Author: AIN Author

ಬೆಂಗಳೂರು:- ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡಬೇಕು ಎಂದು ಹಿಂದುಳಿದ ಸಮುದಾಯಗಳ ಮಠಾಧೀಶರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಅವರನ್ನು ಭೇಟಿಮಾಡಿ ಈ ಮನವಿ ಸಲ್ಲಿಸಿದರು. ಶ್ರಮಿಕ ವರ್ಗದವರಿಗೆ ಗ್ಯಾರಂಟಿಗಳು ಹೆಚ್ಚು ಉಪಯುಕ್ತ ವಾಗಿವೆ ಎಂದು ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು ವರದಿ ನೀಡಲು ಎರಡು ತಿಂಗಳ ಕಾಲ ಅವಧಿ ವಿಸ್ತರಣೆ ಯಾಗಿದೆ. ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಅವರ ವರದಿಯನ್ನೇ ಕೊಡಲು ಸಾಧ್ಯವಿಲ್ಲ ಎಂದಿದ್ದು, ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರೆಯಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಮಠಗಳಿಗೆ ಜಮೀನು ಕೊಡುವ ಬಗ್ಗೆ ಸ್ವಾಮೀಜಿಗಳು ಪ್ರಸ್ತಾಪಿಸಿದರು. ತಹಸೀಲ್ದಾರ್ ಅವರು ಈ ಬಗ್ಗೆ ವರದಿ ನೀಡಲು ಸೂಚಿಸಿದ್ದು, ವರದಿಯನ್ನು ಶೀಘ್ರವಾಗಿ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸೂಚಿಸಿದರು. ಭೋವಿ ಸಮುದಾಯ ಚಿತ್ರದುರ್ಗದ ಸಿದ್ದರಾಮೇಶ್ವರ ಸ್ವಾಮೀಜಿ , ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನದ ಕನಕ…

Read More

ಧಾರವಾಡ:- ತಹಶೀಲ್ದಾರ್ ಸುಲಿಗೆ ಕೋರ್ ಪೊಲೀಸ್ ಇನ್ಸ್ಪೆಕ್ಟರ್ ತಲಾಟಿಗಳು ಹುಬ್ಬಳ್ಳಿ ಭೂ ಕಳ್ಳರು ರೃತರ ಭೂಮಿಯನ್ನು ದೊಚೋದಕ್ಕೆ 53 ವರ್ಷಗಳ ನಂತರ ಕಲಘಟಗಿ ತಾಲೂಕಿನ ಆರೇಬಸನಕೋಪ್ಪ ಗ್ರಾಮದ 191 ಎಕರೆ ಜಮೀನನ್ನು ವ್ಯವಸ್ಥಿತವಾಗಿ ದಾಖಲೆ ನಕಲಿ ತಯಾರಿ ಮಾಡಿಕೊಟ್ಟು ಖಾತೆ ಸೃಷ್ಟಿ ಮಾಡಿ ಕೊಟ್ಟ ಭ್ರಷ್ಟ ಕಂದಾಯ ಅಧಿಕಾರಿಗಳು ಹಾಗೂ ಆರೋಪಿಗಳು ಶಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಮಾಡುತ್ತಿರುವ ಜನತಾ ದರ್ಶನ ಕಾರ್ಯಕ್ರಮಕ್ಕೆ ಹೊಗಿ ವಿಷಯ ತಿಳಿಸಿಸುತ್ತಾನೆಂದು ತಿಳಿದು ದಲಿತ ಮುಖಂಡರು ಮತ್ತು ಪತ್ರಕರ್ತರಿಗೆ ಜಿವ ಬೆದರಿಕೆ ಹಾಕಿ 3 ಸಲ ಹೋಗದಂತೆ ರಸ್ತೆಯಲ್ಲಿ ಅವನ ಕಾರನ್ನು ಅಡ್ಡ ಗಟ್ಟಿ ತಡೆದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ದೌರ್ಜನ್ಯ ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಸಚಿವರಿಗೆ ಮನವಿ ವರದಿ, ಮಾರುತಿ ಲಮಾಣಿ

Read More

ಬೆಂಗಳೂರು:- ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳವು ಅರ್ಥಗರ್ಭಿತವಾಗಿ ಯಶ್ವಸಿಯಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿರಿಧಾನ್ಯ ಮೇಳ ಉದ್ಘಾಟನೆ ಮಾಡಿದ ನಂತರ ನಿನ್ನೆ ಮೊದಲ ದಿನವೇ 60 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದಾರೆ ಎಂದರು.. 61 ಸಭೆಗಳಲ್ಲಿ 23.14 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಪೈಕಿ 1361 ಮೆಟ್ರಿಕ್ ಟನ್ ಪ್ರಮಾಣದ 5.10 ಕೋಟಿ ಮೌಲ್ಯದ 6 ಒಪ್ಪಂದಗಳಾಗಿವೆ.. ಆಸ್ಟ್ರೇಲಿಯಾ, ಯುರೋಪ್, ಕೀನ್ಯಾ, ಕುವೈತ್, ಯುಎಇ, ದೇಶಗಳ ಮಾರುಕಟ್ಟೆದಾರರು ಮೇಳದಲ್ಲಿ ಭಾಗವಹಿಸಿದ್ದಾರೆ.. 7 ಅಂತರಾಷ್ಟ್ರೀಯ, 40 ಹೊರರಾಜ್ಯಗಳ ಹಾಗು 50 ರಾಜ್ಯದ ಮಾರುಕಟ್ಟೆದಾರರು ಸಭೆಗಳಲ್ಲಿ ಭಾಗವಹಿಸಿದ್ದಾರೆ. 97 ಮಾರುಕಟ್ಟೆದಾರರು, 154 ಉತ್ಪಾದಕರು ಬಿ2ಬಿ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.. 310 ಮಳಿಗೆಗಳು ಮೇಳದಲ್ಲಿದ್ದು, 190 ಮಳಿಗೆಗಳು ಸಾವಯವ ಮತ್ತು ಸಿರಿಧಾನ್ಯ ಸಂಸ್ಥೆಗಳು ರಫ್ತುದಾರರು, ಮಾರಾಟಗಾರರು,…

Read More

ಉಡುಪಿ:- ಡಿಕೆಶಿ ಅವರ ರಾಜಕೀಯ ಹಿನ್ನೆಡೆಗೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಕೆಶಿ ಅವರನ್ನು ನಿಯಂತ್ರಣದಲ್ಲಿರಿಸುವ ಬಗ್ಗೆ ಶುಕ್ರವಾರ ದಲಿತ ಮುಖಂಡರೆಲ್ಲ ಒಟ್ಟಾಗಿ ಸಭೆ ನಡೆಸಿದ್ದಾರೆ. ಮುಂದೆ ಡಿಕೆಶಿಗೆ ರಾಜಕೀಯ ಹಿನ್ನಡೆಯಾದರೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ನೇರ ಕಾರಣ ಎಂದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಬೇಕು ಎಂಬ ಒಪ್ಪಂದವಾಗಿದ್ದರೂ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಬ್ಬರ ಪರವಾಗಿ ಕೆಲವು ಶಾಸಕರು, ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿರುವುದು ಕಾಂಗ್ರೆಸ್‌ನ ಬಣ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಡಿಕೆಶಿಗೆ ನಿಜವಾಗಿಯೂ ಕಂಟಕ ಇರುವುದು ಬಿಜೆಪಿಯಿಂದಲ್ಲ; ಸಿದ್ದರಾಮಯ್ಯ ಅವರಿಂದ ಎಂದರು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಬಗ್ಗೆ ದ್ವೇಷ ಕಾರುತ್ತಿರುವ ಕಾಂಗ್ರೆಸ್‌ ಹಿಂದೂಗಳ ವಿರುದ್ಧ ದಮನಕಾರಿ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಕ್ರೂಢೀಕರಣ ದೃಷ್ಟಿಯಿಂದ ಒಂದು ವರ್ಗದ ತುಷ್ಟೀಕರಣಕ್ಕೆ ನಿಂತಿದೆ. ಕರಸೇವೆಯಲ್ಲಿ ಬಾಗವಹಿಸಿದ್ದ ಅಮಾಯಕ ಆಟೋ ಚಾಲಕನ…

Read More

ಶೀತ ವಾತಾವರಣದಲ್ಲಿ ರಾತ್ರಿ ಊಟದ ನಂತರ ಬೆಲ್ಲವನ್ನು ಸೇವಿಸುತ್ತಾ ಬಂದರೆ ಅದು ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ. ಬೆಲ್ಲವು ದೇಹವನ್ನು ಬೆಚ್ಚಗಾಗಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ರಾತ್ರಿ ಬೆಲ್ಲ ತಿನ್ನುವುದರಿಂದ ಆಗುವ ಪ್ರಯೋಜನ ಬಗ್ಗೆ ತಿಳಿಯೋಣ ಬನ್ನಿ.. ಜೀರ್ಣಕಾರಿ ಸಮಸ್ಯೆಗಳು : ಯಾವುದೇ ಹೊಟ್ಟೆಯ ಸಮಸ್ಯೆಗೆ ಬೆಲ್ಲವು ಸುಲಭವಾದ ಮತ್ತು ಅತ್ಯಂತ ಪ್ರಯೋಜನಕಾರಿ ಪರಿಹಾರವಾಗಿದೆ. ರಾತ್ರಿ ಬೆಲ್ಲ ತಿಂದರೆ ಗ್ಯಾಸ್, ಅಜೀರ್ಣ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ. ಶೀತ ಕೆಮ್ಮು : ಚಳಿಗಾಲದಲ್ಲಿ ಪದೇ ಪದೇ ನೆಗಡಿ ಮತ್ತು ಕೆಮ್ಮು ಬರುತ್ತಿದ್ದರೆ ಬೆಲ್ಲವನ್ನು ತಿನ್ನಲು ಪ್ರಾರಂಭಿಸಿ. ರಾತ್ರಿ ಹೊತ್ತು ಬೆಲ್ಲವನ್ನು ತಿಂದರೆ, ಶೀತ, ಕೆಮ್ಮು ಮತ್ತು ಕಫದಿಂದ ಪರಿಹಾರವನ್ನು ಪಡೆಯಬಹುದು. ಬೆಲ್ಲವನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು. ಚರ್ಮದ ಸಮಸ್ಯೆ : ಬೆಲ್ಲವು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಸ್ವಲ್ಪ ಬೆಲ್ಲವನ್ನು ಸೇವಿಸುವುದರಿಂದ ಮೊಡವೆಗಳನ್ನು…

Read More

ಬೆಂಗಳೂರು:- ಕರವೇ ಅಧ್ಯಕ್ಷ ನಾರಾಯಣಗೌಡಗೆ ಜಾಮೀನು ಮಂಜೂರು ಮಾಡಿ ದೇವನಹಳ್ಳಿ ಕೋರ್ಟ್ ಆದೇಶ ಹೊರಡಿಸಿದೆ. ಕನ್ನಡ ನಾಮಫಲಕ ಅಳವಡಿಕೆ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರಿಗೆ ಕೊನೆಗೂ ಜಾಮೀನು ದೊರೆತಿದೆ. ನ್ಯಾಯಾಧೀಶ ಬಿರಾದಾರ್ ದೇವೇಂದ್ರಪ್ಪ ಅವರಿದ್ದ ಪೀಠ, ನಾರಾಯಣಗೌಡ ಮತ್ತು ಇತರೆ 29 ಕಾರ್ಯಕರ್ತರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ನಾಮಫಲಕ ಧ್ವಂಸ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಕರವೇ ಬೆಂಗಳೂರು ನಗರದ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ, ಕಾರ್ಯಕರ್ತರಾದ ಶರತ್, ಲೋಕೇಶ್ ಗೌಡ, ಹೇಮಂತ್ ಅವರಿಗೆ ಇತ್ತೀಚೆಗೆ ಜಾಮೀನು ಮಂಜೂರಾಗಿ ಜೈಲಿನಿಂದ ಬಿಡುಗಡೆಯಾಗಿದ್ದರು. ಇವರಿಗೆ ಹಾರ ಹಾಕಿ ಪಟಾಕಿ ಸಿಡಿಸಿ ಕರವೇ ಕಾರ್ಯಕರ್ತರು ಬರಮಾಡಿಕೊಂಡರು.

Read More

ಚಳಿಗಾಲದ ಋತುವಿನಲ್ಲಿ ಕೆಮ್ಮು, ನೆಗಡಿ, ಜ್ವರ ಇತ್ಯಾದಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದು ನಮ್ಮ ಚರ್ಮ ಮತ್ತು ತುಟಿಗಳ ಮೇಲು ಪರಿಣಾಮವನ್ನು ಬೀರುತ್ತದೆ. ಚಳಿಗಾಲ ಬಂತೆಂದರೆ ನಮ್ಮ ಮುಖ ಹೊಳಪು ಮತ್ತು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಚರ್ಮವು ಚಪ್ಪಟೆಯಾಗುತ್ತದೆ. ತುಟಿಗಳು ಬಿರುಕು ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಹೈಡ್ರಿಟ್ ಅಗಿ ಇರಿಸಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶ ಹೊರ ಹೋಗುತ್ತವೆ. ಇದು ರಕ್ತವನ್ನು ಶುಧ್ಧೀಕರಿಸುತ್ತದೆ. ಮತ್ತು ಇದು ಚರ್ಮದ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ವಿವಿಧ ಅಧ್ಯಯನಗಳು ಸಾಬೀತು ಪಡಿಸಿವೆ. ಇದರ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪೋಷಕಾಂಶಗಳನ್ನು ಪಡೆಯಲು ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಮುಖ್ಯವಾಗಿದೆ. 1. ಕ್ಯಾರೆಟ್ : ಕ್ಯಾರೆಟ್ ಆಯಂಟಿಒಕ್ಸಿಡೆಂಟ್, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಸೇರಿದಂದೆ ಹೆಚ್ಚಿನ ಪೋಷಕಾಂಶಗಳಿಂದ ತುಂಬಿದೆ. ಈ ಪೋಷಕಾಂಶಗಳು ಜೀವಾಣುಗಳನ್ನು ಹೊರ ಹಾಕಲು, ಕೊಲೆಜಿನ್‌ನ್ನು ಉತ್ಪಾದಿಸಲು ಮತ್ತು ಚರ್ಮವನ್ನು…

Read More

ಶಿವಮೊಗ್ಗ:- ಕರ್ನಾಟಕದಲ್ಲಿ ಅಯೋಧ್ಯೆ ‌ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಆಗ್ತಿರೋದು ಬೇಸರದ ಸಂಗತಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಯೋಧ್ಯೆ ರಾಮಮಂದಿರದ ಐತಿಹಾಸಿಕ ಕ್ಷಣವನ್ನು ಎಲ್ಲರೂ ಭಿನ್ನ ಭಿನ್ನ ರೂಪದಲ್ಲಿ ಆನಂದಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕರಸೇವಕರನ್ನು ಬಂಧಿಸುತ್ತಿದ್ದಾರೆ. ಕರ್ನಾಟಕ ಆಂಜನೇಯನ ಭೂಮಿ, ಇಂತಹ‌ ಕರ್ನಾಟಕದಲ್ಲಿ ಅಯೋಧ್ಯೆ ‌ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಆಗ್ತಿರೋದು ಬೇಸರದ ಸಂಗತಿ ಎಂದು ಹೇಳಿದರು. ಶ್ರೀಕಾಂತ್ ಪೂಜಾರಿ‌ ಮೇಲೆ ಒಂದೇ ಒಂದು ಕೇಸ್ ಇಲ್ಲ ಎಂದ ಸೂಲಿಬೆಲೆ, ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊಡ್ತೀನಿ. ನೀವು ಬಂಧಿಸಿ ನಾವು ಹಳ್ಳಿ ಹಳ್ಳಿಯಲ್ಲಿ ಕರಸೇವಕರನ್ನು ಅಭಿನಂದಿಸುತ್ತೇವೆ, ಜಾಗೃತಿ ಮೂಡಿಸುತ್ತೇವೆ. ಸಿದ್ದರಾಮಯ್ಯ ಮುಸ್ಲಿಂರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಈಗಾಗಲೇ 1 ಸಾವಿರ ಕೋಟಿ ಕೊಟ್ಟಿದ್ದಾರೆ. ಮುಸ್ಲಿಂರಿಗೆ ಹಣ ಕೊಡಲು ದಲಿತರ ಹಣವನ್ನು ‌ಕಬಳಿಸಿದ್ದಾರೆ ಎಂದು ಆರೋಪಿಸಿದರು. ಬಿಕೆ ಹರಿಪ್ರಸಾದ್ ಹಿಂದೂಗಳಲ್ಲಿ ಭಯ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ ಸೂಲಿಬೆಲೆ, ಮುಲಾಯಂ ಸಿಂಗ್ ಗೋಲಿಬಾರ್ ಮಾಡ್ತೀನಿ ಅಂದಾಗಲೇ…

Read More

ಕೆಲವು ವಸ್ತುಗಳಿಂದಲೇ ಸಮಸ್ಯೆ ಬಗೆಹರಿಯುತ್ತೆ ಎನ್ನಲಾಗುತ್ತದೆ. ಕೆಲವೊಂದು ಸಣ್ಣ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಒಬ್ಬ ವ್ಯಕ್ತಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಾಸ್ತು ಪ್ರಕಾರ ಯಾವ ವಸ್ತುಗಳನ್ನು ಜೇಬಿನಲ್ಲಿ ಇಡಬೇಕು ಅನ್ನೋದನ್ನು ತಿಳಿಯೋಣ ಒಬ್ಬ ತನ್ನ ಜೇಬನ್ನು ಎಂದಿಗೂ ಖಾಲಿಯಾಗಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಹಾಗೆ ಮಾಡುವುದರಿಂದ ವ್ಯಕ್ತಿಗೆ ಹಣದ ನಷ್ಟವಾಗಬಹುದು. ಆದ್ದರಿಂದ ನಿಮ್ಮ ಜೇಬಿನಲ್ಲಿ ಪರ್ಸ್ ಇರಿಸಿಕೊಳ್ಳಿ. ನೀವು ಪ್ರತಿದಿನ ಲವಂಗವನ್ನು (clove) ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ, ಅದು ಯಶಸ್ಸನ್ನು ಸಾಧಿಸುವ ಅವಕಾಶಗಳನ್ನು ನೀಡುತ್ತದೆ. ಹಾಗಾಗಿ ಮನೆಯಿಂದ ಹೊರಡುವ ಮೊದಲು ಯಾವಾಗಲೂ 2 ಲವಂಗಗಳನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ. ಯಾವಾಗಲೂ ನವಿಲು ಗರಿಗಳು (peacock feather) ಮತ್ತು ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ, ನಕಾರಾತ್ಮಕ ಶಕ್ತಿಯು (Negative Energy) ನಿಮ್ಮಿಂದ ದೂರ ಉಳಿಯುತ್ತದೆ. ಅಲ್ಲದೆ, ವ್ಯಕ್ತಿಯು ಅದೃಷ್ಟವನ್ನು (Luck) ಪಡೆಯುತ್ತಾನೆ. ನಿಮ್ಮ ಜೇಬಿನಲ್ಲಿ ಬೆಳ್ಳಿ ನಾಣ್ಯವನ್ನು (silver coin) ಇಟ್ಟುಕೊಳ್ಳುವುದು ಸಿಕ್ಕಿ…

Read More

ಬೆಂಗಳೂರು:- ಸೋಮಣ್ಣರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸೋಮಣ್ಣ ಅವರು ಪಕ್ಷದ ಹಿರಿಯರು ಹಾಗೂ ಪ್ರಭಾವಿ ನಾಯಕರೂ ಹೌದು. ಅವರಿಗೆ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು. ಅದೊಂದೇ ಕಾರಣಕ್ಕಾಗಿ ಅವರನ್ನು ಬಿಟ್ಟುಕೊಡುವುದಿಲ್ಲ ಎಂದರು. ಸೋಮಣ್ಣನವರ ಶಕ್ತಿ ಮತ್ತು ಸಾಮಥ್ರ್ಯವನ್ನು ನಾವು ಬಳಸಿಕೊಳ್ಳುತ್ತೇವೆ. ಅವರ ಹಿರಿತನಕ್ಕೆ ತಕ್ಕಂತೆ ಜವಾಬ್ದಾರಿಯನ್ನು ಪಕ್ಷ ನೀಡಲಿದೆ. ಎಂಥದ್ದೇ ಸಂದರ್ಭದಲ್ಲೂ ಅವರಿಗೆ ಮುಜುಗರವಾಗುವ ರೀತಿ ನಡೆದುಕೊಳ್ಳುವುದಿಲ್ಲ. ಅವರಿಗೆ ಖಂಡಿತವಾಗಿಯೂ ಸೂಕ್ತವಾದ ಸ್ಥಾನಮಾನ ಸಿಗಲಿದೆ. ರಾಜಕಾರಣದಲ್ಲಿ ಕೆಲವು ಸಂದರ್ಭದಲ್ಲಿ ಏರಿಳಿತಗಳು ಉಂಟಾಗುವುದು ಸಹಜ ಎಂದರು. ಅವರಿಗೆ ಯಾವ ಸ್ಥಾನಮಾನ ಕೊಡುತ್ತಾರೆ ಎಂಬುದರ ಬಗ್ಗೆ ನಮಗೆ ಖಂಡಿತವಾಗಿಯೂ ಮಾಹಿತಿ ಇಲ್ಲ. ಅವರ ಸಾಮಥ್ರ್ಯಕ್ಕೆ ತಕ್ಕಂತೆ ಸ್ಥಾನಮಾನ ಸಿಗಲಿದೆ. ಸೋಮಣ್ಣನವರು ಹಿರಿಯರು. ಎಂಥದ್ದೇ ಸಂದರ್ಭದಲ್ಲೂ ಅವರು ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವನ್ನು ಸಿ.ಟಿ.ರವಿ ವ್ಯಕ್ತಪಡಿಸಿದರು. ಅವರಿಗೆ ಜವಾಬ್ದಾರಿಯುತವಾದ ಸ್ಥಾನ ಕೊಡುವ ಕೆಲಸವಾಗಿದೆ. ಸೋಮಣ್ಣನವರನ್ನು ನಾನೇ ಭೇಟಿಯಾಗಿ ಮಾತನಾಡುತ್ತೇನೆ. ಎಲ್ಲ ಹಿರಿಯರ ಜೊತೆ…

Read More