Author: AIN Author

ಧಾರವಾಡ: ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರವೇ 800 ಜನ ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ ತುಂಬ ಸಿಬ್ಬಂದಿ ನೇಮಕವಾಗಲಿದ್ದಾರೆ. ತಾಲೂಕಾ ಆಸ್ಪತ್ರೆಗಳಿಗೆ ವೈದ್ಯರು ಬೇಕಾಗಿದ್ದಾರೆ. ಅವರನ್ನೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೊಡಲಾಗಿದೆ. ಎಂಬಿಬಿಎಸ್ ಹಾಗೂ ಎಂಡಿ ಮಾಡಿದ ವೈದ್ಯರ ಖಾಲಿ ಹುದ್ದೆಗಳು ಕೂಡ ಭರ್ತಿ ಆಗಲಿವೆ. ತಲಾ 1500 ಎಂಬಿಬಿಎಸ್ ಮತ್ತು ಸ್ಪೆಷಲಿಸ್ಟ್ ಹುದ್ದೆ ಖಾಲಿ ಇವೆ. ಅವುಗಳ ಭರ್ತಿ ಪ್ರಕ್ರಿಯೆ ಈಗ ನಡೆದಿದೆ ಎಂದರು. ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೂ ಒತ್ತು ಕೊಡಲಾಗುವುದು. ಕೆಲ ತಾಂತ್ರಿಕ ಸಮಸ್ಯೆಗಳಿಂದ ಗುತ್ತಿಗೆ ನೌಕರರ ಕೆಲ ತಿಂಗಳ ಸಂಬಳ ಬಾಕಿ ಇದೆ. ಇದನ್ನು ಪರಿಶೀಲಿಸಿ ಸಂಬಳ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Read More

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು (Bus) 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ, 25 ಜನ ಗಂಭೀರ ಗಾಯಗೊಂಡ ಘಟನೆ ಸುರಪುರದ (Surapura) ದೇವಾಪುರದ ಬಳಿ ನಡೆದಿದೆ. ಘಟನೆಯಲ್ಲಿ ಹುಮನಬಾದ್‍ನ ಹಳ್ಳಿಖೇಡ ನಿವಾಸಿ ಬಾಲು ಕುಮಾರ್ (36) ಮೃತ ಪ್ರಯಾಣಿಕ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ (Accident) ಗಂಭೀರ ಗಾಯಗೊಂಡಿರುವ ಎಲ್ಲಾ ಗಾಯಾಳುಗಳನ್ನ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಬೀದರ್‌ನಿಂದ ಬೆಂಗಳೂರಿಗೆ (Bengaluru) 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ತೆರಳುತ್ತಿತ್ತು, ಈ ವೇಳೆ ಅಪಘಾತ ಸಂಭವಿಸಿದೆ. ಮಿತಿ ಮೀರಿದ ವೇಗದಲ್ಲಿ ಚಲಾಯಿಸಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಬಳಿಕ ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಗದಗ:  ಥರ್ಡ್ ಐ ಕ್ಯಾಮರಾದಿಂದ ತಪ್ಪಿಸಿಕೊಳ್ಳುವ ಬೈಕ್ ಸವಾರರಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ. ಗದಗನಲ್ಲಿ ಕಳ್ಳದಾರಿ ಹಿಡಿದಿದ್ದ ಬೈಕ್ ಸವಾರರಿಗೆ ಸ್ಪೆಷಲ್ ಡ್ರೈವ್ ಮೂಲಕ ಚಾಟಿ ಬೀಸಿದ್ದಾರೆ. ಸ್ವತಃ ಫಿಲ್ಡಿಗೆ ಇಳಿದ ಗದಗ ಎಸ್ಪಿ ಬಿ ಎಸ್ ನೇಮಗೌಡ ಅವರು ಸಿಪಿಐ, ಪಿಎಸ್ಐ ಗಳ ನೇತೃತ್ವದ 6 ತಂಡಗಳ ಮೂಲಕ ಸ್ಪೆಷಲ್ ಡ್ರೈವ್ ಮಾಡಿ ನಂಬರ್ ಪ್ಲೇಟ್ ಇಲ್ಲದೇ, ನಂಬರ್ ಪ್ಲೇಟ್ ಡಿಫೆಕ್ಟಿವ್ ಮಾಡಿ ಓಡಾಡ್ತಿದ್ದ ಬೈಕ್ ಸವಾರರ ವಿರುದ್ಧ ಕೇಸ್ ದಾಖಲಿಸಿದ್ದಾರೆ. https://ainlivenews.com/ranebennur-tehsildar-loka-trapped-while-taking-bribe/ ಸುಮಾರು 300 ಕ್ಕೂ ಹೆಚ್ಚು ಬೈಕ್ ಗಳನ್ನ ಸೀಜ್ ಮಾಡಿರೋ ಪೊಲೀಸರು ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಂಬರ್ ಫ್ಲೇಟ್ ಗೆ ಸ್ಟಿಕರ್ ಅಂಟಿಸಿರೋ ಬೈಕ್ ಸವಾರರಿಂದ ದಂಡ ವಸೂಲಿ ಮಾಡಿದ್ದಾರೆ. ಇನ್ನೂ ಕೆಲ ಬೈಕ್ ಸವಾರರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ನೂರಾರು ಬೈಕ್ ಗಳು ಸೀಜ್ ಆಗಿದ್ರಿಂದಾಗಿ ಪೊಲೀಸ್ ಭವನದ ಆವರಣ ಬೈಕ್ ಸವಾರರಿಂದ ತುಂಬಿ ತುಳುಕುತ್ತಿತ್ತು.

Read More

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿಗೆ  ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಮತ್ತೆ ವಿಳಂಬವಾಗಲಿದೆ. ಬಹು ನಿರೀಕ್ಷಿತ ಆರ್‌ವಿ ರಸ್ತೆಯಿಂದ (RV Road) ಬೊಮ್ಮಸಂದ್ರ  ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪೈಲೆಟ್‌ಲೆಸ್ ಸಂಚಾರಕ್ಕೆ ಇನ್ನೂ ಆರು ತಿಂಗಳು ಕಾಯಬೇಕಿದೆ. ಚೀನಾದಿಂದ ಬರಬೇಕಿದ್ದ ಮೆಟ್ರೋ ಬೋಗಿಗಳ ವಿಳಂಬದಿಂದಾಗಿ ಈ ಮಾರ್ಗದ ಲೋಕಾರ್ಪಣೆ ಮತ್ತೆ ತಡವಾಗುತ್ತಿದೆ. ಹಿಂದೆ ಹಳದಿ ಮಾರ್ಗವನ್ನು ಫೆಬ್ರವರಿಯಲ್ಲಿ ಉದ್ಘಾಟನೆ ಮಾಡುತ್ತೇವೆ ಎಂದಿದ್ದ ಬಿಎಂಆರ್‌ಸಿಎಲ್‌ (BMRCL) ಈಗ ಜುಲೈನಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ. ಇಲ್ಲಿ ಸಿವಿಲ್ ಕಾಮಗಾರಿ ಬಹುತೇಕ ಮುಗಿದಿದ್ದರೂ ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿಯಿಂದ 2 ಪ್ರೋಟೋ ರೈಲು ಜೊತೆ ಎಂಜಿನಿಯರ್‌ ಬರಬೇಕಿದೆ https://ainlivenews.com/namma-metro-how-safe-are-bengaluru-metro-stations/ ಚೀನಾದಿಂದ ಇನ್ನೂ ಅನುಮತಿ ಸಿಗದ ಕಾರಣ ಅಲ್ಲಿಂದ ಬೋಗಿಗಳು ಇನ್ನೂ ಬಂದಿಲ್ಲ. ಕೋಲ್ಕತ್ತಾದ ತೀತಾಘರ್‌ ವ್ಯಾಗನ್‌ ಕಂಪನಿಯು ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು ಇದು ಸಹ ಇನ್ನೂ ಕಾರ್ಯಚರಣೆಯಲ್ಲಿದೆ. ಚೀನಾದಿಂದ ಈ ತಿಂಗಳಾಂತ್ಯಕ್ಕೆ ಅಲ್ಲಿನ ಸಿಬ್ಬಂದಿ…

Read More

ಧಾರವಾಡ: ಬಾಲಕಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ ಆರೋಪ ಹಿನ್ನೆಲೆಯಲ್ಲಿ  ಕಂಡಕ್ಟರ್ ವಿರುದ್ಧ ಬಾಲಕಿ ಪಾಲಕರು ಮತ್ತು ಗ್ರಾಮಸ್ಥರ ದಿಢೀರ್ ಪ್ರತಿಭಟನೆ ನಡೆಸಿದರು. ಧಾರವಾಡ ಹೊರವಲಯದ ಕೆಲಗೇರಿ ಗ್ರಾಮದಲ್ಲಿ  ಧಾರವಾಡದಿಂದ ಮುಗದ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಈ ವೇಳೆ ಹಣ ಎಣಿಸುತ್ತಿದ್ದ ಕಂಡಕ್ಟರ್  ತುಂಬಿದ ಬಸ್‌ನಲ್ಲಿ ಕಂಡಕ್ಟರ್ ಗೆ ಟಚ್ ಮಾಡಿದ ಬಾಲಕಿ ಆಗ ಕೆಳಗೆ ಬಿದ್ದ ಕಂಡಕ್ಟರ್ ಕೈಯಲ್ಲಿದ್ದ ಹಣ. ಇದರಿಂದ ಕೆರಳಿ ಬಾಲಕಿಗೆ ಕಪಾಳಮೋಕ್ಷ ಮಾಡಿದ ಕಂಡಕ್ಟರ್ https://ainlivenews.com/how-much-money-has-come-from-center-to-state-under-gst-prahlada-joshi/ ಕೆಲಗೇರಿಯಿಂದ ಶಾಲೆಗೆ ಹೋಗಿದ್ದ ಬಾಲಕಿ ಪ್ರಕೃತಿ  ಶಾಲೆಯಿಂದ ಮರಳಿ ಬರುವಾಗ ನಡೆದಿದ್ದ ಘಟನೆಯಾಗಿದ್ದು  ಕಂಡಕ್ಟರ್ ವರ್ತನೆಗೆ ಪಾಲಕರ ಮತ್ತು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ತಡೆದು ಪ್ರತಿಭಟನೆಗೆ ಮುಂದಾದ ಸ್ಥಳೀಯರು ಕೊನೆಗೆ ಪೊಲೀಸರ ಮಧ್ಯಪ್ರವೇಶ. ಗ್ರಾಮಸ್ಥರ ಮನವೋಲಿಕೆಗೆ ಯತ್ನಿಸಿದ ಪೊಲೀಸರು  ಕಂಡಕ್ಟರ್ ಸ್ಥಳಕ್ಕೆ ಬಂದು ಕ್ಷಮೆ ಕೇಳುವಂತೆ ಪಟ್ಟು. ಕೊನೆಗೆ ಸ್ಥಳಕ್ಕೆ ಬಂದು ಕ್ಷಮೆ ಕೇಳಿದ ಕಂಡಕ್ಟರ್ ಕ್ಷಮೆ ಕೇಳಿದ ಹಿನ್ನೆಲೆ ಪ್ರತಿಭಟನೆ ವಾಪಸ್ ಕಂಡಕ್ಟರ್ ಕ್ಷಮಾಪಣೆ ಬಳಿಕ…

Read More

ಹುಬ್ಬಳ್ಳಿ: ಕೇಂದ್ರದಿಂದ ರಾಜ್ಯಕ್ಕೆ ಜಿಎಸ್ ಟಿ ಅಡಿಯಲ್ಲಿ ಎಷ್ಟು ಹಣ ಬಂದಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ. ಹಿಂದೆ ಕೇಂದ್ರ ಅಬಕಾರಿ ತೆರಿಗೆ ಇದ್ದಾಗ ರಾಜ್ಯದಿಂದ ಎಷ್ಟು ಹಣ ಹೋಗುತ್ತಿತ್ತು, ಎಷ್ಟು ಬರುತಿತ್ತು ಎಂದು ಹೇಳಲಿ. ಜಿಎಸ್ ಟಿ ನಂತರ ಎಷ್ಡು ಬರುತ್ತದೆ ಎಂದು‌ ಸ್ಪಷ್ಟಪಡಿಸಲಿ. ಅದರ ಜತೆಗೆ ಶ್ವೇತ ಪತ್ರ ಹೊರಡಿಸಲಿ ಎಂದು ಅವರು ಹೇಳಿದರು. https://ainlivenews.com/ranebennur-tehsildar-loka-trapped-while-taking-bribe/ ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್ ಗಳು ಇವೆ ಎಂದು ಯಾವ ಆಧಾರದಲ್ಲಿ ಹೇಳಿದಿರಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ನೀವು ಸರ್ವಾಧಿಕಾರಿನಾ? ಎಂದು ಪ್ರಶ್ನಿಸಿದ ಅವರು, ಪೂಜಾರಿ ವಿರುದ್ಧ ಕೇಸ್ ಗಳಿಲ್ಲ. ಮಾಹಿತಿ ಇಲ್ಲದೆ ಈ ರೀತಿ ಹೇಳಿಕೆ ನೀಡುವುದು ಸರಿಯೇ ಎಂದು ಕೇಳಿದರು. ಜೋಶಿಯವರು ಕಾನೂನು ತಜ್ಞರಾ ಎಂದು ಸಿಎಂ ಕೇಳಿದ್ದರು. ನಾನು ಕೇಳುತ್ತೇನೆ ಸಿದ್ದರಾಮಯ್ಯನವರೆ ಯಾವ ಕಾನೂನು ಜ್ಞಾನದಡಿ 16 ಕೇಸ್ ಗಳು ಇವೆ ಎಂದು ಹೇಳಿದಿರಿ.…

Read More

ಬೆಂಗಳೂರು: ಪೂರ್ವ ವಲಯದಲ್ಲಿ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಚಾಲನೆ ನೀಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು/ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಸನ್ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಶ್ರೀ ಡಿ.ಕೆ ಶಿವಕುಮಾರ್ ಅವರು ಪೂರ್ವ ವಲಯದ ಶಿವಾಜಿನಗರ, ಹೆಬ್ಬಾಳ ಹಾಗೂ ಪುಲಕೇಶಿನಗರ, ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಆರ್.ಬಿ.ಎ.ಎನ್.ಎಂ.ಎಸ್. ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಪಾಲಿಕೆಯ “ಹಸಿರು ರಕ್ಷಕ”, “ಉದ್ಯಾನ ಮಿತ್ರ” ಹಾಗೂ “ಕೆರೆ ಮಿತ್ರ” ಎಂಬ ಮೂರು ವೆಬ್ ಲಿಂಕ್ ಗಳನ್ನು ಅನಾವರಣಗೊಳಿಸಿದರು. ಈ ವೇಳೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರೀ ಭೈರತಿ ಸುರೇಶ್, ಸ್ಥಳೀಯ ಶಾಸಕರಾದ ಶ್ರೀ ರಿಜ್ವಾನ್ ಹರ್ಷದ್, ಶ್ರೀ ಎಸಿ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ. ನಾಗರಾಜು, ಮಾಜಿ ರಾಜ್ಯಸಭಾ ಸದಸ್ಯರಾದ ರಾಜೀವ್…

Read More

ಕಲಬುರಗಿ : ಅಫಜಲಪುರ ತಾಲೂಕಿನ ಜೇವರ್ಗಿ ಗ್ರಾಮದ ಸಮೀಪದ ರಸ್ತೆಯಲ್ಲಿ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಕಾರು ಅಪಘಾತವಾಗಿದೆ. ಅದೃಷ್ಟವಶಾತ್ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೇವರ್ಗಿ ಗ್ರಾಮದ ಹೊರವಲಯದಲ್ಲಿ ರಸ್ತೆ ಟರ್ನ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗುಗುಂಡಿಗೆ ಕಾರು ಬಿದ್ದಿದೆ. ಈ ವೇಳೆ ಶಾಸಕ ಎಂ.ವೈ. ಪಾಟೀಲ್‌ ಹಾಗೂ ಚಾಲಕ ಮೋಹಿನ್‌ಗೆ ಸಣ್ಣಪುಟ್ಟ ಗಾಯಾವಾಗಿದೆ. ಕೂಡಲೇ ಗಾಯಾಳನ್ನ ಡಾ. ಸಂಜೀವ್‌ರವರ ಶಾಂತಾಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದು ಹೇಳಿ ಕಂಪೆನಿ ವ್ಯವಸ್ಥಾಪಕನೇ ಮಹಿಳಾ ಸಹೋದ್ಯೋಗಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್‌ 31ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಪತಿಯೂ ಇದೇ ಕಂಪೆನಿಯಲ್ಲಿ (Private Company) ಕೆಲಸ ಮಾಡುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ. https://ainlivenews.com/lorry-collided-with-parked-cars-four-died-on-the-spot/ ಘಟನೆ ವಿವರ: ಡಿಸೆಂಬರ್‌ 31ರಂದು ಊಟಕ್ಕೆ ಕರೆದೊಯ್ದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಸವೇಶ್ವರ ನಗರದಲ್ಲಿರುವ ಕಾಲ್ ಸೆಂಟರ್ ಕಂಪೆನಿ ವ್ಯವಸ್ಥಾಪಕ ಕೆ.ಆರ್ .ಪುರಂ ನಿವಾಸಿ ಸೈಯದ್ ಅಕ್ರಂ ಬಂಧಿತ ಆರೋಪಿ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸರು (Basaveshwaranagara Police) ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ನಾನು ಮತ್ತು ನನ್ನ ಪತಿ ಬಸವೇಶ್ವರನಗರದ ಕಂಪನಿಯಲ್ಲಿ ಟೆಲಿ ಕಾಲಿಂಗ್ ಕೆಲಸ ಮಾಡಿಕೊಂಡಿದ್ದೇವೆ. ನಮ್ಮ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಸೈಯದ್ ಅಕ್ರಂ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ. 31…

Read More

ಹಾವೇರಿ : 12 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ರೆಡ್​ ಹ್ಯಾಂಡ್​ ಆಗಿ ರಾಣೆಬೆನ್ನೂರಿನ ತಹಶೀಲ್ದಾರ್ ಮತ್ತು ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಹಶೀಲ್ದಾರ್ ಹನುಮಂತ ಶಿರಹಟ್ಟಿ ಹಾಗೂ ಜೀಪ್ ಚಾಲಕ ಮಾಲತೇಶ ಮಡಿವಾಳರ ಸಿಕ್ಕಿಬಿದ್ದ ಆರೋಪಿಗಳು. ಅಕ್ರಮ ಸಾಗಣೆ ಮಾಡುತ್ತಿದ್ದ ಮರಳು ತುಂಬಿದ ಎರಡು ಲಾರಿಗಳನ್ನು ಬಿಡಲು ಇವರು ಲಂಚ ಪಡೆಯುತ್ತಿದ್ದರು. ಜೀಪ್ ಚಾಲಕ ಮಾಲತೇಶ ಲಂಚ ಪಡೆದುಕೊಂಡು ರಾಣೆಬೆನ್ನೂರು ನಗರದ ವೀರಭದ್ರೇಶ್ವರ ಬಡಾವಣೆಯಲ್ಲಿರುವ ತಹಶೀಲ್ದಾರ್ ಮನೆಯಲ್ಲಿ ಹನುಮಂತ ಶಿರಹಟ್ಟಿ ಅವರಿಗೆ ಕೊಡುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ರಾಣೆಬೆನ್ನೂರಿನ ಮಂಜುನಾಥ ವಾಲೀಕಾರ ಅವರಿಗೆ ಸೇರಿದ ಎರಡು ಲಾರಿಗಳು ಅಕ್ರಮ ಮರಳು ಸಾಗಣೆ ಮಾಡುತ್ತಿವೆ ಎಂಬ ಆರೋಪದ ಮೇರೆಗೆ ಈಚೆಗೆ ವಶಕ್ಕೆ ಪಡೆಯಲಾಗಿತ್ತು. ಎರಡು ಲಾರಿಗಳ ಬಿಡುಗಡೆಗೆ ತಹಶೀಲ್ದಾರ್ ಅವರು 12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

Read More