Author: AIN Author

ಬೆಂಗಳೂರು: ಆರ್‌ಎಸ್‌ಎಸ್‌ಗೂ (RSS) ರಾಮಮಂದಿರಕ್ಕೂ (Ram Mandir) ಏನೂ ಸಂಬಂಧವಿಲ್ಲ. ಆದರೆ ಬಿಜೆಪಿ, ಆರ್‌ಎಸ್ಎಸ್‌ನವರನ್ನು ಬಳಸಿಕೊಂಡು ಮನೆ, ಮನೆಗೆ ತೆರಳಿ, ಅಕ್ಷತೆ ಕೊಟ್ಟು ಇಲ್ಲಿಂದಲೇ ರಾಮಮಂದಿರಕ್ಕೆ ನಮನ ಸಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಕಿಡಿಕಾರಿದ್ದಾರೆ. https://ainlivenews.com/damage-to-the-party-from-yatnals-statement-decision-to-go-to-high-command/ ನಗರದಲ್ಲಿ ಮಾತನಾಡಿದ ಅವರು,  ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದರೆ, ನಾವು ಜನರ ಬದುಕಿನ ಬಗ್ಗೆ ರಾಜಕಾರಣ ಮಾಡುತ್ತಿದ್ದೇವೆ. ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶ. ಪ್ರತಿಯೊಂದು ಕುಟುಂಬದ ಹೆಣ್ಣುಮಕ್ಕಳು ನಮ್ಮ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕಾರಣದಲ್ಲಿ ಇಂತಹ ಅವಕಾಶ, ಭಾಗ್ಯ ದೊರಕಿರಲಿಲ್ಲ. ನುಡಿದಂತೆ ನಡೆದಿದ್ದೇವೆ, ಇದನ್ನು ಕಾರ್ಯಕರ್ತರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಇತಿಹಾಸ, ಅಭಿವೃದ್ಧಿ ಪರ್ವ ಬರೆದದ್ದು ನಮ್ಮ ಹೆಗ್ಗಳಿಕೆ. ಅನ್ಯರು ಏನು ಬೇಕಾದರೂ ಹೇಳಬಹುದು, ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು,…

Read More

ಬೆಂಗಳೂರು: ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಂಡಿರುವ ವಿಜಯೇಂದ್ರ (BY Vijayendra) ನೇತೃತ್ವದ ತಂಡಕ್ಕೆ ಹಿರಿಯ ಬಿಜೆಪಿ (BJP) ನಾಯಕರು ಶುಭಕೋರಿ ಮಾರ್ಗದರ್ಶನ ಮಾಡಿ ಒಗ್ಗಟ್ಟಿನ ಮಂತ್ರ ಬೋಧಿಸಿದರು. ಬಿಜೆಪಿಗೆ ಹೊಸ ನಾಯಕತ್ವ ಸಿಕ್ಕ ಹಿನ್ನೆಲೆ ಮತ್ತು ಮುಂಬರುವ ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆ ನಡೆಸಲಾಯಿತು. ಬೆಂಗಳೂರು (Bengaluru) ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಜಯೇಂದ್ರ ನೇತೃತ್ವದ ತಂಡಕ್ಕೆ ಹಿರಿಯ ನಾಯಕರು ಒಂದಷ್ಟು ಸಲಹೆ ಸೂಚನೆಗಳ ಮೂಲಕ ಮಾರ್ಗದರ್ಶನ ನೀಡಿದರು. ಹೊಂದಾಣಿಕೆ, ಸಮನ್ವಯತೆ, ಪರಸ್ಪರರ ಸಹಕಾರ ತತ್ವದಡಿ ಒಗ್ಗಟ್ಟಿನಿಂದ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ವಿಜಯೇಂದ್ರಗೆ ಹಿರಿಯ ನಾಯಕರು ಕಿವಿ ಮಾತು ಹೇಳಿದ್ದಾರೆ https://ainlivenews.com/increase-in-minimum-support-price-of-coconut-ex-cm-hdk-congratulates-pm-modi/ ಹಿರಿಯರಾದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಸಂಸದ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಚಿವ ಕಾರಜೋಳ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ, ಮಾಜಿ ಸ್ಪೀಕರ್ ಕಾಗೇರಿ,…

Read More

ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವತಿಯ ಜೊತೆ ಅಸಭ್ಯ ವರ್ತನೆ ಮಾಡಿರುವ ಘಟನೆ ಮೆಟ್ರೋದಲ್ಲಿ ನಡೆದಿರುತ್ತದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದ ಯುವತಿ ವೈಟ್ ಫೀಲ್ಡ್ ಗೆ ಹೋಗಲು ನ್ಯಾಷನಲ್ ಕಾಲೇಜು ಬಳಿ ಮೆಟ್ರೋ ಹತ್ತಿದ್ದ ಯುವತಿ ಹಾಗೆ ಸಂತ್ರಸ್ಥೆ ಪ್ರಯಾಣಿಸ್ತಿದ್ದ ಬೋಗಿಯಲ್ಲಿ ಕೂತಿದ್ದ ವ್ಯಕ್ತಿ ಮೆಜೆಸ್ಟಿಕ್ ಮೆಟ್ರೋ ನಿಲ್ಥಾಣದಲ್ಲಿ ಯುವತಿ ಇಳಿಯುತ್ತಿದ್ದಂತೆ ಆತನಿಂದ ಅಸಭ್ಯ ವರ್ತನೆ ತೋರಿದ್ದು  ಹಿಂದಿನಿಂದ ಯುವತಿಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು ಹಾಗೆ ನಂತರ ಆಕೆಯನ್ನೇ ನೋಡುತ್ತಿದ್ದ ಆರೋಪಿ ಅಲ್ಲಿಂದ ಹೊರಡಿದ್ದಾನೆ. ಕೂಡಲೇ ಮೆಟ್ರೋ ದಿಂದ ಇಳಿದು ಸೆಕ್ಯೂರಿಟಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದ ಯುವತಿ ಈ ಕೂಡಲೇ ಆತನನ್ನ ಹಿಡಿದು ಪೊಲೀಸ್ರಿಗೆ ಒಪ್ಪಿಸಿದ ಸಿಬ್ಬಂದಿ ನಂತರ ಸಂತ್ರಸ್ಥೆ ದೂರಿನನ್ವಯ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲು

Read More

ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜಿಲ್ಲಾ ಕಾರಾಗೃಹ ರಸ್ತೆಯ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿರುವುದು  ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ  ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿ ಜಗನ್ನಾಥರೆಡ್ಡಿ (80) ಮೂಲತಹ ದೊಡ್ಡ ಸಿದ್ದವನಹಳ್ಳಿಯ ನಿವಾಸಿಗಳಾಗಿದ್ದು, ನಿವೃತ್ತ ಇಂಜಿನಿಯರ್ ಆಗಿದ್ದರು.ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ.ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.  ಕಳೆದ ಹಲವು ವರ್ಷಗಳಿಂದ ಪಾಳು ಬಿದ್ದ ಮನೆಯ ಕಡೆ ಯಾರು ಹೋಗುತ್ತಿರಲಿಲ್ಲ. ಇತ್ತೀಚೆಗೆ ಯಾರೋ ಕಳ್ಳರು ಮನೆ ಬಾಗಿಲು ಹೊಡೆದಿರುವುದು ಕಂಡುಬಂದಿದ್ದು, ನಂತರ ನಾಯಿಗಳು ತಲೆ ಬುರುಡೆಗಳನ್ನು ಹೊರಗೆ ಎಳೆದು ತಂದಿರಬಹುದು ಎನ್ನಲಾಗಿದ್ದು, ಅಲ್ಲದೆ, ಮನೆಯಲ್ಲಿ 2019ರ ಕ್ಯಾಲೆಂಡರ್  ಕಂಡು ಬಂದಿರುವುದರಿಂದ ಅದೇ ವರ್ಷದಲ್ಲಿ…

Read More

ಧಾರವಾಡ: ಅದು ಬಡವರ ಪಾಲಿನ ಸಂಜೀವಿನಿ. ಕೇವಲ ಧಾರವಾಡ ಅಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದಲೂ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಆ ಆಸ್ಪತ್ರೆ ನೀಡುತ್ತ ಬಂದಿದೆ. ಜನಸಂಖ್ಯೆ ಬೆಳೆದಂತೆಲ್ಲ ಆ ಆಸ್ಪತ್ರೆಯ ಆವರಣ ಚಿಕ್ಕದಾಗುತ್ತಿದೆ. ಅಲ್ಲದೇ ಸಿಕ್ಕಾಪಟ್ಟೆ ಜನಜಂಗುಳಿ ಅಲ್ಲಿ ಆಗುತ್ತಿದ್ದು, ಇದೀಗ ಸರ್ಕಾರ ಹಾಗೂ ಜಿಲ್ಲಾಡಳಿತ ಹೆಚ್ಚುವರಿಯಾಗಿ ಮತ್ತೊಂದು ಕಡೆ ಅದೇ ರೀತಿಯ ಆಸ್ಪತ್ರೆ ತೆರೆಯಲು ಚಿಂತನೆ ನಡೆಸುತ್ತಿದೆ. ಇಷ್ಟಕ್ಕೂ ಅದು ಯಾವ ಆಸ್ಪತ್ರೆ ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್. ಇದು ಧಾರವಾಡದ ಜಿಲ್ಲಾ ಆಸ್ಪತ್ರೆ. ಈ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ. ಚಿಕ್ಕ ಮಕ್ಕಳಿಂದ ಹಿಡಿದು, ಗರ್ಭಿಣಿಯರು, ವಯೋವೃದ್ಧರಿಗೂ ಇಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ಹೀಗಾಗಿಯೇ ಈ ಆಸ್ಪತ್ರೆಯನ್ನು ಬಡವರ ಪಾಲಿನ ಸಂಜೀವಿನಿ ಎಂದು ಕರೆಯಲಾಗುತ್ತಿದೆ. ಆದರೆ, ದಿನ ಕಳೆದಂತೆ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯ ಇರುವ ಈ ಆಸ್ಪತ್ರೆಯಲ್ಲಿ ದಿನೇ ದಿನೇ ಜನಜಂಗುಳಿ ಹೆಚ್ಚಾಗುವುದರ ಜೊತೆಗೆ ಜಾಗದ ಕೊರತೆ ಕೂಡ ಎದ್ದು…

Read More

ಇಂದು ರಾಷ್ಟ್ರಕವಿ ಕುವೆಂಪು ಜನ್ಮ ದಿನ (29 December 1904 Kuvempu Birthday̤). ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತದೆ. ಮನಜಪಥ ವಿಶ್ವಪಥ ಸಂದೇಶವನ್ನು ಸಾರಿದ ಶ್ರೇಷ್ಠ ವಿಶ್ವ ಮಾನವ ಕುವೆಂಪು ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ. ಕುವೆಂಪು ಬಾಲ್ಯ  ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್‌ 29, 1904ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ.ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ, ಮಾಧ್ಯಮಿಕ ಶಿಕ್ಷ ಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್‌ ಮಿಷನ್‌ ಹೈಸ್ಕೂಲಿನಲ್ಲಿ, ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ.ಎ. ಪದವಿಯನ್ನೂ ಪಡೆದರು ರಾಷ್ಟ್ರಕವಿ ವೃತ್ತಿಜೀವನ ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ನಂತರ ಪ್ರಾಂಶುಪಾಲರೂ ಆಗಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು.…

Read More

ಬೆಂಗಳೂರು: ಇಂದು ರಾಷ್ಟ್ರಕವಿ ಕುವೆಂಪು ಜನ್ಮ ದಿನ  ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತದೆ. ಮನಜಪಥ ವಿಶ್ವಪಥ ಸಂದೇಶವನ್ನು ಸಾರಿದ ಶ್ರೇಷ್ಠ ವಿಶ್ವ ಮಾನವ ಕುವೆಂಪು ಅವರ ಜನ್ಮದಿನ ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಗೌರವಪೂರ್ವಕ ಪ್ರಣಾಮಗಳನ್ನು ತಿಳಿಸಿದ್ದಾರೆ ತಮ್ಮ ಎಕ್ಸ್‌ ಖಾತೆಯಲ್ಲಿ ಅವರು ಪೋಸ್ಟ್‌ ಮಾಡಿದ್ದು ಮನುಜಮತ ವಿಶ್ವಪಥ’ ಎಂದು ಸಾರಿದ, ಇಡೀ ಭಾರತವನ್ನು ಕನ್ನಡ ನೆಲದ ಮೂಲಕ ನೋಡಿದ ಮಹಾನ್ ದಾರ್ಶನಿಕರು, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟು ಕನ್ನಡಾಂಬೆಯ ಕೀರ್ತಿ ಕಿರೀಟವನ್ನು ಬೆಳಗಿದ ರಾಷ್ಟ್ರಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ಅವರ ಜನ್ಮದಿನದ ಸಂಸ್ಮರಣೆಗಳು. ಆ ಮಹಾನ್ ಚೇತನಕ್ಕೆ ನನ್ನ ಗೌರವಪೂರ್ವಕ ಪ್ರಣಾಮಗಳು.

Read More

ಸುನಂದ ಫೀಡ್ಸ್ ಪ್ರೈವಿಟ್ ಕಂಪನಿಯ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ  ಆಹಾರ ತಯಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಸರ್ಕಾರದ ಅನುದಾನ ಅಡಿಯಲ್ಲಿ ಖಾಸಗಿ ಕಂಪನಿ ಸುನಂದ ಫೀಡ್ ಪ್ರೈವೇಟ್ ಲಿಮಿಟೆಡ್ ನಿರ್ವಹಣೆಯಲ್ಲಿ ಇರುವ ಕಾರ್ಖಾನೆಯಲ್ಲಿ ಕಳಪೆ ಗುಣಮಟ್ಟದ ಪಶು ಆಹಾರ ತಯಾರಿಕೆ ಮಾಡುತ್ತಿದ್ದಾರೆ. https://ainlivenews.com/eat-these-foods-if-you-are-deficient-in-vitamin-d-in-winter/ ಕಾರ್ಖಾನೆಯಲ್ಲಿ ರೈತರಿಂದ ಗೊಬ್ಬರ ಮಾತ್ರ ಖರೀದಿ ಅವಕಾಶ ಬಿಟ್ಟರೆ ಇತರೆ ಯಾವುದೇ ಆಹಾರ ಪದಾರ್ಥಗಳನ್ನು ಖರೀದಿ ಮಾಡುವಂತಹ ಅವಕಾಶ ಇರುವುದಿಲ್ಲ. ಆದರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸುನಂದ ಫೀಡ್ಸ ಕಂಪನಿ ಅಕ್ರಮವಾಗಿ ಕಳಪೆ ಗುಣಮಟ್ಟದ ಯುರಿಯಾ ಗೊಬ್ಬರ ಖರೀದಿಸಿ ಪಶು ಆಹಾರ ತಯಾರಿಕೆ ಬಳಕೆ ಮಾಡುತ್ತಿರುವುದು ಕಂಪನಿ ಪಶು ಆಹಾರ ತಯಾರಿಕೆಯಲ್ಲಿ ಲೋಪ ಎಸಗಿದ್ದಾರೆ ಎನ್ನಲಾಗಿದೆ.

Read More

ಹಾಸನ: ಕರ್ನಾಟಕ ರಾಜ್ಯದಲ್ಲಿ ಜನವರಿ ಮೊದಲ ವಾರ ಇಲ್ಲವೇ ಎರಡನೇ ವಾರದಿಂದ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ. ಒಂದು ವೇಳೆ ಖರೀದಿ ಮಾಡದಿದ್ದ ಪಕ್ಷದಲ್ಲಿ ಪಾದಯಾತ್ರೆ ಮಾಡುತ್ತೇವೆ ಎಂದು ಮಾಜಿ ಸಚಿವ ಎಚ್‌. ಡಿ. ರೇವಣ್ಣ ಎಚ್ಚರಿಕೆ ನೀಡಿದ್ಧಾರೆ. https://ainlivenews.com/eat-these-foods-if-you-are-deficient-in-vitamin-d-in-winter/ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಅವರ ನೇತೃತ್ವದಲ್ಲಿ ಇತ್ತೀಚೆಗೆ ಪ್ರಧಾನಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಕೊಬ್ಬರಿ ಖರೀದಿಗೆ ಮುಂದಾಗದೇ ಇದ್ದರೆ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ 220 ತಾಲೂಕಲ್ಲಿ ಬರಗಾಲ ಇದೆ. ರೈತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಈ ಗ್ಯಾರಂಟಿ ಜಾರಿ ಮಾಡಲಿ, ಕೇಂದ್ರ ಅಥವಾ ರಾಜ್ಯ ಸರಕಾರವಾದರೂ ಪರಿಹಾರ ನೀಡಲಿ, ರೈತರ ನೆರವಿಗೆ ಬರಬೇಕು ಅಷ್ಟೇ ಎಂದು ರೇವಣ್ಣ ತಿಳಿಸಿದರು.

Read More

ಬೆಂಗಳೂರು: ಸಾರಿಗೆ ಇಲಾಖೆಯ ವತಿಯಿಂದ ಸಾರ್ವಜನಿಕರ ಪ್ರಯಾಣಕ್ಕಾಗಿ ಇಂದು ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಆಹಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಚಾಲನೆ ನೀಡಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಸಂಚಾರ ಮಾಡುವ ಸಲುವಾಗಿ ಸಾರಿಗೆ ಇಲಾಖೆ BMTC ಮತ್ತು ವಾಯುವಜ್ರದ ಎಲೆಕ್ಟ್ರಿಕ್ ಬಸ್ ಗಳ ಸೇವೆಯನ್ನು ಕಲ್ಪಿಸಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಸ್ ಗಳನ್ನು ಒದಗಿಸುವುದಾಗಿ ಸಚಿವರು ಒಪ್ಪಿಗೆಯನ್ನು ನೀಡಿದರು. ಇದೇ ವೇಳೆ ದೇವನಹಳ್ಳಿ ತಾಲ್ಲೂಕಿನ ತೂಬಗೆರೆ ಪಂಚಾಯತಿಗೆ ಸಮರ್ಪಕ ಬಸ್ ಸೇವೆ ಇಲ್ಲದಿರುವುದರಿಂದ ಈ ಭಾಗಕ್ಕೆ ಬಸ್​ ಸಂಪರ್ಕ ಕಲ್ಪಿಸಲು ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್ಎಸ್ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳು ಬರುವುದರಿಂದ ಭಕ್ತಾದಿಗಳಿಗೆ ಹೆಚ್ಚಿನ ಸೌಕರ್ಯ ಹಾಗು ಅನ್ನ ದಾಸೋಹ ಭವನವನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಿಗೆ ಮನವಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ವ್ಯವಸ್ಥಾಪಕ ನಿರ್ದೇಶಕರಾದ…

Read More