Author: AIN Author

ಬಿಗ್ ಬಾಸ್ ಕನ್ನಡ ಸೀಸನ್ 10′ ಕಳೆದ ಸೀಸನ್​ಗಳಿಗಿಂತ ವಿಶೇಷ ಎನಿಸಿಕೊಂಡಿದೆ. ಈ ಸೀಸನ್​ ಸ್ಪರ್ಧಿಗಳು ಅಗ್ರೆಸ್ ಆಗಿ ಆಡಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅನೇಕರಿಗೆ ಇದರಿಂದ ಹಾನಿ ಉಂಟಾಗಿದೆ. ಇದರ ಜೊತೆ ಸ್ಪರ್ಧಿಗಳು ಒಂದಷ್ಟು ಮನರಂಜನೆ ಕೂಡ ನೀಡಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ 100 ಎಪಿಸೋಡ್​ಗೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿಯವರು ನಿರ್ಧರಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10′ ಆರಂಭ ಆಗಿದ್ದು ಅಕ್ಟೋಬರ್ 8ರಂದು. ನಟನೆ, ಹಾಸ್ಯ, ಪತ್ರಿಕೋದ್ಯಮ ಮತ್ತಿತರ ಕ್ಷೇತ್ರದಿಂದ ಸ್ಪರ್ಧಿಗಳನ್ನು ತರಲಾಯಿತು. ಆರಂಭದಲ್ಲೇ ಗುಂಪುಗಾರಿಕೆ ಆರಂಭ ಆಯಿತು. ಆದರೆ, ಇದು ಹೆಚ್ಚು ದಿನ ನಡೆಯಲಿಲ್ಲ. ವಿನಯ್ ಅವರು ಅಗ್ರೆಸ್ ಆಗಿ ಆಡಿದ್ದರಿಂದ ಸಾಕಷ್ಟು ಜನರಿಗೆ ತೊಂದರೆ ಆಯಿತು. ಇಡೀ ಮನೆ ಹೊತ್ತಿ ಉರಿಯಿತು. ಈಗ ಎಲ್ಲವೂ ಶಾಂತವಾಗುತ್ತಿದೆ. ಇದರ ಜೊತೆ ಫಿನಾಲೆ ಸಮೀಪಿಸಿದೆ. ಲೆಕ್ಕದಂತೆ ಹೋದರೆ ಇನ್ನು ಎರಡು ವಾರಗಳಲ್ಲಿ ‘ಬಿಗ್ ಬಾಸ್’ ಫಿನಾಲೆ ಬರಬೇಕು. ಆದರೆ, ಎರಡು…

Read More

ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್ ಮನೆಯಲ್ಲಿ ವೀಕೆಂಡ್ ಎಪಿಸೋಡ್ ನಲ್ಲಿ ಸ್ಪರ್ಧಿ ಆಯೆಶಾ ಖಾನ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದ ವೀಕೆಂಡ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹಿಂದಿ ಬಿಗ್ ಬಾಸ್ ಶೋನಲ್ಲಿ ವಿಕ್ಕಿ ಜೈನ್, ಖಾನ್ಜಾದಿ, ನೀಲ್ ಭಟ್, ಅಭಿಷೇಕ್ ಕುಮಾರ್, ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಜಿಗ್ನಾ ವೋರಾ ಹೀಗೆ ಮುಂತಾದ ಕಂಟೆಸ್ಟೆಂಟ್ ಇದ್ದಾರೆ. ಅದರಲ್ಲೂ ಗಂಡ ಹೆಂಡತಿ ಜೋಡಿಯೂ ಮನೆಯೊಳಗೆ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಮಿಡಿಯನ್ ಮುನಾವರ್ ಫರುಕಿ (Munawar Faruqui)ಕೂಡ ಇದ್ದಾರೆ. ಅವರ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡ ಹುಡುಗಿಯೊಬ್ಬಳು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಅವರೇ ಈ ಆಯೆಶಾ ಆಗಿದ್ದರು. ಹೆಸರಾಂತ ಸ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಮುನಾವರ್ ಫಾರುಕಿ ವಿರುದ್ಧ ಈಗಾಗಲೇ ಸಾಕಷ್ಟು ಆರೋಪ ಮಾಡಿರುವ ಆಯೆಶಾ ಖಾನ್ (Ayesha Khan), ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ…

Read More

ಹಾಸನ: ಮರಗಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು ಮಂಜೂರಾಗಿದೆ. ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದರು. ಬೇಲೂರು ಬಳಿಯ ನಂದಗೊಂಡನಹಳ್ಳಿಯಲ್ಲಿ 126 ಮರಗಳನ್ನು ಕಡಿದ ಆರೋಪದಡಿ ವಿಕ್ರಂ ಸಿಂಹನನ್ನು ಅಧಿಕಾರಿಗಳು ಬಂಧಿಸಿದ್ದರು. ಏನಿದು ಪ್ರಕರಣ? ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಬೇಲೂರು ಆರ್‌ಎಫ್‌ಒ ಜಮೀನಿನ ಮಾಲೀಕರಾದ ಜಯಮ್ಮ, ರಾಕೇಶ್‌ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಿದಿರುವ ಮರಗಳನ್ನು ಅರಣ್ಯ ಇಲಾಖೆ ಡಿಪೊದಲ್ಲಿ ಸಂಗ್ರಹಿಸಲಾಗಿದೆ. https://ainlivenews.com/sugar-patient-eat-these-foods-to-control-blood-sugar-levels/ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್‌ ಸಿಂಹ ಹಾಗೂ ಸಹೋದರನ ವಿರುದ್ಧ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿತ್ತು. ಅಣ್ಣ ಪ್ರತಾಪ್‌ ಸಿಂಹ ನಾಡಕಳ್ಳ, ತಮ್ಮ ವಿಕ್ರಂ ಸಿಂಹ ಕಾಡುಗಳ್ಳ ಎಂದು ಕಾಂಗ್ರೆಸ್‌ ಲೇವಡಿ ಮಾಡಿತ್ತು. ಸಹೋದರನ ಬಂಧನ ಕುರಿತು ಮಾತನಾಡಿದ್ದ ಸಂಸದ ಪ್ರತಾಪ್‌ ಸಿಂಹ, ಸಿದ್ದರಾಮಯ್ಯ ಅವರು ತಮ್ಮ…

Read More

ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಕೌಂಟ್ ಡೌನ್ ಶುರುವಾಗಿದೆ‌. ಒಂದು ಕಡೆ ಜನ ಹೊಸ ವರ್ಷವನ್ನ ಗ್ರ್ಯಾಂಡ್ ವೆಲ್ ಕಮ್ ಮಾಡಲು ಪಬ್ ಬಾರ್, ರೆಸ್ಟೋರೆಂಟ್ ನ ಮೊರೆ ಹೋದ್ರೆ ಇಲ್ಲೊಬ್ಬ ಯುವಕ 2024 ರ ನೂತನ ದಿನಗಳನ್ನು ವೆಲ್ ಕಮ್ ಮಾಡಲು ಒಂದು ರೂಪಾಯಿ ಟಿ ಶರ್ಟ್ ಗಳನ್ನ ನೀಡುವ ಮೂಲಕ ಸೆಲೆಬ್ರೆಟ್ ಮಾಡಿದ್ದಾನೆ. ಬೆಂಗಳೂರಿನ ಹೊರ ವಲಯದ ರಾಮಮೂರ್ತಿನಗರದಲ್ಲಿರುವ ಬಟ್ಟೆ ಶಾಪ್ ಓಪನ್ ಮಾಡಿದ್ದು, https://ainlivenews.com/sugar-patient-eat-these-foods-to-control-blood-sugar-levels/ ಹೊಸ ವರ್ಷಕ್ಕೆ ಬಿಗ್ ಆಫರ್ ‌ನೀಡಿದ್ದಾನೆ. ಬ್ರ್ಯಾಂಡೆಡ್ ಕಂಪನಿಯ ಟೀ ಶರ್ಟ್ ಗಳನ್ನ ಕೇವಲ ಒಂದು ರೂಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.  ನೂರಾರು ರೂ ಬೆಲೆ ಬಾಳುವ ಟಿ ಶರ್ಟ್ ನ ಒಂದು ರೂಗೆ ಮಾರಾಟ ಆಗ್ತಿದ್ದ ಕಾರಣ ನಾ ಮುಂದು ತಾಮುಂದು ಎಂದು ಅಂಗಡಿ ಮುಂದೆ ನೂರಾರು ಯುವಕರು ಜಮಾಯಿಸಿದ್ದರು. ಒಂದು ರೂ ಕೊಟ್ಟು ಬೇಕಾದ ಟಿ ಶರ್ಟ್ ನ್ನ ಖರೀದಿಸಿ ತೆರೆಳಿದ್ದಾರೆ.

Read More

ಹುಬ್ಬಳ್ಳಿ: 2024 ರ ಹೊಸ ವರ್ಷದ ಸ್ವಾಗತಕ್ಕೆ  ಹುಬ್ಬಳ್ಳಿ  ಧಾರವಾಡ ಅವಳಿನಗರ ಸೇರಿದಂತೆ ಧಾರವಾಡ ಜಿಲ್ಲೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ‌.  ನಗರದ ಪ್ರಮುಖ ಹೋಟೆಲ್‌ಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೇಕರಿ ಅಂಗಡಿಗಳಲ್ಲಿ ತರಹೇವಾರಿ ಕೇಕ್‌ಗಳು ಸಿದ್ಧಗೊಂಡಿವೆ. ಈ ನಡುವೆ ಪೊಲೀಸ್‌ ಇಲಾಖೆ ಸಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಒಂದು ವರದಿ. 2023ರ ಕ್ಕೆ ವಿದಾಯಕ್ಕೆ ಕೇಲವೇ ಗಂಟೆಗಳು ಬಾಕಿ ಹೊಸ ವರ್ಷದ ಸ್ವಾಗತಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರು ಕಾತುರುದಿಂದ ಕಾಯತಾ ಇದ್ದಾರೆ. ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಟುಂಬದವರಿಗೆ, ಸ್ನೇಹಿತರ ಗುಂಪಿಗೆ, ಯುವ ಜೋಡಿಗಳಿಗೆ ಹಾಗೂ ವೈಯಕ್ತಿಕವಾಗಿ ಹೋಗುವ ವರಿಗೂ ಅವಕಾಶ ಕಲ್ಪಿಸಲಾಗಿದೆ. ಕೆಲ ಹೋಟೆಲ್‌ಗಳಲ್ಲಿ ಒಬ್ಬರಿಗೆ ₹1,2  ಹಾಗೂ  ₹3 ಸಾವಿರದವರೆಗೆ ಶುಲ್ಕ ನಿಗದಿಪಡಿಸಿ, ಊಟ ಹಾಗೂ ವಿವಿಧ ಭಕ್ಷ್ಯಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲ ಹೋಟೆಲ್‌ಗಳಲ್ಲಿ ಪ್ರವೇಶ ಶುಲ್ಕ ₹600–₹1000ದವರೆಗೆ…

Read More

ಹುಬ್ಬಳ್ಳಿ, : ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವದ ಟಾಪ್ ಮೂರನೇ ಸ್ಥಾನಕ್ಕೆ ಬರೋದು ಸನ್ನಿಹಿತವಾಗಿದೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷದಲ್ಲಿ ಭಾರತ ದೇಶ ಆರ್ಥಿಕತೆಯಲ್ಲಿ ವಿಶ್ವದ ಟಾಪ್ ಮೂರನೇ ರಾಷ್ಟ್ರವಾಗಲಿದೆ. ಈಗಾಗಲೇ ನಾವು ಟಾಪ್ ಐದನೇ ಸ್ಥಾನದಲ್ಲಿದ್ದೇವೆ. ಹೊಸ ವರ್ಷದಲ್ಲಿ ಟಾಪ್ ಮೂರನೇ ಸ್ಥಾನಕ್ಕೆ ಬರಲಿದ್ದೇವೆ. ಅದಾದ ನಂತರ ಹಂತ ಹಂತವಾಗಿ ವಿಶ್ವದಲ್ಲೇ ಭಾರತ ನಂಬರ್ ವನ್ ಸ್ಥಾನಕ್ಕೆ ಏರೋದು ಗ್ಯಾರಂಟಿ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಬಂಧನ ಪ್ರಕರಣದ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ಪ್ರತಾಪಸಿಂಹ ಜೊತೆ ನಾನು ಈ ಬಗ್ಗೆ ಮಾತನಾಡುವೆ, ಏನು ಅಂತ ವಿಚಾರ ತಿಳಿದುಕೊಳ್ಳುವೆ. ಆದರೆ ಇಷ್ಟು ದಿನ ಬಿಟ್ಟು ಈಗ ಯಾಕೆ ಅರೆಸ್ಟ್ ಮಾಡಿದ್ದಾರೆ? ಇದರ…

Read More

ಹುಬ್ಬಳ್ಳಿ: ಶಾಲಿಮಾರ್-ವಾಸ್ಕೋ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ 19.12 ಲಕ್ಷ ರೂ. ಮೌಲ್ಯದ 20 ಕೆಜಿ 270 ಗ್ರಾಂ ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗದಗದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದತ್ತ ಬರುತ್ತಿದ್ದ ರೈಲಿನಲ್ಲಿ ಡಿ. 28ರಂದು ತಪಾಸಣೆ ಮಾಡಿ ಎರಡು ಟ್ರ್ಯಾಲಿ ಬ್ಯಾಗ್‌ಗಳಲ್ಲಿದ್ದ 19 ಬಂಡಲ್‌ಗಳ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸಾಗಿಸುತ್ತಿದ್ದ ಆರೋಪಿತರು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ, : ಕೊರೊನಾ ಭೀತಿಯ ನಡುವೆಯೂ ನಗರದ ಜನರು ಅದ್ಧೂರಿಯಾಗಿ ಹೊಸ ವರ್ಷಾಚರಣೆಗೆ ಸಜ್ಜಾಗಿದ್ದಾರೆ. ಹುಬ್ಬಳ್ಳಿಯ ಅನೇಕ ಹೋಟೆಲ್‌ ಮತ್ತು ರೆಸ್ಟೋರೆಂಟ್​ಗಳು ವಿವಿಧ ಥೀಮ್‌ಗಳೊಂದಿಗೆ ಸ್ಮರಣೀಯ ಈವೆಂಟ್‌ಗಳನ್ನು ಆಯೋಜಿಸುತ್ತಿವೆ. ಮತ್ತು ಈವೆಂಟ್​ಗಳಲ್ಲಿ ಪಾಲ್ಗೊಳ್ಳುವವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಕೆಲವು ಹೋಟೆಲ್‌ಗಳು ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸದಿರಲು ನಿರ್ಧರಿಸಿವೆ. ಹೊಸ ವರ್ಷಾಚರಣೆಗೆ ನಗರ ಪೊಲೀಸರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾತ್ರಿ 10 ಗಂಟೆಯ ನಂತರ ಯಾವುದೇ ಸಂಗೀತ ಕಾರ್ಯಕ್ರಮ ನಡೆಸಬಾರದು. ಮತ್ತು ಎಲ್ಲಾ ಆಚರಣೆಗಳು ರಾತ್ರಿ 12 ಗಂಟೆಯೊಳಗೆ ಮುಕ್ತಾಯ ಗೊಳ್ಳಬೇಕು ಎಂದು ಹೊಟೇಲ್​, ಬಾರ್​, ರೆಸ್ಟೋರೆಂಟ್​​ ಮತ್ತು ಪಬ್​ಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಸೂಚಿಸಿದ್ದಾರೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ಸಂಪ್ರದಾಯವನ್ನು ಮುಂದುವರಿಸಲು ಮತ್ತು ಅದನ್ನು ಸ್ಮರಣೀಯವಾಗಿಸಲು ನಗರದ ಕೆಲವು ಹೋಟೆಲ್‌ಗಳು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಹುಬ್ಬಳ್ಳಿಯ ದಿ ಫರ್ನ್ ರೆಸಿಡೆನ್ಸಿಯ ಮಾರಾಟ ವ್ಯವಸ್ಥಾಪಕ ಮಹಾಂತೇಶ ಕುಲಕರ್ಣಿ ಅವರು ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕೊಲ್ಲಾಪುರ ಮತ್ತು ಇತರ ಸ್ಥಳಗಳಿಂದ ವೃತ್ತಿಪರ…

Read More

ಹುಬ್ಬಳ್ಳಿ: ಆರ್.ಬಿ. ಕ್ಯಾಪಿಟಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಗರದ ಉದ್ಯಮಿ ಸುರೇಶ ಜಿಗಳೂರ ಅವರನ್ನು ನಂಬಿಸಿದ ವ್ಯಕ್ತಿ, ಅವರಿಂದ ₹5.47 ಕೋಟಿ ಪಡೆದು ವಂಚಿಸಿದ್ದಾನೆ. ಉದ್ಯಮಿ ಸುರೇಶ ಅವರಿಗೆ ಮಂಗ್ಲೇಶ ಎಂಬುವವರಿಂದ ಪುಣೆಯ ರಿಷಿಕೇಶ ಹಾಗೂ ಯೋಗೇಶ ಬೋಸ್ಲೆ ಎಂಬುವರು ಪರಿಚಯವಾಗಿದ್ದರು. ಅವರು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ 20ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅವರು ₹3.87 ಕೋಟಿ ಹಾಗೂ ₹1.60 ಕೋಟಿ ನಗದು ನೀಡಿ ವಂಚನೆಗೊಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಾಮರಾಜನಗರ: ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ಹಿಂದೂ ಸಂಘಟನೆ ಯುವಕರು ರಕ್ಷಿಸಿರುವ ಘಟನೆ ಚಾಮರಾಜನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ನಡೆದಿದೆ. ಅಕ್ರಮವಾಗಿ ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಭಜರಂಗದಳ, ಯುವ ಬ್ರಿಗೆಡ್ ನ ಕಾರ್ಯಕರ್ತರು ಸಂತೇಮರಹಳ್ಳಿ ರಸ್ತೆಯಲ್ಲಿ ವಾಹನವನ್ನು ತಡೆದು 9 ಹಸುಗಳನ್ನು ರಕ್ಷಣೆ ಮಾಡಿದ್ದಾರೆ. ತಮಿಳುನಾಡಿನ ತಾಳವಾಡಿಯಿಂದ ಕೊಳ್ಳೇಗಾಲಕ್ಕೆ ಗೂಡ್ಸ್ ಆಟೋದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಈ ಸಾಗಾಟ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು,  ಸದ್ಯ ಜಾನುವಾರುಗಳು ಮತ್ತು ಗೂಡ್ಸ್ ಆಟೋ ಚಾಲಕನನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More