Author: AIN Author

ಧಾರವಾಡ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೂಲೀಸರು, ಮಧ್ಯಪ್ರದೇಶದಲ್ಲಿ ಅಡಗಿ ಕುಳಿತಿದ್ದ ದೇಶದ ಖ್ಯಾತ ಮುಪ್ತಿಯೊಬ್ಬನನ್ನು ಬಂಧಿಸಿದ್ದರು. ಜೈಲು ಪಾಲಾಗಿರುವ ಮೌಲ್ವಿ ಪ್ರಕರಣದಲ್ಲಿ ಸ್ಫೋಟಕ ಸತ್ಯವೊಂದು ಹೊರ ಬಿದ್ದಿದೆ. ಆರೋಪಿ ಗುಲಾಮ ಜಿಲಾನಿ ಅಜಹರಿ ಅಸಲಿಗೆ ಭಾರತೀಯನೇ ಅಲ್ಲ ಎಂದು ತಿಳಿದು ಬಂದಿದ್ದು, ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ದೇಶದಲ್ಲಿ ನೆಲೆಸಿದ್ದ ಎಂದು ಪೊಲೀಸರ (Police) ತನಿಖೆ ವೇಳೆ ತಿಳಿದು ಬಂದಿದೆ. ನೇಪಾಳ ಪೌರತ್ವ ಹೊಂದಿರುವ ಆರೋಪಿ, ಮಧ್ಯಪ್ರದೇಶದ (Madhya Pradesh) ಖಂಡವಾಗೆ ಆರು ವರ್ಷಗಳ ಹಿಂದೆ ಬಂದು ನೆಲೆಸಿದ್ದ. ಇಲ್ಲಿಗೆ ಬಂದ ಮೇಲೆ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಮತದಾರರ ಚೀಟಿ ಮಾಡಿಸಿಕೊಂಡಿದ್ದಾನೆ. ಅಲ್ಲಿಯೇ ಮದರಸಾವನ್ನು ಸಹ ಕಟ್ಟಿಕೊಂಡಿದ್ದ. ಭಾರತದ ಅನೇಕ ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ ಈತ ಧಾರ್ಮಿಕ ಪ್ರವಚನ ನೀಡಿ ಜನಮನ್ನಣೆ ಗಳಿಸಿದ್ದ. ಅಲ್ಲದೇ ಭಾರತದ ಹೆಸರಾಂತ ಧಾರ್ಮಿಕ ಪ್ರವಚನಕಾರರ ವಿರುದ್ಧ ಹೇಳಿಕೆ ಕೊಡುತ್ತಿದ್ದ. https://ainlivenews.com/curry-leaves-are-good-for-cooking-and-good-for-health-this-has-many-benefits/ ಆರೋಪಿಗೆ ನೇಪಾಳದಲ್ಲಿ ಶೇರ್ ಎ ನೇಪಾಳ ಎಂದು ಕರೆಯಲಾಗುತ್ತಿತ್ತು. ಈಗಾಗಲೇ ಎರಡು…

Read More

ಬೆಂಗಳೂರು : ನಾನು ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗವಹಿಸಿದ್ದೆ, ನನ್ನನ್ನು ಬಂಧಿಸುತ್ತಿರಾ? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳ ಹಿಂದೆ ರಾಮಜನ್ಮ ಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರು ಕಾರ್ಯಕರ್ತರ ವಿರುದ್ಧದ ಕೇಸ್ ಮರುತೆರೆದು, ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೆ ದ್ವೇಷದ ರಾಜಕಾರಣ ಶುರು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಕಗ್ಗೊಲೆಗಳು ಆಗಿದ್ದವು. ರಾಮಮಂದಿರ ನಿರ್ಮಾಣ ಚರಿತ್ರೆಯಲ್ಲಿ ದಾಖಲಾಗುವ ಐತಿಹಾಸಿಕ ಕ್ಷಣ. ನಾವು ಕರ ಸೇವೆ ಮಾಡಿದ್ದೇವೆ, ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಈಗ ಕರ ಸೇವಕರನ್ನ ಭಯಭೀತಗೊಳಿಸಲು ಹೊರಟಿದೆ ಎಂದು ಕುಟುಕಿದ್ದಾರೆ. 30 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ರಾಮಜನ್ಮ ಭೂಮಿ ಕಾರ್ಯಕರ್ತರನ್ನ ಜೈಲುಗಟ್ಟಿದ್ದಾರೆ. ರಾಮಭಕ್ತರ ಮೇಲೆ ಕೇಸ್ ಹಾಕಿದ್ದಾರೆ. ದ್ವೇಷದ ರಾಜಕಾರಣಕ್ಕೆ ಸರ್ಕಾರ ಪ್ರತಿಫಲ ಅನುಭವಿಸುತ್ತೆ. ನಾನು ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗವಹಿಸಿದ್ದೆ, ನನ್ನನ್ನ ಬಂಧಿಸ್ತಿರಾ..? ಯಡಿಯೂರಪ್ಪ…

Read More

ಕಾಟೇರ ಸಿನಿಮಾದ ಅಬ್ಬರ ಮೂರನೇ ದಿನಕ್ಕೂ ಮುಂದುವರೆದಿದೆ. ಮೂರನೇ ದಿನದ ಕಲೆಕ್ಷನ್ ಬರೋಬ್ಬರಿ 20.94 ಕೋಟಿ ಎಂದು ಅಂದಾಜಿಸಲಾಗಿದೆ.  ವೀಕೆಂಡ್ ನಲ್ಲಿ ಕಾಟೇರ ದಾಖಲೆ ರೀತಿಯಲ್ಲಿ ಹಣ ಮಾಡಿದೆ. ಎರಡನೇ ದಿನದ ಕಲೆಕ್ಷನ್ 17.35 ಕೋಟಿ ರೂಪಾಯಿ ಆಗಿದ್ದರೆ. ಮೊದಲ ದಿನ ಮತ್ತು ಎರಡನೇ ದಿನ ಹಾಗೂ ಮೂರನೇ ದಿನದ ಸೇರಿ ಒಟ್ಟು ಮೂರು ದಿನಕ್ಕೆ 58.08 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿತ್ತು. ಕಾಟೇರ ಸಿನಿಮಾದ ಮೊದಲ ದಿನದ ಗಳಿಕೆ ಅಂದಾಜು 19.79 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಜೋರಾಗಿದೆ. ಮೊನ್ನೆಯಿಂದ ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು…

Read More

ಇದೇ ದಿನ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಅನೇಕರಿಗೆ ಹೊಸ ಜೀವನವನ್ನು ಕೊಟ್ಟ ದಿನವಿದು. ಹೌದು, ಸ್ಯಾಂಡಲ್​ವುಡ್​ನಲ್ಲಿ ಹಲವು ದಾಖಲೆ ನಿರ್ಮಿಸಿದ ಕಿರಿಕ್ ಪಾರ್ಟಿ ಸಿನಿಮಾ 7 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಸಂತೋಷವನ್ನು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ನಮ್ಮ ಕಿರಿಕ್ ಪಾರ್ಟಿಗೆ 7ರ ಹರುಷ. ಈ ಪ್ರಯಾಣಕ್ಕೆ ನಾನು ಸದಾ ಚಿರರುಣಿ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ನಟ ರಶ್ಮಿಕಾ ಮಂದಣ್ಣ ಇಲ್ಲದ ಚಿತ್ರದ ಫೋಟೋವನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಏಳು ವರ್ಷಗಳ ಹಿಂದೆ ಕನ್ನಡದಲ್ಲಿ ಒಂದು ಸೂಪರ್ ಆಗಿರೋ ಕಾಲೇಜು ಲವ್ ಸ್ಟೋರಿ ಬಿಡುಗಡೆಯಾಗಿತ್ತು. ಸರಳ ಕಥೆ, ಸರಳ ನಟನೆ, ಕಾಮಿಡಿ, ಲವ್, ಫ್ರೆಂಡ್‌ಶಿಪ್, ಕಾಲೇಜು, ಕ್ಯಾಂಪಸ್‌ಗಳ ಸುತ್ತ ಇದ್ದ ಸಿನಿಮಾ ‘ಕಿರಿಕ್ ಪಾರ್ಟಿ’ ಬಿಡುಗಡೆಯಾಗಿತ್ತು. ಈ ಸಿನಿಮಾಕ್ಕೆ ಜನರು ಕೊಟ್ಟ ಪ್ರೀತಿ ಕೂಡ ಹೆಚ್ಚು. ಕನ್ನಡಕ್ಕೆ ಮತ್ತಷ್ಟು ಹೊಸಬರನ್ನು ಪರಿಚಯಿಸಿದ ಕೀರ್ತಿ…

Read More

ಕನ್ನಡದ ಹಿರಿಯ ನಟ ಜಗ್ಗೇಶ್ (Jaggesh) ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಏಳು ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದು, ಹಾಸಿಗೆಯಿಂದ ಏಳಕ್ಕೂ ಆಗದೇ ಇರುವಂತಹ ಸ್ಥಿತಿಯಲ್ಲಿದ್ದಾರೆ. ತಮಗೆ ಹೀಗೆ ಆಗಿದ್ದು ಯಾಕೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಜೊತೆಗೆ ಮನವಿಯೊಂದನ್ನು ಮಾಡಿದ್ದಾರೆ. ನನ್ನನ್ನು ಗೀತಾ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಅವರ ಆಹ್ವಾನವನ್ನು ಮನ್ನಿಸಿ ಅಲ್ಲಿಗೆ ಹೋದೆ. ಸಾಕಷ್ಟು ಜನರು ಆ ಕಾರ್ಯಕ್ರಮದಲ್ಲಿ ಭಾಗಿಯಾದ್ದರು. ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದರು. ಫೋಟೋ ಬೇಡ ಅಂತಾ ಹೇಳಿದರೆ ಕಷ್ಟ, ಮಾಸ್ಕ್ (Mask)ಹಾಕಿದರೆ ಮತ್ತೊಂದು ರೀತಿ ತಿಳಿದುಕೊಳ್ಳುತ್ತಾರೆ ಅಂತ ಕೇಳಿದವರಿಗೆಲ್ಲ ಫೋಟೋ ನೀಡಿದೆ. ಯಾರೋ ಪುಣ್ಯಾತ್ಮರು ನನಗೆ ಅನಾರೋಗ್ಯವನ್ನು ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ದಯವಿಟ್ಟು ಯಾರಿಗಾದರೂ ಶೀತ, ಜ್ವರ, ಅನಾರೋಗ್ಯವಿದ್ದರೆ ಮನೆಯಲ್ಲಿ ಇರಿ. ಹೀಗೆ ಕಾರ್ಯಕ್ರಮಕ್ಕೆ ಬಂದು ಬೇರೆಯವರಿಗೆ ತೊಂದರೆ ಕೊಡಬೇಕು. ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ ಎಂದು ಹಲವಾರು ಸಲಹೆಗಳನ್ನು ನೀಡಿದ್ದಾರೆ ಜಗ್ಗೇಶ್.

Read More

ರಾಯಚೂರು: ಹೊಸ ವರ್ಷಾಚರಣೆ (New Year) ಹಿನ್ನೆಲೆ ಮಂತ್ರಾಲಯದ (Mantralaya) ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ (Devotees) ದಂಡು ಹರಿದು ಬಂದಿದೆ. ಶನಿವಾರದಿಂದ ಈವರೆಗೂ ಸುಮಾರು 1 ಲಕ್ಷ ಭಕ್ತರು ರಾಯರ ದರ್ಶನ ಪಡೆದಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ರಾಯರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಲ್ಕು ಪ್ರತ್ಯೇಕ ಸರತಿ ಸಾಲುಗಳ ಮೂಲಕ ರಾಯರ ಮೂಲ ಬೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. https://ainlivenews.com/this-new-india-is-possible-because-of-modis-leadership-mauritius-mp/ ಹೊಸ ವರ್ಷದಂದು ರಾಯರ ಕೃಪೆಗೆ ಪಾತ್ರರಾಗಲು ಭಕ್ತರು ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ. ಕ್ಯಾಲೆಂಡರ್ ಹೊಸ ವರ್ಷವಾಗಿರುವುದರಿಂದ ಮಠದಲ್ಲಿ ಯಾವುದೇ ವಿಶೇಷ ಪೂಜೆಗಳನ್ನ ನೇರವೇರಿಸಿಲ್ಲ. ಎಂದಿನಂತೆ ಬೆಳಗ್ಗೆ ನಿತ್ಯದ ಪೂಜೆಯನ್ನು ಮಾಡಲಾಗಿದೆ.

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಅಭೂತಪೂರ್ವ ಯಶಸ್ಸನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಲು ಚಿತ್ರತಂಡ ಸಿದ್ದವಾಗಿದೆ. ಇಂದು ಸಂಜೆ 6.30ಕ್ಕೆ ಬೆಂಗಳೂರಿನ ಒರಾಯನ್ ಮಾಲ್​ನಲ್ಲಿ ಕಾಟೇರ ಚಿತ್ರದ ಸಕ್ಸಸ್ ಸಂಭ್ರಮ ನಡೆಯಲಿದೆ. ನಟ ದರ್ಶನ್ ಸೇರಿದಂತೆ ಇಡೀ ಚಿತ್ರತಂಡ ಈ ಸಂಭ್ರಮದಲ್ಲಿ ಭಾಗಿಯಾಗಲಿದೆ. ಈ ಸಕ್ಸಸ್ ಸಮಾರಂಭಕ್ಕೆ ತಮ್ಮ ಎಲ್ಲಾ ಸೆಲೆಬ್ರಿಟಿಸ್​ಗಳಿಗೂ ಡಿ ಬಾಸ್ ಆತ್ಮೀಯ ಸುಸ್ವಾಗತ ಕೋರಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರ ತೆರೆಕಂಡ ಕಾಟೇರ ಚಿತ್ರ ಕರ್ನಾಟಕದ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆದಿದೆ. ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಬರೋಬ್ಬರಿ 19.79 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಎರಡನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಮತ್ತು ಎರಡನೇ ದಿನ ಸೇರಿ ಒಟ್ಟು ಎರಡು ದಿನಕ್ಕೆ 37.14 ಕೋಟಿ ರೂಪಾಯಿ ಕಾಟೇರನ ಜೋಳಿಗೆ ಸೇರಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಡಿ ಬಾಸ್…

Read More

ಕನ್ನಡದ (Sandalwood) ಹೆಸರಾಂತ ನಟಿ ಅದಿತಿ ಪ್ರಭುದೇವ್ (Aditi Prabhudev), ಹೊಸ ವರ್ಷದ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ಅದಿತಿ, ತಾವು ಅಮ್ಮನಾಗುತ್ತಿರುವ (Pregnant)ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರು ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ. ಅಮ್ಮ 2024ಕ್ಕೆ ನಾನು ಅಮ್ಮನಾಗುವೆ’ ಎಂದು ಅವರು ಪೋಸ್ಟ್ ಹಾಕಿದ್ದಾರೆ. ಕಳೆದ ವರ್ಷ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ಅದಿತಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಉದ್ಯಮಿ ಯಶಸ್ ಜೊತೆ ಹೊಸ ಬದುಕಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದು ವರ್ಷ ಒಂದು ತಿಂಗಳಿಗೆ ಅಮ್ಮನಾಗುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ರಂಗ ಕಂಡ ಅಪರೂಪದ ನಟಿ ಅದಿತಿ ಪ್ರಭುದೇವ್. ಯಾವುದೇ ಕಾಂಟ್ರವರ್ಸಿಗೆ ಗುರಿಯಾಗದೇ ಅತ್ಯುತ್ತಮ ಪಾತ್ರಗಳನ್ನು ಮಾಡುತ್ತಾ ಬಂದರು. ಸಿಕ್ಕಿರುವ ಪಾತ್ರಗಳಲ್ಲೇ ತೃಪ್ತಿ ಪಟ್ಟುಕೊಂಡವರು. ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದು, ಆನಂತರ ಸಿನಿಮಾಗಳನ್ನು ಮಾಡಿದವರು.

Read More

ಬೆಂಗಳೂರು: ಸರ್ಕಾರದ ಪರ್ಯಾಯ ವ್ಯವಸ್ಥೆಯ ಬೆದರಿಕೆ ಅಸ್ತ್ರಕ್ಕೆ ಜಗ್ಗದ ರಾಜ್ಯ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘಟನೆಗಳು ಸೇವೆ ಕಾಯಂಗೆ ಆಗ್ರಹಿಸಿ ನಿಗದಿಯಂತೆ ಸೋಮವಾರ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸುವುದಾಗಿ ತಿಳಿಸಿವೆ. ಹೌದ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲು ಸೂಕ್ತ ಯೋಜನೆ ರೂಪಿಸುವುದಾಗಿ ಕಾಂಗ್ರೆಸ್‌ ಪಕ್ಷ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ನಾವು ಸರ್ಕಾರಕ್ಕೆ ಕೇಳುತ್ತಿದ್ದೇವೆ. ಹತ್ತು ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಭದ್ರತೆ ಕೊಡಿ ಎಂದು ಕೇಳುವುದು ನಮ್ಮ ಹಕ್ಕು. ಅದಕ್ಕಾಗಿ ಕಳೆದ ಒಂದು 39 ದಿನಗಳಿಂದ ತರಗತಿ ಬಹಿಷ್ಕರಿಸಿ ನಾವು ಮುಷ್ಕರ ನಡೆಸುತ್ತಿದ್ದರೂ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಪಾದಯಾತ್ರೆ ಮೂಲಕ ಹೋರಾಟ ತೀವ್ರಗೊಳಿಸಲು ನಾವು ತೀರ್ಮಾನಿಸಿದ್ದೇವೆ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ತಿಳಿಸಿದ್ದಾರೆ.

Read More

ಬೆಂಗಳೂರು: ಸುಧಾಮನಗರದಲ್ಲಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಫೋಟೋಶೂಟ್‍ಗೆ ಬಿಡಿದ್ದಕ್ಕೆ ಸೂಸೈಡ್ ಮಾಡಿಕೊಂಡಿರುವ ವಿಚಾರ ಬಯಲಾಗಿದೆ‌ https://ainlivenews.com/a-student-studying-bba-in-bangalore-committed-suicide/ ಈ ಸಂಬಂಧ ಕೇಂದ್ರ ಡಿಸಿಪಿ ಶೇಖರ್ ಪ್ರತಿಕ್ರಿಯಿಸಿ, ಫೋಟೋ ಶೂಟ್‍ಗೆ ತೆರಳಲು ಸಜ್ಜಾಗಿದ್ದಳು. ಈ ಫೋಟೋ ಶೂಟ್‍ಗೆ ಹೋಗೋದು ಬೇಡ ಎಂದು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ 21 ವರ್ಷದ ವರ್ಷಿಣಿ ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆದರೆ ಇಂದು ಈಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More