Author: AIN Author

ಕೆನಡಾ ಮೂಲದ ದರೋಡೆಕೋರ (Canada-Based Gangster) ಲಖ್ಬೀರ್ ಸಿಂಗ್ ಲಾಂಡಾನನ್ನ ಭಯೋತ್ಪಾದಕ ಎಂದು ಭಾರತದ ಕೇಂದ್ರ ಗೃಹ ಸಚಿವಾಲಯ (MHA) ಘೋಷಿಸಿದ್ದು, ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಮಾಹಿತಿ ಪ್ರಕಾರ, 1989ರಲ್ಲಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಜನಿಸಿದ ಲಾಂಡಾ (Lakhbir Singh Land) 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ. ಕೆಲ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಖಲಿಸ್ತಾನಿ ಗ್ರೂಪ್ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಗೆ ಸೇರಿದ್ದಾನೆ. 2021ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ (Punjab Police) ಇಂಟೆಲಿಜೆನ್ಸ್ ಮುಖ್ಯಕಚೇರಿ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಈತ ಭಾಗಿಯಾಗಿದ್ದನು ಎಂದು ವಿವರಿಸಲಾಗಿದೆ.  https://ainlivenews.com/16-days-bank-holiday-in-january-2024/ ಅಲ್ಲದೇ ಈತ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್‌ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಘಟಕಗಳಿಗೆ ಸುಧಾರಿತ ಸ್ಫೋಟಕ ಸಾಧನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಪೂರೈಕೆ ಮಾಡುತ್ತಿದ್ದ. ಪಂಜಾಬ್‌ನಲ್ಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಹಣ ಪೂರೈಕೆ ಮಾಡುತ್ತಿದ್ದ.…

Read More

ನವದೆಹಲಿ:- ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಭಾರತ ಸೇರಿ ವಿಶ್ವದಾದ್ಯಂತ ಸಂಭ್ರಮಾಚಾರಣೆ ಮುಗಿಲು ಮುಟ್ಟಿತ್ತು. ಭಾರತವು ಸೇರಿದಂತೆ ವಿಶ್ವದಾದ್ಯಂತ ಜನರು 2023ಕ್ಕೆ ವಿದಾಯ ಹೇಳಿ 2024 ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಮೋಜು ಮಸ್ತಿಯಲ್ಲಿ ತೊಡಗಿ ಯುವ ಜನತೆ ಹುಚ್ಚೆದ್ದು ಕುಣಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಬೆಂಗಳೂರು, ದಿಲ್ಲಿ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಂಭ್ರಮದ ಕೇಕೆ ಮುಗಿಲು ಮುಟ್ಟಿತ್ತು. ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ಗಲಾಟೆಗಳು ನಡೆದ ಬಗ್ಗೆ ವರದಿಯಾಗಿವೆ. ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಹಲವರು ಗಣ್ಯರು ಎಕ್ಸ್‌ ವೇದಿಕೆಯಲ್ಲಿ ಹೊಸ ವರ್ಷದ ಆಗಮನದ ಶುಭಾಶಯಗಳನ್ನು ಕೋರಿದರು. ಅವರ ಟ್ವೀಟ್‌ಗಳು ಸಾಕಷ್ಟು ವೈರಲ್ ಕೂಡಾ ಆದವು. ಹಾಂಕಾಂಗ್, ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಭರ್ಜರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು.

Read More

ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರು ಇತ್ತೀಚೆಗೆ ಸಾಫ್ಟ್‌ಬ್ಯಾಂಕ್-ಬೆಂಬಲಿತ ಸಂಸ್ಥೆ ಫಸ್ಟ್‌ಕ್ರೈ, ತಾಯಿ ಮತ್ತು ಮಗುವಿನ ಉತ್ಪನ್ನಗಳ ಭಾರತದ ಪ್ರಮುಖ ಓಮ್ನಿಚಾನಲ್ ರಿಟೇಲರ್‌ನಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. IPO-ಬೌಂಡ್ ಕಂಪನಿಯ ಅತಿದೊಡ್ಡ ಷೇರುದಾರರು, ಸಾಫ್ಟ್‌ಬ್ಯಾಂಕ್ ವಿಷನ್ ಫಂಡ್, ಸಂಸ್ಥೆಯಲ್ಲಿ ಹೆಚ್ಚುವರಿ ಷೇರುಗಳನ್ನು ಮಾರಾಟ ಮಾಡಿದೆ, ಇದರಿಂದಾಗಿ ಹೆಚ್ಚಿನ ಕುಟುಂಬ ಕಚೇರಿಗಳು ಮತ್ತು ವ್ಯಕ್ತಿಗಳು FirstCry ನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಿಸುತ್ತದೆ. ಇದು ಮುಂದಿನ ವರ್ಷದಲ್ಲಿ ನಿರೀಕ್ಷಿತ ಸಾರ್ವಜನಿಕ ಕೊಡುಗೆಯ ಮೊದಲು ಒಟ್ಟು ದ್ವಿತೀಯ ಷೇರು ಮಾರಾಟವನ್ನು 1,000 ಕೋಟಿ ರೂ.ಗಿಂತ ಹೆಚ್ಚಿನ ಫಸ್ಟ್‌ಕ್ರೈಗೆ ತೆಗೆದುಕೊಳ್ಳುತ್ತದೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ ಜನರು, ಸಾಫ್ಟ್‌ಬ್ಯಾಂಕ್ ಒಟ್ಟು ರೂ 600 ಕೋಟಿಗೆ ಷೇರುಗಳನ್ನು ಮಾರಾಟ ಮಾಡಿದೆ, ಕಂಪನಿಯಲ್ಲಿ ಅದರ ಹಿಡುವಳಿ ಶೇಕಡಾ 25 ಕ್ಕಿಂತ ಕಡಿಮೆಯಾಗಿದೆ. ಮಸಯೋಶಿ ಸನ್ ನೇತೃತ್ವದ ತಂತ್ರಜ್ಞಾನ ಹೂಡಿಕೆದಾರರು ಒಂದೆರಡು ವರ್ಷಗಳ ಹಿಂದೆ ಸುಮಾರು 29-30 ಪ್ರತಿಶತದಷ್ಟು ಹಿಡುವಳಿಯನ್ನು ಕಡಿಮೆ ಮಾಡಿದ್ದಾರೆ.…

Read More

ಬೆಂಗಳೂರು:- ಕುಡಿದ ಮತ್ತಿನಲ್ಲಿ ಕಿರಿಕ್ ತೆಗೆದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್ ಬಳಿ ಜರುಗಿದೆ. ಯುವಕ ಶರ್ಟ್ ಹರಿದು ಹಾಕಿ ಹಲ್ಲೆ ನಡೆಸಲಾಗಿದ್ದು, ರಸ್ತೆ ಬದಿಯಲ್ಲಿ ಅರೆಬೆತ್ತಲೆಯಾಗಿ ಯುವಕ ಬಿದ್ದಿದ್ದಾನೆ. ಹಲ್ಲೆಗೊಳಗಾಗಿದ್ದ ಯುವಕನು ಸಹ ಫುಲ್ ಕುಡಿದು ಟೈಟ್ ಆಗಿದ್ದ ಎನ್ನಲಾಗಿದೆ. ಇನ್ನೂ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಲ್ಲೆಗೊಳಗಾಗಿ ಬಿದ್ದಿದ್ದ ಯುವಕನನ್ನ ಆಂಬ್ಯುಲೇನ್ಸ್ ಮೂಲಕ ರವಾನೆ ಮಾಡಲಾಗಿದೆ.

Read More

ಬೆಂಗಳೂರು:- ಫ್ಲೈ ಓವರ್ ಮೇಲೆ ಹೋಗಲು ಕಾರು ಸವಾರನ ಭಾರೀ ಹೈಡ್ರಾಮ ನಡೆಸಿರುವ ಘಟನೆ ಜರುಗಿದೆ. ಶಾಸಕರ ಬೋರ್ಡ್ ಹಾಕಿಕೊಂಡು ಸವಾರರು ಬಂದಿದ್ದು, ಹಾರ್ಟ್ ಪೇಷಂಟ್ ಇದ್ದಾರೆ ಎಮರ್ಜೆನ್ಸಿ ಹೋಗಬೇಕೆಂದು ಹೈಡ್ರಾಮ ಮಾಡಿದ್ದಾರೆ. ಕಾರಿನಲ್ಲಿ ಹಾರ್ಟ್ ಪೇಷಂಟ್ ಮಹಿಳೆ ಇದ್ದಾರೆಂದು ಕಥೆ ಕಟ್ಟಿದ್ದರು. ಕಾರಿನಲ್ಲಿ ಪರಿಶೀಲನೆ ನಡೆಸಿದ್ರೆ ಮಹಿಳೆ ಇರಲಿಲ್ಲ. ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ಆಸಾಮಿ ಶಾಸಕರ ಬೋರ್ಡ್ ತೆಗೆದಿರುವ ದೃಶ್ಯ ಕಂಡು ಬಂದಿದೆ.

Read More

ಬೆಂಗಳೂರು:- ನಗರದ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಭಾನುವಾರ ಮಧ್ಯರಾತ್ರಿ ಬರಮಾಡಿಕೊಂಡರು. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ನ ಪಬ್‌ಗಳು, ಹೋಟೆಲ್‌ಗಳು ತುಂಬಿ ತುಳುಕಿದವು. ಇನ್ನು ರಸ್ತೆಗಳಲ್ಲಿ ಯುವಕ-ಯುವತಿಯರು ರಾತ್ರಿಯಿಡೀ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್‌ ನಿಷೇಧ ಮಾಡಲಾಗಿತ್ತು. ಬ್ರಿಗೇಡ್ ರಸ್ತೆಯಲ್ಲಿ ತಳ್ಳಾಟ ನೂಕಾಟ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸಿಕ್ಕಿಬಿದ್ದ ಮೊಬೈಲ್‌ ಕಳ್ಳ ಬ್ರಿಗೇಡ್ ರಸ್ತೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದವನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕುಡಿದು ಮೊಬೈಲ್ ಕಳ್ಳತನಕ್ಕೆ ಕಳ್ಳ ಯತ್ನಿಸಿದ್ದಾನೆ. ಹೀಗಾಗಿ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಆತ ತನ್ನನ್ನು ಬಿಟ್ಟುಬಿಡುವಂತೆ ಕೈಮುಗಿದು ಬೇಡಿಕೊಂಡಿದ್ದು ಕಂಡುಬಂತು. ನಂತರ ಆತನಿಂದ…

Read More

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಗೆ (Ayodhya) ಬರಲು ಮನಸ್ಸು ಮಾಡಬೇಡಿ. ಜ.22ರ ನಂತರ ದೇವನಗರಿಗೆ ಭೇಟಿ ನೀಡಿ ಎಂದು ರಾಮ ಭಕ್ತರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿನಂತಿ ಮಾಡಿದ್ದಾರೆ. ಪ್ರಧಾನಿ ಮೋದಿ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜನವರಿ 22ರಂದು ನಡೆಯುವ ಕಾರ್ಯಕ್ರಮದ ಭಾಗವಾಗಲು ಪ್ರತಿಯೊಬ್ಬರೂ ಅಯೋಧ್ಯೆಗೆ (Ayodhya) ಬರಲು ಬಯಸುತ್ತಾರೆ. https://ainlivenews.com/16-days-bank-holiday-in-january-2024/ ಆದ್ರೆ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂಬುದು ನಿಮಗೂ ತಿಳಿದಿದೆ. ನಾನು ನಿಮ್ಮೆಲ್ಲರಿಗೂ ವಿನಂತಿ ಮಾಡ್ತೀನಿ. ಆದಿನ ಔಪಚಾರಿಕ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ನೀವು ಒಂದು ವಾರ ಬಿಟ್ಟು, ತಿಂಗಳು ಬಿಟ್ಟು ಅಥವಾ ವರ್ಷ ಬಿಟ್ಟು ಬಂದರೂ ರಾಮಮಂದಿರ ನಿಮಗಾಗಿ ಕಾದಿರುತ್ತದೆ. ಜ.22ರ ನಂತರ ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಅಯೋಧ್ಯೆಗೆ ಬರಬಹುದು. ಆದ್ರೆ ಅಂದು ಮಾತ್ರ ಅಯೋಧ್ಯೆಗೆ ಬರಲು ಮನಸ್ಸು ಮಾಡಬೇಡಿ ಎಂದು ರಾಮ ಭಕ್ತರಿಗೆ ವಿನಂತಿಸುತ್ತೇನೆ ಎಂದು ತಿಳಿಸಿದರು. ಇಡೀ ವಿಶ್ವವೇ ಆ ಕ್ಷಣಕ್ಕಾಗಿ ಕಾಯುತ್ತಿದೆ: ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ…

Read More

ಕಲಬುರಗಿ:- ಕಲಬುರಗಿ ಜನತೆ ಹೊಸ ವರ್ಷವನ್ನ ಅದ್ದೂರಿಯಾಗಿ ವೆಲ್ ಕಮ್ ಮಾಡಿದ್ದಾರೆ. ನಿನ್ನೆ ನಗರದ ಹೋಟೆಲ್ ಗಳಲ್ಲಿ ನ್ಯೂ ಇಯರ್ ಸೆಲೆಬ್ರಷನ್ ಇವೆಂಟ್ ಜೋರಾಗಿತ್ತು. ಸಂಭ್ರಮದಲ್ಲಿ ಮಿಂದೇಳಲು ಜನ ಗುಂಪು ಗುಂಪಾಗಿ ಫ್ಯಾಮಿಲಿ ಜೊತೆ ಆಗಮಿಸಿ ಎಂಜಾಯ್ ಮಾಡಿದ್ದಾರೆ. ಹೋಟೆಲ್ ನಲ್ಲಿ ಕಲರ್ ಫುಲ್ ಲೈಟಿಂಗ್ ಜೊತೆಗೆ ಹಾಡು ನೃತ್ಯ ವೇದಿಕೆಯಲ್ಲಿ ಮೇಳೈಸಿದೆ.

Read More

ಬಳ್ಳಾರಿ:- ಕ್ಷುಲ್ಲಕ ಕಾರಣಕ್ಕೆ ಒರ್ವನ ಕೊಲೆ ನಡೆದಿದ್ದು, ಘಟನೆಯಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಬಳ್ಳಾರಿ ನಗರದ ವಡ್ಡರ ಬಂಡಿಯಲ್ಲಿ ನಡೆದ ಘಟನೆ ಜರುಗಿದೆ. ಕೇಕ್ ತರಲು ಬೇಕರಿಗೆ ಬಂದಿದ್ದ ಸೈದುಲ್ಲ ಎಂಬುವ ಯುವಕನ ಕೊಲೆ ನಡೆದಿದೆ. ಹೊಸ ವರ್ಷದ ಆಚರಣೆಗೆ ಕೇಕ್ ತರಲು ಸೈದುಲ್ಲ ಬಂದಿದ್ದ. ಈ ವೇಳೆ ಸೈದುಲ್ಲ ಹಾಗೂ ಇತರೆ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಸೈದುಲ್ಲ(24) ಕೊಲೆ ಆಗಿದ್ದು, ಮತ್ತೋರ್ವ ಯುವಕನಿಗೆ ಗಾಯವಾಗಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಬ್ರೂಸ್ ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Read More

ಗದಗ:- ನೂತನ ವರ್ಷವನ್ನು ರಾಜ್ಯದಾದ್ಯಂತ ಭರ್ಜರಿಯಾಗಿ ವೆಲ್ಕಂ ಮಾಡಿದ್ದಾರೆ. ಅದರಂತೆ ಹೊಸ ವರ್ಷಾಚರಣೆಗೆ ಗದಗ್ ನಲ್ಲೂ ಕೂಡ ಭರ್ಜರಿಯಾಗಿ ನಡೆದಿದೆ. ಮಧ್ಯರಾತ್ರಿ ನ್ಯೂ ಇಯರ್ ಬರಮಾಡಿ ಬರಮಾಡಿಕೊಳ್ಳಲು ಕೇಕ್ ಕೊಳ್ಳಲು ಜನತೆ ಮುಗಿಬಿದ್ದಿದ್ದರು. ಗದಗ ನಗರದ ಬೇಕರಿಗಳೆಲ್ಲಾ ಫುಲ್ ರಶ್ ಆಗಿತ್ತು. ರಾತ್ರಿ 10.30 ಆದ್ರೂ ಕೇಕ್ ಕೊಳ್ಳಲು ಜನತೆ ಮುಗಿಬಿದ್ದಿದ್ದರು. ತರಹೇವಾರಿ ಕೇಕ್ ಖರೀದಿಸಿ ಮನೆಗೆ ಕೊಂಡೊಯ್ಯುವ ಮೂಲಕ ಸಂಭ್ರಮದ ಹೊಸ ವರ್ಷಾಚರಣೆಗೆ ಆಚರಣೆ ಮಾಡಿದ್ದಾರೆ.

Read More