Author: AIN Author

ಬೆಂಗಳೂರು: ಹೊಸವರ್ಷಾಚರಣೆಯ ಪಾರ್ಟಿಗೆ ಅಂತ ಹೋಗಿದ್ದ ಯುವಕನೊಬ್ಬ ಮಧ್ಯರಾತ್ರಿ ನಡುರಸ್ತೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದ… ಇನ್ನೋಂದು ಕಡೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನೆಡೆದಿದೆ..ಈ ಎರಡೂ ಘಟನೆಗಳ ಡಿಟೇಲ್ಸ್ ಇಲ್ಲಿದೆ.ನೋಡಿ. ಕಳೆದ ರಾತ್ರಿ ಇಡೀ ಬೆಂಗಳೂರು ಹೊಸ ವರ್ಷದ ಸಂಭ್ರಮದಲ್ಲಿದ್ದು. ಪಾರ್ಟಿ, ಡ್ಯಾನ್ಸ್ ಅಂತ ಜನ ಸಡಗರದಲ್ಲಿ ಮೈಮರೆತಿದ್ರು. ಆದ್ರೆ ಇಂತದ್ದೆ ಪಾರ್ಟಿಗೆ ಗೆಳೆಯರ ಜೊತೆ ಮನೆ ಬಿಟ್ಟಿದ್ದ 21 ವರ್ಷದ ಯುವಕ ಮಧ್ಯರಾತ್ರಿ ನಡುರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದ. ಆತ ಮನೆಗೆ ಒಬ್ಬನೇ ಮಗ.. ತಂದೆಯಿಲ್ಲದ ಆ ಮಗನಿಗೆ ತಾಯಿ, ತಾಯಿಗೆ ಮಗನೇ ಆಧಾರ ಆಗಿದ್ರು. ಆದ್ರೆ ಫ್ರೆಂಡ್ಸ್ ಜೊತೆ ಪಾರ್ಟಿಗೆ ಅಂತ ಸಂಜೆ ಮನೆಬಿಟ್ಟ ಆದ್ರೆ ವಾಪಸ್ ಬಂದಿದ್ದು ಹೆಣವಾಗಿ..ಯೆಸ್. ಬನಶಂಕರಿ ನಿವಾಸಿಯಾದ ಮನೋಜ್ ಎಂಬಾತನೇ ಕೊಲೆಯಾಗಿರೋ ಯುವಕ.. ಆದರೆ ಅಲ್ಲಿ ಇಲ್ಲಿ ಕೆಲಸಕ್ಕೆ ಹೋಗಿ ಪೋಲಿ ಪುಂಡರ ಸಹವಾಸ ಮಾಡ್ಕೊಂಡಿದ್ದ ಮನೋಜ್ ಗೆ ಇಂತ ಸಹವಾಸವೇ ಮುಳುವಾಗಿದೆ. ನಿನ್ನೆ ಸಂಜೆ ನ್ಯೂ ಇಯರ್ ಸೆಲೆಬ್ರೆಷನ್ ಇದೆ, ಪ್ರೆಂಡ್ಸ್ ಬರ್ತಡೇ ಅಂತ…

Read More

ಬೆಂಗಳೂರು: 2023ಕ್ಕೆ ವಿದಾಯ ಹೇಳಿ, 2024 ಅನ್ನು ಭರ್ಜರಿಯಾಗಿ ಸ್ವಾಗತ ಮಾಡಿದ್ದೇವೆ.. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಎಂದಿನಂತೆ ಹೊಸವರ್ಷವನ್ನು ಕಲ್ರ್ ಫುಲ್ಲಾಗೇ ಬರಮಾಡಿಕೊಂಡ್ರು. ಹಾಗಾದ್ರೆ 31 ರಾತ್ರಿ ಬೆಂಗಳುರಿನ ಜಿ ರೋಡ್ , ಬ್ರಿಗೇಡ್ ರೋಡ್ , ಕೋರಮಂಗಲ, ಇಂದ್ರಾನಗರಗಳಲ್ಲಿ ಸಂಭ್ರಮ ಹೇಗಿತ್ತು. ಏನೆಲ್ಲಾ ಯಡವಟ್ಟುಗಳಾಯ್ತು ಅನ್ನೋದನ್ನ ತೋರಿಸ್ತೀವಿ ನೋಡಿ… ಪ್ರತಿ ವರ್ಷದಂತೆ ಈ ವರ್ಷವೂ ಹೊಸವರ್ಷಾಚರಣೆಯ ಹಾಟ್ ಸ್ಪಾಟ್ ಎಂದು ಬಿಂಬಿತವಾಗಿರುವ ಎಂ ಜಿ ರೋಡ್ ಬ್ರಿಗೇಡ್ ರೋಡ್, ಕೋರಮಂಗಲ ಹಾಗು ಇಂದ್ರಾನಗರ ಪ್ರದೇಶಗಳು ಮಿರಿ ಮಿರಿ ಅಂತ ಮಿಂಚುತಿದ್ವು. ಎಲ್ಲಾ ಪಬ್ಬು ಕ್ಲಬ್ಬು ಬಾರ್ ಗಳು ಜನರಿಂದ ತುಂಬಿ ತುಳುಕುತಿದ್ವು. ರಸ್ತೆಗಳೆಲ್ಲಾ ತುಂಬಿ ಹೋಗಿದ್ವು. ಬೆಂಗಳೂರು ನಗರ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ರು.. 12 ಗಂಟೆ ಗಡಿಯಾರದ ಮುಳ್ಳು ಮುತ್ತಿಕ್ಕುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಹರ್ಷೋದ್ಘಾರ ಮುಗಿಲು ಮಟ್ಟಿತ್ತು. 2023ಕ್ಕೆ ವಿದಾಯ ಹೇಳಿದ ಯುವ ಜನರು ಕುಣಿದು ಕುಪ್ಪಳಿಸಿ 2024ರ ಹೊಸವರ್ಷದ ಶುಭಾಶಯಗಳು ವಿನಿಮಯ ಮಾಡಿಕೊಂಡ್ರು..…

Read More

ಬೆಳಗಾವಿ:- ಜಿಲ್ಲೆಯ ನಾವಗೆ ಗ್ರಾಮಕ್ಕೆ ನುಗ್ಗಿ 30 ಜನ ಮುಸುಕುಧಾರಿಗಳು ಅಟ್ಟಹಾಸ ಮೆರೆದಿರುವ ಘಟನೆ ಜರುಗಿದೆ. ಘಟನೆ ಸಂಬಂಧ 6 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರಕಾಸ್ತ್ರಗಳ ಸಮೇತ ಬಂದಿದ್ದ 30ಕ್ಕೂ ಹೆಚ್ಚು ಮುಸುಕುಧಾರಿಗಳು ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದಾರೆ. ಇದರಿಂದ ಮನೆಯ ಕಿಟಕಿ ಗಾಜುಗಳು, ಗೋಡೆಗೆ ಅಂಟಿಸಿದ್ದ ಟೈಲ್ಸ್ ಪುಡಿ ಪುಡಿಯಾಗಿವೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರು, ಆರು ಬೈಕ್ ಜಖಂಗೊಳಿಸಿದ್ದಾರೆ. ಈ ಮುಸುಕುಧಾರಿಗಳು ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತಿ ಸದಸ್ಯರ ಮನೆ ಮೇಲೂ ದಾಳಿ ಮಾಡಿದ್ದಾರೆ. ಡಿಸೆಂಬರ್​​ 31ರ ರಾತ್ರಿ ಪ್ರೀತಿ ವಿಚಾರವಾಗಿ ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿದೆ. ಈ ನಾವಗೆ ಗ್ರಾಮದ ಮುಖಂಡರು ಮತ್ತು ಪಂಚರು ಮಧ್ಯಪ್ರವೇಶಿಸಿ, ಯುವಕರಿಗೆ ಎರಡೇಟು ನೀಡಿ ಜಗಳ ಬಿಡಿಸಿದ್ದರು. ಇದಾದ ಬಳಿಕ ನಾವಗೆ ಗ್ರಾಮದ ಯುವಕರು ಬಾದರವಾಡಿ ಯುವಕರಿಗೆ ನಿಮ್ಮನ್ನು ನೋಡಿಕೊಳ್ಳುವುದಾಗಿ ವಾರ್ನಿಂಗ್ ಮಾಡಿದ್ದರು.…

Read More

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ Novavax ನ ಸಹಾಯಕ ತಂತ್ರಜ್ಞಾನವನ್ನು ಬಳಸಿಕೊಂಡಿರುವ R21/Matrix-Mmalaria ಲಸಿಕೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಅಗತ್ಯವಿರುವ ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮ ಕಾರಿತ್ವದ ಮಾನದಂಡಗಳನ್ನು ಪೂರೈಸಿದ ನಂತರ ಈ ಶಿಫಾರಸು ಮಾಡಿದೆ.  ವಿಶ್ವ ಆರೋಗ್ಯ ಸಂಸ್ಥೆ (WHO) ನ ಸ್ವತಂತ್ರ ಸಲಹಾ ಸಂಸ್ಥೆ, ಸ್ಟ್ರಾಟೆಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್ (SAGE) ಮತ್ತು ಮಲೇರಿಯಾ ಪಾಲಿಸಿ ಅಡ್ವೈಸರಿ ಗ್ರೂಪ್ (MPAG) ಯಿಂದ ವಿವರವಾದ ವೈಜ್ಞಾನಿಕ ವಿಮರ್ಶೆಯನ್ನು ಅನುಸರಿಸಿ, R21/Matrix-M ಮಲೇರಿಯಾ ಲಸಿಕೆಯನ್ನು ಬಳಸಲು ಶಿಫಾರಸು ಮಾಡಲಾಗಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬಿಡುಗಡೆ ವೇಳೆ ಹೇಳಲಾಗಿದೆ.  ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಮತ್ತು ಶಿಫಾರಸುಗಳೊಂದಿಗೆ, ಹೆಚ್ಚುವರಿ ನಿಯಂತ್ರಕ ಅನುಮೋದನೆಗಳು ಶೀಘ್ರದಲ್ಲೇ ಅನುಸರಿಸುವ ನಿರೀಕ್ಷೆಯಿದೆ ಮತ್ತು R21/Matrix-M ಲಸಿಕೆ ಪ್ರಮಾಣಗಳು ಮುಂದಿನ ವರ್ಷದ ಆರಂಭದಲ್ಲಿ ಹೆಚ್ಚು ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಈಗಾಗಲೇ ವಾರ್ಷಿಕ 100…

Read More

ಬೆಂಗಳೂರು ಗ್ರಾಮಾಂತರ: ಡೀಸೆಲ್  ಲಾರಿ ಪಲ್ಟಿ ಹೊಡೆದು ಹೊತ್ತಿ ಉರಿದ ಘಟನೆ  ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮೇಲುಮಲೈ ಬಳಿ ನಡೆದಿದೆ. ತಮಿಳುನಾಡಿನ ಹೊಸೂರು ಕಡೆಯಿಂದ ಕುರುಬರ ಪಲ್ಲಿ ಕಡೆ ಹೋಗುತ್ತಿದ್ದ ಲಾರಿ ಅತಿ ವೇಗವಾಗಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗಿದ್ದು ಪಲ್ಟಿ ಹೊಡದ ಪೋರ್ಸ್‌ʼಗೆ ದಾರಿ ಮಧ್ಯದಲ್ಲೇ ಹೊತ್ತಿ ಉರಿದಿದೆ. ಲಾರಿ ಚಾಲಕನಿಗೆ ಗಂಭೀರ ಗಾಯ ಕೃಷ್ಣಗಿರಿಗೆ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು  ಚೆನ್ನೈ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾಣಿಸಿಕೊಂಡ ಬೆಂಕಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲುಹರಸಾಹಸ ಒಂದು ಗಂಟೆಯಿಂದ ಸುಮಾರು 5 ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು ಬೆಂಕಿ ಹತ್ತಿ ಉರಿದಿದ್ದಕ್ಕೆ  ಸುಟ್ಟು ಕರಕಲಾದ ಲಾರಿ

Read More

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಂದ್ರೆ ಅದು ಪ್ರಾಣಿ-ಪಕ್ಷಿ ಪ್ರಿಯರ ನೆಚ್ಚಿನ ತಾಣ. ಇದೀಗ ಪಾರ್ಕ್ ಗೆ ಹೊಸ ಅಥಿತಿಯೊಬ್ಬರ ಆಗಮನವಾಗಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸೊಬಗನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತಿದೆ. ಅಷ್ಟಕ್ಕೂ ಯಾರಪ್ಪಾ ಆ ಹೊಸ ಅಥಿತಿ ಅಂತೀರಾ ನೋಡಿ ಈ ಸ್ಟೋರಿಯಲ್ಲಿ.. ಹೀಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಮುದ್ದಾದ ಸೊಂಡಲಿನಿಂದ ಎಲ್ಲರನ್ನು ಆಕರ್ಷಿಸುತ್ತಿರುವ ಮರಿಯಾನೆ. ಇನ್ನೊಂದೆಡೆ ಮರಿಯಾನೆಯನ್ನು ರಕ್ಷಣೆ ಮಾಡಿಕೊಳ್ಳುತ್ತಿರುವ ತಾಯಾನೆಯ ಗುಂಪು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ಸೀಗೆಕಟ್ಟೆ ಆನೆ ಕೇಂದ್ರದಲ್ಲಿ. ಹೌದು ಇಲ್ಲಿನ 15 ವರ್ಷದ ರೂಪಾ ಎಂಬಾ ಆನೆಯು ಮುದ್ದಾದ ಹೆಣ್ಣು ಮರಿಯಾನೆಗೆ ಜನ್ಮ ನೀಡಿದ್ದಾಳೆ. ಮರಿಯಾನೆಯ ಜನನದಿಂದ ಬನ್ನೇರುಘಟ್ಟ ಉದ್ಯಾನವನದ ಸಫಾರಿಗೆ ಬರುವ ಪ್ರವಾಸಿಗರಿಗೆ ಮರಿಯಾನೆಯನ್ನ ನೋಡುವ ಭಾಗ್ಯ ಒದಗಿದೆ. ಮಾತ್ರವಲ್ಲದೇ ಆನೆ ಮರಿ ಜನನದಿಂದ ಬನ್ನೇರುಘಟ್ಟ ಪಾರ್ಕ್ನಲ್ಲಿ ಸಂತಸ ಮನೆಮಾಡಿದ್ದು, ಆನೆಗಳ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ತಾಯಾನೆ ಹಾಗೂ…

Read More

ಬೆಂಗಳೂರು : 2024ರಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಸಭೆ ನಡೆಸಿದ ಅವರು ಮಾತನಾಡಿದರು. ಮುಂಗಾರಿನಲ್ಲಿ ಒಳ್ಳೆ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಪ್ರಕೃತಿ ಸಹಾಯವಿಲ್ಲದಿದ್ದರೆ, ಸರ್ಕಾರ ಏನು ಪರಿಹಾರ ಕೊಟ್ಟರು ಸಾಕಾಗುವುದಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈ ವೈಪರಿತ್ಯ ಕಾಣುತ್ತಿದ್ದೇವೆ ಎಂದು ಬೇಸರಿಸಿದರು. ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ ರಾಜ್ಯದ ಜನರ ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ. ಜನಪರ, ಸಮಾಜಮುಖಿ ಧೋರಣೆ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು, ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 2024 ರಾಜ್ಯಕ್ಕೆ ಆಶಾದಾಯಕವಾಗಿದೆ ಸಂವಿಧಾನ ಅರಿತು ಅದರಂತೆ ನಡೆಯಬೇಕಿದೆ. ಈ ದಿಕ್ಕಿನಲ್ಲಿ ಪ್ರಯತ್ನ ಮಾಡೋಣ. ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡೋಣ. 2024ನೇ ವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದು, ಈ ವರ್ಷ…

Read More

ಬೆಂಗಳೂರು:- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾಳೆ ಬೆಂಗಳೂರು ಜನರ ಅಹವಾಲು ಸ್ವೀಕರಿಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು/ ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜನವರಿ 3ರಿಂದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಹೆಸರಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೀರುಗಾಲುವೆ-ಕೆರೆ ಒತ್ತುವರಿ ತೆರವು ಮಾಡಿದ್ದರ ಲೆಕ್ಕ ಕೊಟ್ಟ ಬಿಬಿಎಂಪಿ ಜನರು ಸರ್ಕಾರಿ ಕಛೇರಿಗಳಿಗೆ ಬರುವ ಬದಲು ಅವರ ಮನೆ ಬಾಗಿಲಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 28 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ವಲಯವಾರು 2 ಅಥವಾ 3 ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಆಸನ, ಕುಡಿಯುವ ನೀರು, ತಾತ್ಕಾಲಕ ಶೌಚಾಲಯಗಳ ವ್ಯವಸ್ಥೆ ಹಾಗೂ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲದೆ ವಿದ್ಯುತ್, ಜನರೇಟರ್ ವ್ಯವಸ್ಥೆ ಸೇರಿದಂತೆ ಎಲ್ಲಾ…

Read More

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಿಯೇ ಮಾಡುತ್ತೇವೆ. ಬಿವೈ ವಿಜಯೇಂದ್ರ ಮುಖ್ಯಮಂತ್ರಿ ಆಗುವವರೆಗೂ ನಾವು ಅವರ ಶಕ್ತಿಯಾಗಿರುತ್ತೇವೆ. ಬಿವೈ ವಿಜಯೇಂದ್ರ ಮೀನಿನ ಮರಿಯಂತೆ. ಮೀನಿನ ಮರಿಗೆ ಈಜು ಕಲಿಸುವ ಅವಶ್ಯಕತೆ ಇಲ್ಲ. ಬಿಎಸ್​ ಯಡಿಯೂರಪ್ಪ ಅವರಿಗಿಂತ ಬಿವೈ ವಿಜಯೇಂದ್ರ ಒಂದು ಹೆಜ್ಜೆ ಮುಂದಿರುತ್ತಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಗೆ ಭೇಟಿ ನೀಡಿದ್ದಾರೆ. ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸಬೇಕಿದೆ. ಕಳೆದ ಚುನಾವಣೆಯಲ್ಲಿ ತಪ್ಪು ಕಲ್ಪನೆಯಿಂದ ಹಿನ್ನಡೆಯಾಯಿತು. ಕರ್ನಾಟಕದಲ್ಲಿ ಬಿಜೆಪಿ ಬಹಳ ಬಲಿಷ್ಠವಾಗಿದೆ. https://ainlivenews.com/curry-leaves-are-good-for-cooking-and-good-for-health-this-has-many-benefits/ ಗಡಿಯಲ್ಲಿ ಸೈನಿಕರಿದ್ದಂತೆ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರಿದ್ದಾರೆ. ಪ್ರವಾಹ, ಕೊರೊನಾ ಸಂದರ್ಭದಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದೇವೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ನಾವು ವಿಫಲವಾದೆವು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಮಸ್ಯೆ ಬದಿಗೊತ್ತಿ, ಒಂದಾಗಿ ಕೆಲಸ ಮಾಡಬೇಕಿದೆ. 28 ಕ್ಷೇತ್ರಗಳಲ್ಲೂ ಗೆದ್ದು ದೇಶದಲ್ಲಿ ಕರ್ನಾಟಕ…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರಾ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಈ ಚಿತ್ರ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ ಈ ಸಿನಿಮಾ 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ ಈ ಚಿತ್ರ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವಿಷಯವನ್ನ ಕಾಟೇರ ಚಿತ್ರತಂಡವೇ ಅನೌನ್ಸ್ ಮಾಡಿದೆ. ಅಲ್ಲಿಗೆ ಕಾಟೇರ ನಾಲ್ಕು ದಿನದ ಒಟ್ಟು ಕಲೆಕ್ಷನ್ 60 ಕೋಟಿ ದಾಟಿದೆ. ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾವನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ನೋಡಿದ್ದಾರೆ. ಅವರ ಜೊತೆ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಸಾಥ್ ನೀಡಿದ್ದಾರೆ. ಕಾಟೇರ ಸಿನಿಮಾದ ಪ್ರಲ್ಹಾದ್ ಜೋಶಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಾಟೇರ ಬಿಗ್ ಹಿಟ್ ಅಗ್ತಿರೋದಕ್ಕೆ ಮೈನ್ ರೀಸನ್ ಸಿನಿಮಾದ ಸ್ಟೋರಿ. ಉಳುವವನೇ ಭೂ ವಡೆಯ ಕಥೆಗೆ ಲಿಂಗ್ ಕೊಟ್ಟು ಮಾಸ್ ಎಲಿಮೆಂಟ್ಸ್ ಇಟ್ಟು ಸ್ಟೋರಿ ಬರೆದ್ದಾರೆ. ಈ ಕಥೆ 70ರ ದಶಕದಲ್ಲಿ ನಡೆಯುತ್ತೆ.…

Read More