Author: AIN Author

ಹೊಸ ವರ್ಷಕ್ಕೆ  ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಲ್‌ಪಿಜಿ ಸಿಲಿಂಡರ್‌ (Cylinder) ಬೆಲೆ ಭಾರೀ ಇಳಿಕೆಯಾಗಿದೆ. ಜನವರಿ 1ರಿಂದ ವಾಣಿಜ್ಯ ಬಳಕೆಯ 19 ಕೆಜಿ ಎಲ್​ಪಿಜಿ ಸಿಲಿಂಡರ್​​ ಬೆಲೆ ದೇಶದ ಕೆಲವು ನಗರಗಳಲ್ಲಿ ತುಸು ಕಡಿಮೆಯಾಗಿದೆ. ತೈಲ ಕಂಪನಿಗಳು (Oil Marketing Companies) ವಾಣಿಜ್ಯ ಬಳಕೆಯ (Commercial LPG) 19 ಕೆಜಿ ಸಿಲಿಂಡರ್‌ ಬೆಲೆ 39.50 ರೂ. ಇಳಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ಭಾರತೀಯ ತೈಲ ಕಂಪನಿಗಳು ಈ ಹಿಂದೆ ಡಿಸೆಂಬರ್ 22 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದ್ದವು. ಅದಕ್ಕೂ ಮುನ್ನ ಡಿಸೆಂಬರ್ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಅಗ್ಗವಾಗಿದ್ದವು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಎಲ್​ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ. ಬೆಲೆ ಇಳಿಕೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,755.50 ರೂ. ಆಗಿದೆ. ಈ ಮೊದಲು ಈ ದರ 1,757 ರೂ. ಇತ್ತು.…

Read More

ಚಿಕ್ಕೋಡಿ: ಮುಸ್ಲಿಂ, ಕ್ರೈಸ್ತ ಸಮುದಾಯಗಳಿಂದ ಕೇರಳದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆಯಾಗುತ್ತಿದೆ ಎಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ (Pramod Muthalik) ಆರೋಪಿಸಿದ್ದಾರೆ. ‌ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ತಿರುಪತಿ ತಿಮ್ಮಪ್ಪನಷ್ಟೇ ಪ್ರಖ್ಯಾತಿ ಪಡೆದಿರುವ ಅಯ್ಯಪ್ಪ ದೇವಸ್ಥಾನವು ಇದೆ. ಆರು ರಾಜ್ಯಗಳಿಂದ ಐದು ಕೋಟಿ‌ ಜನರು ಅಲ್ಲಿ ಭೇಟಿ ನೀಡ್ತಾರೆ. ಮೂರು ಸಾವಿರ ಕೋಟಿ ರೂ.ಗಿಂತಲೂ ಆದಾಯ ಜಾಸ್ತಿ ಇದೆ ಎಂದು ತಿಳಿಸಿದ್ದಾರೆ. ಪಾರ್ಕಿಂಗ್ ಒಂದು ಕೋಟಿ ವಾಹನಗಳಾಗುತ್ತವೆ. ಒಂದು ವೆಹಿಕಲ್‌ಗೆ ನಲವತ್ತು ರೂಪಾಯಿ ತೆಗೆದುಕೊಳ್ತಾರೆ. https://ainlivenews.com/16-days-bank-holiday-in-january-2024/ ಎಲ್ಲ ಮೂಲಗಳಿಂದ ಮೂರು ಸಾವಿರ ಕೋಟಿಗಿಂತಲೂ ಅಧಿಕವಾಗುತ್ತದೆ. ಕೇರಳದಲ್ಲಿರುವ ಸರ್ಕಾರ ನಾಸ್ತಿಕ ಸರ್ಕಾರ. ದೇವರನ್ನು ನಂಬದಂತಹ ಸರ್ಕಾರ ಐದು ಕೋಟಿ ಭಕ್ತರಿಗೆ ಅನುಕೂಲವಾಗುವಂತಹ ಸೌಕರ್ಯ ಒದಗಿಸಿಕೊಡ್ತಿಲ್ಲ. ಕೇರಳ ಸರ್ಕಾರ ದೇವಸ್ಥಾನದ ಆದಾಯವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳು ತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Read More

ಡಿಸೆಂಬರ್​ ಕೊನೆಯ ದಿನ ಗಡಿಯಾರ 12 ಗಂಟೆ ಸೂಚಿಸುತ್ತಿದ್ದಂತೆ ವಿಶ್ವಾದ್ಯಂತ ಸಂಭ್ರಮ ಮನೆ ಮಾಡುತ್ತದೆ. ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡುತ್ತ ಪಟಾಕಿಗಳ ಸದ್ದು ಕೇಳಿ ಬರುತ್ತಿದೆ. ಎಲ್ಲಾ ನಗರಗಳಲ್ಲೂ ಹಗಲಿನ ವಾತಾವರಣ ಮೂಡಿತ್ತು.ಯಾಕೆಂದರೆ ಇದು ಹೊಸ ವರ್ಷಾಚರಣೆಯ ಸಡಗರ. ಹೀಗೆ ಜಗತ್ತು 2023ಕ್ಕೆ ವಿದಾಯ ಹೇಳಿ ಉಜ್ವಲ ಭವಿಷ್ಯದ ಭರವಸೆಯೊಂದಿಗೆ 2024ರ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಜನವರಿ 1ರಂದೇ ವರ್ಷಾಚರಣೆ ಯಾಕೆ? ಕ್ರಿ.ಪೂ. 45ರಲ್ಲಿ ಜನವರಿ 1 ಅನ್ನು ಮೊದಲ ಬಾರಿಗೆ ಹೊಸ ವರ್ಷದ ಪ್ರಾರಂಭವೆಂದು ಆಚರಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಅದಕ್ಕೂ ಮೊದಲು ರೋಮನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್‌ ಅನ್ನು ವರ್ಷಾರಂಭ ಎಂದು ಪರಿಗಣಿಸಲಾಗುತ್ತಿತ್ತು. ರೋಮನ್ ಕ್ಯಾಲೆಂಡರ್ ಪ್ರಕಾರ ವರ್ಷಕ್ಕೆ 355 ದಿನಗಳು. ರೋಮನ್ ಸರ್ವಾಧಿಕಾರಿ ಜ್ಯೂಲಿಯಸ್‌ ಸೀಸರ್ ಅಧಿಕಾರಕ್ಕೆ ಬಂದ ನಂತರ ಕ್ಯಾಲೆಂಡರ್ ಅನ್ನು ಬದಲಾಯಿಸಿ ಜನವರಿ 1 ಅನ್ನು ವರ್ಷದ ಮೊದಲ ದಿನವನ್ನಾಗಿಸಿದರು. ರೋಮನ್‌ ದೇವತೆ ಜಾನುಸ್‌ನ ಗೌರವಾರ್ಥ ಮೊದಲ ತಿಂಗಳಿಗೆ ಜನವರಿ ಎಂದು ಹೆಸರಿಡಲಾಗಿತ್ತು ಎನ್ನುತ್ತದೆ…

Read More

ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಮಗಳ ಮದುವೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಇರಾ ಮದುವೆ ಶಾಸ್ತ್ರಗಳು ನಡೆದಿದ್ದು, ಎರಡೂ ಕುಟುಂಬಗಳು ಭಾಗಿಯಾಗಿವೆ. ಇರಾ ಖಾನ್ (Ira Khan) ಮದುವೆ ಜನವರಿ 3ರಂದು ಅದ್ಧೂರಿಯಾಗಿ ನಡೆಯಲಿದ್ದು, ಅದಕ್ಕೂ ಮುನ್ನ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಈ ಕುರಿತಂತೆ ಸ್ವತಃ ಇರಾ ಖಾನ್ ಅವರೇ ಕೆಲ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಅಕ್ಟೋಬರ್ 3ರಂದು ಇರಾ ಮತ್ತು ನೂಪುರ್ ಶಿಖಾರೆ ರಿಜಿಸ್ಟರ್ ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೆ ಮನೆಯವರು ಅವಕಾಶ ಕೊಡದೇ ಸಾಂಪ್ರದಾಯಿಕವಾಗಿ ನೂಪುರ್ ಮನೆಯಲ್ಲಿ ಮದುವೆ ನಡೆಯಲಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಹೊಸ ಬದುಕಿಗೆ ಕಾಲಿಡಲಿದ್ದಾರೆ ಎಂದು ಸ್ವತಃ ಆಮೀರ್ ಖಾನ್ ಹೇಳಿಕೊಂಡಿದ್ದರು. ಅದರಂತೆ ಜನವರಿ 3ಕ್ಕೆ ಮದುವೆ ಫಿಕ್ಸ್ ಆಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ ನಿಶ್ಚಿತಾರ್ಥ (Engaged) ಮಾಡಿಕೊಂಡು, ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ…

Read More

ರಾಜ್ಯಾದ್ಯಂತ ಕಾಟೇರ ಸಿನಿಮಾದ ಅಬ್ಬರ ಜೋರಾಗಿದೆ. ಸಿನಿಮಾ, ನಟನೆ, ಸಂಭಾಷಣೆ, ನಿರ್ದೇಶನ ಹೀಗೆ ಎಲ್ಲದರಲ್ಲೂ ಸಿನಿಮಾ ಪಾಸ್ ಅನಿಸಿಕೊಂಡಿದೆ. ಅದರಲ್ಲೂ ದರ್ಶನ್ ಅಭಿಮಾನಿಗಳು ಚಿತ್ರವನ್ನು ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಹಾಗಾಗಿ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಸ್ (Celebrities)ಎಂದು ಕರೆಯುವ ದರ್ಶನ್ ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ ಆಶೀರ್ವಾದಕ್ಕೆ ಕೊನೆಯೆಲ್ಲಿ. ಧನೋಸ್ಮಿ ಸೆಲೆಬ್ರಿಟಿಸ್. ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ಎಂದು ದರ್ಶನ್ ಬರೆದುಕೊಂಡಿದ್ದಾರೆ. ಜೊತೆಗೆ ಸಿನಿಮಾದ ಜೀವಾಳದಂತಿರುವ ಅವರ ಮತ್ತೊಂದು ಗೆಟಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿದೆ. ಕಾಟೇರ ಸಿನಿಮಾದ ಮೊದಲ ದಿನದ ಗಳಿಕೆ ಅಂದಾಜು 19.79 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Read More

ಮೈಸೂರು:- ಇಂದು ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಭಕ್ತ ಸಾಗರವೇ ಹರಿದು ಬರುತ್ತಿದೆ. H ಇನ್ನೂ ಮುಂಜಾನೆಯೇ ಭಕ್ತಿಯಿಂದ ದೇವಾಲಯಗಳಿಗೆ ಭೇಟಿ ನೀಡಿ ವರ್ಷದ ಮೊದಲ ದಿನವನ್ನು ಜನ ಪ್ರಾರಂಭಿಸುತ್ತಿದ್ದಾರೆ. ಹೊಸ ವರ್ಷಕ್ಕೆ ಮೈಸೂರಿನ ವಿಜಯನಗರ ಲೇಔಟ್​​ಲ್ಲಿರುವ ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತ ಸಾಗರವೇ ಕಂಡು ಬಂದಿದೆ.

Read More

ಮತ್ತೆ ಹೊಸ ವರ್ಷ ಬಂದಿದೆ. ಮತ್ತೆ ಎನ್ನುವುದೇ ಹೊಸ ಒಲವಿನ ಸಂಕೇತ. ಹೊಸದು ಯಾವಾಗಲೂ ಹೊಸದೇ. ಹಾಗಾಗಿ ಹಳೆಯ ಹಾಳೆಯ ಹರಿದು, ಹೊಸ ನೂಲು ಹೊಸೆದು, ಹೊಸ ಕನಸುಗಳ ಜೊತೆ ಹೆಜ್ಜೆ ಹಾಕೋಣ. ಆ ಹೆಜ್ಜೆಗಳು ಸದಾ ಹೊಸ ಹಾದಿಯನ್ನೇ ಹುಡುಕುತಿರಲಿ ಎಂದು ಪ್ರಾರ್ಥಿಸೋಣ. 2023ನ್ನೂ ಸ್ವಾಗತಿಸಿ ಸಂಭ್ರಮಿಸಿದ ನೆನಪೇ ಇನ್ನೂ ಕಳೆದಿಲ್ಲ… ಈಗ 2024ಕ್ಕೆ (New Year 2024) ಹೆಜ್ಜೆ ಇಟ್ಟಿದ್ದೇವೆ. ಈಗಾಗಲೇ ಗೋಡೆಗಳ ಮೇಲೆ ಹೊಸ ಕ್ಯಾಲೆಂಡರ್ ತೂಗಿ ಹಾಕಲಾಗಿದೆ. ಅದು ಕೇವಲ ಅಂಕಿ ಸಂಖ್ಯೆಗಳ ಕ್ಯಾಲೆಂಡರ್ ಆಗದೇ, ಅಸಂಖ್ಯೆ ಕನಸುಗಳು ತೂಗುಯ್ಯಾಲಿ ಆಗಲಿ ಎಂದು ಬಯಸೋಣ. ಕಳೆದ ವರ್ಷ ಏನೇ ಕಹಿ ಘಟನೆ ನಡೆದಿದ್ದರೂ ಈಗ ಕ್ಯಾಲೆಂಡರ್‌ನಂತೆ ಆ ಕಹಿ ಘಟನೆಗಳ ಜಾಗಕ್ಕೆ ಹೊಸ ಉತ್ಸಾಹವನ್ನೂ ತೂಗಿ ಹಾಕಿ, ಹೊಸ ತೊಟ್ಟಿಲೊಳಗೆ ಭರವಸೆಯನ್ನು ತೂಗೋಣ. ಗತಿಸಿದ ವರ್ಷ ಎಷ್ಟೋ ನೋವು ಹಾಗೂ ನಲಿವುಗಳನ್ನು ಕೊಟ್ಟಿರಬಹುದು, ಆದರೆ ಈಗ ನಮಗೆ ಸಾಗಲು ಬೇಕಿರುವುದು ನಲಿವಿನ ಇಂಧನ ಮಾತ್ರ. ಹಾಗೇಯೇ…

Read More

ಉಡುಪಿ: ಅಯೋಧ್ಯೆಯಲ್ಲಿ (Ayodhya Ram Mandir) ಜನವರಿ 22ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನವರು (Congress) ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಒಂದು ವೇಳೆ ಕಾರ್ಯಕ್ರಮಕ್ಕೆ ಗೈರಾದರೆ ದೇಶಕ್ಕೆ ಮತ್ತು ನಮ್ಮ ಶ್ರದ್ದೆಗೆ ಅವರು ಮಾಡಿವ ಅವಮಾನವಾಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕರು ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು. https://ainlivenews.com/16-days-bank-holiday-in-january-2024/ ರಾಮಮಂದಿರದ ಪ್ರತಿಷ್ಠಾಪನೆಯಲ್ಲಿ ದೇಶದ ಎಲ್ಲರೂ ಭಾಗವಹಿಸಬೇಕು. ಎಲ್ಲರೂ ರಾಮನ ದರ್ಶನ ಮಾಡಬೇಕು, ಇದು ನಮ್ಮ ಅಸ್ಮಿತೆಯ ಪ್ರಶ್ನೆಯಾಗಿದೆ. ಗುಲಾಮಗಿರಿಯನ್ನು ಹೋಗಲಾಡಿಸಬೇಕು. ಪಕ್ಷ ರಾಜಕಾರಣ ಬಿಟ್ಟು ಧರ್ಮವನ್ನು ಬಿಟ್ಟು ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದು ಅವರು ಕೇಳಿಕೊಂಡರು. ಕಾಂಗ್ರೆಸ್ 70 ವರ್ಷದಿಂದ ಅಯೋಧ್ಯೆಯ ವಿರುದ್ಧ ಹೋರಾಟ ಮಾಡಿತ್ತು. ಕಾಂಗ್ರೆಸ್ ನ ಕಪಿಲ್ ಸಿಬಲ್ (Kapil Sibal) ಅಯೋಧ್ಯೆಯ ವಿರುದ್ಧ ಕೋರ್ಟ್ ನಲ್ಲಿ ವಾದ ಮಾಡುತ್ತಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಆಗಬಾರದು ಎಂದು ಕಾಂಗ್ರೆಸ್ ಉದ್ದೇಶವಾಗಿತ್ತು. ಅಲ್ಪಸಂಖ್ಯಾತರಿಗೆ…

Read More

ದೇವನಹಳ್ಳಿ:- ಹೊಸ ವರ್ಷಾಚರಣೆ ಹಿನ್ನಲೆ ನಂದಿಬೆಟ್ಟಕ್ಕೆ ತೆರಳಲು ಸಾವಿರಾರು ಜನ ಬೈಕ್ ಸವಾರರು ಕಾದು ಕುಳಿತ ದೃಶ್ಯ ಸೆರೆಯಾಗಿದೆ. ಮದ್ಯರಾತ್ರಿ 3ಗಂಟೆಯಿಂದ ನಂದಿಬೆಟ್ಟ ಪ್ರವೇಶದ ಚಕ್ ಪೋಸ್ಟ್ ನಲ್ಲಿ‌ ಸಾವಿರಾರು ಬೈಕ್ ಸವಾರರು ಕಾದು ಕುಳಿತಿದ್ದರು. ಏಕಾಏಕಿ ಸಾವಿರಾರು ಬೈಕ್ಸ್ ಒಟ್ಟಿಗೆ ಬಂದ ಹಿನ್ನಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಂದಿಬೆಟ್ಟದ ಮೇಲೆ ಸೂರ್ಯೋದಯ ನೋಡಲು ಸಾವಿರಾರು ಜನ ಆಗಮಿಸಿದ್ದಾರೆ. ಬೆಳಗ್ಗೆ 6ಗಂಟೆಯವರೆಗೂ ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಮೋಜು ಮಸ್ತಿ ಹೆಸರಲ್ಲಿ ಅನಾಹುತಗಳಾಗ್ತವೆ ಎಂಬ ಕಾರಣಕ್ಕೆ ನಂದಿಬೆಟ್ಟ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ‌ಜಿಲ್ಲಾಢಳಿತ ನಿರ್ಬಂಧ ವಿಧಿಸಿತ್ತು. ಇಂದು ಬೆಳಗ್ಗೆ 6ಗಂಟೆಯವರೆಗೂ ಇದ್ದ ನಿರ್ಬಂಧ ತೆರವು ಹಿನ್ನಲೆ, ಏಕಾಏಕಿ ಸಾವಿರಾರು ಬೈಕ್ಗಳಲ್ಲಿ ಸವಾರರು ನಂದಿಬೆಟ್ಟ ಪ್ರವೇಶಿಸಿದ್ದಾರೆ.

Read More

ಮೈಸೂರು : ಹಿಂದಿನ ಸರ್ಕಾರದಲ್ಲಿಯೇ ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಬೇಡವೆಂದು ನಿರ್ಣಯಿ ಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ರೋಪ್‌ ವೇ ಬೇಡ ಎಂದು ಶಾಸಕ ಜಿ.ಟಿ. ದೇವೇಗೌಡರ ಸಮ್ಮುಖದಲ್ಲಿ ಸಭೆ ನಡೆಸಿ ಯಾವ ಕಾರಣಕ್ಕೆ ರೋಪ್‌ ವೇ ಬೇಡ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ರೂಪ್‌ ವೇ ನಿರ್ಮಿಸುವುದಿಲ್ಲ ಎಂದು ಪ್ರಕಟಿಸಿರುವುದಾಗಿ ತಿಳಿಸಿದರು. https://ainlivenews.com/16-days-bank-holiday-in-january-2024/ ದೇವರ ದರ್ಶನ ಪಡೆಯಲು ಚಾಮುಂಡಿಬೆಟ್ಟಕ್ಕೆ ಹೋಗುತ್ತಾರೆ. ಬೆಟ್ಟದ ಮೇಲಿಂದ ಯಾವುದೇ ವ್ಯೂ ಪಾಯಿಂಟ್‌ ಇಲ್ಲ. ಚಾಮುಂಡಿಬೆಟ್ಟದ ಬದಲು ನಂದಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಿಸಬಹುದು. ಚಾಮರಾಜನಗರದ ಯಾವುದಾದರೂ ಗುಡ್ಡಕ್ಕೆ ರೋಪ್‌ ವೇ ನಿರ್ಮಿಸಿದರೆ ಅಲ್ಲಿನ ಪ್ರವಾಸೋದ್ಯ ಮವಾದರೂ ಅಭಿವೃದ್ಧಿ ಆಗುತ್ತದೆ ಎಂದರು.

Read More