Author: AIN Author

ಕನ್ನಡದ ಕಲಾವಿದರು ಪರಭಾಷೆಯಲ್ಲೂ ಮಿಂಚುತ್ತಾ ಕನ್ನಡ ಸಿನಿಮಾಗಳಲ್ಲಿಯೂ ನಟಿಸುತ್ತಾ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದೀಗ ಕನ್ನಡದ ‘ಭಜರಂಗಿ’ ವಿಲನ್ ಸೌರವ್‌ ಲೋಕೇಶ್ ಅವರು ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಭಜರಂಗಿ ಲೋಕಿ ಅವರು ಇತ್ತೀಚೆಗೆ ರಿಲೀಸ್ ಆದ ‘ಸಲಾರ್’ (Salaar) ಸಿನಿಮಾದಲ್ಲಿ ನಟಿಸಿದ್ದಾರೆ.  ಪ್ರಭಾಸ್ (Prabhas) ನಟನೆಯ ಚಿತ್ರದಲ್ಲಿ ಗುರುಂಗ್ ಪಾತ್ರದಲ್ಲಿ ನಟಿಸಿ ಜನಮನ್ನಣೆ ಪಡೆದಿದ್ದಾರೆ. ಈ ಬೆನ್ನಲ್ಲೇ ಬಿಗ್ ಬಜೆಟ್ ಪ್ರಾಜೆಕ್ಟ್‌ಗಳು ನಟ ಲೋಕಿಗೆ ಅರಸಿ ಬರುತ್ತಿದೆ. ತೆಲುಗಿನಲ್ಲಿ ಮತ್ತೆ ಸ್ಟಾರ್ ನಟನ ಮುಂದೆ ಅಬ್ಬರಿಸುವ ಚಾನ್ಸ್ ದಕ್ಕಿದೆ. https://ainlivenews.com/what-is-the-warning-given-by-the-kannada-organizations-while-the-capital-bangalore-is-locked/  ಮೆಗಾಸ್ಟಾರ್ ಚಿರಂಜೀವಿ ನಟನೆಯ 156ನೇ ಚಿತ್ರ ‘ವಿಶ್ವಾಂಭರ’ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಪೌರಾಣಿಕ ಕಥೆಯುಳ್ಳ ಈ ಚಿತ್ರದಲ್ಲಿ ಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ತೆಲುಗು ಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ನಟಿಸುತ್ತಾ ಇರೋದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ ‘ಆಚಾರ್ಯ’ ಸಿನಿಮಾದಲ್ಲಿ ಸೌರವ್‌ ಲೋಕೇಶ್ ಪ್ರಮುಖ ಪಾತ್ರದಲ್ಲಿ…

Read More

ಬೆಂಗಳೂರು: ಸಿಗರೇಟ್ ಸೇದುವ ವೇಳೆ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಟೆಕ್ಕಿ ಸಾವನ್ನಪ್ಪಿರುವ ಘಟನೆ ಕೆ ಆರ್ ಪುರಂ ಅಯ್ಯಪ್ಪನಗರದ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ಮೃತನನ್ನು ದಿಪಾಂಶು ಶರ್ಮಾ ಎಂದು ಗುರುತಿಸಲಾಗಿದೆ. ಈ ಘಟನೆ ಶುಕ್ರವಾರ ಬೆಳಗ್ಗೆ 6.45ರ ಸುಮಾರಿಗೆ ಬೆಂಗಳೂರಿನ ಕೆಆರ್ ಪುರ ಬಳಿಯ ಕೊಡಿಗೇಹಳ್ಳಿಯಲ್ಲಿ ನಡೆದಿದ್ದು, https://ainlivenews.com/what-is-the-warning-given-by-the-kannada-organizations-while-the-capital-bangalore-is-locked/ ದಿಪಾಂಶು ಶರ್ಮಾ ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿದ್ದ. ಇದೇ ಸಂದರ್ಭಲ್ಲಿ ಸಿಗರೇಟ್ ಸೇದಲೆಂದು ಟೆಕ್ಕಿ ಬಾಲ್ಕನಿಗೆ ತೆರಳಿದ್ದನು. ಈ ವೇಳೆ ಆಯತಪ್ಪಿ ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನಟ ವಿಷ್ಣುವರ್ಧನ್ (Vishnuvardhan) ಅವರ ಪುಣ್ಯ ಸ್ಮರಣೆ (Punya Smarane) ಕಾರ್ಯಕ್ರಮ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ಅಭಿಮಾನಿಗಳು ಅನ್ನದಾನ, ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ವಿಷ್ಣುವನ್ನು ಸ್ಮರಿಸಲಿದ್ದಾರೆ. ಅಭಿಮಾನ ಸ್ಟುಡಿಯೋದ (Abhimana Studio) ಮಾಲೀಕರಿಗೆ ಮತ್ತು ವಿಷ್ಣು ಅಭಿಮಾನಿಗಳ ಮಧ್ಯ ವಿವಾದ ಭುಗಿಲೆದ್ದಿದೆ. ವಿಷ್ಣು ಸಮಾಧಿಯನ್ನು ತೆಗೆದು ಹಾಕುವ ಕೆಲಸಕ್ಕೆ ಬಾಲಣ್ಣ ಮಕ್ಕಳು ಮಾಡುತ್ತಿದ್ದಾರೆ ಎಂದು ವಿಷ್ಣು ಅಭಿಮಾನಿಗಳು ಆರೋಪ ಮಾಡಿದ್ದರು. ಹತ್ತು ಗುಂಟೆ ಜಮೀನು ಕೊಡುತ್ತಿಲ್ಲ ಎಂದು ಹೋರಾಟ ಮಾಡಿದ್ದರು. ಈ ಬಾರಿ ಇದಕ್ಕೆಲ್ಲ ತೆರೆ ಬೀಳಲಿದೆ ಎಂದೇ ಅಂದಾಜಿಸಲಾಗಿತ್ತು. ಇನ್ನೂ ಈ ಸಮಸ್ಯೆ ಬಗೆ ಹರಿದಂತೆ ಕಾಣುತ್ತಿಲ್ಲ. https://ainlivenews.com/what-is-the-warning-given-by-the-kannada-organizations-while-the-capital-bangalore-is-locked/ ಹಾಗಂತ ವಿಷ್ಣು ಸಮಾಧಿಯನ್ನು ಪೂಜೆ ಮಾಡಲು ನಾಳೆ ಬಾಲಣ್ಣನ ಮಕ್ಕಳು ಅವಕಾಶ ಕೊಡುವುದಿಲ್ಲವಾ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಕುರಿತಂತೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಫೇಸ್ ಬುಕ್ ಲೈವ್ ಗೆ ಬಂದು, ಎಂದಿನಂತೆ…

Read More

‘ಸೀತಾರಾಮ’ (Seetharama) ಸೀರಿಯಲ್ ಸೀತಾ ಆಗಿ ಮನಗೆಲ್ಲುತ್ತಿರೋ ವೈಷ್ಣವಿ ಗೌಡ (Vaishnavi Gowda) ಅವರು ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ.  ಸೀತಾ ನಯಾ ಅವತಾರ ಪಡ್ಡೆಹುಡುಗರಿಗೆ ಖುಷಿ ಕೊಟ್ಟಿದೆ. ನೆಕ್‌ಲೆಸ್ ಡ್ರೆಸ್‌ನಲ್ಲಿ ವೈಷ್ಣವಿ ಗೌಡ (Vaishnavi Gowda) ಹೊಸ ಫೋಟೋಶೂಟ್ ಮಾಡಿಸಿದ್ದಾರೆ.  ಸಖತ್ ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ವೈಷ್ಣವಿ ಪೋಸ್ ನೀಡಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಸಖತ್ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಸೀತಾರಾಮ’ ಸೀರಿಯಲ್‌ನಲ್ಲಿ ಸೀತಾ ಆಗಿ ಮನಗೆಲ್ಲುತ್ತಿದ್ದಾರೆ.   ಸಿಹಿ, ರಾಮ್, ಸೀತಾ ಪಾತ್ರಗಳು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಧಾರಾವಾಹಿಗೆ ಪ್ರಶಂಸೆ ವ್ಯಕ್ತವಾಗಿದೆ

Read More

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‍ನ (Wrestling Federation of India) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ನಿವಾಸದಲ್ಲಿದ್ದ ಕಚೇರಿಯನ್ನು ನವದೆಹಲಿಯ ಹರಿ ನಗರಕ್ಕೆ ಸ್ಥಳಾಂತರಿಸಲಾಗಿದೆ. ಸಂಜಯ್ ಸಿಂಗ್ ಮುಖ್ಯಸ್ಥರಾಗಿ ಆಯ್ಕೆಯಾದ ಮೂರು ದಿನಗಳ ನಂತರವೂ ಬ್ರಿಜ್ ಭೂಷಣ್ ಅವರ ನಿವಾಸದಿಂದ ಕಚೇರಿ ನಡೆಯುತ್ತಿರುವುದಕ್ಕೆ ಕ್ರೀಡಾ ಸಚಿವಾಲಯವು ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಹೊಸದಾಗಿ ರಚಿಸಲಾದ ಡಬ್ಲ್ಯುಎಫ್‍ಐ ಸಮಿತಿಯನ್ನು ಡಿ.24 ರಂದು ಅಮಾನತುಗೊಳಿಸಲು ಇದು ಒಂದು ಕಾರಣ ಎಂದು ಉಲ್ಲೇಖಿಸಲಾಗಿದೆ. https://ainlivenews.com/what-is-the-warning-given-by-the-kannada-organizations-while-the-capital-bangalore-is-locked/ ಫೆಡರೇಶನ್‍ನ ವ್ಯವಹಾರವನ್ನು ಮಾಜಿ ಪದಾಧಿಕಾರಿಗಳ (ಬ್ರಿಜ್ ಭೂಷಣ್) ನಿಯಂತ್ರಣದ ಸ್ಥಳದಿಂದ ನಡೆಸಲಾಗುತ್ತಿದೆ. ಆಟಗಾರರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹೊತ್ತಿನಲ್ಲಿ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಇದು ಸರಿಯಾದ ನಡೆಯಲ್ಲ. ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣದಲ್ಲಿದೆ. ಇದು ಕ್ರೀಡಾ ಸಂಹಿತೆಗೆ ಅನುಗುಣವಾಗಿಲ್ಲ ಎಂದು ಸಚಿವಾಲಯದ ಪತ್ರದಲ್ಲಿ ತಿಳಿಸಿದೆ. ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ…

Read More

ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಟಿತ ಎಂಜಿ ರೋಡ್ , ಬ್ರಿಗೇಡ್ ರೋಡ್ ಮತ್ತು ಕಮರ್ಶಿಯಲ್ ಸ್ಟ್ರೀಟ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಸ್ತೆಉದ್ದಕ್ಕೊ  ಕಲರ್ ಪುಲ್ ದೀಪಾಲಂಕಾರ ಮಾಡಲಾಗಿದೆ. ಎಂಜಿ ರಸ್ತೆ ಎಂಟ್ರಿಯಿಂದ ಬ್ರಿಗೇಡ್  ರೋಡ್ ನ 400 ಮೀಟರ್ ವರೆಗೂ ಹೈ ಫೈ ಲೈಟಿಂಗ್ಸ್ ಗಳನ್ನು ಅಳವಡಿಸಲಾಗಿದ್ದು, ಇದರಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೊಸವರ್ಷದ ಸೊಬಗು ಬಲು ಜೋರಾಗಿಯೇ ಕಾಣಿಸುತ್ತಿದೆ.  ಇದರ ಜೊತೆಗೆ ಬಿಬಿಎಂಪಿ ಮತ್ತು ನಗರ ಪೊಲೀಸ್ ಇಲಾಖೆ ಯಿಂದ  ಹೊಸ ವರ್ಷಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ.‌ ಈಗಾಗಲೇ ಹೊಸವರ್ಷದ ದಿನ ಯಾರಿಗೂ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರವಾಗಿ, https://ainlivenews.com/what-is-the-warning-given-by-the-kannada-organizations-while-the-capital-bangalore-is-locked/ ಸಿಸಿಟಿವಿ ಅಳವಡಿಕೆ ಜೊತೆಗೆ ಯಾವ್ಯಾವ ಪ್ಲೈ ಓವರ್ ಹಾಗೂ ರಸ್ತೆಗಳನ್ನ ಕ್ಲೋಸ್ ಮಾಡಬೇಕು  ಪ್ಲಾನ್ ಮಾಡಿಕೊಂಡಿದ್ದು  ಮಹಿಳಾ ಚೌಕಿ, ಬ್ಯಾರಿಕೇಟ್ ಅಳವಡಿಕೆ ಮಾಡಲಾಗಿದೆ. ಒಟ್ಟಿನಲ್ಲಿ2024ರ ವರ್ಷವನ್ನ ಅದ್ದೂರಿಯಿಂದ ಬರಮಾಡಿಕೊಳ್ಳಲು ಪ್ರತಿಷ್ಟಿತ ಎಂಜಿ ರಸ್ತೆ ಬ್ರಿಗೇಡ್ ರಸ್ತೆ ಸಜ್ಜಗಿದ್ದು, ಹೊಸ ವರ್ಷವನ್ನ ಅದ್ದೂರಿಯಿಂದ ಬರಮಾಡಿಕೊಳ್ಳಲು…

Read More

ಯಾದಗಿರಿ:- ಇಲ್ಲಿನ ಶಹಾಪುರದಲ್ಲಿನ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರನ ರೈಸ್ ಮಿಲ್ ನಲ್ಲಿ ಬರೋಬ್ಬರಿ 700 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಗೆ ಸೇರಿದ ರೈಸ್ ಮಿಲ್ ಇದಾಗಿದ್ದು, ಗುರುಮಠಕಲ್ ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ರೈಸ್ ಮಿಲ್ ನಿಂದ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಾಲಿಶ್ ಮಾಡಿದ್ದ 630 ಕ್ವಿಂಟಾಲ್ ಪಡಿತರ ಅಕ್ಕಿ ಸೇರಿ 700 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. 630 ಕ್ವಿಂಟಾಲ್ ಪಾಲಿಶ್ ಮಾಡಿರೋ ಪಡಿತರ ಅಕ್ಕಿಯ ಜೊತೆಗೆ ಪಾಲಿಶ್ ಮಾಡಲು ರೆಡಿ ಮಾಡಿಟ್ಟುಕೊಂಡಿದ್ದ 70 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ. ರಾಜು ರಾಠೋಡ್ ಗೆ ಅಕ್ಕಿ ಮಾರಾಟ ಮಾಡಿರೋದಾಗಿ ಪೊಲೀಸರ ಮುಂದೆ ವಿಚಾರಣೆ ವೇಳೆ ಬಂಧಿತ ಆರೋಪಿಗಳು ಬಾಯ್ಬಿಟ್ಟಿದರು. ಈ ಹಿನ್ನೆಲೆ ರಾಜು ರಾಠೋಡ್ ರೈಸ್ ಮಿಲ್‌ ಮೇಲೆ ದಾಳಿ…

Read More

ಇಸ್ಲಾಮಾಬಾದ್: ದೇಶದಲ್ಲಿ ಹೊಸ ವರ್ಷಾಚರಣೆ (2024) ನಿಷೇಧಿಸಲಾಗಿದೆ ಎಂದು ಹಂಗಾಮಿ ಪ್ರಧಾನ ಮಂತ್ರಿ ಅನ್ವಾರುಲ್‌ ಹಕ್‌ ಕಾಕರ್‌ (Anwaarul Haq Kakar) ಘೋಷಿಸಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಸ್ರೇಲ್-ಹಮಾಸ್‌ ಯುದ್ಧದಿಂದಾಗಿ ಗಾಜಾದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗಾಜಾ ಜನರಿಗಾಗಿ ನಾವು ದನಿ ಎತ್ತಬೇಕು. ಅದಕ್ಕಾಗಿ ಒಗಟ್ಟು ಪ್ರದರ್ಶಿಸಲು, ಹೊಸ ವರ್ಷದ ಸಂಭ್ರಮ ಬೇಡ ಎಂದು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಪ್ಯಾಲೆಸ್ತೀನ್‌ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪ್ಯಾಲೆಸ್ತೀನ್ ಸಹೋದರ-ಸಹೋದರಿಯರೊಂದಿಗೆ ನಾವಿದ್ದೇವೆ ಎಂಬ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರವು ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸುತ್ತದೆ ಎಂದು ತಿಳಿಸಿದ್ದಾರೆ. https://ainlivenews.com/attention-students-mphil-not-recognized-ugc-notice-to-stop-admission/ ಅಕ್ಟೋಬರ್ 7 ರಂದು ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000 ಮಕ್ಕಳು ಸೇರಿದಂತೆ 21,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಹತ್ಯೆಯಾಗಿದ್ದಾರೆ. ಹಿಂಸಾಚಾರ ಮತ್ತು ಅನ್ಯಾಯದ ಎಲ್ಲಾ ಮಿತಿಗಳನ್ನು ದಾಟಿದ ಇಸ್ರೇಲಿ ಪಡೆಗಳಿಂದ ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಡೀ ಪಾಕಿಸ್ತಾನಿ ರಾಷ್ಟ್ರ ಮತ್ತು…

Read More

ಬೆಂಗಳೂರು:- ಕನ್ನಡಕ್ಕಾಗಿ ಹೋರಾಟ ಮಾಡಿ ಜೈಲು ಸೇರಿರುವ ಕರವೇ ನಾರಾಯಣಗೌಡ ಮತ್ತು ಕಾರ್ಯಕರ್ತರು ಮೂರು ದಿನಗಳಾದರೂ ಇನ್ನೂ ಕೂಡ ರಿಲೀಸ್ ಆಗಿಲ್ಲ. ಇನ್ನೂ ಕರವೇ ನಾರಾಯಣಗೌಡ ಬಂಧನಕ್ಕೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಜಯ ಕರ್ನಾಟಕ ಸಂಘಟನೆಯಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡ ಭಾಷೆ ನೆಲ, ಜಲ ವಿಚಾರವಾಗಿ ನಾವು ಯಾವತ್ತು ಹೋರಾಟ ಮಾಡುತ್ತೇವೆ. ಕನ್ನಡಿಗರಿಗಾಗಲಿ ಅಥವಾ ಕನ್ನಡ ಭಾಷೆಗಾಗಲಿ ಯಾವುದೇ ದಕ್ಕೆ ಬರಬಾರದು. ಎಲ್ಲ ಕನ್ನಡಪರ ಸಂಘಟನೆಗಳು ಒಟ್ಟಾಗಿ ಹೋರಾಡಬೇಕು. ಕನ್ನಡ ಭಾಷೆಗಾಗಿ ಹೋರಾಟ ಮಾಡಿದ ಹೋರಾಟಗಾರನ್ನ ಬಂಧಿಸಿರೋದು ಸರಿಯಿಲ್ಲ. ಕೂಡಲೇ ಅವರಿಗೆ ಬಂಧನದಿಂದ ಮುಕ್ತಿ ಮಾಡಬೇಕು. ಬಿಡಗಡೆ ಮಾಡಲಿಲ್ಲ ಅಂದ್ರೆ ಜಯ ಕರ್ನಾಟಕ ಸಂಘಟನೆಯಿಂದ ತೀರ್ವ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಸಂಘಟನೆ ನಾಯಕರೆಲ್ಲರೂ ಸೇರಿ ಸಭೆ ಮಾಡ್ತೇವೆ ಎಂದು ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಯೋಗಾನಂದ ಹೇಳಿಕೆ ನೀಡಿದ್ದಾರೆ.

Read More

ಬೆಂಗಳೂರು:- ಇಂಗ್ಲಿಷ್ ನಾಮಫಲಕಗಳ ವಿರುದ್ಧ ಕರವೇ ಆಕ್ರೋಶ ಮುಂದುವರಿದಿದೆ. RR ನಗರದ ಗೋಪಾಲನ್ ಆರ್ಕೇಡ್‌ ಮಾಲ್‌ನಲ್ಲಿ ಇಂಗ್ಲೀಷ್ ಫ್ಲೆಕ್ಸ್ ಹರಿದು ಆಕ್ರೋಶ ಹೊರ ಹಾಕಲಾಗಿದೆ. ಆಟೋದಲ್ಲಿ ಬಂದ ಕರವೇ ಕಾರ್ಯಕರ್ತ ಸ್ಕ್ರೂ ಡ್ರೈವರ್ ನಿಂದ ಫ್ಲೆಕ್ಸ್ ಹರಿದು ಆಕ್ರೋಶ ಹೊರ ಹಾಕಿದ್ದಾರೆ. ನಾರಾಯಣಗೌಡರು ಅರೆಸ್ಟ್ ಆದ್ರೆ ಹೇಳೋರ್ ಕೇಳೋರ್ ಇಲ್ವಾ.!? ನಾವು ಕಾರ್ಯಕರ್ತರು ಇನ್ನು ಹೊರಗ್ ಇದೀವಿ. ನಾರಾಯಣಗೌಡರು ಅರೆಸ್ಟ್ ಆಗಿರ್ಬೋದು ಕಾರ್ಯಕರ್ತರು ಇನ್ನು ಬದುಕಿದ್ದೀವಿ..! ಇಂಗ್ಲೀಷ್ ನಾಮಫಲಕ ಚೇಂಜ್ ಮಾಡದಿದ್ರೆ ನಿಮಗೆಲ್ಲಾ ಇದೆ ಅಂತ ಫೇಸ್ಬುಕ್ ಲೈವ್ ಮಾಡಿದ್ದಾರೆ. ನಿಮಗಿದು ವಾರ್ನಿಂಗ್ ಅಂತ ಇಂಗ್ಲೀಷ್ ನಲ್ಲಿದ್ದ ಫ್ಲೆಕ್ಸ್ ಗಳನ್ನ ಹರಿದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಕರವೇ ಕಾರ್ಯಕರ್ತ ಕುಮಾರ್ ಎಂಬುವವರಿಂದ ಫ್ಲೆಕ್ಸ್ ಹರಿದುಹಾಕಿ ಆಕ್ರೋಶ ಹೊರ ಹಾಕಿದ್ದಾರೆ.

Read More