Author: AIN Author

ಬಿಗ್ ಬಾಸ್ ಮನೆಯ (Bigg BossKannada 10) ಆಟ ಫಿನಾಲೆಗೆ ಸಮೀಪಿಸುತ್ತಿದೆ. ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಇದೀಗ ಮನೆಗೆ ನಮ್ರತಾ (Namratha Gowda) ತಾಯಿಯ ಆಗಮನವಾಗಿದೆ. ಮಗಳಿಗೂ ಮನೆಮಂದಿಗೂ ತಮ್ಮ ಮನೆಯ ಅಡುಗೆ ಊಟ ಬಡಿಸಿ ಸಂಭ್ರಮಿಸಿದ್ದಾರೆ. ಇದರ ನುಡವೆ ಮತ್ತೆ ಮನೆಯಲ್ಲಿ ಸ್ನೇಹಿತ್ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. ಬಿಗ್ ಬಾಸ್’ (Bigg Boss Kannada) ಪಾಸ್ & ಪ್ಲೇ ಎಂದು ಟಾಸ್ಕ್ ನೀಡಿದರು. ಇದನ್ನು ನೀವೆಲ್ಲರೂ ಶಿಸ್ತಿನಿಂದ ಪಾಲಿಸಬೇಕು ಅಂತ ಸ್ಪರ್ಧಿಗಳಿಗೆ ಬಿಗ್ ಬಾಸ್ ಎಚ್ಚರಿಕೆ ಕೂಡ ನೀಡಿದ್ದರು. ಅದರಂತೆ ಒಂದಷ್ಟು ಸಮಯ ಪಾಸ್, ಪ್ಲೇ ಅಂತ `ಬಿಗ್ ಬಾಸ್’ ಹೇಳಿ ಸ್ಪರ್ಧಿಗಳಿಗೆ ಸರಿಯಾಗಿ ಆಟ ಆಡಿಸಿದರು. ಈ ಟಾಸ್ಕ್ ನಿಜಕ್ಕೂ ಮನರಂಜನಾದಾಯಕವಾಗಿತ್ತು ಬಿಗ್ ಬಾಸ್‌ನಲ್ಲಿದ್ದಾಗಲೇ ನಮ್ರತಾ ಹಿಂದೆ ಬಿದ್ದಿದ್ದರೂ ಸ್ನೇಹಿತ್. ಹಲವು ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ, ಸ್ನೇಹಿತ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಸ್ನೇಹಿತ್ (Snehith Gowda) ಎಲಿಮಿನೇಷನ್ ನಂತರ ಮಿಸ್ಸಿಂಗ್…

Read More

ಪ್ಯಾರಾಸೈಟ್ ಸಿನಿಮಾದ ಮೂಲಕ ಸಾಕಷ್ಟು ಫೇಮಸ್ ಆಗಿದ್ದ ಹಾಲಿವುಡ್ ನಟ ಲೀ ಸನ್ ಕ್ಯುನ್ (Lee Sun-kyun) ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕೊರಿಯಾದ (South Korea) ಸೆಂಟ್ರಿಲ್ ಸಿಯೋಲ್ ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನಲ್ಲೇ ನಟನ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿತ್ತು. ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಪತ್ತೆ ಮಾಡಿ, ಅದು ಲೀ ಸನ್ ಕ್ಯೂನ್ ಎಂದು ದೃಢಪಡಿಸಿದ್ದಾರೆ. ಲೀ ಸನ್ ಕ್ಯೂನ್ ಆತ್ಮಹತ್ಯೆ (suicide)ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ಮಾಡಲಾಗಿತ್ತು. ವಿಚಾರಣೆಗೆ ಒಳಗಾದ ಮರುದಿನವೇ ಅವರು ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 48ರ ವಯಸ್ಸಿನ ನಟನ ಸುದ್ದಿಯು ದಕ್ಷಿಣ ಕೊರಿಯಾಗೆ ಆಘಾತವನ್ನೇ ಮೂಡಿಸಿದೆ. ಅಲ್ಲದೇ ಮನೆಯಲ್ಲಿ ಆತ್ಮಹತ್ಯೆಯ ಪತ್ರವನ್ನು ಬರೆದಿಟ್ಟು, ತಮ್ಮ ಪತಿ ಹೋಗಿರುವುದಾಗಿ ಲೀ ಸನ್ ಕ್ಯೂನ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಾಗುತ್ತಿದೆ. ಕಾರಿನಲ್ಲಿ ಶವದ ಜೊತೆ…

Read More

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ನಾಯಕ ಅನುಪಮ್ ಹಜ್ರಾ (Anupam Hazra) ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಕಿತ್ತೆಸೆಯಲಾಗಿದೆ. ಲೋಕಸಭೆಯ (Loksabha) ಮಾಜಿ ಸಂಸದ ಹಜ್ರಾ ಅವರು ರಾಜ್ಯದಲ್ಲಿ ಪಕ್ಷದ ಕಾರ್ಯಚಟುವಟಿಕೆಯನ್ನು ಕೆಲವು ಸಮಯದಿಂದ ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಹಜ್ರಾ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದಾರೆ. https://ainlivenews.com/sabarimala-ayyappa-swami-temple-earned-204-crore-rupees-in-39-days/ ಗೃಹ ಸಚಿವ ಅಮಿತ್ ಶಾ (AmitShah) ಮತ್ತು ಜೆ.ಪಿ ನಡ್ಡಾ (JP Nadda) ಅವರು ರಾಜಕೀಯ ಕಾರ್ಯಕ್ರಮಗಳಿಗಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಸಂದರ್ಭದಲ್ಲಿ ಚರ್ಚಿಸಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಹಜ್ರಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ಪಕ್ಷದೊಳಗಿನ ಭಿನ್ನಮತೀಯರಿಗೆ ಶಿಸ್ತು ಪಾಲಿಸುವಂತೆ ಹಾಗೂ ನಾಯಕತ್ವವನ್ನು ನಿಷ್ಠೆಯಿಂದ ಅನುಸರಿಸುವಂತೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.  

Read More

ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan)  ಮದುವೆ ಜನವರಿ 3ರಂದು ಅದ್ಧೂರಿಯಾಗಿ ನಡೆಯಲಿದ್ದು, ಅದಕ್ಕೂ ಮುನ್ನ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಈ ಕುರಿತಂತೆ ಸ್ವತಃ ಇರಾ ಖಾನ್ ಅವರೇ ಕೆಲ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಅಕ್ಟೋಬರ್ 3ರಂದು ಇರಾ ಮತ್ತು ನೂಪುರ್ ಶಿಖಾರೆ ರಿಜಿಸ್ಟರ್ ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೆ ಮನೆಯವರು ಅವಕಾಶ ಕೊಡದೇ ಸಾಂಪ್ರದಾಯಿಕವಾಗಿ ನೂಪುರ್ ಮನೆಯಲ್ಲಿ ಮದುವೆ ನಡೆಯಲಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಹೊಸ ಬದುಕಿಗೆ ಕಾಲಿಡಲಿದ್ದಾರೆ ಎಂದು ಸ್ವತಃ ಆಮೀರ್ ಖಾನ್ ಹೇಳಿಕೊಂಡಿದ್ದರು. ಅದರಂತೆ ಜನವರಿ 3ಕ್ಕೆ ಮದುವೆ ಫಿಕ್ಸ್ ಆಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ ನಿಶ್ಚಿತಾರ್ಥ (Engaged) ಮಾಡಿಕೊಂಡು, ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ ಮೂಲಕ ಎಂಗೇಜ್ಡ್ ಆಗಿರುವುದಾಗಿ ಅವರು ಘೋಷಣೆ ಮಾಡಿತ್ತು ಈ ಜೋಡಿ. ಇದೀಗ ಇರಾ ಹೊಸ ಜೀವನಕ್ಕೆ ಕಾಲಿಡಲು…

Read More

ಬೆಂಗಳೂರು ಗ್ರಾಮಾಂತರ:  ಮೇಲಿನಾಜೂಗಾನಹಳ್ಳಿ(ಘಾಟಿ) ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಇಂದು ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸಲಾಯಿತು. ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಅವುಗಳಿಗೆ ಪರಿಹಾರ ಕೊಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಕಲ್ಪಿಸಲು ಬೇಡಿಕೆ ನೀಡಿದ್ದು ಅದಕ್ಕೆ ಸ್ಪಂದಿಸುತ್ತೇನೆ ಎಂದರು. ತೂಬಗೆರೆ ಪಂಚಾಯತಿಯಲ್ಲಿ ರಸ್ತೆಗಳ ನಿರ್ಮಾಣ ,ನೀರಿನ ಸಮಸ್ಯೆಗಳು, ಆಸ್ಪತ್ರೆಯ ಸಮಸ್ಯಗಳ ಬಗ್ಗೆ ಮಾನ್ಯ ಸಚಿವರಿಗೆ ನಾಗರಿಕರು ಮನವಿಗಳನ್ನು ನೀಡಿದ್ದು ಅವುಗಳನ್ನು ಅತಿ ಬೇಗನೆ ಈಡೇರಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಮುಖ್ಯಕಾರ್ಯನಿರ್ವಹಣಾಧಿಕಾರಿ.ಡಾ.ಅನುರಾಧ, ಅಪರ ಮುಖ್ಯ ಜಿಲ್ಲಾಧಿಕಾರಿ ಅಂಬರೀಶ್, ತಹಶಿಲ್ದಾರ್ ವಿಭಾ ರಾಥೋಡ್, ಘಾಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋಪಾಲ್ ನಾಯಕ್, ರಂಗಪ್ಪ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅಧಿಕಾರಿಗಳು…

Read More

ಬೆಂಗಳೂರು: ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಕಾಂಗ್ರೆಸ್ ಪಕ್ಷ ಮಾತ್ರ. ಅದಕ್ಕೆ ರಾಹುಲ್ ಗಾಂಧಿ (Rahul Gandhi) ಅವರು ಈ ದೇಶದ ಪ್ರಧಾನ ಮಂತ್ರಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗರದಲ್ಲಿ ನಡೆದ ಕಾಂಗ್ರೆಸ್ (Congress) ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವ ಶಕ್ತಿ ಇದೆ. ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಕಾಂಗ್ರೆಸ್ ಪಕ್ಷ ಮಾತ್ರವಾಗಿದ್ದು, ರಾಹುಲ್ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿ ಆಗಬೇಕು ಎಂದರು. ಯಾರು ಕೂಡ ಈ ದೇಶದಲ್ಲಿ ಭಾರತ್ ಜೋಡೋ (Bharat Jodo) ಮಾಡಿರಲಿಲ್ಲ. ಈಗ ಭಾರತ್ ಜೋಡೋ.2 ಪ್ರಾರಂಭ ಮಾಡ್ತಿದ್ದಾರೆ. ಭಾರತ ನ್ಯಾಯ ಯಾತ್ರೆ ಮಾಡ್ತಿದ್ದಾರೆ. ಯಾಕಂದ್ರೆ ಈ ದೇಶದಲ್ಲಿ ಯಾರಿಗೂ ನ್ಯಾಯ ಸಿಕ್ಕಿಲ್ಲ. ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಸಿಗಬೇಕು ಅಂತ ಪಾದಯಾತ್ರೆ ಮಾಡ್ತಿದ್ದಾರೆ. ಇಂತವರ ಕೈಗೆ ಅಧಿಕಾರ ಸಿಗಬೇಕೋ ನರೇಂದ್ರ…

Read More

ಬೆಂಗಳೂರು: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಬಂಧನಕ್ಕೊಳಗಾಗಿರುವ ಕನ್ನಡ ಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ. ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎನ್ನುವ ಕಾನೂನಿದೆ. ಅಂಗಡಿ ಪರವಾನಗಿ ಕೊಡಬೇಕಾದರೇ ಸರ್ಕಾರ ಇದನ್ನು ಪಾಲಿಸಬೇಕು. ಆದರೆ ‌ಇಲ್ಲಿಯವರೆಗೆ ಯಾವುದೇ ಹೋಟೆಲ್, ಮಾಲ್ ಹಾಗೂ ಐಟಿಬಿಟಿ ಕಂಪನಿಗಳು ಪಾಲನೆ ಮಾಡ್ತಿಲ್ಲ.ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನ ಆಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ ಕಾರ್ಯಕರ್ತರು ಕನ್ನಡ ನಾಮಫಲಕಗಳನ್ನು ಬಳಸದ ಟೋಲ್​ ಗಳು, ಮಾಲ್​ ಅಂಗಡಿ ಮುಂಗಟ್ಟುಗಳ ನಾಮಫಲಕ ಮತ್ತು ಬ್ಯಾನರ್​ಗಳ ತೆರವುಗೊಳಿಸಲು ಮುಂದಾಗಿದ್ದರು, ಈ ಘಟನೆಯಲ್ಲಿ ರಾಜ್ಯಾಧ್ಯಕ್ಷ ನಾರಾಯಣ ಗೌಡ ಮತ್ತು 29 ಕಾರ್ಯಕರ್ತರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ.

Read More

ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆ ಇದ್ದು, ರಾಜ್ಯಾದ್ಯಂತ ಒಣ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ತಾಪಮಾನ ಇಳಿಕೆ ಆಗಲಿದೆ. ಇದರಿಂದಾಗಿ ಚಳಿಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ವಿಜಯನಗರದಲ್ಲೂ ಶುಷ್ಕ ವಾತಾವರಣ ಇರಲಿದೆ. ಕರಾವಳಿ‌ಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಒಣಹವೆ ಮೇಲುಗೈ ಸಾಧಿಸಲಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಅಲ್ಲಲ್ಲಿ ದಟ್ಟ ಮಂಜು ಇರಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ…

Read More

ಶಿವಮೊಗ್ಗ: ದೇವರ ಹಾಗೂ ತಂದೆತಾಯಿಗಳ ಆಶೀರ್ವಾದದಿಂದ ನಾನು ಆರಾಮಾಗಿದ್ದೇನೆ ಎಂದು ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ‌ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಕಾರಿನ ಚಾಲಕ ಸೇರಿದಂತೆ ಎಲ್ಲಾ ಕ್ಷೇಮವಾಗಿದ್ದು,ಯಾರೂ ಸಹ ಆತಂಕ‌, https://ainlivenews.com/sabarimala-ayyappa-swami-temple-earned-204-crore-rupees-in-39-days/ ಗಾಬರಿಯಾಗುವ ಅವಶ್ಯಕತೆಯಿಲ್ಲ. ನನಗಾಗಿ ಹಾರೈಸಿದ ಶುಭಕೋರಿದ ಪ್ರಾರ್ಥಿಸಿದ ನನ್ನೆಲ್ಲ ಮತಬಾಂಧ ವರಿಗೂ ಹಿತೈಷಿಗಳಿಗೂ ಜಿಲ್ಲಾ ಹಾಗೂ ಮತಕ್ಷೇತ್ರದ ಜನತೆಗೂ,ಅಭಿಮಾನಿಗಳಿಗೂ,ಪಕ್ಷದ ಎಲ್ಲಾ ಕಾರ್ಯಕರ್ತ ಮುಖಂಡರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ಸಚಿವರು ಸ್ಪಷ್ಟಪಡಿಸಿದ್ದಾರೆ.

Read More

ನವದೆಹಲಿ: ಅಗ್ನಿಪಥ್ (Agnipath Scheme) ನೇಮಕಾತಿ ಯೋಜನೆಯನ್ನು ಪರಿಚಯಿಸುವ ಮೂಲಕ ಕೇಂದ್ರ ಸರ್ಕಾರವು ಅಸಂಖ್ಯಾತ ಯುವಕರ ಕನಸುಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಯುವಕರ ಗುಂಪಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಯುವಕರು ಬಿಹಾರದ ಚಂಪಾರಣ್‌ನಿಂದ ಬಂದವರು ಎಂದು ಹೇಳಿದ್ದಾರೆ. ನಿರುದ್ಯೋಗದ ಸಮಸ್ಯೆಯನ್ನು ‘ಬೀದಿಗಳಿಂದ ಸಂಸತ್ತಿನವರೆಗೆ’ ಎತ್ತುವವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. https://ainlivenews.com/sabarimala-ayyappa-swami-temple-earned-204-crore-rupees-in-39-days/ ತಾತ್ಕಾಲಿಕ ನೇಮಕಾತಿಗೆ ಅಗ್ನಿವೀರ್ ಯೋಜನೆ ಜಾರಿಗೊಳಿಸಿ, ಸೇನೆ ಮತ್ತು ಭಾರತೀಯ ವಾಯುಪಡೆಯ ಶಾಶ್ವತ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ಅಸಂಖ್ಯಾತ ಯುವಕರ ಕನಸನ್ನು ನುಚ್ಚುನೂರು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ‘ಸತ್ಯಾಗ್ರಹದ ನಾಡು’ ಚಂಪಾರಣ್‌ನಿಂದ ದೆಹಲಿಗೆ ಬರಲು 1,100 ಕಿಲೋಮೀಟರ್‌ಗಳಷ್ಟು ಪಾದಯಾತ್ರೆ ಮಾಡಿರುವ ಯುವಕರ ಹೋರಾಟವನ್ನು ಮಾಧ್ಯಮಗಳು ಪ್ರಸಾರ ಮಾಡದಿರುವುದು ಬೇಸರದ ಸಂಗತಿಯಾಗಿದೆ. ಉದ್ಯೋಗದ ಸಮಸ್ಯೆಯನ್ನು ಬೀದಿಗಳಿಂದ ಸಂಸತ್ತಿನ ವರೆಗೆ ಪ್ರಶ್ನಿಸುವ ಯುವಕರೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.  

Read More