Author: AIN Author

ಬೆಂಗಳೂರು:- ಅರೆ ವೈದ್ಯಕೀಯ ಕೋರ್ಸ್‌ ಮುಗಿಸಿ ಕ್ಲಿನಿಕ್ ತೆರೆಯುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಕ್ಲಿನಿಕ್ ನಡೆಸಲು ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಮುದಾಯ ವೈದ್ಯಕೀಯ ಸೇವೆ ಮತ್ತು ಅಗತ್ಯ ಔಷಧಗಳು ಎಂಬ ವಿಷಯದಲ್ಲಿ ಡಿಪ್ಲೋಮ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅರ್ಜಿದಾರರ ವಿದ್ಯಾಭ್ಯಾಸಕ್ಕೆ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಎ) ಕಾಯ್ದೆ ಸೆಕ್ಷನ್ 2(ಕೆ) ಅನ್ವಯವಾಗುವುದಿಲ್ಲ. ಆದ ಕಾರಣ ಅವರನ್ನು ವೈದ್ಯರೆಂದು ಪರಿಗಣಿಸಲು ಹಾಗೂ ಖಾಸಗಿಯಾಗಿ ವೈದ್ಯಕೀಯ ಸೇವೆ ಮುಂದುವರಿಸಲು ಅನುಮತಿಸಲಾಗದು ಆದೇಶದಲ್ಲಿ ತಿಳಿಸಿದೆ.

Read More

ಚಿಕ್ಕಮಗಳೂರು: ರಾಮನ ಹೆಸರು ಇಟ್ಕೊಂಡಿದ್ದಕ್ಕೆ ರಾಮನ ಗುಣ ಬಂದಿದೆ ಅಂತಾ ಭಾವಿಸೋಕೆ ಆಗುತ್ತಾ? ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ. ಆದ್ರೆ, ಗುಣ ಇದೆಯಾ? ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ. ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿರುವುದು (Ayodhya) ಬಿಜೆಪಿಯ ರಾಮ, ಸಿದ್ದರಾಮಯ್ಯ (Siddaramaiah) ಹೆಸರಲ್ಲೇ ರಾಮ ಇದ್ದಾನೆ ಎಂಬ ಮಾಜಿ ಸಚಿವ ಹೆಚ್‌. ಆಂಜನೇಯ ಅವರ ಹೇಳಿಕೆಗೆ ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ. https://ainlivenews.com/do-you-know-the-benefits-of-eating-cashews-every-day-2/ ನಿಮ್ಮ ಹೆಸರೇ ಆಂಜನೇಯ, ಸಿದ್ದರಾಮಯ್ಯರ ಹೆಸರಲ್ಲಿ ರಾಮ ಇದ್ದಾನೆ ಅಂತ ಹೇಳಿದ್ರಿ. ರಾಮ ಎಲ್ಲರಿಗೂ ನ್ಯಾಯ ಕೊಟ್ಟ. ಧರ್ಮದ ಪರ ಕೆಲಸ ಮಾಡಿದ. ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ರಾ? ಎಂದು ಪ್ರಶ್ನಿಸಿದ್ದಾರೆ.

Read More

ಮೈಸೂರು: ಅಯೋಧ್ಯೆ ರಾಮಮಂದಿರಕ್ಕೆ (Ayodhya Ram Mandir) ರಾಮಲಲ್ಲಾ (ಬಾಲ ರಾಮ) ಮೂರ್ತಿ ಕೆತ್ತನೆ ಮಾಡಿದ ಬಳಿಕ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ತನ್ನ ಸಹದ್ಯೋಗಿಗಳೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿರುವ ವೀಡಿಯೋ ವೈರಲ್‌ ಆಗಿದೆ. 6 ತಿಂಗಳ ಹಿಂದೆಯೇ ರಾಮಲಲ್ಲಾ ಮೂರ್ತಿ ಕೆತ್ತನೆಗಾಗಿ ಅರುಣ್‌ ಯೋಗಿರಾಜ್‌ ಅಯೋಧ್ಯೆಗೆ ತೆರಳಿದ್ದರು. ಮೂರ್ತಿ ಕೆತ್ತನೆ ಕಾರ್ಯ ಮುಗಿದಿದ್ದು, ಅಯೋಧ್ಯೆಯಲ್ಲಿ ಟ್ರಸ್ಟಿಯಿಂದ ಯೋಗಿರಾಜ್‌ ಮತ್ತು ತಂಡವನ್ನು ಸನ್ಮಾನಿಸಲಾಗಿದೆ. https://ainlivenews.com/do-you-know-the-benefits-of-eating-cashews-every-day-2/ ನೆನಪಿನ ಕಾಣಿಕೆ ಕೊಟ್ಟು ಅಭಿನಂದಿಸಲಾಗಿದೆ. ಅದಾದ ಬಳಿಕ ಎಲ್ಲಾ ಶಿಲ್ಪಿಗಳ ಜೊತೆ ಯೋಗಿರಾಜ್‌ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಮೂರ್ತಿ ಕೆತ್ತನೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಅವಕಾಶ ಸಿಕ್ಕಿದ್ದಕ್ಕಾಗಿ ಖುಷಿ ವ್ಯಕ್ತಪಡಿಸಿದ್ದಾರೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಯೋಗಿರಾಜ್‌ ಅವರು ಕೆತ್ತಿರುವ ರಾಮನ ಮೂರ್ತಿ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದರು. ಆದರೆ ಅಂತಿಮ ಆಯ್ಕೆ ಇನ್ನೂ ಆಗಿಲ್ಲ ಎಂದು ಅಯೋಧ್ಯೆ ಟ್ರಸ್ಟ್‌ ಸ್ಪಷ್ಟಪಡಿಸಿದೆ.

Read More

ಹೈದರಾಬಾದ್‌: ನಾವು ನಮ್ಮ ಮಸೀದಿಯನ್ನು (ಬಾಬ್ರಿ ಮಸೀದಿ) ಕಳೆದುಕೊಂಡಿದ್ದೇವೆ. ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ ಎಂದು ಮುಸ್ಲಿಂ ಸಮುದಾಯದ ಯುವಕರನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ನೇತೃತ್ವದ ಕೇಂದ್ರದ ಚಟುವಟಿಕೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಅಸಾದುದ್ದೀನ್ ಓವೈಸಿ, ಮುಸ್ಲಿಂ ಸಮುದಾಯದ ಯುವಕರಿಗೆ ಮನವಿ ಮಾಡಿದ್ದಾರೆ. ದೇಶದಲ್ಲಿ ಜನವಸತಿ ಉಳಿಯಬೇಕು ಎಂದು ತಿಳಿಸಿದ್ದಾರೆ. ಬಾಬರಿ ಮಸೀದಿಯನ್ನು ಉಲ್ಲೇಖಿಸಿ ಮಾತನಾಡಿದ ಓವೈಸಿ, ಕಳೆದ 500 ವರ್ಷಗಳಿಂದ ಪವಿತ್ರ ಕುರಾನ್ ಪಠಣ ಮಾಡಿದ ಸ್ಥಳ ಈಗ ನಮ್ಮ ಕೈಯಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯುವಕರೇ, ನಾನು ನಿಮಗೆ ಹೇಳುತ್ತಿದ್ದೇನೆ. ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಈಗ ಅಲ್ಲಿ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.  https://ainlivenews.com/do-you-know-the-benefits-of-eating-cashews-every-day-2/ 500 ವರ್ಷಗಳ ಕಾಲ ನಾವು ಕುಳಿತು ಕುರಾನ್ ಪಠಿಸಿದ ಸ್ಥಳ ಇಂದು ನಮ್ಮ ಕೈಯಲ್ಲಿಲ್ಲ. ಯುವಕರೇ, ಇನ್ನು…

Read More

ಬೆಂಗಳೂರು: ನಗರದಲ್ಲಿ ಹೊಸ ಮೊಬೈಲ್‌ ತೆಗೆದುಕೊಂಡಿದ್ದ ಯುವಕನ ಬಾಳಿಗೆ ಅದೀಗ ಮುಳುವಾಗಿದೆ ಯಾಕಂತೀರಾ ಗಾಡಿಯಲ್ಲಿ ತೆರಳುವಾಗ  ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ತೊಡೆಗೆ ಗಾಯವಾಗಿರುವ ಘಟನೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ. ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದ್ದು ಪಾಪ ಆ ಹುಡುಗನ ತೊಡೆ ಸುಟ್ಟುಹೋಗಿದೆ. ವೈಟ್ ಫೀಲ್ಡ್ ನಲ್ಲಿ ವಾಸವಿದ್ದ 24 ವರ್ಷದ ಯುವಕ ಪ್ರಸಾದ್ ಎನ್ನುವವರಿಗೆ ಗಾಯವಾಗಿದ್ದು ಹಾಗೆ ಸರ್ಜರಿಗೆ ಬರೋಬ್ಬರಿ 4 ಲಕ್ಷ ಆಗುತ್ತೆ ಅಂತಿರೋ ವೈದ್ಯರು ಅಕ್ಟೋಬರ್ ತಿಂಗಳಲ್ಲಿ 1+ ಕಂಪನಿಯ ಮೊಬೈಲ್ ಖರೀದಿಸಿದ್ದ ಪ್ರಸಾದ್ ಈಗ ಮೆಡಿಕಲ್ ವೆಚ್ಚ, ಮೊಬೈಲ್ ಹಣ ಕೊಡ್ತೀವೆ ಅಂತಿರೋ ಶೋ ರೂಮ್ ಸಿಬ್ಬಂದಿ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಈ ಬಗ್ಗೆ ಸಮಸ್ಯೆ ಹೇಳಿಕೊಳ್ಳಲು ಮೊಬೈಲ್ ಸೆಂಟರ್ ಗೆ ಹೋದ್ರೆ ಸರಿಯಾಗಿ ಸ್ಪಂದಿಸದ ಆರೋಪ ವಕೀಲರ ಮೊರೆ ಹೋಗಲು ಮುಂದಾದ ಗಾಯಾಳು ಯುವಕ ವೈಟ್ ಫೀಲ್ಡ್ ನ ಖಾಸಗಿ ಕಂಪನಿಯೊಂದರಲ್ಲಿ…

Read More

ಲಕ್ನೋ: ಈ ಹಿಂದೆ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದವರು ಇದೀಗ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಬಯಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದ್ದಾರೆ. ಮಥುರಾದಲ್ಲಿ (Mathura) ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಕಾಲದಲ್ಲಿ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ಜನ ಈಗ ಜನವರಿ 22 ರಂದು ರಾಮಮಂದಿರ (Ram Mandir) ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಕೆಲವರು ದೂರುತ್ತಿದ್ದಾರೆ ಎಂದು ಟಾಂಗ್‌ ನೀಡಿದರು. https://ainlivenews.com/do-you-know-the-benefits-of-eating-cashews-every-day-2/ ಇದೇ ವೇಳೆ ಸಿಎಂ ಅವರು, ಬಿಜೆಪಿ (BJP) ಸರ್ಕಾರದ ಆಡಳಿತದಲ್ಲಿ ದೇವಸ್ಥಾನದ ಸುತ್ತಮುತ್ತ ಆಗಿರುವ ಬೃಹತ್ ಅಭಿವೃದ್ಧಿಯನ್ನು ವಿವರಿಸಿದರು. ಈ ಹಿಂದೆ ರಸ್ತೆಗಳು ಕೂಡ ಕಳಪೆ ಸ್ಥಿತಿಯಲ್ಲಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ಒಂದೇ ರೈಲು ಮಾರ್ಗವಿತ್ತು. ಆದರೆ ಈಗ ಎಲ್ಲಾ ಕಡೆಯಿಂದ ನಾಲ್ಕು ಪಥದ ಸಂಪರ್ಕವಿದೆ. ಜನವರಿ 22 ರ ನಂತರ ಅಯೋಧ್ಯೆಗೆ ಭೇಟಿ ನೀಡುವುದು ತ್ರೇತಾ ಯುಗವನ್ನು ನೆನಪಿಸುತ್ತದೆ ಎಂದರು. 

Read More

ಬೆಂಗಳೂರು : ಶಾಪಿಂಗ್ ಮಾಲ್​ನ ಪಾರ್ಕಿಂಗ್​ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ್ದವರ ಪೈಕಿ ಮೂವರು ಪಾಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದ ಶಾಪಿಂಗ್ ಮಾಲ್ ಒಂದರ ಸಮೀಪ ಐವರು ದುಷ್ಕರ್ಮಿಗಳು 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ದೌರ್ಜನ್ಯ ಎಸಗಿದ್ದರು. ರಾಜ್‌ಕುಮಾರ್, ಆಜಾದ್ ಮತ್ತು ವಿಕಾಸ್ ಬಂಧಿತ ಆರೋಪಿಗಳು. https://ainlivenews.com/sweet-news-from-the-excise-department-for-oil-lovers/ ಕೆಲವು ತಿಂಗಳ ಹಿಂದೆಯೇ ಈ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆದರೆ, ಕೃತ್ಯ ಎಸಗಿದ ವ್ಯಕ್ತಿಗಳು ಪ್ರಭಾವಿಗಳಾಗಿದ್ದ ಕಾರಣ ಕೂಡಲೇ ಪೊಲೀಸರಿಗೆ ದೂರು ನೀಡಲು ಸಂತ್ರಸ್ತೆಗೆ ಸಾಧ್ಯವಾಗಿರಲಿಲ್ಲ. ಸ್ಥಳೀಯ ಪ್ರಭಾವಿ ವ್ಯಕ್ತಿ ಸೇರಿದಂತೆ ಇನ್ನುಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಎಸಗಿದ ಪಾಪಿಗಳು ಸಂತ್ರಸ್ತೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಮತ್ತೆ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದರು. ಇದರಿಂದ ಬೇಸತ್ತು ಮಹಿಳೆ ಡಿಸೆಂಬರ್ 30ರಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಮೂವರನ್ನು ಬಂದಿಸಿದ್ದು, ಇನ್ನು…

Read More

ಬೆಂಗಳೂರು ಗ್ರಾಮಾಂತರ:  ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಪೊಲೀಸರ ಸಮ್ಮುಖದಲ್ಲೇ ಯುವತಿ ಕಪಾಳ ಮೋಕ್ಷ ಮಾಡಿರುವ ಘಟನೆ ಇಂದು ಅತ್ತಿಬೆಲೆ ಸರ್ಕಲ್​ನಲ್ಲಿ ನಡೆದಿದೆ. ದೇವನಹಳ್ಳಿ ಮೂಲದ ಯೋಗೇಶ್​ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕ, ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಆನೇಕಲ್​ ನ ಅತ್ತಿಬೆಲೆ ವೃತ್ತದಲ್ಲಿ ಬಸ್​ ಗಾಗಿ ಯುವತಿಯ ಹಾಗು ಸ್ನೇಹಿತರು ಕಾಯುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಯುವಕ, ಯುವತಿಯ ಬಳಿ ಅಸಭ್ಯವಾಗಿ ಮಾತನಾಡಿದ್ದಾನೆ. ಸ್ಥಳದಲ್ಲೇ ಇದ್ದ ಸಾರ್ವಜನಿಕರು ಹಾಗು ಯುವತಿಯ ಸ್ನೇಹಿತರು ಯುವಕನನ್ನು ಹಿಡಿದು ಥಳಿಸಿದ್ದಾರೆ. ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಯುವತಿ ಆರೋಪಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

Read More

ಬೆಂಗಳೂರು : ಗೋದ್ರಾದಂತ ಹತ್ಯಾಕಾಂಡ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರು ಅವರು, ನಿಜವಾಗಲೂ ಹರಿಪ್ರಸಾದ್ ಅವರಿಗೆ ರಕ್ಷಣೆ ಬೇಕು. ರಾಮ‌ಭಕ್ತರು ಹರಿಪ್ರಸಾದ್​ನ ಎಲ್ಲಿ ಪುಡಿ ಪುಡಿ ಮಾಡ್ತಾರೆ ಗೊತ್ತಿಲ್ಲ. ಇಂತವರನ್ನ ಕಾಂಗ್ರೆಸ್ ಕೂಡಲೇ ಪಕ್ಷದಿಂದ ಹೊರ ಹಾಕಬೇಕು ಎಂದು ಕಿಡಿಕಾರಿದ್ದಾರೆ. ಸರ್ಕಾರ ಬಂಧಿಸಿ ಅವರನ್ನ ವಿಚಾರಣೆಗೊಳಪಡಿಸಬೇಕು. ಇದೊಂದು ತಲೆಕೆಟ್ಟವರ ಮತ್ತು ಆ ಘಟನೆಯ ಬಗ್ಗೆ ಮಾಹಿತಿ ಇಲ್ಲದವರ ಮಾತು. ಇನ್ನು ಕೆಲವರು ಮಿದುಳನ್ನ ಚೀಲದಲ್ಲಿ ಇಟ್ಕೊಂಡು ಓಡಾಡ್ತಾರೆ. ಅಂತಹವರಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಕೂಡ. ಹೀಗಾಗಿ, ರಾಮ ಬದಲು ಸಿದ್ದರಾಮಯ್ಯರನ್ನ ಪೂಜಿಸುತ್ತೇವೆ ಎಂದು ಒಲೈಕೆ ಮಾತು ಹೇಳಿದ್ದಾರೆ ಎಂದು ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.

Read More

ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಆಮೀರ್ ಅವರ ಮುದ್ದಿನ ಮಗಳು ಇರಾ ಖಾನ್ (Ira Khan) ದಾಂಪತ್ಯ (Wedding) ಜೀವನಕ್ಕೆ ಇಂದು (ಜ.3) ಕಾಲಿಡುತ್ತಿದ್ದಾರೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಜ.3ರಂದು ಸಂಜೆ 7 ಗಂಟೆಗೆ ಇರಾ- ನೂಪುರ್ ಶಿಖಾರೆ ಮದುವೆಯಾಗುತ್ತಿದ್ದಾರೆ. ಒಂದು ವಾರದ ಮುಂಚೆಯೇ ವಿವಾಹ ಪೂರ್ವ ಸಿದ್ಧತೆಗಳು ಅದ್ದೂರಿಯಾಗಿ ಜರುಗುತ್ತಿದೆ. ಮದುವೆ ಸಂಭ್ರಮದಲ್ಲಿ ಕುಟುಂಬದವರು ಮತ್ತು ಆಪ್ತರು ಅಷ್ಟೇ ಭಾಗಿಯಾಗಿದ್ದರು. ಮಗಳು ಮದುವೆಗೆಂದೇ ಆಮೀರ್ ಖಾನ್ ಅವರು ಸಿನಿಮಾದಿಂದ ಕೂಡ ಬ್ರೇಕ್ ತೆಗೆದುಕೊಂಡರು ಆಮೀರ್ ಖಾನ್- ಮಾಜಿ ಮೊದಲ ಪತ್ನಿ ರೀನಾ ದತ್ತ ಅವರ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೋರ್ಟ್ ಮ್ಯಾರೇಜ್ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್- ನೂಪುರ್ ಮದುವೆ ನಡೆಯುತ್ತಿದೆ. ಆಮಿರ್ ಖಾನ್ ಅವರ 2ನೇ ಮಾಜಿ ಪತ್ನಿ ಕಿರಣ್ ರಾವ್ ಕೂಡ ವಿವಾಹಪೂರ್ವ ಕಾರ್ಯಗಳಲ್ಲಿ ಹಾಜರಿ…

Read More