Author: AIN Author

ಬೆಂಗಳೂರು:- ಡಿ.31 ರಂದು ಮೆಟ್ರೊ ರೈಲು ಸಂಚಾರವನ್ನು ರಾತ್ರಿ 2 ಗಂಟೆ ವರೆಗೆ ವಿಸ್ತರಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಸಾರ್ವನಿಕರಿಗೆ ಅನುಕೂಲ ಆಗುವಂತೆ ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಹೆಚ್ಚುವರಿ ಅವಧಿಯಲ್ಲಿ ಎಂ.ಜಿ. ರಸ್ತೆ ನಿಲ್ದಾಣವನ್ನು ತೆರೆಯದಂತೆ ಪೊಲೀಸ್‌ ಇಲಾಖೆ ನಿರ್ದೇಶನ ನೀಡಿದೆ. ಪ್ರತಿ ದಿನ ರಾತ್ರಿ 11.30ಕ್ಕೆ ಮೆಟ್ರೋ ರೈಲು ಸಂಚಾರ ಕೊನೆಗೊಳ್ಳುತ್ತದೆ. ಆದರೆ ಕೊನೆಯ ರೈಲು ಸೇವೆಯನ್ನು ಡಿ.31 ರಂದು ರಾತ್ರಿ 2 ಗಂಟೆ ವರೆಗೆ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 11.30ರ ನಂತರ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣ ಪ್ರವೇಶ ನಿರ್ಬಂಧಿಸಬೇಕು ಎಂದು ಗುರುವಾರವೇ ಪೊಲೀಸ್‌ ಇಲಾಖೆ ಸೂಚನೆ ನೀಡಿದೆ. ಅಂದು ಹೆಚ್ಚುವರಿ ಅವಧಿಯಲ್ಲಿ ಅಂದರೆ ರಾತ್ರಿ 11.30ರ ನಂತರ ಎಂ.ಜಿ.ರಸ್ತೆಯಿಂದ ಪ್ರಯಾಣ ಬೆಳೆಸುವ ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣಗಳಿಗೆ…

Read More

 2023ರ ವರ್ಷ ಮುಕ್ತಾಯದ ಅಂತ್ಯದಲ್ಲಿ ಇದೆ ಈ ವರುಷ ಕ್ರಿಕೆಟ್​ ಕ್ಷೇತ್ರ ಸಾಧನೆ ಮತ್ತು ನೋವಿನ ಎರಡು ಹಾದಿಯನ್ನು ಕಂಡಿದೆ. ಹಾಗಿದ್ರೆ ಈ ಕಳೆದ 12 ತಿಂಗಳ ಅವಧಿಯ ನಿಧನರಾದ ಕ್ರಿಕೆಟ್ ದಿಗ್ಗಜರು ಯಾರೆಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಹೌದು,ಕ್ರಿಕೆಟ್ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದ ಹಲವು ಆಟಗಾರರಿಗೆ 2023 ವರ್ಷ ವಿದಾಯ ಹೇಳಿದ್ದಾರೆ. 1. ಸಲೀಂ ದುರಾನಿ (ಭಾರತ) 1960ರ ದಶಕದಲ್ಲಿ ಭಾರತದ ಸ್ಟಾರ್​ ಕ್ರಿಕೆಟಿಗರಾಗಿದ್ದರು. ಇವರಿಗೆ 88 ವರ್ಷ ವಯಸ್ಸಾಗಿತ್ತು. ದೀರ್ಘಕಾಲಿನ ಕಾಯಿಲೆಯಿಂದ ಏಪ್ರಿಲ್ 2 2023ರಂದು ಗುಜಾರಾತ್​ನ ಜಾಮ್‌ನಗರದಲ್ಲಿ ನಿಧನರಾಗಿದ್ದರು. ಆಲ್​ರೌಂಡರ್​ ಕ್ರಿಕೆಟಿಗರಾಗಿದ್ದ ದುರಾನಿ ಅವರು ಬಾಲಿವುಡ್​ ಸಿನಿಮಾದಲ್ಲೂ ನಟಿಸಿದ್ದಾರೆ. 1934ರ ಡಿಸೆಂಬರ್​ 11ರಂದು ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಜನಿಸಿದ್ದ ಸಲೀಂ ದುರಾನಿ, ಭಾರತ ತಂಡದಲ್ಲಿ ಬ್ಯಾಟ್​ ಮತ್ತು ಬೌಲಿಂಗ್​ನಿಂದಲೇ ಖ್ಯಾತಿ ಗಳಿಸಿದ್ದರು. ಎಡಗೈ ಬೌಲರ್ ಆಗಿದ್ದ ಸಲೀಂ, ಟೀಂ ಇಂಡಿಯಾ ಪರವಾಗಿ 29 ಟೆಸ್ಟ್‌ಗಳನ್ನು ಆಡಿದ್ದು, 1961- 62 ರಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ 5 ಪಂದ್ಯಗಳ ಸರಣಿಯಲ್ಲಿ ಭಾರತ…

Read More

ಚಳಿಗಾಲದಲ್ಲಿ ಪದೇಪದೆ ಶೀತ-ಕೆಮ್ಮು ಕಾಡುತ್ತಿದ್ದರೆ, ʻಚಳಿಗಾಲಾಂದ್ರೆ ಇಷ್ಟೆʼ ಎಂದು ತಳ್ಳಿ ಹಾಕುತ್ತೇವೆ. ಸ್ನಾಯುಸೆಳೆತ ಹಿಂಡುತ್ತಿದ್ದರೆ ಹಣೆಬರಹವನ್ನು ಹಳಿಯುತ್ತೇವೆ. ನಮಗೆ ವಿಟಮಿನ್‌ ಡಿ ಕೊರತೆಯಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದೇ ಇಲ್ಲ. ವಿಟಮಿನ್‌ ಡಿ ಕೊರತೆ ಎಲ್ಲಾ ವಯೋಮಾನದವರನ್ನೂ ಬಾಧಿಸಬಹುದು. ಕಾರಣ, ಡಿ ಜೀವಸತ್ವ ದೊರೆಯುವ ಮೂಲಗಳ ಬಗ್ಗೆ ಇರುವ ಅರಿವಿನ ಕೊರತೆ. ಸೂರ್ಯನ ಬಿಸಿಲಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್‌ ಡಿ ದೊರೆಯುತ್ತದೆ, ನಿಜ. ಆದರೆ ದಿನದಲ್ಲಿ ಒಂದಿಷ್ಟು ಹೊತ್ತು ನಮ್ಮನ್ನು ನಾವು ಬಿಸಿಗೆ ಒಡ್ಡಿಕೊಳ್ಳಬೇಕಾಗುತ್ತದೆ.  ಈ ಆಹಾರಗಳ ಸೇವನೆ ಮಾಡಿ  ವಿಟಮಿನ್‌ ಡಿ ನೀಡುವ ಆಹಾರಗಳು ಮೀನು ಹಾಗೂ ಮೀನೆಣ್ಣೆಯ ವಸ್ತುಗಳಲ್ಲಿ ಡಿ ಜೀವಸತ್ವ ಸಮೃದ್ಧವಾಗಿದೆ. ಉತ್ತಮ ಕೊಬ್ಬಿನಾಂಶವಿರುವ ಟ್ರೌಟ್‌, ಸಾಲ್ಮನ್‌, ಟ್ಯೂನ ಮತ್ತು ಮ್ಯಾಕರೆಲ್‌ನಂಥ ಮೀನುಗಳಲ್ಲಿ ವಿಟಮಿನ್‌ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಇದಲ್ಲದೆ, ಮೀನೆಣ್ಣೆಯ ಮೂಲಕವೂ ನೈಸರ್ಗಿಕವಾಗಿ ವಿಟಮಿನ್‌ ಡಿ ಪಡೆಯಲು ಸಾಧ್ಯವಿದೆ. ಡೈರಿ ಉತ್ಪನ್ನಗಳು ಹಸುವಿನ ಹಾಲು ಸಹ ಡಿ ಜೀವಸತ್ವದ ಸ್ವಾಭಾವಿಕ ಮೂಲ. ಹಾಲು, ಮೊಸರು, ಬೆಣ್ಣೆ, ಚೀಸ್‌ಗಳ…

Read More

ವರ್ಷಾಂತ್ಯದಲ್ಲಿ ಚಿನ್ನ ಖರೀದಿ ಮಾಡೋಣ ಎಂದುಕೊಂಡವರಿಗೆ ಇದು ಭಾರಿ ನಿರಾಸೆ ತರಿಸುವ ವಿಚಾರವಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ ದುಪ್ಪಟ್ಟು ಏರಿಕೆಯಾಗಿದೆ. 22 ಕ್ಯಾರೆಟ್‌ ಚಿನ್ನದ ದರ ಇಂದು 1 ಗ್ರಾಂ ಚಿನ್ನದ ಬೆಲೆ 5,890 ರೂ. ಇದೆ. ನಿನ್ನೆ 5,850 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 40 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,120 ರೂ. ನೀಡಬೇಕು. ನಿನ್ನೆ 46,800 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 320 ರೂ. ಏರಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 58,900 ಆಗಿದ್ದರೆ, ನಿನ್ನೆ 58,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 400 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 5,89,000 ರೂ. ಇದೆ. ನಿನ್ನೆ 5,85,000 ರೂ. ಇದ್ದು 4,000 ಏರಿಕೆಯಾಗಿದೆ. 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,425 ರೂ ಇದೆ. ನಿನ್ನೆ…

Read More

ಈ ಇತ್ತೀಚಿನ ಡಿಜಿಟಲ್ ವಿವರಣೆಯಲ್ಲಿ, 2023 ಹ್ಯುಂಡೈ ವೆರ್ನಾ ತನ್ನ ದೇಹದಲ್ಲಿ ಕಾರ್ಬನ್ ಫೈಬರ್ ಅಂಶಗಳನ್ನು ಧರಿಸಿದೆ. ಈ ಆಕರ್ಷಕ ಆವೃತ್ತಿಯ ಪ್ರಭಾವಶಾಲಿ ನವೀಕರಣಗಳನ್ನು ಅನಾವರಣಗೊಳಿಸಲು ನಾನು ರೋಮಾಂಚನಗೊಂಡಿದ್ದೇನೆ. 2006 ರಿಂದ, ವರ್ನಾ ತನ್ನ ವರ್ಗದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ, ಉನ್ನತ ದರ್ಜೆಯ ವೈಶಿಷ್ಟ್ಯಗಳು ಮತ್ತು ಸೌಕರ್ಯಗಳೊಂದಿಗೆ ಸ್ಥಿರವಾಗಿ ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದೆ. ಅದರ ಇತ್ತೀಚಿನ ಪುನರಾವರ್ತನೆಯಲ್ಲಿ, ಈ ಉನ್ನತ ಮಟ್ಟದ ಸೆಡಾನ್ ತನ್ನ ಕಾರ್ಯಕ್ಷಮತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ, ವಿಭಾಗದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳನ್ನು ಮೀರಿಸುತ್ತದೆ. ಇದು ತನ್ನ ಪ್ರತಿಸ್ಪರ್ಧಿಗಳ ನಡುವೆ ಮುಂಚೂಣಿಯಲ್ಲಿರುವ ಆವಿಷ್ಕಾರಗಳ ಶ್ರೇಣಿಯನ್ನು ತರುತ್ತದೆ. ಈ ಇತ್ತೀಚಿನ ವರ್ಚುವಲ್ ರೆಂಡಿಶನ್‌ನ ವಿವರಗಳನ್ನು ಅನ್ವೇಷಿಸೋಣ. ಕಾರ್ಬನ್ ಫೈಬರ್ ದೇಹದೊಂದಿಗೆ ಹುಂಡೈ ವೆರ್ನಾ ಈ ಬಲವಾದ ಅವತಾರವು Instagram ನಲ್ಲಿ ಬಿಂಬಲ್ ವಿನ್ಯಾಸಗಳಿಂದ ಹುಟ್ಟಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ನಿಸ್ಸಂದಿಗ್ಧವಾಗಿ ವೆರ್ನಾ ಆಗಿದ್ದರೂ, ವಿಭಿನ್ನ ವಿನ್ಯಾಸ ಮಾರ್ಪಾಡುಗಳಿವೆ. ಉದಾಹರಣೆಗೆ, ಈ ವರ್ನಾದ ಸಂಪೂರ್ಣ ಬಾನೆಟ್ ಹುಡ್ ಸ್ಕೂಪ್‌ನ ಒಂದೆರಡು ಪ್ಯಾಚ್‌ಗಳೊಂದಿಗೆ ಕಾರ್ಬನ್ ಫೈಬರ್…

Read More

ನವದೆಹಲಿ: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತಂತೆ ರಾಜ್ಯ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕೂಡ ಈ ಬಗ್ಗೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಸರ್ಕಾರ, 2023-24 ಮಾರುಕಟ್ಟೆ ಋತುವಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಿಲ್ಲಿಂಗ್‌ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ ಏರಿಕೆ ಮಾಡಲಾಗಿದ್ದು, ಈಗ ಪ್ರತಿ ಕ್ವಿಂಟಾಲ್‌ಗೆ 11,160 ರೂಪಾಯಿ ಆಗಿದೆ. ಅದೇ ರೀತಿ ಪೂರ್ಣ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 250 ರೂಪಾಯಿ ಏರಿಕೆ ಮಾಡಲಾಗಿದ್ದು, ಈಗ 12 ಸಾವಿರ ರೂಪಾಯಿ ಆಗಿದೆ. ಕೇಂದ್ರ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, https://ainlivenews.com/sabarimala-ayyappa-swami-temple-earned-204-crore-rupees-in-39-days/ ಈ ನಿರ್ಧಾರವು ಭಾರತೀಯ ತೆಂಗು ಬೆಳೆಗಾರರಿಗೆ ಉತ್ತಮ ಪ್ರತಿಫಲವನ್ನು…

Read More

ಬೆಂಗಳೂರು:- ಶಾಸಕ ಎಸ್‌.ಟಿ.ಸೋಮಶೇಖರ್ ಅವರು ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯ ವಿವರ ತಿಳಿದು ಬಂದಿಲ್ಲವಾದರೂ ಕ್ಷೇತ್ರದ ಅಭಿವೃದ್ಧಿ ಮತ್ತು ಅನುದಾನ ಕುರಿತಂತೆ ಮಾತುಕತೆ ನಡೆಸಿರಬಹುದು. ಜತೆಗೆ ಮುಂಬರುವ ಲೋಕಸಭಾ ಚುನಾವಣೆಗೆ ಪೂರಕವಾಗಿ ಸಮಾಲೋಚನೆ ನಡೆದಿರಬಹುದು ಬೆಳಗಾವಿ ಅಧಿವೇಶನ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ನಡೆದ ಔತಣ ಕೂಟದಲ್ಲಿ ಭಾಗಿಯಾಗಿದ್ದ ಸೋಮಶೇಖರ್ ಅವರು ಬಿಜೆಪಿ ತೊರೆಯುವ ಬಗ್ಗೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಅದರ ಭಾಗವಾಗಿ ಆಗಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಲೇ ಇರುತ್ತಾರೆ ಎನ್ನಲಾಗಿದೆ.

Read More

ಬೆಂಗಳೂರು:- ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಕೂರಲು ಆಗಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ಆದರೆ ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅದನ್ನು ಸರ್ಕಾರ ಸಹಿಸುವುದಿಲ್ಲ ಎಂದರು. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ ಎಂದಿರುವ ಸಿದ್ದರಾಮಯ್ಯ, 2022ರ ಮಾ.3ರಂದು ಹೈಕೋರ್ಟ್‌ ಪ್ರತಿಭಟನೆ, ಧರಣಿಗಳನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತ್ರ ಮಾಡಬೇಕು. ಇದನ್ನು ಸರ್ಕಾರ ಖಾತರಿಪಡಿಸಬೇಕು ಎಂದು ಸ್ಪಷ್ಟ ಆದೇಶ ನೀಡಿದೆ. ಹೀಗಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಶಾಂತಿಯುತ ಪ್ರತಿಭಟನೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಯಾವುದೇ ಸಂಘಟನೆಯಿರಲಿ ಅಥವಾ ಖಾಸಗಿ ಸಂಸ್ಥೆಗಳಿರಲಿ, ಯಾರೇ ವ್ಯಕ್ತಿಗಳಿರಲಿ ಯಾರಾದರೂ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

Read More

ಬೆಂಗಳೂರು:- ಬೆಂಗಳೂರು ಮಹಾನಗರದಲ್ಲಿನ ಕೆಲವು ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಬೇಕು’ ಎಂದು ಕೋರಿದ್ದ ಮನವಿಗೆ ಸ್ಪಂದಿಸಲು ಹೈಕೋರ್ಟ್ ನಿರಾಕರಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಆರ್.ನಟರಾಜ್ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಎನ್.ಪಿ. ಅಮೃತೇಶ್, ‘ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಶಿಯಲ್ ಸ್ರ್ಟೀಟ್ ಹಾಗೂ ಇತರೆಡೆ ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುವುದನ್ನು ತಡೆಯಬೇಕಿದೆ. ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆ ನಿರ್ಬಂಧಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ‘ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಸರಣಿ ಸಭೆ ನಡೆಸಿದೆ. ಇನ್ನೂ ಆಖೈರು ತೀರ್ಮಾನ ಕೈಗೊಂಡಿಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾನೂನು ಶಾಂತಿ ಪಾಲನೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಸಿದ್ಧವಿದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಒಂದು ವೇಳೆ ಬೆಂಗಳೂರಿನಲ್ಲಿ ನಿರ್ಬಂಧಿಸಿದರೆ ಸಂಭ್ರಮಿಸುವ ಜನರು ಹೊರ ಪ್ರದೇಶಗಳಿಗೆ ತೆರಳುತ್ತಾರೆ. ಸರ್ಕಾರ ಈ ಬಗ್ಗೆ ಯಾವುದೇ ನಿಯಂತ್ರಣಗಳನ್ನು ವಿಧಿಸಿಲ್ಲ. ಆದಾಗ್ಯೂ, ಸದ್ಯಕ್ಕೆ ಕೋವಿಡ್…

Read More

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಆಹ್ವಾನಿಸಿದ್ದಾರೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ (S. Jaishankar) ಅವರು ಸದ್ಯ ರಷ್ಯಾ ಪ್ರವಾಸದಲ್ಲಿದ್ದಾರೆ. ಪುಟಿನ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಜೈಶಂಕರ್ ಅವರ ಜೊತೆ ಮಾತನಾಡುತ್ತಾ, ನಮ್ಮ ಆತ್ಮೀಯ ಮಿತ್ರರಾಗಿರುವ ನರೇಂದ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ನಾವು ಸಂತೋಷ ಪಡುತ್ತೇವೆ ಎಂದು ಹೇಳಿದ್ದಾರೆ. ನಮಗೆ ಪ್ರಧಾನಿ ಮೋದಿಯವರ (Narendra Modi) ನಿಲುವು ತಿಳಿದಿದೆ. ಅಲ್ಲದೆ ಈ ಬಗ್ಗೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ನಾನು ಅವರಿಗೆ ಉಕ್ರೇನ್‍ನ ಸ್ಥಿತಿಗತಿಯ ಬಗ್ಗೆ ವಿವರಿಸಿದ್ದೇನೆ. ಸಂಘರ್ಷವಿಲ್ಲದೆ ಶಾಂತಿಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಅವರ ಪ್ರಯತ್ನದ ಬಗ್ಗೆ ನನಗೆ ತಿಳಿದಿದೆ ಎಂದು ಪುಟಿನ್ ಹೇಳಿದರು. https://twitter.com/DrSJaishankar/status/1740077017054228830?ref_src=twsrc%5Etfw%7Ctwcamp%5Etweetembed%7Ctwterm%5E1740077017054228830%7Ctwgr%5E85aac680c1438e5aa217be6022956b3b4775675b%7Ctwcon%5Es1_&ref_url=https%3A%2F%2Fpublictv.in%2Fvladimir-putin-has-invited-his-friend-pm-narendra-modi-to-russia%2F  ಮೋದಿಯವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ. ರಷ್ಯಾದಲ್ಲಿ ಭೇಟಿಯಾಗಲು ನಾವು ಕಾಯುತ್ತಿದ್ದೇವೆ ಎಂದು ದಯವಿಟ್ಟು ಅವರಿಗೆ ತಿಳಿಸಿ. ಹಾಗೆಯೇ ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ನಾವು ಯಶಸ್ಸನ್ನು ಬಯಸುತ್ತೇವೆ ಎಂದು ಪುಟಿನ್ ಅವರು ಜೈಶಂಕರ್ ಗೆ ಹೇಳಿದರು.…

Read More