Author: AIN Author

ಬೆಂಗಳೂರು: ಬೀದಿ ತುಂಬಾ ಬಣ್ಣದ ಚಿತ್ತಾರ.. ..ನೂರಾರು ಕಲಾವಿದರ ಸಮಾಗಮ….. ಕಣ್ಣು ಕೋರೈಸುವ ಚಿತ್ರಕಲೆಯ ಸಂಗಮ.. ಹೌದು.. ನಾವು ಹೇಳೋಕೆ ಹೊರಟಿರೋದು ಬೆಂಗಳೂರು ಚಿತ್ರಸಂತೆಯ ಬಗ್ಗೆ.. ಇಂದು 21 ನೇ ಚಿತ್ರಸಂತೆಗೆ ಚಿತ್ರಕಲಾ ಪರಿಷತ್ತು ಸಾಕ್ಷಿಯಾಗಿತ್ತು.. ಹಾಗಿದ್ರೆ ಈ ಬಾರಿಯ ಚಿತ್ರಸಂತೆಯಲ್ಲಿ ಏನೆಲ್ಲಾ ವಿಶೇಷತೆ ಇತ್ತು ಅಂತ ನೋಡ್ಕೊಂಡು ಬರೋಣ ಬನ್ನಿ.. ಎಲ್ಲಿ ನೋಡಿದರೂ ಬಣ್ಣ ಬಣ್ಣ. ರಸ್ತೆಯ ಎರಡೂ ಬದಿಗಳಲ್ಲಿ ಜೋಡಿಸಿಟ್ಟ ಪೇಟಿಂಗ್ ಗಳು ಒಂದೊಂದು ಕತೆಯನ್ನ ಹೇಳುವಂತಿರುತ್ತದೆ. ಆಯಾ ವರ್ಷ ನಡೆದ ಪ್ರಮುಖ ಬೆಳವಣಿಗೆ, ಭಾರತೀಯ ಸಂಸ್ಕೃತಿ ಸಾರುವ ಕಲಾಪ್ರಕಾರಗಳು, ವನ್ಯಜೀವಿ, ಮಗು, ಗ್ರಾಮೀಣ ಜೀವನ ಹೀಗೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು  ವಿಷಯವೂ ಅಲ್ಲಿ ಚಿತ್ರವಾಗಿ ರೂಪ ತೆರದಿತ್ತು. ಹೌದು  ಸಾವಿರ ಪದಗಳಲ್ಲಿ ಹೇಳೋ ವಿಷಯವನ್ನ ಒಂದೇ ಒಂದು ಕಲಾಕೃತಿ ಹೇಳುತ್ತೆ. ಆ ಒಂದೊಂದು ಕಲಾಕೃತಿಯೂ ನೂರಾರು ಅರ್ಥವನ್ನ ನೀಡುತ್ತೆ. ಕಲಾವಿದನ ಕಲ್ಪನೆ ಮತ್ತು ಕಲಾರಸಿಕರ ಕಲಾರಾಧನೆ ಮಿಳಿತಗೊಳ್ಳುವ ಬಣ್ಣದ ಹಬ್ಬವೇ ಈ ಚಿತ್ರಸಂತೆ.. https://ainlivenews.com/elon-musk-offered-1-billion-dollars-to-change-the-name-on-wikipedia/ ಹೌದು.. ಇಂದು…

Read More

ಬೆಂಗಳೂರು, ಜನವರಿ 07: ಚಿತ್ರಕಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಾರಿ 50 ಲಕ್ಷ ರೂ.ಗಳ ಅನುದಾನವನ್ನು ಪರಿಷತ್ತಿಗೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಆಯೋಜಿಸಿರುವ 21 ನೇ ಚಿತ್ರ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರ್ಟ್ ಗ್ಯಾಲರಿ ಸ್ಥಾಪಿಸಲು ನೆರವು ಎಲ್ಲಾ ಜಿಲ್ಲೆಗಳಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ ಹಾಗೂ ಆರ್ಟ್ ಗ್ಯಾಲರಿ ಸ್ಥಾಪಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆ ಎಂದರು. 2003 ರಿಂದ ಇಂದಿನವರೆಗೆ ಚಿತ್ರಸಂತೆ ಆಚರಣೆಯಾಗುತ್ತಿದೆ. ಈ ವರ್ಷ 21 ನೇ ಚಿತ್ರಸಂತೆ ನಡೆದಿದೆ. ಹಿಂದೆ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ಚಿತ್ರಸಂತೆಯನ್ನು ಉದ್ಘಾಟಿಸಿದ್ದೇನೆ ಎಂದು ಸ್ಮರಿಸಿದರು. 22 ರಾಜ್ಯಗಳಿಂದ 1600 ಕಲಾವಿದರು ಪ್ರತಿ ವರ್ಷ 3 ರಿಂದ 4 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. 22 ರಾಜ್ಯಗಳಿಂದ 1600 ಕಲಾವಿದರು ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ. ಈ ಬಾರಿ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆಯಾಗಿರುವುದು…

Read More

ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೆ ವಿ ಶಶಿಧರ್ ನಿರ್ಮಾಣದ, ಕೆ ಎಮ್ ರಘು ಆಕ್ಷನ್ ಕಟ್ ಹೇಳಿರುವ “ಜಸ್ಟ್ ಪಾಸ್” ಚಿತ್ರತಂಡ ಈಗಾಗಲೇ ಟೀಸರ್ ಬಿಡುಗಡೆಗೊಳಿಸಿ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಸುದ್ದಿಯನ್ನು ಹಂಚಿಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ತಂಡಗಳಿಗೆ ಮತ್ತು ಸ್ನೇಹಿತರಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಎತ್ತಿದ ಕೈ. “ಜಸ್ಟ್ ಪಾಸ್” ಚಿತ್ರದ ಮೊದಲ ವಿಡಿಯೋ ಸಾಂಗ್ ಒಂದನ್ನು ದರ್ಶನ್ ರವರು 12ನೇ ತಾರೀಕು ಬಿಡುಗಡೆ ಮಾಡಲಿದ್ದಾರೆ. “ಸಿಂಗಾರ ಸಿರಿಯೇ” ಎಂದು “ಕಾಂತಾರ” ಚಿತ್ರದ ಮೂಲಕ ತಮ್ಮ ಸಾಹಿತ್ಯದ ಕೌಶಲ್ಯವನ್ನು ಮೆರೆದಂತಹ ಪ್ರಮೋದ್ ಮರವಂತೆ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ ಹುಕ್ ಸ್ಟೆಪ್ ಗಳ ಮೂಲಕ ಹೆಚ್ಚು ಸುದ್ದಿಯಾಗುವಂತಹ ಭೂಷಣ್ ಈ ಹಾಡನ್ನು ಕೋರಿಯೋಗ್ರಫಿ ಮಾಡಿದ್ದಾರೆ. 12ನೇ ವಯಸ್ಸಿಗೆ ಕೀಬೋರ್ಡ್ ನುಡಿಸುವುದರ ಮೂಲಕ ಘಟಾನುಘಟಿ ಮ್ಯೂಸಿಕ್ ಡೈರೆಕ್ಟರ್ ಗಳ ಜೊತೆ ಕೆಲಸ ಮಾಡಿರುವಂತಹ ಹರ್ಷವರ್ಧನ್ ರಾಜ್ ರವರ ಮ್ಯಾಜಿಕ್ ಸಂಗೀತ ಸಂಯೋಜನೆ ಇದೆ. ಹೆಸರಾಂತ ಛಾಯಾಗ್ರಾಹಕ…

Read More

ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ “ಇಮೇಲ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. “ಇಮೇಲ್” ಚಿತ್ರದ ಫಸ್ಟ್ ಲುಕ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಸ್ ಆರ್ ರಾಜನ್ ಅವರು “ಇಮೇಲ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಎಸ್ ಆರ್ ಫಿಲಂ ಫ್ಯಾಕ್ಟರಿ ತಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. “ಇಮೇಲ್” ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮುರುಗ ಅಶೋಕ್, ಮನೋಬಲ, “ಜೈಲರ್” ಚಿತ್ರದ ಖ್ಯಾತಿಯ ಬಿಲ್ಲಿ, “ಲೊಳ್ಳುಸಭಾ” ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ರಾಮ್ ಸನ್ನಿ, ನಯನ ಚೌಹಾನ್, ಶೈಲಜ, ಶ್ವೇತ, ತೇಜಸ್ವಿನಿ, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು “ಇಮೇಲ್”…

Read More

ಈ ವರ್ಷ ಟಿ20 ವಿಶ್ವಕಪ್ ನಡೆಯುತ್ತಿದೆ. ಕ್ರಿಕೆಟ್ ಫ್ಯಾನ್ಸ್‌ಗೆ  ವರ್ಲ್ಡ್‌ಕಪ್‌ಗಿಂತ ಭಾರತ-ಪಾಕಿಸ್ತಾನ ಪಂದ್ಯ ನೋಡೋ ಕಾತರ. ಆ ಮ್ಯಾಚ್‌ಗೆ ವೇದಿಕೆ ಸಿದ್ದವಾಗಿದೆ. ಈ ವಿಶ್ವಕಪ್‌ನಲ್ಲೂ ಲೀಗ್‌ನಲ್ಲೇ ಬದ್ಧವೈರಿಗಳು ಮುಖಾಮುಖಿಯಾಗಲಿವೆ. ಡೇಟ್ ಮತ್ತು ಸ್ಥಳ ಸಹ ಫಿಕ್ಸ್ ಆಗಿದೆ.  5 ತಿಂಗಳಿಗೆ ಟಿ20 ವಿಶ್ವಕಪ್ ಕಿಕ್ ಆಫ್ ಆಗಲಿದೆ. ಹೌದು, ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯೋ ಮೆಗಾ ಟೂರ್ನಿ ಜೂನ್ 5ರಂದು ಆರಂಭವಾಗಲಿದೆ. ಐದು ತಿಂಗಳ ಮುಂಚೆಯೇ ಟಿ20 ವರ್ಲ್ಡ್‌ಕಪ್ ವೇಳಾಪಟ್ಟಿ ರಿಲೀಸ್ ಆಗಿದೆ. ಜೂನ್ 5ರಿಂದ ಜೂನ್ 29ರವರೆಗೆ ಅಂದ್ರೆ 25 ದಿನ ದಿನಗಳ ಕಾಲ ಟಿ20 ವಿಶ್ವಕಪ್ ನಡೆಯಲಿದೆ. 25ಕ್ಕೆ 25 ದಿನವೂ ಫುಲ್ ಮನರಂಜನೆ ಸಿಗಲಿದೆ.  ಸದ್ಯ ರಿಲೀಸ್ ಆಗಿರೋ ವೇಳಾಪಟ್ಟಿ ಪ್ರಕಾರ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನ ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಜೂನ್ 9ರಂದು ಭಾನುವಾರ ನ್ಯೂಯಾರ್ಕ್‌ನಲ್ಲಿ ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಸೂಪರ್ ಸಂಡೇಯಂದು ಕಡುವೈರಿಗಳ ಕಾಳಗ ವೀಕ್ಷಿಸಲು ಇಡೀ…

Read More

ಬೆಂಗಳೂರು:  ಜೆ.ಪಿ ನಗರದ ಮೆಟ್ರೋ ಹಳಿಯಲ್ಲಿ ಕಪ್ಪು ಬೆಕ್ಕೊಂದು ಟ್ರ್ಯಾಕ್‌ಗೆ ಇಳಿದು ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ. ಮೆಟ್ರೋ ಸಿಬ್ಬಂದಿ ಅಕ್ಷರಶಃ ಮೈ ಎಲ್ಲ ಕಣ್ಣಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಯಾವಾಗ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಬಿಡುತ್ತಾರೋ ಎಂಬ ಆತಂಕದಲ್ಲಿ ಇದ್ದಾರೆ. ಈ ನಡುವೆ ಜೆ.ಪಿ.ನಗರ ಮೆಟ್ರೋ ಹಳಿಗೆ ಬೆಕ್ಕುವೊಂದು ಜಿಗಿದಿದ್ದು, ಕ್ಷಣ ಕಾಲ ಆತಂಕವನ್ನು ಸೃಷ್ಟಿಸಿತ್ತು. https://ainlivenews.com/elon-musk-offered-1-billion-dollars-to-change-the-name-on-wikipedia/ ಟ್ರ್ಯಾಕ್‌ನಲ್ಲಿ ಬೆಕ್ಕು ಇರುವುದನ್ನು ಕಂಡ ಪ್ರಯಾಣಿಕರು ಕೂಡಲೇ ಮೆಟ್ರೋ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬೆಕ್ಕನ್ನು ರಕ್ಷಣೆ ಮಾಡಲು ಮುಂದಾಗಿಲ್ಲ. ಬದಲಿಗೆ ಟ್ರ್ಯಾಕ್‌ನಲ್ಲಿದ್ದ ಬೆಕ್ಕನ್ನು ಓಡಿಸಲು ಮುಂದಾಗಿದ್ದಾರೆ ಎಂದು ಟ್ವಿಟ್ಟರ್‌ (ಎಕ್ಸ್‌) ಮೂಲಕ ಆಕ್ರೋಶ ಹೊರಹಾಕಿದ್ದಾರೆ

Read More

ಬೆಂಗಳೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು. ಇಡೀ ವಿಕ್ರಂ ಸಿಂಹ ಅಂಕಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಒಬ್ಬರದ್ದೇ, ಅವರೇ ಶ್ರೀಮನ್ ಸಿದ್ದರಾಮಣ್ಣ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಟಾಂಗ್‌ಕೊಟ್ಟಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ (Vikram Simha) ಅವರ ಪ್ರಕರಣಕ್ಕೆ ಸಂಬಂಧಿಸಿ ತಾವು ನೀಡಿದ್ದ ಹೇಳಿಕೆಯ ಬಗ್ಗೆ, ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಜಾರಿಕೊಂಡಿದ್ದ ಸಚಿವರಿಬ್ಬರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. https://ainlivenews.com/elon-musk-offered-1-billion-dollars-to-change-the-name-on-wikipedia/ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹಾಗೂ ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಅವರ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಕರ್ನಾಟಕದ ‘ನೀರೋ’ ಎಂದು ಜರೆದಿದ್ದಾರೆ. ಅಲ್ಲದೇ, ದಾಖಲೆ ಇಟ್ಟುಕೊಂಡೇ ವಿಕ್ರಂ ಸಿಂಹ ಪ್ರಕರಣದ ಬಗ್ಗೆ ಮಾತನಾಡಿದ್ದೇನೆ. ಬೇಕಿದ್ದರೆ ದಾಖಲೆಗಳನ್ನು…

Read More

ಬಿಗ್ ಬಾಸ್ ಮನೆಯ (Bigg Boss) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೀಗ 90 ದಿನ ಕಳೆದು ಮುನ್ನುಗ್ಗತ್ತಿದೆ. ಇದರ ನಡುವೆ ಮೈಕಲ್ ಸಿಡುಕು ವರ್ತನೆಗೆ ಸುದೀಪ್ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ ಸ್ಥಾನಕ್ಕೆ ಗೌರವ ನೀಡದ ಮೈಕಲ್‌ಗೆ (Michael) ಸುದೀಪ್ (Sudeep)  ಬೆಂಡೆತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಮೈಕಲ್‌ಗೆ ಅಷ್ಟಾಗಿ ಕನ್ನಡ ಬರುತ್ತಿಲ್ಲ. ಇಲ್ಲಿಗೆ ಬಂದ್ಮೇಲೆಯೇ ಅವರ ಕನ್ನಡ ಸಾಕಷ್ಟು ಇಂಪ್ರೂವ್ ಆಗಿತ್ತು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಬಿಂಬಿತರಾದರು. ಬಿಗ್ ಮನೆಗೆ ಬಂದ ಮೊದಲ 6 ವಾರದಲ್ಲಿ ಅವರ ಆಟ, ಮಾತು, ನಡೆ- ನುಡಿ ಎಲ್ಲವೂ ಪ್ರೇಕ್ಷಕರ ಗಮನ ಸೆಳೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಾತಿನ ವೈಖರಿಯೇ ಬದಲಾಗಿದೆ. ಅದರಲ್ಲೂ ಮನೆಯ ಕ್ಯಾಪ್ಟನ್‌ಗೆ ಮೈಕಲ್ ಉಲ್ಟಾ ಮಾತನಾಡುತ್ತಾರೆ. ವಾರಾಂತ್ಯದ ಮಾತುಕತೆಯಲ್ಲಿ ಸಂಗೀತಾ (Sangeetha Sringeri) ಅವರ ಕ್ಯಾಪ್ಟನ್ಸಿ ಯಾರಿಗೆ ಇಷ್ಟ ಆಯಿತು, ಯಾರಿಗೆ ಇಷ್ಟ ಆಗಿಲ್ಲ ಎಂದು ಸುದೀಪ್ ಕೇಳಿದರು. ಇಷ್ಟ ಆಗಿಲ್ಲ…

Read More

ಬೆಂಗಳೂರು:  ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪೈಲೆಟ್‌ಲೆಸ್ ಸಂಚಾರಕ್ಕೆ ಇನ್ನೂ ಆರು ತಿಂಗಳು ಕಾಯಬೇಕಿದೆ. ಚೀನಾದಿಂದ ಬರಬೇಕಿದ್ದ ಮೆಟ್ರೋ ಬೋಗಿಗಳ ವಿಳಂಬದಿಂದಾಗಿ ಈ ಮಾರ್ಗದ ಲೋಕಾರ್ಪಣೆ ಮತ್ತೆ ತಡವಾಗುತ್ತಿದೆ. ಹಿಂದೆ ಹಳದಿ ಮಾರ್ಗವನ್ನು ಫೆಬ್ರವರಿಯಲ್ಲಿ ಉದ್ಘಾಟನೆ ಮಾಡುತ್ತೇವೆ ಎಂದಿದ್ದ ಬಿಎಂಆರ್‌ಸಿಎಲ್‌ (BMRCL) ಈಗ ಜುಲೈನಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ. ಇಲ್ಲಿ ಸಿವಿಲ್ ಕಾಮಗಾರಿ ಬಹುತೇಕ ಮುಗಿದಿದ್ದರೂ ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿಯಿಂದ 2 ಪ್ರೋಟೋ ರೈಲು ಜೊತೆ ಎಂಜಿನಿಯರ್‌ ಬರಬೇಕಿದೆ. ಚೀನಾದಿಂದ ಇನ್ನೂ ಅನುಮತಿ ಸಿಗದ ಕಾರಣ ಅಲ್ಲಿಂದ ಬೋಗಿಗಳು ಇನ್ನೂ ಬಂದಿಲ್ಲ. ಕೋಲ್ಕತ್ತಾದ ತೀತಾಘರ್‌ ವ್ಯಾಗನ್‌ ಕಂಪನಿಯು ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು ಇದು ಸಹ ಇನ್ನೂ ಕಾರ್ಯಚರಣೆಯಲ್ಲಿದೆ. ಚೀನಾದಿಂದ ಈ ತಿಂಗಳಾಂತ್ಯಕ್ಕೆ ಅಲ್ಲಿನ ಸಿಬ್ಬಂದಿ ಬರಲಿದ್ದಾರೆ. ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿ ಸಿಬ್ಬಂದಿಗೆ ಭಾರತ ವೀಸಾ ನೀಡಿದೆ. ಆದರೆ ಚೀನಾದ 2 ಪ್ರೋಟೋ ಟ್ರೈನ್ ಗಳು ಭಾರತಕ್ಕೆ ಬರಲು…

Read More

ಬೆಂಗಳೂರು: ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟ ಆಗ್ತಿದೆ‌‌. ಜಾತಿವಾರು ಮೂರು ಡಿಸಿಎಂ ಮಾಡಬೇಕು ಅಂತಾ ಘಟಾನುಘಟಿ ಸಚಿವರು ಡಿಮ್ಯಾಂಡ್ ಮಾಡ್ತಿದ್ದಾರೆ‌‌. ಇದು ಸಿದ್ದು ಅಂಡ್ ಡಿಕೆ ನಡುವೆ ಶೀತಲ ಸಮರಕ್ಕೂ ಕಾರಣವಾಗಿದೆ.. ಲೋಕಸಭೆ ಎಲೆಕ್ಷನ್ ಅಖಾಡಕ್ಕಿಯಲು ಸಿಎಂ ಆಪ್ತ ಸಚಿವರೆಲ್ಲಾ ಹಿಂದೇಟು ಹಾಕಿದ್ದಾರೆ.‌ಯೆಸ್.. ರಾಜ್ಯ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಸ್ಪೋಟಕ ಬೆಳವಣಿಗೆಗಳು ನಡೀತಾ ಇವೆ.. ಹೈಕಮಾಂಡ್ ಸೂಚಿಸಿದ್ರೆ ಲೋಕಸಭೆ ಎಲೆಕ್ಷನ್ ಗೆ ಸ್ಪರ್ಧೆ ಮಾಡ್ತೀವಿ ಅಂತಿದ್ದ ಸಚಿವರೆಲ್ಲಾ ಈಗ ಉಲ್ಟಾ ಹೊಡೆಯುತ್ತಿದ್ದಾರೆ. https://ainlivenews.com/elon-musk-offered-1-billion-dollars-to-change-the-name-on-wikipedia/ ‌ ಸಿದ್ದರಾಮಯ್ಯ ಆಪ್ತ ಬಣದಲ್ಲಿದ್ದ ಬಹುತೇಕ ಸಚಿವರನ್ನ ಲೋಕಸಭೆ ಎಲೆಕ್ಷನ್ ಗೆ ನಿಲ್ಲಿಸೋ ಸಂಬಂಧ, ಹೈಕಮಾಂಡ್ ಜೊತೆ ಡಿ.ಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರಂತೆ.. ಇದು ಸಿದ್ದು ಆಪ್ತರನ್ನ ಕೆರಳಿದೆ‌. ಮೊದಲೇ ಜಾತಿಗಣತಿ ವಿರೋಧ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಡಿಕೆಶಿ, ಸಚಿವರ ಸ್ಪರ್ಧೆ ವಿಚಾರಕ್ಕೆ ಕೈ ಹಾಕಿದ್ದರಿಂದ ಹಲವರು ಕೊತ ಕೊತ ಅಂತಿದ್ದಾರೆ‌‌‌. ಹೀಗಾಗಿ ಡಿ.ಕೆ ಶಿವಕುಮಾರ್ ಪ್ರಾಬಲ್ಯ ಕುಗ್ಗಿಸಲು ಮೂರು ಡಿಸಿಎಂ…

Read More