Author: AIN Author

ಬೆಂಗಳೂರು:- ಕನ್ನಡಪರ ಹೋರಾಟಗಾರರಿಗೆ ಎಲ್ಲರ ಸಹಕಾರ ಅಗತ್ಯ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇಂಗ್ಲಿಷ್ ನಾಮಫಲಕಗಳ ವಿರುದ್ಧ ಹೋರಾಟ ಮಾಡಿದ ಕರವೇ ನಾರಾಯಣಗೌರನ್ನ ಅರೆಸ್ಟ್ ಮಾಡಿರುವ ವಿಚಾರವಾಗಿ ಮಾತನಾಡಿ, ಕನ್ನಡದ ನಾಮಫಲಕವೂ ಇರಬೇಕು, ಹೋರಾಟಗಾರರನ್ನು ಬಂಧಿಸಿರೋದು ಕಾನೂನು ವಿಚಾರಕ್ಕೆ ಸಂಬಂಧಿಸಿದ್ದು, ಅದರ ಬಗ್ಗೆ ಗೊತ್ತಿಲ್ಲ ನನಗೆ. ಆದರೆ ನಾಮಫಲಕಗಳೂ ಕನ್ನಡದಲ್ಲೂ ಇರಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

Read More

ಬೆಂಗಳೂರು:- ಕೋವಿಡ್‌ನಲ್ಲಿ 40 ಸಾವಿರ ಕೋಟಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ MP ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಯತ್ನಾಳ್ ಒಬ್ಬ ಕಾಮಿಡಿ ಪೀಸ್. ಅವರಿಗೆ ನಾಲಿಗೆಗೂ ಮೆದುಳಿಗೂ ಲಿಂಕೇ ಇಲ್ಲ. ಮೊದಲ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕು. ಯತ್ನಾಳ್ ಒಬ್ಬ ಹುಚ್ಚು ನಾಯಿ, ನನ್ನನ್ನು ಅವರಿಗೆ ಹೋಲಿಕೆ ಮಾಡಬೇಡಿ. ಬಸನಗೌಡ ಪಾಟೀಲ್ ಯತ್ನಾಳ್ ಗೆ ನಾನು ಸವಾಲು ಹಾಕ್ತೀನಿ. ಕಾಂಗ್ರೆಸ್ ಏಜೆಂಟ್ ರು ತರ ನೀವು ವರ್ತನೆ ಮಾಡ್ತಿದ್ಸೀರಿ. ಯಡಿಯೂರಪ್ಪ ವಿರುದ್ಧವಾಗಿ ಮಾತಾಡಿದ್ರೆ, ಸಿದ್ದರಾಮಯ್ಯ ಸರ್ಕಾರದಿಂದ ಹೆಚ್ಚು ಕೆಲಸ ಮಾಡಿಸಿಕೊಳ್ಳಬಹುದು. ವಿಜಯಪುರದ ಒಬ್ಬ ಪ್ರಭಾವಿ ಸಚಿವರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡು ಗೆದ್ದಿದ್ದೀರಿ. ಕೊವೀಡ್ ಬಗ್ಗೆ ಸದನದಲ್ಲಿ ವಿಸ್ತೃತವಾಗಿ ಚರ್ಚೆ ಆಗಿದೆ. 40 ಸಾವಿರ ಕೋಟಿ ಹಗರಣ ಅಂತೀರಲ್ಲ, ದಾಖಲೆ ಸಮೇತ ಬನ್ನಿ ಚರ್ಚೆ ಮಾಡೋಣ. ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸ್ ಮಾಡ್ಜೊಂಡು ಈ ರೀತಿ ಆರೋಪ ಮಾಡ್ತಿದ್ದೀರಿ. ಉ ಕ ಭಾಗದ ಜನರು ಯಡಿಯೂರಪ್ಪರ ಬಗ್ಗೆ…

Read More

ಅಯೋಧ್ಯೆ:- ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ಆಯೋಧ್ಯೆಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ನಿತಿನ್ ಅಗರ್ವಾಲ್, ಇದು ಮುಖ್ಯಮಂತ್ರಿ ಆದೇಶವಾಗಿದ್ದು, ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದಿದ್ದಾರೆ. 500 ವರ್ಷಗಳ ಸತತ ಹೋರಾಟದ ಬಳಿಕ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಆಯೋಧ್ಯೆ ರಾಮನಗರಿ ಎಂದೇ ಜನಪ್ರಿಯವಾಗಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಆಯೋಧ್ಯೆಯಲ್ಲಿ ಮದ್ಯ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆಯೋಧ್ಯೆ ಮಾತ್ರವಲ್ಲ, ರಾಮ ಮಂದಿರಕ್ಕೆ ತೆರಳು ಮಾರ್ಗ 84 ಕೋಸಿ ಪರಿಕ್ರಮ ಮಾರ್ಗ್‌ದಲ್ಲಿರುವ ಮದ್ಯದ ಅಂಗಡಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನೂ ಬೇರೆಡೆಗೆ ಸ್ಥಳಾಂತರಿಸಲಾಗಿದೆ. 150 ರಿಂದ 175 ಕಿಲೋಮೀಟರ್ ದೂರದ ಈ ಕೋಸಿ ಪರಿಕ್ರಮ ಮಾರ್ಗ್‌ನಲ್ಲಿರುವ ಎಲ್ಲಾ ಮದ್ಯದ ಅಂಗಡಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರಣದಿಂದ ಯಾವುದೇ ರೀತಿಯಲ್ಲಿ ಚ್ಯುತಿ ಬರದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ. ರಾಮಾಯಾಣ ಭವ್ಯ ಪರಂಪರೆ, ಗತವೈಭವ…

Read More

ಬೆಂಗಳೂರು:- ಕನ್ನಡದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು DCM ಡಿಕೆಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾವೆಲ್ಲರೂ ಸೇರಿ ಕನ್ನಡವನ್ನು ಉಳಿಸಬೇಕು. ಕನ್ನಡಪರ ಹೋರಾಟಗಾರರ ಮೇಲೆ ನಮಗೆ ಗೌರವವಿದೆ. ಹಾಗಂತ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು. ಕನ್ನಡ ನಾಮಫಲಕ ಕುರಿತ ಹೋರಾಟದ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. “ಕನ್ನಡ ಉಳಿಸಿ, ಬೆಳೆಸುವ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ. ಹೋರಾಟದ ಹೆಸರಿನಲ್ಲಿ ಆಸ್ತಿಪಾಸ್ತಿ ಹಾನಿ ಮಾಡುವುದನ್ನು ನಾವು ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ. ಇದರಿಂದ ಕರ್ನಾಟಕದ ಗೌರವ, ಘನತೆಗೆ ಧಕ್ಕೆಯಾಗುತ್ತದೆ. ಕಾನೂನು ಪಾಲನೆ ಎಲ್ಲರ ಕರ್ತವ್ಯ. ನೀವು ಹೋರಾಟ ಮಾಡುವುದಾದರೆ ಮಾಡಿ, 60% ನಾಮಫಲಕ ಹಾಕಬೇಕು ಎನ್ನುವುದನ್ನು ಕೇಳಲು ಒಂದು ಇತಿಮಿತಿ ಇದೆ ಎಂದು ಡಿ.ಕೆ ಶಿವಕುಮಾರ್‌ ಹೇಳಿದರು. ʻʻಈ ಹಿಂದೆ ಯಾರೋ ಒಬ್ಬರು ದೂರು ನೀಡಿದರು ಎಂದು ನಾರಾಯಣಗೌಡರ ಮೇಲೆ ಕೇಸ್ ದಾಖಲಾದಾಗ, ಅವರ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಪೊಲೀಸ್…

Read More

ಬೆಂಗಳೂರು:- ನಿನ್ನೆ ತನಕ ಸ್ಪರ್ಧೆ ಮಾಡಲ್ಲ ಎಂದಿದ್ದ ಸದಾನಂದಗೌಡ ಈಗ ಯೂಟರ್ನ್ ಹೊಡೆದಿದ್ದಾರೆ. ಉತ್ತರ ಕ್ಷೇತ್ರದಿಂದ ಮತ್ತೆ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ನಿನ್ನೆ ನಮ್ಮ ಹಿರಿಯ ನಾಯಕರು ಮನೆಗೆ ಬಂದು ಸ್ಪರ್ಧೆ ಮಾಡುವಂತೆ ಮನವಿ ಮಾಡಿದರು. ಎಲ್ಲಾ ಶಾಸಕರು, ಮಾಜಿ ಮಂತ್ರಿಗಳು, ಕಾರ್ಯಕರ್ತರು ಕೂಡ ಹೇಳುತ್ತಿದ್ದಾರೆ. ಎಸ್ ಟಿ ಸೋಮಶೇಖರ್, ಮುನಿರಾಜು, ಭೈರತಿ ಬಸವರಾಜು ಕೂಡ ಈ ಬಾರಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ ಎಂದಿದ್ದಾರೆ. ಅವರೆಲ್ಲರೂ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಬೆಂಗಳೂರು ಉತ್ತರದಲ್ಲಿ ಎಂಟು ಕ್ಷೇತ್ರದಲ್ಲೂ ನನ್ನ ಶತ್ರುಗಳಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬುದೇ ನನ್ನ ಆಸೆ. ಆದರೆ ನೀವೇ ಸ್ಪರ್ಧೆ ಮಾಡಿ ಎಂದು ಹಿಂಸೆ ಮಾಡುತ್ತಿದ್ದಾರೆ. ಮತ್ತೆ ಸ್ಪರ್ಧೆ ಮಾಡುವ ಬಗ್ಗೆ ಮನಸ್ಸು ಬದಲಿಸಿಕೊಳ್ಳುವ ಬಗ್ಗೆ ಯೋಚನೆ ಮಾಡೋಣಾ ಎಂದೇ ಹೇಳಿದ್ದಾರೆ. ಈ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡ ಅವರು ಸ್ಪರ್ಧೆ ಮಾಡುವ ಸೂಚನೆಯನ್ನು ನೀಡಿದ್ದಾರೆ.

Read More

ಬೆಂಗಳೂರು:- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 158 ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 568 ಹಾಗೂ ಸೋಂಕು ಪ್ರಮಾಣ ದರ ಶೇ. 1.89 ತಲುಪಿದೆ. ಕಳೆದ 24 ಗಂಟೆಗಳಲ್ಲಿ 8,350 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನಲ್ಲಿ 85, ಮೈಸೂರು 12, ದಕ್ಷಿಣ ಕನ್ನಡ 8, ಚಾಮರಾಜನಗರ 7, ವಿಜಯನಗರ 6, ಬೆಂಗಳೂರು ಗ್ರಾಮಾಂತರ, ಮಂಡ್ಯ ಮತ್ತು ರಾಮನಗರದಲ್ಲಿ ತಲಾ 5, ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ತಲಾ 4, ಚಿಕ್ಕಮಗಳೂರು ಮತ್ತು ಕೋಲಾರದಲ್ಲಿ ತಲಾ 3, ಚಿಕ್ಕಬಳ್ಳಾಪುರ, ಧಾರವಾಡ, ಗದಗ ಹಾಗೂ ಹಾಸನ ತಲಾ ಇಬ್ಬರು ಮತ್ತು ಬೀದರ್, ಕಲಬುರಗಿ, ಕೊಪ್ಪಳದಲ್ಲಿ ತಲಾ ಒಬ್ಬರಂತೆ 158 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ 568 ಸಕ್ರಿಯ ಪ್ರಕರಣಗಳಲ್ಲಿ 514 ಸೋಂಕಿತರು ಮನೆ ಆರೈಕೆಗೆ ಒಳಗಾದ್ದು, 54 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರಲ್ಲಿ 14 ಮಂದಿ ತುರ್ತು ನಿಗಾ ಘಟಕದಲ್ಲಿ ಹಾಗೂ 40 ಮಂದಿ…

Read More

ರಾಯಬಾಗ :-ಸಕ್ಕರೆ ಸಚಿವರು ಆತ್ಮಹತ್ಯೆ ಮಾಡಿಕೊಂಡರೆ ರಾಜ್ಯ ರೈತರಿಂದ 6 ಕೋಟಿ ಕೊಡಲಾಗುತ್ತದೆ ಎಂದು ಇಲ್ಲಿನ ರೈತರು ಹೇಳಿದ್ದಾರೆ. ತಾಲೂಕಿನ ತಹಶಿಲ್ದಾರ ಕಛೇರಿ ಬಾಗಿಲ ಬಂದ ಮಾಡಿ ರೈತರಿಂದ ಪ್ರತಿಭಟನೆ ಮಾಡಲಾಗಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ರೈತರು ಸಾಲ ಮನ್ನಾ ಆಗುವುದಕ್ಕೆ ಬರಗಾಲ ಕಾಯುತ್ತಾರೆ ಎಂದು ರೈತರ ಬಗ್ಗೆ ಅವಹೇಳನಕಾರಿ ಹೇಳಿದ್ದಕ್ಕೆ ರಾಯಬಾಗ ತಾಲೂಕಿನ ರೈತ ಸಂಘದ ತಾಲೂಕ ಮುಖಂಡರಾದ ಮಾಯಪ್ಪ ಹೊಳಕರ ಮಾತನಾಡಿದರು. ರೈತರು ಬರಗಾಲ ಪರಸ್ಥಿತಿಯಲ್ಲಿ ಯಾವದೇ ಸರ್ಕಾರ ಕೊಡೋ 10000 ಸಾವಿರಕ್ಕೆ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲಾ ರೈತರು ಬೆಳೆದ 100 ಟನ್ನ ಕಬ್ಬದ 10ಲಕ್ಷ ಬರುತ್ತೆ 1ಲಕ್ಷ ಟ್ಯಾಕ್ಸ್ ಕಟ್ಟಾಗುತ್ತೆ ಆ ಹಣದಲ್ಲಿ ನಿಮ್ಮ್ ಹೊಟ್ಟೆ ತುಂಬಿಸಿ ಕೊಳ್ಳುತೆರಿ ಸಚಿವರೇ ರೈತರನ್ನು ಕೀಳಾಗಿ ನೊಡಬೇಡರಿ ಬೇಕಾದರೆ ಕರ್ಣಾಟಕ ರಾಜ್ಯದಂತ ರೈತರು ಕೂಡಿಕೊಂಡು ನಿಮಗೆ 6ಕೋಟಿ ಹಣ ಕೊಡುತ್ತೇವೆ ನೀವು ಆತ್ಮಹತ್ಯೆ ಮಾಡಿಕೊಳ್ಳಿ ಎಂದರು ಹಾಗೂಮುಖ್ಯ ಮಂತ್ರಿ ಸಿದ್ದರಾಮ್ಯ ಅವರೇ ನಿಮ್ಮ ಸರ್ಕಾರದಿಂದ ಇಂತಹ…

Read More

ಹುಬ್ಬಳ್ಳಿ:- ಹಳೇ ಹುಬ್ಬಳ್ಳಿಯಿಂದ ಕಿಮ್ಸ್ ಕಡೆ ಹೊರಟಿದ್ದ ಬಸ್​ನಲ್ಲಿ ಶಕ್ತಿ ಯೋಜನೆ ಎಫೆಕ್ಟ್ ಹಿನ್ನಲೆ ಸೀಟ್​ಗಾಗಿ ಬಸ್​ನಲ್ಲಿ ಮಹಿಳೆಯರು ಕಿತ್ತಾಡಿಕೊಂಡ ಘಟನೆ ಜರುಗಿದೆ. ಸರ್ಕಾರವು ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ​ ಜಾರಿ ಮಾಡಿದ ಹಿನ್ನಲೆ ಸೀಟ್​ಗಾಗಿಗಲಾಟೆಯ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ. ಅದರಂತೆ ಇಂದು ಕೂಡ ಹುಬ್ಬಳ್ಳಿ ಬಸ್​ವೊಂದರಲ್ಲಿ ಯಾವುದೇ ಸೀಟ್​ ಇರಲಿಲ್ಲ. ಈ ವೇಳೆ ಇಬ್ಬರು ಮಹಿಳೆಯರು ಸೀಟ್​ಗಾಗಿ ಜಡೆ ಜಗಳವಾಡಿದ್ದಾರೆ. ಇನ್ನು ಇಬ್ಬರು ಮಹಿಳೆಯರ ಜಡೆ ಜಗಳ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊ ನೋಡಿದವರು ತರಾವರಿ ಕಾಮೆಂಟ್ ಮಾಡಿದ್ದಾರೆ.

Read More

ಬೆಂಗಳೂರು:- ಕರವೇ ಆಯ್ತು ಈಗ ಕನ್ನಡ ಒಕ್ಕೂಟದಿಂದ ಡಿ.30ರಂದು ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳು 30ರ ಶನಿವಾರದಂದು ಬೆಳಗ್ಗೆ 11:30 ಗಂಟೆಗೆ ಕನ್ನಡ ಒಕ್ಕೂಟದಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿಗೆ ಕರೆ ನೀಡಲಾಗಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದೇ ತಿಂಗಳು 30ರ ಶನಿವಾರದಂದು ಬೆಳಗ್ಗೆ 11:30 ಗಂಟೆಗೆ ಕನ್ನಡ ಒಕ್ಕೂಟದಿಂದ ನೇತೃತ್ವದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ನಡೆಸಲಾಗುವುದು ಎಂದು ಹೇಳಿದರು. ಅಲ್ಲದೇ ಸರ್ಕಾರಕ್ಕೆ ಪ್ರಮುಖ ಒತ್ತಾಯಗಳನ್ನು ಮಾಡಲು ತೀರ್ಮಾನಿಸಿವೆ. ಸರ್ಕಾರಕ್ಕೆ ಪ್ರಮುಖ ಒತ್ತಾಯಗಳು ಕನ್ನಡದಲ್ಲೇ ಕಡ್ಡಾಯವಾಗಿ ನಾಮಫಲಕಗಳು ಇರಲೇಬೇಕು. ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಯಲೇಬೇಕು. ಪದವೀಧರರಿಗೆ ಉದ್ಯೋಗ ನೀಡಲೇಬೇಕು. ಪರಭಾಷೆಯವರ ದಾಂಧಲೆ ನಿಲ್ಲಲೇಬೇಕು. ರೈಲ್ವೆಯಲ್ಲಿ ಹಾಗೂ ಬ್ಯಾಂಕುಗಳಲ್ಲಿ ಕನ್ನಡ ಬೇಕೇ ಬೇಕು. ಐಟಿ-ಬಿಟಿಗಳಲ್ಲಿ ಹಾಗೂ ಅಂಗಡಿ ಮಾಲ್‌ಗಳಲ್ಲಿ ಕನ್ನಡ ಇರಲೇಬೇಕು, ಹಿಂದಿ ಹೇರಿಕೆ ಬೇಡವೇ ಬೇಡ. ನ್ಯಾಯಾಲಯಗಳಲ್ಲಿ…

Read More

ಬೆಂಗಳೂರು:- ಅಕ್ರಮ ಬಡಾವಣೆ ನಿರ್ಮಿಸಿದರೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇನ್ನು ಮುಂದೆ ಯಾರೇ ಅನಧಿಕೃತವಾಗಿ ಬಡಾವಣೆ ನಿರ್ಮಿಸಿ, ಸಂಬಂಧಿತ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಿಸಿದರೆ ಅಂತಹವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನಿಗೆ ತಿದ್ದುಪಡಿ ತರುವುದು ಅಗತ್ಯ. ಇಲ್ಲವಾದರೆ ಅನಧಿಕೃತ ಬಡಾವಣೆಗಳು ರಾಜ್ಯದಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತುತ್ತಲೇ ಇರುತ್ತವೆ. ಹೀಗಾಗಿ ಕಾನೂನು ತಂದು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಯಾರೇ ನ್ಯಾಯಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟು ಬಡಾವಣೆ ನಿರ್ಮಿಸಲು ಮುಂದಾದರೆ ಮತ್ತು ಮನೆ ನಿರ್ಮಾಣ ಮಾಡಲು ನಿಯಮಾನುಸಾರ ನಕ್ಷೆ ಮಂಜೂರಾತಿ ಬಯಸಿದಲ್ಲಿ ನಿಯಮ ಸರಳೀಕರಣ ಮಾಡಿ, ಮುಖಾಮುಖಿ ರಹಿತವಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಮಂಜೂರಾತಿ ಲಭಿಸುವಂತೆ ತಂತ್ರಾಂಶ ಅಭಿವೃದ್ಧಿ ಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿದರು. ಯಾರೊಬ್ಬರೂ ನಕಲಿ ಖಾತೆ ಪಡೆದು ನೋಂದಣಿ ಮಾಡಿಸದಂತೆ ‘ಕಾವೇರಿ’ ತಂತ್ರಾಂಶದಲ್ಲಿ ಮಾರ್ಪಾಡು ಮಾಡಿದರೆ ಆಗ ಅನಧಿಕೃತ ಬಡಾವಣೆ, ಕಟ್ಟಡಗಳನ್ನು…

Read More