Author: AIN Author

ಚಿತ್ರದುರ್ಗ: ಸಿದ್ದರಾಮಯ್ಯ ನವರೇ ರಾಮ ಅಯೋಧ್ಯೆಗೆ ಹೋಗಿ ಯಾಕೆ ಪೂಜೆ ಮಾಡಬೇಕು, ಅವರ ಊರಿನಲ್ಲಿ ರಾಮಮಂದಿರವಿದೆ ಅಲ್ಲಿ ಪೂಜೆ ಮಾಡುತ್ತಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಅದು ಬಿಜೆಪಿ ರಾಮ,ಅವರಿವರನ್ನು ಕರೆಯಿಸಿ ಉದ್ಘಾಟನೆ ಮಾಡುತ್ತಾರೆ, ನಮ್ಮ ರಾಮ ಎಲ್ಲಾ ಜಿಲ್ಲೆಯಲ್ಲಿರುತ್ತಾರೆ.  ನಮ್ಮ ಎದೆಯಲ್ಲಿದ್ದಾರೆ. ನಾನು ಆಂಜನೇಯ, ಆಂಜನೇಯ ಏನು ಮಾಡಿದ್ದ ಎಂದು ಗೊತ್ತಲ್ಲ? ನಮ್ಮ ಸಮುದಾಯದವರು ಹೆಚ್ಚು ಶ್ರೀರಾಮ, ಆಂಜನೇಯ ಹನುಮಂತ ಎಂದು ಹೆಸರಿಟ್ಟುಕೊಳ್ಳುತ್ತೇವೆ, https://ainlivenews.com/benefits-of-eating-black-dry-grapes/ ಧರ್ಮ ಧರ್ಮಗಳ ನಡುವೆ ಒಡೆದಾಳುವ ನೀತಿ ಅವರದ್ದು, ಮುಸ್ಲಿಂ ಧರ್ಮವನ್ನು ಇಯಾಳಿಸಿದರೆ ಇತರೇ ಧರ್ಮದವರು ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ಯಾವ ಹಿಂದೂ ಧರ್ಮದವರಿಗೆ ಅವರು ಒಳ್ಳೆದು‌ಮಾಡಿದ್ದಾರೆ. ನಾವು ಹಿಂದುಗಳೇ, ಯಾವ ಧರ್ಮ ಶೋಷಣೆ ಮಾಡುತ್ತಿದೆ. ಶೋಷಿತರಿಗೆ ಯಾವುದಾದರೂ ಪರಿಹಾರ ಇಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಇಂದಿಗೂ ಕೂಡ ಜನ ವಾಸ ಮಾಡದಿರುವ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದಾರೆ ಅಲ್ಲಿ‌ಮೊದಲು ಮನೆ ಕಟ್ಟಿ ಮಂದಿರ ಕಟ್ಟಬೇಕು. ಇಂತವರ ಕಣ್ಣೀರೊರೆಸಿ…

Read More

ಮೈಸೂರು: ಮೈಸೂರಿನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಅಪಘಾತ ನಡೆದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಮೈಸೂರಿನ ಜಲದರ್ಶಿನಿ ಪ್ರವಾಸ ಮಂದಿರದ ಬಳಿ ಘಟನೆ ನಡೆದಿದೆ. ಹುಣಸೂರಿನಿಂದ ಮೈಸೂರಿಗೆ ಬರುತಿದ್ದ ಸಂದರ್ಭ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. https://ainlivenews.com/benefits-of-eating-black-dry-grapes/ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ತಪ್ಪಿಸುವ ಸಲುವಾಗಿ ಒಂದು ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದು, ಹಿಂಬದಿಯಿಂದ ಬಂದ ಮತ್ತೊಂದು ಬಸ್ ಈ ಬಸ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಮುಖ, ಕೈಕಾಲುಗಳಿಗೆ ಗಾಯವಾಗಿದೆ. ಘಟನೆಯಿಂದ ಹುಣಸೂರು-ಮೈಸೂರು ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. 

Read More

ಸ್ಯಾಂಡಲ್‌ವುಡ್ ಹೀರೋ ಅಭಿಷೇಕ್ ಅಂಬರೀಶ್ (Abhishek Ambareesh) ಪತ್ನಿ ಅವಿವಾ (Aviva) ಸ್ಪೆಷಲ್ ಫೋಟೋವೊಂದನ್ನ ಶೇರ್ ಮಾಡಿ ಹೊಸ ವರ್ಷದ ಆರಂಭಕ್ಕೆ ಶುಭಕೋರಿದ್ದಾರೆ. ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು ಅವಿವಾ ವಿಶೇಷವಾಗಿ ಶುಭಹಾರೈಸಿದ್ದಾರೆ. ಪತಿ ಅಭಿಷೇಕ್ ತೊಡೆ ಮೇಲೆ ಕುಳಿತು ಮುದ್ದಾಗಿ ನಗು ಬೀರುತ್ತಿರೋ ಫೋಟೋವನ್ನ ಅವಿವಾ (Aviva) ಶೇರ್ ಮಾಡಿ ಸ್ವೀಟ್ ಆಗಿ ನ್ಯೂ ಇಯರ್‌ಗೆ ವಿಶ್ಸ್ ತಿಳಿಸಿದ್ದಾರೆ ಕಳೆದ ವರ್ಷ ಜೂನ್ 5ಕ್ಕೆ ಅಭಿಷೇಕ್- ಅವಿವಾ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಇತ್ತೀಚೆಗೆ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡದಿತ್ತು. ಅವಿವಾ ಕೂಡ ಮಾಡೆಲ್, ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕವೂ ತಮ್ಮ ಕ್ಷೇತ್ರದಲ್ಲಿ ಅವಿವಾ ಆ್ಯಕ್ಟೀವ್ ಆಗಿದ್ದಾರೆ.

Read More

ಬೆಂಗಳೂರು: ಕೆಲವು ಬಿಜೆಪಿ ಶಾಸಕರು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರ ಬಳಿ ಕೆಲಸ ಮಾಡಿಸಿಕೊಳ್ಳಲು ರಾತ್ರಿ ಅವರ ಮನೆಗೆ ಬಂದು ಹೋಗುತ್ತಾರೆ ಎಂದು ಯಶವಂತಪುರದ ಬಿಜೆಪಿ ಶಾಸಕ ಎಸ್. ಟಿ ಸೋಮಶೇಖರ್ (ST Somashekar) ಹೇಳಿದ್ದಾರೆ. ಸದಾಶಿವನಗರದ ಡಿಕೆಶಿ ನಿವಾಸದ ಬಳಿ ಮಾತನಾಡಿದ ಅವರು, ಹೊಸ ವರ್ಷದ ಶುಭಾಶಯ ಹೇಳಲು ಬಂದಿದ್ದೆ. ನಿಮ್ಮ ನೇತೃತ್ವದಲ್ಲಿ ಬೆಂಗಳೂರು (Bengaluru) ಅಭಿವೃದ್ದಿ ಆಗಲಿ ಅಂತ ಹೇಳಿದೆ ಎಂದರು. ನಮ್ಮ ಕ್ಷೇತ್ರದ ಬಗ್ಗೆ ಒಂದು ಮನವಿ ಇತ್ತು ಹಾಗಾಗಿ ಬಂದಿದ್ದೆ. ಕೆಲ ಬಿಜೆಪಿ ಶಾಸಕರು ರಾತ್ರಿ ಬರುತ್ತಾರೆ. ಮತ್ತೊಂದಿಷ್ಟು ಜನ ಮಾಧ್ಯಮದ ಕಣ್ಣು ತಪ್ಪಿಸಿ ಹೋಗುತ್ತಾರೆ. ನಾನು ರಾಜರೋಷವಾಗಿ ಬಂದು ಹೋಗುತ್ತಿದ್ದೇನೆ. ಕೆಲವರ ಹಾಗೆ ಕತ್ತಲಲ್ಲಿ ಬಂದು ಹೋಗಲ್ಲ. ನಾನಿದ್ದಾಗಲೂ ಸಾಕಷ್ಟು ಜನ ಬರುತ್ತಿದ್ದರು. ಆದರೆ ನೀವು ಅವರನ್ನು ಗಮನಿಸುವುದಿಲ್ಲ, ಯಶವಂತಪುರ ಶಾಸಕರನ್ನು ಮಾತ್ರ ಗಮನಿಸುತ್ತೀರಿ ಎಂದು ಪ್ರತಿಕ್ರಿಯಿಸಿದರು.

Read More

ಚಿಕ್ಕಮಗಳೂರು: ಶಾಲಾ ಬಸ್ ಡ್ರೈವರ್‌ (School Bus Driver) ಜೊತೆಗಿನ ಪ್ರೇಮದಾಟಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ನಡೆದಿದೆ. ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ಶಾಲಾ ಬಸ್ ಡ್ರೈವರ್‌ 8ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಚಲಿಸುತ್ತಿದ್ದ ರೈಲಿಗೆ (Train) ಸಿಲುಕಿ ತಾನೂ ಮಾಡಿಕೊಂಡಿದ್ದಾನೆ. ಡ್ರೈವರ್‌ ಸಂತೋಷ್ (38), ವಿದ್ಯಾರ್ಥಿನಿ ಜಾಹ್ನವಿ (14) ಸಾವಿಗೀಡಾದ ದುರ್ದೈವಿಗಳು. ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ (Private School) ಜಾಹ್ನವಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಅದೇ ಶಾಲೆಯಲ್ಲಿ ಸಂತೋಷ್ ಕಳೆದ ಮೂರು ವರ್ಷಗಳಿಂದ ಬಸ್ ಡ್ರೈವರ್‌ ಆಗಿದ್ದ. ವಿದ್ಯಾರ್ಥಿನಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಬಸ್ ಡ್ರೈವರ್‌ ಕಿರುಕುಳ ನೀಡುತ್ತಿದ್ದ ಬಗ್ಗೆ ವಿದ್ಯಾರ್ಥಿನಿ ಪೋಷಕರು ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. https://ainlivenews.com/benefits-of-eating-black-dry-grapes/ ಭಾನುವಾರ ಸ್ನೇಹಿತರ ಜೊತೆ ನ್ಯೂಇಯರ್ ಪಾರ್ಟಿಗೆ ಹೋಗುವುದಾಗಿ ಜಾಹ್ನವಿ ಮನೆಯಿಂದ ಹೊರಟಿದ್ದಳು. ಆದ್ರೆ ಸಂತೋಷ್ ಆಕೆಯನ್ನ ತನ್ನೊಂದಿಗೆ ಕರೆದೊಯ್ದಿದ್ದ. ನಂತರ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಇಬ್ಬರು ಸಾವಿಗೀಡಾಗಿದ್ದಾರೆ. ಈ ಘಟನೆ…

Read More

ಬೆಂಗಳೂರು: ಕೋವಿಶೀಲ್ಡ್ (Covishield) ಅಥವಾ ಕೊವ್ಯಾಕ್ಸಿನ್ (Covaxin) 2ನೇ ಲಸಿಕೆ ಪಡೆದವರಿಗೆ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ 30,000 ಡೋಸ್ ಕಾರ್ಬೆವ್ಯಾಕ್ಸ್ (Corbevax) ಲಸಿಕೆಯನ್ನು ಸರಬರಾಜು ಮಾಡಿದೆ. ಈ ಲಸಿಕೆಯನ್ನು ವಿಜಾತಿ (ಹೆಟೆರೊಲಾಗಸ್) ಮುನ್ನೆಚ್ಚರಿಕೆಯಾಗಿ ನೀಡಬಹುದು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿದ ಬಳಿಕವೂ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಈ ಲಸಿಕೆ ನೀಡಬಹುದು 60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಲಸಿಕೆಯನ್ನು ಪಡೆಯಬಹುದು. ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ಈ ಲಸಿಕೆಯನ್ನು ನೀಡಲಾಗುವುದು. ಜಿಲ್ಲಾ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ. ಯಾವ ಜಿಲ್ಲೆಗೆ ಎಷ್ಟು ಕಾರ್ಬೆವ್ಯಾಕ್ಸ್ ಡೋಸ್ ಹಂಚಿಕೆ? ಬೆಂಗಳೂರು ನಗರ-840, ಬೆಂಗಳೂರು ಗ್ರಾಮಾಂತರ-480, ಬಿಬಿಎಂಪಿ-5,680, ಚಿಕ್ಕಬಳ್ಳಾಪುರ-520, ಕೋಲಾರ-680, ರಾಮನಗರ-440, ತುಮಕೂರು-1,300, ಬೆಳಗಾವಿ-2,280, ಧಾರವಾಡ-920, ಹಾವೇರಿ-780, ಉತ್ತರ ಕನ್ನಡ-660,…

Read More

ತೀರ್ಥಹಳ್ಳಿ : ಬೆಳ್ಳಂ ಬೆಳಗ್ಗೆ ತೀರ್ಥಹಳ್ಳಿಗೆ ಇ.ಡಿ ಅಧಿಕಾರಿಗಳು ಡೌಡಾಯಿಸಿದ್ದು ಪ್ರತಿಷ್ಠಿತ ಸಂಸ್ಥೆಯ ಮೇಲೆ ದಾಳಿ ನೆಡೆಸಿದ್ದಾರೆ. ಪ್ರಖ್ಯಾತ ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್ ಹಾಗೂ ಇಂಡಿಯನ್ ಗ್ಯಾಸ್ ಗೋಡನ್, ಹಾಗೂ ನ್ಯಾಷನಲ್ ಸಂಸ್ಥೆಯ ಮಾಲೀಕರ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನೆಡೆಸುತ್ತಿದ್ದಾರೆ. https://ainlivenews.com/benefits-of-eating-black-dry-grapes/ ತಾಲೂಕಿನ ಹಾಗೂ ರಾಜ್ಯದ ಹಲವೆಡೆ ರಸ್ತೆಯ ಕಾಮಗಾರಿಗಳನ್ನು ಈ ಸಂಸ್ಥೆಯೇ ವಹಿಸಿಕೊಳ್ಳುತ್ತಿದ್ದು ಈ ಎಲ್ಲಾ ಕಾರಣಗಳಿಂದ ಹಣದ ವಿಚಾರದಲ್ಲಿ ಲೋಪ ಕಂಡು ಬಂದಿದ್ದಲ್ಲಿ ಅಧಿಕಾರಿಗಳು ದಾಳಿ ನೆಡೆಸಿರುವ ಶಂಕೆಯಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ.

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು ಹಾಗು ಸಂಸದರಾದ  ಸದಾನಂದ ಗೌಡ ಅವರನ್ನು ಇಂದು ವಿಜಯೇಂದ್ರ ಅವರು ಭೇಟಿ ಮಾಡಿದರು. ಬೆಂಗಳೂರು ನಿವಾಸಕ್ಕೆ ಭೇಟಿ ಕೊಟ್ಟು ಬಿಜೆಪಿ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ಅವರು ಹೊಸ ವರ್ಷದ ಶುಭಾಶಯ ಕೋರಿದರು

Read More

ಧಾರವಾಡ: ಧಾರವಾಡದಲ್ಲಿರುವ ಕೆಐಎಡಿಬಿಯಲ್ಲಿ ನಡೆದಿರುವ ಹಗರಣ ಬಗೆದಷ್ಟು ಬಯಲಾಗುತ್ತಲೇ ಇದೆ. ಇತ್ತೀಚೆಗಷ್ಟೇ ಈ ಕೆಐಎಡಿಬಿಯಿಂದ ಅಂದಾಜು 20 ಕೋಟಿಯಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಈ ಹಿಂದೆ ದಾಖಲೆ ಬಿಡುಗಡೆ ಮಾಡಿದ್ದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಈ ಕುರಿತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೀಗ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ವೀಕ್ ಚಾರ್ಜ್‌ಶೀಟ್ ಸಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು! ಈ ಹಿಂದೆ ಕೆಐಎಡಿಬಿಯಲ್ಲಿನ ಕೆಲ ಅಧಿಕಾರಿಗಳು 20 ಕೋಟಿ ಹಣವನ್ನು ಡಬಲ್ ಪೇಮೆಂಟ್ ಆಗಿ ಮಾಡಿಕೊಂಡಿದ್ದರು. ಈ ಸಂಬಂಧ ದಾಖಲೆಗಳನ್ನು ಸಹ ಕೊರವರ ಬಿಡುಗಡೆ ಮಾಡಿದ್ದರು. ಬಹುಕೋಟಿ ಹಗರಣ ಇದಾಗಿದ್ದರಿಂದ ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು 9 ತಿಂಗಳು ತನಿಖೆ ಮಾಡಿದ್ದರು. ಅಲ್ಲದೇ ಈ ಸಂಬಂಧ ತನಿಖಾಧಿಕಾರಿ ಎಲ್.ಆರ್.ಅಗ್ನಿ ಅವರು 2 ಸಾವಿರ ಪುಟಗಳುಳ್ಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ, ಅವರು ಸಲ್ಲಿಸಿರುವ ಚಾರ್ಜ್‌ಶೀಟ್ ವೀಕ್ ಆಗಿದ್ದು, ಹಲವರನ್ನು…

Read More

ಚಳ್ಳಕೆರೆ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಚಳ್ಳಕೆರೆ ನಗರದ ಹೊರಹೊಲಯದಲ್ಲಿ ಸಂಭವಿಸಿದೆ. ತಾಲೂಕಿನ ಸಿದ್ದಾಪುರ ಗ್ರಾಮದ ರಂಗಸ್ವಾಮಿ(40)ಸಾವಿಗೀಡಾದ ಮೃತ ದುರ್ದೈವಿ. ಬಳ್ಳಾರಿ- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ರಸ್ತೆಯ  ಸೇತುವೆ ಬಳಿ . ರಂಗಸ್ವಾಮಿ ಚಳ್ಳಕೆರೆ ಯಿಂದ ಸಿದ್ದಾಪುರ ಗ್ರಾಮಕ್ಕೆ ಹೋಗುವ ವೇಳೆ  ಬೆಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಟಿವಿಎಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಸೇತುವೆ ಮೇಲಿಂದ ಬಿದ್ದು ಪಲ್ಟಿಯಾಗಿದ್ದು, ಲಾರಿ ಚಾಲಕ,ಹಾಗೂ ಕ್ಲಿನರ್ ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಚಳ್ಳಕೆರೆ ಪೋಲಿಸರು  ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ವರದಿ: ಪುರ್ಲೆಹಳ್ಳಿ ಹನುಮಂತರಾಜು

Read More