದಲಾವಣೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿದರು. ಇಂಥಹ ವೇದಿಕೆಯಲ್ಲಿ ನಾವು ಇದನ್ನೆಲ್ಲಾ ಮಾತನಾಡಬಾರದು ನಮ್ಮ ಮಾನವನ್ನು ನಾವೇ ತೆಗೆದುಕೊಂಡಂತಾಗುತ್ತದೆ ಎಂದರು. ಶ್ರೀಗಳೊಂದಿಗೆ ಗೌರವ ಕೊಟ್ಟು ನಮ್ಮನ್ನು ಕರೆದುಕೊಂಡು ಬರಬೇಡಿ, ನಮ್ಮನ್ನು ಹಿತ್ತಲು ಬಾಗಿಲಿನಿಂದ ಕರೆದುಕೊಂಡು ಬನ್ನಿ. ಆ ಮಟ್ಟಿಗೆ ಸದ್ಯದ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಕಿಡಿ…

Read More

ಮಳೆಗಾಲ ಶುರುವಾಗಿದೆ, ಇದರಿಂದ ಸಿಲಿಕಾನ್ ಸಿಟಿ ಮಾತ್ರವಲ್ಲದೆ ಎಲ್ಲೆಡೆ ದಿನನಿತ್ಯದ ಲೈಫ್ಸ್ಟೈಲ್ ನಲ್ಲೂ ಬದಲಾವಣೆಯಾಗುತ್ತಿದೆ. ಹಾಗೆಂದು ಮಳೆ ಬಂದ ಕೂಡಲೇ ಮೊದಲಿನಂತೆ ಮುದುಡಿಕೊಂಡು ಮನೆಯೊಳಗೆ ಯಾರೂ ಇರುವುದಿಲ್ಲ. ಬದಲಾಗಿ ಸೀಸನ್ಗೆ ಒದಗುವುದಷ್ಟೇ ನಮ್ಮ ಕೆಲಸವೆಂದು ಮಳೆಗಾಲವನ್ನೂ ಕಲರ್ಫುಲ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಏಕೆಂದರೆ ತುಂತುರು ಮಳೆಯಿಂದ ಆರಂಭವಾಗುವ ಮಳೆ ಕೆಲವೊಮ್ಮೆ ಹೊರಗಡೆ ಹೆಜ್ಜೆ ಇಡಲು ಸಾಧ್ಯವಾಗದಂತೆ ಗಂಟೆಗಟ್ಟಲೆ ಸುರಿಯುತ್ತದೆ. ಕೆಲವರಿಗೆ ಮಳೆಯೊಂದಿಗೆ ತುಂಟಾಟ ಆಡಲು ಕಷ್ಟವಾದರೂ ಬಟ್ಟೆ ಒದ್ದೆಯಾದರೆ ಕಷ್ಟವೆಂದು ಸುಮ್ಮನಾಗುತ್ತಾರೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಮಳೆಯಿಂದ ಸಂರಕ್ಷಿಸಿಕೊಳ್ಳಲು ಕೆಲವು ವಿಷಯಗಳನ್ನು ಮರೆಯದೇ ಪಾಲಿಸುವುದು ಉತ್ತಮ 1)ಮಳೆಯಲಿ ಕೊಡೆಯಿರಲಿ ಜೊತೆಯಲಿ ಮಳೆಗಾಲದಲ್ಲಿ ತುರ್ತು ಕೆಲಸಗಳಿಗೆ ಹೊರಗೆ ಹೋಗಬೇಕಾದ ಅಗತ್ಯತೆ ಇರುತ್ತದೆ. ಮಳೆ ನಿಂತಮೇಲೆ ಹೋಗುತ್ತೇನೆ ಎನ್ನುವುದು ಹೈಲಿ ಇಂಪಾಸಿಬಲ್, ಕಾಯುವ ಪೇಶೆನ್ಸ್ ಸಹ ಇರುವುದಿಲ್ಲ. ಆದ್ದರಿಂದ ಹೊರಗೆ ಹೋದಂತಹ ಸಂದರ್ಭದಲ್ಲಿ ಕೊಡೆ ನಿಮ್ಮ ಜೊತೆಗೆ ಇರಬೇಕು. ಇದಕ್ಕಾಗಿ ಮೊದಲಿನಂತೆ ಮಾರುದ್ದದ ಛತ್ರಿಗಳನ್ನು ಕೊಂಡೊಯ್ಯಬೇಕಿಲ್ಲ. ಹ್ಯಾಂಡ್ಬ್ಯಾಗ್ ಅಥವಾ ಕಾಲೇಜ್ ಬ್ಯಾಗ್ಗಳಲ್ಲೇ ಕ್ಯಾರಿ…

Read More

ಬೆಂಗಳೂರು:- ರಾಜ್ಯದ ಹಲವೆಡೆ ಜ. 1 ರಿಂದ ಮೂರು ದಿನ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದ್ದು, ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್​ ಹಾಗೂ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್​ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

Read More

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳ ನಡುವೆ, ದಂಪತಿಗಳ ಬಗ್ಗೆ ಜ್ಯೋತಿಷಿಯ ಭವಿಷ್ಯ ವೈರಲ್ ಆಗಿದೆ ಬಚ್ಚನ್ ಕುಟುಂಬ-ಅಭಿಷೇಕ್, ಐಶ್ವರ್ಯಾ ರೈ, ಮತ್ತು ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್‌ನ ಹೆಸರಾಂತ ವ್ಯಕ್ತಿಗಳು-ಅವರು ಕಡಿಮೆ ಪರಿಚಿತ ವ್ಯಕ್ತಿ ಚಂದ್ರಶೇಖರ ಸ್ವಾಮಿಯವರಿಂದ ಸಲಹೆ ಕೇಳಿದ್ದಾರೆ. ಕರ್ನಾಟಕದ ಮುಲ್ಕಿ ಎಂಬ ಸಣ್ಣ ಪಟ್ಟಣದಿಂದ ಬಂದ ಈ ಅತೀಂದ್ರಿಯ ಭಾರತದ ಗಣ್ಯರಿಂದ ಗೌರವವನ್ನು ಗಳಿಸಿದ್ದಾರೆ. ಮುಂಬೈನ ಶ್ರೀಮಂತ ‘ಜಲ್ಸಾ’ದಿಂದ ಸ್ವಾಮಿಯ ಮನೆ ಬಾಗಿಲಿಗೆ ಬಾಲಿವುಡ್‌ನ ಅಪ್ರತಿಮ ಕುಲವನ್ನು ಸೆಳೆಯುವುದು ಯಾವುದು? ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸ್ವಾಮಿ ಅವರು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿವಾಹದ ಬಗ್ಗೆ ಒಳನೋಟಗಳನ್ನು ವಿಶ್ವಾಸದಿಂದ ಪ್ರತಿಪಾದಿಸುತ್ತಾರೆ, ಜ್ಯೋತಿಷ್ಯದ ಜಟಿಲತೆಗಳನ್ನು ಪರಿಶೀಲಿಸುತ್ತಾರೆ. ಐಶ್ವರ್ಯಾಳ ಜಾತಕವು ‘ಕುಜ ದೋಷ’ ಮತ್ತು ‘ರಾಜಯೋಗ’ ಎರಡನ್ನೂ ಹೊಂದಿದೆ ಎಂದು ಅವರು ಪ್ರತಿಪಾದಿಸುತ್ತಾರೆ, ಇದು ಪ್ರತಿ 600 ವರ್ಷಗಳಿಗೊಮ್ಮೆ ಅಪರೂಪವಾಗಿ ಸಂಭವಿಸುತ್ತದೆ. ಅವರ ಅವಿನಾಭಾವ ಬಂಧವನ್ನು ಪ್ರತಿಪಾದಿಸುತ್ತಾ, ಸ್ವಾಮಿಯು ಐಶ್ವರ್ಯಾ ಅವರ…

Read More

ಬಾಲಿವುಡ್ ಅಂಗಳದಲ್ಲಿ ಸದ್ಯ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ‘ಅನಿಮಲ್’ (Animal) ಸಿನಿಮಾ 500 ಕೋಟಿ ರೂಪಾಯಿಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಅಷ್ಟೇ ಅಲ್ಲ, ಚಿತ್ರದಲ್ಲಿ ನಟಿಸಿದ ನಟಿ ತೃಪ್ತಿ ದಿಮ್ರಿ (Tripti Dimri) ಕೂಡ ಕ್ಲಿಕ್ ಆಗಿದ್ದಾರೆ. ಇದರ ನಡುವೆ ಹೊಸ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್ ಆಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ ಇದೀಗ ಕಾರ್ತಿಕ್ ಆರ್ಯನ್ (Karthik Aryan) ಮುಂದಿನ ಚಿತ್ರಕ್ಕೆ ತೃಪ್ತಿ ದಿಮ್ರಿ ನಾಯಕಿಯಾಗಿದ್ದಾರೆ. ಆಶಿಕಿ ಪಾರ್ಟ್ 1 ಮತ್ತು 2 ಸಂಚಲನ ಸೃಷ್ಟಿಸಿತ್ತು. ಈಗ ಆಶಿಕಿ-3 ಚಿತ್ರಕ್ಕೆ ಚಾಲನೆ ನೀಡಲು ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯೊಂದು ಮುಂದಾಗಿದೆ. ಕಾರ್ತಿಕ್ ಆರ್ಯನ್- ತೃಪ್ತಿ ಜೋಡಿಯಾಗಿ ನಟಿಸಲು ಫೈನಲ್ ಆಗಿದೆ. 2024ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಮೊದಲ ಬಾರಿಗೆ ಕಾರ್ತಿಕ್ ಜೊತೆ ತೃಪ್ತಿ ನಟಿಸುತ್ತಿರೋ ಕಾರಣ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇಬ್ಬರ ಜೋಡಿ ಪ್ರೇಕ್ಷಕರಿಗೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಎಂದು ಕಾತರದಿಂದ ಫ್ಯಾನ್ಸ್ ಎದುರು ನೋಡ್ತಿದ್ದಾರೆ.…

Read More

ವಿಜಯಪುರ: “ವೀರಶೈವ ಲಿಂಗಾಯತ” ಎಂಬುದು ಹಿಂದೂ ಸಂಸ್ಕೃತಿಯ ಭಾಗವಾಗಿದ್ದು ಅಲ್ಲಿಯೂ ಶಿವನೇ ಇಲ್ಲಿಯೂ ಶಿವನೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಲವಾಗಿ ಪ್ರತಿಪಾದಿಸಿದ್ದಾರೆ. ಲಿಂಗಾಯತರು ಹಿಂದೂಗಳಲ್ಲ ಎಂಬ ಕೆಲವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಧರ್ಮದ ಚರ್ಚೆ ಆರಂಭಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯನವರು 2018ರಲ್ಲಿ ಸೃಷ್ಟಿಸಿದ್ದ ಗೊಂದಲದ ಮುಂದುವರಿದ ಭಾಗ ಎಂದು ಆರೋಪಿಸಿದ್ದಾರೆ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡುವ ವಿಚಾರ ಅಖಿಲ ಭಾರತ ವೀರಶೈವ ಮಹಾಸಭಾದ 24 ನೇ ಮಹಾಧಿವೇಶನದಲ್ಲಾದ ನಿರ್ಣಯ, ಇದರೊಂದಿಗೆ ಲಿಂಗಾಯತರು ಹಿಂದೂಗಳಲ್ಲಾ ಎಂಬ ಕೆಲ ನಾಯಕರ ಹೇಳಿಕೆಗಳ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಯತ್ನಾಳ್ ಅವರು ಈ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿರುವ ಅವರು ಪ್ರತ್ಯೇಕ ಧರ್ಮ ವಿಚಾರವನ್ನು ಮತ್ತೆ ಎತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಹಿಂದುತ್ವ ಈ ನೆಲದ ಆತ್ಮವಾಗಿದ್ದು ಬಸವಣ್ಣನವರು ಆರಾಧಿಸಿದ ಲಿಂಗವೂ…

Read More

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Ram Lalla Pran Pratishtha) ಅಯೋಧ್ಯೆ ನಗರ ಸಿಂಗಾರಗೊಳ್ಳಲು ಶುರುವಾಗಿದೆ. ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರ ಆಗಮನ ಫಿಕ್ಸ್‌ ಆಗಿದ್ದು, ಈಗಾಗಲೇ ಅಮಂತ್ರಣ ಪತ್ರಿಕೆ ಹಂಚಿಕೆ ಕಾರ್ಯ ಶುರುವಾಗಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಯಾರನ್ನೆಲ್ಲ ಆಹ್ವಾನಿಸಿದ್ದಾರೆ. ಯಾವ ಕ್ಷೇತ್ರದ ಗಣ್ಯರಿಗೆ ಆಹ್ವಾನ ಪತ್ರಿಕೆ ಹಂಚಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಧಾರ್ಮಿಕ ಮುಖಂಡರು: ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ 4000 ಸಂತರಿಗೆ ಆಹ್ವಾನಿಸಲಾಗಿದ್ದು, ಭಾರತದ ಎಲ್ಲಾ ಸಂಪ್ರದಾಯಗಳ ಸಂತರನ್ನು ಆಹ್ವಾನಿಸಲಾಗಿದೆ. ಅಂಡಮಾನ್ ನಿಕೋಬಾರ್ ಕರಾವಳಿಯಲ್ಲಿ ವಾಸಿಸುವ ಧಾರ್ಮಿಕ ಮುಖಂಡರು, ಜಾರ್ಖಂಡ್‌ನ ಬನವಾಸಿ ಪ್ರದೇಶದ ಧಾರ್ಮಿಕ ಮುಖಂಡರು ಮತ್ತು 125 ಸಂತ ಸಂಪ್ರದಾಯಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. ಸನ್ಯಾಸಿ ಮತ್ತು ಬೈರಾಗಿಗಳ 13 ಅಖಾಡಗಳ 6 ದರ್ಶನಾಚಾರ್ಯರು, ಸ್ವಾಮಿ ವಾಸುದೇವಾನಂದ ಸರಸ್ವತಿ ಜ್ಯೋತಿರ್ಮಠದ ಶಂಕರಾಚಾರ್ಯ, ಗೋವರ್ಧನ ಪೀಠದ ಶಂಕರಾಚಾರ್ಯ, ಶಾರದಾ ಪೀಠದ ಶಂಕರಾಚಾರ್ಯ, ಶೃಂಗೇರಿ ಪೀಠದ…

Read More

ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ (Devara) ಸಿನಿಮಾ ಟೀಮ್ ನಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಮುಂದಿನ ವರ್ಷ ಏಪ್ರಿಲ್ 5ಕ್ಕೆ ರಿಲೀಸ್ ಆಗುವ ಈ ಸಿನಿಮಾವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಜ್ಯೂನಿಯರ್ ಅವರೇ ಡಬ್ ಮಾಡುವ ಸಾಧ್ಯತೆ ಇದೆ. ಆರ್ ಆರ್ ಆರ್ ಚಿತ್ರದ ನಂತರ ಎನ್ಟಿಆರ್ (Jr NTR) ಅವರು ಕೊರಟಾಲ ಶಿವ (Koratala Shiva) ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂನಿಯ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು,  ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ…

Read More

ಬೆಂಗಳೂರು:- ತೆರಿಗೆ ಪಾವತಿಸದ ನಗರದ ಪ್ರತಿಷ್ಠಿತ ‘ಮಂತ್ರಿ ಮಾಲ್’ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಮೂಲಕ ತೆರಿಗೆ ಪಾವತಿಸದ ಬಾಕಿದಾರರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮವನ್ನು ಮುಂದುವರಿಸಿದೆ. ಮಾಲ್ ಒಳಗಿದ್ದ ಸುಮಾರು 200 ಅಂಗಡಿಗಳನ್ನು ಸಹ ಬಂದ್ ಮಾಡಲಾಗಿದೆ. ಸುಮಾರು ತಿಂಗಳುಗಳಿಂದ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡಿರಲಿಲ್ಲ. ಒಟ್ಟು ಸುಮಾರು 51 ಕೋಟಿ ತೆರಿಗೆ ಹಣವನ್ನು ಮಂತ್ರಿ ಮಾಲ್ ನಿಂದ ಬಿಬಿಎಂಪಿಗೆ ತೆರಿಗೆ ಪಾವತಿ ಆಗಿರಲಿಲ್ಲ. ಈ ನಿಮಿತ್ತ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್‌ಗೆ ಹಲವು ಭಾರಿ ನೋಟಿಸ್ ನೀಡಿದ್ದರು. ಇದರೊಂದಿಗೆ ಮಂತ್ರಿ ಒಳಗಿನ ಎಲ್ಲ ಮಳಿಗೆಗಳಿಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ ಆಗಿತ್ತು. ಆದರೆ ಈ ಮಳಿಗೆಗಳಾಗಲಿ, ಇಲ್ಲವೇ ಮಂತ್ರಿ ಮಾಲ್ ಮಾಲೀಕರಾಗಿ ನೋಟಿಸ್‌ಗೆ ಉತ್ತರ ಕೊಡದೇ ನಿರ್ಲಕ್ಷಿಸಿದ್ದರು. ಅಲ್ಲದೇ ತೆರಿಗೆಯನ್ನು ಕಾಲ ಕಾಲಕ್ಕೆ ಕಟ್ಟಿರಲಿಲ್ಲ. ಬಿಬಿಎಂಪಿ: ವಾಣಿಜ್ಯ ಮಳಿಗೆಗಳಲ್ಲಿ ಶೇ.60 ಕನ್ನಡ ಕಡ್ಡಾಯಗೊಳಿಸಲು ಶಿಸ್ತು ಕ್ರಮ, ಗಡುವು ಸಾರ್ವಜನಿಕರನ್ನು ಹೊರಕ್ಕೆ ಕಳಿಸಿ ಮಾಲ್ ಸೀಜ್ ಹೀಗಾಗಿ ಬುಧವಾರ…

Read More