Author: AIN Author

ರೈತನೇ ರಾಷ್ಟ್ರದ ಬೆನ್ನೆಲುಬು ಎಂದು ಕರೆಯುತ್ತಾರೆ ಉತ್ತರ ಕರ್ನಾಟಕದ ಒಬ್ಬ ರೈತ ಭಾರತ ದೇಶದ ರೈತರಿಗೆ ಮಾದರಿಯಾಗಿದ್ದಾನೆ. ಕೃಷಿಯಲ್ಲಿ ಅದೇನು ಲಾಭವಿಲ್ಲ ಎಂದು ಮೂಗು ಮುರಿಯುವ ರೈತರಗಿ ಸ್ಥಳೀಯ ಸೂಳಂಕಿ ಪರಿವಾರದ ನಿವೃತ್ತ ಸೈನಿಕ ನಾರಾಯಣ ಹಾಗೂ ಸಹೋದರು ಇಸ್ರೇಲ್ ಮಾದರಿಯಲ್ಲಿ ಭಾರಿ ತೂಕದ ಕಬ್ಬು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಬಿಜಾಪುರ ಜಿಲ್ಲೆಯ ಗೋಳಸಂಗಿ ಗ್ರಾಮದ ನಾರಾಯಣ ಮತ್ತು ಸಹೋದರರು ಸೇರಿ 4 ಎಕರೆ 10 ಗುಂಟೆ ಗದ್ದೆಯಲ್ಲಿ ಸುಮಾರು 500 ಟನ್ ಕಬ್ಬು ಬೆಳೆಯುವ ಮೂಲಕ ಇತರ ರೈತರಿಗೆ ಉಬ್ಬಿರುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ಕಬ್ಬು ಎರಡು ಕೆಜಿ ತೂಕ ಇರುವುದು ಸಹಜ ಆದರೆ ಇವರು ಇಸ್ರೇಲ್ ಕೃಷಿ ಪದ್ಧತಿ ಬಳಸಿ 3 ರಿಂದ 4 ಕೆಜಿ ತೂಕದ 28 ರಿಂದ 32 ಗಣಿಕೆ ಇರುವ 20 ಮತ್ತು 25 ಅಡಿ ಎತ್ತರದ ಕಬ್ಬು ಬೆಳೆದು ರೈತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಉತ್ತರ ಪ್ರದೇಶ ಮಹಾರಾಷ್ಟ್ರ ಕರ್ನಾಟಕದ ರಾಜ್ಯಗಳಿಂದ ಹಿಗೆ ಹಲವಾರು…

Read More

ಹುಬ್ಬಳ್ಳಿ: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೂವರು ಅಭಿಮಾನಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳು ಆಗಮಿಸಿರುವ ರಾಕಿಂಗ್ ಸ್ಟಾರ್ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಲಕ್ಷ್ಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹೌದು.. ಬ್ಯಾನರ್ ಕಟ್ಟಲು ಹೋಗಿ ಸಾವನ್ನಪ್ಪಿದ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದು, ಹುಬ್ಬಳ್ಳಿಗೆ ಎಂಟ್ರಿ ಕೊಟ್ಟು ಅಲ್ಲಿಂದ ಲಕ್ಷ್ಮೇಶ್ವರದ ಸೂರಣಗಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು. ಇನ್ನೂ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್ ಗೆ ಅಭಿಮಾನಿಗಳು ಸ್ವಾಗತಿಸಿದ್ದು, ರಸ್ತೆ ಮಾರ್ಗವಾಗಿ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ತೆರಳಿದರು.

Read More

ಬೆಂಗಳೂರು: ಉಡುಪಿಯ ಅಷ್ಟ ಮಠಗಳ ಪರ್ಯಾಯ ಮಹೋತ್ಸವಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ. ಈ ಬಾರಿಯ ಪರ್ಯಾಯ ಪೀಠವನ್ನು ಪುತ್ತಿಗೆ ಶ್ರೀಗಳು ನಿರ್ವಹಿಸಲಿದ್ದಾರೆ. ಅವರು ಸಮುದ್ರೋಲ್ಲಂಘನೆ ಮಾಡಿ ವಿದೇಶಕ್ಕೆ ಪ್ರಯಾಣಿಸಿ ಸಂಪ್ರದಾಯ ಉಲ್ಲಂಘಿಸಿದ ಕಾರಣ ಅವರಿಗೆ ಪರ್ಯಾಯ ನೀಡದಂತೆ ಕೋರಿ ಗುರುರಾಜ ಜೀವನರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ರಿದ್ದ ಪೀಠ, ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದೆ. ರಾಷ್ಟ್ರಕವಿ ಕುವೆಂಪು ಅವರ ಕವಿತೆ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಕವಿತೆ ಉಲ್ಲೇಖಿಸಿದ ನ್ಯಾಯಪೀಠ, ಮನೆ ಕಟ್ಟಿ ಕೂರುವುದಕ್ಕಿಂತ ಹೊರಗೆ ಓಡಾಡುವುದು ಲೇಸು. ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿದೆ. 2008ರಲ್ಲಿ ಕೂಡ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.…

Read More

ವಿಜಯಪುರ: ತನಗೆ ತಾನೇ ಪೂಜಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಇಂಡಿ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿಯನ್ನು ಅಡಿವೆಪ್ಪ ಘಾಯಿ (43) ಎಂದು ಗುರುತಿಸಲಾಗಿದೆ. ಮಾನಸಿಕವಾಗಿ ಮನನೊಂದು ವ್ಯಕ್ತಿ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/  ಈ ವ್ಯಕ್ತಿ ಕಂಬಳಿಯಲ್ಲಿ ಕುಳಿತು ಪೂಜೆ ಮಾಡಿ, ಕುತ್ತಿಗೆಗೆ ನಿಂಬೆಹಣ್ಣು, ಹಸಿಮೆಣಸಿನಕಾಯಿ ಮಾಲೆ ಹಾಕಿಕೊಂಡು ಸೂಸೈಡ್‌ ಮಾಡಿಕೊಂಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಹಿರಿಯರ ಆಸ್ತಿಯಲ್ಲಿ 39 ಎಕರೆ ಜಮೀನು ಮಾರಿ ಮದ್ಯಸೇವನೆ ಮಾಡಿ ಹಾಳು ಮಾಡಿದ್ದೇನೆ ಎಂದು ಮಾನಸಿಕವಾಗಿ ಮನನೊಂದಿದ್ದನು ಎನ್ನಲಾಗಿದೆ. ಈ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಣಿಗೆ ಕೊಟ್ಟಿದ್ದೇನೆ. ಇದು ನನ್ನ ವೈಯಕ್ತಿಕ ವಿಚಾರ. ಎಷ್ಟು ದೇಣಿಗೆ ನೀಡಿದ್ದೇನೆ ಎಂದು ಹೇಳಿಕೊಳ್ಳಬಾರದು ಎಂದರು. https://ainlivenews.com/aadhaar-link-is-mandatory-to-get-rs-2000-for-farmers-cm-siddaramaiah/ ಅಯೋಧ್ಯೆ ಪೂಜೆಯಲ್ಲಿ ಭಾಗಿಯಾಗುವ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದರೆ ಅದಕ್ಕೂ ಸಿದ್ಧ. ವಿಶೇಷ ಪೂಜೆ ಸಲ್ಲಿಸುತ್ತೇವೆ. ನಾವು ಹಿಂದುಗಳಲ್ವ? ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ಅದರಲ್ಲೇನು ತಪ್ಪಿದೆ ಎಂದಿದ್ದಾರೆ.

Read More

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದ್ದು,ಮೂರನೇ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಲೋಕಸಭಾ ಚುನಾವಣೆಯ ಯೋಜನಾ ಸಭೆಯಲ್ಲಿ ಮಾತನಾಡಿದ ಅವರು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಇಡೀ ವಾತಾವರಣ ಬಿಜೆಪಿ ಪರವಾಗಿದೆ. ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶ ನೋಡಿದರೆ ನಮ್ಮ ಪಕ್ಷಕ್ಕೆ ಅನುಕೂಲಕರವಾಗಿದೆ. ದೇಶದಲ್ಲಿ ಕಾಂಗ್ರೆಸ್ ಮತ್ತೆ ಮೇಲೇಳುತ್ತದೆ ಎಂಬ ಚರ್ಚೆ ಇತ್ತು. ಆದರೆ, ಈ ಫಲಿತಾಂಶವು ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳಿಗೆ ಮರ್ಮಾಘಾತವನ್ನುಂಟು ಮಾಡಿದೆ. https://ainlivenews.com/kai-kamala-nayaks-dharma-dangal-in-ram-mandir-issue/ ಯಾರೂ ಕೂಡ ಊಹಿಸದ ರೀತಿಯಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಈ ಮೂಲಕ ರಾಜ್ಯ ಹಾಗೂ ದೇಶದ ಜನತೆಗೆ ಸ್ಪಷ್ಟ ಸಂದೇಶ ಸಿಕ್ಕಿದೆ. ದೇಶದ ಜನತೆ ಕಾಂಗ್ರೆಸ್ ಗಿಮಿಕ್ ಗ್ಯಾರಂಟಿಯನ್ನು ನಂಬಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನೆ ಮಾಡಿದ್ದಾರೆ. ದೇಶ ಅಭಿವೃದ್ಧಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಯೇ ಪಕ್ಕಾ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಹೇಳಿದರು.

Read More

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ (Lok Sabha Election) ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ (Devegowda) ಮೂಲಕ ಹೈಕಮಾಂಡ್ (BJP High Command) ಬಳಿ ಟಿಕೆಟ್ ಲಾಬಿ ಮಾಡಲು ಪ್ಲ್ಯಾನ್‌ ನಡೆಸಿದ್ದಾರೆ ಎನ್ನಲಾಗುತ್ತಿದೆ ಮಾಜಿ ಸಚಿವ ಸೋಮಣ್ಣ (V Somanna) ಸಿಟಿ ರವಿ (CT Ravi), ದೇವೇಗೌಡರು ಹಾಗೂ ಕುಮಾರಸ್ವಾಮಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೋಲಿನ ಹತಾಶೆಯಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಸೋಮಣ್ಣ ದೇವೇಗೌಡರ ಮೂಲಕ ಬಿಜೆಪಿ ಹೈಕಮಾಂಡ್ ಬಳಿ ಟಿಕೆಟ್ ಗಿಟ್ಟಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ. ತುಮಕೂರು, ಬೆಂಗಳೂರು ಉತ್ತರದಲ್ಲಿ ಗೆಲುವು ಸಾಧಿಸಬೇಕಾದರೆ ಜೆಡಿಎಸ್ ಬೆಂಬಲ ಬೇಕೇ ಬೇಕು. ಬಿಜೆಪಿ ಹೈಕಮಾಂಡ್ ಜೊತೆ ದೇವೇಗೌಡರು, ಹೆಚ್‌ಡಿಕೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ದೇವೇಗೌಡರ ಮಾತನ್ನು ಮೋದಿ, ಅಮಿತ್ ಶಾ ತಳ್ಳಿ ಹಾಕುವುದಿಲ್ಲ. ಈ ಕಾರಣಕ್ಕೆ ಇಬ್ಬರು ನಾಯಕರು ಜೆಡಿಎಸ್‌ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

Read More

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಮೇಟ್ರೋ ಅತ್ಯಂತ ಪ್ರಮುಖ ಪಾತ್ರವಹಿಸಿದೆ, ಈಗಾಗಲೇ ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಇದೀಗ ಮೂರನೇ ಹಂತದಲ್ಲಿ ಆರ್.ವಿ.ರಸ್ತೆಯಿಂದ, ಸಿಲ್ಕ್ ಬೋರ್ಡ್ ಮುಖಾಂತರ ಹೊಸೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಹಳದಿ ಲೇನ್ ಇನ್ನೇನು ಮೂರ್ನಾಲಕ್ಕು ತಿಂಗಳಲ್ಲಿ ಸಂಚಾರ ಆರಂಭಿಸಲಿದೆ ಇದೀಗ BMRCL ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಿದೆ, https://ainlivenews.com/aadhaar-link-is-mandatory-to-get-rs-2000-for-farmers-cm-siddaramaiah/ ಹೊಸೂರು ರಸ್ತೆಯಲ್ಲಿನ‌ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಗೆ ಬಯೋಕಾನ್ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಎಂದು ಹೆಸರನ್ನ ಹಾಕುತ್ತಿದ್ದಂತೆ ಸ್ಥಳೀಯರು ಸಿಡಿದೆದ್ದು BMRCL ವಿರುದ್ದ ರಸ್ತೆಗಿಳಿದು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು, ಹೆಬ್ಬಗೋಡಿ ದ್ವಾರ ಬಾಗಿಲಿನಿಂದ ನೂರಾರು ಸಂಖ್ಯೆಯಲ್ಲಿನ ಸ್ಥಳೀಯ ನಾಗರೀಕರು ಮೆರವಣಿಗೆ ಮೂಲಕ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಬಳಿ ಜಮಾವಣೆಗೊಂಡು BMRCL ಮತ್ತು ಬಯೋಕಾನ್ ವಿರುದ್ದ ಘೋಷಣೆಗಳನ್ನಾಕಿ ಪ್ರತಿಭಟಿಸಿದರು. ಹೆಬ್ಬಗೋಡಿ ಆನೇಕಲ್ ತಾಲ್ಲೂಕಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು, ನೂರಾರು ವರ್ಷಗಳ ಇತಿಹಾಸವಿರುವ ಗ್ರಾಮದ ಹೆಸರನ್ನ ಅಳಿಸಿ ಹಾಕಲು…

Read More

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಬರಗಾಲದ ತಾತ್ಕಾಲಿಕ ರಿಲೀಫ್‌ 2000 ಸಾವಿರಕ್ಕಾಗಿ ರೈತರು ಕಾಯುತ್ತಿದ್ದಾರೆ. ಈ ನಡುವೆ ರೈತರು 2000 ಸಾವಿರ ಪಡೆಯಲು (Aadhaar card) ಆಧಾರ್‌ ಲಿಂಕ್‌ ಮಾಡಿಸಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ https://ainlivenews.com/death-of-yash-fan-due-to-electrocution-cm-has-suggested-compensation-to-the-family-of-the-deceased/ ಈ ಕುರಿತು ವಿವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬರ ಪರಿಹಾರದ ಹಣ ನೀಡುವುದಕ್ಕೆ ಸ್ಟಾರ್ಟ್‌ ಮಾಡ್ತಿದ್ದೇವೆ. ರೈತರ ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿ ಕೊಡ್ತೀವಿ ಎಂದಿದ್ದಾರೆ. ರೈತರು ಆಧಾರ್ ಲಿಂಕ್ ಮಾಡಿದ ಮೇಲೆ ರೈತರಿಗೆ ಬರ ಪರಿಹಾರದ 2000 ಸಾವಿರ ರೂಪಾಯಿ ಅವರ ಬ್ಯಾಂಕ್‌ ಅಕೌಂಟ್‌ ಖಾತೆಗೆ ಬೀಳಲಿದೆ. ಆಧಾರ್ ಲಿಂಕ್ ಮಾಡದ ರೈತರು ಕೂಡಲೇ  ಆಧಾರ್‌  ಲಿಂಕ್ ಮಾಡಿಸಬೇಕು ಎಂದಿದ್ದಾರೆ.

Read More

ಹಾವೇರಿ: ರಾಜ್ಯದಲ್ಲಿ ಅನ್ಯಾಯದ ವಿರುದ್ಧ ದ್ವನಿ ಎತ್ತಿದವರ ಮೇಲೆ ಕೇಸ್ ಹಾಕಿದ್ದಾರೆ. ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಉಳಿಯುತ್ತಿಲ್ಲ, ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ. ಇದು ದಬ್ಬಾಳಿಕೆಯ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಶಿಗ್ಗಾಂವಿಯ ತಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸ್‍ಗಳೇ ಇಲ್ಲದ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಿದ್ದರು. ಇದೆಲ್ಲಾ ಯಾರ ಆದೇಶದ ಮೇಲೆ ನಡೆದಿದೆ? ರಾಜಕೀಯ ದ್ವೇಷಕ್ಕೆ ಪೊಲೀಸ್ (Police) ಇಲಾಖೆ ಬಳಕೆ ಮಾಡಿಕೊಂಡಿದ್ದಾರೆ. ಭಯ, ಅಶಾಂತಿ ಸೃಷ್ಟಿ ಮಾಡಿದ್ದಾರೆ. ಸಾಮರಸ್ಯ ಇರುವ ರಾಜ್ಯದಲ್ಲಿ ವೋಟಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.  

Read More