Author: AIN Author

ಲಕ್ನೋ: ಶ್ರೀರಾಮನ ಭಕ್ತರಿಗೆ ಮಾತ್ರ ರಾಮಲಲ್ಲಾ ಪ್ರತಿಷ್ಠಾಪನೆಗೆ ಆಹ್ವಾನ ನೀಡಲಾಗಿದೆ ಎಂದು ಅಯೋಧ್ಯೆ ರಾಮಮಂದಿರದ (Ayodhya Ram Mandir) ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಹೇಳಿದ್ದಾರೆ. ಈ ಮೂಲಕ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು (Uddhav Thackeray) ನೀಡಿದ್ದ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ ಎಂದು ಇತ್ತೀಚೆಗೆ ಉದ್ಧವ್ ಠಾಕ್ರೆ ಹೇಳಿದ್ದರು. ಈ ಹೇಳಿಕೆಗೆ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯೆ ನೀಡಿದ್ದು, ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂಬ ಮಾತು ತಪ್ಪು. ಪ್ರಧಾನಿ ನರೇಂದ್ರ ಮೋದಿಯವರು ಅಪಾರ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಇದು ಅವರ ರಾಜಕೀಯವಲ್ಲ, ಭಕ್ತಿ ಎಂದಿದ್ದಾರೆ. https://ainlivenews.com/benefits-of-eating-black-dry-grapes/ ಉದ್ಧವ್ ಠಾಕ್ರೆಯವರು, ರಾಮ ಮಂದಿರ ಉದ್ಘಾಟನೆಗೆ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅಲ್ಲಿಗೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ. ರಾಮ ಯಾವುದೇ ಪಕ್ಷದ ಆಸ್ತಿಯಲ್ಲ,…

Read More

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇರೋದು ಹಿಂದೂ ವಿರೋಧಿ ಸರ್ಕಾರ  ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಂತ ಪದೇ ಪದೇ ನೆನಪು ಮಾಡಿಕೊಡುವ ಕೆಲಸ ಮಾಡ್ತಿದೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ನಿನ್ನೆ ಹುಬ್ಬಳ್ಳಿಯಲ್ಲಿ 30 ವರ್ಷದ ಹಳೇ‌ ಕೇಸನ್ನ ರೀ ಓಪನ್ ಮಾಡಿ ಶ್ರೀಕಾಂತ್ ಪೂಜಾರಿ ಅವರನ್ನ ಅರೆಸ್ಟ್ ಮಾಡಿರೋಧನ್ನ ಬಿಜೆಪಿ ವಿರೋಧಿಸುತ್ತೆ. ಇಡೀ ದೇಶದಲ್ಲಿ ಕೋಟ್ಯಾಂತರ ಹಿಂದೂ ಕಾರ್ಯಕರ್ತರು ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆ ಸಂಧರ್ಭದಲ್ಲಿ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಇಡೀ ದೇಶಕ್ಕೇ ತೋರಿಸಿದ್ದಾರೆ ಬಿಜೆಪಿ ಇದನ್ನ ಬಲವಾಗಿ ಖಂಡಿಸುತ್ತೆ ಅರುಣ್ ಯೋಗರಾಜ್ ರಾಮನ ಶಿಲೆ ಕೆತ್ತಿದ್ದಾರೆ ಅಂತ ಸಂತೋಷ ಪಟ್ಟಿದ್ದೆವು‌ ಇಂತಹ ಸಂದರ್ಭಗಳಲ್ಲಿ ಸರ್ಕಾರ ಬಂಧನ ಮಾಡುವ ಕೆಲಸ ಮಾಡಿದೆ ಎಂದರು. ನಾಳೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡ್ತಿದ್ದೇನೆ ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ…

Read More

ಶಿವಮೊಗ್ಗ:- ಸತ್ತವರ ಹೆಸರಲ್ಲಿ ಹಣ ತಿಂದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೋವಿಡ್ ವೇಳೆ ಸತ್ತವರ ಹೆಸರಲ್ಲಿ ₹40 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿರುವ ಬಿಜೆಪಿಯವರಿಗೆ ಚೆಕ್ ಬೌನ್ಸ್ ನೆಪದಲ್ಲಿ ನನ್ನ ರಾಜೀನಾಮೆ ಕೇಳುವ ನೈತಿಕತೆ ಇದೆಯೇ’ ಎಂದರು. ಕೋವಿಡ್ ಸಂದರ್ಭದಲ್ಲಿನ ಭ್ರಷ್ಟಾಚಾರದ ಬಗ್ಗೆ ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಹೆಸರು ಕೇಳಿ ಬಂದಿದೆ. ಹಾಗಿದ್ದರೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ‌.ವಿಜಯೇಂದ್ರ ನನ್ನ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ’ ಎಂದರು. ‘ಚೆಕ್ ಮೂಲಕ ಲಂಚ ಪಡೆದು, ಸಹಿ ಮಾಡಿ ಅಪ್ಪನ ಜೈಲಿಗೆ ಕಳುಹಿಸುವ ಕೆಲಸ ನಾನು ಮಾಡಿಲ್ಲ ಎಂದು ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಮಧು ಬಂಗಾರಪ್ಪ, ದಮ್ಮು, ತಾಕತ್ತು ಇದ್ದರೆ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪಗಳಿಗೆ ವಿಜಯೇಂದ್ರ ಉತ್ತರಿಸಲಿ’ ಎಂದು ಒತ್ತಾಯಿಸಿದರು. ‘ನಮ್ಮ ತಂದೆಯ ವಿರುದ್ಧ…

Read More

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಕೂಡ ಒಂದಾಗಿದ್ದು  ರಾಜ್ಯದ ಜನತೆಗೆ ಇಂಧನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ವರ್ಷ ಆರಂಭದಲ್ಲಿ ಎಸ್ಕಾಂಗಳ ಗ್ರಾಹಕರ ಖಾತೆಗೆ 37 ಪೈಸೆ ಹಣ ಜಮೆ ಮಾಡಿದ್ದಾರೆ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ವೆಚ್ಚ ಡಿಸೆಂಬರ್ ತಿಂಗಳಲ್ಲಿ ಮೈನಸ್  ಹೀಗಾಗಿ ಎಸ್ಕಾಂ ಗ್ರಾಹಕರಗಳ ಖಾತೆಗೆ 37 ಪೈಸೆ ಜಮೆ ಮಾಡಿದ್ದಾರೆ.ಯಾವಾಗಲೂ ವಿದ್ಯುತ್ ದರ ಹೆಚ್ಚಿಸಿ ಶಾಕ್ ನೀಡುತ್ತಿದ್ದ ಎಸ್ಕಾಂಗಳು ಆದ್ರೆ ಈ ಬಾರಿ ವಿದ್ಯುತ್ ಗ್ರಾಹಕರ ಖಾತೆಗೆ 37 ಪೈಸೆ ಜಮೆ ಡಿಸೆಂಬರ್ ತಿಂಗಳಿನ ಬಿಲ್ ಮೊತ್ತದಲ್ಲಿ ಕಡಿತಗೊಳಿಸಲಾಗಿದೆ. ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ ಈ ಮಾಸಿಕದಲ್ಲಿ ಮೈನಸ್‌ ಬಂದಿದೆ. ಅಂದರೆ 37 ಪೈಸೆಯನ್ನು ಗ್ರಾಹಕರ ಖಾತೆಗೆ ಹಾಕಲಾಗುವುದು. ಇದು ಪೊಸಿಟಿಸ್‌ ಸುದ್ದಿ. ಪ್ರತಿ ಬಾರಿ ಬೆಸ್ಕಾಂ ವಿದ್ಯುತ್‌ ಶುಲ್ಕ ಜಾಸ್ತಿ ಮಾಡುತ್ತದೆ ಎಂದು ಹೇಳುತ್ತೀರಿ ಅಲ್ವಾ, ಆದರೆ ಈ ಬಾರಿ ಮೈನಸ್‌ 37 ಪೈಸೆ ಬೆಸ್ಕಾಂ…

Read More

ಉಡುಪಿ: ತಡರಾತ್ರಿ ಎರಡು ಗಂಟೆ ಸುಮಾರಿಗೆ ಉಡುಪಿಯ ಲಕ್ಷ್ಮೀಂದ್ರ ನಗರದಲ್ಲಿ ಅಪಘಾತ ಸಂಭವಿಸಿದೆ. ಮಣಿಪಾಲ ಕಡೆಯಿಂದ ಬರುತ್ತಿದ್ದ ಆಂಬುಲೆನ್ಸ್, ಡಿವೈಡರ್ ನ ಗ್ಯಾಪ್ ನಲ್ಲಿ ಬಲಕ್ಕೆ ತಿರುಗಿ ಮೆಡಿಕಲ್ ಶಾಪ್ ಒಂದಕ್ಕೆ ನುಗ್ಗಿದೆ. ಅಂಬುಲೆಸ್ನ ಬ್ರೇಕ್ ಫೇಲ್ ಆಗಿರುವುದರಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ತಿಳಿದುಬಂದಿದೆ. https://ainlivenews.com/benefits-of-eating-black-dry-grapes/ ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದಾನೆ. ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೆಲ್ ಹಾಗೂ ಜನೌಷಧಿ ಮೆಡಿಕಲ್ ಗೆ ಅಪಾರ ಹಾನಿಯಾಗಿದೆ. ತಡರಾತ್ರಿ ಯಾವುದೇ ವಾಹನ ಸಂಚಾರ, ಜನ ಸಂಚಾರ ಇಲ್ಲದೆ ಇರುವುದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಏಕಾಏಕಿ ವಾಹನ ನುಗ್ಗಿ ಸಂಭವಿಸಿರುವ ಅಪಘಾತ ಸ್ಥಳ ಕಾಣಲು ಭೀಕರವಾಗಿದೆ.

Read More

ಕಲಬುರ್ಗಿ:- ರಾಮನ ಭಕ್ತರಲ್ಲದವರಿಗೆ ಮಂದಿರ ಉದ್ಘಾಟನೆಗೆ ಆಹ್ವಾನ ಇಲ್ಲ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಕೈ ಶಾಸಕ ಅಲ್ಲಮಪ್ರಭು ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಬಿಜೆಪಿಯವರು ರಾಮನ ಭಕ್ತರಲ್ಲ ಓಟಿನ ಭಕ್ತರು ಅತ ತಿರುಗೇಟು ಕೊಟ್ಟಿದ್ದಾರೆ. ನಿಜವಾಗಿ ನಾವು ರಾಮನ ಭಕ್ತರು ಅವರಲ್ಲ ಅಂತ ಕಿಡಿಕಾರಿದ ಪಾಟೀಲ್ ಅವರು ಒಂದಿನವಾದ್ರೂ ಗುಡಿಗೆ ಹೋಗಿದ್ದಾರಾ ಕೇಳಿ ನಾನು ದಿನವೂ ರಾಮನ ಗುಡಿಗೆ ಹೋಗ್ತೀನಿ ಹೀಗಾಗಿ ಕೇವಲ ರಾಜಕೀಯಕ್ಕಾಗಿ ರಾಮನ ಹೆಸರು ಹೇಳೋದು ಸರಿಯಲ್ಲ ಎಂದರು.

Read More

ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಮದ್ಯಪ್ರಿಯರಿಗೆ  ರಾಜ್ಯ ಸರ್ಕಾರ ಮತ್ತೊಂದು ಶಾಕ್‌ ಕೊಟ್ಟಿದ್ದು   ಇಂದಿನಿಂದ ಬಡವರು ಕುಡಿಯುವ ಮದ್ಯದ ದರವನ್ನು ಏರಿಸಲು ಪ್ಲಾನ್‌ ಮಾಡಿದ್ದು ಇದು ಬಡವರಿಗೆ ಹೊಡೆತ ಬೀಳಬಹುದು.ಇಂದಿನಿಂದ ರಾಜ್ಯಾದ್ಯಂತ ಮೂರು ಬ್ರಾಂಡ್ ಗಳ ಮೇಲಿನ ದರ ಹೆಚ್ಚಳ ಮಾಡಿದೆ. ಬಡವರ ನೆಚ್ಚಿನ‌ ಕೆಲ ಬ್ರಾಂಡ್ ಗಳ ದರ ಹೆಚ್ಚು ಮಾಡಿ ಶಾಕ್ ಕೊಟ್ಟಿರುವ ರಾಜ್ಯ ಸರ್ಕಾರ ಮಧ್ಯಮ ವರ್ಗದ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ಬಂದೊದಗಿದೆ. ಈಗಾಗಲೇ 17% ರಷ್ಟು ಓವರ್ ಆಲ್ ಮದ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು ಈಗ ಮತ್ತೊಮ್ಮೆ ಬಡವರ ಕುಡಿಯುವ ಮೂರು ಹಾಟ್ ಫೈವರಿಟ್ ಬ್ರಾಂಡ್ ಗಳ ದರ ಹೆಚ್ಚಳ ಕ್ವಾಟರ್ ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿದ ಮದ್ಯ ಉತ್ವಾದನ‌‌‌ ಕಂಪನಿಗಳು ಈಗಾಗಲೇ ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಸಂದೇಶ ಕಳುಹಿಸಿದ್ದ ಮದ್ಯ ತಯಾರಿಕ ಕಂಪನಿಗಳು ರಾಜ್ಯದ ಕೆಳ ವರ್ಗದ ಜನ ಅತಿ ಹೆಚ್ಚು ಸೇವಿಸುವ ಈ ಮೂರು…

Read More

ಹುಬ್ಬಳ್ಳಿ :ಸಾಮಾಜಿಕ ಕಾರ್ಯಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಸಿ ಐ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಸಿಐಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಅದರಗುಂಚಿ ಎನ್ಎಸ್ಎಸ್ ಘಟಕಗಳ ವತಿಯಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್‌.ಎಫ್ ಭರಮಗೌಡ್ರ ಹುಟ್ಟುಹಬ್ಬದ ಪ್ರಯುಕ್ತ ಅಂಚಟಗೇರಿ ಚನ್ನಾಪುರ ರಸ್ತೆಯ ಮಧ್ಯಭಾಗದಲ್ಲಿರುವ ಬಸವ ಶ್ರೀ ಫೌಂಡೇಶನ್ ಅನಾಥಾಶ್ರಮ ಹಾಗೂ ವೃದ್ಧಾಶ್ರಮಕ್ಕೆ ಎನ್ ಎಸ್ ಎಸ್ ಸ್ವಯಂ ಸೇವಕ ಸೇವಕೀಯರು ಭೇಟಿ ನೀಡಿ ಆಶ್ರಮದಲ್ಲಿರುವ ವೃದ್ಧರಿಗೆ ಅಲ್ಪ ಉಪಹಾರವನ್ನು ನೀಡುವುದರ ಮೂಲಕ ಅವರ ಯೋಗಕ್ಷೇಮವನ್ನು ವಿಚಾರಿಸಿ ಸಾಮಾಜಿಕ ಕಳಕಳಿಯನ್ನು ಮೆರೆದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಎಫ್ ಭರಮಗೌಡ್ರ ಮಾತನಾಡಿ ಹೆತ್ತ ತಾಯಿ ಹೊತ್ತ ನಾಡನ್ನು ರಕ್ಷಣೆ ಮಾಡುವ ಜವಾಬ್ದಾರಿ ಆಯಾ ಮಕ್ಕಳ ಕರ್ತವ್ಯವಾಗಿದೆ ಅಷ್ಟೇ ಅಲ್ಲದೆ ಯಾವ ಶೈಕ್ಷಣಿಕ ಪದವಿಯನ್ನು ಪಡೆದುಕೊಂಡರೂ ಏನು ಪ್ರಯೋಜನವಿಲ್ಲ ಎಂದು ಹೇಳಿದರು. ಸಿಬ್ಬಂದಿ ಕಾರ್ಯದರ್ಶಿಗಳಾದ ಎಸ್.ಎಂ .ಕಳಸೂರ, ಪ್ರಾಚಾರ್ಯರಾದ ಶ್ರೀಮತಿ .ಎಸ್.ಐ…

Read More

ಒಂದು ಸರಳ ಪ್ರೇಮಕಥೆಯ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀನ್ಯಾರೆಲೆ.. ನಿನಗಾಗಿಯೇ..ಈ ಜೀವ ಭಾವ ಸೋಜಿಗ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯದ ಮೆಲೋಡಿ ಮಸ್ತಿಯನ್ನು ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್‌ ಮಲಿಕ್‌ ಧ್ವನಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋಗೆ ಡೈರೆಕ್ಷನ್‌ ಮಾಡಿದ್ದಾರೆ ಸುನಿ. ವಿನಯ್‌ ರಾಜಕುಮಾರ್‌ ಹೀರೋ ಆಗಿರುವ ಚಿತ್ರಕ್ಕೆ ಇಬ್ಬರು ನಾಯಕಿಯರು. ತಮಿಳಿನ ಸ್ವಾತಿಷ್ಠ ಕೃಷ್ಣನ್‌ ಹಾಗೂ ರಾಧಾಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್‌ ನಾಯಕಿಯರಾಗಿದ್ದಾರೆ.. ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ. ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ‘ಅವತಾರ್ ಪುರುಷ’ ಬಳಿಕ ಸುನಿ ‘ಗತವೈಭವ’…

Read More

ಪಾರ್ಟಿ ಪ್ರಿಯರಿಗೆ ಕಿಕ್ ಏರಿಸುವ ಮ್ಯಾಟ್ನಿ ಸಿಂಗಿಂಗ್ ಮಸ್ತಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಬಾರೋ ಬಾರೋ ಬಾಟಲ್ ತರೋ ಎಂಬ ಪಾರ್ಟಿ ನಂಬರ್ ಗೆ ನೀನಾಸಂ ಸತೀಶ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಸಂಜೆ ಮೇಲೆ ಸುಮ್ಮನೇ ಹಾಗೇ ಫೋನ್ ಮಾಡ್ಲಾ ನಿಂಗೆ ಅಂತಾ ರಚ್ಚು ಜೊತೆ ಕುಣಿದ್ದ ಮಂಡ್ಯ ಹೈದ ಈಗ ಪಾರ್ಟಿ ಮೂಡ್ ಗೆ ಜಾರಿದ್ದಾರೆ. ಮ್ಯಾಟ್ನಿ ಸಿನಿಮಾದ ಮತ್ತೊಂದು ಸಿಂಗಿಂಗ್ ನ್ಯೂಯರ್ ರಂಗು ಹೆಚ್ಚಿಸಿದೆ. ನಟರಾಕ್ಷಸ ಡಾಲಿ ಧನಂಜಯ್ ಅನಾವರಣ ಮಾಡಿರುವ ಬಾರೋ ಬಾರೋ ಬಾಟಲ್ ತರೋ ಹಾಡು ಸಂಗೀತ ಪ್ರಿಯರ ಕಿವಿ ಇಂಪು ಮಾಡಿದೆ. ಸತೀಶ್ ಜೊತೆ ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಪೂರ್ಣ ಕುಣಿದು ಕುಪ್ಪಳಿಸಿದ್ದಾರೆ. ಪಾರ್ಟಿ ಪ್ರಿಯರಿಗೆ ಹೇಳಿ ಮಾಡಿಸಿದಂತಿರುವ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಪದಪುಂಜ ಪೊಣಿಸಿ ಸಂಗೀತ ಒದಗಿಸುವುದರ ಜೊತೆಗೆ ಸತೀಶ್, ರಾಣಾ ಜೊತೆಗೂಡಿ ಕಂಠ ಕುಣಿಸಿದ್ದಾರೆ. ಮ್ಯಾಟ್ನಿ ಸಿನಿಮಾಗೆ ಮನೋಹರ್ ಕಾಂಪಳ್ಳಿ ಆಕ್ಷನ್ ಕಟ್ ಹೇಳಿದ್ದು, ನೀನಾಸಂ ಸತೀಶ್, ರಚಿತಾ ರಾಮ್…

Read More