Author: AIN Author

ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ  ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTHL) ಅನ್ನು ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra Chief Minister Eknath Shinde) ಹೇಳಿದ್ದಾರೆ. ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ 21.8 ಕಿಲೋಮೀಟರ್ ಉದ್ದದ ಸೇತುವೆಯು ಪ್ರಸ್ತುತ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ಸಿಎಂ ಹೇಳಿದರು. https://ainlivenews.com/how-much-do-you-know-about-eco-friendly-comet-ev-electric-vehicle/ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 12 ರಂದು (ಶುಕ್ರವಾರ) MTHL ಅನ್ನು ಉದ್ಘಾಟಿಸಲಿದ್ದಾರೆ. ಈ ಸೇತುವೆಯಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂದು ಶಿಂಧೆ ಮಾಧ್ಯಮಗಳಿಗೆ ತಿಳಿಸಿದರು. ರಾಜ್ಯದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೆ MTHL ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. MTHL 6 ಲೇನ್ ಮಾರ್ಗ ಹೊಂದಿದೆ. ಸಮುದ್ರದ ಮೇಲೆ 16.50 ಕಿಲೋಮೀಟರ್…

Read More

ಹಾಸನ: ಮನೆ ಕಿಟಕಿ, ಬಾಗಿಲು ಮುಚ್ಚಿಟ್ಟು ಮನೆಯೊಳಗೆ ವಿಷಾನಿಲ ತುಂಬಿಸಿ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ದಾಸರಕೊಪ್ಪಲಿನಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತುಮಕೂರಿನ ಬೇಕರಿಯಲ್ಲಿ ಕೆಲಸ ಮಾಡುವ ತೀರ್ಥ ಎಂಬವರ ಪತ್ನಿ ಶಿವಮ್ಮ (36), ಮಕ್ಕಳಾದ ಸಿಂಚು (7) ಪವನ (10) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಸೋಮವಾರ ಸಂಜೆ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ಪತಿ ತೀರ್ಥ ತಾನು ಹಾಸನಕ್ಕೆ ಬರುತ್ತಿದ್ದು ರಾತ್ರಿ ಊಟಕ್ಕೆ ಅಡುಗೆ ಸಿದ್ಧಪಡಿಸಲು ಹೇಳಿದ್ದರು. ಆದರೆ ರಾತ್ರಿ ತಡವಾಗಿ ಬಂದ ಆತ ಬಾಗಿಲು ತಟ್ಟಿದಾಗ ಪತ್ನಿ ಬಾಗಿಲು ತೆರೆಯಲಿಲ್ಲ. ಫೋನ್ ಕರೆಯನ್ನೂ ಸ್ವೀಕರಿಸಲಿಲ್ಲ. ಆಕೆ ನಿದ್ರೆ ಹೋಗಿರಬಹುದು ಎಂದು ಭಾವಿಸಿದ ಪತಿ ಮನೆಯ ಛಾವಣಿಗೆ ಹೋಗಿ ಮಲಗಿದ್ದರು. ಬೆಳಗ್ಗೆ ಕೆಳಗೆ ಬಂದು ಪುನಃ ಬಾಗಿಲು ಪಡೆದು, ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡ ಆತ ಮನೆ ಮಾಲೀಕರ ಸಹಾಯದಿಂದ ಇನ್ನೊಂದು ಕೀ ಪಡೆದು ಬಾಗಿಲು ತೆರೆದು ಒಳಗೆ…

Read More

ಬೆಂಗಳೂರು ಗ್ರಾಮಾಂತರ:   ದೇವರ ಒಡವೆಗಳನ್ನು ಕದ್ದು ಸಾಗಿಸುತ್ತಿದ್ದ ವಾಹವನ್ನು ತಡೆದ ಪೊಲೀಸರು ವಿಗ್ರಹಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನ ಅತ್ತಿಬೆಲೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ರಾತ್ರಿ ಆನೇಕಲ್​ನ ಅತ್ತಿಬೆಲೆ ಸಮೀಪ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು 407 ವಾಹನವನ್ನು ಕಂಡು ಅನುಮಾನಗೊಂಡು ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ವಾಹನದಲ್ಲಿದ್ದವರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ವಾಹನವನ್ನು ತಪಾಸಣೆಗೊಳಪಡಿಸಿದಾಗ ದೇವರ ಕಂಚಿನ ವಿಗ್ರಹಗಳು, ಚೊಂಬುಗಳು, ತ್ರಿಶೂಲ, ಕಳಸ, ದೀಪಾಲೆ ಕಂಬಗಳು ಸೇರಿ ಅನೇಕ ವಸ್ತುಗಳು ಪತ್ತೆಯಾಗಿದ್ದು ಈ ವಸ್ತುಗಳ ಜೊತೆಗೆ ವಿಗ್ರಹಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವಿಗ್ರಹಗಳು ತಮಿಳುನಾಡಿನ ಅಂಗಡಿಯಿಂದ ಕದ್ದು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Read More

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ ರಾಮ’ಮಂತ್ರ’ ಪಠಿಸುತ್ತಿದೆ. ಲೋಕಸಮರದಲ್ಲಿ ಮತ ಗಳಿಸಲು ಬಿಜೆಪಿಯಿಂದ (BJP) ಮಂದಿರ ರಾಜಕೀಯ ಶುರುವಾಗಿದೆ. ಆದರೆ ರಾಮಮಂದಿರ (Ram Mandir) ಉದ್ಘಾಟನೆ ವಿಚಾರದಲ್ಲಿ ಎಡವದಿರಲು ಕಾಂಗ್ರೆಸ್ (Congress) ಪ್ಲಾನ್ ಮಾಡಿದೆ. https://ainlivenews.com/bigg-shock-for-new-years-drunken-alcoholics-yakantira-read-this-story/ ರಾಜ್ಯದಲ್ಲಿ ಕೆಲ ಸಚಿವರು, ಶಾಸಕರ ಡ್ಯಾಮೇಜಿಂಗ್ ಹೇಳಿಕೆಗಳಿಂದ ಎಐಸಿಸಿ (AICC) ಎಚ್ಚೆತ್ತಿದೆ. ವಿವಾದಕ್ಕೆ ಎಡೆ ಮಾಡದೇ ನಡೆ ನುಡಿಯಲ್ಲಿ ಎಚ್ಚರಿಕೆ ಕಾಯ್ದುಕೊಳ್ಳಲು ಪಕ್ಷದಿಂದ ಸಂದೇಶ ರವಾನೆ ಆಗಿದೆ. ರಾಮಮಂದಿರ ವಿಚಾರದಲ್ಲಿ ಅಸಂಬದ್ಧ ಮಾತನಾಡದೇ ಯೋಚಿಸಿ ಮಾತಾಡಿ, ಯೋಚಿಸಿ ನಡೆಯಿರಿ. ಹೀಗಂತ ದೆಹಲಿ ನಾಯಕರಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಹೈಕಮಾಂಡ್ ಎಚ್ಚರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮುಂಚೂಣಿ ನಾಯಕರು ಸಾಫ್ಟ್ ನಿರ್ಧಾರ ತಾಳಿದ್ದಾರೆ.

Read More

ಮಂಗಳೂರು: ನ್ಯೂ ಇಯರ್ (New Year) ಪಾರ್ಟಿಯಲ್ಲಿ (Party)  ಗಲಾಟೆ ನಡೆದ ಹಿನ್ನೆಲೆ ಯುವಕನ ಮೂಗನ್ನು (Nose) ಮತ್ತೊಬ್ಬ ಯುವಕ ಕಚ್ಚಿ ಹೊರೆತೆಗೆದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಪಿಲ್ಯ ಗ್ರಾಮದಲ್ಲಿ ನಡೆದಿದೆ. ಉಲ್ಪೆ ಗ್ರಾಮದ ನಿವಾಸಿ ದೀಕ್ಷಿತ್ (28) ಮೂಗಿನ ಒಂದು ಭಾಗವನ್ನು ಕಳೆದುಕೊಂಡ ಯುವಕ. ಮೂಡಿಗೆರೆ ಮೂಲದ ರಾಕೇಶ್ ಮೂಗನ್ನು ಕಚ್ಚಿಕಿತ್ತ ಆರೋಪಿ. ರಾಕೇಶ್ ಹಾಗೂ ದೀಕ್ಷಿತ್ ಇಬ್ಬರೂ ಇಯರ್ ಎಂಡ್ ಪಾರ್ಟಿಯೊಂದಕ್ಕೆ ತೆರಳಿದ್ದು, ಪಾರ್ಟಿಯಲ್ಲಿ ಮದ್ಯಸೇವನೆ ಮಾಡಿದ್ದಾರೆ.  https://ainlivenews.com/do-you-use-earphones-full-time-health-problem-is-not-one-or-two/ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ರಾಕೇಶ್ ದೀಕ್ಷಿತ್‌ನ ಮೂಗನ್ನು ಕಚ್ಚಿಕಿತ್ತಿದ್ದಾನೆ. ಘಟನೆಯಲ್ಲಿ ಮೂಗಿನ ಒಂದು ಭಾಗವನ್ನು ಕಳೆದುಕೊಂಡ ದೀಕ್ಷಿತ್‌ಗೆ ಗುರುವಾಯನಕೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Read More

ಬೆಂಗಳೂರು ಗ್ರಾಮಾಂತರ:  ಸಿನಿಮಾ ಸ್ಟೈಲ್ ನಲ್ಲಿ ಬ್ರಾಂಡೆಡ್ ಶೂ ಎಗರಿಸಿದ್ದ ಖದೀಮರು ಅರೆಸ್ಟ್ ಹಾಗೆ ಆ ಖದೀಮರು ಕೋಟಿ ಮೌಲ್ಯದ ನೌಕಿ ಶೂ ಕದ್ದಿದ್ದ ಅಸಾಮಿಗಳು ಆನೇಕಲ್ ಉಪವಿಭಾಗದ ಅತ್ತಿಬೆಲೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಖದೀಮರು ಅರೆಸ್ಟ್‌ ಆಗಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ  ಮೂರು ಮಂದಿ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಅಸ್ಸಾಂ ಮೂಲಸ ಸುಭಾನ್ ಪಾಷಾ(30), ಮನ್ಸರ್ ಅಲಿ(26), ಶಹಿದ್ದುಲ್ ರೆಹಮಾನ್(26) ಬಂಧಿತರಾಗಿದ್ದು ಇನ್ನುಳಿದ ನಾಲ್ಕು ಮಂದಿ ಆರೋಪಿಗಳಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ. https://ainlivenews.com/bda-is-doing-double-trouble-to-hundreds-of-victims-those-affected-by-the-rains-did-not-get-a-replacement-place/ ಬ್ರಾಂಡೆಡ್ ಶೂ ಮತ್ತು ಬಟ್ಟೆಗಳನ್ನು ಕದಿಯುತ್ತಿದ್ದ ಖತರ್ನಾಕ್ ಗಳು ಮೊದಲು ಪ್ರತಿಷ್ಠಿತ ಕಂಪನಿಗಳ ಗೋದಾಮುಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದ ಅಸಾಮಿಗಳು ಆ ನಂತರ ವಾರ ಹದಿನೈದು ದಿನ ಕೆಲಸದ ಬಳಿಕ ಪ್ರತಿಷ್ಠಿತ ಬ್ರಾಂಡ್ ಶೂ ಬಟ್ಟೆಗಳ ಕಳವು ಮಾಡುತ್ತಿದ್ದರು. ಆನೇಕಲ್ನ ಶೆಟ್ಟಿಹಳ್ಳಿ ಬಳಿಯ ನೈಕಿ ಶೂ ಗೋದಾಮಿಗೆ ಕೆಲಸಕ್ಕೆ ಸೇರಿದ್ದ ಸಲೆ ಅಹಮದ್ ಹದಿನೈದು ದಿನ ಕೆಲಸ ಮಾಡಿ ಪ್ರತಿಷ್ಠಿತ ಬ್ರಾಂಡೆಡ್ ಶೂಗಳನ್ನು ಎಗರಿಸಿದ್ದ…

Read More

ಡಿಸ್ಪುರ್:‌ ರಾಮ ಜನ್ಮಭೂಮಿ ಕೇವಲ ರಾಜಕೀಯ ವಿಷಯವಲ್ಲ, ಬದಲಾಗಿ ಸಾಂಸ್ಕೃತಿಕ ವಿಷಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ. ತೇಜ್‌ಪುರ ವಿಶ್ವವಿದ್ಯಾನಿಲಯದ 21ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನವರಿ 22 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಂದು ಉಪಸ್ಥಿತರಿರುತ್ತಾರೆ ಎಂದರು. https://ainlivenews.com/do-you-use-earphones-full-time-health-problem-is-not-one-or-two/ ಇದೇ ವೇಳೆ ರಾಮಮಂದಿರದಿಂದ ಚುನಾವಣಾ ಲಾಭ ಪಡೆಯುವ ಬಗ್ಗೆ ಕೇಳಿದಾಗ, ಇದು ನಮಗೆ ಮತ ಪಡೆಯಲು ರಾಜಕೀಯ ವಿಷಯವಲ್ಲ, ರಾಮಜನ್ಮಭೂಮಿ ನಮಗೆ ಸಾಂಸ್ಕೃತಿಕ ವಿಷಯವಾಗಿದೆ ಎಂದು ಹೇಳಿದರು. ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಜನವರಿ 16 ರಿಂದ ಏಳು ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ದಿನವಾದ ಜನವರಿ 22 ರಂದು ಬೆಳಗ್ಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದರು.

Read More

ಬೆಂಗಳೂರು:  ಚಿತ್ರಸಂತೆ ಅಂದ್ರೆ ಕಲಾರಸಿಕರ ಹಣ್ಣಿಗೆ ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಚಿತ್ರಕಲಾ ಪರಿಷತ್ ನಿಂದ 21 ನೇ ಚಿತ್ರಸಂತೆ ಆಯೋಜನೆ ಮಾಡಿದೆ. ಜನವರಿ 7 ನೇ ತಾರೀಖು ಬೆಳಗ್ಗೆ 8 ರಿಂದ ರಾತ್ರಿ 8 ವರಿಗೆ ನಡೆಯಲಿರುವ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಬಳಿ ನಡೆಯಲಿರೋ ಚಿತ್ರಸಂತೆಯಲ್ಲಿ ಈ ಬಾರಿ 22 ರಾಜ್ಯಗಳ 1500 ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗ್ತಿವೆ. ಸಂತೆಯಲ್ಲಿ 300 ಮಳಿಗೆಗಳು ಸ್ಥಾಪನೆ ಮಾಡಲಿದ್ದು 100 ರೂಪಾಯಿ ಯಿಂದ ಲಕ್ಷದವರೆಗಿನ ಮೌಲ್ಯದ ಕಲಾಕೃತಿಗಳು ಸಿಗಲಿದೆ. ಈ ಬಾರಿ ಚಿತ್ರಸಂತೆ ಐದರಿಂದ ಆರು ಲಕ್ಷ ಜನ ಬೇಟಿ ನೀಡುವ ಸಾಧ್ಯತೆ ಇದೆ ಅಂತ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ ತಿಳಿಸಿದ್ರು

Read More

ಬೆಂಗಳೂರು: ಬಿಡಿಎ ಮಾಡೋ ಅವಾಂತರಗಳು ಒಂದೆರಡಲ್ಲ.. ಕೆರೆ ಅಂಗಳದಲ್ಲಿ ನಿವೇಶನಗಳನ್ನ ಹಂಚಿಕೆ ಮಾಡಿ ಯಡವಟ್ಟು ಮಾಡಿಕೊಂಡಿತ್ತು. ಬದಲಿ ನಿವೇಶನ ಕೊಡ್ತೀವಿ ಅಂತಾ ವರ್ಷಾನುಗಟ್ಟಲೆ ಸತಾಯಿಸಿಕೊಂಡು ಬರ್ತಾನೇ ಇದೆ. ಮಾಡಿರೋ ಅವಾಂತರ ಸರಿಪಡಿಸಲು ಕೆರೆ ಅಂಗಳದಲ್ಲಿ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳೋ ಪ್ಲಾನ್ ಮಾಡಿಕೊಂಡಿದೆ.. ಬಿಡಿಎ ಅಂದ್ರನೇ ಪ್ರಾಬ್ಲಂ. ಇಲ್ಲಿರೋ ಅಧಿಕಾರಿಗಳು ಮಾಡೋ ಯಡವಟ್ಟುಗಳು ಒಂದಲ್ಲ ಎರೆಡಲ್ಲ.ಒಂದಲ್ಲ ಒಂದು ಸಮಸ್ಯೆ ಮಾಡಿ ನಿವೇಶನದಾರರ ಆಕ್ರೋಶಕ್ಕೆ ಕಾರಣವಾಗಿರೋ ಬಿಡಿಎ ಅಧಿಕಾರಿಗಳು ಮತ್ತೊಂದು ಧೋಖಾ ಮಾಡಿದೆ. ಹೌದು ಮಾಡಿದ ತಪ್ಪುಗಳನ್ನ ಹೇಗೋ ಹಾಗೆ ಕವರ್ ಮಾಡಿಕೊಳ್ಳಲು ಬಿಡಿಎ ಅಧಿಕಾರಿಗಳು ಕಸರತ್ತು ನಡೆಸ್ತಿದ್ದಾರೆ. ಕೆಂಪೇಗೌಡ ಲೇಔಟ್ ನಲ್ಲಿ ಬಫರ್ ಜೋನ್ ಒತ್ತುವರಿ ಮಾಡಿ ಭೂಸ್ವಾಧೀನ ಮಾಡಲಾಗಿತ್ತು. ಅದರ ಪರಿಣಾಮ ನಿವೇಶನ ಪಡೆದವರು ಸಮಸ್ಯೆ ಎದುರಿಸುತ್ತಿದ್ದಾರೆ.. ಮಳೆ ಬಂದ್ರೆ ಸಾಕು ಕೆರೆ ಅಂಗಳ ಪ್ರದೇಶ ಕೆರೆಯಂತಾಗಿಬಿಡುತ್ತೆ. ಅಲ್ಲಿ ಮನೆ ಕಟ್ಟಿಕೊಳ್ಳಲಾಗದೇ ನಿವೇಶನದಾರರು ಬೀಳ್ತಿರೋ ಪರಿಪಾಟಲು ಅಷ್ಟಿಷ್ಟಲ್ಲ. ಈ ಅವಾಂತರದಿಂದ ಎಚ್ಚೆತ್ತಿರೋ ಬಿಡಿಎ, ಮಳೆಹಾನಿಗೊಳಪಟ್ಟವರಿಗೆ ಕೆಂಪೇಗೌಡ ಲೇಔಟ್ ನಲ್ಲೇ ಬದಲಿ ನಿವೇಶನ…

Read More

ಬೆಂಗಳೂರು:   ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯ ಗಳಿಸಿ ಮಂದಹಾಸ ಬೀರಿದ್ದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಇಂದಿನಿಂದ ಬಡವರು ಕುಡಿಯುವ ಮದ್ಯದ ದರದಲ್ಲಿ ಏರಿಕೆ‌ಯಾಗಿದೆ. ಅಬಕಾರಿ ಇಲಾಖೆ ಬಡವರ ನೆಚ್ಚಿನ‌ ಕೆಲ ಬ್ರ್ಯಾಂಡ್​ಗಳ ದರ ಹೆಚ್ಚಿಸಿದೆ ಈ ಮೂಲಕ ಮಧ್ಯಮ ವರ್ಗದ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದ ಬಡವರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ. ಈಗಾಗಲೇ 17% ರಷ್ಟು ಓವರ್ ಆಲ್ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್​ಗಳ ದರ ಹೆಚ್ಚಳ ಮಾಡಲಾಗಿದೆ. ಮದ್ಯ ಉತ್ವಾದನ‌‌‌ ಕಂಪನಿಗಳು ಕ್ವಾಟರ್​ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿವೆ. ಇಂದಿನಿಂದ ರಾಜ್ಯಾದ್ಯಂತ ಬಡವರ ಈ ಮೂರು ಫೇವರೆಟ್ ಬ್ರ್ಯಾಂಡ್​ಗಳ ಮೇಲಿನ ದರ ಹೆಚ್ಚಳವಾಗಿದೆ. ಈಗಾಗಲೇ ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಮದ್ಯ ತಯಾರಿಕ…

Read More