Author: AIN Author

ಹುಟ್ಟಿನಿಂದ ಆರು ತಿಂಗಳವರೆಗೆ ಎದೆಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ‘ತಾಯಿ ಎದೆಹಾಲು ನವಜಾತ ಶಿಶುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹುಟ್ಟಿದಾಗಿನಿಂದ ಆರು ತಿಂಗಳುಗಳ ಕಾಲ ತಾಯಿಯ ಹಾಲನ್ನು ಉಣಿಸಬೇಕು’. ಕೆಲವೊಮ್ಮೆ ಎದೆಹಾಲಿನಕೊರತೆ ಅಥವಾ ಇನ್ಯಾವುದೋ ಸಮಸ್ಯೆಯಿಂದ ಮಕ್ಕಳು ಬಾಟಲಿ ಮೂಲಕ ಕುಡಿಸಬೇಕಾಗುತ್ತದೆ. ಆದರೆ ಬಾಟಲಿಯಲ್ಲಿ ಹಾಲುಣಿಸುತ್ತಿದ್ದರೆ ಅದರ ನೈರ್ಮಲ್ಯಕ್ಕೆ ವಿಶೇಷ ಗಮನ ಕೊಡುವುದು ಅತ್ಯಂತ ಅಗತ್ಯವಾಗಿರುತ್ತದೆ. ಮಗುವಿನ ಹಾಲಿನ ಬಾಟಲಿಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಪ್ಲ್ಯಾಸ್ಟಿಕ್,ಸ್ಟೀಲ್ ಮತ್ತು ಗಾಜಿನ ಬಾಟಲಿಗಳು ಲಭ್ಯವಿವೆ. ಆದರೆ ಬಿಸಿ ಹಾಲಿಗೆ ಪ್ಲಾಸ್ಟಿಕ್​​ ಬಾಟಲಿ ಬಳಸುವುದು ಅಷ್ಟು ಸೂಕ್ತವಲ್ಲ. ನೀವು ಸ್ಟೀಲ್​​ ಅಥವಾ ಗಾಜಿನ ಬಾಟಲಿಗಳನ್ನು ಬಳಸಬಹುದು. ಗಾಲಿನ ಬಾಟಲಿ ಬೇಗ ಒಡೆದು ಹೋಗುವುದರಿಂದ ಹೆಚ್ಚಿನ ಜಾಗ್ರತೆ ವಹಿಸಿ. ಮಗುವಿಗೆ ಹಾಲು ನೀಡುವ ಮೊದಲು ಬಾಟಲಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದಲ್ಲದೆ, ಬಾಟಲಿಯನ್ನು ನೀರಿನಲ್ಲಿ ಕುದಿಸಿ ಸ್ವಚ್ಛಗೊಳಿಸಿ. ಮಗುವಿನ ಬಾಟಲ್ ಸ್ವಚ್ಛಗೊಳಿಸುವ ಬ್ರಷ್ಗಳನ್ನು ಸ್ವಚ್ಛವಾದ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಿ. ಹಾಲು ತಯಾರಿಸುವ…

Read More

ಬೆಂಗಳೂರು:- DCM ಡಿಕೆಶಿ ಸೊಕ್ಕು ಮುರಿಯಲು ಕಾಂಗ್ರೆಸ್ ನಿಂದಲೇ ಪ್ಲ್ಯಾನ್ ನಡೆದಿದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್‍ಗೆ ತಾವು ಅಲ್ಪಸಂಖ್ಯಾತರ ಮತಗಳಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭಾವನೆ ಇದೆ. ಇದಕ್ಕಾಗಿ ರೈತರೂ ಸೇರಿದಂತೆ ಎಲ್ಲಾ ವರ್ಗಗಳನ್ನೂ ಕಡೆಗಣಿಸುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ನೀಡುತ್ತೇವೆ ಎನ್ನುವುದರೊಂದಿಗೆ ಡಿಜೆ ಹಳ್ಳಿ/ಕೆಜೆ ಹಳ್ಳಿ ಗುಂಪು ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ದೇಶದ್ರೋಹಿಗಳನ್ನು ಅಮಾಯಕರು ಎಂದು ಬಿಂಬಿಸುವ ಪ್ರಯತ್ನಗಳಾಗುತ್ತಿವೆ ಎಂದು ಅವರು ದೂರಿದರು. ಒಂದು ವೇಳೆ ಕೆಜೆ ಹಳ್ಳಿ/ಡಿಜೆ ಹಳ್ಳಿ ಪ್ರಕರಣದಲ್ಲಿನ ಆರೋಪಿಗಳನ್ನು ಬಿಡುಗಡೆ ಮಾಡಿದರೆ ಅದು ಇನ್ನಿತರ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟವರನ್ನು ಬಿಡುಗಡೆ ಮಾಡಿದ್ದಾರೆ ಎಂಬ ಧೋರಣೆಯಿಂದ ಇತರರು ಅದೇ ರೀತಿಯ ಕೃತ್ಯಗಳಲ್ಲಿ ತೊಡಗುವ ಆತಂಕವಿದೆ ಎಂದು ಹೇಳಿದರು. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಅವರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ತ್ರಿಬ್ಬಲ್ ತಲಾಕ್ ನಿಷೇಧ ಜಾರಿಗೆ ತಂದಿದ್ದಾರೆ.…

Read More

ನಮ್ಮ ಭವಿಷ್ಯತ್ತಿನ ದೃಷ್ಟಿಯಿಂದ, ಉತ್ತಮ ನಾಳೆಗಾಗಿ ಒಂದಷ್ಟು ಹಣ ಕೂಡಿಡುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಹೌದು 50 ರೂಪಾಯಿ ನಿಮಗೆ ಚಿಕ್ಕ ಮೊತ್ತ ಅಂತ ಅನ್ನಿಸಬಹುದು. ಆದ್ರೆ ಹೀಗೆ ಒಂದು ತಿಂಗಳು 50 ರೂ ಉಳಿಸಿದ್ರೆ 1500 ರೂಪಾಯಿ ಆಗಲಿದೆ. ಅದೇ ರೀತಿ ಮ್ಯೂಚುವಲ್ ಫಂಡ್​ ಹೂಡಿಕೆ ಮಾಡಿದ್ರೆ ಸೀಮಿತ ಆದಾಯ ಪಡೆಯಬಹುದಾಗಿದೆ.ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಸಣ್ಣ ಉಳಿತಾಯ ನಿಮಗೆ ದೊಡ್ಡ ಮೊತ್ತವನ್ನು ಹಿಂದಿರುಗಿಸುತ್ತದೆ. 29 ಅಕ್ಟೋಬರ್ 1996ರಂದು ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಆರಂಭಿಸಲಾಗಿತ್ತು. ಈ ನಿಧಿ ಶೇ.11.47ರಷ್ಟು ಲಾಭವನ್ನು ನೀಡಿದೆ.ಕಳೆದ ಮೂರು ವರ್ಷಗಳಲ್ಲಿ ಈ ಸ್ಮಾಲ್ ಕ್ಯಾಪ್ ಫಂಡ್ ವಾರ್ಷಿಕ 47.25 ಶೇಕಡಾ ಆದಾಯವನ್ನು ನೀಡಿದೆ. ಇದು ಸಾಮಾನ್ಯ ಯೋಜನೆಗೆ ಅನ್ವಯಿಸುತ್ತದೆ. ಅದೇ ನೇರ ಯೋಜನೆಯಲ್ಲಿ ಶೇ.49.23ರಷ್ಟು ಆದಾಯ ಬಂದಿದೆ. ಇದು ಅತ್ಯಂತ ಹೆಚ್ಚಿನ ಆದಾಯ ಎಂದು ಹೇಳಬಹುದು.ಆನ್‌ಲೈನ್ ಮ್ಯೂಚುವಲ್ ಫಂಡ್ ಕ್ಯಾಲ್ಕುಲೇಟರ್ ಪ್ರಕಾರ, ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್‌ನಲ್ಲಿ ಆರಂಭದಿಂದಲೂ ಪ್ರತಿ SIPಗೆ 1500 ರೂಪಾಯಿ…

Read More

ವೈಟ್ ಡಿಸ್ ಚಾರ್ಜ್, ಬಿಳಿ ಸೆರಗು  ಅಥವಾ ಲ್ಯುಕೋರೊಹಿಯಾ ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಸ್ವಲ್ಪ ಬಿಳಿ ವಿಸರ್ಜನೆ ಒಂದು ಸಮಸ್ಯೆಯಲ್ಲ ಆದರೆ ಅದು ಹೆಚ್ಚಾದರೆ ಕಾಳಜಿಯ ವಿಷಯವಾಗಿದೆ. ವಿಸರ್ಜನೆ ತುಂಬಾ ಇದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು, ಆದರೆ ಸೌಮ್ಯ ವಿಸರ್ಜನೆಯ ಸಮಸ್ಯೆಯನ್ನು ಪರಿಹರಿಸುವ ಕೆಲವು ಮನೆಮದ್ದುಗಳು ಇಲ್ಲಿವೆ. ಮೆಂತ್ಯಯನ್ನು ನೀರಿನಲ್ಲಿ ಬೇಯಿಸಿ ಸೇವಿಸಿದರೆ ಬಿಳಿ ವಿಸರ್ಜನೆಯ ಸಮಸ್ಯೆಯನ್ನು ಪರಿಹರಿಸಬಹುದು.  ನೀವು ಅರ್ಧ ಲೀಟರ್  ನೀರಿನಲ್ಲಿ ಮೆಂತ್ಯ ಬೀಜ ಹಾಕಿ ನೀರನ್ನು ಅರ್ಧದಷ್ಟು ಆಗುವರೆಗೆ ಕುದಿಸಿ, ನಂತರ ಈ ನೀರು ತಣ್ಣಗಾದಾಗ ಕುಡಿಯಿರಿ. ಬೆಂಡೆಕಾಯಿ ಬಿಳಿ ವಿಸರ್ಜನೆಯ ಸಮಸ್ಯೆಗೆ ಮತ್ತೊಂದು ಉತ್ತಮ ಪರಿಹಾರ. ನೀವು ಸ್ವಲ್ಪ ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ ನಂತರ ಮಿಕ್ಸರ್ ನಲ್ಲಿ ರುಬ್ಬಿ ಸೇವಿಸಬಹುದು. ಕೆಲವು ಹೆಂಗಸರು ಬೆಂಡೆಕಾಯಿಯನ್ನು ಮೊಸರಿನೊಂದಿಗೆ ನೆನೆಸಿ ನಂತರ ಸೇವಿಸುತ್ತಾರೆ. ಕೆಲವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ,  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಬಿಳಿ ಸೆರಗಿಗೆ ಚಿಕಿತ್ಸೆ ನೀಡಲು ಇದು ಸುಲಭವಾದ ಮತ್ತು ಸುರಕ್ಷಿತವಾದ ಮನೆಮದ್ದುಗಳಲ್ಲಿ…

Read More

ಬಂಗಾರಪೇಟೆ:- ಹುಸಿ ಭರವಸೆ ನೀಡುವುದು ಬಿಜೆಪಿಗೆ ಜಾಯಮಾನವಲ್ಲ ಎಂದು ಮುನಿಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹುಸಿ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವುದು ಬಿಜೆಪಿಯ ಜಾಯಮಾನವಲ್ಲ ನೀಡಿದ ಭರವಸೆಗಳನ್ನು ಪೂರಕವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಕೇಂದ್ರ ಸರ್ಕಾರ ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ಮುನಿಸ್ವಾಮಿ ಹೇಳಿದರು. ನಾಗರಿಕರು ಅನಾರೋಗ್ಯಕ್ಕೆ ಈಡಾದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಔಷಧಿಗಳನ್ನು ಖರೀದಿಸಲು ಔಷಧಿಗಳ ಮಳಿಗೆಗೆ ತೆರಳಿದಾಗ ಅಲ್ಲಿ ಔಷಧಿಗಳ ಬೆಲೆ ದುಬಾರಿಯಾಗಿರುತ್ತದೆ, ಬಡವರು ಔಷಧಿಗಳನ್ನು ಖರೀದಿಸಲಾಗದ ಪರಿಸ್ಥಿತಿಯನ್ನು ಕಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಔಷಧಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಜನ ಔಷಧಿ ಕೇಂದ್ರಗಳನ್ನು ತೆರೆದಿದ್ದಾರೆ ನೀವು ಇದನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು, ಹಾಗೂ 31 ಕೋಟಿ ರು.ಗಳ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲಾಗುವುದು, ಬಂಗಾರಪೇಟೆ ಪಟ್ಟಣದಲ್ಲಿ 70 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

Read More

ಸೂರ್ಯೋದಯ: 06:52, ಸೂರ್ಯಾಸ್ತ : 05:52 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗದರ್ಶಿ, ಕೃಷ್ಣ ಪಕ್ಷ, ದಕ್ಷಿಣಾಯಣ, ಹೇಮಂತ ಋತು. ತಿಥಿ: ದ್ವಾದಶಿ, ನಕ್ಷತ್ರ: ಅನುರಾಧಾ ಯೋಗ: ಗಂಡ, ಕರಣ: ಕೌಲವ, ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: ಬೆ.11:41 ನಿಂದ ಮ.1:17 ತನಕ ಅಭಿಜಿತ್ ಮುಹುರ್ತ: ಮ.12:00 ನಿಂದ ಮ.12:44 ತನಕ ಮೇಷ ರಾಶಿ: ದಾಂಪತ್ಯ ಕಲಹ ಪದೇ ಪದೇ ಎದುರಿಸುವಿರಿ, ಕೃಷಿಕರು ನೀರಾವರಿ ಭೂಮಿ ಖರೀದಿಸುವರು, ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಯಿಂದ ಪದೇ ಪದೇ ಕಿರುಕುಳ,ಮಗಳಿಗೆ ಗೋಸ್ಕರ ನಿವೇಶನ ಖರೀದಿ,ರಾಶಿಯವರಿಗೆ ಮಗಳು ಒಳ್ಳೆಯ ಸ್ನೇಹಿತೆ, ವಿದೇಶದಲ್ಲಿ ನೆಲೆಸಿರುವ ನಿಮ್ಮ ಕುಟುಂಬ ಸದಸ್ಯರಿಂದ ಶುಭಸಮಾಚಾರ ಕೇಳುವಿರಿ, ಉದ್ಯೋಗದಲ್ಲಿ ಅಪಕೀರ್ತಿ, ಕೆಲಸದಲ್ಲಿ ಅಧಿಕ ಒತ್ತಡ, ಸ್ಟೇಷನರಿ ವ್ಯಾಪಾರಿಗಳಿಗೆ ಧನಲಾಭ,ಅಧಿಕಾರಿಗಳಿಗೆ ಗೌರವ ಮತ್ತು ಧನಲಾಭ,ಹಳೆಯ ಸಾಲ ಮರುಪಾವತಿ,ಕಷ್ಟಕಾಲದಲ್ಲಿ ಪಿತೃವರ್ಗ ದಿಂದ ಸಹಾಯ, ಪಿತ್ರಾರ್ಜಿತ…

Read More

ಅಥಣಿ:- ಇವತ್ತೀನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕುಲುಶಿತ ವಾತವರಣ ನಿರ್ಮಾಣಗೊಳ್ಳುತ್ತಿದೆ ಅಂದು ನಮ್ಮಗಳ ಪಕ್ಷಗಳು ಬೇರೆ ಬೇರೆ ಆಗಿದ್ದರೂ ಒಬ್ಬರು ಇನ್ನೊಬ್ಬರ ಮನೋಭಾವನೆಗಳನ್ನು ಅರಿಯುವ ಮತ್ತು ಗೌರವಿಸುವ ಪ್ರರ್ವತಿಯಿಂದ ಗೆಳೆಯರ ನಡುವೆ ಸಂಘರ್ಷಗಳಿಗೆ ಅವಕಾಶ ಇರುತ್ತಿರಲಿಲ್ಲ ಆದರೆ ಇಂದು ಆ‌ ವಾತವರಣ ಉಳಿದು ಕೊಂಡಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಜರುಗಿದ ಕಾಂಗ್ರೇಸ್ ಮುಖಂಡ ದಿ.ಅಪ್ಪಸಾಹೇಬ ದೇಸಾಯಿಯವರ ಸ್ಮಣಾರ್ಥವಾಗಿ ಅವರ ಅಣ್ಣ ರಚನೆಯ ವಿರಚಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು,ಇಂದು ಮನುಷ್ಯ‌ ಸ್ವಾರ್ಥ ಮತ್ತು ಸಂಕುಚಿತ ಭಾವನೆ ಹೊಂದಿದ ಕಾರಣದಿಂದ ಜೀವನ ವ್ಯವಸ್ಥೆ ಹಾಳಾಗುತ್ತಿದೆ. ಇಂದು ರಾಜಕಾರಣದಲ್ಲಿ ಐಶ್ವರ್ಯದ ಆರಾಧನೆ ಮತ್ತು ದುರಾಸೆಯ ಬೆನ್ನು ಹತ್ತಿ ಹೊರಟಿದೆ ನಮ್ಮಲ್ಲಿ ಸದ್ವಚಾರ ಮೌಲ್ಯಗಳನ್ನು ಎತ್ತಿ ಹಿಡಿದಾಗ ಮಾತ್ರ ದುಷ್ಟ ಶಕ್ತಿಗಳ ಪ್ರಾಬಲ್ಯ ಕಡಿಮೆ ಆಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಪ್ಪಾಸಾಹೇಬ ದೇಸಾಯಿ ವಿಶ್ವಾಸರ್ಹ ರಾಜಕಾರಣಿ, ಗೆಳತನಕ್ಕೆ ಅತೀ ಗೌವರವ ಕೊಡುವ ವ್ಯಕ್ತಿಯಾಗಿದ್ದರು ಸ್ಥಳೀಯ ಚುನಾವಣೆ…

Read More

ಬೆಂಗಳೂರು:- ಬೆಂಗಳೂರಿನಲ್ಲಿ ರೌಡಿಸಂ ಮಟ್ಟ ಹಾಕಲು ಖಾಕಿ ಎಚ್ಚರ ವಹಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪೊಲೀಸರು ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು. ಇನ್ನು ಮುಂದೆ ಯಾರಾದರೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗಳು ರಿಯಲ್‌ ಎಸ್ಟೇಟ್‌ ಉದ್ಯಮಿಗಳೊಂದಿಗೆ ಶಾಮೀಲಾಗುವುದು, ಅಪರಾದ ಪ್ರಕರಣಗಳಲ್ಲಿ ಭಾಗಿಯಾಗುವುದು ಸರಿಯಲ್ಲ. ಇದರಿಂದ ಜನರಿಗೆ ಪೊಲೀಸ್‌ ವ್ಯವಸ್ಥೆ ಮೇಲೆ ಕೀಳದ ಭಾವನೆಗಳು ಮೂಡುತ್ತದೆ ಎಂದರು. ಬೆಂಗಳೂರು ನಗರದಲ್ಲಿ ರೌಡಿಸಂ ಅನ್ನು ಮಟ್ಟ ಹಾಕಬೇಕು. ಸಂಪೂರ್ಣವಾಗಿ ಅಪರಾಧ ನಿರ್ಮೂಲನೆ ಮಾಡಲಾಗದಿದ್ದರೂ, ಕಡಿಮೆಗೊಳಿಸಲು ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜತೆಗೆ ಶಾಂತಿಯುತ ಹಾಗೂ ಭಯವಿಲ್ಲದ ವಾತಾವರಣ ನಿರ್ಮಿಸಲು ಬೆಂಗಳೂರು ನಗರ ಪೊಲೀಸರು ಶ್ರಮಪಡಬೇಕು ಎಂದರು.

Read More

ಬೆಂಗಳೂರು:- ಅಯೋಧ್ಯಾ ರಾಮಮಂದಿರ ವಿಚಾರವಾಗಿ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸೋ ಸಂಚು ಮಾಡಿದ್ದಾರೆ ಅಂತ ಹಿಂದೂ ಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೇ ಇದೇ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲು ಹೋದಾಗ ಬಸವನಗುಡಿ ಠಾಣೆ ಪೊಲೀಸರು ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ. ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ಪುನೀತ್ ಕೆರೆಹಳ್ಳಿ ಆಗಮಿಸಿದ್ದರು. ಅಲ್ಲದೇ ಹರಿಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸೋ ತನಕ ಇಲ್ಲಿಂದ ತೆರಳಲ್ಲ ಎಂದು ಧರಣಿ ನಡೆಸಿದರು. ಕೊನೆಗೆ ಹೋರಾಟಕ್ಕೆ ಮಣಿದ ಪೊಲೀಸರು ಹರಿಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೋಣನೂರು ನಿರ್ಮಿಸಿರುವ, ರಾಜಕುಮಾರ್ ಅಸ್ಕಿ ನಿರ್ದೇಶನದ ಹಾಗೂ ರಂಗಾಯಣ ರಘು ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಸಂಪತ್ ರಾಜ್ ಇನ್ನಿತರರು ಪ್ರಮುಖಪಾತ್ರದಲ್ಲಿ ನಟಿಸಿರಯವ “ರಂಗ ಸಮುದ್ರ” ಚಿತ್ರ ಜನವರಿ 19ರಂದು ಬಿಡುಗಡೆಯಾಗಲಿದೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಮೂಲಕ “ರಂಗ ಸಮುದ್ರ” ಈಗಾಗಲೇ ಜನರ ಮನ ಗೆದ್ದಿದೆ. ಜಾನಪದ ಸೊಗಡಿನ ಹಾಗೂ ಕೌಟುಂಬಿಕ ಮನರಂಜನೆಯ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ವಾಗೀಶ್ ಚನ್ನಗಿರಿ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ದೇಸಿ ಮೋಹನ್ ಸಂಗೀತ ನೀಡಿದ್ದಾರೆ. ಕೀರವಾಣಿ, ಕೈಲಾಶ್ ಖೇರ್, ವಿಜಯ ಪ್ರಕಾಶ್ ನವೀನ್ ಸಜ್ಜು ಮುಂತಾದ ಖ್ಯಾತ ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಘವೇಂದ್ರ ರಾಜಕುಮಾರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಸಂಪತ್…

Read More