Author: AIN Author

ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ವೆಬ್ ಬ್ರೌಸರ್ನಲ್ಲಿ ಸರ್ಚ್ ಮಾಡಿದ್ದು, ನೋಡಿದ್ದು ಯಾವುದು ಸಹ ಹಿಸ್ಟರಿಯಲ್ಲಿ ಉಳಿಯಬಾರದು, ವೆಬ್ ಬ್ರೌಸರ್ ಸೇವೆ ನೀಡುವವರು ಸಹ ಈ ಡಾಟಾವನ್ನು ಬಳಕೆ ಮಾಡಬಾರದು, ಬಳಕೆದಾರರ ಈ ರೀತಿಯ ಯಾವುದೇ ಡಾಟಾವು ಆನ್ಲೈನ್ನಲ್ಲಿ ಯಾರಿಗೂ ಸಿಗಬಾರದು, ಭೇಟಿ ನೀಡಿದ ವೆಬ್ಪೇಜ್ಗಳ ರೆಕಾರ್ಡ್ ಸಂಪೂರ್ಣ ಖಾಸಗಿ ಆಗಿರಬೇಕು, ಯಾರಿಗೂ ಗೊತ್ತಾಗಬಾರದು ಎಂದರೆ ವೆಬ್ ಬ್ರೌಸರ್ನಲ್ಲಿ ಇನ್ಕಾಗ್ನಿಟೊ ಮೋಡ್ ಎಂಬ ಸೆಟ್ಟಿಂಗ್ ಅನ್ನು ಬಳಕೆ ಮಾಡಬೇಕು ಎನ್ನುತ್ತಾರೆ ಹಲವರು. ಹಾಗಿದ್ರೆ ಇದು ಸಂಪೂರ್ಣ ಖಾಸಗಿಯೇ, 100% ಯಾರಿಗೂ ಈ ಡಾಟಾ ಮಾಹಿತಿ ಸಿಗುವುದಿಲ್ಲವೇ ಎಂಬುದು ಹಲವರ ಪ್ರಶ್ನೆ. ಇದಕ್ಕೆ ಉತ್ತರವನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ ಗೂಗಲ್ನ ಇನ್ಕಾಗ್ನಿಟೊ ಮೋಡ್ ಎಂದರೇನು? ಇದು ಖಂಡಿತ ಸಂಪೂರ್ಣ ಖಾಸಗಿಯೇ? ಗೂಗಲ್ ಪ್ರಕಾರ ಪ್ರಪಂಚದಾದ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಕ್ರೋಮ್ ಬ್ರೌಸರ್ನಲ್ಲಿನ ‘ಇನ್ಕಾಗ್ನಿಟೊ ಮೋಡ್’ ಬಳಕೆದಾರರಿಗೆ ವೆಬ್ ಟ್ರ್ಯಾಕಿಂಗ್ ಕುಕೀಸ್ಗಳಿಂದ ಸ್ವತಂತ್ರವಾಗಿ ಹಾಗೂ ಇಂಟರ್ನೆಟ್ ಬಳಕೆಯ ಹಿಸ್ಟರಿಯು ಉಳಿಯದಂತೆ ಬಳಸುವ ಫೀಚರ್ ಅನ್ನು ಆಫರ್…

Read More

ಕಳೆದ ಕೊರೊನಾ ಲಾಕ್‌ಡೌನ್‌ ಸಮಯಕ್ಕೆ ಆರಂಭವಾದ “ವರ್ಕ್‌ ಫ್ರಂ ಹೋಮ್‌” ಇಂದಿಗೂ ಕೂಡ ಸಾಕಷ್ಟು ಕಡೆಗಳಲ್ಲಿ ಪ್ರಚಲಿತದಲ್ಲಿದೆ. ಇಲ್ಲಿದೆ ಈ ಸಮಯದ್ಲಿ ಆರೋಗ್ಯ ಕಾಯ್ದುಕೊಳ್ಳಲು ಸಲಹೆಗಳು ಮನೆಯಿಂದ ಕೆಲಸ ಮಾಡುವುದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಮನೆಯಿಂದ ಕೆಲಸ ಮಾಡುವುದು, ನಾವು ವಿಶ್ರಾಂತಿ ಪಡೆಯುವ ಸ್ಥಳವು ಅದರ ವಿಶಿಷ್ಟವಾದ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಸವಾಲುಗಳನ್ನು ಒಡ್ಡುತ್ತದೆ ಏಕೆಂದರೆ ಕೆಲಸ ಮಾಡಲು ಮನೆಯಲ್ಲಿಯೇ ಇರುವ ಮೂಲಕ, ನಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವಿನ ಗೆರೆಗಳನ್ನು ನಾವು ಮಸುಕುಗೊಳಿಸುತ್ತೇವೆ. ಇದು ಕೆಲಸ ಮಾಡಲು ಮತ್ತು ಅದರ ಮೇಲೆ ಕೇಂದ್ರೀಕರಿಸಲು ಪ್ರೇರಣೆಯನ್ನು ಕಂಡುಹಿಡಿಯುವುದು ನಂಬಲಾಗದಷ್ಟು ಕಷ್ಟಕರವಾಗಿಸುತ್ತದೆ. ಕಾರ್ಯಸ್ಥಳದ ಕ್ಷೇಮವು ಉದ್ಯೋಗಿಗಳಲ್ಲಿ ಆರೋಗ್ಯಕರ ನಡವಳಿಕೆಯನ್ನು ಬೆಂಬಲಿಸಲು ಮತ್ತು ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಯಾವುದೇ ಕಾರ್ಯಸ್ಥಳದ ಆರೋಗ್ಯ ಪ್ರಚಾರ ಚಟುವಟಿಕೆ ಅಥವಾ ಸಾಂಸ್ಥಿಕ ನೀತಿಯ ಪರಿಕಲ್ಪನೆಯಾಗಿದೆ. ನಮ್ಮ ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಕೆಲಸ-ಸಂಬಂಧಿತ ಒತ್ತಡದ ಪ್ರಭಾವದ ಮೇಲೆ ನಡೆಸಿದ ಸಂಶೋಧನೆಯಿಂದಾಗಿ ಕೆಲಸದ…

Read More

ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರಾವಧಿಯಲ್ಲಿ 40 ಸಾವಿರ ಕೋಟಿ ರು. ಕೋವಿಡ್‌ ಹಗರಣ ನಡೆದಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪ ಆಡಳಿತ ಮತ್ತು ಪ್ರತಿಪಕ್ಷ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿರುವ ನಡುವೆಯೇ, ಈ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ. ಜತೆಗೆ, ಆರೋಪಕ್ಕೆ ಗುರಿಯಾಗಿರುವವರು ಯಡಿಯೂರಪ್ಪ ಅವರು ಎಂಬ ಮುಲಾಜೂ ನೋಡದೆ ತನಿಖೆ ನಡೆಯಲಿ ಎಂದು ಹೇಳಿದ್ದಾರೆ. https://ainlivenews.com/16-days-bank-holiday-in-january-2024/ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆರೋಪದಲ್ಲಿ ಗಂಭೀರತೆ ಇದ್ದರೆ ಮಾತ್ರ ಅದಕ್ಕೆ ಪ್ರತಿಕ್ರಿಯಿಸಬೇಕು. ಆದರೆ ಯಡಿಯೂರಪ್ಪ ಅವರ ಮೇಲೆ ಯತ್ನಾಳ ಮಾಡಿರುವ ಕೋವಿಡ್ ಹಗರಣದ ಆರೋಪ ಸತ್ಯಕ್ಕೆ ದೂರವಾದದ್ದು. ಇಂಥ ಹುಡುಗಾಟಿಕೆ ಆರೋಪಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಆರೋಪ ಮಾಡಿದವರು ಸೂಕ್ತ ದಾಖಲೆಗಳನ್ನೂ ಕೊಡಲಿ ಎಂದು ಯತ್ನಾಳ್‌ಗೆ ತಿರುಗೇಟು ನೀಡಿದರು.

Read More

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲಿದ್ದಾರೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಯನ್ನು ಹಾಡಿ ಹೊಗಳಿದರು. ಜನವರಿ 22 ರಂದು ಭಗವಾನ್ ಶ್ರೀರಾಮನು ತನ್ನ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಸೀನನಾಗಲಿದ್ದಾನೆ. ಈ ಮೂಲಕ ಸುಮಾರು 500 ವರ್ಷಗಳ ಕಾಯುವಿಕೆ ಕೊನೆಗೊಳ್ಳಲಿದೆ ಎಂದರು. ಭಗವಂತನ ಆಗಮನದ ಮೊದಲು ಅಯೋಧ್ಯೆಯನ್ನು (Ayodhya Ram Mandir) ವಿಶ್ವದ ಅತ್ಯಂತ ಸುಂದರವಾದ ನಗರವನ್ನಾಗಿ ಸ್ಥಾಪಿಸಲು ಪ್ರಧಾನಿ ಸಂಕಲ್ಪ ಮಾಡಿದ್ದರು. ಅದರಂತೆ ಇಂದು ವಿವಿಧ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. https://ainlivenews.com/16-days-bank-holiday-in-january-2024/ ಅಯೋಧ್ಯೆಯ ಜನರು ಪ್ರಧಾನಿಯನ್ನು ಸ್ವಾಗತಿಸಿರುವ ರೀತಿ ನಾವೆಲ್ಲರೂ ನವ ಭಾರತದ ಹೊಸ ಅಯೋಧ್ಯೆಯನ್ನು ನೋಡುವಂತೆ ಮಾಡುತ್ತದೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮೋದಿಯವರು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು ಅಯೋಧ್ಯೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳುತ್ತಾ ಯೋಗಿ ಆದಿತ್ಯನಾಥ್‌ ಅವರು ಪ್ರಧಾನಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.

Read More

ನಮ್ಮ ದೈನಂದಿನ ಬಹುತೇಕ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ ನೆರವಾಗುತ್ತದೆ. ಹೀಗೆ ನಿರಂತರ ಸ್ಮಾರ್ಟ್ ಫೋನ್ ಬಳಕೆ ಸಹಜವಾಗಿಯೇ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಹೀಗಾಗಿ, ಆಗಾಗ ಬ್ಯಾಟರಿ ಚಾರ್ಜ್ ಕೂಡಾ ಮಾಡುತ್ತಲೇ ಇರಬೇಕಾಗುತ್ತದೆ. ಹೀಗೆ ನಿರಂತರ ಬಳಕೆಯಿಂದ ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ನಲ್ಲಿ ಕೊಳಕು, ಧೂಳುಗಳು ಕಾಣಿಸಿಕೊಳ್ಳುತ್ತವೆ. ಬರೀ ಅಷ್ಟೇ ಅಲ್ಲ, ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳೂ ಸ್ಕ್ರೀನ್‌ ಮೇಲೆ ಕುಳಿತುಕೊಳ್ಳುತ್ತವೆ. ಹೀಗಾಗಿ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಗಳನ್ನು ಸ್ವಚ್ಛವಾಗಿಟ್ಟುಕೊಟ್ಟುಕೊಳ್ಳುವುದೂ ಬಹಳ ಅಗತ್ಯ. ಸ್ವಚ್ಛ ಸ್ಮಾರ್ಟ್‌ಫೋನ್ ಸ್ಕ್ರೀನ್ ಬರೀ ಡಿಸ್‌ಪ್ಲೇಯನ್ನು ಹೊಳೆಯುವಂತೆ ಮಾಡುವುದಿಲ್ಲ, ಇದು ನಮ್ಮ ನೈರ್ಮಲ್ಯಕ್ಕೂ ಅಗತ್ಯವಾಗಿದೆ. ಆದರೆ, ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್ ಸ್ವಚ್ಛಗೊಳಿಸುವಾಗಲೂ ಕೆಲವೊಂದು ಸಂಗತಿಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಂತಹ ಕೆಲ ಪ್ರಮುಖ ಅಂಶಗಳ ಬಗ್ಗೆ ನಾವಿಲ್ಲಿ ನೋಡೋಣ. ಮೈಕ್ರೋಫೈಬರ್ ಬಟ್ಟೆ : ಸ್ಮಾರ್ಟ್‌ಸ್ಕ್ರೀನ್ ಸ್ವಚ್ಛಗೊಳಿಸಲು ಈ ಬಟ್ಟೆಗಳು ಸೂಕ್ತ. ಮೈಕ್ರೋಫೈಬರ್‌ನ ಸೌಮ್ಯವಾದ ಫೈಬರ್‌ಗಳು ಪರದೆಯನ್ನು ಸ್ಕ್ರಾಚ್ ಮಾಡದೆಯೇ ಧೂಳು ಮತ್ತು ಬೆರಳಚ್ಚುಗಳನ್ನು ಪರಿಣಾಮಕಾರಿಯಾಗಿ ತೆಗೆಯುತ್ತವೆ. ಡಿಸ್ಟಿಲ್ಡ್ ವಾಟರ್ : ನೀರಿನ ಬದಲು ಡಿಸ್ಟಿಲ್ಡ್ ವಾಟರ್‌ ಅನ್ನು ಬಳಸಬಹುದು. ನೀರಿನ…

Read More

ಚಿಕ್ಕಬಳ್ಳಾಪುರ:- ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್‌ನ ರಕ್ತದಲ್ಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ರಕ್ತದ ಕಣದಲ್ಲೂ ಹಿಂದೂ ವಿರೋಧಿ ಭಾವನೆ ಇದೆ ಎಂದರು. ಸಿದ್ದರಾಮಯ್ಯ ಮುಸ್ಲಿಮರಿಗೆ 11 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಮಾಡಿದರು, ಶಾದಿ ಭಾಗ್ಯ ತಂದರು. ಅವರು ಹಿಂದೂ ವಿರೋಧಿ. ಅದಕ್ಕಾಗಿಯೇ ಇದೆಲ್ಲಾ ಮಾಡಿದ್ದಾರೆ ಎಂದರು. ಶ್ರೀರಾಮ ಈ ಆದರ್ಶ ಪುರುಷ. ಕಳೆದ 30 ವರ್ಷಗಳಿಂದಲೂ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸುತ್ತಿದ್ದೆವು. ಆ ಪ್ರಕಾರ ಮಂದಿರ ಕಟ್ಟಿದ್ದೇವೆ. ಮಂದಿರ ಕಟ್ಟುವುದಷ್ಟೇ ಅಲ್ಲ ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದು ಬಿಜೆಪಿ ನಿಲುವು ಮತ್ತು ನಮ್ಮ ಗುರಿ ಎಂದರು. ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್‌ನ ರಕ್ತದಲ್ಲಿದೆ. ಕಾಂಗ್ರೆಸ್ ನವರಿಂದ ಹೆಚ್ಚಿಗೆ ಏನೂ ಬಯಸುವುದಿಲ್ಲ. ರಾಮ ಅನ್ನೋದು ಅವರ ಜನ್ಮದಲ್ಲೇ ಬರಲ್ಲ. ಅವರು ಟಿಪ್ಪು ಸಂಸ್ಕೃತಿಯವರು. ರಾಮಜಪ ಮಾಡಿದ ಕಾರಣಕ್ಕೆ ನಾವು ರಾಮಮಂದಿರ ನಿರ್ಮಿಸಿದೇವೆ.…

Read More

ಬೆಂಗಳೂರು ಬುಲ್ಸ್​, ಹೊಸ ವರ್ಷಕ್ಕೆ ಉಡುಗೊರೆ ನೀಡಿದೆ. ಸತತ 2 ಸೋಲುಗಳ ನಂತರ ಮತ್ತೆ ಲಯಕ್ಕೆ ಮರಳಿದೆ. ಅಲ್ಲದೆ, 10ನೇ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಬುಲ್ಸ್​, 6ನೇ ಲಗ್ಗೆಯಿಟ್ಟಿದೆ. ತಮಿಳ್ ತಲೈವಾಸ್ ವಿರುದ್ಧ 37-38 ಅಂಕಗಳಿಂದ ರಣರೋಚಕ ಗೆಲುವು ಸಾಧಿಸಿದೆ. ಶಾಹೀದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣದಲ್ಲಿ ಜರುಗಿದ ಲೀಗ್​​ನ 50ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ಅದ್ಭುತ ಹೋರಾಟ ನಡೆಸಿತು. ತಮಿಳ್ ತಂಡ ನೀಡಿದ ಪ್ರಬಲ ಹೋರಾಟದ ನಡುವೆ ಮೈಕೊಡವಿ ನಿಂತ ಗೂಳಿಗಳು ಲೀಗ್​ನಲ್ಲಿ 4ನೇ ಜಯದ ನಗೆ ಬೀರಿದರು. ಒಂದು ಹಂತದಲ್ಲಿ ಸೋಲುವ ಭೀತಿಗೆ ಒಳಗಾಗಿದ್ದ ಬುಲ್ಸ್, ನಂತರ ಬಲವಾಗಿ ಪುನರಾಗಮನ ಮಾಡಿ ಎದುರಾಳಿ ಆಘಾತ ನೀಡಿತು. ಬೆಂಗಳೂರು ಪರ ಭರತ್ ಮತ್ತೆ ಮಿಂಚಿದರು. 4 ಬೋನಸ್ ಸೇರಿ 9 ರೇಡಿಂಗ್​ ಅಂಕಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನೀರಜ್ ನರ್ವಾಲ್ 5, ವಿಕಾಸ್ ಖಂಡೋಸ್, ಪರ್ತೀಕ್, ಸೌರಭ್ ನಂದಲ್ ತಲಾ ಅಂಕ ಪಡೆದರು. ಸುರ್ಜೀತ್​…

Read More

ಧಾರವಾಡ : ಇಷ್ಟು ದಿನ ಮನೆ, ಬ್ಯಾಂಕ್, ಎಟಿಎಂ, ದೇವಸ್ಥಾನಗಳ ಹುಂಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ರೈತರ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮೈಲಾರಪ್ಪ ಕುರಗುಂದ ಅವರ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಹತ್ತಿಯನ್ನು ಕಳ್ಳರ ಗ್ಯಾಂಗ್ ಬಿಡಿಸಿಕೊಂಡು ಪರಾರಿಯಾಗಿದೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹತ್ತಿ ಬಿಡಿಸುವ ಯೋಚನೆ ಮಾಡಿಕೊಂಡು ಜಮೀನಿಗೆ ಬಂದ ರೈತ ಮಲ್ಲಪ್ಪನಿಗೆ ಹೊಲದಲ್ಲಿನ ಹತ್ತಿ ಇಲ್ಲದನ್ನು ನೋಡಿ ಶಾಕ್ ಆಗಿದೆ. ಹತ್ತಿ ಬೆಳೆ ಫಸಲು ನೀಡಲು ಆರಂಭದಿಂದ ಒಂದು ಬಾರಿ ಹತ್ತಿ ಬೀಡಿಸಿ ಮಾರಾಟ ಮಾಡಿದ್ದು, ಎರಡನೇ ಬಾರಿ ಬೀಡಿಬೇಕಾಗಿತ್ತು. ಮನೆಯಲ್ಲಿ ಕೆಲಸ ಕಾರ್ಯಗಳಿಂದ ಹಾಗೂ ಆಳಿನ ಸಮಸ್ಯೆಯಿಂದ ಹಾಗೆ ಬಿಟ್ಟಿದ ಹತ್ತಿ ಬೆಳೆ ಈಗ ರೈತನ ಕೈತಪ್ಪಿ ಕಳ್ಳರ ಪಾಲಾಗಿದೆ‌. 4 ರಿಂದ 5 ಕ್ವಿಂಟಲ್ ಹತ್ತಿ ಕಳ್ಳತನ 4 ರಿಂದ 5 ಕ್ವಿಂಟಲ್ ಹತ್ತಿ ಕಳ್ಳತನವಾಗಿದೆ. ಖದೀಮ ಕಳ್ಳರ ಈ…

Read More

ಕಳೆದ 2 ದಿನಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೊಸ ವರ್ಷದ ದಿನವಾದ ಇಂದು ನಿಮ್ಮ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ತಿಳಿಯಿರಿ.. 22 ಕ್ಯಾರೆಟ್‌ ಚಿನ್ನದ ದರ ಇಂದು 1 ಗ್ರಾಂ ಚಿನ್ನದ ಬೆಲೆ 5,855 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,840 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 58,550 ಆಗಿದ್ದರೆ, 100 ಗ್ರಾಂ ಚಿನ್ನದ ಬೆಲೆ 5,85,500 ರೂ. ಇದೆ. 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,387 ರೂ ಇದೆ. 8 ಗ್ರಾಂ ಚಿನ್ನಕ್ಕೆ ಇಂದು 51,096 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,870 ರೂ. ಕೊಡಬೇಕು. 100 ಗ್ರಾಂ ಚಿನ್ನದ ದರ 6,38,700 ರೂ ಇದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ…

Read More

ಕೆನಡಾ ಮೂಲದ ದರೋಡೆಕೋರ (Canada-Based Gangster) ಲಖ್ಬೀರ್ ಸಿಂಗ್ ಲಾಂಡಾನನ್ನ ಭಯೋತ್ಪಾದಕ ಎಂದು ಭಾರತದ ಕೇಂದ್ರ ಗೃಹ ಸಚಿವಾಲಯ (MHA) ಘೋಷಿಸಿದ್ದು, ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಮಾಹಿತಿ ಪ್ರಕಾರ, 1989ರಲ್ಲಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಜನಿಸಿದ ಲಾಂಡಾ (Lakhbir Singh Land) 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ. ಕೆಲ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಖಲಿಸ್ತಾನಿ ಗ್ರೂಪ್ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಗೆ ಸೇರಿದ್ದಾನೆ. 2021ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ (Punjab Police) ಇಂಟೆಲಿಜೆನ್ಸ್ ಮುಖ್ಯಕಚೇರಿ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಈತ ಭಾಗಿಯಾಗಿದ್ದನು ಎಂದು ವಿವರಿಸಲಾಗಿದೆ.  https://ainlivenews.com/16-days-bank-holiday-in-january-2024/ ಅಲ್ಲದೇ ಈತ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್‌ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಘಟಕಗಳಿಗೆ ಸುಧಾರಿತ ಸ್ಫೋಟಕ ಸಾಧನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಪೂರೈಕೆ ಮಾಡುತ್ತಿದ್ದ. ಪಂಜಾಬ್‌ನಲ್ಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಹಣ ಪೂರೈಕೆ ಮಾಡುತ್ತಿದ್ದ.…

Read More